ಕಾಂಗೀರ ಸತೀಶ್ (ಅಶ್ವಿ), ಸಹಕಾರಿಗಳು: ಮರಗೋಡು – Maragodu

 ಕಾಂಗೀರ ಸತೀಶ್ (ಅಶ್ವಿ), ಸಹಕಾರಿಗಳು: ಮರಗೋಡು – Maragodu

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗೀರ ಸತೀಶ್ (ಅಶ್ವಿ)ಯವರು ಪ್ರಸ್ತುತ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2006ರಲ್ಲಿ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಾಮ ನಿರ್ದೇಶಿತ ನಿರ್ದೇಶಕರಾಗಿ ಆಯ್ಕೆಗೊಂಡ  ಕಾಂಗೀರ ಸತೀಶ್‌ರವರು ಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ  ಪಾದಾರ್ಪಣೆಗೊಂಡರು.

ಕಾಂಗೀರ ಸತೀಶ್‌ರವರ ತಂದೆ ದಿವಂಗತ ಕಾಂಗೀರ ನಂಜುಂಡನವರು ಹಿರಿಯ ಸಹಕಾರಿಗಳಾಗಿದ್ದರು. ಸತೀಶ್‌ರವರ ಅಜ್ಜ ದಿವಂಗತ ಕಾಂಗೀರ ಕುಶಾಲಪ್ಪನವರ ಜ್ಞಾಪಕಾರ್ಥವಾಗಿ ಸತೀಶ್‌ರವರ ತಂದೆ ಹಾಗೂ ತಂದೆಯ ನಾಲ್ವರು ಸಹೋದರರು ಸೇರಿ 25 ಸೆಂಟ್ಸ್ ಜಾಗವನ್ನು  ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪನೆಗೆ ದಾನವನ್ನು ಮಾಡಿದರು. ಅಂದು ದಾನವಾಗಿ ನೀಡಲ್ಪಟ್ಟ ಜಾಗವನ್ನು ಪ್ರಸ್ತುತ ಸಂಘ ಹಾಗೂ ಧವಸ ಭಂಡಾರವು 25 ಸೆಂಟ್ ಜಾಗದಲ್ಲಿ 12.5 ಹಾಗೂ 12.5 ಸೆಂಟ್‌ನ ಹಾಗೆ ಸಮಾನವಾಗಿ ಹಂಚಿಕೊಂಡು ಕಾರ್ಯನಿರ್ವಹಿಸುತ್ತಿದೆ.

1997ರಲ್ಲಿ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದ ಕಾಂಗೀರ ಸತೀಶ್‌ರವರು ಕಳೆದ 24 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸತೀಶ್‌ರವರು ತಮ್ಮ ತಂದೆಯವರ ಧೀರ್ಘಕಾಲದ ಸಹಕಾರ ಕ್ಷೇತ್ರದ ಸೇವೆಯಿಂದ ಪ್ರೇರೇಪಣೆಗೊಂಡು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.

2008 ರಿಂದ 2013ರ ವರಗಿನ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಕಾಂಗೀರ ಸತೀಶ್‌ರವರು, 2020ರ ಚುನಾವಣೆಯಲ್ಲಿ ಸ್ಪರ್ಧಿಸಿ ಮರಳಿ ಆಯ್ಕೆಗೊಂಡು,  11-05-2020ರಿಂದ ಮುಂದಿನ ಅವಧಿಯವರೆಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

2019-20 ರ ಸಾಲಿನಲ್ಲಿ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 6.36 ಲಕ್ಷದಷ್ಟು ಲಾಭವನ್ನು ಗಳಿಸಿದೆ ಎಂದ ಕಾಂಗೀರ ಸತೀಶ್‌,  ಸಂಘದಿಂದ ಸದಸ್ಯರು ಪಡೆದ ಸಾಲದ ಸಕಾಲ ಮರುಪಾವತಿ, ಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ, ಮಧ್ಯಮಾವಧಿ ಸಾಲ, ವಾಹನ ಸಾಲ, ಆಭರಣ ಸಾಲ, ಸ್ವಸಹಾಯ ಸಂಘಗಳಿಗೆ ನೀಡಲ್ಪಟ್ಟ ಸಾಲ, ಕೃಷಿ ಸಾಲ, ವೇತನ ಆಧಾರಿತ ಸಾಲ, ಪಿಗ್ಮಿ ಸಾಲ ಹಾಗೂ ನಗದು ಸಾಲ ