ಕಾಫಿ Coffee Plantation

ಕಾಫಿ

ಕಾಫಿ ಭಾರತದ ಮುಖ್ಯ ವಾಣಿಜ್ಯ ಪಾನೀಯ ಬೆಳೆಯಾಗಿದ್ದು, ಪೂರ್ಣ ಮತ್ತು ಮಿಶ್ರ ಬೆಳೆಯಾಗಿ ಬೆಳೆಯಬಹುದಾಗಿದೆ. ಕಾಫಿû ರಾಜ್ಯದ ಮಲೆನಾಡು ಭಾಗದ ಮುಖ್ಯ ತೋಟಗಾರಿಕೆ ಬೆಳೆಯಾಗಿದ್ದು, ಈ ಬೆಳೆಯನ್ನು ಕೊಡಗು,ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಕಾಫಿûಯು ಹೆಚ್ಚಿನದಾಗಿ ನೆರಳು ಅಪೇಕ್ಷಿಸುವ ಬೆಳೆಯಾಗಿದ್ದು, ಈ ಬೆಳೆಯಲ್ಲಿ ರೋಬಸ್ಟ, ಅರೇಬಿಕಾ ಎಂಬ ಎರಡು ಗುಂಪುಗಳಿರುತ್ತವೆ. ಕರ್ನಾಟಕ ರಾಜ್ಯವು ಕಾಫಿû ಬೆಳೆ, ಕ್ಷೇತ್ರ ಮತ್ತು ಉತ್ಪಾದನೆಯಲ್ಲಿ ಮೊದಲನೆ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಬರುತ್ತವೆ.

    ಕಾಫಿû ಕೊಡಗು ಜಿಲ್ಲೆಯ ಮುಖ್ಯ ವಾಣಿಜ್ಯ ಬೆಲೆಯಾಗಿದ್ದು, ಕೃಷಿಕರ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಪ್ರಮುಖ
ಪಾತ್ರವಹಿಸುತ್ತಿದೆ. ಇಂತಹ ಪ್ರಮುಖ ಬೆಳೆಯಾದ ಕಾಫಿûಯನ್ನು ಕೊಡಗು ಜಿಲ್ಲೆಯಾದ್ಯಂತ ಸುಮಾರು 87809 ಹೆಕ್ಟೇರು ಪ್ರದೇಶದಲ್ಲಿ
ಬೆಳೆಯಾಲಾಗುತ್ತಿದೆ.

ಮಣ್ಣು:
ಯಾವುದೇ ಬೆಳೆಯ ಉತ್ಪಾದನೆಯಲ್ಲಿ ಮಣ್ಣು ಅತ್ಯಂತ ಪ್ರಮುಖವಾದ ಮೂಲಭೂತ ಸಂಪನ್ಮೂಲವಾಗಿರುತ್ತದೆ. ನೀರು ಬಸಿದು
ಹೋಗುವ ಸಮೃದ್ದ ಸಾವಯವ ವಸ್ತುಯುಳ್ಳ, ಆಮ್ಲೀಯ ರಸಸಾರವಿರುವ ( 5.8- 6.1) ಮರಳುಗೋಡು ಅಥವಾ ಜೆಂಬಿಟ್ಟಿಗೆ ಮಣ್ಣು ಕಾಫಿ ಬೆಳೆಗೆ
ಸೂಕ್ತವಾಗಿರುತ್ತದೆ.

ಹವಾಗುಣ:
ಮಳೆ, ಉμÁ್ಣಂಶ, ಆದ್ರ್ರತೆ, ಸಮುದ್ರ ಮಟ್ಟದಿಂದ ಇರುವ ಎತ್ತರ ಮತ್ತು ನೆರಳು ಕಾಫಿಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ವಿವರ ಅರೇಬಿಕಾ ಕಾಫಿ ರೊಬಸ್ಟ್ರಾ ಕಾಫಿ
ಎತ್ತರ (ಸಮುದ್ರ ಮಟ್ಟ)
ಅರೇಬಿಕಾ ಕಾಫಿ – 1000 ರಿಂದ 1500 ಮೀ.
ರೊಬಸ್ಟ್ರಾ ಕಾಫಿ – 500 ರಿಂದ 1000 ಮೀ

ವಾರ್ಷಿಕ ಮಳೆ (ಸರಾಸರಿ)
ಅರೇಬಿಕಾ ಕಾಫಿ -1600 ರಿಂದ 2500 ಮಿ. ಮೀ.
ರೊಬಸ್ಟ್ರಾ ಕಾಫಿ -1000 ರಿಂದ 2000 ಮಿ. ಮೀ.

