ತೆಂಗು Coconut

ತೆಂಗು

ತೆಂಗು ಒಂದು ಬಹುಪಯೋಗಿ ವಾಣಿಜ್ಯ ಬೆಳೆ. ಆದ್ದರಿಂದಲೇ ಇದನ್ನು ಕಲ್ಪವೃಕ್ಷವೆಂದು ಕರೆಯತ್ತಾರೆ.. ಇದು ಆಹಾರ (ತಾಜ ಮತ್ತು ಒಣಕೊಬ್ಬರಿ, ಎಣ್ಣೆ), ಪಾನೀಯ ಮತ್ತು ಉರುವಲಿಗೆ ವಸ್ತುಗಳನ್ನು ಒದಗಿಸುವುದಲ್ಲದೇ ಹಲವಾರು ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥಗಳನ್ನು ಒದಗಿಸುವುದು. ತೆಂಗು ಕೊಬ್ಬು ಮತ್ತು ಹಲವು ಜೀವಸತ್ವಗಳನ್ನು ಹೊಂದಿರುವುದರಿಂದ, ಪಿಷ್ಟಯುಕ್ತ ಆಹಾರ ಪದಾರ್ಥಗಳಲ್ಲಿಯ ಕೊರತೆಗಳನ್ನು ಸರಿದೂಗಿಸುತ್ತದೆ. (ಎಳನೀರಿನಲ್ಲಿ ಶೇ. 95.5 ರಷ್ಟು ನೀರು, ಶೇ. 0.1 ರಷ್ಟು ಸಸಾರಜನಕ, ಶೇ. 4ರಷ್ಟು ಶರ್ಕರಪಿಷ್ಟಗಳು, ಶೇ. 0.02 ಕ್ಯಾಲ್ಸಿಯಂ, ಶೇ. 0.01 ರಂಜಕ ಮತ್ತು 0.05 ಮಿ.ಗ್ರಾಂ. (100 ಗ್ರಾಂ.ಗೆ) ಕಬ್ಬಿಣದ ಅಂಶವನ್ನು ಒಳಗೊಂಡಿರುತ್ತದೆ. ತಾಜಾ ಕೊಬ್ಬರಿ ಶೇ. 45 ರಷ್ಟು ತೇವಾಂಶ, ಶೇ. 4 ರಷ್ಟು ಸಸಾರಜನಕ, ಶೇ. 33 ರಷ್ಟು ಕೊಬ್ಬು, ಶೇ. 4 ರಷ್ಟು ಖನಿಜಾಂಶಗಳು ಮತ್ತು ಶೇ. 10 ರಷ್ಟು ಶರ್ಕರಪಿಷ್ಟ ಹೊಂದಿರುತ್ತದೆ).

ಮಣ್ಣು
ತೆಂಗನ್ನು ವಿವಿಧ ಮಣ್ಣುಗಳಲ್ಲಿ ಬೆಳೆಯಹುದು. ನೀರು ಬಸಿದು ಹೋಗುವ ಹಾಗೂ ಆಳವಾದ ಮರಳು ಮಿಶ್ರಿತ ಗೋಡು, ಜಂಬಿಟ್ಟಿಗೆ ಮತ್ತು ಕೆಂಪು ಗೋಡು ಮಣ್ಣುಗಳು ತೆಂಗನ್ನು ಬೆಳೆಯಲು ಯೋಗ್ಯವಾಗಿವೆ. ಜೇಡಿಮಣ್ಣು ಮತ್ತು ನೀರು ನಿಲ್ಲುವ ಪ್ರದೇಶಗಳಲ್ಲಿ ತೆಂಗು ಹುಲುಸಾಗಿ ಬೆಳೆಯುವುದಿಲ್ಲ. ರಸಸಾರ 5.2 ರಿಂದ 8.0 ಇರುವಲ್ಲಿಯೂ ಕೃಷಿ ಮಾಡಬಹುದು.

ಹವಾಗುಣ
ತೆಂಗು ಉಷ್ಣವಲಯದ ಬೆಳೆಯಾಗಿದ್ದು, ಹೆಚ್ಚು ಪ್ರಕಾಶಮಾನವಾದ ಬೆಳಕನ್ನು ಬಯಸುತ್ತದೆ. ಸಮುದ್ರ ಮಟ್ಟದಿಂದ 1000 ಮೀ. ಎತ್ತರದವರೆಗೂ 700 ರಿಂದ 3000 ಮಿ.ಮೀ. ಮಳೆ ಬೀಳುವ ಸ್ಥಳಗಳಲ್ಲಿ ಮತ್ತು ಉಷ್ಣಾಂಶ 15 ರಿಂದ 35o ಸೆ. ಇರುವೆಡೆ ಉತ್ತಮವಾಗಿ ಬೆಳೆಯಬಹುದು. ಕಡಿಮೆ ಮಳೆ ಬೀಳುವಲ್ಲಿ ನೀರಾವರಿ ಇರುವಲ್ಲಿ ತೆಂಗು ಚೆನ್ನಾಗಿ ಬರುತ್ತದೆ.

ನಾಟಿ ಕಾಲ
ಜೂನ್ – ಜುಲೈ ತಿಂಗಳುಗಳು ನಾಟಿ ಮಾಡಲು ಸೂಕ್ತ.

