ಏಲಕ್ಕಿ Cardamom

ಏಲಕ್ಕಿ

“ಸಂಬಾರ ಪದಾರ್ಥಗಳ ರಾಣಿ” ಎಂದು ಕರೆಯಲ್ಪಡುವ ಏಲಕ್ಕಿ ಸಂಬಾರ ಪದಾರ್ಥಗಳ ಅಂತರರಾóಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಏಲಕ್ಕಿಯು ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣ ಕಾಡುಗಳ ಮೂಲ ನಿವಾಸಿಯಾಗಿದೆ.

ಹವಾಗುಣ: ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳು ಏಲಕ್ಕಿ ಬೆಳೆಯ ನೈಸರ್ಗಿಕ ತಾಣ ಸಮುದ್ರ ಮಟ್ಟದಿಂದ 600 ರಿಂದ 1200 ಮೀಟರ್ ಎತ್ತರವಿರುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ

ಮಣ್ಣು: ಆಮ್ಲೀಯ ರಸಸಾರ (5.5-6.5) ಹೊಂದಿರುವ ಕಾಡಿನ ಗೋಡು ಮಣ್ಣುಗಳಲ್ಲಿ ಈ ಬೆಳೆ ಹುಲುಸಾಗಿ ಬೆಳೆಯುತ್ತದೆ.

ಸಸಿಮಡಿ ನಿರ್ವಹಣೆ: ಏಲಕ್ಕಿ ತೋಟಗಳನ್ನು ಸ್ಥಾಪಿಸಲು ಆಯಾ ಪ್ರದೇಶಗಳಿಗೆ ಸೂಕ್ತವಾಗಿರುವ ಹೆಚ್ಚು ಇಳುವರಿ ನೀಡುವ ತಳಿಗಳ ಬೀಜದಿಂದ ಬೆಳೆಸಿದ ಸಸಿಗಳನ್ನು ಅಥವಾ ಕಂದುಗಳನ್ನು ಬಳಸಬೇಕು. ವ್ಶೆರಾಣು ಮುಕ್ತ ಸಸಿಗಳು ಬೇಕೆನಿಸಿದಲ್ಲಿ ಕಂದು ಮೂಲಕ ಸಸ್ಯಾಭಿವೃದ್ಧಿ ಮಾಡುವುದು ಅತ್ಯುತ್ತಮ ವಿಧಾನ.

ಕಂದುಗಳ ಮೂಲಕ ಸಸ್ಯಾಭಿವೃದ್ಧಿ: ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡುವ ವಿಧಾನವು ಹೆಚ್ಚು ಇಳುವರಿ ನೀಡುವ ತಾಯಿ ಗಿಡಗಳಿಂದ ತಾಯಿ ಗಿಡಗಳನ್ನೇ ಹೋಲುವಂತಹ ಸಸಿಗಳನ್ನು ಪಡೆಯಲು ಸಾಧ್ಯವಿದೆ. ಬೀಜಗಳಿಂದ ಬೆಳೆಸಿದ ಗಿಡಗಳಿಗಿಂತ ಬೇರುಕಾಂಡದ ಮೂಲಕ ಬೆಳೆಸಿದ ಎಲ್ಲಾ ಗಿಡಗಳು ಒಂದೇ ಸಮನಾದ ಬೆಳವಣಿಗೆಯನ್ನು ಹೊಂದಿರುವುದರ ಜೊತೆಗೆ ಬಹು ಬೇಗ ಇಳುವರಿ ನೀಡಲು ಪ್ರಾರಂಬಿಸುತ್ತವೆ.

ತಳಿಗಳು: ಕರ್ನಾಟಕದ ಏಲಕ್ಕಿ ಬೆಳೆಯುವ ಪ್ರದೇಶದಲ್ಲಿ ಐಐಎಸ್‍ಆರ್ ಸುವಾಸಿನಿ (ಸಿಸಿಎಸ್ -1), ಐಐಎಸ್‍ಆರ್ ಅವಿನಾಶ್ (ಆರ್‍ಆರ್ – 1), ಐಐಎಸ್‍ಆರ್ ವಿಜೇತಾ (ಎನ್ ಕೆ ಇ-12), ಮೂಡಿಗೆರೆ – 1, ಮೂಡಿಗೆರೆ -2 ಮತ್ತು ಐಸಿಆರ್‍ಐ-3 ತಳಿಗಳನ್ನು ಬೆಳೆಯಲಾಗುತ್ತಿದೆ.

