History of Dasara in Kodagu Coorg ಕೊಡಗಿನಲ್ಲಿ ನವರಾತ್ರಿ ಉತ್ಸವ ಇತಿಹಾಸದ ಪುಟಗಳಿಂದ

ಕೊಡಗಿನಲ್ಲಿ ನವರಾತ್ರಿ ಉತ್ಸವ ಇತಿಹಾಸದ ಪುಟಗಳಿಂದ

 ನವರಾತ್ರಿ ಉತ್ಸವವನ್ನು ಕೊಡಗಿನ ಹಲವಾರು ಭಾಗಗಳಲ್ಲಿ ಭಗವತಿ, ಭದ್ರಕಾಳಿ, ಚಾಮುಂಡಿ, ಶ್ರೀಕೃಷ್ಣ, ಶಿವ, ಗಣಪತಿ, ರಾಮನ ಕ್ಷೇತ್ರಗಳಲ್ಲಿ ನಡೆಯಲ್ಪಡುತ್ತಿತ್ತು ಎಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

*ಗಂಗ ರಾಜವಂಶದ ಕಾಲದಲ್ಲಿ ಕೊಡಗಿನ ನವರಾತ್ರಿ ಉತ್ಸವ

ಒಂದು ಅಂದಾಜಿನ ಪ್ರಕಾರ ಕೊಡಗು ಪ್ರಾಂತ್ಯದಲ್ಲಿ ತಮ್ಮ ಆಡಳಿತವನ್ನು ನಡೆಸುತ್ತಿದ್ದ ಗಂಗ ರಾಜವಂಶರ ಕಾಲದಲ್ಲಿ ಅಂದರೆ ಸರಿ ಸುಮಾರು 1700 ವರ್ಷಗಳ ಹಿಂದಿನಿಂದಲೂ ಇಲ್ಲಿ ನೆಲೆಸಿರುವ ಯಾದವ ವಂಶಸ್ಥರು ಶ್ರೀ ಕೃಷ್ಣನ ದೇವಾಲಯಗಳಲ್ಲಿ ನವರಾತ್ರಿ ಉತ್ಸವಗಳನ್ನು ಮಾಡುತ್ತಿದ್ದರೆಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ಆಗಿನ ಕಾಲಗಟ್ಟದಲ್ಲಿ ಶ್ರೀ ಕೃಷ್ಣನ ದೇವಾಲಯಗಳು ಕೊಡಗು ಪ್ರಾಂತ್ಯದಾದ್ಯಂತ ಇದ್ದಿರಬಹುದೆಂದು ಇತಿಹಾಸಕಾರರು ಅಭಿಮತ ವ್ಯಕ್ತಪಡಿಸಿದ್ದಾರೆ. ಆಗಿನ ಕಾಲದಲ್ಲಿ ಅಸ್ಥಿತ್ವದಲ್ಲಿದ್ದಂತಹ ಶ್ರೀಕೃಷ್ಣದೇವಾಲಯವು ಚೇರಂಬಾಣೆಯ ಸಮೀಪ ಕೊಟ್ಟೂರು ಎಂಬಲ್ಲಿರುವ ‘ಶ್ರೀ ಗೋಪಾಲಕೃಷ್ಣ’ ದೇವಾಲಯವು ಒಂದು ಎಂದು ಹಾಗೇನೆ ಅಯ್ಯಂಗೇರಿ ಸಮೀಪವಿರುವ ‘ಚಿನ್ನತ್ತಪ್ಪ’ ದೇವಾಲಯವು ಒಂದು ಎಂದು ಅಂದಾಜಿಸಲಾಗಿದೆ.

*ಚೆಂಗಾಳ್ವ ರಾಜರ ಕಾಲದಲ್ಲಿ ಕೊಡಗಿನ ನವರಾತ್ರಿ ಉತ್ಸವ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗಂಗರ ಕಾಲದ ನಂತರ ಚೆಂಗಾಳ್ವ ರಾಜವಂಶವು ಅತ್ಯಂತ ದೀರ್ಘಕಾಲ ಅಂದರೆ ಹತ್ತರಿಂದ ಹದಿನೇಳನೇ ಶತಮಾನ (700) ವರ್ಷಗಳವರೆಗೆ ಕೊಡಗಿನಲ್ಲಿ ತಮ್ಮ ಆಡಳಿತವನ್ನು ನಡೆಸಿದ್ದರು. ಈ ಚೆಂಗಾಳ್ವ ರಾಜ ವಂಶವು ತಾವು ಚಂದ್ರವಂಶದ ಯಾದವರೆಂದು ಹೇಳಿಕೊಳ್ಳುತ್ತಿದ್ದರು. ಇವರು ಕನ್ನಡ, ತೆಲುಗು, ಸಂಸ್ಕøತ ಭಾಷೆಗಳನ್ನಾಡುತ್ತಿದ್ದರೆಂದು ತಿಳಿದು ಬಂದಿದೆ.

