• Search-Coorg-Media-web

Field Marshal K M Cariappa & General Thimmaiah Forum, Kodagu ಫೀಲ್ಡ್ ಮಾರ್ಷಲ್ ಕೆ.ಎಂ. ಕಾಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ

Field Marshal K M Cariappa & General Thimmaiah Forum, Kodagu
ಫೀಲ್ಡ್ ಮಾರ್ಷಲ್ ಕೆ.ಎಂ. ಕಾಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ

Logo

ಸಂದರ್ಶನ:

ಪ್ರಾಸ್ತಾವಿಕ

ದೇಶ ಕಂಡ ವೀರಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆಗಳ ಅನಾವರಣಕ್ಕೆ ಗೋಣಿಕೊಪ್ಪ ಸಜ್ಜುಗೊಂಡಿದ್ದು, ತಾ. 4 ರಂದು ಭೂ ಸೇನೆಯ ಮಹಾದಂಡನಾಯಕರಾದ ಜನರಲ್ ಬಿಪಿನ್ ರಾವತ್ ಅವರು ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

 ತಾ. 4 ರಂದು ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಇಬ್ಬರು ಸೇನಾನಿಗಳ ಸುಮಾರು ಏಳೂವರೆ ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಜನರಲ್ ಬಿಪಿನ್ ರಾವತ್ ಅವರು ಅನಾವರಣಗೊಳಿಸಲಿದ್ದಾರೆ. ಸೇನಾ ಮುಖ್ಯಸ್ಥರೊಂದಿಗೆ ಏರಿಯಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆನಂದ್, ಸಬ್ ಏರಿಯಾ ಕಮಾಂಡರ್ ಮೇಜರ್ ಜನರಲ್ ಕೆ.ಎಸ್. ನಿಜ್ಜರ್, ಬೆಂಗಳೂರು ಎಂಇಜಿ ಕಮಾಂಡೆಂಟ್ ಬ್ರಿಗೇಡಿಯರ್ ಸಚ್‍ದೇವ್ ಮತ್ತಿತರ ಹಿರಿಯ ಸೇನಾಧಿಕಾರಿಗಳು ಹಾಜರಿರುವರು.

ಬೆಳಿಗ್ಗೆ 10 ಗಂಟೆಯಿಂದ ಸೇನೆಯ ಎಂಇಜಿ ತಂಡ ಕಾರ್ಯಕ್ರಮದ ಸ್ಥಳವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲಿದ್ದಾರೆ. ಸೇನಾ ಮುಖ್ಯಸ್ಥರು ವೇದಿಕೆಯಲ್ಲಿ ಹಾಜರಾಗುವವರೆಗೆ ಸಾಮಾನ್ಯವಾಗಿ ನಡೆಯುವ ಸ್ವಾಗತ,  ಪರಿಚಯ ಇತ್ಯಾದಿ ಪÀÇರ್ವಭಾವಿ ಕಾರ್ಯಕ್ರಮಗಳು ನಡೆಯುತ್ತದೆ. ನಂತರ ಸೇನಾ ಮುಖ್ಯಸ್ಥರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನಿಂದ ಪ್ರತಿವರ್ಷ ಸಾಧಕರಿಗೆ ನೀಡಲಾಗುವ ಚಿನ್ನದ ಪದಕವನ್ನು (ಜೀವಮಾನದ ಸಾಧನೆ) ಸೇನಾ ಮುಖ್ಯಸ್ಥರು ಪ್ರಧಾನ ಮಾಡಲಿದ್ದಾರೆ. ವೀರ ಸೇನಾನಿಗಳಾದ ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರ ಬದುಕು, ಸೇವೆ, ಸಾಧನೆಗಳ ಫೋಟೋ ಪ್ರದರ್ಶನವನ್ನು ಕೂಡ ಆಯೋಜಿಸಲಾಗಿದ್ದು, ಬೆಳಗ್ಗೆ 9 ಗಂಟೆಯಿಂದ 9.45ರವರೆಗೆ ಸಾರ್ವಜನಿಕರು ವೀಕ್ಷಿಸಬಹುದಾಗಿದೆ . ವಿಶ್ವಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡಿದ ಸಾಧಕರುಗಳ ನೆನಪÀÅ ಸಮಾಜದಲ್ಲಿ ಪ್ರತಿನಿತ್ಯ ಇರಬೇಕು. ನಿರಂತರ ಸ್ಮರಣೆ, ಚಿಂತನೆ ಮತ್ತು ಪ್ರೇರಣೆಯ ಮೂಲಕ ಯುವಜನರಿಗೆ ಸ್ಫೂರ್ತಿಯ ನೆಲೆಯಾಗಬೇಕು ಎನ್ನುವ ಉದ್ದೇಶವನ್ನು ಹೊಂದಿ ಇಬ್ಬರು ಸೇನಾನಿಗಳ ಪ್ರತಿಮೆಗಳನ್ನು ಅನಾವರಣಗೊಳಿಸಲಾಗುತ್ತಿದ್ದು, ಸೈನಿಕರ ನಾಡು ಎಂಬ ಪುಟ್ಟ ಕೊಡಗಿನ ಕೀರ್ತಿ ಪತಾಕೆ ಭವಿಷ್ಯದಲ್ಲಿ ಆಗಸದೆತ್ತರಕ್ಕೆ ಹಾರಾಡಬೇಕೆನ್ನುವದೆ ನಮ್ಮ ಗುರಿಯಾಗಿದೆಯೆಂದು ಕಂಡ್ರತಂಡ ಸಿ. ಸುಬ್ಬಯ್ಯ ತಿಳಿಸಿದರು.