ಜಮೀನಿನಲ್ಲಿ ನಾಟಿ ಮಾಡುದುವುದು ಮತ್ತು ನಿರ್ವಹಣೆ: ಹೊಸದಾಗಿ ನಾಟಿ ಮಾಡಬೇಕೆಂದಿರುವ ಜಮೀನಿನಲ್ಲಿ ಪೊದೆ ಗಿಡಗೆಂಟೆಗಳನ್ನು ಬೇರು ಸಮೇತ ತೆಗೆಯಬೇಕು. ಒಂದು ವೇಳೆ ಮರು ನಾಟಿ ಮಾಡುವುದಾದಲ್ಲಿ ಹಳೆಯ ಏಲಕ್ಕಿ ಗಿಡಗಳನ್ನು ಸಂಪೂರ್ಣವಾಗಿ ತೆಗೆಯಬೇಕು. ಬೇಸಿಗೆ ತಿಂಗಳುಗಳಲ್ಲಿ ನೆರಳು ನಿಯಂತ್ರಣ, ಸಮಪಾತಳಿ ಜಗತಿ ಕಟ್ಟೆಗಳನ್ನು ನಿರ್ಮಿಸುವುದು ಮತ್ತು ಗುಣಿಗಳನ್ನು ತೆಗೆಯುವ್ಯದು ಈ ಕೆಲಸಗಳನ್ನು ಮಾಡಬೆಕು. ಮುಂಗಾರು ಮಳೆ ಆರಂಭಕ್ಕಿಂತ ಮುಂಚೆ 90x90x45 ಸೆಂ. ಮೀ. ಅಳತೆಯ ಗುಣಿಗಳನ್ನು ತೆಗೆದು, ಆ ಗುಣಿಗಳಲ್ಲಿ 1/3 ಭಾಗದಷ್ಟು ಮೇಲ್ಮಣ್ಣಿನಿಂದಲೂ ಮತ್ತು 1/3 ಭಾಗದಷ್ಟು 1:3 ಪ್ರಮಾಣದಲ್ಲಿ ಸಾವಯವ ಗೊಬ್ಬರ ಮತ್ತು ಮೇಲ್ಮಣ್ಣುಗಳ ಮಿಶ್ರಣದಿಂದಲೂ ಭರ್ತಿ ಮಾಡಬೇಕು.

ನೆರಳು ನಿಯಂತ್ರಣ: ಹೊಸದಾಗಿ ನಾಟಿ ಮಾಡಿದ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ (ಮಾರ್ಚಿ-ಏಪ್ರಿಲ್) ಯೂ ಹಾಗೂ ಹಳೆಯ ತೋಟಗಳಲ್ಲಿ ಬೇಸಿಗೆ ಮಳೆ ಬಂದನಂತರ (ಮೇ-ಜೂನ್) ವೂ ನೆರಳಿನ ನಿಯಂತ್ರಣ ಮಾಡಬೇಕು. ತೋಟದಲ್ಲಿ ದಟ್ಟವಾದ ನೆರಳಿದ್ದಲ್ಲಿ ಶೇಕಡಾ 40 ರಿಂದ 60 ರಷ್ಟು ಸೋಸಿದ ನೆರಳು ಏಲಕ್ಕಿ ಗಿಡಗಳ ಮೇಲೆ ಬೀಳುವಂತೆ ನೆರಳಿನ ಮರಗಳ ರೆಂಬೆಗಳನ್ನು ಕತ್ತರಿಸಬೇಕು.

ಸಸಿಗಳ ನಾಟಿ: ಕರ್ನಾಟಕದಲ್ಲಿ ಮಲಬಾರ್ ತಳಿಗೆ ಗಿಡಗಳಿಂದ ಗಿಡಗಳಿಗೆ 1.8×1.8 ಮೀ. ಅಂತರವು (ಹೆಕ್ಟೇರಿಗೆ 3086 ಸಸಿಗಳು) ಸೂಕ್ತವಾದುದಾಗಿದೆ. ಸಸಿಗಳನ್ನು ನಾಟಿ ಮಾಡಿದ ತಕ್ಷಣ, ಸಸಿಗಳ ಬುಡದ ಭಾಗದಲ್ಲಿ ಮಣ್ಣಿನ ಮೇಲೆ ಒಣಗಿದ ತರಗೆಲೆಗಳನ್ನು ಹೊದಿಕೆಯಾಗಿ ಹಾಕಬೇಕು.