ತಳಿಗಳು
ಎತ್ತರದ ತಳಿಗಳು: ಅರಸೀಕೆರೆ ಟಾಲ್ (ತಿಪಟೂರು ಟಾಲ್) ಮತ್ತು ಪಶ್ಚಿಮ ಕರಾವಳಿ (ವೆಸ್ಟ್ ಕೋಸ್ಟ್ ಟಾಲ್)

ಗಿಡ್ಡ ತಳಿಗಳು: ಗಂಗಾಬೊಂದಂ, ಚೌಘಾಟ್ ಡ್ವಾರ್ಫ್ ಆರೆಂಜ್, ಚೌಘಾಟ್ ಡ್ವಾರ್ಫ್ ಗ್ರೀನ್, ಮಲಯನ್ ಡ್ವಾರ್ಫ್ ಆರೆಂಜ್ ತಳಿಗಳು.
ಶಕ್ತಿಮಾನ್ ತಳಿಗಳು: ಟಾಲ್ x ಡ್ವಾರ್ಫ್ (ಟಿ x ಡಿ), ಡ್ವಾರ್ಫ್ x ಟಾಲ್ (ಡಿ x ಟಿ) ಮತ್ತು ಎನ್.ಸಿ.ಡಿ. ಶಕ್ತಿಮಾನ್ ತಳಿಗಳು, ಬೇಗನೆ ಫಲ ಬಿಡುವ ಮತ್ತು ಹೆಚ್ಚಿನ ಇಳುವರಿ ಹಾಗೂ ಕಾಯಿ ಮತ್ತು ಕೊಬ್ಬರಿ ಗುಣಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗತೊಡಗಿವೆ.
ಕೇಂದ್ರೀಯ ವಾಣಿಜ್ಯ ಬೆಳೆಗಳ ಸಂಶೋಧನಾ ಕೇಂದ್ರ, ಕಾಸರಗೋಡಿನಿಂದ ಬಿಡುಗಡೆ ಹೊಂದಿದ ಸಂಕರಣ ತಳಿಗಳಾದ ಚಂದ್ರಸಂಕರ (ಡಿ x ಟಿ), ಲಕ್ಷ (ಟಿ x ಡಿ) ಮತ್ತು ಸುಧಾರಿತ ತಳಿಗಳಾದ ಚಂದ್ರಕಲ್ಪ ಮತ್ತು ಪ್ರತಾಪ್‍ಗಳನ್ನು ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಬೆಳೆಯಬಹುದು. ಚಂದ್ರಕಲ್ಪ ತಳಿಯು ತೆಂಗು ಬೆಳೆಯುವ ಎಲ್ಲಾ ಪ್ರದೇಶಗಳಿಗೂ ಸೂಕ್ತವಾಗಿದ್ದು ಅಧಿಕ ಇಳುವರಿ ಮತ್ತು ಕೊಬ್ಬರಿ ಕೊಡುವ ಶಕ್ತಿ ಹೊಂದಿದೆ.
ಬೇಸಾಯ ಸಾಮಗ್ರಿಗಳು
ಸಸಿಗಳ ಸಂಖ್ಯೆ ಅಂತರ ಸಸಿಗಳು ಪ್ರತಿ ಹೆಕ್ಟೇರಿಗೆ
ಎತ್ತರ ತಳಿಗಳು 8.2 ಮೀ. x 8.2ಮೀ 149
ಗಿಡ್ಡ ಮತ್ತು ಶಕ್ತಿಮಾನ್ ತಳಿಗಳು 7 ಮೀ. x 7ಮೀ 204
.
2. ಸಾವಯವ ಗೊಬ್ಬರ
ಕೊಟ್ಟಿಗೆ ಗೊಬ್ಬರ : ಕಾಂಪೆÇೀಸ್ಟ್
ಗಿಡ ನಾಟಿ ಮಾಡುವ ಮೊದಲು : 25-30 ಕೆ.ಜಿ. ಪ್ರತಿ ಗಿಡಕ್ಕೆ
ಪ್ರತಿ ವರ್ಷ : 40-50 ಕಿ.ಗ್ರಾಂ. ಪ್ರತಿ ಗಿಡಕ್ಕೆ

3. ರಸಗೊಬ್ಬರ
ಗಿಡವೊಂದಕ್ಕೆ (ಗ್ರಾಂಗಳಲ್ಲಿ)
ಮುಂಗಾರಿನ ಮೊದಲು
(ಮೇ – ಜೂನ್) ಮುಂಗಾರಿನ ನಂತರ
(ಸೆಪ್ಟೆಂಬರ್ – ಅಕ್ಟೋಬರ್)
ನಾಟಿ ಮಾಡಿದ ಮೇಲೆ ಸಾ. ರಂ. ಪೆÇ. ಸಾ. ರಂ. ಪೆÇ.
ಮೊದಲನೇ ವರ್ಷ – – – 50 40 135
ಎರಡನೇ ವರ್ಷ 50 40 135 110 80 270
ಮೂರನೇ ವರ್ಷ 110 80 270 220 160 540
ನಾಲ್ಕನೇ ವರ್ಷ ಮತ್ತು ನಂತರ 170 120 400 330 200 800
ಸುಣ್ಣ (ಕರಾವಳಿ ಪ್ರದೇಶ) 2 ಕಿ.ಗ್ರಾಂ. (15 ವರ್ಷಗಳವರೆಗೆ)
4 ಕಿ. 15 ವರ್ಷಗಳ ನಂತರ)

ಕರಾವಳಿ ಪ್ರದೇಶದಲ್ಲಿ ಫಲ ನೀಡುವ ತೆಂಗಿನ ಗಿಡಗಳಿಗೆ 0.5 ಕಿ.ಗ್ರಾಂ. ಮೆಗ್ನೀಷಿಯಂ ಸಲ್ಫೇಟನ್ನು ಹಾಕಬೇಕು. ಸುಣ್ಣವನ್ನು ಸೆಪ್ಟೆಂಬರ್ – ಅಕ್ಟೋಬರ್‍ನಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಕುವ 15 ದಿವಸ ಮುಂಚೆ ಕೊಡಬೇಕು.

