ಅಡಿಕೆ Nut

ಅಡಿಕೆ

ಅಡಿಕೆ, ಕರ್ನಾಟಕ ರಾಜ್ಯದ ಒಂದು ಪ್ರಮುಖ ವಾಣಿಜ್ಯ ಬೆಳೆ. ಅಡಿಕೆ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಅಡಿಕೆಯನ್ನು ಬೇಯಿಸುವಾಗ ಬರುವ ‘ಟ್ಯಾನಿನ್’ ಎಂಬ ವಸ್ತುವನ್ನು ಚರ್ಮ ಹದ ಮಾಡುವ ಕೈಗಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಡಿಕೆಯಲ್ಲಿ ಕೆಲವು ಸಸ್ಯಕ್ಷಾರಾಂಶಗಳು (ಆಲ್ಕಲಾಯಿಡ್) ಇವೆ. ಅಡಿಕೆಯಲ್ಲಿ ಹಲವಾರು ಔಷಧಿ ಗುಣಗಳು ಸಹ ಇವೆ. ಮರದ ಕಾಂಡವನ್ನು ಮನೆ ಕಟ್ಟಲು ಉಪಯೋಗಿಸುತ್ತಾರೆ. ಅಡಿಕೆ ಪಟ್ಟೆಯಿಂದ ದೊನ್ನೆ ಮತ್ತು ತಟ್ಟೆ ಮಾಡಿ ಉಪಯೋಗಿಸಲಾಗುತ್ತಿದೆ.

ಮಣ್ಣು
ನೀರು ಬಸಿದು ಹೋಗುವ ಕೆಂಪು ಗೋಡು, ಜಂಬಿಟ್ಟಿಗೆ ಅಥವಾ ಮೆಕ್ಕಲು ಗೋಡು ಮಣ್ಣು ಅಡಿಕೆ ಬೆಳೆಗೆ ಉತ್ತಮ. ನೀರು ಜೌಗು ಮತು ಸವಳು ಮಣ್ಣಿನ ಪ್ರದೇಶಗಳು ಅಡಿಕೆ ಬೆಳೆಗೆ ಯೋಗ್ಯವಲ್ಲ. ಮಣ್ಣಿನ ರಸಸಾರ 6 ರಿಂದ 7 ಇರಬೇಕು.

ಹವಾಗುಣ
ಇದು ಗಾಳಿಯಲ್ಲಿ ತೇವಾಂಶವಿರುವ ಮತ್ತು ಹೆಚ್ಚು ಉಷ್ಣಾಂಶವನ್ನು ಬಯಸುತ್ತದೆ. ವರ್ಷದಲ್ಲಿ 2000 ದಿಂದ 3500 ಮಿ. ಮೀ. ಮಳೆ ಬೀಳುವ ಪ್ರದೇಶ ಮತ್ತು 15 ರಿಂದ 300 ಸೆಂ. ಉಷ್ಣಾಂಶದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದನ್ನು ಸಮುದ್ರ ಮಟ್ಟದಿಂದ 1000 ಮೀಟರ್ ಎತ್ತರದ ಪ್ರದೇಶಗಳಲ್ಲೂ ಕೃಷಿ ಮಾಡಬಹುದು. ಅಡಿಕೆಯನ್ನು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಬೆಳೆಯಬಹುದು. ಆದರೆ ಈ ಪ್ರದೇಶಗಳಲ್ಲಿ ಬೆಳೆಗೆ ಸಾಕಷ್ಟು ನೀರಾವರಿ ಒದಗಿಸಬೇಕಾಗುತ್ತದೆ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆ ಪ್ರಾರಂಭ ಮಾಡಲು ಮೇ ಮತ್ತು ಜೂನ್ ತಿಂಗಳುಗಳು ಸರಿಯಾದ ಕಾಲ. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಸಪ್ಟೆಂಬರ್–ಅಕ್ಟೋಬರ್ ತಿಂಗಳುಗಳಲ್ಲಿ ಬೆಳೆ ಪ್ರಾರಂಭ ಮಾಡಬಹುದು.

ತಳಿಗಳು
ಎತ್ತರವಾಗಿ ಬೆಳೆಯುವ ಸ್ಥಳೀಯ ತಳಿಗಳಾದ ತೀರ್ಥಹಳ್ಳಿ, ದಕ್ಷಿಣ ಕನ್ನಡದ ಸ್ಥಳೀಯ ಮತ್ತು ಹಿರೇಹಳ್ಳಿ ನಮ್ಮಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಇವುಗಳಲ್ಲದೆ ಮಂಗಳ, ಸುಮಂಗಳ, ಶ್ರೀಮಂಗಳ, ಮೋಹಿತ್‍ನಗರ್ ಮತ್ತು ಎಸ್-ಎ-ಎನ್-1 ಎಂಬ ಹೊಸ ತಳಿಗಳು ಪ್ರಚಲಿತವಾಗಿವೆ.

ಬೇಸಾಯ ಸಾಮಗ್ರಿಗಳು
1 ಸಸಿಗಳಸಂಖ್ಯೆ ಹೆಕ್ಟೇರ್/ಒಂದಕ್ಕೆ
2.7 ಮೀ. x 2.7 ಮೀ. (ಎಲ್ಲಾ ಪ್ರದೇಶಗಳಿಗೂ) : 1370

2. ಕೊಟ್ಟಿಗೆಗೊಬ್ಬರ/ಕಾಂಪೆÇೀಸ್ಟ್ ಸಸಿಮಡಿಗಳಿಗೆ : 2.5 ಟನ್‍ಗಳು
ನಾಟಿ ಸಮಯದಲ್ಲಿ ಹಾಗೂ ನಾಟಿ ಮಾಡಿದ ನಂತರ ಪ್ರತೀ ವರ್ಷ : 20 ಕಿ.ಗ್ರಾಂ./ಗಿಡ ಹಸಿರೆಲೆ ಗೊಬ್ಬರ (ಆಗಸ್ಟ್-ಸೆಪ್ಟೆಂಬರ್‍ನಲ್ಲಿ) : 10-20 ಕಿ.ಗ್ರಾಂ./ಗಿಡ

3. ರಸಗೊಬ್ಬರಗಳು (ಗ್ರಾಂ/ಗಿಡ) ಸ್ಥಳೀಯ ತಳಿ ಸುಧಾರಿತ ತಳಿ
ಸಾರಜನಕ 100 150
ರಂಜಕ 40 60
ಪೆÇಟ್ಯಾಷ್ 140 210

ಸೂಚನೆ
1. ಕೊಟ್ಟಿಗೆ ಗೊಬ್ಬರವನ್ನು ಮುಂಗಾರಿಗೆ ಮೊದಲು (ಮೇ-ಜೂನ್) ಮಣ್ಣಿನಲ್ಲಿ ಸೇರಿಸಬೇಕು. ಮೇಲೆ ಶಿಫಾರಸ್ಸು ಮಾಡಿದ ರಸಗೊಬ್ಬರಗಳ 1/3 ರಷ್ಟನ್ನು ಒಂದು ವರ್ಷದ ಗಿಡಗಳಿಗೂ 2/3 ರಷ್ಟು ಎರಡು ವರ್ಷದ ಗಿಡಗಳಿಗೂ ಮತ್ತು 3 ವರ್ಷ ಮೇಲ್ಪಟ್ಟು ಗಿಡಗಳಿಗೆ ಪೂರ್ತಿ ಪ್ರಮಾಣವನ್ನು ಒದಗಿಸಬೇಕು.
2. ಇದರಲ್ಲಿ ಅರ್ಧ ಗೊಬ್ಬರವನ್ನು ಮುಂಗಾರಿನಲ್ಲೂ ಉಳಿದರ್ಧ ಹಿಂಗಾರಿನಲ್ಲೂ ಕೊಡಬೇಕು.
3. ಕರಾವಳಿ ಪ್ರದೇಶಗಳಲ್ಲಿ ಶಿಲಾರಂಜಕದ ಮುಖಾಂತರ ರಂಜಕ ಒದಗಿಸಬೇಕು.
4. ಕರಾವಳಿಯಲ್ಲಿ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಸುಣ್ಣ ಮತ್ತು ಮೆಗ್ನೀಷಿಯಂ ಸಲ್ಫೇಟು ಹಾಕಬೇಕು.

ಬೇಸಾಯ ಕ್ರಮಗಳು
ಸಸಿಗಳನ್ನು ಬೆಳೆಸುವುದು
ಅ) ತಾಯಿ ಮರಗಳನ್ನು ಆರಿಸುವುದು: ಬೇಗ ಹಾಗೂ ಅಧಿಕ ಇಳುವರಿ ಕೊಟ್ಟಿರುವ ಮರಗಳನ್ನು ಹೊಂದಿರುವ ಆರೋಗ್ಯವಾದ ತೋಟಗಳಿಂದ ತಾಯಿ ಮರಗಳನ್ನು ಆರಿಸಬೇಕು. ಮರಗಳು, ಮಧ್ಯಮ ವಯಸ್ಸಿನ (15-25 ವರ್ಷ) ವುಗಳಾಗಿರಬೇಕು. ಆರಿಸಿದ ಮರಗಳ ನಡುವಿನ ಗೊನೆಗಳಲ್ಲಿಯ ಭಾರವಾದ (35 ಗ್ರಾಂ.ಗಿಂತಲೂ ಹೆಚ್ಚು ತೂಕವಿರುವ) ಕಾಯಿಗಳನ್ನು ಆಯ್ದುಕೊಳ್ಳಬೇಕು. ಸಣ್ಣ ಗಾತ್ರದ, ಅಪೇಕ್ಷಿತ ಆಕಾರವಿಲ್ಲದ ಮತ್ತು ಗೊನೆಯ ತುದಿ ಭಾಗದಲ್ಲಿರುವ ಕಾಯಿಗಳನ್ನು ಬೀಜಕ್ಕಾಗಿ ಉಪಯೋಗಿಸಬಾರದು.
ಆ) ಪ್ರಾಥಮಿಕ ಸಸಿ ಮಡಿ: ಆರಿಸಿದ ಕಾಯಿಗಳನ್ನು ಕೊಯ್ಲು ಮಾಡಿದ ಕೂಡಲೇ ಮಡಿಗಳಲ್ಲಿ ನೆಡಬೇಕು. ಮಡಿಗಳು ಭಾಗಶಃ ನೆರಳಿರುವ ಪ್ರದೇಶಗಳಲ್ಲಿರಬೇಕು. 30 ಸೆಂ.ಮೀ. ಆಳ ಮತ್ತು ಅನುಕೂಲಕ್ಕೆ ತಕ್ಕ ಉದ್ದಗಲವಿರುವ ಕಾಲುವೆಗಳನ್ನು ತೆಗೆದು ಮರಳಿನಿಂದ ತುಂಬಬೇಕು. ಇಂತಹ ಮಡಿಗಳಲ್ಲಿ ಬೀಜದ ಕಾಯಿಗಳನ್ನು ತೊಟ್ಟಿನ ಭಾಗ ಮೇಲಿರುವಂತೆ 5 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ನಂತರ ಬೀಜಗಳು ಮುಚ್ಚುವಂತೆ ಮರಳನ್ನು ಹರಡಬೇಕು. ಪ್ರತಿ ದಿನ ನೀರು ಹಾಯಿಸುತ್ತಿರಬೇಕು. ಸುಮಾರು 40 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯಲು ಪ್ರಾರಂಭವಾಗುತ್ತವೆ.
ಇ) ದ್ವಿತೀಯ ಸಸಿ ಮಡಿ: 15 ಸೆಂ. ಮೀ. ಎತ್ತರ, 120 ಸೆಂ. ಮೀ. ಅಗಲ ಮತ್ತು ಅನುಕೂಲಕ್ಕೆ ತಕ್ಕ ಉದ್ದವಿರುವ ಮಡಿಗಳನ್ನು ಸಿದ್ಧಗೊಳಿಸಿ, ಉತ್ತರ–ದಕ್ಷಿಣಾಭಿಮುಖವಾಗಿ ನೀರಿನ ಕಾಲುವೆಗಳನ್ನು ನಿರ್ಮಿಸಬೇಕು. ಈ ದ್ವಿತೀಯ ಸಸಿಮಡಿಗಳನ್ನು 4-5 ತಿಂಗಳು ವಯಸ್ಸಿನ, 2-3 ಎಲೆಗಳಿರುವ ಅಡಿಕೆ ಸಸಿಗಳನ್ನು ಮೊದಲ ಮಡಿಯಿಂದ ಕಿತ್ತು ನಾಟಿ ಮಾಡಬೇಕು. ಪ್ರತಿ ಹೆಕ್ಟೇರ್ ಸಸಿಮಡಿಗೆ 25 ಟನ್ ಕೊಟ್ಟಿಗೆ ಗೊಬ್ಬರ ಕೊಡಬೇಕು. ನೀರಿನ ಕಾಲುವೆಗಳ ನಡುವೆ ಬಾಳೆ ಅಥವಾ ಚೊಗಚೆ ಗಿಡಗಳನ್ನು ನಾಟಿ ಮಾಡಿ ನೆರಳನ್ನು ಒದಗಿಸಬೇಕು. ದ್ವಿತೀಯ ಮಡಿಗಳಲ್ಲಿ ನಾಟಿಮಾಡುವಾಗ ಗಿಡಗಳ ನಡುವಿನ ಅಂತರ 30 ಸೆಂ.ಮೀ. ಇರಬೇಕು. ಪರ್ಯಾಯವಾಗಿ ಅಡಿಕೆ ಬೀಜಗಳನ್ನು ಪಾಲೀಥಿನ್ ಚೀಲಗಳಲ್ಲಿ ಚೀಲಗಳಲ್ಲಿ (25 x 15 ಸೆಂ.ಮೀ. ಅಳತೆಯ) ಕೂಡ ನಾಟಿ ಮಾಡಬಹುದು. ಇವುಗಳಲ್ಲಿ ತುಂಬುವ ಮಿಶ್ರಣವು 7 ಭಾಗ ಮೇಲ್ಮಣ್ಣು, 3 ಭಾಗ ಒಣ ಗೊಬ್ಬರ ಮತ್ತು 2 ಭಾಗ ಮರಳಿನಿಂದ ಕೂಡಿರಬೇಕು.
ಸಸಿಗಳನ್ನು ಆರಿಸುವುದು: 12-18 ತಿಂಗಳು ವಯಸ್ಸಿನ 5 ಎಲೆಗಳಿರುವ ಸಸಿಗಳನ್ನು ತೋಟದಲ್ಲಿ ನಾಟಿ ಮಾಡಲು ಆರಿಸಬೇಕು.

