NIDTHA ನಿಡ್ತ

ನಿಡ್ತ - NIDTHA

ನಿಡ್ತ ಗ್ರಾಮ ಪಂಚಾಯಿತಿಯ ದಕ್ಷಿಣ ಬಾರತದ ಕಾಶ್ಮೀರವೆಂದು ಹೆಸರು ವಾಸಿಯಾದ ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕು, ಶನಿವಾರಸಂತೆ ಹೋಬಳಿ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಈ ಗ್ರಾಮ ಪಂಚಾಯಿತಿಯು ನಿಸರ್ಗ ರಮಣೀಯ ಸೌಂದರ್ಯದಿಂದ ಕೂಡಿದ್ದು, ಶನಿವಾರಸಂತೆ 6 ಕಂದಾಯ ಗ್ರಾಮಗಳನ್ನು ಹೊಂದಿದ್ದು ವಿವರ ಹೀಗಿದೆ. ನಿಡ್ತ, ಮುಳ್ಳೂರು, ಹಿತ್ತಲಕೇರಿ, ಚೌಡೇನಳ್ಳಿ, ಸಿಡಿಗಳಲೆ, ಮತ್ತು ಗೋಪಾಲಪುರ ಹಾಗೂ ಮೂರು ವಾರ್ಡ್ ಗಳನ್ನು ಹೊಂದಿದ್ದು ನಿಡ್ತ, ಸಿಡಿಗಳಲೆ ಮತ್ತು ಗೋಪಾಲಪುರ. ಈ ಪಂಚಾಯಿತಿಯು ಜಿಲ್ಲಾ ಕೇಂದ್ರ ಮಡಿಕೇರಿಗೆ 60 ಕಿಮೀ , ತಾಲ್ಲೂಕು ಕೇಂದ್ರ ಸೋಮವಾರಪೇಟೆಗೆ 25 ಕಿಮೀ ಅಂತರದಲ್ಲಿದೆ. ಮತ್ತು ಹೋಬಳಿ ಕೇಂದ್ರಕ್ಕೆ 6 ಕಿಮೀ ಅಂತರವಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೃಷಿ ಆಧಾರಿತ ಕುಟುಂಬಗಳು ವಾಸವಾಗಿದ್ದು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮೂದಾಯಕ್ಕೆ ಸೇರಿದ ಕುಟುಂಬಗಳು ವಾಸವಾಗಿವೆ. ಇಲ್ಲಿನ ಭೌಗೋಳಿಕ ವಿಸ್ತೀರ್ಣ 4524.01 ಹೆಕ್ಟೇರ್ ಇದ್ದು, 4103.57 ಕೃಷಿಗೆ ಯೋಗ್ಯವಾಗಿರುತ್ತದೆ. ಮತ್ತು 155.59 ಹೆಕ್ಟೇರ್ ಸರ್ಕಾರಿ ಗೋಮಾಳ ಜಮೀನು ಇರುತ್ತದೆ. ಇಲ್ಲಿನ ಜನರ ಮುಖ್ಯ ಕಸುಬು ಕೃಷಿಯಾಗಿದ್ದು, ಕಾಫಿ, ಕರಿಮೆಣಸು, ಶುಂಠಿ, ಭತ್ತ, ಏಲಕ್ಕಿ, ಮುಂತಾದ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿ 2010 ರ ಜನಗಣತಿ ಪ್ರಕಾರ 4915 ಜನಸಂಖ್ಯೆ ಹೊಂದಿದ್ದು, ಇದರಲ್ಲಿ ಪ.ಜಾತಿ 1329, ಪ. ಪಂಗಡ 94, ಅಲ್ಪ ಸಂಖ್ಯಾತರು 410 ಇರುತ್ತಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಪರಿಶಿಷ್ಟ ಜಾತಿ ಕಾಲೋನಿಗಳಿರುತ್ತದೆ ಮತ್ತು 1 ಪರಿಶಿಷ್ಟ ಪಂಗಡದ ಕಾಲೋನಿ ಇರುತ್ತದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 1194 ಕುಟುಂಬಗಳಿದ್ದು, ಇದರಲ್ಲಿ 264 ಪ.ಜಾತಿ ಮತ್ತು 28 ಪ.ಪಂಗಡದ ಕುಟುಂಬಗಳು ಇದ್ದು ಇವರಿಗೆ ಎಲ್ಲಾ ರೀತಿಯ ಮೂಲ ಭೂತ ಸೌಕರ್ಯಗಳನ್ನು ಒದಗಿಸಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ 1 ಫ್ರೌಢ ಶಾಲೆ, 2 ಹಿರಿಯ ಪ್ರಾಥಮಿಕ ಶಾಲೆ, 4 ಪ್ರಾಥಮಿಕ ಶಾಲೆ ಹಾಗೂ 9 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ 4 ನ್ಯಾಯ ಬೆಲೆ ಅಂಗಡಿಗಳು, 72 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಿಗೂ ಬೀದಿ ದೀಪದ ಸೌಲಭ್ಯ, ಕುಡಿಯುವ ನೀರಿನ ಸೌಲಭ್ಯ, ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ನಿಡ್ತ ಗ್ರಾಮ ಪಂಚಾಯಿತಿಯ ಮುಳ್ಳೂರು ಗ್ರಾಮದಲ್ಲಿ ಪುರಾತನ ಕಾಲದ ಜೈನ ಬಸದಿಯಿದ್ದು ಪ್ರಾಚ್ಯ ವಸ್ತು ಸಂಗ್ರಹಾಲಯದವರು ನಿರ್ವಹಣೆ ಮಾಡುತ್ತಿರುತ್ತಾರೆ. ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಂತಿರುವ ಮಲ್ಲೇಶ್ವರ ಬೆಟ್ಟದಲ್ಲಿ ಮಳೆ ಮಲ್ಲೇಶ್ವರ ದೇವಾಲಯವಿದ್ದು, ಇಲ್ಲಿನ ಜನರು ಮಳೆಬೆಳೆಗಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಮಾಸ್ತಿಕಲ್ಲು, ವೀರಗಲ್ಲುಗಳಿರುತ್ತವೆ. ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀಸಲು ಅರಣ್ಯವಿದ್ದು, ವೈವಿಧ್ಯಮಯ ಕಾಡು ಪ್ರಾಣಿಗಳು, ಪಕ್ಷಿಗಳು ಹಾಗೂ ಕಾಡಾನೆಗಳು ವಾಸವಾಗಿವೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಎಸ್ ಪಿ ಯಶೋಧ President 8971894657
  2. ತೀರ್ಥಾನಂದ ಸಿ.ಪಿ Vice President 9448535958
  3. ಕಾರ್ತಿಕ್ ಎಸ್.ಆರ್ Member 9481882115
  4. ಸುಮಿತ್ರ ಬಿ.ಜಿ Member 7676507587
  5. ತನ್ಮಹಿ Member 9449460799
  6. ಜ್ಯೋತಿ Member 6360839159
  7. ರೋಹಿಣಿ ಹೆಚ್.ಕೆ Member 9482921011
  8. ತಸ್ಲೀಂ ವಿ Member 9449065597
  9. ಲತಾ ವೆಂಕಟೇಶ್ Member 9449312083
  10. ಶಶಿಕಲಾ Member 9740558040
  11. ಆಶೋಕ ಎಂ.ಎಸ್ Member 9448108121
  12. ಮನು ಹೆಚ್ ಡಿ Member 9901921400