ಕಳೆಗಳ ನಿರ್ವಹಣೆ: ಕಳೆಗಳು ಏಲಕ್ಕಿ ಬೆಳೆಯೊಂದಿಗೆ ನೀರು ಮತ್ತು ಪೋಷಕಾಂಶಗಳಿಗೋಸ್ಕರ ಬಹಳವಾಗಿ ಸ್ಪರ್ಧಿಸುತ್ತವೆ. ಆರಂಭದಲ್ಲಿ ಕಳೆಗಳ ಬೆಳವಣಿಗೆಯು ಬಹಳಷ್ಟಿರುತ್ತದೆ. ಮೇ, ಸೆಪ್ಟೆಂಬರ್ ಮತ್ತು ಡಿಸೆಂಬರ್ / ಜನವರಿ ತಿಂಗಳುಗಳಲ್ಲಿ ಎರಡು ಅಥವಾ ಮೂರು ಬಾರಿ ಸಸಿಗಳ ಬುಡದಲ್ಲಿ ಕಳೆಯನ್ನು ಕೈಯಿಂದ ತೆಗೆಯಬೇಕು.

ನೀರಾವರಿ ನಿರ್ವಹಣೆ: ಕುಂಡ ನೀರಾವರಿ ಅಥವಾ ಪೈಪುಗಳ ಮೂಲಕ ನೀರು ಕೊಡುವುದಾದಲ್ಲಿ ವಾರಕ್ಕೊಮ್ಮೆ ಗಿಡವೊಂದಕ್ಕೆ 20-30 ಲೀ. ನಷ್ಟು (ಗಿಡದ ಬುಡದ ಗಾತ್ರವನ್ನು ಆಧರಿಸಿ) ನೀರು ಕೊಡಬಹುದು. ತುಂತುರು ನೀರಾವರಿ ಮೂಲಕ ನೀರು ಕೊಡುವುದಾದಲ್ಲಿ ಸಾಮಾನ್ಯವಾದ ಪರಿಸ್ಥಿತಿಯಲ್ಲಿ 15 ದಿನಗಳಿಗೊಂದಾವರ್ತಿ 35 ರಿಂದ 45 ಮೀ. ಮೀ. ಮಳೆಗೆ ಸಮಾನವಾದಷ್ಟು ನೀರು ಕೊಡಬೇಕು.

ಗೊಬ್ಬರ ಮತ್ತು ರಸಗೊಬ್ಬರಗಳನ್ನು ನಿರ್ವಹಣೆ: ಏಲಕ್ಕಿ ಬೆಳೆಯು ಗೊಬ್ಬರ ಮತ್ತು ರಸಗೊಬ್ಬರಗಳೆರಡಕ್ಕೂ ಪ್ರತಿಕ್ರಿಯೆ ತೋರಿಸುತ್ತದೆ. ಗಿಡವೊಂದಕ್ಕೆ 5-10 ಕಿ.ಗ್ರಾಂ. ಕಳಿತ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ಶಿಲಾರಂಜಕ (ಗಿಡವೊಂದಕ್ಕೆ 180 ಗ್ರಾಂ.) ಮತ್ತು ಮ್ಯೂರಿಯೇಟ್ ಆಫ್ ಪೊಟ್ಯಾóಷ್ (ಗಿಡವೊಂದಕ್ಕೆ 90 ಗ್ರಾಂ) ರಸಗೊಬ್ಬರಗಳೊಂದಿಗೆ ಮಿಶ್ರಮಾಡಿ, ಮೇ-ಜೂನ್ ತಿಂಗಳುಗಳಲ್ಲಿ ಕೊಡಬೇಕು.
ಸಾರಜನಕ ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳನ್ನು ಹಾಕುವ ಪ್ರಮಾಣ
ಗಿಡಗಳ ವಯಸ್ಸು ಮಳೆಯಾಶ್ರಯದ ಪ್ರದೇಶಗಳು(ಕಿ.ಗ್ರಾಂ./ಹೆಕ್ಟೇರ್) ನೀರಾವರಿಯಾಶ್ರಯದ ಪ್ರದೇಶಗಳು (ಕಿ.ಗ್ರಾಂ./ಹೆಕ್ಟೇರ್)
ನಾಟಿ ಮಾಡಿದ ಮೂರನೆಯ ವರ್ಷ (ಸ್ಥಿರ ಇಳುವರಿ) ಸಾರಜನಕ–75; ರಂಜಕ–75
ಪೊಟ್ಯಾಷ್–150; (2 ಕಂತುಗಳಲ್ಲಿ) ಸಾರಜನಕ-125;ರಂಜಕ– 125;
ಪೊಟ್ಯಾಷ್–250; (3 ಕಂತುಗಳಲ್ಲಿ)
*- ಮೇ/ಜೂನ್, ಸೆಪ್ಟೆಂಬರ್/ಅಕ್ಟೋಬರ್ ** ಮೇ/ಜೂನ್, ಸೆಪ್ಟೆಂಬರ್/ಅಕ್ಟೋಬರ್, ಡಿಸೆಂಬರ್/ಜನವರಿ