ಉμÁ್ಣಂಶ (.ಸೆ)
ಅರೇಬಿಕಾ ಕಾಫಿ -15 ರಿಂದ 24
ರೊಬಸ್ಟ್ರಾ ಕಾಫಿ -25 ರಿಂದ 30

ಆದ್ರ್ರತೆ (ಶೇ.)
ಅರೇಬಿಕಾ ಕಾಫಿ -70 ರಿಂದ 80
ರೊಬಸ್ಟ್ರಾ ಕಾಫಿ -80 ರಿಂದ 90

ನೆರಳು (ಶೇ.) ಅರೇಬಿಕಾ ಕಾಫಿ -60
ರೊಬಸ್ಟ್ರಾ ಕಾಫಿ -40 ರಿಂದ 50

ಹೂ ಮಳೆ ( ಮಿ.ಮಿ)
ಅರೇಬಿಕಾ ಕಾಫಿ – ಮಾರ್ಚ್ ರಿಂದ ಏಪ್ರೀಲ್
( 25 ರಿಂದ 40 )
ರೊಬಸ್ಟ್ರಾ ಕಾಫಿ – ಫೆಬ್ರವರಿ ರಿಂದ ಮಾರ್ಚ್
( 20 ರಿಂದ 40 )

ಹೂ ಮಳೆಯ ನಂತರದ ಮಳೆ ( ಮಿ.ಮಿ)
ಅರೇಬಿಕಾ ಕಾಫಿ –  ಏಪ್ರೀಲ್ ರಿಂದ ಮೇ
( 50 ರಿಂದ 75 )
ರೊಬಸ್ಟ್ರಾ ಕಾಫಿ – ಏಪ್ರೀಲ್ ರಿಂದ ಮೇ
( 50 ರಿಂದ 75 )