ಬೇಸಾಯ ಕ್ರಮಗಳು
ಉತ್ತಮ ಸಸಿಗಳನ್ನು ಬೆಳೆಸುವುದು
ಅ) ಬೀಜದ ಆಯ್ಕೆ
1. ಮಳೆಯಾಶ್ರಯದಲ್ಲಿ ಪ್ರತಿ ವರ್ಷವೂ 80 – 100 ಕಾಯಿ ಬಿಡುತ್ತಿರುವ 20-40 ವರ್ಷ ವಯಸ್ಸಿನ ಆರೋಗ್ಯವಾದ ಮರಗಳಿಂದಲೇ ಗೋಲಾಕಾರದ ಮಧ್ಯಮ ಗಾತ್ರದ ಕಾಯಿಗಳನ್ನು ಬಿತ್ತನೆಗಾಗಿ ಆರಿಸಬೇದು.
2. ಕಡಿಮೆ ನೀರುಳ್ಳ ಸಂಪೂರ್ಣ ಬಲಿತ, ಮಧ್ಯಮ ಗಾತ್ರದ ಕಾಯಿಗಳನ್ನು ಆರಿಸಬೇಕು.
3. ಮರದಲ್ಲಿ 12 ಗೊಂಚಲುಗಳಿದ್ದು, 30-40 ಗರಿಗಳನ್ನು ಹೊಂದಿರಬೇಕು.

ಆ) ಸಸಿಮಡಿ ತಯಾರಿಕೆ ಮತ್ತು ಕಾಯಿ ನೆಡುವಿಕೆ
1. ಪ್ರತಿ ಮಡಿಯನ್ನು 45 ಸೆಂ.ಮೀ. ಆಳ ತೆಗೆದು, (7.5 ಮೀ. ಘಿ 1.5 ಮೀ ಅಳತೆಯ) ಮರಳನ್ನು ತುಂಬಬೇಕು.
2. ಎರಡು ತಿಂಗಳು ಸಂಗ್ರಹಿಸಿಟ್ಟ ನಂತರ ಬೀಜದ ಕಾಯಿಗಳನ್ನು 40 ಸೆಂ.ಮೀ. ಘಿ 30 ಸೆಂ.ಮೀ. ಅಂತರದಲ್ಲಿ ನೇರವಾಗಿ ಸಸಿಮಡಿಯಲ್ಲಿ ನಾಟಿಮಾಡಬೇಕು. ಕಾಯಿಗಳ ಮೇಲೆ 5 ಸೆಂ. ಮೀ. ಗಿಂತ ಹೆಚ್ಚು ಮರಳು ಇರಬಾರದು. ಕಾಯಿಗಳನ್ನು ಅಡ್ಡಲಾಗಿಯೂ ನೆಡಬಹುದು.
3. ಬೀಜದ ಕಾಯಿಗಳು 3-4 ತಿಂಗಳುಗಳಲ್ಲಿ ಮೊಳಕೆಯೊಡೆದು ಸುಮಾರು 12-18 ತಿಂಗಳಲ್ಲಿ ನಾಟಿಗೆ ಸಿದ್ಧವಾಗುತ್ತವೆ. ಐದು ತಿಂಗಳುಗಳ ನಂತರ ಮೊಳಕೆ ಬಂದ ಸಸಿಗಳನ್ನು ಉಪಯೋಗಿಸಬಾರದು.
4. ಹೆಚ್ಚು ಎಲೆಗಳು ಇರುವ, ದಪ್ಪಕಾಂಡ ಹೊಂದಿದ ದೃಡವಾಗಿರುವ, ರಭಸವಾದ ಬೆಳವಣಿಗೆ ಹೊಂದಿರುವ ಸಸಿಗಳನ್ನು ಮಾತ್ರ ನೆಡಲು ಆರಿಸಬೇಕು.
5. ಹೆಚ್ಚು ಎಲೆಗಳು ಇರುವ, ದಪ್ಪಕಾಂಡ ಹೊಂದಿದ ದೃಢವಾಗಿರುವ, ರಭಸವಾದ ಬೆಳವಣಿಗೆ ಹೊಂದಿರುವ ಸಸಿಗಳನ್ನು ಮಾತ್ರ ನೆಡಲು ಆರಿಸಬೇಕು.
ಸಸಿ ನಾಟಿ ಮಾಡುವುದು: ಭೂಮಿಯನ್ನು ಉಳುಮೆ ಮಾಡಿ ತಯಾರಿಸಿಡಬೇಕು. ತಳಿಗೆ ಅನುಗುಣವಾಗಿ ಶಿಫಾರಸ್ಸು ಮಾಡಿದ ಅಂತರದಲ್ಲಿ ಒಂದು ಘನ ಮೀಟರ್ ಅಳತೆಯ ಗುಣಿಗಳನ್ನು ತೆಗೆಯಬೇಕು. ಗುಣಿಗಳನ್ನು ಹಸಿರೆಲೆ, ಕೊಟ್ಟಿಗೆ ಗೊಬ್ಬರ ಮತ್ತು ಮೇಲ್ಮಣ್ಣಿನಿಂದ 0.65 ಘನ ಮೀಟರ್‍ವರೆಗೆ ತುಂಬಬೇಕು. ಮಣ್ಣೆನ ಗುಣಧರ್ಮಕ್ಕನುಗುಣವಾಗಿ 45 ಸೆಂ. ಮೀ. ಆಳದಲ್ಲಿ ಸಸಿಗಳನ್ನು ನಾಟಿ ಮಾಡಿ ಕೋಲಿನಿಂದ ಆಧಾರವನ್ನು ಕೊಡಬೇಕು. ಬೇಸಿಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೆರಳನ್ನು ಒದಗಿಸಬೇಕು. ಗೆದ್ದಲಿನ ಹತೋಟೆಗೆ ಶೇ. 10ರ ಕಾರ್ಬಾರಿಲ್ ಪುಡಿ ನಾಟಿ ಸಮಯದಲ್ಲಿ ಉದುರಿಸಿ.

ನೀರಾವರಿ ಮತ್ತು ಅಂತರ ಬೇಸಾಯ
ಮಣ್ಣು ಮತ್ತು ಹವಾಗುಣವನ್ನು ಅನುಸರಿಸಿ 5–10 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಇಳುವರಿ ಕೊಡುವ ಮರಗಳಿಗೆ ದಿನಕ್ಕೆ 40 ರಿಂದ 50 ಲೀಟರ್ ನೀರು ಒದಗಿಸುವುದು ಉತ್ತಮ. ಗಿಡದ ಸುತ್ತಲೂ 1.50 ಯಿಂದ 2 ಮೀಟರ್ ಸುತ್ತಳತೆಯಲ್ಲಿ ಪಾತಿಗಳನ್ನು ಮಾಡಿ, ಪಾತಿಯಲ್ಲಿ ಗೊಬ್ಬರ ಮತ್ತು ನೀರನ್ನು ಕೊಡುವುದು ಒಳ್ಳೆಯದು. ವರ್ಷದಲ್ಲಿ ಎರಡು ಬಾರಿ ಗಿಡಗಳ ಸಾಲುಗಳ ನಡುವೆ ಉಳುಮೆ ಮಾಡಬೇಕು.

