SHANTHALLI ಶಾಂತಳ್ಳಿ

ಶಾಂತಳ್ಳಿ - SHANTHALLI

ಶಾಂತಳ್ಳಿ ಗ್ರಾಮ ಪಂಚಾಯಿತಿ ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿದ್ದು.ಬೆಟ್ಟಗುಡ್ಡಗಳಿಂದ ಕೂಡಿದೆ.ಶಾಂತಳ್ಳಿ ಮಾರ್ಗವಾಗಿ ಸಕಲೇಶಪುರ ,ಸುಬ್ರಮಣ್ಯ ಮತ್ತು ಧರ್ಮಸ್ಥಳ ಕ್ಕೆ ಹೋಗಬಹುದು. ಸಮೀಪದಲ್ಲಿಯೇ ಮಲ್ಲಳ್ಳಿ ಫಾಲ್ಸ್ ,ಪುಷ್ಪಗಿರಿ ದೇವಸ್ಥಾನವು 12 ಕಿ.ಮೀ ದೂರದಲ್ಲಿದೆ.
ಈ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಗ್ರಾಮಗಳನ್ನು ಹೊಂದಿದೆ.
ಹರಗ,ಅಬ್ಬಿಮಠಬಾಚಳ್ಳಿ,ಶಾಂತಳ್ಳಿಮತ್ತು ತಲ್ತಾರೆಶೆಟ್ಟಳ್ಳಿ .ಶಾಂತಳ್ಳಿ ಗ್ರಾಮವು ಹೋಬಳಿ ಕೇಂದ್ರವಾಗಿದ್ದು ಆಸ್ಪತ್ರೆ,ಕಂದಾಯ ಇಲಾಖೆ, ಕೃಷಿ ಇಲಾಖೆ,ಬ್ಯಾಂಕು,ಸಹಕಾರ ಬ್ಯಾಂಕ್ ಪಶು ಆರೋಗ್ಯ ಇಲಾಖೆ ,ವಿದ್ಯುತ್ ಇಲಾಖೆ ಮತ್ತು ಜೇನುಕೃಷಿ ಇಲಾಖೆ ಗಳನ್ನು ಹೊಂದಿದೆ.
ಇಲ್ಲಿಯ ಜನಸಾಮಾನ್ಯರ ಜೀವನ ಶೈಲಿ ವ್ಯವಸಾಯ,ಕೃಷಿ ಮತ್ತು ಕೂಲಿ ಮಾಡಿಕೊಂಡಿರುತ್ತಾರೆ.ಮುಖ್ಯ ಬೆಳೆಗಳಾದ ಕಾಫಿ, ಏಲಕ್ಕಿ,ಕರಿಮೆಣಸು ಗಳಾಗಿದ್ದು ಉಪ ಕಸುಬುಗಳಾಗಿ ಮೆಣಸು , ಶುಂಠಿ ಬೆಳೆಯುತ್ತಾರೆ. ಇಲ್ಲಿ ಮೇ ಕೊನೆಯ ವಾರದಲ್ಲಿ ಮಳೆಗಾಲ ಪ್ರಾರಂಭವಾಗಿ ಅಕ್ಟೋಬರ್ ವರೆಗೆ ಮಳೆ ಸುರಿಯುತ್ತದೆ.ಈ ಭಾಗದಲ್ಲಿ ಅತೀ ಹೆಚ್ಚು ಮಳೆ ಶಾಂತಳ್ಳಿ ಹೋಬಳಿಯಲ್ಲಿ ಬೀಳುತ್ತದೆ. 2013-14 ನೇ ಸಾಲಿನಲ್ಲಿ ಸುಮಾರು 280 ಇಂಚು ಮಳೆಯಾಗಿದೆ.
ಪ್ರತೀ ವರ್ಷ ಮಕರ ಸಂಕ್ರಾಂತಿಯಂದು ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆ ಮತ್ತು ರಥೋತ್ಸವ ನಡೆಯುತ್ತದೆ.ಏಳು ದಿನಗಳು ನಡೆಯುವ ಜಾತ್ರಾ ಮಹೋತ್ಸ್ವದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತವೆ.ಈ ದೇವಸ್ಥಾನಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ.ಇಲ್ಲಿಯ ಇನ್ನೊಂದು ವೈಷಿಷ್ಟ್ಯವೇನೆಂದರೆ ಶಾಂತಳ್ಳಿಯಲ್ಲಿ ಪಕ್ಕದಲ್ಲಿಯೇ ಇರುವ ದೇವರಕಾಡುವಿನ ನಡುವೆ ಸುಗ್ಗಿ ನಡೆಯುತ್ತದೆ.
ನಮ್ಮ ಪಂಚಾಯಿತಿಯಲ್ಲಿ 783 ಕುಟುಂಬಗಳಿದ್ದು 3135 ಜನಸಂಖ್ಯೆಯಿದೆ.
