MAKKANDURU ಮಕ್ಕಂದೂರು

ಮಕ್ಕಂದೂರು - MAKKANDURU

ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೋಕು ವ್ಯಾಪ್ತಿಗೆ ಬರುವ ಮಕ್ಕಂದೂರು ಗ್ರಾಮ ಪಂಚಾಯಿತಿ ಕಛೇರಿಯು ಮಡಿಕೇರಿ – ಸೋಮವಾರಪೇಟೆಗೆ ತೆರಳುವ ರಾಜ್ಯ ಹೆದ್ದಾರಿ ಬದಿಯಲ್ಲಿರುತ್ತದೆ.ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರಕ್ಕೆ 10 ಕಿ.ಮೀ ದೂರವಿರುವ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ವಿಶಾಲವಾಗಿದ್ದು, ಮಕ್ಕಂದೂರು ಹಾಗೂ ಮುಕ್ಕೋಡ್ಲು ಎಂಬ ಎರಡು ಕಂದಾಯ ಗ್ರಾಮಗಳನ್ನು ಮಾತ್ರ ಹೊಂದಿದೆ. 7 ಮಂದಿ ಸದಸ್ಯರನ್ನು ಒಳಗೊಂಡಿರುವ ಈ ಪಂಚಾಯತ್ ನಲ್ಲಿ 4 ಮಂದಿ ಮಹಿಳಾ ಸದಸ್ಯರಿರುವುದು ವಿಶೇಷವಾಗಿದೆ. 2001ರ ಜನಗಣತಿಯ ಪ್ರಕಾರ ಈ ಪಂಚಾಯಿತಿಯಲ್ಲಿ ಒಟ್ಟು 2688 ಜನಸಂಖ್ಯೆಯಿದ್ದು, ಅವರಲ್ಲಿ 1321 ಪುರುಷರು , 1367ಮಂದಿ ಮಹಿಳೆಯರು ವಾಸಿಸುತ್ತಿದ್ದಾರೆ. ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳು ಬೆಟ್ಟಗುಡ್ಡಗಳಿಂದ ಕೂಡಿದ್ದು ಸುಂದರ ಪರಿಸರವನ್ನು ಹೊಂದಿದ ಗ್ರಾಮವಾಗಿದೆ. ಮಕ್ಕಂದೂರು 1473.73 ಹೆಕ್ಟೇರ್ ಮತ್ತು ಮುಕ್ಕೋಡ್ಲು 2471.30 ಹೆಕ್ಟೇರ್ ಒಟ್ಟು 3946.03 ಹೆಕ್ಟೇರ್ ನಷ್ಟು ವಿಶಾಲವಾದ ಪ್ರದೇಶವನ್ನು ಗ್ರಾಮ ಪಂಚಾಯಿತಿಯು ಹೊಂದಿದೆ.
ಹಲವು ಜನಾಂಗಗಳು ವಾಸವಾಗಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಮುಖ್ಯ ಕಸುಬು ಕೃಷಿ. ಮುಕ್ಕಾಲು ಭಾಗ ಜನರು ಕೃಷಿಕರಾಗಿದ್ದಾರೆ. ಉಳಿದ ಕಾಲು ಭಾಗ ಜನರು ವಾಣಿಜ್ಯ, ವ್ಯಾಪಾರ ಹಾಗೂ ಇತರ ಸೇವೆಗಳಲ್ಲಿ ನಿರತರಾಗಿದ್ದಾರೆ. ಇವರ ಮುಖ್ಯ ಆಹಾರದ ಬೆಳೆ ಭತ್ತ, ವಾಣಿಜ್ಯ ಬೆಳೆ ಕಾಫಿ, ಇದರೊಂದಿಗೆ ಅಡಿಕೆ, ಕರಿಮೆಣಸು ,ಕಿತ್ತಳೆ ಬೆಳೆಗಳನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ 2 ಪ್ರಾಥಮಿಕ ಶಾಲೆಗಳು ಮತ್ತು 1 ಪ್ರೌಢಶಾಲೆ ಇರುತ್ತದೆ. 4 ಅಂಗನವಾಡಿ ಕೇಂದ್ರಗಳು, 2 ಪ್ರಾಥಮಿಕ ಆರೋಗ್ಯ ಉಪಕೇಂದ್ರ, 1 ಪಶು ವೈದ್ಯಕೀಯ ಚಿಕಿತ್ಸಾಲಯ, 1 ವಾಣಿಜ್ಯ ಬ್ಯಾಂಕ್ (ಕೆನರಾ)ಮತ್ತು 1 ಸಹಕಾರ ಬ್ಯಾಂಕ್ (ವಿ ಎಸ್ ಎಸ್ ಎನ್), 2 ದೂರವಾಣಿ ವಿನಿಮಯ ಕೇಂದ್ರ, 2 ಅಂಚೆ ಕಛೇರಿ, 1 ಗ್ರಂಥಾಲಯ ಸಹ ಇದ್ದು .1847 ಮಂದಿ ಸಾಕ್ಷರರಿದ್ದಾರೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಸುಬ್ಬಯ್ಯ ಕೆ ಬಿ President 9483835357
  2. ಪಿ ಎಸ್ ಕವಿತ Vice President 9482842971
  3. ವಿಮಲ ಬಿ ಎಸ್ Member 8277236513
  4. ಗಣೇಶ್ ಎಸ್ ಬಿ Member 9448588286
  5. ರಮೇಶ್ ಬಿ ಎನ್ Member 9448133651
  6. ಸುನಂದ ಕೆ Member 8762585012
  7. ಪಿ ಜಿ ದೀನಾ Member 9483785817

ಪಂಚಾಯತಿ ಕಾರ್ಯಾಲಯ

ಪಂಚಾಯ್ತಿ ಸಂಪರ್ಕ

ವಿಳಾಸ: ಮಕ್ಕಂದೂರು ಗ್ರಾಮ ಮತ್ತು ಅಂಚೆ ಮಡಿಕೇರಿ ತಾಲೂಕು 571201 ಕೊಡಗು ಜಿಲ್ಲೆ
Tel: 08272 233645
Pdo:
Mob: 

Email: makkanduru.mdk.kodg@gmail.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

  • ಭದ್ರಕಾಳೇಶ್ವರಿ ದೇವಾಲಯ, ಮಕ್ಕಂದೂರು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

2015 – 2020

  1. ಕಾವೇರಮ್ಮ ಎಲ್ ಹೆಚ್ President 8762605500
  2. ಕನ್ನಿಕಂಡ ಶ್ಯಾಂ ಸುಬ್ಬಯ್ಯ Vice President 9483835357
  3. ವಿಮಲ ಬಿ ಎಸ್ Member 8277236513
  4. ಜಯಲಕ್ಷ್ಮಿ ಹೆಚ್ ಆರ್ Member 8277411319
  5. ಸತೀಶ್ ಎ ಎಸ್ Member 9480256483
  6. ರಮೇಶ ಬಿ ಎನ್ Member 9448133651
  7. ರತಿ ಎಂ.ಎ Member 8762280025
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.