ಅಂತರ ಮತ್ತು ಮಿಶ್ರ ಬೆಳೆಗಳು
• ವಾರ್ಷಿಕ ಬೆಳೆಗಳು: ಪ್ರದೇಶಕ್ಕನುಗುಣವಾಗಿ ದ್ವಿದಳ ಧಾನ್ಯಗಳ ಮತ್ತು ತರಕಾರಿ ಬೆಳೆಗಳನ್ನು ಪ್ರಾರಂಭದ ಹತ್ತು ವರ್ಷಗಳವರೆಗೆ ಬೆಳೆಯಬಹುದು.
• ಬಹುವಾರ್ಷಿಕ ಬೆಳೆಗಳು: ಬಾಳೆ, ಪಪ್ಪಾಯಿ, ಅನಾನಸ್, ಹಿಪ್ಪುನೇರೆಳೆ ಮುಂತಾದ ಬೆಳೆಗಳನ್ನು ಅಂತರ ಬೆಳೆಯನ್ನಾಗಿ ಹತ್ತು ವರ್ಷಗಳವರೆಗೆ ಬೆಳೆಯಬಹುದು.
• ಮಿಶ್ರ ಬೆಳೆಗಳು: ನಾಟಿ ಮಾಡಿದ 15 ವರ್ಷಗಳ ನಂತರ ಕೊಕೋ, ಕರಿಮೆಣಸು, ದಾಲ್ಚಿನ್ನಿ, ಜಾಯಿಕಾಯಿ, ಲವಂಗ, ಸರ್ವ ಸಾಂಬಾರ, ವೆನಿಲ್ಲಾ, ಪಚೋಲಿ, ಹಿಪ್ಪಲಿ ಮತ್ತು ಕಾಫಿ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದು.

ಸಸ್ಯ ಸಂರಕ್ಷಣೆ:
ಪ್ರಮುಖ ಕೀಟಗಳು
ತೆಂಗಿನ ಬೆಳೆಯನ್ನು ಬಾಧಿಸುವ ವಿವಿಧ ಕೀಟಗಳಲ್ಲಿ ಪ್ರಮುಖವಾಗಿ ಸುಳಿ ಕೊರೆಯುವ ದುಂಬಿ, ಕಪ್ಪು ತಲೆ ಕಂಬಳಿ ಹುಳು, ಕೆಂಪು ಮೂತಿ ಹುಳು ಮತ್ತು ನುಸಿ ಮುಖ್ಯವಾದುವುಗಳು.
• ಸುಳಿ ಕೊರೆಯುವ ದುಂಬಿ (ರೈನಾಸರಸ್ ದುಂಬಿ/ಕುರುವಾಯಿ)
ಗರಗಸದಂತಹ ಬಾಯುಳ್ಳ ಈ ಕಪ್ಪು ದುಂಬಿ ಕಾಂಡದ ಮೃದುವಾದ ಭಾಗ ಮತ್ತು ಮರದ ಸುಳಿಯನ್ನು ಕತ್ತರಿಸಿ ತಿನ್ನುತ್ತದೆ. ಇದರಿಂದ ಬಾಧೆಗೊಳಗಾದ ಗರಿಯು ಹೊರಚಾಚಿದ ನಂತರ ಚಾಕುವಿನಿಂದ ಕತ್ತರಿಸಿದಂತೆ ಕಾಣುತ್ತದೆ.
ನಿರ್ವಹಣಾ ಕ್ರಮ
• ಕಬ್ಬಿಣದ ಕೊಕ್ಕೆಯ ಸಹಾಯದಿಂದ ರಂಧ್ರದಲ್ಲಿರುವ ದುಂಬಿಯನ್ನು ಹೊರಗೆ ತೆಗೆದು ನಂತರ ದುಂಬಿಯ ಬಾಧೆಯಿಂದ ಉಂಟಾದ ರಂಧ್ರವನ್ನು ಶೇ. 10 ರ ಕಾರ್ಬರಿಲ್ ಮತ್ತು ಮರಳನ್ನು 1:1 ಪ್ರಮಾಣದಲ್ಲಿ ಬೆರೆಸಿ ತುಂಬಬೇಕು.
• ಶೇ. 10ರ ಕಾರ್ಬರಿಲ್‍ನ್ನು ಪ್ರತೀ 3 ಘನ ಮೀಟರಿಗೆ 250 ಗ್ರಾಂ. ನಂತೆ ತೋಟದಲ್ಲಿರುವ ಗೊಬ್ಬರದ ಗುಂಡಿಗಳೆಗೆ ಉಪಚರಿಸಬೇಕು.

