MADE ಮದೆ

ಮದೆ - MADE

ಮದೆ ಗ್ರಾಮ ಪಂಚಾಯತ್ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಪಂಚಾಯತ್ ಗಳಲ್ಲಿ ಒಂದು. ಕೊಡಗಿನ ಮಡಿಕೇರಿಯಿಂದ ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ 9 ಕಿಲೋ ಮೀಟರ್ ದೂರ ಸಾಗಿದರೆ ಮದೆ ಗ್ರಾಮ ಪಂಚಾಯತ್ ಸಿಗುತ್ತದೆ. ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರಿಗೆ ಮಡಿಕೇರಿಯೇ ಕೇಂದ್ರ ಹಾಗೂ ತಾಲ್ಲೂಕು ಘಟಕ. ಸದಾ ಮಂಜಿನಿಂದ ಕೂಡಿರುವ ಈ ಗ್ರಾಮಕ್ಕೆ ಕವಳೆ (ಕವಳ=ಮಂಜು)ಪೇಟೆ ಎಂದೂ ಕರೆಯುವರು. ಈ ಗ್ರಾಮವು ಬೆಟ್ಟ ಗುಡ್ಡಗಳಿಂದ ಕೂಡಿದ್ದು ಸದಾ ಹಚ್ಚ ಹಸುರಾಗಿ ಕಂಗೊಳಿಸುತ್ತಿರುತ್ತದೆ.

ವರ್ಷಕ್ಕೆ ಸರಾಸರಿ 250 ಸೆ.ಮೀ ಗಿಂತ ಹೆಚ್ಚು ಮಳೆ ಪಡೆಯುವ ಮದೆ ಗ್ರಾಮ ಕೃಷಿಗೆ ಯೋಗ್ಯವಾದ ವಾತಾವರಣವನ್ನು ಹೊಂದಿದೆ. ಇಲ್ಲಿ ಭತ್ತ ಹಾಗೂ ಕಾಫಿಯನ್ನು ಮುಖ್ಯ ಬೆಳೆಗಳಾಗಿ ಬೆಳೆಯಲಾಗುತ್ತದೆ. ಇತ್ತಿಚೇಗೆ ಶುಂಠಿ ಬೆಳೆಯನ್ನು ಕೂಡ ಪೂರ್ಣಕಾಲಿಕ ಬೆಳೆಯನ್ನಾಗಿ ಬೆಳೆಸಲಾಗುತ್ತದೆ. ಒಟ್ಟಿನಲ್ಲಿ ಮದೆ ಗ್ರಾಮ ಉತ್ತಮ ಕೃಷಿಭೂಮಿಯನ್ನು ಹೊಂದಿದ್ದು,ಸಂಪದ್ಭರಿತವಾಗಿದೆ.
ಮದೆ ಗ್ರಾಮ ಪಂಚಾಯತ್ ಮದೆ,ಬೆಟ್ಟತ್ತೂರು,ಕಾಟಕೇರಿ ಎಂಬ ಮೂರು ಮುಖ್ಯ ಗ್ರಾಮಗಳನ್ನು ಹೊಂದಿದ್ದು, ದೇವರಕೊಲ್ಲಿ,ಜೋಡುಪಾಲ,ಅವಂದೂರು,ತಾಳತ್ತಮನೆ ಎಂಬ ಉಪ ಗ್ರಾಮಗಳನ್ನು ಹೊಂದಿದೆ.ಗ್ರಾಮ ಪಂಚಾಯತ್ ನ ಒಟ್ಟು ಜನಸಂಖ್ಯೆ 4733 ಆಗಿದ್ದು, ಇದರಲ್ಲಿ 2,372 ಜನರು ಗಂಡಸರು ಹಾಗೂ 2,361 ಮಂದಿ ಹೆಂಗಸರು ಇದ್ದಾರೆ.
ಮದೆ ಗ್ರಾಮಪಂಚಾಯತಿ ನಿವಾಸಿಗಳ ಬಹುಮುಖ್ಯ ಹಬ್ಬಗಳೆಂದರೆ ಕೈಲ್ ಮೂಹೂರ್ತ, ಹುತ್ತರಿ. ಇದರೊಂದಿಗೆ ಗಣೇಶ ಚಥುರ್ತಿ ಕ್ರಿಸ್ಮಸ್ ಮೊಹರಂ ರಂಜಾನ್ ಇತ್ಯಾದಿ ಆಚರಿಸುತ್ತಿದ್ದು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬಹುದು. ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರೂ ಸಾಮರಸ್ಯತೆಯಿಂದ ವಾಸಿಸುತ್ತಿದ್ದಾರೆ. ಮದೆ ಗ್ರಾಮದೇವತೆಯಾದ ಮದೆ ಮಾದೂರಪ್ಪ ಉತ್ಸವ ಮೂರು ದಿನಗಳ ಕಾಲನಡೆಯುವುದಲ್ಲದೆ, ಇಡೀ ಗ್ರಾಮವೆ ಭಾಗವಹಿಸುತ್ತದೆ. ಉತ್ಸವಕ್ಕೆ ಹತ್ತು ದಿನ ಮುಂಚೆಯೇ ಇಡೀ ಗ್ರಾಮ ಪಥ್ಯದಲ್ಲಿರುತ್ತದೆ ಹಾಗೂ ಕೆಲವೊಂದು ಆಹಾರ ಪದ್ದತಿಯನ್ನು ಅನುಸರಿಸುತ್ತದೆ.ಹಾಗೇ ಕಾಟಕೇರಿ ಗ್ರಾಮದಲ್ಲಿ ಅಪ್ಪೇಂದ್ರಪ್ಪ ಉತ್ಸವ, ಬೆಟ್ಟತ್ತೂರು ಗ್ರಾಮದಲ್ಲಿ ಸುಬ್ರಮಣ್ಯ ದೇವರ ಉತ್ಸವ, ಅವಂದೂರು ಗ್ರಾಮದಲ್ಲಿ ಗೋಪಾಲ ಕೃಷ್ಣ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ಹೀಗೇ ಸಂಪ್ರದಾಯ ಮತ್ತು ಆಚಾರದಲ್ಲಿ ವಿಭಿನ್ನತೆಯನ್ನು ಹೊಂದಿದೆ.
ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೆಟ್ಟ ಗುಡ್ಡಗಳು, ಜಲಪಾತ,ನದಿ,ತೊರೆಗಳು ಯಥೇಚ್ಚವಾಗಿ ಹೊಂದಿದ್ದು ಜಿಲ್ಲೆಯ ಸ್ವಾಭಾವಿಕ ಪರಿಸರದ ಸೌಂದರ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿವೆ.