*ವಿಜಯ ನಗರ ಅರಸರ ಕಾಲದಲ್ಲಿ ಕೊಡಗಿನ ನವರಾತ್ರಿ ಉತ್ಸವ

ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಸೃಷ್ಠಿಸಿ ವಿಜಯ ನಗರ ಸಾಮ್ರಾಜ್ಯವನ್ನು ಕಟ್ಟಿ ವೈಭವದಿಂದ ಮೆರೆದವರು ವಿಜಯ ನಗರದ ಅರಸರು. ಅವರ ಕಾಲದಲ್ಲಿ ಆ ಕಾಲದಲ್ಲಿ ಆರಂಭಗೊಂಡು ಆಚರಿಸ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ಮೆರಗನ್ನು ತಂದುಕೊಟ್ಟಿತು. ವಿಜಯ ನಗರ ಅರಸರಲ್ಲೇ ಅತೀ ಹೆಚ್ಚು ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಯಲಗಳಲ್ಲಿ ಈ ಮಹೋತ್ಸವವನ್ನು ಅತಿ ವಿಜ್ರಂಭಣೆಯಿಂದ ಆಚರಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಕೊಡಗಿನಲ್ಲಿದ್ದ ವಿಜಯನಗರ ಸಾಮ್ರಾಜ್ಯದ ಪಾಳೆಯಗಾರ ನಾಯಕರು ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬವನ್ನು ಆಚರಿಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.
ತಮ್ಮ ಸಾಮ್ರಾಜ್ಯದ ಶಕ್ತಿ-ಸಾಮಥ್ರ್ಯ, ಸಂಪತ್ತು-ಸಮೃದ್ಧಿ, ವೈಭವ-ವೈಭೋಗ, ವೀರತ್ವ-ಧೀರತ್ವ, ಕಲೆ-ಸಾಹಿತ್ಯ, ಸಂಗೀತ-ನೃತ್ಯ, ಸಂಸ್ಕøತಿ-ಸಂಪನ್ನತೆ ಹೀಗೆ ಸಕಲ ವಿಧದಲ್ಲೂ ತಮ್ಮ ಹಿರಿಮೆ-ಗರಿಮೆ ಗಳನ್ನು ತೋರ್ಪಡಿಸಿಕೊಳ್ಳುವ ಹಿನ್ನೆಲೆಯನ್ನು ಬಹು ಮುಖ್ಯವಾಗಿ ವಿಜಯದ ದ್ಯೋತಕವಾಗಿ ವಿಜಯದಶಮಿಯ ಈ ದಸರಾ ಮಹೋತ್ಸವವನ್ನು ವಿಜಯನಗರದ ಅರಸರು ಆಚರಿಸುತ್ತಿದ್ದರು. 1509ನೆಯ ಇಸವಿಯಲ್ಲಿ ಪಟ್ಟಕ್ಕೆ ಬಂದ ಶ್ರೀ ಕೃಷ್ಣದೇವರಾಯ ನಾಯಕ ವ್ಯವಸ್ಥೆಯನ್ನು ಜಾರಿಗೆ ತರುತ್ತಾನೆ. ತನ್ನ ಸಾಮ್ರಾಜ್ಯದ ವಿಸ್ತರಣೆಯನ್ನು ಮಾಡುತ್ತಾ ಆ ಭಾಗಗಳಲ್ಲಿ ಪಾಳೆಯಗಾರರನ್ನಾಗಿ ನಾಯಕ ವ್ಯವಸ್ಥೆಯ ನಾಯಕರನ್ನು ನೇಮಿಸುತ್ತಾರೆ. ಆಕಾಲದಲ್ಲಿ ನಾಯಕ ವ್ಯವಸ್ಥೆಯು ತಮಿಳುನಾಡಿನ ಮದುರೈಯಲ್ಲಿ ಪ್ರಾರಂಭಗೊಳ್ಳುತ್ತದೆ. ತದನಂತರ ಕೊಡಗು ಪ್ರಾಂತ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಶ್ರೀ ಕೃಷ್ಣ ದೇವರಾಯನು ಚೆಂಗಾಳ್ವ ರಾಜವಂಶವನ್ನು ಸಾಮಂತರನ್ನಾಗಿ ಮಾಡಿ ನಾಯಕ ವ್ಯವಸ್ಥೆಯನ್ನು ಜಾರಿಗೆ ತರುತ್ತಾನೆ. ಆ ಸಮಯದಲ್ಲಿ ಕನ್ನಡ, ತೆಲುಗು, ಸಂಸ್ಕøತ, ಭಾಷೆಗಳಾನ್ನಾಡುವ ಯಾದವರೆಂದು ಹೇಳಿಕೊಳ್ಳುತ್ತಿದ್ದ ಚೆಂಗಾಳ್ವರೊಂದಿಗೆ ವಿಜಯನಗರದ ಕನ್ನಡ, ತೆಲುಗು, ಸಂಸ್ಕøತ, ತುಳು ಭಾಷೆಗಳನ್ನು ಮಾತನಾಡುವ ‘ಯಾದವವಂಶದ’ ನಾಯಕರು ಬಂದು ನೆಲೆಸುತ್ತಾರೆ.
1529ರಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಭಲ ದೊರೆ ಶ್ರೀ ಕೃಷ್ಣದೇವರಾಯ ಮರಣ ಹೊಂದಿದ ನಂತರ ಅಚ್ಚುತರಾಯನವರೆಗೆ ವಿಜಯನಗರ ಉಚ್ಛಾಯ ಸ್ಥಿತಿಯಲ್ಲಿತ್ತು. ಅಚ್ಚುತ್ತರಾಯನ ತರುವಾಯ ವಿಜಯನಗರ ಸಿಂಹಾಸನವೆರಿದ ರಾಮರಾಯನು ನೆರೆಯ ಮುಸ್ಲಿಂ ಸುಲ್ತಾನರುಗಳ ಕಾಟ ತಡೆಯಲಾರದೆ ತತ್ತರಿಸಿಹೋದನು. ಈ ಸಂದರ್ಭದಲ್ಲಿ (1926 ಜನವರಿ26) ವಿಜಯನಗರ ಸಾಮ್ರಾಜ್ಯ ಮತ್ತು ದಕ್ಷಿಣದ ಸುಲ್ತಾನರುಗಳ ನಡುವೆ ನಡೆದ ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಗುವುದರೊಂದಿಗೆ ದಕ್ಷಿಣ ಭಾರತದ ಕೊಟ್ಟ ಕೊನೆಯ ಹಿಂದು ಸಾಮ್ರಾಜ್ಯವು ಕೊನೆಗೊಂಡಿತು.