ಕಪ್ಪು ತಲೆ ಕಂಬಳಿ ಹುಳು
ಈ ಕೀಟವು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಇದರ ಬಾಧೆಗೆ ತುತ್ತಾದ ಕೆಳಭಾಗದ ಗರಿಗಳು ಒಣಗುತ್ತವೆ ಮತ್ತು ಎಲೆಯ ತಳಭಾಗದಲ್ಲಿ ಹಿಕ್ಕೆಗಳಿಂದ ರಚಿಸಿದ ಸುರಂಗಗಳು ಇರುವುದನ್ನು ಕಾಣಬಹುದು. ಸಾಮಾನ್ಯವಾಗಿ ಇದರ ಹಾವಳಿ ಬೇಸಿಗೆಯಲ್ಲಿ ಹೆಚ್ಚಾಗಿರುತ್ತದೆ.
ನಿರ್ವಹಣಾ ಕ್ರಮ
• ಬಾಧೆಗೆ ತುತ್ತಾದ ಒಂದೆರಡು ಗರಿಗಳನ್ನು ಕತ್ತರಿಸಿ ತೆಗೆದು ಸುಡಬೇಕು ನಂತರ 4 ಗ್ರಾಂ. ಕಾರ್ಬರಿಲ್‍ನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಗರಿಗಳೆಗೆ ಸಿಂಪಡಿಸಬೇಕು.
• ಕೀಟದ ಬಾಧೆ ಅಧಿಕವಾಗಿದ್ದಲ್ಲಿ, 10 ವರ್ಷದೊಳಗಿನ ಮರಗಳಿಗೆ 7.5 ಮಿ.ಲೀ. ಮತ್ತು 10 ವರ್ಷಕ್ಕಿಂತ ಮೇಲ್ಪಟ್ಟ ಮರಗಳಿಗೆ 10 ಮಿ.ಲೀ. ಮೊನೊಕ್ರೊಟೋಫಾಸ್ 36 ಎಸ್.ಎಲ್. ಕೀಟನಾಶಕವನ್ನು ಅಷ್ಟೇ ಪ್ರಮಾಣದ ನೀರಿನೊಂದಿಗೆ ಬೆರೆಸಿ ಒಂದು ಪಾಲಿಥೀನ್ ಚೀಲದಲ್ಲಿ ತುಂಬಿ ಬೇರಿನ ಮೂಲಕ ಕೊಡಬೇಕು.
• ಬಾಧಿತ ಮರಗಳಲ್ಲಿ ಪ್ರತೀ 2 ಗರಿಗಳೆಗೆ ಒಂದರಂತೆ ಗರಿ ತಿನ್ನುವ ಹುಳುಗಳು ಕಾಣಿಸಿಕೊಂಡಾಗ ಜೈವಿಕ ಹತೋಟಿಯಾಗಿ ಪೆರಿಸಿರಿಯೋಲಾ ಅಥವಾ ಬ್ರಾಕಾನ್ ಪರತಂತ್ರ ಜೀವಿಗಳನ್ನು ಪ್ರತೀ ಗಿಡಕ್ಕೆ 10-12 ರಂತೆ ಬಿಡಬೇಕು. ಇದರ ಸೌಲಭ್ಯವನ್ನು ರೈತರು ತೋಟಗಾರಿಕೆ ಇಲಾಖೆಯಿಂದ ಪಡೆಯಬಹುದು.
ಕೆಂಪು ಮೂತಿ ಹುಳು
ಹುಳುಗಳು ಸಾಮಾನ್ಯವಾಗಿ 7 ರಿಂದ 15 ವರ್ಷಗಳವರೆಗಿನ ಮರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದರ ಬಾಧೆಗೆ ಒಳಗಾದ ಮರಗಳ ಲಕ್ಷಣಗಳೆಂದರೆ, ಹುಳುಗಳು ಮೃದುವಾದ ಕಾಂಡವನ್ನು ಕೊರೆದು ತಿಂದು ಸುರಂಗವನ್ನು ಮಾಡುತ್ತವೆ. ನಂತರ ಆ ಭಾಗದಲ್ಲಿ ಕಂದು ಬಣ್ಣದ ದ್ರವವು ಶ್ರವಿಸುತ್ತಿರುತ್ತದೆ. ಮಧ್ಯದ ಎಲೆಯು ಹಳದೆಯಾಗಿ ಎಲೆಯು ಒಣಗಲು ಪ್ರಾರಂಭಿಸುತ್ತದೆ.
ನಿರ್ವಹಣಾ ಕ್ರಮ
ಈ ಹುಳುವಿನ ಬಾಧೆ ತಡೆಯಲು ಕಾರ್ಬರಿಲ್ 4 ಗ್ರಾಂ. ನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಹುಳುವಿರುವ ಕಡೆ ಒಂದು ರಂಧ್ರವನ್ನು ಮಾಡಿ ಅದಕ್ಕೆ ದ್ರಾವಣವನ್ನು ಸುರಿಯಬೇಕು.
ನುಸಿ
ನುಸಿಯು ರಸ ಹೀರುವ ಪ್ರವೃತ್ತಿ ಹೊಂದಿರುವುದರಿಂದ ಬಾಧೆಗೊಳಗಾದ ಕಾಯಿಗಳ ಪುಷ್ಪ ಪಾತ್ರೆಯ ಕೆಳಭಾಗದಲ್ಲಿ ತ್ರಿಕೋಣಾಕಾರದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ರಸ ಹೀರುವಿಕೆ ಜಾಸ್ತಿಯಾದಂತೆ ಮಚ್ಚೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ನಂತರ ಕಾಯಿಗಳ ಮೇಲೆ ಬಿರುಕುಗಳು ಉಂಟಾಗಿ ಅದರಿಂದ ಅಂಟು ದ್ರವವು ಸೋರುತ್ತದೆ. ಇಂತಹ ಕಾಯಿಗಳು ತಮ್ಮ ಸಾಮಾನ್ಯ ಗಾತ್ರ ಮತ್ತು ಆಕಾರವನ್ನು ಕಳೆದುಕೊಂಡು ವಿರೋಪಗೊಂಡಿರುತ್ತವೆ.
ನಿರ್ವಹಣಾ ಕ್ರಮ
ನುಸಿಯನ್ನು ಹತೋಟಿ ಮಾಡುವಲ್ಲಿ ಮೊದಲನೆಯದಾಗಿ ಶಿಫಾರಸ್ಸು ಮಾಡಿದ ಪೆÇಷಕಾಂಶಗಳನ್ನು ಕೊಡಬೇಕು. ನಂತರ ಅಗತ್ಯವಿದ್ದಲ್ಲಿ ನುಸಿ ನಾಶಕಗಳನ್ನು ಬಳಸಬಹುದು. ಅದಕ್ಕಾಗಿ ಪ್ರತೀ ವರ್ಷ ಕೆಳಕಂಡ ಪೆÇೀಷಕಾಂಶಗಳನ್ನು ಪ್ರತೀ ಗಿಡಕ್ಕೆ ನೀಡಬೇಕು.
1. 50 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ / ಸಾವಯವ ಗೊಬ್ಬರ
2. 5 ಕಿ.ಗ್ರಾಂ. ಬೇವಿನ ಹಿಂಡಿ
3. 1.1 ಕಿ.ಗ್ರಾಂ. ಯೂರಿಯಾ
4. 1.25 ಕಿ.ಗ್ರಾಂ. ಶಿಲಾರಂಜಕ
5. 2 ಕಿ.ಗ್ರಾಂ. ಮ್ಯೂರೇಟ್ ಆಫ್ ಪೆÇಟಾಷ್
6. 2 ಕಿ.ಗ್ರಾಂ. ಸುಣ್ಣ (15 ವರ್ಷದೊಳಗಿನ ಮರಗಳಿಗೆ)
7. 4 ಕಿ.ಗ್ರಾಂ. ಸುಣ್ಣ (15 ವರ್ಷದ ನಂತರ ಗಿಡಗಳಿಗೆ)
8. 50 ಗ್ರಾಂ. ಬೋರಾಕ್ಸ್
ಯೂರಿಯಾ, ಶಿಲಾರಂಜಕ ಮತ್ತು ಪೆÇಟ್ಯಾಷ್‍ಗಳನ್ನು ಎರಡು ಸಮ ಕಂತುಗಳಲ್ಲಿ ಅಂದರೆ,ಮೊದಲನೆಯ ಕಂತನ್ನು ಮೇ-ಜೂನ್ ತಿಂಗಳಲ್ಲಿ ಇತರ ಪೆÇೀಷಾಕಾಂಶಗಳ ಜೊತೆಗೆ ಹಾಗೂ ಎರಡನೆಯ ಕಂತನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕೊಡಬೇಕು.
ನುಸಿಯ ಬಾಧೆಯನ್ನು ನೋಡಿಕೊಂಡು ವರ್ಷದಲ್ಲಿ ಮೂರು ಬಾರಿ ಏಪ್ರಿಲ್-ಮೇ, ಅಕ್ಟೋಬರ್-ನವೆಂಬರ್ ಮತ್ತು ಡಿಸೆಂಬರ್-ಜನವರಿಯಲ್ಲಿ 5 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಕಾಯಿ ಗೊಂಚಲಿಗೆ ಸಿಂಪಡಿಸಬೇಕು.
ಅಥವಾ
ನೀಮಾಝಾಲ್ 7.5 ಮಿ.ಲೀ/ಇಕೋನೀಮ್‍ಪ್ಲಸ್ 10 ಮಿ.ಲೀ. ಅನುಕ್ರಮವಾಗಿ ಅಷ್ಟೇ ಪ್ರಮಾಣದ ನೀರಿನಲ್ಲಿ ಬೆರೆಸಿ ಬೇರಿನ ಮೂಲಕ ಗಿಡಗಳಿಗೆ ಕೊಡಬೇಕು.
ಅಥವಾ
4 ಮಿ.ಲೀ. ಡೈಕೋಫಾಲ್ 18.5 ಇ.ಸಿ. ಅಥವಾ 20 ಮಿ.ಲೀ. ಬೇವಿನ ಎಣ್ಣೆ, 30 ಗ್ರಾಂ ಬೆಳ್ಳುಳ್ಳಿಯಿಂದ ತಯಾರಿಸಿದ ರಸ ಮತ್ತು 5 ಗ್ರಾಂ. ಸಾಬೂನು ಇವುಗಳನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಕಾಯಿ ಗೊಂಚಲಿಗೆ ಸಿಂಪಡಿಸಬೇಕು.