ಕೆ.ಎಂ.ಕಾರ್ಯಪ್ಪಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ಶಿಫಾರಸ್ಸು: ಬಿಪಿನ್ ರಾವತ್
ಮಡಿಕೇರಿ ನ.04:-ರಾಷ್ಟ್ರದ ಪ್ರಥಮ ಸೇನಾ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಭಾರತೀಯ ಭೂ ಸೇನೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರು ತಿಳಿಸಿದ್ದಾರೆ.
ಗೋಣಿಕೊಪ್ಪದ ಕಾವೇರಿ ಕಾಲೇಜಿನ ಆವರಣದಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಕಂಚಿನ ಪ್ರತಿಮೆಯನ್ನು ಸೇನಾ ಗೌರವಗಳೊಂದಿಗೆ ಶನಿವಾರ ಅನಾವರಣ ಮಾಡಿ ಅವರು ಮಾತನಾಡಿದರು.
ಭಾರತೀಯ ಸೇನಾ ಕ್ಷೇತ್ರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಧ್ರುವ ತಾರೆಗಳಿದ್ದಂತೆ. ಭಾರತೀಯ ಸೇನೆಯಲ್ಲಿ ಈ ಇಬ್ಬರು ಮಹಾನ್ ದಂಡನಾಯಕರು ದೇಶದ ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಬಿಪಿನ್ ರಾವತ್ ಅವರು ಶ್ಲಾಘಿಸಿದರು.
ಸ್ವಾತಂತ್ರ್ಯ ನಂತರ ರಾಷ್ಟ್ರದ ಸಂದಿಗ್ಧ ಪರಿಸ್ಥಿತಿ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರು ರಾಷ್ಟ್ರದ ರಕ್ಷಣೆಗೆ ಶ್ರಮಿಸಿದ್ದಾರೆ. ಇವರ ಧೈರ್ಯ ಸಾಹಸ ಪ್ರೌಡಿಮೆಯನ್ನು ಮೆಚ್ಚಬೇಕು ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಧೈರ್ಯ, ಸಾಹಸಮಯ ಸೇನಾ ಕಾರ್ಯಗಳು ಮೆಚ್ಚುವಂತದ್ದು, ಕಾರ್ಯಪ್ಪ ಮತ್ತು ತಿಮ್ಮಯ್ಯ ಅವರು ಭಾರತೀಯ ಸೇನೆಗೆ ಮಾದರಿ ಎಂದ ಅವರು ಈಗಾಗಲೇ ದೆಹಲಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹೆಸರನ್ನು ಕವಾಯತು ಮೈದಾನಕ್ಕೆ ಇಡಲಾಗಿದೆ ಎಂದು ಅವರು ವಿವರಿಸಿದರು.
ಯುವ ಜನರು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಭಾರತೀಯ ಸೇನೆಯಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿದ್ದು, ಯುವ ಜನರು ಸೇನೆಗೆ ಸೇರುವಂತಾಗಬೇಕು. ಆ ನಿಟ್ಟಿನಲ್ಲಿ ಯುವ ಜನರು ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಬಿಪಿನ್ ರಾವತ್ ಅವರು ನುಡಿದರು.
