KUDIGE ಕೂಡಿಗೆ

ಕೂಡಿಗೆ - KUDIGE

ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ, ಕೂಡಿಗೆ ಗ್ರಾಮ ಪಂಚಾಯಿತಿಯು ತಾಲ್ಲೂಕು ಕೇಂದ್ರದಿಂದ 21 ಕಿ.ಮೀ ದೂರದಲ್ಲಿರುತ್ತದೆ. ರಾಜ್ಯ ಹೆದ್ದಾರಿ ಸುಮಾರು 8 ಕಿ.ಮೀ, ಜಿಲ್ಲಾ ಹೆದ್ದಾರಿ 10 ಕಿ.ಮೀ, ಇತರೆ ಜಿಲ್ಲಾ ಹೆದ್ದಾರಿ 25 ಕಿ.ಮೀ ಸುತ್ತುವರಿದಿದೆ. ಕೂಡಿಗೆ ಗ್ರಾಮದಲ್ಲಿ ಕಾವೇರಿ ನದಿ ಹಾಗೂ ಹಾರಂಗಿ ನದಿ ಸಂಗಮವಾಗಿರುವ ಸ್ಥಳವಾಗಿರುವುದರಿಂದ ಕೂಡಿಗೆ ಎಂಬ ಹೆಸರು ಬಂದಿರುತ್ತದೆ.2001ರ ಜನಗಣತಿಯ ಪ್ರಕಾರ 5529 ಜನ ಸಂಖ್ಯೆಯನ್ನು ಹೊಂದಿದೆ.ಒಟ್ಟು ಕುಟುಂಬ 1542 ಇದ್ದು, ಇದರಲ್ಲಿ ಪುರುಷರು 2733 ಹಾಗೂ ಮಹಿಳೆಯರು 2796 ಇರುತ್ತಾರೆ. ಈ ಕುಟುಂಬಗಳು ಕೃಷಿಯಾಧರಿತ ಕುಟುಂಬಗಳಾಗಿರುತ್ತವೆ.ಕೃಷಿ ಕಾರ್ಮಿಕ, ಕುಶಲ ಕಾರ್ಮಿಕ ಹಾಗೂ ಇತರೆ ಕೃಷಿ ಅವಲಂಬಿತ ಕಾರ್ಮಿಕರಾಗಿರುತ್ತಾರೆ.ಸರ್ವ ಕುಟುಂಬ ಸಮೀಕ್ಷೆಯ ಪ್ರಕಾರ 819 ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಾಗಿರುತ್ತವೆ. ಕೂಡಿಗೆ ಎಂಬ ಗ್ರಾಮದಲ್ಲಿ ಗುರುತಿಸಿಕೊಂಡಿರುವ ಎಲ್ಲಾ ಸಂಸ್ಥೆಗಳಾದ ಕ್ರೀಡಾ ಶಾಲೆ, ಕೂಡಿಗೆ ಡೈರಿ, ಸ.ಹಿ.ಪ್ರಾ ಶಾಲೆ, ಕೃಷಿ ತರಭೇತಿ ಕೇಂದ್ರ, ಸೈನಿಕ ಶಾಲೆ,ಶಿಕ್ಷಕರ ತರಭೇತಿ ಕೇಂದ್ರ, ರೇಷ್ಮೆ ಇಲಾಖೆ ,ಹಸು ಸಾಕಾಣಿಕೆ ಕೇಂದ್ರ, ಹಂದಿ ಸಾಕಾಣಿಕೆ ಕೇಂದ್ರ, ಕೋಳಿ ಸಾಕಾಣಿಕೆ ಕೇಂದ್ರ, ಸಹಕಾರ ಬ್ಯಾಂಕ್ , ಕರ್ನಾಟಕ ಬ್ಯಾಂಕ್ , ಕೆನರಾ ಬ್ಯಾಂಕ್ ಹೀಗೆ ಹಲವಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇದು ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಸೇರಿದ ಬಸವನತ್ತೂರು ಗ್ರಾಮದಲ್ಲಿರುತ್ತದೆ. ಆದರೆ ಕೂಡಿಗೆ ಗ್ರಾಮದಲ್ಲಾಗಲೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಾಗಲೀ ಇರುವುದಿಲ್ಲ. ಇದು ಕೂಡಿಗೆ ಗ್ರಾಮದ ಜನತೆಗೆ ವಿಷಾದನೀಯ ಸಂಗತಿಯಾಗಿರುತ್ತದೆ.