ಪ್ರಮುಖ ರೋಗಗಳು
ಸುಳಿಕೊಳೆ ರೋಗ, ಕಾಂಡದಿಂದ ರಸ ಸೋರುವ ರೋಗ, ಅಣಬೆ ರೋಗ ಮತ್ತು ಎಲೆಚುಕ್ಕೆ ರೋಗ
1. ಸುಳಿ ಕೊಳೆ ರೋಗ
ಈ ಶಿಲೀಂಧ್ರ ರೋಗವು ಸಾಮಾನ್ಯವಾಗಿ ಜುಲೈ ತಿಂಗಳಿನಿಂದ ಡಿಸೆಂಬರ್‍ವರೆಗೆ ಅಧಿಕವಾಗಿರುತ್ತದೆ. ಹೊಸದಾಗಿ ಬರುತ್ತಿರುವ ಗರಿಯು ಬಾಡಿ ಬಾಗಿರುವುದನ್ನು ದೂರದಿಂದ ಕಾಣಬಹುದು. ತುದಿ ಗರಿಯು ಹಳದಿ ಬಣ್ಣಕ್ಕೆ ತಿರುಗಿ ಒಣಗಿ ಹೋಗುತ್ತದೆ. ಬಾಧೆಗೊಳಗಾದ ಮರದ ಸುಳಿಯನ್ನು ಹೊರಗೆಳೆದಾಗ ಕೆಟ್ಟ ವಾಸನೆ ಹೊರ ಸೂಸುತ್ತಿರುತ್ತದೆ.
ನಿರ್ವಹಣಾ ಕ್ರಮ
ಒಣಗಿದ ಸುಳಿ ಕಂಡ ತಕ್ಷಣ ಕೊಳೆತ ಗರಿಯನ್ನು ತೆಗೆದು ಮರದ ಸುಳಿಯನ್ನು ಸ್ವಚ್ಚವಾದ ನೀರಿನಿಂದ ತೊಳೆದ ನಂತರ ಆ ಭಾಗಕ್ಕೆ ಶೇ. 1ರ ಬೋರ್ಡೊದ್ರಾವಣದಿಂದ ತೊಳೆದು ಶೇ. 10 ರ ಬೋರ್ಡೊ ಮುಲಾಮನ್ನು ಕೊಳೆತ ಭಾಗದಲ್ಲಿ ಲೇಪಿಸಬೇಕು.