*ಕ್ರಿ.ಶ.1565 ರಿಂದ 1790ರ ವರಗೆ ಕೊಡಗಿನಲ್ಲಿ ನವರಾತ್ರಿ ಉತ್ಸವ

ತಾಳಿಕೋಟೆ ಯುದ್ಧನಂತರ ದಕ್ಷಿಣ ಭಾರತದ ವಿಜಯನಗರವೆಂಬ ಮಹಾನ್ ಸಾಮ್ರಾಜ್ಯದ ಅವನತಿಗೆ ಕಾರಣವಾದುದಷ್ಟೇ ಅಲ್ಲ, ಸಂಪೂರ್ಣ ಭಾರತದಲ್ಲಿಯೇ ಹಿಂದು ರಾಜ್ಯಗಳ ಕೊನೆಗಾಲಕ್ಕೆ ನಾಂದಿ ಹಾಡಿತು. ವಿಜಯೋನ್ಮತ್ತ ಸುಲ್ತಾನರ ಸೇನೆ, ಇತರ ಕಳ್ಳಕಾಕರರು, ದಂಗೆಕೋರರು ವಿಜಯನಗರ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟು ಲೂಟಿ, ದರೋಡೆ, ಕಗ್ಗೊಲೆ, ಸುಲಿಗಗಳನ್ನು ನಡೆಸಿದರಲ್ಲದೆ, ಕೊಡಲಿ, ಖಟಾರಿ, ಕತ್ತಿ, ಇತ್ಯಾದಿಗಳಿಂದ ನಗರವನ್ನು ಹಾಳುಗೆಡವಿ ಬೆಂಕಿ ಹಚ್ಚಲಾಯಿತು. ಈ ದಾಳಿಯಿಂದ ವಿಜಯ ನಗರ ಮುಂದೆಂದು ಚೇತರಿಸಿಕೊಳ್ಳಲೇ ಇಲ್ಲ. ಕ್ರಿ.ಶ.1565ರಲ್ಲಿ ವಿಜಯ ನಗರ ಪತನವದ ನಂತರ ಸಾಮ್ರಾಜ್ಯವು ಹೊಡೆದು ಹೋಳಾಗಿ ಕೊಡಗು ಪ್ರಾಂತ್ಯವು ಶ್ರೀ ಕೃಷ್ಣದೇವರಾಯನು ನೇಮಿಸಿದ್ದ ಕನ್ನಡ, ತುಳು, ತೆಲುಗು, ಸಂಸ್ಕøತ ಭಾಷೆ ಮಾತನಾಡುತ್ತಿದ್ದ ‘ಯಾದವ’ ವಂಶದ ಹಲವಾರು 8 ಜನ ಪಾಳೆಗಾರ ನಾಯಕರುಗಳಲ್ಲಿ ಹರಿದು ಹಂಚಿಹೋಯಿತು. ಇಕ್ಕೇರಿಯ ರಾಜ ವಂಶಕ್ಕೆ ಸೇರಿದ ಲಿಂಗಾಯತ ಜಂಗಮನ ವೇಷಧಾರಿಯೊಬ್ಬನು ಪಾಲೇರಿ(ಈಗ ಹಾಲೇರಿಯೆಂದು ಕೊಡಗಿನ ಮಡಿಕೇರಿ ಸಮೀಪದಲ್ಲಿದೆ.) ಇಲ್ಲಿನ ಸ್ಥಿತಿ-ಗತಿಗಳನ್ನು ಅವಲೋಕಿಸುತ್ತಿದ್ದನು ಆ ಸಮಯದಲ್ಲಿ ಕೊಡಗಿನಲ್ಲಿದ್ದ 8 ಜನ ನಾಯಕ ಪಾಳೆಗಾರರ ಒಳ ಜಗಳದ ಲಾಭವನ್ನು ಪಡೆದು ತಾನೇ ಅವರ ನಾಯಕತ್ವವನ್ನು ವಹಿಸಿಕೊಂಡನು ಮಧುರೈ ನಾಯಕರುಗಳು ಪ್ರತ್ಯೆಕ ‘ಮಧುರೈ ನಾಯಕ ರಾಜ’ ವಂಶವನ್ನು ಸ್ಥಾಪಿಸುತ್ತಾರೆ. ಈ ಮಧುರೈ ನಾಯಕರುಗಳು ಕನ್ನಡ, ತೆಲುಗು, ತಮಿಳು, ಮತ್ತು ಸಂಸ್ಕøತ ಭಾಷಿಕರಾಗಿರುತ್ತಾರೆ. ಈ ಅವÀಧಿಯಲ್ಲಿಯೇ ಮೈಸೂರು, ಕೆಳದಿ, ವೆಲ್ಲೂರು, ಜಿಂಜೀ, ತಂಜಾವೂರು, ಮುಂತಾದ ಸಾಮಂತರುಗಳು ವಿಜಯ ನಗರದ ಸಾಮ್ರಾಜ್ಯದಿಂದ ಸ್ವತಂತ್ರರಾದರು.
ಈ ಕಾಲಗಟ್ಟದಲ್ಲಿಯೇ ಕೊಡಗಿನಲ್ಲಿದ್ದ ತೆಲುಗು ಭಾಷೆಯನ್ನಾಡುತ್ತಿದ್ದ ‘ಯಾದವ’ ನಾಯಕರುಗಳು ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಶ್ರೀಮಂಗಲದ ಇರ್ಪು ಸಮೀಪ ಕುರ್ಚಿ ಗ್ರಾಮದಲ್ಲಿ ಬಾಳೆಲೆ, ವೀರಾಜಪೇಟೆ, ಮಡಿಕೇರಿ ಮುಂತಾದೆಡೆಗಳಲ್ಲಿ ನೆಲೆಸುತ್ತಾರೆ. ಆ ಸಂದರ್ಭದಲ್ಲಿ ತಮಿಳು ನಾಡಿನ ಮಧುರೈ ನಾಯಕರುಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಕೊಡಗಿನ ಯಾದವ ನಾಯಕರುಗಳು ಶ್ರೀ ಕೃಷ್ಣನ ಆರಾಧಕರಾಗಿದ್ದು, 1575ರ ಆಸುಪಾಸಿನಲ್ಲಿ ಮಧುರೈಯಿಂದ ಶಕ್ತಿ ದೇವತೆಗಳನ್ನು ಕರೆತಂದು ಕೊಡಗಿನಲ್ಲಿ ಪ್ರತಿಷ್ಠಾಪಿಸುತ್ತಾರೆ. ಹೀಗೆ ಕರೆ ತಂದ ಶಕ್ತಿ ದೇವತೆಗಳೊಂದಿಗೆ ಕಂಚಿ ಕಾಮಾಕ್ಷಿ, ಕುಂದುರುಮೊಟ್ಟೆ ಶ್ರೀ ಚಾಮುಂಡಿ, (ಈಗ ಅಷ್ಟಮಂಗಲ ಪ್ರಶ್ನೆಯ ನಂತರ ಶ್ರೀ ಕುಂದುರುಮೊಟ್ಟೆ ಚೌಟಿಮಾರಿಯಮ್ಮ), ಶ್ರೀ ದಂಡಿನ ಮಾರಿಯಮ್ಮ, ಮತ್ತು ಶ್ರೀ ಕೊಟೆಮಾರಿಯಮ್ಮ ಎಂದು ಮಡಿಕೇರಿಯಲ್ಲಿ ದೇವಾಲಯಗಳನ್ನು ನಿರ್ಮಿಸಿ ಪ್ರತಿಷ್ಠ್ಠಾಪಿಸುತ್ತಾರೆ. ಅಂದು ಮಧುರೈಯಿಂದ ಜೊತೆಯಲ್ಲಿಯೇ ಬಂದ ಪೂಜಾರಿಗಳು ದೇವಸ್ಥಾನದ ನಿತ್ಯ ಪೂಜೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲಿಯವರೆಗೂ ಶ್ರೀ ಕೃಷ್ಣ ಜನ್ಮಾಷ್ಠಮಿ, ಶಿವರಾತ್ರಿ, ಹಬ್ಬಗಳನ್ನು ಆಚರಿಸುತ್ತಿದ್ದ ಯಾದವರು ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸಿದ ನಂತರ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವಗಳನ್ನು ಆಚರಿಸಲು ಪ್ರಾರಂಭಿಸುತ್ತಾರೆ.