ಕೂಡಿಗೆ ಪಂಚಾಯಿತಿಯ ಕೂಡಿಗೆ ಒಂದೇ ಕಂದಾಯ ಗ್ರಾಮವಾಗಿದ್ದು, 8 ಉಪಗ್ರಾಮಗಳನ್ನು ಹೊಂದಿರುತ್ತದೆ. ಕೂಡಿಗೆ, ಹೆಗ್ಗಡಳ್ಳಿ, ಮಲ್ಲೇನಹಳ್ಳಿ, ಭುವನಗಿರಿ, ಸೀಗೆಹೊಸೂರು, ಶಿರಹೊಳಲು(ಮದಲಾಪುರ), ಬ್ಯಾಡಗೊಟ್ಟ, ಹುದುಗೂರು (ಕಾಲಿದೇವರಹೊಸೂರು). 8 ಗ್ರಾಮಗಳನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಹಾರಂಗಿ ನದಿಯು ಕೂಡಿಗೆ ಗ್ರಾಮದಲ್ಲಿ ಹರಿಯುತ್ತಿದ್ದು, ಹಾರಂಗಿ ನಾಲೆಯು ಊರಿನೊಳಗೆ ಇದ್ದು, ಇದರಿಂದ ಗ್ರಾಮದ ಜನರಿಗೆ ನೀರಿನ ಸೌಲಭ್ಯ ಒದಗಿದ್ದು ಭತ್ತ ಹೆಚ್ಚಾಗಿ ಬೆಳೆಯುತ್ತಾರೆ. ಇದರ ಜೊತೆಯಲ್ಲಿ ಶುಂಠಿ, ಜೋಳ, ರಾಗಿಯನ್ನು ಸಹ ಉಪ ಬೆಳೆಗಳಾಗಿ ಬೆಳೆಯಲಾಗುತ್ತದೆ. ಎಲ್ಲಾ ಕೃಷಿಕರಾಗಿರುವುದರಿಂದ ಹೈನುಗಾರಿಕೆ ಹೆಚ್ಚಾಗಿದ್ದು, 3 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು (ಎರಡು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳು). ಹಾಲಿನ ಉತ್ಪನ್ನದಿಂದ ಆರ್ಥಿಕ ಸ್ಥಿತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಪಕ್ಕದಲ್ಲಿ ಖಾಸಗಿ ಕಾಫಿ ಕ್ಯೂರಿಂಗ್ ವಕ್ಸ್ ಇರುವುದರಿಂದ ಅಲ್ಲಿಗೆ ಕಾರ್ಮಿಕರು ಹೋಗುತ್ತಾರೆ.
ಈ ಗ್ರಾಮ ಭೌಗೋಳಿಕವಾಗಿ 3674 ಹೆಕ್ಟೇರ್ ಇದ್ದು,ಇದರಲ್ಲಿ 2733 ಹೆಕ್ಟೇರ್ ಸಾಗುವಳಿಗೆ ಯೋಗ್ಯವಾಗಿಯೂ 330 ಹೆಕ್ಟೇರ್ ಸಾಗುವಳಿಗೆ ಯೋಗ್ಯವಲ್ಲದ ಭೂಮಿಯಾಗಿದೆ.282 ಹೆಕ್ಟೇರ್ ಅರಣ್ಯ ಪ್ರದೇಶವಿರುತ್ತದೆ.ಗ್ರಾಮದಲ್ಲಿ ಒಟ್ಟು 593 ಕೃಷಿಕ ಕುಟುಂಬಗಳು 1117 1/2 ಹೆಕ್ಟೇರ್ ನಲ್ಲಿ ಭತ್ತ ಮತ್ತು ಉಳಿಕೆ ಪ್ರದೇಶದಲ್ಲಿ ರಾಗಿ,ಜೋಳ ಬೆಳೆಗಳನ್ನು ಬೆಳೆಯಲಾಗಿದೆ.
ಕೃಷಿ ಬೆಳೆಗಳು:- ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ 1117 1/2 ಹೆಕ್ಟೇರ್ ಭೂಮಿಯಲ್ಲಿ ನಾಲೆ ನೀರು ಆಶ್ರಯದಲ್ಲಿ ಭತ್ತ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಹಾಗೂ ಮಳೆ ಪ್ರಮಾಣದಲ್ಲಿ ಏರಿಳಿತವಾಗುತ್ತಿರುವುದರಿಂದ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಬಹುವಾರ್ಷಿಕ ಬೆಳೆಯಾದ ಶುಂಠಿ ಬೆಳೆಗೆ ಹೆಚ್ಚಿನ ಗಮನ ನೀಡುತ್ತಿರುವುದು ಕಂಡು ಬರುತ್ತಿದೆ.
ಶಿಕ್ಷಣ:- ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ವತಿಯಿಂದ 1 ಕಿರಿಯ ಪ್ರಾಥಮಿಕ ಶಾಲೆ, 3 ಹಿರಿಯ ಪ್ರಾಥಮಿಕ ಶಾಲೆ, 1 ಪ್ರೌಢಶಾಲೆಗಳಿದ್ದು, 12 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಆರೋಗ್ಯ:- ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಕಿರಿಯ ಮಹಿಳಾ ದಾದಿಯರ ಜೊತೆಗೆ 4 ಮಂದಿ ಆಶಾ ಕಾರ್ಯಕರ್ತೆಯರು ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುತ್ತಾರೆ.
ಸಾರಿಗೆ ವ್ಯವಸ್ಥೆ:- ಗ್ರಾಮ ಪಂಚಾಯಿತಿಯು ರಾಜ್ಯ ಹೆದ್ದಾರಿಯಿಂದ ಜಿಲ್ಲೆಯಲ್ಲಿನ 3 ತಾಲ್ಲೂಕುಗಳನ್ನು ಬೆಸೆಯುವ ರಾಜ್ಯ ಮಾರ್ಗವಾಗಿದ್ದು (ಮೈಸೂರು,ಮಂಗಳೂರು,ಹಾಸನ ಸಂಪರ್ಕ ಕಲ್ಪಿಸುವ)ಪ್ರತಿ 15 ನಿಮಿಷಕ್ಕೆ ತಾಲ್ಲೂಕು ಕೇಂದ್ರಗಳಿಗೆ ಖಾಸಗಿ ಹಾಗೂ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆ ಇರುವುದು. ಗ್ರಾಮದಲ್ಲಿ ಅಂದಾಜು 32 ಕಿ.ಮೀ ಗಳಷ್ಟು ಡಾಂಬರೀಕರಣದ ರಸ್ತೆಗಳಿದ್ದು, ಇದರಲ್ಲಿ ಸುಮಾರು 10 ಕಿ.ಮೀ ನಷ್ಟು ಸರಕಾರದ ವಿವಿಧ ಯೋಜನೆಯಲ್ಲಿ ಡಾಂಬರೀಕರಣಗೊಳಿಸಲಾಗಿದೆ.
ಸೇವೆಗಳು:- ಸೇವೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವುದಿಲ್ಲ. ಪಕ್ಕದಲ್ಲಿ ಕೂಡಿಗೆ ಎಂದು ಗುರುತಿಸಿರುವ ಸೇವೆಗಳಾದ 2 ರಾಷ್ಟ್ರೀಕೃತ ಬ್ಯಾಂಕ್ ಮತ್ತು 1 ಸೇವಾ ಸಹಕಾರ ಬ್ಯಾಂಕ್ ಗಳಿದ್ದು, ರೈತರ ಮತ್ತು ವ್ಯಾಪಾರಸ್ಥರ ಬೇಕು ಬೇಡಿಕೆಗಳಿಗೆ ಸ್ಪಂದಿಸುತ್ತಿದೆ.2 ನ್ಯಾಯ ಬೆಲೆ ಅಂಗಡಿಗಳ ಮೂಲಕ ಗ್ರಾಮದ ಜನರಿಗೆ ಪಡಿತರ ವಸ್ತುಗಳನ್ನು ವಿತರಿಸಲಾಗುತ್ತಿದೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಮಂಗಳ President 9741863072
  2. ಮೋಹಿನಿ Vice President 8050743870
  3. ಕೆ ಟಿ ಗಿರೀಶ Member 9945034695
  4. ಅನಂತ ಎಸ್ ಎನ್ Member 9901269221
  5. ರತ್ನಮ್ಮ Member 9480865008
  6. ಲಕ್ಷ್ಮಿ Member 7259645766
  7. ವಾಣಿ ಕೆ ಎಸ್ Member 8310044181
  8. ಪಲ್ಲವಿ ಬಿ ಎ Member 8904446944
  9. ಹೆಚ್ ಆರ್ ಚಂದ್ರ Member 4684648966
  10. ಜಯಶ್ರೀ Member 9980952106
  11. ಜಯಶೀಲ ಎಮ್ ಎಸ್ Member 7259581831
  12. ಅರುಣ್ ರಾವ್ ಎಸ್ ಆರ್ Member 9480083330
  13. ಶಿವಕುಮಾರ್ ಕೆ ಎಸ್ Member 9880546534