ಸಸ್ಯ ಸಂರಕ್ಷಣೆ
ಕೀಟಗಳು
1. ಕಾಫಿಗೆ ಕಾಯಿಕೊರಕ (ಬೆರ್ರಿ ಬೋರರ್)
ಈ ಕೀಟದ ಭಾದೆಗೆ ಬಲಿಯುವ ಹಾಗೂ ಬಲಿತ ಕಾಯಿಗಳು ಹಾನಿಗೆ ತುತ್ತಾಗುತ್ತವೆ. ಪ್ರಾರಂಭದಲ್ಲಿ ಕೀಟವು ಬಲಿಯುವ ಹಾಗೂ ಬಲಿತ
ಕಾಯಿಗಳ ಮೂಲಕ ಒಳಸೇರುತ್ತದೆ. ಇದರಿಂದ ಭಾದೆಗೊಳಗಾದ ಕಾಫಿ ಕಾಯಿಗಳ ಮುಂಭಾಗದಲ್ಲಿ ಕೊರೆದಿರುವ ರಂಧ್ರ ಕಾಣಿಸುತ್ತದೆ. ನಂತರ
ಕಾಯಿಯ ಒಳಭಾಗಕ್ಕೆ ಹೋಗಿ ಒಳಗಿನ ಸಾರವನ್ನೆಲ್ಲಾ ತಿಂದು ಹಾಳು ಮಾಡುತ್ತದೆ.
ಹತೋಟಿ ಕ್ರಮಗಳು
· ಗಿಡಗಳಲ್ಲಿರುವ ಅಕಾಲಿಕ ಕಾಯಿ ಮತ್ತು ಹಿಂದಿನ ವರ್ಷ ಕುಯ್ಯದೆ ಉಳಿದುಕೊಂಡಿರುವ ಹಣ್ಣುಗಳನ್ನು ಪೂರ್ತಿಯಾಗಿ ಕಿತ್ತು
ನಾಶಪಡಿಸಬೇಕು, ಏಕೆಂದರೆ ಇವುಗಳಲ್ಲಿರುವ ಕೀಟದ ಸಂತತಿ ಮುಂದಿನ ಫಸಲಿಗೆ ಹರಡಲು ಕಾರಣವಾಗುತ್ತದೆ.
· ಕಾಫಿ ಕೊಯ್ಲು ಮುಗಿದ ನಂತರ ಗಿಡಗಳಲ್ಲಿ ಉಳಿದಿರುವ ಮತ್ತು ನೆಲದಲ್ಲಿ ಬಿದ್ದ ಹಣ್ಣುಗಳನ್ನು ಸಂಪೂರ್ಣವಾಗಿ ಆಯ್ದು
ಶೇಖರಿಸಬೇಕು.
· ಹಣ್ಣುಗಳನ್ನು ಕೊಯ್ಲು ಮಾಡುವಾಗ ನೆಲದ ಮೇಲೆ ಕೊಯ್ಲಿನ ಚಾಫೆ (ಪಿಕ್ಕಿಂಗ್ ಮ್ಯಾಟ್) ಅಥವಾ ಪಾಲಿಥೀನ್ ಹಾಳೆಗಳಲ್ಲಿ
ಹರಡಿ ಹಣ್ಣುಗಳು ನೆಲಕ್ಕೆ ಬೀಳದಂತೆ ತಡೆಯಬೇಕು ಮತ್ತು ಗಿಡಗಳಲ್ಲಿ ಯಾವುದೇ ಹಣ್ಣನ್ನು ಉಳಿಸದೆ ಪೂರ್ತಿಯಾಗಿ ಕೊಯ್ಲು
ಮಾಡಬೇಕು.
· ಹಾನಿಗೊಳಗಾದ ಕಾಫಿ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಒಂದರಿಂದ ಎರಡು ನಿಮಿಷಗಳವರೆಗೆ ಅದ್ದಿ ತೆಗೆದು ಒಣಗಿಸುವುದು
ಅವಶ್ಯಕ
· ಕಾಫಿ ತೋಟದಲ್ಲಿ ಸೂಕ್ತವಾದ ನೆರಳನ್ನು ಒದಗಿಸಬೇಕು ಮತ್ತು ಸೂಕ್ತ ರೀತಿಯಲ್ಲಿ ಶೀಫಾರಸ್ಸು ಮಾಡಿದ ಪ್ರಕಾರ ಗಿಡಗಳ
ಗೆಲ್ಲುಗಳನ್ನು ಕತ್ತರಿಸಬೇಕು. ಇದರಿಂದ ಕಾಯಿಕೊರಕದ ಭಾದೆಗೊಳಗಾದ ಗೆಲ್ಲುಗಳಲ್ಲಿರುವ ಕಾಯಿಗಳು ನಾಶವಾಗುವುದರ ಜೊತೆಗೆ
ಗಿಡಗಳ ಆರೋಗ್ಯವನ್ನು ಕಾಪಾಡಬಹುದು.
· ಕೊಯ್ದ ಕಾಫಿಯನ್ನು ಒಣಗಿಸುವಾಗ ಸೂಕ್ತ ತೇವಾಂಶವಿರುವ ಹಾಗೆ ನೋಡಿಕೊಳ್ಳುವುದು
ಅರೇಬಿಕಾ / ರೋಬಸ್ಟ ಪಾರ್ಚ್‍ಂಟ್ ಶೇ. 10 ರಷ್ಟು ತೇವಾಂಶ
ಅರೇಬಿಕಾ ಶೇ. 10.5 ರಷ್ಟು ತೇವಾಂಶ
ರೋಬಸ್ಟ ಶೇ. 11.0 ರಷ್ಟು ತೇವಾಂಶ
· ಕಾಫಿ ಕೊಯ್ಲಿನ ಸಮಯದಲ್ಲಿ ಮತ್ತು ನಂತರದ ದಿನಗಳಲ್ಲಿ ಕಾಯಿಕೊರಕವನ್ನು ಆಕರ್ಷಿಸಲು ಎಕರೆಗೆ 20 ಬ್ರೋಕ ಎಂಬ ಲಿಂಗಾಕರ್ಷಕ
ಬಲೆಗಳನ್ನು ಅಳವಡಿಸಬೇಕು.