ರಸಗೊಬ್ಬರ ಕೊಡುವ ವಿಧಾನ: ಮಣ್ಣಿಗೆ ಹಾಕುವುದು
ಗಿಡಗಳ ಬುಡದಲ್ಲಿನ ಒಣಗಿದ ತರಗೆಲೆಗಳ ಹೊದಿಕೆಯನ್ನು ತೆಗೆದು, ಗಿಡಗಳ ಬುಡದಿಂದ 30 ಸೆಂ.ಮೀ. ದೂರದಲ್ಲಿ 15 ಸೆಂ.ಮೀ. ಅಗಲದ ವರ್ತುಲಾಕಾರದಲ್ಲಿ ಮಣ್ಣಿನ ಮೇಲೆ ಚೆಲ್ಲಿ 5 ರಿಂದ 7 ಸೆಂ.ಮೀ. ಆಳಕ್ಕೆ ಮಣ್ಣಿನಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು. ರಸಗೊಬ್ಬರ ಹಾಕಿದ ಪ್ರದೇಶವನ್ನು ಒಣಗಿದ ತರಗೆಲೆಗಳಿಂದ ಪುನ: ಹೊದಿಕೆ ಹಾಕಬೇಕು.

ಕೀಟಗಳು: ಏಲಕ್ಕಿ ಬೆಳೆಯು ಹಲವಾರು ನುಶಿ ಮತ್ತು ದಂಡಾಣುಗಳಿಂದ ಬಾಧೆಗೊಳಗಾಗುತ್ತದೆ. ಈ ಕೀಟಗಳಲ್ಲಿ ಥ್ರಿಪ್ಸ್ ಬೀಜಕೋಶ/ಸಂಕೀರ್ಣ ಪುಷ್ಪಗುಚ್ಛ/ದಂಟು ಕೊರೆಯುವ ಹುಳು, ಗೊಣ್ಣೆ ಹುಳು, ಬೇರು ಗಂಟು ದುಂಡಾಣುಗಳು, ಇತ್ಯಾದಿ ಪ್ರಧಾನ ಕೀಟಗಳು

ಸಣ್ಣ ಏಲಕ್ಕಿ ತೋಟದಲ್ಲಿ ಸಮಗ್ರ ಕೀಟ ನಿರ್ವಹಣೆ
ಸಾಗುವಳಿ ಕ್ರಮಗಳಿಂದ ಹತೋಟಿ
(ಅ) ಜನವರಿ ಅಂತ್ಯದಲ್ಲಿ (ಮೊದಲನೆಯ ಸಿಂಪಡಣೆಗಿಂತ ಮುಂಚೆ) ಮತ್ತು ಸೆಪ್ಟೆಂಬರ್ ನಲ್ಲಿ ಒಣಗಿದ ಎಲೆಗಳನ್ನು ಕತ್ತರಿಸಿ ತೆಗೆಯಬೇಕು.
(ಆ) ಮೇ ಅಂತ್ಯದಲ್ಲಿ ಒಣಗಿದ ಪುಷ್ಪಗುಚ್ಛಗಳು, ದಂಟುಗಳು ಮತ್ತು ಎಲೆಗಳನ್ನು ಕತ್ತರಿಸಿ ತೆಗೆಯಬೇಕು.
ಈ ಮೇಲ್ಕಂಡ ಕ್ರಮಗಳಿಂದ ಗಿಡಗಳ ಒಣಗಿದ ಭಾಗಗಳನ್ನು ತೆಗೆದಂತಾಗುತ್ತದೆ ಮತ್ತು ಪುಚ್ಚಗುಚ್ಛಗಳು ಹಾಗೂ ಎಳೆಯ ದಂಟುಗಳ ಮೇಲೆ ಸಿಂಪಡಣಾ ದ್ರಾವಣ ಬೀಳಲು ಅನುಕೂಲವಾಗುತ್ತದೆ.

