ಇಂದು ಗಾಂಧಿ ಜಯಂತಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಾರಿದ ಅಹಿಂಸಾ ತತ್ವ ವಿಶ್ವಕ್ಕೆ ಮಾದರಿ

ಇಂದು ಗಾಂಧಿ ಜಯಂತಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಾರಿದ ಅಹಿಂಸಾ ತತ್ವ ವಿಶ್ವಕ್ಕೆ ಮಾದರಿ

ಆಧುನಿಕ ಪ್ರಪಂಚದ ಚರಿತ್ರೆಯಲ್ಲಿ ಗಾಂಧೀಜಿಯವರ ‘ ಅಹಿಂಸೆ ‘ ‘ಅಸಹಕಾರ’ ಮತ್ತು ‘ಸತ್ಯಾಗ್ರಹ’ ದ ಭಾವನೆ, ಸಿಧ್ಧಾಂತ ಅಥವಾ ತತ್ವಗಳು ಪ್ರಧಾನವಾಗಿ ಎದ್ದು ಕಾಣುತ್ತವೆ. ಈ ಸಿಧ್ಧಾ೦ತಗಳು , ಭಾರತೀಯರಿಗೆ, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಹೂಡಿದ ಆಂದೋಲನದಲ್ಲಿ, ಸ್ಪೂರ್ತಿ, ಆತ್ಮ ವಿಶ್ವಾಸ ಮತ್ತು ಉತ್ಸಾಹವನ್ನು ತುಂಬಿದ್ದವು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಭಾರತದಲ್ಲಿ ಗಾಂಧೀಜಿಯವರು ಅಹಿಂಸಾತ್ಮಕ ಚಳುವಳಿ ಅಥವಾ ಅಂದೋಲನವನ್ನು ಹುಟ್ಟು ಹಾಕುವವರೆಗೆ, ಪ್ರಪಂಚದಲ್ಲಿ ನಡೆದ ಎಲ್ಲಾ ಹೋರಾಟಗಳೂ, ಆಂದೋಲನಗಳೂ, ಮತ್ತು ದಂಗೆಗಳೂ ಹಿಂಸೆಯಿಂದ ಕೂಡಿದ್ದಾಗಿದ್ದವು. ಭಾರತೀಯ ಸ್ವಾತಂತ್ರ ಚಳುವಳಿಯು ಅಹಿಂಸೆಯನ್ನೇ ಅವಲಂಬಿಸಿತ್ತು ಎಂಬುದು ಮಹತ್ವಪೂರ್ಣವಾದ ಅಂಶ. ಅಷ್ಟೇ ಅಲ್ಲ, ಪ್ರಪಂಚದ ಆಧುನಿಕ ಇತಿಹಾಸದಲ್ಲೇ ಭಾರತೀಯ ಅಹಿಂಸಾತ್ಮಕ ಸಾಮೂಹಿಕ ಆಂದೋಲನವು, ಪ್ರಪಥಮ ಅಹಿಂಸಾಧಾರಿತ ಆಂದೋಲನವಾಗಿತ್ತು ಮತ್ತು ನಂತರ ನಡೆದ ಹತ್ತು ಹಲವಾರು ಚಳುವಳಿಗಳಿಗೆ ಮಾದರಿಯಾಗಿತ್ತು. ಬಹುಕಾಲ ನಡೆದ ಅಹಿಂಸಾತ್ಮಕ ಚಳುವಳಿಯ ಕಾರಣವಾಗಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಬೇಕಾಯಿತು.ಯುರೋಪಿನಲ್ಲೂ ಸಹ ನಾಜಿಗಳಿಗೆ ಡೇನಿಯರ ಅಹಿಂಸಾತ್ಮಕವಾದ ಚಳುವಳಿಯನ್ನು ಮತ್ತು ಅಂದೋಲನವನ್ನು ಎರಡನೇ ಮಹಾ ಯುಧ್ಧಾನಂತರ ಎದುರಿಸಬೇಕಾಯಿತು.

ಗಾಂಧೀಜಿಯವರು ಅಹಿಂಸಾತ್ಮಕ ಚಳುವಳಿ ಅಥವಾ ಅಂದೋಲನದ ಮಾದರಿಯನ್ನು ಅನುಸರಿಸಿ 1960 ರಲ್ಲಿ ವರ್ಣಭೇದದ ವಿರುಧ್ಧ, ಸಾಮಾನ್ಯ ಮಾನವ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಪಡೆಯಲು ಅಮೇರಿಕಾದಲ್ಲಿ ವಾಸಿಸುತ್ತಿದ್ದ ಆಫ್ರಿಕನ್ನರು ಹೋರಾಡಿ ಜಯ ಪಡೆದರು.