· ಬೆವೇರಿಯಾ ಬಾಸ್ಸಿಯಾನ ಎಂಬ ರೋಗಕಾರಕ ಶಿಲೀಂಧ್ರವನ್ನು ಜುಲೈ – ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಕಾಯಿಕೊರಕದ
ಹತೋಟಿಗೆ ಕಾಯಿಗಳ ಮೇಲೆ ಸಿಂಪಡಿಸಬೇಕು.
· ಕಾಫಿಯನ್ನು ಶೇಖರಣೆ ಮಾಡಲು ಸಾಧ್ಯವಾದಷ್ಟು ಮಟ್ಟಿಗೆ ಹೊಸ ಗೋಣಿ ಚೀಲಗಳನ್ನು ಉಪಯೋಗಿಸುವುದು ಸೂಕ್ತ.
· ಈ ಕೀಟದ ಬಾಧೆಯನ್ನು ಹತೋಟಿ ಮಾಡಲು 600 ಮೀ.ಲೀ. ಕ್ಲೋರೊಫೈರಿಫಾಸ್ ಎಂಬ ಕೀಟನಾಶಕವನ್ನು 200 ಲೀ. ನೀರಿನಲ್ಲಿ ಬೆರೆಸಿ
ಆಗಸ್ಟ್ ತಿಂಗಳ ಕೊನೆಯವಾರ ಅಥವಾ ಸೆಪ್ಟೆಂಬರ್ ತಿಂಗಳ ಮೊದಲನೆ ವಾರದೊಳಗೆ 200 ಮೀ.ಲಿ. ಅಂಟು ದ್ರಾವಣವನ್ನು ಮಿಶ್ರಣ
ಮಾಡಿ ಸಿಂಪಡಿಸಬೇಕು.
2. ಬಿಳಿ ಕಾಂಡಕೊರಕ
ಈ ಕೀಟವು ಕಾಂಡವನ್ನು ಕೊರೆಯುವುದರಿಂದ ಗಿಡಕ್ಕೆ ಬೇಕಾದ ನೀರು ಹಾಗೂ ಲವಣಾಂಶಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ
ಕಾಫಿû ಗಿಡವು ಹಳದಿ ಬಣ್ಣಕ್ಕೆ ತಿರುಗಿ ಗಿಡದ ಎಲೆಗಳು ಸಣ್ಣದಾಗಿ ಸೊರಗಲು ಪ್ರಾರಂಭವಾಗುತ್ತದೆ. ಈ ಕೀಟವು ಕಾಫಿûಯ ತೊಗಟೆಯನ್ನು
ತಿನ್ನುವುದರಿಂದ ಬಾಧೆಗೆ ಒಳಗಾದ ಕಾಫಿûಗಿಡದ ತೊಗಟೆಗಳಲ್ಲಿ ಉಬ್ಬಿದ ವರ್ತುಲಾಕಾರದ ಸುತ್ತುಗಳು ಕಾಣಿಸುತ್ತವೆ. ಮರಿಹುಳು ಬೆಳೆದಂತೆಲ್ಲಾ
ಕಾಂಡದ ಒಳಭಾಗವನ್ನು ಸುರಂಗದ ರೂಪದಲ್ಲಿ ಕೊರೆದು ಒಳಸೇರುತ್ತವೆ, ಇದರಿಂದ ಕೊರೆದ ಸಣ್ಣ ಸಣ್ಣ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಮುಂದೆ
ಕಾಫಿû ಬೆಳೆ ಇದ್ದರೂ ಹೆಚ್ಚಿನ ಭಾಗ ಜೋಳ್ಳಾಗಿ ಇಳುವರಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಕೀಟದ ಹಾನಿಯು ಮುಖ್ಯವಾಗಿ ಅರೇಬಿಕಾ
ಜಾತಿಯ ಕಾಫಿûಯಲ್ಲಿ ಹೆಚ್ಚಾಗಿ ಕಾಣಿಸುಕೊಳ್ಳುತ್ತದೆ. ಆದರೆ ರೋಬಸ್ಟ ಕಾಫಿûಯಲ್ಲಿ ಇದರ ಹಾನಿಯ ಪ್ರಮಾಣ ಕಡಿಮೆ ಅಥವಾ ಇಲ್ಲದೆ ಇರುತ್ತದೆ.
ಹತೋಟಿ ಕ್ರಮಗಳು
ಬಿಳಿ ಕಾಂಡ ಕೊರಕದ ಕೀಟಗಳು ಸಾಮಾನ್ಯವಾಗಿ ಉಪೇಕ್ಷೆ ಮಾಡಿದ ತೋಟUಳಿÀ ಂದ ಪ್ರಾgಂÀ ಭವಾಗಿ ¥್ರeÀ Á್ಞವಂತ ಕೃಷಿಕನ ಕಾಪಿûü
ಬೆಳೆಯನ್ನು ಸಹಾ ನಾಶಪಡಿಸುತ್ತದೆ. ಆದ್ದರಿಂದ ಅರೇಭಿಕಾ ಕಾಫಿû ಬೆಳೆಗಾರರು ಬಹಳ ಶ್ರದ್ದೆಯಿಂದ ಇತರೆ ಸಮಸ್ಯೆಗಳನ್ನು ಬದಿಗೊತ್ತಿ, ಸಕಾಲದಲ್ಲಿ ಈ
ಕೀಟದ ನಿರ್ವಹಣೆಯನ್ನು ಮಾಡಬೇಕಾಗುತ್ತದೆ.
· ಕೀಟದ ಬೆಳವಣಿಗೆಯ ಮೇಲೆ ವಾತಾವರಣದ ಪ್ರಭಾವವು ವಿಶೇಷ ರೀತಿಯಲ್ಲಿ ಬೀರುತ್ತದೆ. ಹೇಗೆಂದರೆ ಉತ್ತಮ ಬಿಸಿಲಿನ
ವಾತಾವರಣದಲ್ಲಿ ಗಂಡು ಹೆಣ್ಣು ಸಂಯೋಜನೆ ಹೊಂದಿ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ಉತ್ತಮ ತೇವಾಂಶ ಭರಿತ ಬಿಸಿಲಿನ
ವಾತಾವರಣ ಸುಧೀರ್ಘ ಹಗಲಿನಲ್ಲಿಯೂ ಕೀಟಗಳ ಚಟುವಟಿಕೆ ಹೆಚ್ಚು, ಹಾಗೆಯೇ ಕಾಫಿûಯ ಗಿಡದ ಸುತ್ತಲಿನ ಸೂಕ್ಷ್ಮ ವಾತಾವರಣವು
ಅμÉ್ಟೀ ಮುಖ್ಯ. ಗಿಡವು ಹೆಚ್ಚು ಬಿಸಿಲಿನಲ್ಲಿದ್ದರೆ ಅಂದರೆ ನೆರಳು ಕಡಿಮೆಯಾದರೆ ಅಂತಹ ಗಿಡಗಳು ಈ ಕೀಟದ ಹಾವಳಿಗೆ
ಬಲಿಯಾಗುತ್ತವೆ. ಆದ್ದರಿಂದ ಸಮತಟ್ಟಾದ ನೆರಳು ಮತ್ತು ವಾತಾವರಣವನ್ನು ಕಲ್ಪಿಸಬೇಕಾಗುತ್ತದೆ.
· ಬಾಧೆಗೊಳಗಾದ ಗಿಡಗಳನ್ನು ಗುರುತಿಸಿ, ಬೇರು ಸಹಿತ ಕಿತ್ತು ನಾಶಪಡಿಸಬೇಕು
· ಕಾಫಿû ಗಿಡದ ತೊಗಟೆಗಳನ್ನು ಉಜ್ಜುವುದರಿಂದ ಕೀಟಕ್ಕೆ ಮೊಟ್ಟೆಗಳನ್ನು ಇಡಲು ಅನುಕೂಲಕರ ಸ್ಥಳ ಸಿಗುವುದಿಲ್ಲ. ಹೀಗಾಗಿ ಕೀಟವು
ಮೊಟ್ಟೆ ಇಡುವ ಪ್ರಮಾಣವು ಕಡಿಮೆಯಾಗುತ್ತದೆ.
· ಪ್ರೌಢ ಕೀಟವನ್ನು ಆಕರ್ಷಿಸಲು ಎಕರೆಗೆ 10 ಲಿಂಗಾಕರ್ಷಕ ಬಲೆಗಳನ್ನು ಬಳಸಿ, ಸಂಗ್ರಹಿಸಿದ ದುಂಬಿಗಳನ್ನು ನಾಶಪಡಿಸಬೇಕು.
· ಈ ಕೀಟದ ಹಾವಳಿಯನ್ನು ತಪ್ಪಿಸಲು ಗೋಣಿಚೀಲವನ್ನು ಕಾಫಿû ಗಿಡದ ತೊಗಟೆಗೆ ಸುತ್ತುವುದರಿಂದಲೂ ಸಹ ಈ ಕೀಟದ ಹಾವಳಿಯನ್ನು
ತಪ್ಪಿಸಬಹುದಾಗಿದೆ.
· ಕಾಫಿûಯ ಬಿಳಿಕಾಂಡ ಕೊರಕದ ಹತೋಟಿಯನ್ನು ಎಲ್ಲಾ ಬೆಳೆಗಾರರ ಸಾಂಘಿಕ, ಸಾಮೂಹಿಕವಾಗಿ ಮಾಡಿದರೆ ಈ ಕೀಟದ ಹತೋಟಿಯು
ಪರಿಣಾಮಕಾರಿಯಾಗಿರುತ್ತದೆ.
· ಕೀಟನಾಶಕದ ಬಳಕೆಯ ಮೊದಲು ಯಾವ ಭಾಗದಲ್ಲಿ ಹೆಚ್ಚು ಈ ಕೀಟ ಬಾಧೆಯ ಗಿಡಗಳು ಕಂಡುಬಂದಿದ್ದವು ಅಂಥಾ ಜಾಗದಲ್ಲಿ ಮತ್ತು
ನೆರಳು ಕಡಿಮೆ ಇರುವ ಭಾಗ ಹಾಗೂ ತೋಟದ ಸುತ್ತಲು ಸಿಂಪರಣೆ ಮಾಡಬೇಕು. ಕ್ಲೋರೋಪೈರಿಫಾಸ್ 3 ಮೀ.ಲೀ. ಪ್ರತೀ ಲೀ.
ನೀರಿಗೆ ಬೆರಸಿ, ಗಿಡದ ಕಾಂಡ ಮತ್ತು ದಪ್ಪ ರಂಬೆಗೆ ಸಿಂಪಡಿಸಬೇಕು ಹಾಗೂ ಇದೇ ಕೀಟನಾಶಕವನ್ನು ಕಾಂಡದ ಮೇಲೆ ಸವರಲು ಸಹ
ಉಪಯೋಗಿಸಬಹುದು.
3. ರೆಂಬೆ ರಂದ್ರ ಮಾಡುವ ಹುಳು
ಈ ಕೀಟವು ರೆಂಬೆಗಳ ಒಳಗಡೆ ದುಂಡಾದ ಸಣ್ಣ ಸಣ್ಣ ಸುರಂಗಗಳನ್ನು ಕೊರೆದು ರಸವನ್ನು ಹೀರುವುದರಿಂದ ಆಹಾರದ ಪೂರೈಕೆಯಲ್ಲಿ
ಅಡಚಣೆಯಾಗಿ ರೆಂಬೆಗಳು ಒಣಗಿ ಹೋಗುತ್ತವೆ.
ಹತೋಟಿ P್ರವ Àುಗಳು
ಕೀಟನಾಶಕವನ್ನು ಸಿಂಪಡಿಸಿ ಈ ಕೀಟವನ್ನು ಹತೋಟಿ ಮಾಡುವುದು ತುಂಬ ಕಷ್ಟ, ಏಕೆಂದರೆ ಮರಿ ಹುಳುಗಳು ಸುರಂಗದಲ್ಲಿ