ರಾಸಾಯನಿಕ ಹತೋಟಿ
ಮೊದಲನೆಯ ಸಿಂಪಡಣೆ (ಜನವರಿ) ಕ್ವಿನಾಲ್‍ಫಾಸ್(200 ಮಿ.ಲೀ./100 ಲೀ. ನೀರಿನಲ್ಲಿ)
ಎರಡನೆಯ ಸಿಂಪಡಣೆ (ಮಾರ್ಚಿ) ಕ್ಲೋರೋಪೈರಿಫಾಸ್ ಅಥವಾ ಮಾನೋಕ್ರೋಟೋಫಾಸ್(200 ಮಿ.ಲೀ./100 ಲೀ. ನೀರಿನಲ್ಲಿ)
ಮೂರನೆಯ ಸಿಂಪಡಣೆ (ಮೇ) ಫೋಸಲಾನ್ (200 ಮಿ.ಲೀ./100 ಲೀ. ನೀರಿನಲ್ಲಿ)
ನಾಲ್ಕನೆಯ ಸಿಂಪಡಣೆ (ಸೆಪ್ಟೆಂಬರ್-ಅಕ್ಟೋಬರ್) ಪ್ರೊಫೆನೋಫಾಸ್ (150 ಮಿ.ಲೀ.) ಅಥವಾ ಮೀಥೈಲ್ ಪ್ಯಾರಾಥಿಯಾನ್(100 ಮಿ.ಲೀ.) ಅನ್ನು 100 ಲೀ. ನೀರಿನಲ್ಲಿ.

ತೋಟಗಳಲ್ಲಿ ರೋಗಗಳ ನಿರ್ವಹಣೆ
ಕಟ್ಟೆ ರೋಗ
ಭಾರತದ ಏಲಕ್ಕಿ ಬೆಳೆಯುವ ಎಲ್ಲ ಪ್ರದೇಶಗಳಲ್ಲಿ ಈ ರೋಗವು ಇದೆ. ಇದು ಏಲಕ್ಕಿ ಬೆಳೆಯ ಪ್ರಧಾನ ರೋಗಗಳಲ್ಲಿ ಒಂದಾಗಿದೆ.
ರೋಗವು ಅಂತವ್ರ್ಯಾಪಿಯಾಗಿದ್ದು, ಏಲಕ್ಕಿ ಮಚ್ಚೆಯ ವ್ಶೆರಾಣುವಿನಿಂದ ಉಂಟಾಗುತ್ತದೆ. ಬಾಧೆಗೊಳಗಾದ ಗಿಡದ ಎಲ್ಲಾ ಭಾಗಗಳಲ್ಲಿಯೂ (ಬಲಿತ ಬೀಜಗಳನ್ನು ಹೊರತುಪಡಿಸಿ) ವ್ಶೆರಾಣುವಿನ ಅಣುಗಳು ಇರುತ್ತವೆ. ಈ ರೋಗವು ಬೀಜಗಳಿಂದಾಗಲೀ ಅಥವಾ ಯಾಂತ್ರಿಕವಾಗಿಯಾಗಲೀ ಅಥವಾ ಸಂಪರ್ಕದಿಂದಾಗಲೀ ಅಥವಾ ಕತ್ತರಿಸುವ ಸಲಕರಣೆಗಳಿಂದಾಗಲೀ ಹರಡುವುದಿಲ್ಲ. ಈ ರೋಗವು ಬಾಳೆಗಿಡದ ಹೇನು (ಪೆಂಟಲೋನಿಯ ನೈಗ್ರೋನೆರ್ವೋಸಾ) ಗಳಿಂದ ಹರಡುತ್ತದೆ. ಕೇವಲ ಒಂದೇ ಒಂದು ಹೇನು ಕೆಲವೇ ನಿಮಿಷಗಳಲ್ಲಿ ಈ ರೋಗವನ್ನು ಹರಡುತ್ತದೆ. ಈ ಹೇನಿನ ಎಲ್ಲಾ ಹಂತಗಳೂ (ಮರಿಗಳು, ರೆಕ್ಕೆ ಇರುವ ಮತ್ತು ರೆಕ್ಕೆಯಿಲ್ಲದ ವಯಸ್ಕ ಹೇನುಗಳು) ಸಹ ಈ ರೋಗವನ್ನು ಹರಡುತ್ತವೆ.