ಭೂಮಿ ಸಿದ್ಧಗೊಳಿಸುವುದು ಮತ್ತು ನಾಟಿ ಮಾಡುವುದು: ಭೂಮಿಯನ್ನು ಉಳುಮೆ ಮಾಡಿ ಸಮದಟ್ಟು ಮಾಡಬೇಕು. ಪಶ್ಚಿಮ ಮತ್ತು ಉತ್ತರ ಅಂಚಿನಲ್ಲಿ ಹಲಸು, ಬೇವು, ಮುರುಗಲು, ಬಂಗಾಳಿ ಜಾಲಿ ಇತ್ಯಾದಿ ಗಿಡಗಳನ್ನು ನಾಟಿ ಮಾಡಿ ಶಾಶ್ವತ ಗಾಳಿತಡೆ ಒದಗಿಸಬೇಕು. ಭೂಮಿಯನ್ನು ಆಧರಿಸಿ 75 x 75 x 75 ಸೆಂ.ಮೀ. ಅಥವಾ 90 x 90 x 90 ಸೆಂ.ಮೀ. ಗುಣಿಗಳನ್ನು ತೆಗೆದು ಮೇಲ್ಮಣ್ಣು ಮತ್ತು ಗೊಬ್ಬರ ಮಿಶ್ರಣದಿಂದ ತುಂಬಬೇಕು. ಅವುಗಳ ಮಧ್ಯದಲ್ಲಿ ಸಸಿಗಳನ್ನು 7.5–15 ಸೆಂ.ಮೀ. ಆಳದಲ್ಲಿ ನಾಟಿ ಮಾಡಬೇಕು. ಇದು ನೀರುಣಿಸಲು ಅನುಕೂಲವಾಗುತ್ತದೆ. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ 90 ಸೆಂ.ಮೀ. ಆಳವಾದ ಬಸಿ ಗಾಲುವೆಗಳನ್ಮ್ನ ನಿರ್ಮಿಸಬೇಕು. ಅಡಿಕೆ ಮರಗಳು ಬಿಸಿಲಿನ ತಾಪದಿಂದ ಸುಡುವುದನ್ನು ತಪ್ಪಿಸಲು ನಿರ್ದಿಷ್ಟ ದಿಕ್ಕಿನಲ್ಲಿ ನಾಟಿ ಮಾಡಬೇಕು. ಚೌಕಾಕಾರಕಲ್ಲಿ ಸಸಿಗಳನ್ನು ನಾಟಿ ಮಾಡುವಾಗ ದಕ್ಷಿಣೋತ್ತರ ರೇಖೆಯನ್ನು 350 ಡಿಗ್ರಿಯಷ್ಟು ಪಶ್ಚಿಮ ದಿಕ್ಕಿನಡೆಗೆ ವಾಲುವಂತೆ ಎಳೆಯಬೇಕು. ಈ ರೀತಿ ಎಳೆದ ರೇಖೆಗಳಲ್ಲಿ ಸಸಿಗಳನ್ನು ನಾಟಿ ಮಾಡಿದಾಗ ಸಾಲಿನ ಮೊದಲಿನ ಗಿಡಗಳಿಗೆ ರಕ್ಷಣೆ ಬೇಕಾಗುತ್ತದೆ.

ಅಂತರ ಬೇಸಾಯ: ಕಾಲಕಾಲಕ್ಕೆ ಕಳೆ ತೆಗೆಯುತ್ತಿರಬೇಕು, ಬಸಿಗಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಮಣ್ಣಿನ ಗುಣವನ್ನಾಧರಿಸಿ ಬೇಸಿಗೆಯಲ್ಲಿ 4-6 ದಿನಗಳಿಗೊಮ್ಮೆ ನೀರು ಕೊಡಬೇಕು. ಬಾಳೆ, ಮೆಣಸು, ಕೊಕೋ, ವೆನಿಲ್ಲಾ, ಪಚೋಲಿ, ಹಿಪ್ಪಲಿ ಮತ್ತು ವೀಳ್ಯದೆಲೆಗಳನ್ನು ಅಡಿಕೆ ತೋಟಗಳಲ್ಲಿ ಮಿಶ್ರ ಬೆಳೆಗಳಾಗಿ ಬೆಳೆಯಬಹುದು. ಹನಿ ನೀರಾವರಿಯಲ್ಲಿ ಗಿಡಕ್ಕೆ ಪ್ರತಿದಿನ 15-20 ಲೀಟರ್‍ನಷ್ಟು ನೀರು ಕೊಡಬೇಕು. ಮಣ್ಣಿನ ಹುಳಿ ಅಂಶವನ್ನು ಸರಿಪಡಿಸಲು ಸುಟ್ಟ ಸುಣ್ಣವನ್ನು ಬಳಸುವುದು.

ಅಡಿಕೆಯಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ
ಪ್ರಮುಖ ಕೀಟಗಳು
ಅಡಿಕೆಯಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಕೀಟಗಳೆಂದರೆ ಜೇಡುನುಸಿ, ಸಿರಿತಿಗಣೆ, ಹೂಗೊಂಚಲು ತಿನ್ನುವ ಹುಳು ಮತ್ತು ಬೇರುಹುಳು ಅಥವಾ ಗೊಣ್ಣೆಹುಳು.

1. ಜೇಡ ನುಸಿ (ಮೈಟ್ಸ)
ಈ ನುಸಿಯು ಗರಿಗಳ ಕೆಳಭಾಗದಲ್ಲಿ ಗುಂಪಾಗಿ ಕಂಡುಬರುವುದಲ್ಲದೆ ಗರಿಗಳಿಂದ ರಸವನ್ನು ಹೀರುತ್ತವೆ. ಇದರಿಂದ ಬಾಧೆಗೊಳಗಾದ ಗರಿಗಳು ಹಳದಿಯಾಗಿ ನಂತರ ತಾಮ್ರದ ಬಣ್ಣಕ್ಕೆ ತಿರುಗುತ್ತವೆ. ಬೇಸಿಗೆ ಕಾಲದಲ್ಲಿ ಇದರ ತೀವ್ರತೆಯು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಎಳೆಯ ಮರಗಳು ಇದರ ಬಾಧೆಗೆ ಬೇಗ ತುತ್ತಾಗುವುದನ್ನು ಕಾಣಬಹುದು.
ನಿರ್ವಹಣಾ ಕ್ರಮ
ನುಸಿಯ ಬಾಧೆ ಕಂಡು ಬಂದಾಗ ಇವುಗಳ ಹತೋಟಿಗಾಗಿ 2.5 ಮಿ.ಲೀ. ಡೈಕೋಫಾಲ್ 20 ಇ.ಸಿ. ಅಥವಾ 4 ಗ್ರಾಂ. ನೀರಿನಲ್ಲಿ ಕರಗುವ ಗಂಧಕ (ಶೇ .80) ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬಾಧೆ ಪುನಃ ಕಂಡುಬಂದಲ್ಲಿ ಎರಡು ವಾರಗಳ ನಂತರ ಇದೇ ಸಿಂಪಡಣೆಯನ್ನು ಪುನರಾವರ್ತಿಸಬೇಕು.

2. ಸಿರಿ ತಿಗಣೆ (ಸುಳಿ ತಿಗಣೆ)
ಕೀಟವು ಎಳೆಯ ಸಿರಿಯ ಒಳಭಾಗದಲ್ಲಿ ಇದ್ದುಕೊಂಡು ರಸ ಹೀರುವುದರಿಂದ ಸಿರಿಯು ಹೊರ ಚಾಚಿದಂತೆ ಅದರ ಮೇಲೆ ಕಂದು ಬಣ್ಣದ ಮಚ್ಚೆಗಳು ಕಂಡುಬರುತ್ತವೆ. ಇದರಿಂದ ಸಿರಿಯ ಬೆಳವಣಿಗೆಯು ಕುಂಠಿತವಾಗಿ ಒಂದು ಕಡೆ ಬಾಗಿ ಮುದುರಿಕೊಂಡಿರುತ್ತದೆ. ಕೀಟ ಬಾಧೆ ತೀವ್ರಗೊಂಡಾಗ ಕ್ರಮೇಣ ಇಂತಹ ಗರಿಗಳು ಒಣಗಿ ಹೋಗುತ್ತದೆ.
ನಿರ್ವಹಣಾ ಕ್ರಮ
• ಈ ಮೇಲೆ ತಿಳಿಸಿದ ಚಿಹ್ನೆಗಳು ಕಾಣಿಸಿಕೊಂಡಾಗ 2 ಮಿ.ಲೀ. ಕ್ವಿನಾಲ್‍ಫಾಸ್ 25 ಇ.ಸಿ. ಅಥವಾ 1.5 ಮಿ.ಲೀ. ಮೊನೋಕ್ರೊಟೋಫಾಸ್ 36 ಎಸ್.ಎಲ್. ಎನ್ನುವ ಕೀಟನಾಶಕಗಳನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಗರಿಗಳು ಸಂಪೂರ್ಣವಾಗಿ ತೊಯ್ಯುವಂತೆ ಸಿಂಪಡಿಸಬೇಕು.
• 5 ಗ್ರಾಂ. ಪೆÇರೇಟ್ (ಶೇ.10) ಹರಳುಗಳನ್ನು ಒಂದು ಚಿಕ್ಕ ಪಾಲಿಥೀನ್ ಚೀಲದಲಿ ಕಟ್ಟಿ ಅದಕ್ಕೆ ಸಣ್ಣ ರಂಧ್ರಗಳನ್ನು ಮಾಡಿ ಸುಳಿಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದಲೂ ಕೂಡ ಸುಳಿ ತಿಗಣೆಯ ಬಾಧೆಯನ್ನು ತಡೆಯಬಹುದು.

3. ಹೂಗೊಂಚಲು ತಿನ್ನುವ ಹುಳು
ಈ ಕೀಟವು ಹೂ ಗೊಂಚಲು ಅಥವಾ ಹಿಂಗಾರವನ್ನು ತಿಂದು ನಾಶಮಾಡುತ್ತದೆ. ಹುಳುಗಳು ಹಿಂಗಾರವನ್ನು ಕೊರೆದು ತೂತು ಮಾಡಿರುವ ರಂಧ್ರದಲ್ಲಿ ಹುಳುವಿನ ಹಿಕ್ಕೇ ಇರುವುದನ್ನು ಕೂಡಾ ನೋಡಬಹುದು.
ನಿರ್ವಹಣಾ ಕ್ರಮ
• ಕೀಟದ ಬಾಧೆ ಕಂಡುಬಂದಾಗ 2 ಮಿ.ಲೀ. ಕ್ವಿನಾಲ್‍ಫಾಸ್ 25 ಇ.ಸಿ. ಅಥವಾ 1.5 ಮಿ.ಲೀ. ಮೊನೋಕ್ರೊಟೋಫಾಸ್ 36 ಎಸ್.ಎಲ್. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

4. ಬೇರುಹುಳು (ಗೊಣ್ಣೆಹುಳು)
ಇದರ ಹಾನಿಯ ಮುಖ್ಯ ಲಕ್ಷಣಗಳೆಂದರೆ ಈ ಕೀಟದ ಮರಿಹುಳುಗಳು ಅಡಿಕೆಯ ಕ್ರಿಯಾಶೀಲವಾದ ಬೇರುಗಳನ್ನು ತಿಂದು ಹಾಳು ಮಡುವುದರಿಂದ ಆಹಾರ ಮತ್ತು ನೀರಿನ ಸರಬರಾಜು ಸ್ಥಗಿತಗೊಂಡು ಗರಿಗಳೂ ಹಳದಿಯಾಗುತ್ತವೆ. ಕ್ರಮೇಣ ತುದಿಯಲ್ಲಿ ಕಾಂಡದ ಗಾತ್ರವು ತೆಳುವಾಗಿ ಬೆಳವಣಿಗೆಯು ಕುಂಠಿತವಾಗುವುದು ಮತ್ತು ಇಂತಹ ಮರಗಳಲ್ಲಿ ಇಳುವರಿಯ ಪ್ರಮಾಣ ಕಡಿಮೆಯಾಗುತ್ತದೆ.