ವಾಸಿಸುವುದರಿಂದ ರಾಸಾಯನಿಕಗಳು ಈ ಹುಳುಗಳನ್ನು ಮುಟ್ಟಲು ಸಾಧ್ಯವಾಗುವುದಿಲ್ಲ ಆದ್ದರಿಂದ ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದರಿಂದ
ಇದರ ಹಾವಳಿಯನ್ನು ಕಡಿಮೆ ಮಾಡಬಹುದಾಗಿದೆ.
· ರಂದ್ರ ಕೊರೆಯುವ ಹುಳುವಿನ ಬಾಧೆಗೊಳಗಾದ ಟೊಂಗೆಗಳನ್ನು ಮಾರ್ಚ್ – ಏಪ್ರಿಲ್ ಮತ್ತು ಸೆಪ್ಟೆಂಬರ್ – ಅಕ್ಟೋಬರ್ ಸಮಯದಲ್ಲಿ
ಕತ್ತರಿಸಿ ಸುಡಬೇಕು.
· ತೆಳುವಾದ ನೆರಳನ್ನು ಒದಗಿಸುವುದರಿಂದ ಮತ್ತು ನೀರು ಬಸಿದುಹೋಗುವಂತೆ ಮಾಡಿ ವಾತವರಣದಲ್ಲಿನ ತೇವಾಂಶವನ್ನು ಕಡಿಮೆ
ಮಾಡುವುದರಿಂದಲೂ ಈ ಕೀಟದ ಹಾವಳಿಯನ್ನು ಕಡಿಮೆ ಮಾಡಬಹುದಾಗಿದೆ.
4. ಬಿಳಿ ಹೊಟ್ಟಿನ ತಿಗಣೆ (ಮೀಲಿಬಗ್ಸ್)
ಈ ಕೀಟವು ಕಾಫಿû ಗಿಡದ ಎಳೆಯ ಭಾಗಗಳಿÀ ಂದ, ಗಿಣ್ಣು, ಎಳೆಯ gಂÉ ಬೆ, ಎಲೆ, ಹಣ್ಣು ಮತ್ತು ಬೇgುÀ ಗಳಿಂದ gಸ Àವನ್ನು ಹೀರಿಕೊಂಡು
ಗಿಡವನ್ನು ದುರ್ಬಲಗೊಳಿಸುತ್ತದೆ. ಇದರ ಭಾದೆ ಅಧಿಕವಾಗಿದ್ದಲ್ಲಿ ಎಳೆಯ ಗಿಡಗಳು ಸಾಯುತ್ತವೆ. ಈ ಕೀಟವು ಎಲೆಗಳ ಮೇಲೆ ಕಂಡುಬಂದಲ್ಲಿ
ಎಲೆಗಳು ಪತ್ರ ಹರಿತ್ತನ್ನು ಕಳೆದುಕೊಂಡು ಹಳದಿಯಾಗುತ್ತವೆ. ತೆನೆಗಳ ಮೇಲೆ ಕಾಣಿಸಿಕೊಂಡರೆ ಹೂ ಹರಳುವಿಕೆಗೆ ಬಂಜತ್ವವುಂಟಾಗಿ ಫಸಲು
ಕಚ್ಚುವುದು ಮತ್ತು ಅದರ ಬೆಳವಣಿಗೆಯ ಮೇಲೆ ದುಷ್ಪರಿಣಾವಾಗುತ್ತದೆ. ಹೂ ಅರಳುವಾಗ ಮತ್ತು ತದನಂತರ ಹಣ್ಣುಗಳ ಮೇಲೆ ಈ ಕೀಟದ ಭಾದೆ
ಕಾಣಿಸಿಕೊಂಡರೆ ಹಣ್ಣುಗಳು ಗಾತ್ರದಲ್ಲಿ ಕಡಿಮೆಯಾಗಿ ಬಂಜತ್ವದ ಜೊತೆಗೆ ಫಸಲಿನಲ್ಲಿ ಸಾಕಷ್ಟು ಕಡಿಮೆಯಾಗುತ್ತದೆ.
ಹತೋಟಿ P್ರವ Àುಗಳು
· ಈ ಕೀಟವು ಇತರೆ ಆಶ್ರಯ ಗಿಡಗಳಾದ ಮಾವು, ಸೀಬೆ, ಗಿಡಗಳಲ್ಲಿ ಬದುಕಿ ಆಶ್ರಯಿಸುವುದರಿಂದ ಅಂತಹ ಮರಗಳನ್ನು ಕಿತ್ತು ಸುಡಬೇಕು.
· ತೋಟದಲ್ಲಿ ಹದವಾದ ನೆರಳನ್ನು ಉಳಿಸಿಕೊಳ್ಳಬೇಕು.
· ಕೀಟದ ಭಾದೆ ಕಂಡು ಬಂದಲ್ಲಿ ಕ್ವಿನಾಲ್‍ಫಾಸ್ 300 ಮಿ.ಲಿ ಅಥವಾ ಲೆಬಾಸಿಡ್ 150. ಮಿ.ಲಿ. ಅಥವಾ 4 ಲೀಟರ್ ಸೀಮೆ ಎಣ್ಣೆಯನ್ನು 200
ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.
ರೋಗಗಳು
1. ತುಕ್ಕು ರೋಗ
ಅರೇಬಿಕಾ ಕಾಫಿಂû iÀುಲ್ಲಿ ಹೆಚ್ಚಾಗಿ ಕಂಡುಬರುವ ಈ ಶಿಲೀಂಧ್ರ gೂÉ ೀUವ ÀÅ ಅಧಿಕವಾಗಿ ಆಗಸ್ಟ್ ನಿಂದ ನವಂಬರ್ ತಿಂಗಳಿನವರಗೆ É
ಕಂಡುಬರುತ್ತದೆ. ಪ್ರಾರಂಭದಲ್ಲಿ ಎಲೆಗಳ ಕೆಳಭಾಗದಲ್ಲಿ ಸಣ್ಣ ಸಣ್ಣ ನಸುಹಳದಿ ಬಣ್ಣದಿಂದ ಕೂಡಿದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಚುಕ್ಕೆಗಳ