ಕಮ್ಯುನಿಸ್ಟ್ ದೇಶವಾಗಿದ್ದ ಪೋಲಂಡ್ನಲ್ಲಿ 1980 ರಲ್ಲಿ ಅಹಿಂಸಾತ್ಮಕ ಚಳುವಳಿಯ ಮೂಲಕವೇ, ಮುಕ್ತ ಕಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ಪಡೆದುಕೊಂಡವು. ಫಿಲಿಪಿನ್ಸ್ ಮತ್ತು ಚಿಲಿಯಂತಹ ದೇಶಗಳಲ್ಲೂ ಸರ್ವಾಧಿಕಾರಿಗಳನ್ನು ಇಳಿಸಿ ಪ್ರಜಾಸತ್ತೆಯನ್ನು ಸ್ಥಾಪಿಸಲು ಅಹಿ೦ಸಾತ್ಮಕ ಚಳುವಳಿಯನ್ನೇ ಬಹಳ ಸೂಕ್ತವಾಗಿ ಬಳಸಿಕೊಳ್ಳಲಾಯಿತು.

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ನಿರ್ಬಲಗೊಳಿಸಿ ಆ ದೇಶಕ್ಕೆ ಹೊಸ ರಾಜಕೀಯ ಆಯಾಮವನ್ನು ಕೊಡಲು ಸಾರ್ವಜನಿಕ ಅಹಿಂಸಾತ್ಮಕ ಚಳುವಳಿಯೇ ಕಾರಣವಾಗಿತ್ತು. 1980 ರ ಕೊನೆಗೆ ಪೂರ್ವ ಯುರೋಪ ಮತ್ತು ಮಂಗೋಲಿಯನ್ ದೇಶಗಳಲ್ಲೂ ಸಹ ಅಧಿಕಾರಸ್ಥ ಕಮ್ಯುನಿಸ್ಟರ ಹಿಡಿತವನ್ನು ಕಿತ್ತೊಗೆಯಲು ಮತ್ತು ಪ್ರಜಾತಂತ್ರದ ತಳಹದಿಯನ್ನು ಭದ್ರಪಡಿಸಲೂ ಸಹ ಅಹಿಂಸಾತ್ಮಕ ಚಳುವಳಿಗಳೇ ಕಾರಣವಾಗಿದ್ದವು.ಸನ್ 2000 ದಲ್ಲಿ ಸರ್ಬಿಯಾ ದೇಶದ ಮಿಲೋಸೆವಿಕ್ ಎಂಬ ಸರ್ವಾಧಿಕಾರಿಯನ್ನು ಕಿತ್ತೊಗೆಯಲು ಅಲ್ಲಿನ ಪೊಲೀಸರಿಗೆ ಮತ್ತು ಸೈನ್ಯಾಧಿಕಾರಿಗಳಿಗೆ, ವಿಧ್ಯಾರ್ಥಿಗಳ ಅಹಿಂಸಾತ್ಮಕ ಆಂದೋಲನವೇ ಪೂರಕವಾಗಿತ್ತು.

ಅಹಿಂಸಾತ್ಮಕ ಚಳುವಳಿಗಳಿಗೆ ವರ್ಚಸ್ವೀ ನಾಯಕರ ಅವಶ್ಯಕತೆ ಇಲ್ಲ. ಉದಾಹರಣೆಗೆ ಗಾಂಧೀಜಿ ತಮ್ಮ ವೈಯಕ್ತಿಕ ಸರಳತೆಯನ್ನೇ ಅವಲಂಬಿಸಿದ್ದರೂ ತಮ್ಮ ಪಟ್ಟು ಬಿಡದ ಮತ್ತು ದೃಡನಿರ್ಧಾರದ ತಳಹದಿಯ ಮೇಲೆ ರೂಪಿಸಿದ ಆಂದೋಲನದ ಕಾರ್ಯಕ್ರಮಗಳಿಂದ ಜನಮಾನಸದ ಮೇಲೆ ಪ್ರಭಾವ ಬೀರಿ, ಸ್ವಾವಲಂಬನೆಯಂತಹ ಸಿಧ್ಧಾ೦ತಗಳನ್ನು ಪ್ರತಿಪಾದಿಸಿ, ಜನರು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವಂತೆ ಮಾಡಿ ಕ್ರಮೇಣ ಜನಸಮೂಹದ ಮೇಲೆ ಬ್ರಿಟಿಷರ ಹಿಡಿತ ದೂರಾಗುವಂತೆ ಮಾಡಿದರು.