ನಡುಗಲ್ಲು ಪೂವಯ್ಯ ರಾಮಯ್ಯ

Read More

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ರಾಮಯ್ಯ ಎನ್ ಪಿ President 9483395281
  2. ಚಂದ್ರಾವತಿ ಪಿ ಎ Vice President 8277561091
  3. ಸೈದಲವಿ ಇ ಕೆ Member 9380255411
  4. ಜಯರಾಜ್ ಎ Member 9448278216
  5. ಸಜನ್ ಬಿ ಸಿ Member 9686808300
  6. ನವೀನ ಬಿ ಎಸ್ Member 8105164760
  7. ಚಂದ್ರಾವತಿ ಸಿ ಎ Member 9141505600
  8. ರಾಮಯ್ಯ ಎನ್ ಪಿ Member 9483395281
  9. ವಿಮಲಾಕ್ಷಿ ಬಿ ಎಸ್ Member 9538158171
  10. ತೇಜ ಕುಮಾರ್ ಯು ಜಿ Member 9901740349
  11. ಯಶೋದಿನಿ ಬಿ ಪಿ Member 9449272708
  12. ಮೋಹಿನಿ ಡಿ ಆರ್ Member 8277099296
  13. ಜಾಜಿ ಕೆ ಪಿ Member 6361834564
  14. ಜೀವನ್ ಪಿ ಕೆ Member 9480251938

ಗ್ರಾಮ ಪಂಚಾಯತಿ ಕಾರ್ಯಾಲಯ

ನಂಜುಂಡಸ್ವಾಮಿ : ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಪಂಚಾಯ್ತಿ ಸಂಪರ್ಕ

ವಿಳಾಸ: ಮದೆ ಗ್ರಾಮ ಪಂಚಾಯಿತಿ ಮದೆ ಅಂಚೆ ಮಡಿಕೇರಿ ತಾಲೂಕು ಕೊಡಗು ಜಿಲ್ಲೆ
Tel: 08272 236831
Pdo:
Mob: 

Email: made.mdk.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ದೇವಾಲಯ / ದೈವಸ್ಥಾನಗಳು

  • ಅಯ್ಯಪ್ಪ ಸ್ವಾಮಿ ದೇವಾಲಯ

ಮಸೀದಿ / ದರ್ಗಾಗಳು

  • ದರ್ಗಾ
  • ಜುಮ್ಮ ಮಸ್ಜಿದ್

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

2015 – 2020

  1. ಎಂ ಬಿ ಚಂದ್ರಶೇಖರ President 9481113436
  2. ಬಿ ಎಸ್ ರತ್ನ Vice President 7259989429
  3. ಹೆಚ್ ಪಿ ರಾಜೆಶ್ Member 9480106831
  4. ಗಿರೀಶ್ Member 9449933457
  5. ಲಕ್ಷ್ಮಿ Member 9972532485
  6. ಕೆ ಎ ಲೀಲಾವತಿ Member 9901952678
  7. ತೇಜಾವತಿ ಎನ್ ಕೆ Member 8762486643
  8. ಗಣೇಶ್ ಸಿ ಬಟ್ಯನ Member 9449118619
  9. ಸವಿತಾ ಆಚಾರ್ಯ Member 9480591532
  10. ಜಾನಕ್ಕಿ ಬಿ ಜಿ Member 9481602709
  11. ಕೊಂಪುಳಿರ ಹೇಮರಾಜು Member 9449146233
  12. ಪಿ ಎನ್ ಚಂದ್ರಪ್ರಕಾಶ್ Member 9449333776
  13. ನಿತ್ಯಾ ಕುಮಾರಿ Member 9480788641

ಸಂದರ್ಶನ

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.