ಸಂಖ್ಯೆ ಜಾಸ್ತಿಯಾಗಿ ಇಡೀ ಎಲೆಯನ್ನೆಲ್ಲಾ ಆವರಿಸಿಕೊಂಡು ಎಲೆ ಒಣಗಲು ಪ್ರಾರಂಭವಾಗುತ್ತದೆ. ರೋಗವು ಮುಂದುವರಿದಂತೆ ಎಲೆಗಳಲ್ಲಾ
ಒಣಗಿ ಉದುರುತ್ತವೆ.
ಹತೋಟಿ P್ರವ Àುಗಳು
· ಈ ರೋಗವನ್ನು ತಡೆಗಟ್ಟಲು ಶೇ. 0.5 ಬೋರ್ಡೊ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‍ನ್ನು ಪ್ರತಿ ಲೀಟರ್ ನೀರಿಗೆ ಬೆರಸಿ
ಮೂರು ಸಲ ಅಂದರೆ ಹೂ ಬಿಡುವುದಕ್ಕೆ ಮೊದಲು, ಮುಂಗಾರಿಗಿಂತ ಮೊದಲು ಮತ್ತು ಮುಂಗಾರಿನ ನಂತರ ಸಿಂಪಡಿಸಬೇಕು.
2. ಕೊಳೆ ರೋಗ
ಈ ರೋಗವು ಮಳೆಗಾಲದಲ್ಲಿ ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳಿನವರೆಗೆ ಎಲೆಗಳು, ರೆಂಬೆಗಳು ಮತ್ತು ಹಣ್ಣುಗಳ ಮೇಲೆ
ಕಂಡುಬರುತ್ತದೆ. ಈ ರೋಗದ ಭಾದೆಯಿಂದ ಎಲೆಗಳು, ರೆಂಬೆಗಳು ಮತ್ತು ಬೆಳೆಯುತ್ತಿರುವ ಕಾಯಿಗಳು ಕಪ್ಪಾಗಿ ಕೊಳೆಯುತ್ತವೆ. ಇದರ ಭಾದೆ
ತೀವ್ರವಾದಲ್ಲಿ ಎಲೆಗಳು, ರೆಂಬೆಗಳು ಕೊಳೆತು ಕಳಚಿ ಬೀಳುತ್ತವೆ.
ಹತೋಟಿ P್ರವ Àುಗಳು
· ರೋಗ ಪೀಡಿತ ಎಲೆಗಳು ಮತ್ತು ರೆಂಬೆಗಳನ್ನು ಕಿತ್ತು ನಾಶಪಡಿಸಬೇಕು.
· ಮಳೆಗಾಲದ ಪ್ರಾರಂಭಕ್ಕೆ ಮುಂಚೆ ಶೇ. 1 ರ ಬೋರ್ಡೊ ದ್ರಾವಣ ಅಥವಾ ಹೆಕ್ಸಾಕೊನೋಜೋಲ್ 1.ಮಿ.ಲಿ.ಯನ್ನು ಪ್ರತಿ ಲೀ. ನೀರಿಗೆ ಬೆರಸಿ
ಸಿಂಪಡಿಸಬೇಕು.
3. ಬೇರು ಕೊಳೆ ರೋಗ
ಈ ರೋಗವು ಮಣ್ಣು ಜನ್ಯವಾಗಿದ್ದು ಇತ್ತೀಚಿಗೆ ಇದರ ಪ್ರಮಾಣ ಹೆಚ್ಚಿನದ್ದಾಗಿ ಕೊಡಗು ಜಿಲ್ಲೆಯಾದ್ಯಂತ ಕಂಡು ಬರುತ್ತಿದ್ದು ಕಾಫಿû ಗಿಡಕ್ಕೆ
ಬರುವ ಅನೇಕ ರೋಗಗಳಲ್ಲಿ ಮಾರಕವಾಗಿದೆ. ಪ್ರಾರಂಭದಲ್ಲಿ ಕಾಫಿû ಗಿಡದ ಕೆಳಭಾಗದ ಏಲೆಗಳು ಹಳದಿಯಾಗುತ್ತವೆ. ನಂತರ ಹಳದಿಯು ಎಲ್ಲಾ
ಏಲೆಗಳ ಮೇಲೆ ಹರಡಿ ಒಣಗಿ ಗಿಡದಿಂದ ಉದುರುತ್ತವೆ. ರೋಗ ಭಾದೆ ತೀವ್ರವಾದಾಗ ಗಿಡ ಒಣಗಿ ಸಂಪೂರ್ಣ ಗಿಡಗಳೆ ಸಾಯುತ್ತವೆ.
ಹತೋಟಿ P್ರವ Àುಗಳು
· ರೋಗದ ಭಾದೆಗೆ ತುತ್ತಾದ ಗಿಡವನ್ನು ಬುಡಸಮೇತ ಕಿತ್ತು ನಾಶಪಡಿಸಬೇಕು ಮತ್ತು ರೋಗ ಪೀಡಿತ ಗಿಡದ ಮಣ್ಣು ಯಾವುದೆ
ಕಾರಣಕ್ಕೊ ಅಕ್ಕ ಪಕ್ಕದಲ್ಲಿರುವ ಇತರೆ ಆರೋಗ್ಯವಂತ ಗಿಡಗಳಿಗೆ ತಾಗದಂತೆ ನೋಡಿಕೊಳ್ಳಬೇಕು.
· ರೋಗ ಪೀಡಿತ ಗಿಡವನ್ನು ಕಿತ್ತ ನಂತರ ಈ ರೋಗವು ಇತರೆ ಆರೋಗ್ಯವಂತ ಗಿಡಗಳಿಗೆ ಹರಡದಂತೆ ಅಕ್ಕ ಪಕ್ಕದ ಗಿಡಗಳಿಗೆ