ಜೂ! ಮಾರ್ಟಿನ್ ಲೂಥರ್ ಕಿಂಗ್ ಒಬ್ಬ ಪ್ರತಿಭಾವಂತ ವಾಗ್ಮಿಯಾಗಿದ್ದ. ಅವನು ಮತ್ತು ಅವನ ಅನುಯಾಯಿಗಳು ಅಮೇರಿಕದ ಆಫ್ರಿಕನ್ನರನ್ನು, ವ್ಯವಸ್ಥೆಯ ಪ್ರತ್ಯೇಕವಾದದಮೇಲೆ ಅಹಿಂಸಾ ಪೂರ್ವಕ ಒತ್ತಡವನ್ನು ಹೇರಿ ಆರ್ಥಿಕ ಮತ್ತು ರಾಜಕೀಯ ಒತ್ತಾಸೆಯನ್ನು ಬಲಹೀನಗೊಳಿಸುವಂತೆ ರೂಪಿಸಿದರು. ಡೆನ್ಮಾರ್ಕಿನ ಭೂಗತ ಪ್ರತಿಭಟನಾ ನಾಯಕರೂ ಸಹ, ಎರಡನೇ ಮಹಾಯುಧ್ಧದ ಸಮಯದಲ್ಲಿ ಜರ್ಮನಿಯನ್ನು ತೀವ್ರವಾಗಿ ವಿರೋಧಿಸಿದರೂ ತಾವು ತೆರೆ ಮರೆಯಲ್ಲೇ ಇದ್ದರು.

ಯಾವುದೇ ಆಂದೋಲನಕ್ಕೆ ನಾಯಕತ್ವವು ಬಹಳ ಮುಖ್ಯ. ಆದರೆ ಆಂದೋಲನದ ಸಾಫಲ್ಯ ನಾಯಕರ ಸಕಾರಾತ್ಮಕ ಯೋಜನೆ, ಯೋಚನೆ ಮತ್ತು ವಿವೇಕದ ಮೇಲೆ ಆಧಾರಿತವಾಗಿರುತ್ತದೆ. ಚೀನಾ ದೇಶದ, ಟಿಯಾನನ್ ಮೆನ್ ಚೌಕದ ವಿಧ್ಯಾರ್ಥಿ ಆಂದೋಲನದಲ್ಲಿ ಅದ್ಭುತ ನಾಯಕರಿದ್ದಾಗ್ಯೂ ವ್ಯವಸ್ಥೆಯೊಂದಿಗೆ ಸಮರ್ಪಕವಾಗಿ ವ್ಯವಹರಿಸದೆ ಇದ್ದದ್ದರಿಂದ ಅವರ ಆಂದೋಲನ ಕುಸಿದು ಬಿತ್ತು.

20 ನೇ ಶತಮಾನದಲ್ಲಿ ದಬ್ಬಾಳಿಕೆಯಿಂದ ದೇಶವನ್ನಾಳುತ್ತಿದ್ದ ಹಲವು ಸರ್ವಾಧಿಕಾರಿಗಳನ್ನು, ಕೇವಲ ಅಹಿಂಸಾತ್ಮಕ ಚಳುವಳಿಯಿಂದಲೇ ಕಿತ್ತೊಗೆಯಲಾಯಿತು. ಜನರಲ್ ಪಿನೋಚೆಟ್ನಂಥ ಕ್ರೂರಿ, ಕೊಲೆಗಡುಕ ಮತ್ತು ಅಮಾನವೀಯ ಸರ್ವಾಧಿಕಾರಿಯನ್ನು ಅಹಿಂಸಾತ್ಮಕ ಚಳುವಳಿಯೇ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತು. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಕರಿಯರ ವಸಾಹತುಗಳ ಸಭೆಗಳ ಮೇಲಿನ ನಿರ್ಭಂಧಗಳು, ಇವುಗಳನ್ನು ವಿರೋಧಿಸಿದ ಸಂಘ ಸಂಸ್ಥೆಗಳ ಸಂಚಾಲಕರ ಅಮಾನವೀಯ ಕಗ್ಗೊಲೆ ಮುಂತಾದವುಗಳನ್ನು ಅಹಿಂಸಾತ್ಮಕ ಚಳುವಳಿಯಿಂದಲೇ ವಿರೋಧಿಸಿ ಜಯ ಪಡೆದಿದ್ದು ಇಂದು ಚರಿತ್ರೆಯಲ್ಲಿ ಸೇರಿಹೋಗಿದೆ.

“ಹಿಂಸೆಯಿಂದ ಏನು ಸಾಧ್ಯವಿಲ್ಲ”
“ಯುಧ್ದ ಯಾವುದಕ್ಕೂ ಪರಿಹಾರವಲ್ಲ”
“ಅಹಿಂಸಾತ್ಮಕ ಹೋರಾಟದಿಂದ ಎಲ್ಲವನ್ನೂ ಸಾಧಿಸಬಹುದೆಂದು ಪ್ರಪಂಚಕ್ಕೆ ಸಾರಿದ ಮಾಹಾನ್ ಚೇತನ ಮಹಾತ್ಮ ಗಾಂಧೀಜಿಯನ್ನು ಇಂದು ವಿಶ್ವವೇ ತಲೆಭಾಗಿ ಗೌರವಿಸುತ್ತಿದೆ”

About Author

Ismail Kandakkare

Follow On

ಇಸ್ಮಾಯಿಲ್‌ ಕಂಡಕೆರೆ

0 0 votes
Article Rating
Subscribe
Notify of
guest
0 Comments
Inline Feedbacks
View all comments