1580ರಲ್ಲಿ ಲಿಂಗಾಯತನಾದ ವೀರರಾಜನೆಂಬುವವನು ಕೊಡಗಿನಲ್ಲಿ ಹಾಲೇರಿ ರಾಜ ವಂಶವನ್ನು ಸ್ಥಾಪಿಸುತ್ತಾನೆ. ವೀರರಾಜನ ಮೊಮ್ಮಗನಾದ ಮುದ್ದುರಾಜನು 1681ರಲ್ಲಿ ಹಾಲೇರಿಯಿಂದ ಮಡಿಕೇರಿಗೆ ಬಂದು ಕೋಟೆಯೊಂದನ್ನು ಕಟ್ಟಿ ತನ್ನ ರಾಜದಾನಿಯನ್ನು ಮಡಿಕೇರಿಗೆ ವರ್ಗಾಯಿಸಿದನು. ಕೋಟೆಯ ಒಂದು ಬದಿಯಿಂದ ರಾಜ್ಯಭಾರ ನಡೆಸುತ್ತಿದ್ದರೆ, ಮತ್ತೊಂದು ಬದಿಯಲ್ಲಿಯೇ ಅಂದರೆ (ಈಗಿನ ಕೋಟೆಯ ಹಿಂಭಾಗದ ಪ್ರದೇಶದಲ್ಲಿ) ತೆಲುಗು ಭಾಷಿಕರಾದ ಯಾದವ ಪಾಳೆಯಗಾರರು ನೆಲೆಸಿದ್ದರು.
1731ರಲ್ಲಿ ಮಧುರೈ ನಾಯಕ ವಂಶದ ವಿಜಯರಂಗ ಚಿಕ್ಕನಾಥ ನಾಯಕನ ಅಕಾಲಿಕ ಮರಣ ಪಟ್ಟಾಗ ಆತನ ಪತ್ನಿ ರಾಣಿ ಮೀನಾಕ್ಷಿ ನಾಯಕ ವಂಶದ ಆಡಳಿತವನ್ನು (1731-1736)ವರೆಗೆ ನಡೆಸುತ್ತಾಳೆ. ಆ ಅವಧಿಯಲ್ಲಿ ಆರ್ಕಾಟಿನ ನವಾಭ 1736ರಲ್ಲಿ ಮಧುರೈ ನಾಯಕ ಮೇಲೆ ದಾಳಿ ಮಾಡುತ್ತಾನೆ. ಆಗ ಕೊಡಗಿನಲ್ಲಿದ್ದ ಯಾದವ ನಾಯಕರುಗಳು ಮಧುರೈ ನಾಯಕರುಗಳ ಪರವಾಗಿ ಮಧುರೈಗೆ ಹೋಗಿ ಹೋರಾಡಿದರೂ, ಸೋತು ದಿಕ್ಕಾಪಾಲಾಗುತ್ತಾರೆ. ಅಂದು ಯುದ್ಧದಿಂದ ಹಿಂತಿರುಗಿ ಬರುವಾಗ ತಮ್ಮೊಂದಿಗೆ ಮಧುರೈ ನಾಯಕರುಗಳ ಕೆಲವಾರು ಕುಟುಂಬದವರನ್ನು ತಮ್ಮೊಂದಿಗೆ ಕರೆತಂದು ಕೊಯಮ್ಮತ್ತೂರು, ಮೇಟುಪಾಳ್ಯಂ, ಊಟಿ, ಕೇರಳದ ವಯನಾಡಿನ ಮಾನಂದವಾಡಿ, ಕಲ್ಲಿಕೋಟೆ, ತಲಚೇರಿ, ಕೂತುಪರಂಬು, ಕಣ್ಣೂರು, ಮಂಗಳೂರುಗಳಲ್ಲಿ ನೆಲೆನಿಲ್ಲಿಸುತ್ತಾರೆ. ಇವರುಗಳ ವಂಶಾವಳಿಗಳು ಇಂದಿಗೂ ಅಲ್ಲಲ್ಲಿ ಬದುಕಿ ಬಾಳುತ್ತಿದ್ದಾರೆ. ಈ ಜನಾಂಗದವರು ನೆಲೆ ನಿಂತಿರುವ ಸ್ಥಳಗಳಲ್ಲಿ ಶಕ್ತಿದೇವತೆಯಾದ ಕಂಚಿಕಾಮಾಕ್ಷಿಯಮ್ಮ ದೇವತೆಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾ ಬರುತ್ತಿದ್ದಾರೆ. ಹಾಗೆ ಬಂದವರು ತಮ್ಮೊಂದಿಗೆ ತಮ್ಮ ಮನೆ ದೇವರಾದ ಮದುರೈ ವೀರನ್, ಮುನೀಶ್ವರ,. ಮಾರಿಯಮ್ಮ ದೈವಗಳನ್ನು ತಂದಿರುತ್ತಾರೆ ಮಾರಿಯಮ್ಮ ಉತ್ಸವದ ಸಂದರ್ಭ ಬೇವಿನ ಎಲೆಗಳಿಂದ ಸಿಂಗರಿಸಿದ ಕರಗ ಮಹೋತ್ಸವವೂ ನಡೆಸುತ್ತಿದ್ದಾರೆಂದು ತಿಳಿದುಬರುತ್ತದೆ.