2. ಕಾಂಡದಿಂದ ರಸ ಸೋರುವ ರೋಗ
ರೋಗದ ಬಾಧೆಗೊಳಗಾದ ಮರದ ಲಕ್ಷಣಗಳೆಂದರೆ–ಕಂದು ಬಣ್ಣದ ರಸವು ಯಾವುದೇ ಭಾಗದಲ್ಲಾದರೂ (ಕಾಂಡದ ಮೇಲೆ 3 ರಿಂದ 6 ಅಡಿ ಎತ್ತರದವರೆಗೆ) ಬಿರುಕುಗಳಿಂದ ಸೋರುವುದು ಕಂಡು ಬರುತ್ತದೆ. ರೋಗವು ತೀವ್ರವಾದಾಗ ಹೊಸ ಹೊಸ ಬಿರುಕುಗಳು ಉಂಟಾಗಿ ರಸ ಸೋರುವಿಕೆ ಹೆಚ್ಚಾಗುತ್ತದೆ. ನಂತರ ಮರಗಳ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ.
ನಿರ್ವಹಣಾ ಕ್ರಮ
• ಕಾಂಡ ಸೋರುವ ಪ್ರದೇಶವನ್ನು ಹರಿತವಾದ ಉಪಕರಣದಿಂದ ಕೆತ್ತಿ ತೆಗೆದು ಆ ಭಾಗಕ್ಕೆ ಶೇ. 10ರ ಬೋರ್ಡೊ ಪೇಸ್ಟನ್ನು ಲೇಪಿಸಬೇಕು.
• ಮಿ.ಲೀ. ಟ್ರೈಡೆಮಾರ್ಫ ಶಿಲೀಂಧ್ರ ನಾಶಕವನ್ನು 100 ಮಿ.ಲೀ. ನೀರಿನಲ್ಲಿ ಬೆರೆಸಿ ಬೇರಿನ ಮೂಲಕ ಕೊಡಬೇಕು. ಈ ರೀತಿ ಉಪಚಾರ ಮೂರು ತಿಂಗಳಿಗೊಮ್ಮೆ ವರ್ಷದಲ್ಲಿ ನಾಲ್ಕು ಸಲ ಮಾಡಬೇಕು.
• ಶಿಫಾರಸ್ಸು ಮಾಡಿರುವ ರಸಗೊಬ್ಬರಗಳ ಜೊತೆಗೆ ಪ್ರತೀ ಗಿಡಕ್ಕೆ 5 ಕಿ. ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಕೊಡುವುದರಿಂದ ಗಿಡಕ್ಕೆ ರೋಗ ತಡೆದು ಕೊಳ್ಳುವ ಶಕ್ತಿ ಹೆಚ್ಚುತ್ತದೆ.
3. ಅಣಬೆ ರೋಗ
ರೋಗಕ್ಕೆ ತುತ್ತಾದ ತೆಂಗಿನ ಕಾಂಡದ ಕೆಳಭಾಗದಲ್ಲಿ ಅಂದರೆ ನೆಲಮಟ್ಟದಿಂದ ಒಂದರಿಂದ ಮೂರು ಅಡಿ ಎತ್ತರದಲ್ಲಿ ಕಂದು ಬಣ್ಣದ ಅಂಟು ದ್ರವವು ಸೋರುತ್ತದೆ. ಕೆಳಭಾಗದ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ, ಒಣಗಿ ಜೋತು ಬಿದ್ದು ಮರಕ್ಕೆ ಅಂಟಿಕೊಂಡು ನಂತರ ಬಿದ್ದು ಹೋಗುತ್ತದೆ. ಹೀಗೆ ಒಂದೊಂದೇ ಗರಿಗಳು ಬಿದ್ದು ಹೋಗಿ ಕೊನೆಗೆ ಮರ ಸಾಯುತ್ತದೆ. ಮರ ಒಣಗುವುದಕ್ಕೆ ಒಂದೆರಡು ತಿಂಗಳು ಹಿಂದೆಯೇ ಬುಡದ ಮೇಲೆ ಸಣ್ಣ ಸಣ್ಣ ದುಂಡನೆಯ ಅಣಬೆಯ ರಚನೆಗಳು ಕಾಣಿಸಿಕೊಳ್ಳುತ್ತವೆ.
ನಿರ್ವಹಣಾ ಕ್ರಮ
• ರೋಗದಿಂದ ಸಂಪೂರ್ಣ ಹಾಳಾಗಿರುವ ಮರವನ್ನು ಬೇರು ಸಮೇತ ತೆಗೆದು ಹಾಕಬೇಕು.
• ರೋಗವು ಮರದಿಂದ ಮರಕ್ಕೆ ಬೇರುಗಳ ಸಂಪರ್ಕದಿಂದ ಹರಡುವುದರಿಂದ ಅದನ್ನು ತಪ್ಪಿಸಲು ಮರದ ಸುತ್ತಲು ಸುಮಾರು 3 ಅಡಿ ಆಳ ಒಂದು ಅಡಿ ಅಗಲದ ಕಾಲುವೆಗಳನ್ನು ತೆಗೆದು ಆ ಪ್ರದೇಶಕ್ಕೆ 100 ಗ್ರಾಂ. ಕ್ಯಾಪ್ಟಾನ್ ಅಥವಾ 30 ಗ್ರಾಂ. ಥೈರಾಮ್ ಅಥವಾ 10 ಗ್ರಾಂ ಟ್ರೈಡೆಮಾರ್ಫ ದ್ರಾವಣವನ್ನು ಸುಮಾರು 3 ಅಡಿ ಆಳದಲ್ಲಿ ಗುಂಡಾಗೆ ತೆಗೆದ ಕಂದಕದಲ್ಲಿ ಕೊಟ್ಟು ಒಂದು ತಿಂಗಳ ನಂತರ ಮಣ್ಣು ಮುಚ್ಚಬೇಕು.
ರೋಗಕ್ಕೆ ತುತ್ತಾದ ಮರಗಳಿಗೆ ಹೆಕ್ಸಾಕೋನಜೋಲ್ 1 ಮಿ.ಲೀ. ಅಥವಾ ಟ್ರೈಡೆಮಾರ್ಫ್ 5 ಮಿ.ಲೀ. ಯನ್ನು 100 ಮಿ.ಲೀ. ನೀರಿಗೆ ಬೆರೆಸಿ ಮೂರು ತಿಂಗಳೆಗೊಮ್ಮೆ ಬೇರಿನ ಮೂಲಕ ಕೊಡುವುದು.