ಪಂಚಾಯ್ತಿ ಸಂಪರ್ಕ

ವಿಳಾಸ: ಕೂಡಿಗೆ ಗ್ರಾಮ ಪಂಚಾಯಿತಿ, ಕೂಡಿಗೆ ಗ್ರಾಮ, ಕೂಡಿಗೆ ಅಂಚೆ ಕುಶಾಲನಗರ ಹೋಬಳಿ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
Tel: 08276-278026
Pdo:
Mob: 

Email: som.kudige@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಕೂಡಿಗೆ: 08276 278037
  • ಸರಕಾರಿ ಹೋಮಿಯೋಪತಿ ಆಸ್ಪತ್ರೆ ಕೂಡಿಗೆ: 08272 278037

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

  •  Section Officer – Kudige
    Sri. Basavaraj.K
    9449598613
    sokudige@cescmysore.org

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಪ್ರೇಮಲೀಲಾ President 9449240310
  2. ಗಿರೀಶ್ ಕುಮಾರ್ ಕೆ.ಟಿ. Vice President 9945034695
  3. ಮಂಜಯ್ಯ ಕೆ ಜೆ Member 9740594892
  4. ರಾಮಚಂದ್ರ ಕೆ ಬಿ Member 8197779129
  5. ಧನ್ಯ ಕೆ ಎ Member 9880269330
  6. ಕಲ್ಪನ ಟಿ ಆರ್ Member 9980260127
  7. ಮೋಹಿನಿ Member 8050743870
  8. ಜಯಶ್ರೀ ವಿ Member 9980952106
  9. ಪುಷ್ಪ Member 9686016404
  10. ರವಿ ಕೆ ವೈ Member 9742732620
  11. ರವಿ ಹೆಚ್ ಎಸ್ Member 9900797294
  12. ಟಿ.ಕೆ.ವಿಶ್ವನಾಥ Member 9945132633
  13. ಈರಯ್ಯ ಕೆ ಟಿ Member 9481772735
  14. ರತ್ನಮ್ಮ Member 9632397509
  15. ಚಂದ್ರಿಕಾ Member 9611852869
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.