ಕೊಕ್ಕೆ ಕಂದು ರೋಗ
ಇತ್ತೀಚೆಗೆ ಕರ್ನಾಟಕದ ಏಲಕ್ಕಿ ತೋಟಗಳಲ್ಲಿ ಹೊಸದೊಂದು ವ್ಶೆರಾಣು ರೋಗವು ಹರಡುತ್ತಿರುವುದು ಕಂಡುಬಂದಿದೆ. ಇದನ್ನು “ಕೊಕ್ಕೆ ಕಂದು” ಎಂದು ಕರೆಯಲಾಗುತ್ತಿದೆ, ಇದರ ಅರ್ಥ ಕೊಕ್ಕೆ ಕವಲು ಎಂದು. ಈ ರೋಗವನ್ನು ಮೊದಲ ಬಾರಿಗೆ ಹೊಂಗೆಡೆಹಳ್ಳದಲ್ಲಿ ಗಮನಿಸಲಾಯಿತು. ಈ ಜಾಗದಲ್ಲಿ ರೋಗ ಅತಿ ಹೆಚ್ಚು ಕಂಡು ಬಂದಿದೆ. ನಂತರ ಈ ರೋಗವು ಸಿರ್ಸಿ ಮತ್ತು ಸೋಮವಾರಪೇಟೆ ಪ್ರದೇಶಗಳಿಗೆ ಹರಡಿತು.
ಇದೊಂದು ಅಂತವ್ರ್ಯಾಪಿ ವ್ಶೆರಾಣು ರೋಗವಾಗಿರುವುದರಿಂದ ರೋಗಪೀಡಿತ ಗಿಡಗಳಲ್ಲಿ ರೋಗ ಗುಣಮುಖವಾಗಲು ಸಾಧ್ಯವೇ ಇಲ್ಲ. ತೋಟದಲ್ಲಿ ಗಿಡಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದೊಂದೇ ಇದಕ್ಕೆ ತಡೆಗಟ್ಟುವ ವಿಧಾನ. ಕೊಕ್ಕೆ ಕಂದು ರೋಗ ನಿರ್ವಹಣೆ ಮಾಡಲು ಕಟ್ಟೆರೋಗ ನಿರ್ವಹಣೆಗೆ ಅನುಸರಿಸುವ ಮಾರ್ಗಗಳನ್ನೇ ಅನುಸರಿಸಬೇಕು.

ನಿರ್ವಹಣೆ: ಎಲ್ಲಿಯವರೆಗೆ ಕಟ್ಟೆ ರೋಗದ ರೋಗಾಣುವು ತೋಟದಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಯಾವುದೇ ಕೀಟ ನಾಶಕಗಳಿಂದಲೂ ರೋಗದ ಹರಡುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಕಟ್ಟೆ ರೋಗಕ್ಕೆ ಒಳಗಾದ ಗಿಡಗಳನ್ನು ವಾಸಿ ಮಾಡಲು ಸಾಧ್ಯವಿಲ್ಲ, ಆದರೂ ಸಹ ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದರಿಂದ ನಷ್ಟವನ್ನು ಕಡಿಮೆ ಮಾಡಬಹುದು.
ಅ) ಕಟ್ಟೆ ರೋಗದ ಬರುವಿಕೆಯ ಮೇಲೆ ಸದಾ ನಿಗಾ (ಕಣ್ಗಾವಲು) ಇಡಬೇಕು.
ಆ) ಹೊಸದಾಗಿ ತೋಟಗಳನ್ನು ಬೆಳೆಸುವಾಗ ಕಟ್ಟೆ ರೋಗವಿಲ್ಲದ ಆರೋಗ್ಯವಂತ ಸಸಿಗಳನ್ನು ಮಾತ್ರ ನಾಟಿ ಮಾಡಬೇಕು.
ಇ) ರೋಗ ಪೀಡಿತ ತೋಟಗಳಿಂದ ಬೇರುಕಾಂಡಗಳನ್ನು ತೆಗೆದುಕೊಂಡು ಬಂದು, ನಾಟಿ ಮಾಡಬಾರದು.
ಈ) ಆಗಿಂದಾಗ್ಗೆ ರೋಗ ಪೀಡಿತ ಗಿಡಗಳನ್ನು ಬೇರು ಸಮೇತ ಕಿತ್ತು, ನಾಶ ಮಾಡಬೇಕು.
ಉ) ಕನಿಷ್ಟ ನಾಲ್ಕು ತಿಂಗಳವರೆಗೆ ಪ್ರತಿ ವಾರಕ್ಕೊಂದಾವರ್ತಿ ರೋಗ ಪೀಡಿತ ಗಿಡಗಳನ್ನು ಗುರುತಿಸಿ, ಕಿತ್ತು ನಾಶ ಮಾಡಬೇಕು.
ಊ) ಅಂತಹ ಖಾಲಿ ಜಾಗಗಳಿಗೆ ರೋಗ ಮುಕ್ತ ಆರೋಗ್ಯವಂತ ಸಸಿಗಳನ್ನು ನಾಟಿ ಮಾಡಬೇಕು.