*ಹಕ್ಕುಗಳನ್ನು ಕಾಯ್ದಿರಿಸಲಾಗಿದೆ*

ಇಲ್ಲಿ ಪ್ರಕಟಣೆಗೊಂಡಿರುವ ಮಾಹಿತಿಗಳ ಹಕ್ಕುಗಳನ್ನು, ‘ರಾಷ್ಟ್ರ ಜಾಗೃತಿ’ ಪತ್ರಿಕೆ ಹಾಗೂ SEARCH COORG MEDIA ಕಾಯ್ದಿರಿಸಲಾಗಿದೆ. ಇಲ್ಲಿ ಪ್ರಕಟಣೆಗೊಂಡಿರುವ ಮಾಹಿತಿಯನ್ನು ಯಾವುದೇ ರೀತಿಯ ಮಾಧ್ಯಮದಲ್ಲಿ ಪ್ರಕಟ ಪಡಿಸಲು ಅಥವಾ ಪ್ರಸಾರ ಪಡಿಸಲು ‘ರಾಷ್ಟ್ರ ಜಾಗೃತಿ’ ಪತ್ರಿಕೆ ಹಾಗೂ SEARCH COORG MEDIA ಸಂಸ್ಥೆಯ ಅಪ್ಪಣೆಯನ್ನು ಪಡೆಯ ಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ EMAIL : searchcoorg@gmail.com , MOb: 9483047519



admin

0 0 votes
Article Rating
Subscribe
Notify of
guest
0 Comments
Inline Feedbacks
View all comments