ನಿರ್ವಹಣಾ ಕ್ರಮ
• ತೋಟದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆಗಳನ್ನು ನಿರ್ಮಿಸುವುದು.
• ಸಾಮಾನ್ಯವಾಗಿ ಮೊದಲನೆ ಮಳೆ ಪ್ರಾರಂಭವಾದ ನಂತರ ಸಾಯಂಕಾಲ ಸುಮಾರು 6 ರಿಂದ 7-30 ಗಂಟೆಯ ಸಮಯದಲ್ಲಿ ಪ್ರೌಢ ದುಂಬಿಗಳು ಹೊರಬಂದು ಗಂಡು ಹೆಣ್ಣುಗಳು ಸಂಯೋಗಕ್ಕಾಗಿ ಸ್ವಲ್ಪ ಸಮಯ ಆಶ್ರಯ ಸಸ್ಯಗಳ ಮೇಲೆ ಕುಳಿತಿರುತ್ತವೆ. ನಂತರ ಅವು ಮೇಲೆ ಹಾರುವಾಗ ಭುರ್ರ್ ಎಂಬ ಶಬ್ಧ ಕೇಳುತ್ತವೆ. ಆಗ ಅವುಗಳನ್ನು ಹಿಡಿದು ಸಾಯಿಸಬೇಕು.
• ಪ್ರೌಢ ದುಂಬಿಗಳು ಹೊರ ಬಂದ ಸುಮಾರು ಒಂದು ತಿಂಗಳ ನಂತರ (ಆಗಸ್ಟ್) ಮರದ ಸುತ್ತಲೂ ಹಗುರವಾಗಿ ಅಗೆತವನ್ನು ಮಾಡಿ ಪ್ರತೀ ಮರಕ್ಕೆ 20 ಗ್ರಾಂ. ಫೆÇರೇಟ್ 10 ಜಿ. ಹರಳನ್ನು ಸಮವಾಗಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ಅಥವಾ ಕ್ಲೋರ್‍ಪೈರಿಫಾಸ್ 20 ಇ.ಸಿ. ಕೀಟನಾಶಕವನ್ನು ಪ್ರತೀ ಲೀಟರ್ ನೀರಿಗೆ 5 ಮಿ.ಲೀ. ಪ್ರಮಾಣದಲ್ಲಿ ಮಿಶ್ರಣ ಮಾಡಬೇಕು. ನಂತರ ಪ್ರತಿಯೊಂದು ಮರಕ್ಕೆ ಸುಮಾರು 2-3 ಲೀಟರ್ ದ್ರಾವಣವನ್ನು ಮರದ ಬುಡದ ಸುತ್ತಲೂ ಸಮವಾಗಿ ಸುರಿಯಬೇಕು.
ಈ ರೀತಿಯ ಕ್ರಮಗಳನ್ನು ರೈತರು ಕೀಟಬಾಧಿತ ಪ್ರದೇಶಗಳಲ್ಲಿ ಸಾಮೂಹಿಕವಾಗಿ 2-3 ವರ್ಷಗಳ ವರೆಗೆ ತಪ್ಪದೇ ಅನುಸರಿಸಿದರೆ ಬೇರುಹುಳಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.

ಪ್ರಮುಖ ರೋಗಗಳು
ಅಡಿಕೆಯಲ್ಲಿ ಕಂಡುಬರುವ ಪ್ರಮುಖ ರೋಗಗಳೆಂದರೆ ಕೊಳೆರೋಗ, ಸುಳಿಕೊಳೆಯುವ ರೋಗ, ಸಿಂಗಾರ ಒಣಗುವಿಕೆ ಮತ್ತು ಅಣಬೆರೋಗ.
ಕೊಳೆ ರೋಗ
ಅಡಿಕೆಯ ಬೆಳೆಯಲ್ಲಿ ಬರುವ ರೋಗಗಳಲ್ಲಿ ಕೊಳೆರೋಗವು ಬಹಳ ಮುಖ್ಯವಾಗಿದ್ದು ಮಳೆಗಾಲದಲ್ಲಿ ಹೆಚ್ಚಾಗಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಈ ರೋಗದ ಮುಖ್ಯ ಲಕ್ಷಣಗಳೆಂದರೆ ಆರಂಭದಲ್ಲಿ ಅಡಿಕೆ ಕಾಯಿಗಳ ಮೇಲೆ ನೀರಿನಿಂದ ಒದ್ದೆಯಾದಂತಹ ಅಚ್ಚಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ನಂತರ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಭಾಗವನ್ನೆಲ್ಲ ಆವರಿಸಿದಾಗ ಕಾಯಿಗಳು ಹೊಳಪನ್ನು ಕಳೆದುಕೊಂಡು ಕೊಳೆಯುತ್ತವೆ. ರೋಗ ತಗುಲಿದ ಕಾಯಿಗಳು ತೊಟ್ಟಿನಿಂದ ಕಳಚಿ ಕೆಳಗೆ ಬಿದ್ದು ಅಪಾರ ಹಾನಿಯನ್ನುಂಟು ಮಾಡುತ್ತವೆ. ಇಂತಹ ಉದುರಿದ ಕಾಯಿಯ ಮೇಲೆ ಶಿಲೀಂಧ್ರದ ಬಿಳಿಯ ಬೂಷ್ಟ್ ಬೆಳವಣಿಗೆಯಾಗಿರುವುದು ಕಂಡುಬರುತ್ತದೆ. ರೋಗ ತೀವ್ರಗೊಂಡಾಗ ಗೊಂಚಲು ಕೊಳೆತು ಕಪ್ಪಾಗುತ್ತದೆ.

ನಿರ್ವಹಣಾ ಕ್ರಮ
• ರೋಗ ತಗುಲಿದ ಕಾಯಿ ಹಾಗೂ ಮರದ ಇತರ ಭಾಗಗಳನ್ನು ನಾಶಪಡಿಸಬೇಕು.
• ಮಳೆಗಾಲದ ಪ್ರಾರಂಭದಲ್ಲಿ ಪಾಲಿಥೀನ್ ಚೀಲಗಳಿಂದ ಅಡಿಕೆ ಗೊನೆ ಕಟ್ಟುವುದರಿಂದ ಸಹ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
• ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚೆ ಶೇ.1ರ ಬೋರ್ಡೊದ್ರಾವಣವನ್ನು ಸಿಂಪಡಿಸಬೇಕು. ಮಳೆಗಾಲ ಮುಂದುವರಿದರೆ ಮೂರನೇ ಬಾರಿ ಇದೇ ಶಿಲೀಂಧ್ರ ನಾಶಕವನ್ನು ಸಿಂಪಡಿಸುವುದು ಸೂಕ್ತ.

ಶೇ. 1 ರ ಬೋರ್ಡೊ ಮಿಶ್ರಣ ತಯಾರಿಸುವ ವಿಧಾನ
ಬೇಕಾಗುವ ಸಾಮಾಗ್ರಿಗಳು:
ಮೈಲು ತುತ್ತು : 1 ಕಿ.ಗ್ರಾಂ.
ಸುಣ್ಣ : 1 ಕಿ.ಗ್ರಾಂ.
ನೀರು : 100 ಲೀಟರ್
ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆ
ಸ್ವಚ್ಛವಾದ ಕಬ್ಬಿಣದ ಚಾಕು ಅಥವಾ ಬ್ಲೇಡ್
ತಯಾರಿಕೆಯ ವಿಧಾನ
ಮೊದಲಿಗೆ ಒಂದು ಕಿ.ಗ್ರಾಂ. ಮೈಲು ತುತ್ತನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಅದರಂತೆ ಇನ್ನೊಂದು ಪಾತ್ರೆಯಲ್ಲಿ ಒಂದು ಕಿ.ಗ್ರಾಂ. ಸುಣ್ಣವನ್ನು 10 ಲೀಟರ್ ನೀರಿನಲ್ಲಿ ಕರಗಿಸಿಕೊಳ್ಳಬೀಕು. ನಂತರ ಕರಗಿದ ಮೈಲುತುತ್ತ ಮತ್ತು ಸುಣ್ಣದ ಎರಡೂ ದ್ರಾವಣಗಳನ್ನು 80 ಲೀ. ನೀರಿರುವ ಒಂದು ಪ್ಲಾಸ್ಟಿಕ್ ಡ್ರಮ್‍ಗೆ ಒಟ್ಟಿಗೆ ಸುರಿದು ಬೆರೆಸಬೇಕು. ಈ ದ್ರಾವಣವು ಶೇ. 1 ರಷ್ಟು ಆಗುತ್ತದೆ. ಈ ಮಿಶ್ರಣ ಸರಿಯಾಗಿ ತಯಾರಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲ್ಳೇಡನ್ನು ದ್ರಾವಣದಲ್ಲಿ ಅದ್ದಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡ್‍ನ ಮೇಲೆ ಕೆಂಪು ಬಣ್ಣ ಕಂಡು ಬಂದರೆ ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ಈ ರೀತಿ ತಯಾರಿಸಿದ ಮಿಶ್ರಣ ತಿಳಿ ನೀಲಿ ಬಣ್ಣದ್ದಾಗಿರಬೇಕು. ಬೋರ್ಡೊ ಮಿಶ್ರಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು. ಈ ಬೋರ್ಡೊ ದ್ರಾವಣವನ್ನು ಹಾಳಾಗದ ಹಾಗೆ ಇಡಲು 250 ಗ್ರಾಂ. ಬೆಲ್ಲವನ್ನು ಬೆರೆಸುವುದರಿಂದ ಈ ದ್ರಾವಣವನ್ನು 1 ರಿಂದ 2 ದಿನಗಳವರೆಗೆ ಶೇಖರಿಸಬಹುದು.
ಸುಳಿ ಕೊಳೆ ರೋಗ
ಈ ಶಿಲೀಂಧ್ರ ರೋಗದ ಮುಖ್ಯ ಲಕ್ಷಣಗಳೆಂದರೆ ಆರಂಭದಲ್ಲಿ ಸುಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಅದರ ಬುಡಭಾಗ ಕೊಳೆತು ಕೆಟ್ಟವಾಸನೆ ಬರುತ್ತದೆ. ಈ ರೋಗವು ಮಳೆಗಾಲದಲ್ಲಿ ಹೊರಭಾಗದ ಅಡಿಕೆ ಹಾಳೆಯ ಬುಡದಿಂದ ಪ್ರಾರಂಭವಾಗಿ ಸುಳಿ ಭಾಗಕ್ಕೆ ಹರಡುತ್ತದೆ. ರೋಗದ ಬಾಧೆ ತೀವ್ರವಾದಾಗ ಮರ ಸಂಪೂರ್ಣವಾಗಿ ಸಾಯುತ್ತದೆ.

ನಿರ್ವಹಣಾ ಕ್ರಮ
• ರೋಗ ತಗುಲಿದ ಭಾಗವನ್ನು ಸಂಪೂರ್ಣವಾಗಿ ತೆಗೆದು ಸ್ಬಚ್ಛವಾದ ನೀರಿನಿಂದ ತೊಳೆದು ಆ ಭಾಗಕ್ಕೆ ಶೇ. 10 ರ ಬೋರ್ಡೊ ಮುಲಾಮನ್ನು ಹಚ್ಚಬೇಕು.
• ರೋಗ ತಗಲಿರುವ ಮರಗಳ ಬಳಿ ಇರುವ ಮರಗಳ ಸಿರಿಗಳಿಗೆ ಶೇ. 1 ರ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು.

ಶೇ. 10 ರ ಬೋರ್ಡೊ ಮುಲಾಮು ತಯಾರಿಸುವ ವಿಧಾನ
1 ಕಿ.ಗ್ರಾಂ. ಮೈಲುತುತ್ತು 5 ಲೀ. ನೀರಿನಲ್ಲಿ ಹಾಗೂ 1 ಕಿ.ಗ್ರಾಂ. ಸುಣ್ಣವನ್ನು 5 ಲೀ. ನೀರಿನಲ್ಲಿ ಬೇರೆ ಬೇರೆಯಾಗಿ ಕರಗಿಸಬೇಕು. ನಂತರ ಇವೆರಡನ್ನು ಒಟ್ಟಿಗೆ ಕೂಡಿಸಿ ಶೇ. 10 ರ ಬೋರ್ಡೊ ಮುಲಾಮನ್ನು ತಯಾರಿಸಬೇಕು.