ಕಾರ್ಬೆಂಡೆಜಿಮ್ 4.0 ಗ್ರಾಂನ್ನು ಪ್ರತಿ ಲೀ. ನೀರಿಗೆ ಬೆರಸಿ (3 ರಿಂದ 5 ಲೀ) ಗಿಡದ ಬುಡಕ್ಕೆ ಸುರಿಯಬೇಕು.
ಕೊಯ್ಲು ಮತ್ತು ಇಳುವರಿ
· ಕಾಫಿ ಬೆಳೆ 3 ರಿಂದ 4 ವರ್ಷಗಳಲ್ಲಿ ಮೊದಲು ಕೊಯ್ಲಿಗೆ ಬರುತ್ತದೆ.
· ಚೆರ್ರಿ ಕಾಫಿ ತಯಾರಿಸಲು ಕೆಂಪು ಕಾಫಿ ಹಣ್ಣುಗಳನ್ನು ನೇರವಾಗಿ ಬಿಸಿಲಿನಲ್ಲಿ ಒಣಗಿಸಬೇಕು.
· ಪಾರ್ಚ್‍ಮೆಂಟ್ ಕಾಫೀ ತಯಾರಿಸಲು ಸಿಪ್ಪೆ ಮತ್ತು ತಿರುಳನ್ನು ಪಲ್ಪರ್ ಯಂತ್ರದ ಸಹಾಯದಿಂದ ಬೇರ್ಪಡಿಸಿ, ಸೀಮೆಂಟಿನ ತೊಟ್ಟಿಗಳಲ್ಲಿ
ಕೊಳೆಯಲು ಬಿಟ್ಟು, ಲೋಳೆ ಪದಾರ್ಥವನ್ನು ನೀರಿನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.
· ಒಂದು ಎಕರೆ ಪ್ರದೇಶದಿಂದ 0.5 ಟನ್ ಅರೇಬಿಕಾ, ರೋಬಸ್ಟ ತಳಿಯಲ್ಲಿ ಮಳೆ ಆಶ್ರಯದಲ್ಲಿ 0.6 ಟನ್, ನೀರಾವರಿಯಲ್ಲಿ 0.8 ಟನ್ ಕಾಫಿ
ಇಳುವರಿಯನ್ನು ಪಡೆಯಬಹುದು.
ಸಂಸ್ಕರಣೆ
ಚೆರಿ ಕಾಫಿû ತಯಾರಿಕೆ
ಕೊಯ್ದ ಕಾಫಿûಯನ್ನು ಕಸ ಕಡ್ಡಿ, ಎಲೆಗಳಿಂದ ಬೇರ್ಪಡಿಸಿ ಸಿಮೆಂಟಿನ ಅಥವಾ ಕಣದಲ್ಲಿ ಸುಮಾರು 7 ರಿಂದ 8 ಸೆಂ.ಮಿ. ದಪ್ಪವಾಗಿ
ಹರಡಿ ಒಣಗಿಸಬೇಕು. ಉತ್ತಮ ಗುಣಮಟ್ಟದ ಚೆರಿ ಕಾಫಿû ತಯಾರು ಮಾಡಲು ಚೆನ್ನಾಗಿ ಬಲಿತ ಹಣ್ಣುಗಳನ್ನು ಬಲಿಯದ ಹಣ್ಣುಗಳಿಂದ ಬೇರ್ಪಡಿಸಿ
ಪ್ರತ್ಯೇಕವಾಗಿ ಒಣಗಿಸಬೇಕು. ಒಣಗಲು ಹಾಕಿದ ಕಾಫಿûಯನ್ನು ಘಂಟೆಗೊಂದು ಬಾರಿ ಕೆದರಿ ದಿಂಡು ಕಟ್ಟಬೇಕು. ಚೆರಿ ಕಾಫಿû ಒಣಗಲು ಸುಮಾರು 10
ರಿಂದ 12 ದಿನಗಳು ಬೇಕಾಗುತ್ತದೆ. ಒಂದು ಹಿಡಿ ಚೆರಿ ಕಾಫಿûಯನ್ನು ಅಲ್ಲಾಡಿಸಿದಾಗ ಕರಕರ ಶಬ್ದವಾದಾಗ ಮತ್ತು ಮಾದರಿ ತೂಕ ಎರಡು ದಿನ
ಒಂದೇ ಆಗಿದ್ದಾಗ ಚೆರಿ ಕಾಫಿû ಒಣಗಿರುವುದನ್ನು ಸೂಚಿಸುತ್ತದೆ. ಚೆರಿ ಕಾಫಿûಯನ್ನು ನಿಗದಿತ ಅಂದರೆ ತೇವಾಂಶ ಶೇ. 12.0 ರಿಂದ 12.5 ಗೆ
ಬರುವವರೆವಿಗೂ ಒಣಗಿಸಬೇಕು.
ಪಾರ್ಚ್‍ಮೆಂಟ್ ತಯಾರಿಕೆ
ಕಾಫಿû ಹಣ್ಣುಗಳನ್ನು ನೀರಿನಲ್ಲಿ ಕೊಳೆಸಿ ಪಲ್ಪ್ ಮಾಡಿ ತೊಳೆದು ನಿಗದಿತ ತೇವಾಂಶ ಶೇ. 11.0 ಬರುವವರೆವಿಗೂ ಒಣಗಿಸಬೇಕು. ಈ
ಕಾರ್ಯಕ್ಕೆ 7 ರಿಂದ 10 ದಿನಗಳು ಬೇಕಾಗುತ್ತದೆ. ನಿಗದಿತ ತೇವಾಂಶಕ್ಕೆ ಒಣಗಿದ ಕಾಫಿûಯನ್ನು ಶುದ್ಧವಾದ ಹೊಸ ಗೋಣಿ ಚೀಲದಲ್ಲಿ ತುಂಬಿ
ಶೇಖರಿಸಬೇಕು.

About Vivek Naren

About

Leave a Reply

Your email address will not be published. Required fields are marked *