4. ಎಲೆ ಚುಕ್ಕೆ ರೋಗ
ಈ ರೋಗವು ಮುಖ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರೋಗಕ್ಕೆ ತುತ್ತಾದ ಮರದ ಮುಖ್ಯ ಲಕ್ಷಣಗಳೆಂದರೆ ಕೆಲವು ಕಂದು ಮತ್ತು ಬೂದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಇದರ ತೀವ್ರತೆ ಹೆಚ್ಚಾದಾಗ ಗರಿಗಳೆಲ್ಲಾ ಒಣಗಿ ಹೋಗಿ ಮರದ ಬೆಳವಣಿಗೆ ಹಾಗೂ ಇಳುವರಿಂiÀi ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
ನಿರ್ವಹಣಾ ಕ್ರಮ
ರೋಗದ ಲಕ್ಷಣ ಕಂಡು ಬಂದಾಗ 2 ಗ್ರಾಂ. ಮ್ಯಾಂಕೋಜೆಬ್ ಅಥವಾ 3 ಗ್ರಾಂ. ತ್ರಾಮದ ಆಕ್ಸಿಕ್ಲೋರೈಡ್ ಶಿಲೀಂಧ್ರನಾಶಕವನ್ನು 1ಲೀ. ನೀರಿನಲ್ಲಿ ಕರಗಿಸಿ ಎಲೆಗಳ ಮೇಲೆ ಸಿಂಪಡಿಸಬೀಕು.

ಕೊಯ್ಲು ಮತ್ತು ಇಳುವರಿ
ತಳಿಗೆ ಅನುಗುಣವಾಗಿ ನಾಟಿ ಮಾಡಿದ 4-7 ವರ್ಷಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸುತ್ತವೆ. ಗಿಡ್ಡ ತಳಿಗಳು 4-5 ವರ್ಷಕ್ಕೆ ಫಲಕ್ಕೆ ಬರುತ್ತವೆ. ಪ್ರತಿ ಮರದಿಂದಲೂ ವರ್ಷಕ್ಕೆ ಸರಾಸರಿ 80-100 ಕಾಯಿಗಳನ್ನು ಈ ಕೆಳಗಿನಂತೆ ಪಡೆಯಬಹುದು.
ಉದ್ದ ತಳಿಗಳು – 80-100 ಕಾಯಿಗಳು
ಗಿಡ್ಡ ತಳಿಗಳು – 100-125 ಕಾಯಿಗಳು
ಶಕ್ತಿಮಾನ್ ತಳಿಗಳು – 100-150 ಕಾಯಿಗಳು

ತೆಂಗು ಸಂಸ್ಕರಣೆ ಮತ್ತು ಕೊಬ್ಬರಿ ತಯಾರಿಸುವುದು
ತೆಂಗಿನ ಕಾಯಿಯಿಂದ ಉಂಡೆ ಕೊಬ್ಬರಿ ಮತ್ತು ಹೋಳು ಕೊಬ್ಬರಿಯನ್ನು ತಯಾರಿಸಬಹುದು.
ಉಂಡೆ ಕೊಬ್ಬರಿ: ಚೆನ್ನಾಗಿ ಬಲಿತ ತೆಂಗಿನಕಾಯಿಗಳನ್ನು ಹವೆಯಾಡುವ ಎತ್ತರದ ಜಾಗದಲ್ಲಿ 8 ರಿಂದ 12 ತಿಂಗಳುಗಳ ಕಾಲ ಶೇಖರಿಸಿಡಬೇಕು. ತೊಟ್ಟು ಮೇಲ್ಮುಖ ಮಾಡಿ ಶೇಖರಿಸುವುದು ಅಪೇಕ್ಷಣೀಯ. ಈ ಅವಧಿಯಲ್ಲಿ ಕಾಯಿ ಒಳಗಿರುವ ನೀರನ್ನು ಹೀರಿಕೊಂಡು ಒಣಗುತ್ತದೆ. ಹೀಗೆ ಒಣಗಿದ ಕಾಯಿಯನ್ನು ಅಲುಗಾಡಿಸಿದರೆ ಒಳಗಿನ ಕೊಬ್ಬರಿಯ ಕಟ ಕಟ ಸದ್ದು ಕೇಳಿಸುತ್ತದೆ. ನಂತರ ಸಿಪ್ಪೆ ಸುಲಿದು, ಕವಚವನ್ನು ಒಡೆದು ಉಂಡೆ ಕೊಬ್ಬರಿಯನ್ನು ಹೊರತೆಗೆಯಬಹುದು.
ಹೋಳು ಕೊಬ್ಬರಿ: ಇಲ್ಲಿ ಚೆನ್ನಾಗಿ ಬಲಿತ ತೆಂಗಿನಕಾಯಿಗಳ ಸಿಪ್ಪೆಯನ್ನು ಸುಲಿದು ಎರಡು ಹೋಳುಗಳಾಗಿ ಮಾಡಬೇಕು. ಈ ಹೋಳುಗಳನ್ನು ಬಿಸಿಲಿನಲ್ಲಿ ಅಥವಾ ಡ್ರೈಯರ್‍ನಲ್ಲಿ ಒಣಗಿಸ ಬೇಕು. ಒಣಗಿದ ಕೊಬ್ಬರಿಯಿಂದ ಕವಚ ತಂತಾನೆ ಬೇರ್ಪಡಿಸುತ್ತದೆ. ಹೆಚ್ಚಾಗಿ ಇದನ್ನು ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ.

 

About Vivek Naren

About

Leave a Reply

Your email address will not be published. Required fields are marked *