ಹಿಂಗಾರ ಒಣಗುವುದು
ಈ ಶಿಲೀಂಧ್ರ ರೋಗದ ಬಾಧೆ ಹೆಚ್ಚಾಗಿ ಫೆಬ್ರವರಿಯಿಂದ ಮೇ ತಿಂಗಳೆನವರೆಗೆ ಕಾಣಿಸಿಕೊಳ್ಳುತ್ತದೆ. ರೋಗಕ್ಕೆ ತುತ್ತಾದ ಗಿಡದ ಲಕ್ಷಣಗಳೆಂದರೆ ಹಿಂಗಾರವು ತುದಿಯಿಂದ ಹಳದಿಯಾಗಿ ಒಣಗುತ್ತಾ ಬರುತ್ತದೆ. ರೋಗದ ಬಾಧೆ ತೀವ್ರವಾದಾಗ ಹೆಣ್ಣು ಹೂಗಳು ಮತ್ತು ಮೊಗ್ಗುಗಳು ಉದುರುತ್ತವೆ.
ನಿರ್ವಹಣಾ ಕ್ರಮ
• ಸಂಪೂರ್ಣ ರೋಗ ತಗುಲಿದ ಹಿಂಗಾರಗಳನ್ನು ನಾಶಪಡಿಸಿ ಸ್ವಚ್ಛತೆಯನ್ನು ಕಾಪಾಡುವುದು.
• ಬಹುತೇಕ ಹಿಂಗಾರಗಳಲ್ಲಿ ಹೆಣ್ಣು ಹೂ ಅರಳುವ ಸಮಯಕ್ಕೆ ಒಂದು ಲೀ. ನೀರಿನಲ್ಲಿ ಡೈಥೇನ್ ಎಂ-45 2.5 ಗ್ರಾಂ. ನ್ನು ಕರಗಿಸಿ ಸಿಂಪಡಿಸಬೇಕು.

ಅಣಬೆ ರೋಗ
ಈ ರೋಗವು ಮುಖ್ಯವಾಗಿ ಮಣ್ಣು ಮತ್ತು ನೀರಿನ ಮುಖಾಂತರ ಪ್ರಸಾರವಾಗಿ ಬೇರುಗಳಿಗೆ ಅಂಟಿಕೊಳ್ಳುತ್ತದೆ. ಆರಂಭದಲ್ಲಿ ಹೊರಭಾಗದ ಎಲೆಗಳು ಹಳದಿಯಾಗುತ್ತವೆ. ನಂತರ ಒಳಭಾಗದ ಎಲೆಗಳ ಮೇಲೂ ಹರಡಿ ಸೊರಗಿ ಮರದ ಸುತ್ತಾ ಜೋತು ಬಿದ್ದು ಒಂದೊಂದೇ ಗರಿಗಳು ಕಳಚಿ ಬೀಳುತ್ತವೆ. ಕೊನೆಯ ಹಂತದಲ್ಲಿ ಸುಳಿ ಸಣ್ಣದಾಗಿ ಬೋಳಾಗಿ ಕಾಣುತ್ತದೆ. ಮರದ ಕೆಳಭಾಗದಲ್ಲಿ ಅಂದರೆ ನೆಲಮಟ್ಟದಿಂದ 3 ರಿಂದ 4 ಅಡಿ ಎತ್ತರದವರೆಗೆ ಕಂದು ಬಣ್ಣದ ಅಂಟು ದ್ರವ ಸೋರಲು ಸುರುವಾಗಿ ಬುಡದಲ್ಲಿ ಅಣಬೆಯ ಶಿಲೀಂಧ್ರ ಬೆಳವಣಿಗೆಯಾಗಿರುವುದು ಕಂಡು ಬಂದು ಸಂಪೂರ್ಣ ಮರವೇ ಸಾಯುತ್ತದೆ.
ನಿರ್ವಹಣಾ ಕ್ರಮ
• ರೋಗವು ಮರದಿಂದ ಮರಕ್ಕೆ ಬೇರುಗಳ ಸಂಪರ್ಕದಿಂದ ಹರಡುವುದರಿಂದ ರೋಗ ತಗುಲಿದ ಮರದ ಸುತ್ತಲು ಸುಮಾರು ಒಂದು ಅಡಿ ಅಗಲ ಮತ್ತು ಮೂರು ಅಡಿ ಆಳದವರೆಗೆ ಕಾಲುವೆಗಳನ್ನು ತೆಗೆದು ಆ ಪ್ರದೇಶಕ್ಕೆ 1 ಕಿ.ಗ್ರಾಂ. ಕ್ಯಾಪ್ಟಾನ್ ಅಥವಾ ಥೈರಾಮ್ ಅಥವಾ ಮ್ಯಾಂಕೋಜೆಬ್ ದ್ರಾವಣವನ್ನು ಸುರಿದು ಮಣ್ಣು ಮುಚ್ಚಬೇಕು.
• ರೋಗಕ್ಕೆ ತುತ್ತಾದ ಮರಗಳೆಗೆ ಹೆಕ್ಸಾಕೋನಜೋಲ್ 1 ಮಿ.ಲೀ. ಅಥವಾ ಟ್ರೈಡೆಮಾರ್ಪ್ 5 ಮಿ.ಲೀ. ಔಷಧಿಯನ್ನು ಮಿ.ಲೀ.ಲೀಟರ್ ನೀರಿಗೆ ಬೆರೆಸಿ ಮೂರು ತಿಂಗಳಿಗೊಮ್ಮೆ ಬೇರಿನ ಮೂಲಕ ಕೊಡುವುದು.
• ಪ್ರತೀ ಮರಕ್ಕೆ ವರ್ಷಕ್ಕೆ 5 ಕಿ.ಗ್ರಾಂ. ಬೇವಿನ ಹಿಂಡಿ ಮತ್ತು 50 ಗ್ರಾಂ. ಟ್ರೈಕೋಡರ್ಮ ವಿರಿಡೆ ಜೈವಿಕ ಪುಡಿಯನ್ನು 10 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಮರದ ಸುತ್ತಲೂ ಅಗೆದು ಮಣ್ಣಿಗೆ ಹಾಕಬೇಕು.

ಕೊಯ್ಲು ಮತ್ತು ಇಳುವರಿ
ಸಾಮಾನ್ಯವಾಗಿ ಅಡಿಕೆಯನ್ನು ನವೆಂಬರ್‍ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಕೊಯ್ಲು ಮಾಡುತ್ತಾರೆ. ಪೂರ್ತಿ ಬೆಳೆದ (6 ರಿಂದ 7 ತಿಂಗಳು ಅವಧಿಯ) ಕಾಯಿಗಳನ್ನು ಕತ್ತರಿಸಿ, ಬೇಯಿಸಿ ಒಣಗಿಸುತ್ತಾರೆ. ಇದಲ್ಲದೆ ಹಣ್ಣಾದ ಅಡಿಕೆಯನ್ನು ಕೊಯ್ಲು ಮಾಡಿ ಒಣಗಿಸುವ ಮೂಲಕ ಚಾಲಿಯನ್ನು ತಯಾರಿಸಲಾಗುತ್ತದೆ. ಬೇಯಿಸಿದ ಅಡಿಕೆಯಾದಲ್ಲಿ ಪ್ರತಿ ಹೆಕ್ಟೇರಿಗೆ ಸುಮಾರು 1250-1500 ಕಿ.ಗ್ರಾಂ. ಮತ್ತು ಚಾಲಿಯಾದಲ್ಲಿ 2000 ಕಿ.ಗ್ರಾಂ. ಇಳುವರಿ ನಿರೀಕ್ಷಿಸಬಹುದು.
ಅಡಿಕೆ ಸಂಸ್ಕರಣೆ: ಎಳೆಯ ಹಾಗೂ ಚೆನ್ನಾಗಿ ಬಲಿತ ಅಡಿಕೆ ಕಾಯಿಗಳೆರಡನ್ನೂ ಸಂಸ್ಕರಣೆಗೆ ಬಳಸುತ್ತಾರೆ. ಕಾಯಿಗಳು ಬಲಿಯಲು 10 ರಿಂದ 11 ತಿಂಗಳ ಕಾಲಾವಧಿ ಬೇಕು.
ಚಾಲಿ (ಕೊಟ್ಟೆ ಪಾಕ್): ಹಣ್ಣಾದ ಅಡಿಕೆಯನ್ನು ಕೊಯ್ಲು ಮಾಡಿ ಬಿಸಿಲಿನಲ್ಲಿ 35-40 ದಿನಗಳ ಕಾಲ ಒಣಗಿಸಬೇಕು. ನಂತರ ಸಿಪ್ಪೆಯನ್ನು ಬೇರ್ಪಡಿಸಬೇಕು. ಈ ರೀತಿ ತಯಾರಿಸುವ ಅಡಿಕೆಯನ್ನು ಚಾಲಿ ಎನ್ನುತ್ತಾರೆ.

 

