KANOORU ಕಾನೂರು

ಕಾನೂರು - KANOORU

ವಿರಾಜಪೇಟೆಯಿಂದ ಕುಟ್ಟ-ಮಾನಂದವಾಡಿ ಹೆದ್ದಾರಿ ರಸ್ತೆಯಲ್ಲಿ ಪೊನ್ನಂಪೇಟೆಯಿಂದ-ಕುಟ್ಟ
ಹೋಗುವ ಮಾರ್ಗದಲ್ಲಿ 11ಕಿ.ಮೀ ದೂರದಲ್ಲಿ ಕಾನೂರು ಗ್ರಾಮ ಪಂಚಾಯ್ತಿ ಇದ್ದು,ಈ ಗ್ರಾಮ
ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾನೂರು,ಕೋತೂರು,ಹಾಗೂ ಬೆಕ್ಕೆಸೊಡ್ಲೂರು ಎಂಬ 3 ಗ್ರಾಮಗಳನ್ನು ಹೊಂದಿರುತ್ತದೆ. ಈ ಪಂಚಾಯ್ತಿಯು 3 ಉಪ-ಗ್ರಾಮಗಳನ್ನು ಹೊಂದಿದೆ. ಈ ಪಂಚಾಯ್ತಿಯು ಅಂದಾಜು 10,000 ಹೆಕ್ಟೇರ್ ವ್ಯಾಪ್ತಿ ಪ್ರದೇಶವನ್ನು ಹೊಂದಿದೆ.
ಈ ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಡವರು,ಅಮ್ಮಕೊಡವರು,ಮುಸ್ಲಿಂಮರು ವಕ್ಕಲಿಗರು ಸಹಬಾಳ್ವೆಯಲ್ಲಿ ಬಾಳುವೆ ನಡೆಸುತ್ತಿದ್ದಾರೆ.ಕಾನೂರು ಗ್ರಾಮಪಂಚಾಯ್ತಿಯ70%ಜನ ಕೃಷಿಕರಾಗಿದ್ದು,ಬಾಕಿ 20% ಜನ ಕೂಲಿ ಕೆಲಸವನ್ನುಅವಲಂಬಿಸಿರುತ್ತಾರೆ.ಉಳಿದ 10%ಜನರು ವ್ಯಾಪಾರವನ್ನು ಅವಲಂಬಿಸಿದ್ದಾರೆ. ಕಾನೂರು ಗ್ರಾಮ ಪಂಚಾಯ್ತಿಯಿಂದ 2 ಕಿ.ಮೀ ದೂರದಲ್ಲಿ ಬೆಕ್ಕೆಸೊಡ್ಲೂರು ಗ್ರಾಮವಿದ್ದು, ಇಲ್ಲಿ ಹೆಸರು ವಾಸಿಯಾದ ಮಂದತ್ತವ್ವ ದೇವಸ್ಥಾನವಿದೆ.ಇಲ್ಲಿ 3 ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷ ಡಿಸಂಬರ್ ತಿಂಗಳಲ್ಲಿ ಕೋಲುಮಂದು ಕೂಡ ನಡೆಯುತ್ತದೆ.ಇಲ್ಲಿಗೆ ಅಪಾರ ಸಂಖ್ಯೆ ಯಲ್ಲಿ ಜನರು ಬರುತ್ತಾರೆ. ಹಾಗೆಯೇ ಕೋತೂರು ಗ್ರಾಮ ದಲ್ಲಿ ಮಾರಮ್ಮ ದೇವಸ್ಥಾನವಿದ್ದು,ಇಲ್ಲಿ 3ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ.ಪ್ರತಿವರ್ಷ ಮೇ ತಿಂಗಳ ಮೊದಲ ವಾರದಲ್ಲಿ ಕಾಟಿ ಹಬ್ಬ ನಡೆಯುತ್ತದೆ.ಹಾಗೆಯೇ ಕಾನೂರು ಗ್ರಾಮದಲ್ಲಿ ಮಹಾವಿಷ್ಣು ದೇವಸ್ಥಾನ ಕೂಡಾ ಇದ್ದು,ಇಲ್ಲಿ ದೇವರಿಗೆ ನವಂಬರ್ ತಿಂಗಳಿನಲ್ಲಿ ಕಾರ್ತೀಕ ಪೂಜೆ ನಡೆಯುತ್ತದೆ.ಇಲ್ಲಿನ ದೇವಾಲಯದ ವೈಶಿಷ್ಟ್ಯವೆಂದರೆ,ಸುಂದರ ಕೆತ್ತನೆಯ ಮಹಾವಿಷ್ಣು ಮೂರ್ತಿ.ಹಾಗೆಯೇ ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವರ್ಷಂಪ್ರತಿ ಗೌರಿ-ಗಣೇಶ ಹಬ್ಬವನ್ನು ಜನರು ವಿಜೃಂಭಣೆಯಿಂದ ಆಚರಿಸುತ್ತಾರೆ. ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ 10 ದಿನಗಳ ವರೆಗೆ ಭಾದ್ರಪದ ಮಾಸದಲ್ಲಿ ಪೂಜಿಸಿ ನಂತರ ವಿಸರ್ಜಿಸುತ್ತಾರೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಚಂದ್ರ ಜೆ ಅರ್ President 8050143490
  2. ರೀಟಾ ಸಿ.ವಿ Vice President 8105789590
  3. ಸುಕಪ್ರಿಯ ಪಿ ಎಲ್ Member 9880299601
  4. ರಮೇಶ Member 9901098609
  5. ಮುಕ್ಕಾಟೀರ ಬಿ ಬಿದ್ದಪ್ಪ Member 9886653576
  6. ಲಕ್ಷ್ಮಿ Member 8105723373
  7. ಸಿ ಡಿ ಬೋಪಣ್ಣ Member 9108292940
  8. ರಾಧ ಪಿ ಆರ್ Member 7349308836
  9. ಕಾವೇರಿ ಪಂಜರ ಎರವರ Member 8971134388

ಪಂಚಾಯ್ತಿ ಸಂಪರ್ಕ

ವಿಳಾಸ:  ಕಾನೂರು ಗ್ರಾಮ ಮತ್ತು ಅಂಚೆ ವಿರಾಜಪೇಟೆ ತಾಲ್ಲೂಕು ದಕ್ಷಿಣ ಕೊಡಗು.
Tel: 08274-235526
Pdo:
Mob: 

Email: gpkanoor@gmail.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಲತಾಕುಮಾರಿ ಬಿ ಸಿ President 9449998614
  2. ಗೀತಾ ಹೆಚ್ ಎ Vice President 9481482585
  3. ಎಸ್ ಎನ್ ದೀಪಕ್ ಮೊಣ್ಣಪ್ಪ Member 9448027884
  4. ಕೆ ಎಸ್ ಬೋಪಣ್ಣ Member 9449147100
  5. ಶಿಲ್ಪ ಎಸ್ ಎ Member 9480747721
  6. ಬೊಳಚ್ಚಿ ಪಿ ಎಂ Member 9480747721
  7. ಜೆ ಆರ್ ಅನಿತ Member 9480670419
  8. ಎರವರ ಎಂ ಅಯ್ಯಪ್ಪ Member 9483084688
  9. ನಾಚಪ್ಪ ಕೆ ಎನ್ Member 9448813933
  10. ಕಾವೇರಿ ಪಿ ಜೆ Member 9482629663
  11. ಚೋಮ ಪಿ ಸಿ Member 9480731299
  12. ಸುರೇಶ್ ಕೆ ಆರ್ Member 9448721534
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.