Kundurumotte Chowti Mariyamma

Kundurumotte Chowti Mariyamma.jpg ºÀ
Kunduru mote Temple g

ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾ ಸೀಟ್‍ನ ಸಮೀಪವೇ ಇರುವ ದೇವಾಲಯ ಇದಾಗಿದ್ದು, ಉಗ್ರ ಸ್ವರೂಪಿಣಿಯೂ, ಉದ್ದವಾದ ಕೋರೆಹಲ್ಲನ್ನು ಹೊಂದಿರುವುದು ಈ ದೇವಿಯ ವೈಶಿಷ್ಟತೆ. 4 ಶಕ್ತಿ ದೇವತೆಗಳಲ್ಲಿ ಹಿರಿಯವಳೆನಿಸಿದ ದೇವಿಯೇ ಕುಂದುರು ಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯ. ಈ ದೇವಿಯು ಅಪಾರ ಶಕ್ತಿಯನ್ನು ಹೊಂದಿದ್ದು, ಇಂದಿಗೂ ಹಿರಿಯರು ಈ ದೇವಿಯ ಶಕ್ತಿಯ ಬÉಗೆಗಿನ ಹಲವಾರು ಕಥೆಗಳನ್ನು ನೆನೆಪಿಸಿಕೊಳ್ಳುತ್ತಾರೆ. ವೀರನು ಹಾಗೆಯೇ ಅಹಂಕಾರಿಯೂ ಆಗಿದ್ದ ರಾಜನ ಸೇನಾಧಿಕಾರಿಯೊಬ್ಬನನ್ನು ಅವನ ಅಹಂಕಾರವನ್ನು ಮಟ್ಟಹಾಕಲು ದೇವಿಯು ಪುಟ್ಟ ಪಕ್ಷಿಯೊಂದರ ರೂಪಧರಿಸಿ ಸಂಹಾರ ಮಾಡಿದ್ದು ಅಂತಹ ರೋಚಕ ಕಥೆಗಳಲ್ಲೊಂದು.
ಗರ್ಭ ಗುಡಿಯಲ್ಲಿರುವ ವಿಗ್ರಹ ಮೂಲ ವಿಗ್ರಹವಾಗಿದ್ದು, ನೋಡುಗನಿಗೆ ಪ್ರಥಮ ನೋಟದಲ್ಲಿಯೇ ಭಯ, ಭಕ್ತಿ ಭಾವವನ್ನು ಮೂಡಿಸುತ್ತದೆ. ಗರ್ಭ ಗುಡಿಯ ವಿಗ್ರಹದ ಜೊತೆಯಲ್ಲಿಯೇ ಉದ್ಭವ ನುಣುಪಾದ ಶಿಲೆಯೊಂದಿದ್ದು, ಅದು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವುದು ವಿಶೇಷವಾಗಿದೆ. ಈ ಪುರಾತನ ದೇಗುಲವು ಇಂದು ಸುಂದರ ವಿಶಿಷ್ಟ, ಬೃಹತ್ ದೇಗುಲವಾಗಿ ನಿರ್ಮಾಣಗೊಂಡಿದೆ. ದೇಗುಲದ ಹಿಂಭಾಗದಲ್ಲಿ ನಾಗದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಹಾಗೆಯೇ ಇಲ್ಲಿ ಬಲಿಪೀಠವೂ ಇದೆ. ವಾರಕ್ಕೆರೆಡು ದಿನ ಬಲಿ ಅರ್ಪಣೆ, ವಾರ್ಷಿಕವಾಗಿ ಹಲವಾರು ಪೂಜಾ ಕಾರ್ಯ ಕ್ರಮಗಳು ಜರುಗುತ್ತವೆ. ಇವುಗಳಲ್ಲಿ ದೈವ ಕೋಲ, ನವರಾತ್ರಿ, ಷಷ್ಠಿ, ಹಬ್ಬ ಹರಿದಿನಗಳಂದು ವಿಶೇಷ ಪೂಜೆಗಳು ನಡೆಯುತ್ತದೆ. ನವರಾತ್ರಿಯಂದು ಕರಗವನ್ನು ಹೊರಡಿಸುತ್ತಾರೆ. ನಂತರ ಕುಂಭ ಪೂಜೆ, ಶಾಂತಿ ಪೂಜೆಗಳು ನಡೆಯುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ (ಯಾದವ) ಜನಾಂಗದವರು ನೆರವೇರಿಸುತ್ತಾರೆ.
ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.