Pete Sri Rama mandira

pete sri rama mandira

536934_1388256974745959_1629632330_n2

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
  ಮಡಿಕೇರಿ ನಗರದ ಕಾಲೇಜು ರಸ್ತೆ ಮತ್ತು ಹಿಲ್ ರಸ್ತೆ ಸೇರುವ ನಗರದ ಹೃದಯ ಭಾಗದಲ್ಲಿ ಕಂಗೊಳಿಸುವ ದೇಗುಲವೇ ಶ್ರೀ ಪೇಟೆ ರಾಮಮಂದಿರ. ಇದರ ಇತಿಹಾಸವು ಮಡಿಕೇರಿ ದಸರಾದೊಂದಿಗೆ ಬೆಸೆದುಕೊಂಡಿದೆ. ಸುಮಾರು 185 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ತಲೆದೋರಿದ್ದ ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಕರಗಗಳನ್ನು ಹೊರಡಿಸುವ ನಿರ್ಧಾರವನ್ನು ಧಾರ್ಮಿಕ ಮುಖಂಡರು ಕೈಗೊಂಡರು. ಊರ ಹೊರಗಿರುವ ಶಕ್ತಿ ದೇವತೆಗಳನ್ನು ಊರ ಒಳಗೆ ಕರೆದು ನಗರ ಪ್ರದಕ್ಷಿಣೆ ಮಾಡಿಸುವುದು ಕ್ರಮಬದ್ಧವಾಗಿರಬೇಕು , ಪೌರಾಣಿಕ ಹಿನ್ನಲೆಯಿಂದ ಕೂಡಿರಬೇಕು ಎಂಬ ಭಾವನೆ ಮೂಡಿತು. ಆಗ ಪಾರ್ವತಿಯು ದುಷ್ಟ ಸಂಹಾರಕ್ಕೆ ಮುನ್ನ ಮೊದಲಿಗೆ ಅಣ್ಣನೆನಿಸಿಕೊಂಡ ಶ್ರೀ ಮಹಾ ವಿಷ್ಣುವಿನ ಬಳಿಗೆ ಹೋಗುವ ಪೌರಾಣಿಕ ಘಟನೆಯನ್ನು ಹಿನ್ನಲೆಯಾಗಿರಿಸಿಕೊಂಡು ಪಾರ್ವತಿಯ ಅಂಶವೆನಿಸಿಕೊಂಡಿರುವ ನಾಲ್ಕು ಶಕ್ತಿ ದೇವತೆಗಳನ್ನು ಊರೊಳಗೆ ಮಹಾವಿಷ್ಣುವಿನ ಸ್ಥಾನಕ್ಕೆ ಬರ ಮಾಡಿಕೊಳ್ಳುವ ಕ್ರಮ ವಿಧಿಗಳನ್ನು ರೂಪಿಸಲಾಯಿತು. ಆಗಿನ ಕಾಲದಲ್ಲಿ ನಗರದಲ್ಲಿ ಮಹಾವಿಷ್ಣ್ಣುವಿಗೆ ಸಂಬಂಧಿಸಿದ ಯಾವುದೇ ಪೂಜಾ ಸ್ಥಳವಿರದ ಕಾರಣ ನಗರದ ದೊಡ್ಡಪೇಟೆಯಲ್ಲಿ ಪೂಜಾ ಸ್ಥಳವೊಂದನ್ನು ನಿರ್ಮಿಸಿ ರಾಮನ ಚಿತ್ರವನ್ನಿಟ್ಟು ಪೂಜಿಸಲಾಯಿತು. ಅಲ್ಲದೆ ನವರಾತ್ರಿ ಸಂದರ್ಭ ಕರಗ ದೇವತೆಗಳು ಇಲ್ಲಿಗೆ ಆಗಮಿಸಿ ರಾಮ (ಅರ್ಥಾತ್ ಮಹಾವಿಷ್ಣು) ನಿಗೆ ಪೂಜೆ ಸಲ್ಲಿಸಿ ತಮ್ಮ ನಗರ ಪ್ರದಕ್ಷಿಣೆ ಕಾರ್ಯವನ್ನು ಆರಂಭಿಸಿದವು. ಈ ಸಂಪ್ರದಾಯವು 185 ವರ್ಷ ಕಳೆದರು ಇಂದಿಗೂ ಹಾಗೆಯೇ ಮುಂದುವರೆಯುತ್ತಾ ಬಂದಿದೆ. ಹೀಗೆ ದಸರಾ ಉತ್ಸವ ಆಚರಣೆಗೆಂದು ನಿರ್ಮಾಣವಾದ ರಾಮದೇಗುಲವು ಕ್ರಮೇಣ ಪ್ರಸಿದ್ಧಿ ಪಡೆಯುತ್ತಾ ಬಂದಿತು. ಪ್ರಸ್ತುತ ಶ್ರೀ ರಾಮಮಂದಿರದಲ್ಲಿ ಪೂಜಾ ಕಾರ್ಯಗಳು, ಭಜನೆ, ಸಮಾರಂಭಗಳು ಜರುಗುತ್ತಿರುತ್ತವೆ.. ಹಳೆಯದಾಗಿದ್ದ ಪೇಟೆ ಶ್ರೀರಾಮಮಂದಿರ ದೇವಾಲಯವು ಇದೀಗ ಜೀರ್ಣೋದ್ಧಾರಗೊಂಡು ಸುಂದರವಾಗಿದೆ.
ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.