ಗಿಡಗಳ ಬುಡ ಕೊಳೆಯುವ ರೋಗ ಅಥವಾ ಬೇರುಕಾಂಡ ಕೊಳೆರೋಗ
ಇದೂ ಸಹ ಮಳೆಗಾಲಗಳಲ್ಲಿ ಕಾಣಿಸಿಕೊಳ್ಮ್ಳವ ಶಿಲೀಂಧ್ರ ರೋಗ, ರೋಗದ ಲP್ಪ್ಷಣಗಳು–ಎಲೆಗಳು ಹಳದಿಯಾಗುವುದು ಮತ್ತು ಕವಲುಗಳು (ಕತ್ತಿನಿಂದ ಪ್ರಾರಂಭಿಸಿ) ಕೊಳೆಯುವುದು. ಕೊಳೆಯುವಿಕೆಯು ಬೇರು ಕಾಂಡಗಳು ಮತ್ತು ಬೇರುಗಳಿಗೂ ಹರಡುತ್ತದೆ. ಕೊಳೆತ ಬೇರು ಕಾಂಡಗಳು ಮೃದುವಾಗುವುದರ ಜೊತೆಗೆ ಕಡು ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಕಟ್ಟ ಕಡೆಯದಾಗಿ ಇಡೀ ಗಿಡವೇ ಸಾಯುತ್ತದೆ. ಬಾಧೆಗೊಳಗಾದ ಕವಲುಗಳು ಸ್ವಲ್ಪ ಅಲುಗಾಡಿದರೇ ಸಾಕು ಬೀಳುತ್ತವೆ. ಮಣ್ಣಿನಲ್ಲಿ ಹುಟ್ಟುವ ಶಿಲೀಂಧ್ರಗಳಾದ ವೆಕ್ಸಾನ್ಸ್, ರೈಜೋಕ್ಟೋನಿಯಾ ಸೋಲಾನಿ ಮತ್ತು ಫ್ಯುಸೇರಿಯಂ ಪ್ರಭೇದ (ಕೆಲವು ಸಂದರ್ಭಗಳಲ್ಲಿ) ಗಳಿಂದ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಗಿಡದ ಕತ್ತಿನ ಭಾಗದಲ್ಲಿ ನೇರಳೆ ಬಣ್ಣ ಕಾಣಿಸಿಕೊಂಡು, ನಂತರ ಕೊಳೆಯುತ್ತದೆ.
ಈ ರೋಗವನ್ನು ಕೆಳಕಂಡ ಕ್ರಮಗಳಿಂದ ನಿರ್ವಹಣೆ ಮಾಡಬಹುದು.
ಸ್ವಚ್ಛತೆ: ಒಣಗಿದ ಎಲೆಗಳನ್ನು ಕತ್ತರಿಸುವುದು ಮತ್ತು ಗಿಡಗಳ ಬುಡವನ್ನು ಸ್ವಚ್ಛ ಮಾಡುವುದನ್ನು ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚೆ (ಮೇ ತಿಂಗಳಲ್ಲಿ) ಮಾಡಬೇಕು. ನೆರಳಿನ ಮರಗಳ ರೆಂಬೆಗಳನ್ನು ಲಘುವಾಗಿ ಕತ್ತರಿಸುವುದರ ಮೂಲಕ ದಟ್ಟವಾದ ನೆರಳನ್ನು ಕದಿಮೆ ಮಾಡಬೆಕು. ತಗ್ಗು ಪ್ರದೇಶಗಳಲ್ಲಿ ಮತ್ತು ನೀರು ನಿಲ್ಲುವ ಜೌಗು ಪ್ರದೇಶಗಳಲ್ಲಿ ನೀರು ಬಸಿಯುವಂತೆ ವ್ಯವಸ್ಥೆ ಮಾಡಬೇಕು.