ಸೇನೆಯಲ್ಲಿ ಆರೋಗ್ಯ, ಶಿಕ್ಷಣ, ಕ್ಯಾಂಟೀನ್ ಹೀಗೆ ಹಲವು ರೀತಿಯ ಸೌಲಭ್ಯಗಳಿದ್ದು, ಅವುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಭೂ ಸೇನೆಯ ಮುಖ್ಯಸ್ಥರು ತಿಳಿಸಿದರು.
ಜನರಲ್ ಕೆ.ಎಸ್. ತಿಮ್ಮಯ್ಯ ಮ್ಯೂಸಿಯಂಗೆ ಭಾರತೀಯ ಭೂ ಸೇನಾ ವಿಭಾಗದಿಂದ 10 ಲಕ್ಷ ರೂ. ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಭಾರತೀಯ ಸೇನೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅವರನ್ನು ಇದೇ ಸಂದರ್ಭದಲ್ಲಿ ಜನರಲ್ ಬಿ.ಸಿ.ನಂದ(ನಿವೃತ್ತ) ಅವರು ಪೀಚೆಕತ್ತಿ ನೀಡಿ ಗೌರವಿಸಿದರು. ಕಂಜಿತಂಡ ಅಯ್ಯಪ್ಪ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಲೆಪ್ಟಿನೆಂಟ್ ಜನರಲ್ ಸೋಮಣ್ಣ ಅವರು ಮಾತನಾಡಿದರು.
ಜನರಲ್ ಆನಂದ್, ಮೇಜರ್ ಜನರಲ್ ಶಿಷಾರ್, ಆರ್.ಕೆ.ಸತ್ಯದೇವ್, ಕರ್ನಲ್ ರಾಮಚಂದ್ರನ್, ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಇತರರು ಇದ್ದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ಕಂಡ್ರತಂಡ ಸುಬ್ಬಯ್ಯ ಅವರು ಸ್ವಾಗತಿಸಿದರು. ಮೇಜರ್ ನಂಜಪ್ಪ ಅವರು ನಿರೂಪಿಸಿದರು.

ವ್ಯವಸ್ಥಾಪನ ಸಮಿತಿ

ಸಂಚಾಲಕರು: ಮೇಜರ್ ಬಿದ್ದಂಡ ನಂದ ನಂಜಪ್ಪ
ಮೊ: 9448184559
ಅಧ್ಯಕ್ಷರು: ಕರ್ನಲ್ ಕರ್ತಂಡ ಸಿ. ಸುಬ್ಬಯ್ಯ
ಮೊ: 9900328485
ಉಪಾಧ್ಯಕ್ಷರು: ಮಾಚಿಮಾಡ ಎಂ, ರವೀಂದ್ರ
ಮೊ: 9632230079
ಕಾರ್ಯದರ್ಶಿ: ಶ್ರೀ ಉಳ್ಳಿಯಡ ಎಂ. ಪೂವಯ್ಯ
ಮೊ: 9448720168

ಚಿತ್ರಶಾಲೆ

ಸಂಪರ್ಕಿಸಿ

One Comment

  1. Good photo gallery

Leave a Reply

Your email address will not be published. Required fields are marked *