• Search Coorg Media

ಭಾರತೀಯ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಯರು

ಭಾರತೀಯ ಸಂವಿಧಾನ ರಚನೆಯಲ್ಲಿ
ಪ್ರಮುಖ ಪಾತ್ರ ವಹಿಸಿದ ಮಹಿಳೆಯರು

ಜನವರಿ 26 ರಂದು ಭಾರತದಲ್ಲಿ ಸಂವಿಧಾನ ಜಾರಿಗೊಂಡಿತು. ಈ ವರ್ಷ 26 ಜನವರಿ 2018ರಲ್ಲಿ 69 ನೇ ಗಣರಾಜ್ಯೋತ್ಸವ ಅಚರಿಸಲಾಯಿತು. 26 ಜನರಿ ಪ್ರತಿಯೊಬ್ಬ ಭಾರತೀಯನಿಗೆ ಎಷ್ಟು ವಿಶೇಷವೋ, ಅಷ್ಟೇ ವಿಶೇಷತೆ ಪಡೆಯುತ್ತಾರೆ ಇದನ್ನು ರಚಿಸಲು ಶ್ರಮಿಸಿದ ಪ್ರತಿಯೊಬ್ಬ ವ್ಯಕ್ತಿ. ನಮ್ಮ ಸಂವಿಧಾನವು 26 ಜನವರಿ 1950 ರಲ್ಲಿ ಅಧಿಕೃತವಾಗಿ ಜಾರಿಗೊಂಡಿತು. ಸಂವಿಧಾನ ಸಭೆಯು 9 ಡಿಸೆಂಬರ್ 1946 ರಲ್ಲಿ ಸಂವಿಧಾನ ರಚಿಸುವ ಕಾರ್ಯ ಆರಂಭಿಸಿತು. ಬರೋಬ್ಬರಿ 2 ವರ್ಷ, 11 ತಿಂಗಳು ಮತ್ತು 8 ದಿನಗಳಲ್ಲಿ ಜಗತ್ತಿನ ಅತಿ ಬೃಹತ್​ ಸಂವಿಧಾನ ರಚನೆಯ ಕಾರ್ಯ ಪೂರ್ಣಗೊಂಡಿತು. ಈ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷ ಬಿ. ಆರ್​ ಅಂಬೇಡ್ಕರ್​ ಆಗಿದ್ದರು, ಹೀಗಾಗಿಯೇ ಅವರನ್ನು ಇಂದಿಗೂ ಭಾರತದ ಸಂವಿಧಾನ ಶಿಲ್ಪಿ ಎಂದೇ ಕರೆಯಲಾಗುತ್ತದೆ. ಆದರೆ ಈ ಸಂವಿಧಾನ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರವೂ ಪ್ರಮುಖವಾದದ್ದು. ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಯರು ಯಾರು ಎಂದು ತಿಳಿದುಕೊಳ್ಳಿ.
* ನ್ಯಾಷನಲ್​ ಕಾಂಗ್ರೆಸ್​ನ ಮೊದಲ ಮಹಿಳಾ ಅಧ್ಯಕ್ಷೆ ಸರೋಜಿನಿ ನಾಯ್ಡು: ಇವರು ಭಾರತೀಯ ಸಂವಿಧಾನ ಮಸೂದೆಯಲ್ಲಿ ಮಹಿಳೆಯರಿಗೂ ಮತದಾನದ ಹಕ್ಕು ನೀಡುವಂತೆ ಲಂಡನ್​ನಲ್ಲಿ ಉಪಸ್ಥಿತರಿದ್ದ ಸಂಸದರಲ್ಲಿ ವಕಾಲತ್ತು ಮಾಡಿದ್ದರು.
* ಅಮ್ಮು ಸ್ವಾಮಿನಾಥನ್ ಸಂವಿಧಾನ ಸಭೆಯ ಸದಸ್ಯರಾಗಿದ್ದರು. ಇವರು 1952ರಲ್ಲಿ ಮದ್ರಾಸ್​ ಪ್ರಾಂತ್ಯದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