ಅಡಿಕೆ
ಅಡಿಕೆ ಕೊಡಗು ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆಯಾಗಿದ್ದು, ಜಿಲ್ಲೆಯಾದ್ಯಂತ ಸುಮಾರು 2994 ಹೆಕ್ಟೇರು ಪ್ರದೇಶದಲ್ಲಿ
ಬೆಳೆಯುತ್ತಿದ್ದು ಕೃಷಿಕರ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅಡಿಕೆಯನ್ನು
ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೆ ಇದರಲ್ಲಿ ಹಲವಾರು ಔಷಧಿಯ ಗುಣಗಳು ಮತ್ತು ಕೆಲವು ಸಸ್ಯ ಕ್ಷಾರಗಳು ಕೂಡ
ಇರುತ್ತವೆ. ಆದ್ದರಿಂದ ಅಡಿಕೆಯಿಂದ ಹೆಚ್ಚಿನ ಲಾಭಗಳಿಸಲು ಅದನ್ನು ಬೆಳೆಸುವ ವೈಜ್ಞಾನಿಕ ಕೃಷಿ ವಿಧಾನಗಳನ್ನು ತಿಳಿದುಕೊಂಡು
ಅವುಗಳನ್ನು ಅಳವಡಿಕೊಳ್ಳವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.
ಹವಾಗುಣ
ಅಡಿಕೆಗೆ ಧಾರಾಳವಾದ ಹಾಗೂ ದೀರ್ಘಕಾಲದ ಮಳೆ ಅವಶ್ಯಕ. ಇದಕ್ಕೆ ನೀರು ಬಸಿದು ಹೋಗಬಲ್ಲ ವರ್ಷದಲ್ಲಿ
ಸರಾಸರಿ 2000 ರಿಂದ 3500 ಮಿ.ಮೀ. ಮಳೆ ಬೀಳುವ ಪ್ರದೇಶ ಮತ್ತು 15. ಸೆಂ ರಿಂದ 30. ಸೆಂ. ಉμÁ್ಣಂಶದಲ್ಲಿ ಚೆನ್ನಾಗಿ
ಬೆಳೆಯಬಹುದಾಗಿದೆ. ಇದನ್ನು ಸಮುದ್ರ ಮಟ್ಟದಿಂದ 1000 ಮೀ. ಎತ್ತರವಿರುವ ಪ್ರದೇಶದಲ್ಲೂ ಬೆಳೆಯಬಹುದಾಗಿದೆ.
ಮಣ್ಣು
ನೀರು ಬಸಿದು ಹೋಗುವ ಕೆಂಪು ಗೋಡು, ಜೆಂಬಿಟ್ಟಿಗೆ ಅಥವಾ ಮೆಕ್ಕಲು ಗೋಡು ಮಣ್ಣು ಅಡಿಕೆ ಬೆಳೆಗೆ
ಯೋಗ್ಯವಾಗಿದೆ. ನೀರು ನಿಲ್ಲುವ ಜೌಗು ಅಥವಾ ಸವ¼ುÀ ಮಣ್ಣ£Â À ಪ್ರದೇಶ ಅಡಿಕೆ ಬೆ¼ಂÉ iÀುಲು ಯೋಗ್ಯವಾಗಿರುವುದಿಲ್ಲ.
ಕೊqಗ Àು ಜಿ¯U್ಲÉ É ಸೂಕ್ತವಾದ ತಳಿ
· ತೀರ್xÀ ಹಳ್ಳಿ: ಮಳೆನಾಡು ಮತ್ತು ಮೈದಾ£ À ಪ್ರದೇಶಗಳಲ್ಲಿ ಹೆಚ್ಚು ಜ£ಪಿÀ ್ರಯವಾಗಿರುವ ¸್ಥÀಳೀಯ ತಳಿ. ಈ ತಳಿಯು
ಬೆಳವಣಿಗೆಯಲ್ಲಿ ಎತ್ತರವಾಗಿದ್ದು, ಉದ್ದನೆಯ ಆಕಾರದ ಸಣ್ಣ ಗಾತ್ರದ ಬೀಜವನ್ನು ಹೊಂದಿರುತ್ತದೆ. ಚೂರು ಅಡಿಕೆಗೆ
ಸೂಕ್ತವಾದ ಈ ತಳಿಯಿಂದ ಸುಮಾರು 3.6 ಕಿ.ಗ್ರಾಂ ಚಾಲಿ ಅಡಿಕೆ ಇಳುವರಿಯನ್ನು ಪ್ರತಿ ಮರದಿಂದ ನಿರೀಕ್ಷಿಸಬಹುದಾಗಿದೆ.
ಸಸಿಗಳನ್ನು ಬೆಳೆಸುವ ವಿಧಾನ
ತಾಯಿ ಮರಗಳನ್ನು ಆರಿಸುವುದು
ಶೀಘ್ರ ಇಳುವರಿ ಕೊಡಲು ಪ್ರಾರಂಭಿಸಿರುವ, ಹತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಿನ ಹಾಗೂ ಉತ್ತಮ ಕಾಯಿ
ಕಚ್ಚುವಿಕೆ ಹೊಂದಿರುವ ಮರಗಳನ್ನು ತಾಯಿ ಮರ ಎಂದು ಆಯ್ಕೆ ಮಾಡಿಕೊಳ್ಳಬೇಕು. ಈ ತಾಯಿ ಮರಗಳ ನಡುವಿನ
ಗೊನೆಗಳಲ್ಲಿಯ ಸುಮಾರು 35 ಗ್ರಾಂಗಿಂತಲೂ ಹೆಚ್ಚು ತೂಕವಿರುವ ಪೂರ್ಣವಾಗಿ ಹಣ್ಣಾದ ಅಡಿಕೆಗಳನ್ನು ಬೀಜದ ಅಡಿಕೆ
ಎಂದು ಆಯ್ದುಕೊಳ್ಳಬೇಕು. ಸಣ್ಣಗಾತ್ರದ, ಅಪೇಕ್ಷಿತ ಆಕಾರವಿಲ್ಲದ ಮತ್ತು ಗೊನೆಯ ತುದಿ ಭಾಗದಲ್ಲಿರುವ ಕಾಯಿಗಳನ್ನು
ಬೀಜಕ್ಕಾಗಿ ಉಪಯೋಗಿಸಬಾರದು.
ಪ್ರಾಥಮಿಕ ಸಸಿಮಡಿ
ಆಯ್ಕೆ ಮಾಡಿದ ಕಾಯಿಗಳನ್ನು ಕೊಯ್ಲು ಮಾಡಿದ 8 ರಿಂದ 10 ದಿನಗಳಲ್ಲಿ ನೆರಳಿರುವ ಪ್ರದೇಶದ ಸಸಿಮಡಿಯಲ್ಲಿ
ನೆಡಬೇಕು. 30 ಸೆಂ. ಮೀ. ಆ¼ À ಮತ್ತು ಅ£ುÀ ಕೂಲಕ್ಕೆ ತP್ಕ À ಉದ್ದ ಮತ್ತು ಅಗಲವಿರುವ ಪಾತಿಗಳ£ುÀ ್ನ ತೆಗೆದು ಮರಳಿನಿಂದ
ತುಂಬಬೇಕು. ಇಂತಹ ಮಡಿಗಳನ್ನು ಆಯ್ಕೆ ಮಾಡಿದ ಅಡಿಕೆಗಳನ್ನು ಅವುಗಳ ತೂಟ್ಟಿನ ಭಾಗ ಮೇಲೆ ಬರುವಂತೆ 5 ಸೆಂ.
ಮೀ. ಅಂತರದಲ್ಲಿ ನಾಟಿ ಮಾಡಬೇಕು. ಅನಂತರ ಕಾಯಿಗಳು ಮುಚ್ಚುವಂತೆ ಮರಳನ್ನು ಹರಡಿ ಅದರ ಮೇಲೆ ಅಡಿಕೆ ಸೋಗೆ
ಅಥವಾ ಭತ್ತದ ಹುಲ್ಲಿನಿಂದ ತೆಳುವಾಗಿ ಮುಚ್ಚಿ ಪ್ರತಿದಿನವೂ ನೀರನ್ನು ಕೊಡುತ್ತಿರಬೇಕು. ಸುಮಾರು 40 ದಿನಗಳ ನಂತರ
ಬೀಜಗ¼ುÀ ಮೊಳಕೆಯೊಡೆಯಲು ಪ್ರಾರಂ¨Àªs Áಗುತ್ತವೆ.
ದ್ವೀತಿಯ ಸಸಿಮಡಿ
15 ಸೆಂ. ಮೀ. ಎತ್ತರ, 120 ಸೆಂ. ಮೀ. ಅಗಲ ಮತ್ತು ಅನುಕೂಲಕ್ಕೆ ತಕ್ಕ ಉದ್ದವಿರುವ ಮಡಿಗಳನ್ನು ಸಿದ್ದಗೊಳಿಸಿ,
ಉತ್ತರ- ದಕ್ಷಿಣಾಭಿಮುಖವಾಗಿ ನೀರಿನ ಬಸಿಗಾಲುವೆಗಳನ್ನು ನಿರ್ಮಿಸಬೇಕು. ಈ ದ್ವೀತಿಯ ಸಸಿ ಮಡಿಗಳಲ್ಲಿ 3 ರಿಂದ 4 ತಿಂಗಳ
ವಯಸ್ಸಿನ, 2 ರಿಂದ 3 ಎಲೆಗಳಿರುವ ಅಡಿಕೆ ಸಸಿಗಳನ್ನು ಮೊದಲ ಸಸಿಮಡಿಯಿಂದ ಕಿತ್ತು ನಾಟಿ ಮಾಡಬೇಕು. ಪ್ರತಿ ಎಕರೆ
ಸಸಿಮಡಿಗೆ 1 ಟನ್ ಕೊಟ್ಟಿಗೆ ಗೊಬ್ಬರ ಕೊಡಬೇಕು. ನಂತರ ಮಳೆಗಾಲದ ಪ್ರಾರಂಭದಲ್ಲಿ 30 ಸೆಂ. ಮೀ. ಘಿ 30 ಸೆಂ. ಮೀ.
ಅಂತರವಿರುವಂತೆ ಮೊಳಕೆಗಳನ್ನು ನಾಟಿ ಮಾಡಿ ಪಾತಿಗಳಿಗೆ ನೆರಳನ್ನು ಒದಗಿಸಬೇಕು. ಮಳೆಗಾಲದಲ್ಲಿ ನೀರು ಹರಿದು
ಹೋಗುವಂತೆ ಬಸಿಕಾಲುವೆಗಳನ್ನು ಮಾಡಬೇಕು. ಕಾಲ ಕಾಲಕ್ಕೆ ಕ¼ಗೆ Àಳ£ುÀ ್ನ ಕಿತ್ತು ಪಾತಿಗಳ£ುÀ ್ನ ¸್ವಚ À್ಚಗೊಳಿ¸ುÀ ತ್ತಿರಬೇಕು.
ಪರ್ಯಾಯವಾಗಿ ಮೊಳಕೆ ಬಂದ ಅಡಿಕೆಗಳನ್ನು ಪಾಲಿಥೀನ್ ಚೀಲ (25 ಸೆಂ. ಮೀ. ಘಿ 15 ಸೆಂ. ಮೀ. ಅಳತೆಯ, 150
ಗೇಜ್) ಗಳಲ್ಲಿ 7 ಭಾಗ ಮೇಲ್ಮಣ್ಣು, 3 ಭಾಗ ಒಣ ಗೊಬ್ಬರ ಹಾಗೂ 2 ಭಾಗದ ಮರಳಿನ ಮಿಶ್ರಣ ಹಾಕಿಯೂ ಬೆಳೆಸಬಹುದು.
ಗಿಡಗಳ ಆಯ್ಕೆ
ಹನ್ನೆರಡರಿಂದ ಹದಿನೆಂಟು ತಿಂಗಳು ಬೆಳೆದ ಐದಕ್ಕಿಂತ ಹೆಚ್ಚು ಎಲೆಗಳಿರುವ, ಸಮ ಪ್ರಮಾಣದ ಎತ್ತರವಿರುವ
ಗಿಡಗಳನ್ನು ತೋಟದಲ್ಲಿ ನಾಟಿ ಮಾಡಲು ಆಯ್ದುಕೊಳ್ಳಬೇಕು.
ಗಿಡಗಳನ್ನು ನೆಡುವ ಸಮಯ
ಉತ್ತಮವಾಗಿ ನೀರುಬಸಿದು ಹೋಗುವ ಮಣ್ಣಿನಲ್ಲಿ ಮೇ- ಜೂನ್ ತಿಂಗಳಲ್ಲಿ ಗಿಡಗಳನ್ನು ನೆಡಬಹುದು. ನೀರು
ನಿಲ್ಲುವ ಸಾಧ್ಯತೆ ಇರುವ ಜೇಡಿ ಮಣ್ಣಿನಲ್ಲಿ ಹಾಗೂ ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಆಗಸ್ಟ್- ಸೆಪ್ಟಂಬರ್ ತಿಂಗಳುಗಳಲ್ಲಿ
ಗಿಡಗಳನ್ನು ನೆಡಬಹುದಾಗಿದೆ.
ಅಂತರ ಹಾಗೂ ಸಾಲು ಮಾಡುವಿಕೆ
ಗಿಡದಿಂದ ಗಿಡಕ್ಕೆ 2.7 ಮೀ ಘಿ 2.7 ಮೀ. (9 ಅಡಿ) ಅಂತರವಿರುವಂತೆ ದಕ್ಷಿಣೋತ್ತರ ರೇಖೆಯನ್ನು 35.ಸೆಂ. ಪಶ್ಛಿಮ
ದಿಕ್ಕಿನೆಡೆಗೆ ವಾಲುವಂತೆ ಗಿಡವನ್ನು ನೆಡಬೇಕು.ಇದರಿಂದ ಸೂರ್ಯನ ಶಾಖದ ತೀವ್ರತೆಯನ್ನು ತಡೆಗಟ್ಟಲು ಸಹಾಯವಾಗುತ್ತದೆ.
ಅಡಿಕೆ ತೋಟದಲ್ಲಿ ಮಿಶ್ರಬೆಳೆಗಳನ್ನು ಬೆಳೆಯಲು ಉಪಯೋಗಿಸುವುದಾದರೆ ಅಡಿಕೆಯನ್ನು 3.3 ಮೀ ಘಿ 3.3 ಮೀ ಅಂತರದಲ್ಲಿ
ನೆಡಬಹುದು.
ಗಿಡಗಳನ್ನು ನೆಡುವ ವಿಧಾನ
ಆಳವಾದ ಹಾಗೂ ಉತ್ತಮ ಬಸಿಯುವಿಕೆ ಇರುವ ಮಣ್ಣಿನಲ್ಲಿ 90ಘಿ 90 ಘಿ 90 ಸೆಂ. ಮಿ.ನಷ್ಟು ಆಳದ
ಗುಣಿಗಳನ್ನು ತೆಗೆದು ಮೇಲ್ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರದ ಮಿಶ್ರಣದಿಂದ ತುಂಬಬೇಕು. ಗಿಡವನ್ನು ಗುಣಿಗಳ ಮಧ್ಯದಲ್ಲಿ ನೆಟ್ಟು
ಕಾಂಡದವರೆಗೆ ಮಣ್ಣನ್ನು ಮುಚ್ಚಿ ನಂತರ ಮಣ್ಣಿನ ಮೇಲೆ ಎಲೆಗಳನ್ನು ಮುಚ್ಚಬೇಕು.
ಪೆÇೀಷಕಾಂಶಗಳ ನಿರ್ವಹಣೆ
ಅಡಿಕೆಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳ ಪ್ರಮಾಣ
¥್ರತಿÀ ªುÀ ರಕ್ಕೆ ¥್ರತಿÀ ವರ್ಷಕ್ಕೆ ಗಾಂ್ರ ಗಳಲ್ಲಿ
ರಸ ಗೊಬ್ಬರ ಮೊದಲನೆ ವರ್ಷ ಎರಡನೆ ವರ್ಷ
ಮೂರನೆ
ವರ್ಷ ಮತ್ತು
ನಂತರ
ಸಾರಜನಕ 33 66 100
ರಂಜಕ 13 26 40
ಪೆÇಟ್ಯಾμï 46 92 140
ಪ್ರತಿ ಮರವೊಂದಕ್ಕೆ ವರ್ಷಕ್ಕೆ 20 ಕಿ. ಗ್ರಾಂನಂತೆ ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರವನ್ನು ಕೊಡಬೇಕು.
ಶಿ¥sóÁರಸ್ಸು ಮಾಡಲಾದ ರಾಸಾಯನಿಕ ಗೊಬ್ಬರದ 2/3 ರಷ್ಟನ್ನು ಹಾಗೂ ಸಂಪೂರ್ಣ ಸಾವಯವ ಗೊಬ್ಬರವನ್ನು ಮೇ-ಜೂನ್
ತಿಂಗಳಲ್ಲಿಯೂ, ಉಳಿದ 1/3 ರಷ್ಟ ರಾಸಾಯನಿಕ ಗೊಬ್ಬರವನ್ನು ಸೆಪ್ಟಂಬರ್- ಅಕ್ಟೋಬರ್ ತಿಂಗಳಿನಲ್ಲಿ ಕೊಡಬೇಕು.ಬ್ಬ್
ನೀರಿನ ನಿರ್ವಹಣೆ ಮತ್ತು ಬಸಿಗಾಲುವೆಗಳು
ಕೊಡಗು ಜಿಲ್ಲೆಯ ಹವಾಗುಣಕ್ಕೆ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ವಾರಕ್ಕೊಮ್ಮೆ, ಜನವರಿ-ಫೆಬ್ರವರಿ ತಿಂಗಳಲ್ಲಿ 6
ದಿನಗಳಿಗೊಮ್ಮೆ ಹಾಗೂ ಮಾರ್ಚ್-ಮೇ ತಿಂಗಳಲ್ಲಿ 4 ದಿನಗಳಿಗೊಮ್ಮೆ ನೀರು ಕೊಡಬೇಕು. ಹನಿ ನೀರಾವರಿ ಪದ್ಧತಿಯಲ್ಲಿ
ಗಿಡವೊಂದಕ್ಕೆ ಪ್ರತಿ ದಿನ 15 ರಿಂದ 20 ಲೀಟರ್ ನೀರು ಕೊಡಬೇಕು.
ತೋಟದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಮಾಡಲು ಬಸಿಗಾಲುವೆಗಳ ನಿರ್ಮಾಣ ಅತಿ ಅವಶ್ಯಕ. ಮಣ್ಣಿನ
ಗುಣಧರ್ಮಕ್ಕೆ ತಕ್ಕಂತೆ ಬಸಿಗಾಲುವೆಗಳನ್ನು ನಿರ್ಮಿಸಬೇಕು. ಈ ಬಸಿಗಾಲುವೆಗಳು 75 ರಿಂದ 100 ಸೆಂ. ಮೀ. ಆಳದವರಗೆ
ಇರಬೇಕು. ಮಳೆಗಾಲದ ಪ್ರಾರಂ¨Àzs Àಲ್ಲಿ ಈ ಕಾಲುವೆಗ¼ನ À್ನು ¸್ವಚ À್ಚಗೊಳಿಸಿ ನೀರು ಸರಾಗವಾಗಿ ಹರಿದು ºೂÉ ೀಗುವಂತೆ
ನೋಡಿಕೊಳ್ಳಬೇಕು. ಮಳೆಗಾಲದ ನಂತರ ಮಣ್ಣು ಬಿಗಿಯಾದಲ್ಲಿ ಅಕ್ಟೋಬರ್-ನೆವಂಬರ್ ತಿಂಗಳಲ್ಲಿ ಮಣ್ಣನ್ನು ಅಗೆದು
ಸಡಿಲಗೊಳಿಸಬೇಕು. ಭೂಮಿಯು ಇಳಿಜಾರಾಗಿದ್ದಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಇಳಿಜಾರಿಗೆ ಅಡ್ಡಲಾಗಿ ತಟ್ಟುಗಳನ್ನು
ಮಾಡಬೇಕು.
ಅಡಿಕೆಯಲ್ಲಿ ಮಿಶ್ರ ಬೆಳೆ
ಅಡಿಕೆ ತೋಟದಲ್ಲಿ ದೊರೆಯುವ ನೈಸರ್ಗಿಕ ಸಂಪತ್ತುಗಳ ಸಮರ್ಪಕ ಬಳಕೆಗಾಗಿ ಕೆಲವೂಂದು ಬೆಳೆಗಳನ್ನು
ಅಡಿಕೆಯೂಂದಿಗೆ ಮಿಶ್ರಬೆಳೆಯಾಗಿ ಬೆಳೆಯಬಹುದಾಗಿದೆ. ಇವುಗಳು ಅಡಿಕೆ ಬೆಳೆಯ ಇಳುವರಿ ಕಡಿಮೆ ಮಾಡದೆ ಅತಿರಿಕ್ತ
ಆದಾಯ ನೀಡುತ್ತವೆ.ಕೊಡಗು ಜಿಲ್ಲೆಯಾದ್ಯಂತ ಬಾಳೆ, ಕಾಳುಮೆಣಸು ಮತ್ತು ಕೊಕ್ಕೋಗಳನ್ನು ಮಿಶ್ರ ಬೆಳೆಯಾಗಿ
ಬೆಳೆಯಬಹುದಾಗಿದೆ.
ನಾಲ್ಕು ಅಡಿಕೆ ಗಿಡಗಳ ಮಧ್ಯಭಾಗದಲ್ಲಿ ಅಡಿಕೆಯ ಜೊತೆಯಾಗಿ ಬಾಳೆ ಗಿಡಗಳನ್ನು ನೆಡಬಹುದು. ಮೂರು
ವರ್ಷಗಳ ನಂತರ ಬಾಳೆಯನ್ನು ಹೊಸದಾಗಿ ನೆಡಬೇಕು. ಅಡಿಕೆ ಗಿಡಕ್ಕೆ 6 ರಿಂದ 8 ವರ್ಷ ತುಂಬಿದ ಮೇಲೆ ಕಾಳುಮೆಣಸು
ಬಳ್ಳಿಯನ್ನು ಉತ್ತರ ದಿಕ್ಕಿನಲ್ಲಿ ಗಿಡದಿಂದ 75 ಸೆಂ. ಮೀ. ದೂರದಲ್ಲಿ ನೆಡಬೇಕು.
ಅತಿಸಾಂz್ರÀ ಬಹುಬೆಳೆ ಪz್ಧÀತಿ
ಕೊಡಗು ಜಿಲ್ಲೆಯಾಧ್ಯಂತ ಬಾಳೆ, ಕಾಳುಮೆಣಸು ಮತ್ತು ಕೊಕ್ಕೋ ಬೆಳೆಗಳನ್ನು ಒಟ್ಟಾಗಿ ಅಡಿಕೆ ತೋಟದಲ್ಲಿ
ಬೆಳೆಯಬಹುದಾಗಿದೆ.
ಸಸ್ಯ ಸಂರಕ್ಷಣೆ
ಕೀಟಗಳು
1. ಅಡಿಕೆ ಬೇರುಹುಳ
ಅಡಿಕೆ ತೋಟಗಳಲ್ಲಿ ಎಲ್ಲಾ ಕ್ರಮಬದ್ಧವಾದ ಕೃಷಿಯನ್ನು ಕೈಗೊಂಡಿದ್ದರೂ ಯಾವ ಕೀಟ ರೋಗದ
ಲಕ್ಷಣಗಳು ಹೊರನೋಟಕ್ಕೆ ಕಾಣದಿದ್ದರೂ ಇಳುವರಿ ಕಡಿಮೆಯಾಗುತ್ತಾ ಬಂದು, ಸಿಂಗಾರದ ಅಭಾವ ಕಾಣಿಸುವುದೇ ಬೇರು
ಹುಳುವಿನ ಬಾಧೆಯ ಮೊದಲ ಲಕ್ಷಣ. ನಂತರ ಎಲೆ ಹಳದಿಯಾಗುವುದು, ಎಲೆಗಳು ಕಿರಿದಾಗುವುದು, ಮರಗಳು
ಕ್ಷೀಣಿಸುವುದು, ಗೆಣ್ಣುಗಳ ಅಂತರ ಕಡಿಮೆಯಾಗುವುದು ಮತ್ತು ಮರದ ಗಾತ್ರ ಸಣ್ಣದಾಗುತ್ತಾ ಬಂದು ಕಾಂಡದ ಗಾತ್ರವು
ತೆಳುವಾಗಿ ಬೆಳವಣಿಗೆಯು ಕುಂಠಿತವಾಗುತ್ತದೆ. ಇಂತಹ ಮರದ ಬುಡವನ್ನು ಶೋಧಿಸಿದಾಗ ಬೇರುಗಳ ಪಾರ್ಶ್ವದಲ್ಲಿ ಬೆರಳು
ಗಾತ್ರದ, ಬೆಳ್ಳನೆಯ ಅರ್ಧಚಂದ್ರಾಕಾರದ, ಬಲವಾದ ಮೂರು ಜೊತೆ ಕಾಲುಗಳುಳ್ಳ ಹುಳುಗಳು ಕಂಡುಬರುತ್ತವೆ.
ಹತೋಟಿ ಕ್ರಮಗಳು
· ಜುಲೈ ಎರಡನೇ ವಾರದಿಂದ ಆಗಸ್ಟ್ ಕೊನೆಯ ವಾರದವರೆಗೆ ಮೂರನೇ ಹಂತದ ಮರಿಗಳು ಮತ್ತು ದುಂಬಿಗಳು
ಸಿಗುವುದರಿಂದ ಅಗತೆ ಮಾಡಿ ಹುಳುಗಳನ್ನು ನಾಶಗೊಳಿಸಬೇಕು.
· ಪ್ರತೀ ಮರಕ್ಕೆ 2 ರಿಂದ 3 ಕಿ. ಗ್ರಾಂ. ನಂತೆ ಬೇವಿನ ಹಿಂಡಿಯನ್ನು ಕೊಡಬೇಕು. ಇದರಿಂದ ಬೇರಿನ ಬೆಳವಣಿಗೆ
ಉತ್ತಮವಾಗುತ್ತದೆ.
· ವರ್ಷಕ್ಕೆ ಎರಡು ಬಾರಿ (ಮೇ ಮತ್ತು ಸೆಪ್ಟಂಬರ್) ಎಕರೆಗೆ 8 ಕಿ. ಗ್ರಾಂ. ಪೆÇೀರೆಟ್ 10 ಜಿ. ಹರಳನ್ನು ಒಣಮಣ್ಣು
ಅಥವಾ ಹೊಯ್ಗೆಯೊಂದಿಗೆ ಮಿಶ್ರಣಮಾಡಿ ಮಣ್ಣಿನಲ್ಲಿ ಬೆರಸಬೇಕು ಅಥವಾ ಅಡಿಕೆ ಮರದ ಸುತ್ತಲೂ ಹಗುರವಾಗಿ
ಅಗೆತವನ್ನು ಮಾಡಿ ಪ್ರತೀ ಮರಕ್ಕೆ 20 ಗ್ರಾಂ ಪೆÇೀರೆಟ್ 10 ಜಿ. ಹರಳನ್ನು ಹಾಕಿ ಮಣ್ಣಿನಿಂದ ಮುಚ್ಚಬೇಕು ಅಥವಾ
ಕ್ಲೋರ್‍ಪೈರಿಫಾಸ್ 20 ಇ. ಸಿ 5 ಮಿ. ಲೀ ಅಥವಾ ಇಮಿಡಾಕ್ಲೋಪ್ರಿಡ್ 0.5 ಮಿ.ಲಿ.ನ್ನು ಪ್ರತೀ ಲೀಟರ್ ನೀರಿನಲ್ಲಿ
ಮಿಶ್ರಣ ಮಾಡಿ ಪ್ರತಿಯೊಂದು ಮರಕ್ಕೆ ಸುಮಾರು 2 ರಿಂದ 3 ಲೀಟರ್ ದ್ರಾವಣವನ್ನು ಮರದ ಬುಡದ ಸುತ್ತಲೂ
ಸುರಿಯಬೇಕು.
2. ಕದಿರು ತಿಗಣೆ/ಸುಳಿ ತಿಗಣೆ
ಎಳೆಯ ಸಿರಿಯ ಒಳಭಾಗದಲ್ಲಿ ಈ ಕೀಟವು ಸೇರಿಕೊಂಡು ರಸವನ್ನು ಹೀರುತ್ತಿರುತ್ತದೆ. ರಸ ಹೀರಿದ ಎಳೆಯ
ಸಿರಿಯು ಹೊರಬಂದಾಗ ಗರಿಗಳು ಬಿಡಿಸಿಕೊಳ್ಳದೆ ಅಂಟಿಕೊಂಡು ಒಂದು ಕಡೆ ಬಾಗಿ ಮುದುರಿಕೊಂಡಿರುತ್ತದೆ. ಈ ಎಳೆಗಳಲ್ಲಿ
ನೀಳವಾದ ಕಡುಕಂದು ಬಣ್ಣದ ಮಚ್ಚೆಗಳು ಕಂಡುಬರುತ್ತವೆ. ಬಾಧೆ ತೀವ್ರವಾದಾಗ ಇಂತಹ ಗರಿಗಳು ಒಣಗಿ ಹೋಗುತ್ತವೆ. ಈ
ತಿಗಣೆಗಳು ಕೆಂಪು ಮಿಶ್ರಿತ ಕಂದು ಬಣ್ಣವಿದ್ದು ಅಪ್ಸರೆಗಳು ನಸು ಹಳದಿ ಛಾಯೆಯ ಹಸಿರು ಬಣ್ಣವಿರುತ್ತವೆ.
ಹತೋಟಿ ಕ್ರಮಗಳು
· 2 ಮಿ. ಲೀ. ಕ್ವಿನಾಲ್‍ಫಾಸ್ ಅಥವಾ 1.5 ಮಿ.ಲೀ. ಮೊನೋಕ್ರೋಟೊಫಾಸ್ ಕೀಟನಾಶಕವನ್ನು ಪ್ರತೀ ಲೀಟರ್
ನೀರಿನಲ್ಲಿ ಬೆರಸಿ ಕೀಟದ ಬಾಧೆ ಕಾಣಿಸಿಕೊಂಡಾಗ ಗರಿಗಳು ಸಂಪೂರ್ಣವಾಗಿ ತೊಯ್ಯುವಂತೆ ಸಿಂಪಡಿಸಬೇಕು.