ರಾಸಾಯನಿಕ ಹತೋಟಿ: ಗಿಡದ ಬುಡಕ್ಕೆ ಎರಡರಿಂದ ಮೂರು ಲೀಟರ್ ಕಾಪರ್ ಆಕ್ಸಿಕ್ಲೋರೈಡ್ ದ್ರಾವಣವನ್ನು (ಶೇಕಡಾ 0.20) ಸುರಿಯಬೇಕು. ರೋಗದ ತೀವ್ರತೆ ಮತ್ತು ರೋಗ ಹರಡುವಿಕೆಯನ್ನು ಆಧರಿಸಿ 30 ದಿನಗಳ ಅಂತರದಲ್ಲಿ ಇದೇ ದ್ರಾವಣವನ್ನು (ಎರಡು–ಮೂರು ಬಾರಿ) ಪುನ: ಸಿಂಪಡಣೆ ಮಾಡಬೇಕು.

ಕೊಯಿಲು ಮತ್ತು ಸಂಸ್ಕರಣೆ
ಚೆನ್ನಾಗಿ ಬಲಿತ ಹಂತದಿಂದ (ಕರಿಕಾಯಿ) ಸಂಪೂರ್ಣ ಹಣ್ಣಾಗಿರುವ ಕಾಯಿಗಳನ್ನು ಕೊಯಿಲು ಮಾಡಬೇಕು. ಕೊಯಿಲು ಮಾಡಿದ ನಂತರ ಬೀಜಕೋಶಗಳನ್ನು ಕೊಯ್ಲೋತ್ತರ ಕ್ರಿಯೆಗಳಿಗೆ ತೊಳೆಯುವುದು, ಸಂಸ್ಕರಣೆ, ಸ್ವಚ್ಛ ಮಾಡುವುದು, ವರ್ಗೀಕರಣ, ಚೀಲಗಳಲ್ಲಿ ತುಂಬಿಡುವುದು ಮತ್ತು ಉಗ್ರಾಣದಲ್ಲಿ ಇಡುವುದು. ಕಾಯಿಗಳಿಗೆ ಅಂಟಿಕೊಂಡಿರುವ ಮಣ್ಣನ್ನು ನೀರಿನಿಂದ ತೊಳೆದು ತೆಗೆಯುವುದರಿಂದ ಉತ್ತಮ ಗುಣಮಟ್ಟದ ಪದಾರ್ಥ ಬರುತ್ತದೆ. ಸಂಸ್ಕರಣಾ ಕ್ರಿಯೆಯಲ್ಲಿ ಪರೋಕ್ಷವಾಗಿ ಬಿಸಿ ಮಾಡುವುದರ ಮೂಲಕ ಹೊಸದಾಗಿ ಕೊಯಿಲು ಮಾಡಿದ ಹಸಿ ಏಲಕ್ಕಿಯಲ್ಲಿರುವ ಶೇಕಡಾ 80 ರಷ್ಟು ತೇವಾಂಶವನ್ನು ಶೇಕಡಾ 10-12ಕ್ಕೆ ಇಳಿಸಲಾಗುತ್ತದೆ. ಬೀಜಕೋಶಗಳನ್ನು ಒಣಗಿಸುವ ಕ್ರಿಯೆಯು ಕೊನೆಗೆ ಲಭ್ಯವಾಗುವ ಪದಾರ್ಥದ ಬಣ್ಣವನ್ನು ನಿರ್ಧರಿಸುತ್ತದೆ.

 

About Vivek Naren

About

Leave a Reply

Your email address will not be published. Required fields are marked *