ಪಂಚಾಯ್ತಿ ಸಂಪರ್ಕ

ವಿಳಾಸ: ನಿಡ್ತ ಗ್ರಾಮಪಂಚಾಯತಿ.ಶನಿವಾರಸಂತೆ ಹೋಬಳಿ ಸೋಮವಾರಪೇಟೆ,ತಾಲ್ಲೂಕು .ಕೊಡಗು ಜಿಲ್ಲೆ.
Tel: 08276 283901
Pdo:
Mob: 

Email: nidtha.spet.kodg@gmail.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಕೆ ಎಂ ಮುಸ್ತಾಫ President 9449118442
  2. ಎಂ ಎಸ್ ವಿಜಯಕುಮಾರ್ ನಿಡ್ತ Member 9448219960
  3. ಡಿ ಎಸ್ ನಟೇಶ Member 8762883539
  4. ದಯಾನಂದ ಎಂ ಪಿ Member 8105457554
  5. ಪವಿತಚಂದ್ರ Member 8277278898
  6. ಕಾಳಮ್ಮ Member 9480820594
  7. ಸಾವಿತ್ರಮ್ಮ Member 8971402456
  8. ನಳಿನಿ Member 9483551870
  9. ಗಂಗಾಧರ Member 9448799240
  10. ಮಂಜುಳ Member 9482733193
  11. ಹೂವಮ್ಮ Member 9481778413
  12. ಯಶೋಧ Member 8277133346
  13. ಟಿ ಕೆ ಅಶೋಕ Member 9449352587
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.