· 10 ಗ್ರಾಂ. ಪೆÇರೇಟ್ (ಶೇ.10) ಹರಳುಗಳನ್ನು ಒಂದು ಚಿಕ್ಕ ಪಾಲಿಥೀನ್ ಚೀಲದಲ್ಲಿ ಕಟ್ಟಿ ಅದಕ್ಕೆ ಸಣ್ಣ ರಂಧ್ರಗಳನ್ನು
ಮಾಡಿ ಸುಳಿಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದಲೂ ಕೂಡ ಸುಳಿ ತಿಗಣೆಯ ಬಾಧೆಯನ್ನು
ತಡೆಯಬಹುದು.
3. ಜೇಡನುಸಿ
ಜೇಡ ನುಸಿಯು ಕೆಂಪು ಅಥವಾ ಬಿಳಿ ಬಣ್ಣದಾಗಿದು ಮಳೆಗಾಲ ಕಳೆದ ನಂತರ ಇವುಗಳ ಸಂಖ್ಯೆ ಹೆಚ್ಚುತ್ತಾ ಹೋಗಿ
ಏಪ್ರಿಲ್- ಮೇ ತಿಂಗಳುಗಳಲ್ಲಿ ಗರಿಷ್ಟವಿರುತ್ತವೆ. ಜೇಡನುಸಿಯು ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದು ಗರಿಗಳ ಕೆಳಭಾಗದಲ್ಲಿ ಗುಂಪಾಗಿ
ಕಂಡುಬರುವುದಲ್ಲದೆ ಗರಿಗಳಿಂದ ರಸವನ್ನು ಹೀರುತ್ತವೆ. ಇದರಿಂದ ಬಾಧೆಗೊಳಗಾದ ಗರಿಗಳು ಹಸಿರು ಬಣ್ಣವನ್ನು
ಕಳೆದುಕೊಂಡು, ಹಳದಿ ಬಣ್ಣಕ್ಕೆ ತಿರುಗಿ ಕೊನೆಗೆ ಕಂದು ಬಣ್ಣವನ್ನು ಹೊಂದಿ ಗರಿಗಳು ಒಣಗಿ ಹೋಗುತ್ತವೆ. ಸಾಮಾನ್ಯವಾಗಿ
ಎಳೆಯ ಮರಗಳು ಇದರ ಬಾಧೆಗೆ ಬೇಗ ತುತ್ತಾಗುತ್ತವೆ.
ಹತೋಟಿ ಕ್ರಮಗಳು
· ನುಸಿಯ ಬಾಧೆ ಕಂಡು ಬಂದಾಗ ಇವುಗಳ ಹತೋಟಿಗಾಗಿ 2.5 ಮಿ.ಲೀ ಡೈಕೋಫಾಲ್ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ
ಎಲೆಗಳ ಕೆಳಭಾಗ ಸಂಪೂರ್ಣ ತೊಯ್ಯುವಂತೆ ಸಿಂಪಡಿಸಬೇಕು. ಬಾಧೆ ಪುನಃ ಕಂಡುಬಂದಲ್ಲಿ ಎರಡು ವಾರಗಳ ನಂತರ
ಇದೇ ಸಿಂಪರಣೆಯನ್ನು ಮತ್ತೆ ಕೈಗೊಳ್ಳಬೇಕು.
ರೋಗಗಳು
1. ಕೊಳೆರೋಗ
ಪ್ರಾರಂಭದಲ್ಲಿ ಕಾಯಿಗಳ ಮೇಲೆ ನೀರಿನಿಂದ ಒದ್ದೆಯಾದಂತಹ ಅಚ್ಚಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.
ಅನಂತರ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಭಾಗವನ್ನೆಲ್ಲ ಆವರಿಸಿದಾಗ ಕಾಯಿಗಳು ಹೊಳಪನ್ನು ಕಳೆದುಕೊಂಡು
ಕೊಳೆಯಲು ಪ್ರಾರಂಭಿಸುತ್ತವೆ. ರೋಗ ತೀವ್ರವಾದಾಗ ಅಡಿಕೆ ಕಾಯಿಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗಿ ತೊಟ್ಟಿನಿಂದ ಕಳಚಿ ಕೆಳಗೆ
ಬೀಳುತ್ತವೆ. ಇಂತಹ ಕೊಳೆತು ಕಳಚಿ ಬಿದ್ದ ಕಾಯಿಗಳ ಮೇಲೆ ಬಿಳಿ ಬಣ್ಣದ ಶಿಲೀಂಧ್ರದ (ಬೂಷ್ಟು) ಬೆಳವಣಿಗೆ ಕಂಡುಬರುತ್ತದೆ.
ಈ ರೋಗಕ್ಕೆ ತಡವಾಗಿ ತುತ್ತಾದ ಕಾಯಿಗಳು ಸಹ ಹೊಳಪು ಹಾಗೂ ತೂಕವನ್ನು ಕಳೆದುಕೊಂಡು ಗೊಂಚಲಿನಲ್ಲೇ ಒಣಗುತ್ತವೆ.
ಹತೋಟಿ ಕ್ರಮಗಳು
· ಕೊಳೆರೋಗ ತಗುಲಿ ಬಿದ್ದ ಕಾಯಿಗಳು, ಒಣಗಿದ ಗೊಂಚಲು ಮತ್ತು ಇತರೆ ಭಾಗಗಳಲ್ಲಿ ರೋಗಾಣು ಬದುಕಿ
ಸೋಂಕನ್ನು ಹರಡುವುದರಿಂದ ಅವುಗಳನ್ನು ಆರಿಸಿ ತೆಗೆದು ಮಳೆ ಬೀಳುವ ಮೊದಲು ನಾಶಪಡಿಸಬೇಕು.
· ಮುಂಗಾರಿಗೆ ಮುಂಚೆ ಪಾಲಿಥೀನ್ ಹಾಳೆಗಳನ್ನು ಅಡಿಕೆ ಗೊನೆಗಳಿಗೆ ಕಟ್ಟುವುದರಿಂದಲೂ ಸಹ ಈ ರೋಗವನ್ನು
ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.
· ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮೊದಲು 3 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ ಮೆಟಲಾಕ್ಸಿಲ್+
ಮ್ಯಾಂಕೋಜೆಬ್ (ರಿಡೋಮಿಲ್ 72 ಡಬ್ಲೂ. ಪಿ.) ಅನ್ನು ಪ್ರತೀ ಲೀ. ನೀರಿನಲ್ಲಿ ಬೆರೆಸಿ ಅಥವಾ ಶೇ.1 ರ
ಬೋರ್ಡೊ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಂಪೂರ್ಣವಾಗಿ ಒದ್ದೆಯಾಗುವಂತೆ ಸಿಂಪರಣೆ ಮಾಡಬೇಕು.
ನಂತರ 30 ರಿಂದ 45 ದಿನಗಳ ಅಂತರದಲ್ಲಿ ಎರಡನೆ ಸಿಂಪರಣೆಯನ್ನು ಮಾಡಬೇಕು. ಮಳೆಗಾಲ ಮುಂದುವರಿದರೆ
20 ದಿನಗಳ ಅಂತರದಲ್ಲಿ ಮೂರನೇ ಬಾರಿ ಸಹ ಇದೇ ದ್ರಾವಣವನ್ನು ಸಿಂಪಡಿಸಬೇಕು.
· ರೋಗಾಣು ಮಣ್ಣಿನ ಮೇಲ್ಪದರದಲ್ಲಿ ಬದುಕುವುದರಿಂದ ಮಣ್ಣಿನಲ್ಲಿ ಹೆಚ್ಚು ತೇವಾಂಶವಿಲ್ಲದಂತೆ ನೋಡಿಕೊಳ್ಳಲು
ಬಸಿಗಾಲುವೆಯನ್ನು ತೆಗೆಯಬೇಕು ಹಾಗೂ ಗಾಳಿಯಾಡುವಂತೆ ಮಣ್ಣನ್ನು ಸಡಿಲಗೊಳಿಸಬೇಕು.
2. ಸುಳಿಕೊಳೆ ಅಥವಾ ಚಂಡೆ ಕೊಳೆಯುವ ರೋಗ
ಪ್ರಾರಂಭದಲ್ಲಿ ಸುಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಅದರ ಬುಡಭಾಗ ಕೊಳೆತು ಕೆಟ್ಟ ವಾಸನೆ ಬರುತ್ತದೆ. ಚಂಡೆ
ಕೊಳೆಯುವ ರೋಗವು ಮಳೆಗಾಲದಲ್ಲಿ ಹೊರಭಾಗದ ಅಡಿಕೆ ಹಾಳೆಯ ಬುಡದಿಂದ ಪ್ರಾರಂಭವಾಗಿ ನಂತರ ಸುಳಿ ಭಾಗಕ್ಕೆ
ಹರಡುತ್ತದೆ. ಬಾಧೆಗೊಳಗಾದ ಮರದ ಸುಳಿಯನ್ನು ಹೊರೆಗಳೆದರೆ ಸುಲಭವಾಗಿ ಕಿತ್ತು ಬರುತ್ತದೆ ಮತ್ತು ಕೆಟ್ಟ ವಾಸನೆಯನ್ನು
ಹೊರಸೂಸುತ್ತದೆ. ರೋಗ ತೀವ್ರವಾದಲ್ಲಿ ಸಂಪೂರ್ಣ ಮರವೇ ಸಾಯುತ್ತದೆ. ಈ ರೋಗವು ಮಳೆಗಾಲದಲ್ಲಿ ಪ್ರಾರಂಭವಾಗಿ
ಫೆಬ್ರವರಿ ತಿಂಗಳವರೆಗೆ ಕಾಣಿಸಿಕೊಳ್ಳುತ್ತದೆ.
ಹತೋಟಿ ಕ್ರಮಗಳು
· ರೋಗ ತಗುಲಿದ ಭಾಗವನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಛವಾದ ನೀರಿನಿಂದ ತೊಳೆದು ಆ ಭಾಗಕ್ಕೆ ಶೇ. 10 ರ
ಬೋರ್ಡೊ ಮುಲಾಮನ್ನು ಲೇಪಿಸಬೇಕು.
· ರೋಗ ಪೀಡಿತ ಮರಗಳ ಬಳಿ ಇರುವ ಇತರೆ ಮರಗಳ ಚೆಂಡೆಗಳಿಗೆ ಶೇ. 1 ರ ಬೋರ್ಡೊ ದ್ರಾವಣವನ್ನು
ಸಿಂಪಡಿಸಬೇಕು.
3. ಅಣಬೆ ರೋಗ ಅಥವಾ ಬುಡ ಕೊಳೆಯುವುದು
ಪ್ರಾರಂಭದಲ್ಲಿ ಕೆಳಭಾಗದ ಎಲೆಗಳು ಹಳದಿಯಾಗುತ್ತವೆ. ನಂತರ ಒಳಭಾಗದ ಎಲೆಗಳ ಮೇಲೂ ಹರಡಿ ಸೊರಗಿ
ಮರದ ಸುತ್ತಾ ಜೋತು ಬಿದ್ದು ಒಂದೊಂದೇ ಗರಿಗಳು ಕಳಚಿ ಬೀಳುತ್ತವೆ. ಕೆಲವು ಸಂದರ್ಭದಲ್ಲಿ ಹೂವು ಮತ್ತು ಕಾಯಿಗಳು
ಉದುರುತ್ತವೆ. ಕೊನೆಯ ಹಂತದಲ್ಲಿ ಸುಳಿ ಸಣ್ಣದಾಗಿ ಗರಿಗಳಿಲ್ಲದೆ ಬೋಳಾಗಿ ಕಾಣುತ್ತದೆ. ಮರದ ಬುಡದಿಂದ 3 ರಿಂದ 4 ಅಡಿ
ಎತ್ತರದವರೆಗೆ ಕಂದು ಬಣ್ಣದ ಅಂಟು ದ್ರವ ಸೋರಲು ಶುರುವಾಗಿ ಬುಡದಲ್ಲಿ ಅಣಬೆಯ ಶಿಲೀಂದ್ರ s ಬೆಳವಣUÂ ಂÉ iÀiÁಗಿರುವುದು
ಕಂಡುಬಂದು, ಅಂತಹ ಮರವನ್ನು ಕತ್ತರಿಸಿ ನೋಡಿದಾಗ ಒಳಭಾಗದ ಅಂಗಾಂಶ ಕಂದು ಬಣ್ಣದಿಂದ ಕೂಡಿರುವುದು ಕಂಡು
ಬರುತ್ತದೆ. ಈ ಸೋಂಕು ಬೇರುಗಳಿಗೂ ಹರಡಿ ಬಣ್ಣರಹಿತವಾಗಿ ಒಣಗಿದಂತೆ ಛಿದ್ರಗೊಂಡು ಕೊನೆಗೆ ಬೇರುಗಳು ಕೊಳೆತು
ಹೋಗುತ್ತವೆ. ನಂತರ ಸಂಪೂರ್ಣ ಮರವೇ ಸಾಯುತ್ತದೆ.
ಹತೋಟಿ ಕ್ರಮಗಳು
· ರೋಗಕ್ಕೆ ತುತ್ತಾದ ಮರಗಳನ್ನು ಬೇರು ಸಹಿತ ತೆಗೆದು ಸುಡಬೇಕು.
· ರೋಗವು ಮರದಿಂದ ಮರಕ್ಕೆ ಬೇರುಗಳ ಸಂಪರ್ಕದಿಂದ ಹರಡುವುದರಿಂದ ರೋಗ ತಗುಲಿದ ಮರದ ಸುತ್ತಲೂ
ಸುಮಾರು ಒಂದು ಅಡಿ ಅಗಲ ಮತ್ತು ಅರ್ಧ ಅಡಿ ಆಳದ ಕಂದಕವನ್ನು ತೆಗೆದು 75 ರಿಂದ 100 ಗ್ರಾಂ ಕ್ಯಾಪ್ಟಾನ್