ಶಾಂತಳ್ಳಿ ಗ್ರಾಮದಲ್ಲಿ ಒಟ್ಟು ಕುಟುಂಬಗಳು 267 ಇದ್ದು, ಇವುಗಳಲ್ಲಿ 73 ಪ.ಜಾತಿ ಕುಟುಂಬಗಳು ಹಾಗೂ 4 ಪ.ಪಂ.ಕುಟುಂಬಗಳಿವೆ. ಅಬ್ಬಿಮಠಬಾಚಳ್ಳಿ ಗ್ರಾಮದಲ್ಲಿ 121 ಕುಟುಂಬಗಳಿದ್ದು, ಪ.ಜಾತಿ 20 ಮತ್ತು ಪ.ಪಂ.1 ಕುಟುಂಬಗಳಿವೆ. ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿ 256 ಕುಟುಂಬಗಳಿದ್ದು ಪ.ಜಾತಿ 25 ಕುಟುಂಬಗಳಿವೆ.ಹರಗ ಗ್ರಾಮದಲ್ಲಿ 142 ಕುಟುಂಬಗಳಿದ್ದು ಪ.ಜಾತಿ 4 ಕುಟುಂಬಗಳಿವೆ. ಇಲ್ಲಿ ಸುಮಾರು 626 ಬಿ.ಪಿ.ಎಲ್ ಕುಟುಂಬಗಳು ಮತ್ತು 157 ಎ.ಪಿ.ಎಲ್ ಕುಟುಂಗಳಿವೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಸವಿತ ಎಸ್.ವಿ President 9482583398
  2. ಬೇಬಿ ಪಿ ಬಿ Vice President 8792655569
  3. ಜಯಮ್ಮ Member 9482669005
  4. ತೇಜಶ್ವಿನಿ ಕೆ ಪಿ Member 9482190127
  5. ಚಂಗಪ್ಪ ಕೆ ಪಿ Member 8762016065
  6. ತ್ರಿಶೂಲ್ ಹೆಚ್.ಕೆ Member 9480271875
  7. ರಂಜಿರ ಹೆಚ್ಎಂ Member 9380285293

ಪಂಚಾಯ್ತಿ ಸಂಪರ್ಕ

ವಿಳಾಸ: ಶಾಂತಳ್ಳಿ ಗ್ರಾಮ ಮತ್ತು ಅಂಚೆ,ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ.571236
Tel: 08276288071
Pdo:
Mob: 

Email: shanthalli.spet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಂತಳ್ಳಿ: 08276 288002

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಬಿ.ಪಿ.ಅನಿಲ್ ಕುಮಾರ್ President 9480083488
  2. ಸುನಂದ Vice President 8197367704
  3. ಸುನಿತ ಎಸ್.ಎಸ್. Member 9483844123
  4. ಕೆ.ಈ.ಭಾರತಿ Member 9483840307
  5. ಬಿ.ಆರ್.ಜ್ಞಾನೇಶ್ Member 9483835669
  6. ಕುಸುಮ ಶಾಂತಳ್ಳಿ Member 9483258829
  7. ಹೆಚ್.ಕೆ.ತ್ರಿಶೂಲ್ Member 9480271875
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.