* ಹಂಸಾ ಮೆಹ್ತಾ ಕೊ-ಎಜುಕೇಷನ್ ಯುನಿವರ್ಸಿಟಿಯ ಮೊದಲ ಮಹಿಳಾ ಕುಲಪತಿಯಾಗಿದ್ದರು. ಇವರು ಸಂವಿಧಾನ ರಚನೆಯ ವೇಳೆ ದಲಿತ ವರ್ಗದ ಅಧಿಕಾರಕ್ಕಾಗಿ ವಕಾಲತ್ತು ನಡೆಸಿದ್ದರು.
* ವೃತ್ತಿಯಲ್ಲಿ ವಕೀಲೆಯಾಗಿದ್ದ ದುರ್ಗಾಬಾಯಿ ದೇಶ್​ಮುಖ್ 1946 ರಲ್ಲಿ ಸಂವಿಧಾನ ಯೋಜನಾ ಆಯೋಗದ ಸದಸ್ಯರಾದರು, ಸಂವಿಧಾನ ರಚನೆಯ ವೇಳೆ ಪ್ರತಿಯೊಬ್ಬ ನ್ಯಾಯಧೀಶರೂ ಭಾರತದ ನಾಗರಿಕರಾಗಿರಬೇಕೆಂದು ವಕಾಲತ್ತು ಮಾಡಿದ್ದರು.
* ಬೇಗಂ ಎಯಾಜ್ ರಸೂಲ್ ಸಂವಿಧಾನ ಸಮಿತಿಯ ಮೊದಲ ಮಹಿಳಾ ಮುಸ್ಲಿಂ ಸದಸ್ಯೆ. ಇವರು 1946ರಲ್ಲಿ ಸಂವಿಧಾನ ಸಮಿತಿಗೆ ಸೇರ್ಪಡೆಗೊಂಡರು. 1937ರಲ್ಲಿ ಇವರು ವಿಧಅನ ಪರಿಷತ್ತಿಗೆ ಚುನಾಯಿರಾಗಿದ್ದರು.
* ಸುಚೇತ ಕೃಪಲಾನಿ ಸಂವಿಧಾನ ಸಮಿತಿಯ ಕರಡು ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು. ಸ್ವಾತಂತ್ರ್ಯ ಸಿಕ್ಕ ಬಳಿಕ ಇವರು ನ್ಯಾಷನಲ್ ಕಾಂಗ್ರೆಸ್​ಗೆ ಸೇರ್ಪಡೆಯಾದರು.
* ವಿಜಯ ಲಕ್ಷ್ಮಿ ಪಂಡಿತ್ ನೆಹರು ಯುನೈಟೆಡ್ ನೇಷನ್ ಜನರಲ್ ಅಸೆಂಬ್ಲಿಯ ಮೊದಲ ಮಹಿಳಾ ಅಧ್ಯಕ್ಷೆಯಾದರು. 1946 ರಲ್ಲಿ ಸಂಯುಕ್ತ ಪ್ರಾಂತ್ಯದಿಂದ ಸಂವಿಧಾನ ಸಮಿತಿಯ ಸದಸ್ಯರಾದರು. ಮಾರ್ಚ್ 1963 ರಿಂದ ಆಗಸ್ಟ್ 1963 ರವರೆಗೆ ಅವರು ಮಹಾರಾಷ್ಟ್ರದ ರಾಜ್ಯಪಾಲರಾದರು.
* ರೇಣುಕಾ ರೇ, ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತರಾಗಿದ್ದ ಅವರು 1946-47 ರ ಅವಧಿಯಲ್ಲಿ ಸಮವಿಧಾನ ಸಭೆಯ ಸದಸ್ಯರಾಗಿದ್ದರು. 1957 ರಿಂದ 1967 ರವರೆಗೆ ಅವರು ಮಾಲ್ಡಾ ಲೋಕಸಭೆಯ ಸಂಸದರಾಗಿದ್ದರು.
* ರಾಜಕುಮಾರಿ ಅಮೃತ್ ಕೌರ್ ಸಂವಿಧಾನ ಯೋಜನಾ ಆಯೋಗದ ಸದಸ್ಯರಾಗಿದ್ದರು. ಅವರು ಹಿಂದೂಸ್ತಾನ ತಾಲೀಮು ಸಂಘದ ಮೊದಲ ಮಹಿಳಾ ಸದಸ್ಯರಾಗಿದ್ದರು. ಸ್ವಾತಂತ್ರ್ಯದ ಬಳಿಕ ಜವಹರ್​ಲಾಲ್ ನೆಹರೂರವರ ಕ್ಯಾಬಿನೆಟ್​ನಲ್ಲಿ 10 ವರ್ಷಗಳ ಕಾಲ ಆರೋಗ್ಯ ಸಚಿವರಾಗಿದ್ದರು.

✍. ಕಾನತ್ತಿಲ್ ರಾಣಿ ಅರುಣ್

Leave a Reply

Your email address will not be published. Required fields are marked *