ಅಥವಾ ಥೈರಾಮ್ ಅಥವಾ ಮ್ಯಾಂಕೋಜೆಬ್ ಅನ್ನು 25 ಲೀ ನೀರಿನಲ್ಲಿ ಕರಗಿಸಿ ಕಂದಕಗಳಲ್ಲಿ ಸುರಿಯಬೇಕು.
· ನೀರು ಬಸಿದು ಹೋಗುವಂತೆ ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸುವುದು
· ಪ್ರತೀ ಮರಕ್ಕೆ ವರ್ಷಕ್ಕೆ 5 ಕಿ. ಗ್ರಾಂ. ಬೇವಿನ ಹಿಂಡಿ ಮತ್ತು 50 ಗ್ರಾಂ ಟ್ರೈಕೋಡರ್ಮ ವಿರಿಡೆ ಜೈವಿಕ ಪುಡಿಯನ್ನು 10 ಕಿ.
ಗ್ರಾಂ. ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಮರದ ಸುತ್ತಲೂ ಹಾಕಬೇಕು.
· ರೋಗದ ಲಕ್ಷಣ ಕಂಡ ತಕ್ಷಣ ಹೆಕ್ಸಾಕೋನಜೋಲ್ 3 ಮಿ. ಲೀ. ಅಥವಾ ಟ್ರೈಡೆಮಾರ್ಪ 5 ಮಿ. ಲೀ. ಔಷಧಿಯನ್ನು
100 ಮಿ. ಲೀ. ನೀರಿನಲ್ಲಿ ಬೆರಸಿ ಬೇರಿನ ಮುಖಾಂತರ (ಜನವರಿ, ಮಾರ್ಚ್, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ)
ಕೊಡುವುದು.
4. ಸಿಂಗಾರ ಒಣಗುವ ರೋಗ
ಸಿಂಗಾರವು ತುದಿಯಿಂದ ಹಳದಿಯಾಗಿ ಒಣಗುತ್ತಾ ಬರುತ್ತದೆ. ನಂತರ ಸಂಪೂರ್ಣ ಸಿಂಗಾರವನ್ನು ಆವರಿಸಿದಾಗ
ಹೆಣ್ಣು ಹೂಗಳು ಮತ್ತು ಚಿಕ್ಕ ಮೊಗ್ಗುಗಳು ಉದುರುತ್ತವೆ. ರೋಗ ತೀವ್ರವಾದಾಗ ಸಂಪೂರ್ಣ ಸಿಂಗಾರವೇ ಒಣಗಿ ಹೋಗುತ್ತದೆ.
ಇದರಿಂದ ಅಡಿಕೆ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗಿ ರೈತರು ತೊಂದರೆಗೀಡಾಗುತ್ತಿರುವುದು ಕಂಡುಬರುತ್ತಿದೆ.
ಹತೋಟಿ ಕ್ರಮಗಳು
· ರೋಗ ಪೀಡಿತ ಸಿಂಗಾರಗಳನ್ನು ಆರಿಸಿ ನಾಶಪಡಿಸಬೇಕು.
· ಬಹುತೇಕ ಸಿಂಗಾರಗಳಲ್ಲಿ ಹೆಣ್ಣು ಹೂ ಅರಳುವ ಸಮಯಕ್ಕೆ ಸರಿಯಾಗಿ ಒಂದು ಲೀಟರ್ ನೀರಿನಲ್ಲಿ 2.5 ಗ್ರಾಂ
ಮ್ಯೊಂಕೋಜೆಬ್ ಅಥವಾ 4.0 ಗ್ರಾಂ ಜೈನೆಬ್‍ನ್ನು ಕರಗಿಸಿ ಸಿಂಗಾರಕ್ಕೆ ಸಿಂಪಡಿಸಬೇಕು. ಅವಶ್ಯಕತೆ ಇದ್ದರೇ ಎರಡನೇ
ಬಾರಿ 25 ದಿನಗಳ ನಂತರ ಮತ್ತೊಮ್ಮೆ ಇದೇ ಔಷಧಿಯನ್ನು ಸಿಂಪಡಿಸಬೇಕು.
5. ಹಳದಿ ಎಲೆ ರೋಗ
ಈ ರೋಗದ ಪ್ರಮುಖ ಚಿಹ್ನೆ ಅಡಿಕೆಯ ಎಲೆ ಹಳದಿ ಬಣ್ಣಕ್ಕೆ ತಿರುಗುವುದು. ಹಳದಿಯಾಗುವ ಪ್ರಕ್ರಿಯೆ ಮುಡಿಯ
ಮಧ್ಯ ಸುತ್ತಿನಲ್ಲಿರುವ ಎಲೆಗಳ ತುದಿಯಿಂದ ಆರಂಭಗೊಂಡು ಎಲೆಗಳ ಗರಿಗಳ ಅಂಚಿನ ಮೂಲಕ ಹಾಯ್ದು ಕ್ರಮೇಣ
ಪೂರ್ತಿಯಾಗಿ ಎಲೆಗಳನ್ನು ಆಕ್ರಮಿಸಿಕೊಳ್ಳುತ್ತದೆ.
ಎಲೆಗಳ ನಡು ದಿಂಡಿನ ಅಂಚಿನಲ್ಲಿ ಬಣ್ಣಮಾತ್ರ ಹಸಿರಾಗಿಯೇ ಇರುತ್ತದೆ. ರೋಗ ಮುಂದುವರಿಯುತ್ತಾ ಹೋದರೆ
ಹಳದಿ ಬಣ್ಣ ಎಲ್ಲಾ ಎಲೆಗಳನ್ನು ಆಕ್ರಮಿಸುತ್ತದೆ. ಇದರಿಂದಾಗಿ ಎಲೆಗಳು ಒಣಗಿ ಕೆಳಗೆ ಬೀಳುತ್ತವೆ. ತೀವ್ರರೋಗವಿರುವ ಮರಗಳ
ಎಲೆಗಳು ಸಣ್ಣದಾಗುತ್ತಾ ಮರದ ಗಾತ್ರವು ಕಡಿಮೆಯಾಗುತ್ತದೆ. ಅಲ್ಲದೇ, ತೀವ್ರವಾಗಿ ರೋಗ ಹಿಡಿದ ಮರಗಳ ಕಾಯಿಗಳು
ಸಣ್ಣದಾಗಿರುತ್ತದೆ ಮತ್ತು ಬೆಳೆಯುವ ಮೊದಲೇ ಕಾಯಿಗಳು ಉದುರಿ ಬೀಳುತ್ತವೆ.
ಹತೋಟಿ ಕ್ರಮಗಳು
ಫೈಟೋಪ್ಲಾಸ್ಮಾ ತರುವ ಈ ರೋಗವನ್ನು ನಿಯಂತ್ರಿಸಲು ಬಳಕೆಯಲ್ಲಿರುವ ಸಸ್ಯಸಂರಕ್ಷಣಾ ಕ್ರಮಗಳಿಂದ ಸಾಧ್ಯವಿಲ್ಲದೆ
ಇರುವುದರಿಂದ ರೋಗವನ್ನು ನಿಯಂತ್ರಣದಲ್ಲಿಡಲು ಮತ್ತು ಬಾಧಿತ ಮರಗಳ ಇಳುವರಿಯನ್ನು ಹೆಚ್ಚಿಸಲು ಈ ಕೆಳಗಿನ
ನಿರ್ವಹಣಾ ಕ್ರಮಗಳನ್ನು ಅನುಸರಿಸಬಹುದು.
· ತೋಟದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆಗಳನ್ನು ನಿರ್ಮಿಸುವುದು.
· ಬೇಸಿಗೆ ಕಾಲದಲ್ಲಿ ನೀರನ್ನು ಕೊಟ್ಟು ನೀರು ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು.
· 12 ಕಿ.ಗ್ರಾಂ ನಂತೆ ಸಾವಯವ ಗೊಬ್ಬರವನ್ನು ಹಾಗೂ ಹಸಿರೆಲೆಗಳನ್ನು ಪ್ರತೀ ವರ್ಷ ಪ್ರತೀ ಮರಕ್ಕೆ ಕೊಡಬೇಕು.
· ರೋಗ ಹರಡುವಿಕೆಯನ್ನು ತಡೆಗಟ್ಟಲು ಬಾಧಿತ ಮರಗಳನ್ನು ತೆಗೆಯುವುದು.
· ಕೀಟಗಳ ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕು.
· ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಪ್ರತೀ ವರ್ಷ ಪ್ರತೀ ಗಿಡಕ್ಕೆ ಎರಡು ಸಮ ಕಂತುಗಳಲ್ಲಿ ನೀಡುವುದು.
6. ಎಲೆಚುಕ್ಕೆ ರೋಗ
ಸಾಮಾನ್ಯವಾಗಿ ಹತ್ತು ವರ್ಷದ ಒಳಗಿನ ಗಿಡಗಳಲ್ಲಿ ಕಂಡುಬರುವ ಈ ರೋಗವು ಹೆಚ್ಚಾಗಿ ಮಳೆಗಾಲದಲ್ಲಿ
ಕಾಣಿಸಿಕೊಳ್ಳುತ್ತದೆ. ಎಲೆಗಳ ಮೇಲೆ ಕಂದು ಬಣ್ಣದಿಂದ ದಟ್ಟ ಕಂದು ಬಣ್ಣ ಅಥವಾ ಕಪ್ಪು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ.
ರೋಗ ತೀವ್ರವಾದಲ್ಲಿ ಸಸಿಗಳು ಗಿಡ್ಡದಾಗುತ್ತವೆ.
ಹತೋಟಿ ಕ್ರಮಗಳು
· ರೋಗ ಪೀಡಿತ ಎಲೆಗಳನ್ನು ತೆಗೆದು ನಾಶಪಡಿಸಬೇಕು.
· ಶೇಕಡಾ 1 ರ ಬೋರ್ಡೊ ದ್ರಾವಣ ಅಥವಾ 2 ಗ್ರಾಂ ಮ್ಯಾಂಕೋಜೆಬ್ ಅಥವಾ 3 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡನ್ನು
ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಪೆÇೀಷಕಾಂಶದ ನ್ಯೂನತೆಗಳು
1. ಅಡಿಕೆ ಸೀಳುವುದು/ಕಾಯಿ ಒಡೆಯುವುದು
ಅಡಿಕೆ ಸೀಳುವುದಕ್ಕೆ ಮುಖ್ಯ ಕಾರಣ ಪೆÇೀಷಕಾಂಶಗಳ ಅಸಮರ್ಪಕ ನಿರ್ವಹಣೆ ಅದರಲ್ಲಿಯೂ ಮುಖ್ಯವಾಗಿ
ಬೋರಾನ್ ಮತ್ತು ಪೆÇಟ್ಯಾμïನ ಕೊರತೆಯಿಂದ ಹಣ್ಣಾಗುವ ಮೊದಲೇ ಕಾಯಿಗಳು ಹಳದಿಯಾಗುತ್ತವೆ ಹಾಗೂ ತುದಿ ಅಥವಾ
ಬುಡದ ಭಾಗದಲ್ಲಿ ಅಡಿಕೆ ಕಾಯಿಗಳು ಸೀಳುತ್ತವೆ.
ಹತೋಟಿ ಕ್ರಮಗಳು
· ಶಿಫಾರಸ್ಸಿನ ಪ್ರಕಾರ ಪೆÇಟ್ಯಾμï ಗೊಬ್ಬರವನ್ನು ಗಿಡಗಳಿಗೆ ಕೊಡಬೇಕು.
· 2 ಗ್ರಾಂ. ಬೋರಾಕ್ಸ್‍ನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಗೊನೆಗಳಿಗೆ ಸಿಂಪಡಿಸಬೇಕು ಅಥವಾ ಮುಂಗಾರಿಗೆ ಮುಂಚೆ
30 ಗ್ರಾಂ ಬೋರಾಕ್ಸ್‍ನ್ನು ಪ್ರತಿ ಗಿಡದ ಬುಡಕ್ಕೆ ಹಾಕುವುದರಿಂದ ಈ ನ್ಯೂನತೆಯನ್ನು ಸಮರ್ಪಕವಾಗಿ
ನಿಯಂತ್ರಿಸಬಹ್ಮದಾಗಿದೆ.
ಅಡಿಕೆಯ ಇಳುವರಿ ಮತ್ತು ಸಂಸ್ಕರಣೆ
ಉತ್ತಮ ಗುಣಮಟ್ಟದ ಅಡಿಕೆಯನ್ನು ಪಡೆಯಲು ಸರಿಯಾದ ಕಾಲಕ್ಕೆ ಅವುಗಳನ್ನು ಕೊಯ್ಯುವುದು ಅವಶ್ಯಕ.
ಸಾಮಾನ್ಯವಾಗಿ ಅಡಿಕೆಯನ್ನು ನೆವೆಂಬರ್‍ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಕೊಯ್ಲು ಮಾಡಬಹುದು. ಬೇಯಿಸಿದ
ಅಡಿಕೆಯಾದಲ್ಲಿ ಪ್ರತಿ ಎಕರೆಗೆ ಸುಮಾರು 500 ರಿಂದ 600 ಕಿ.ಗ್ರಾಂ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ.

About Vivek Naren

About

Leave a Reply

Your email address will not be published. Required fields are marked *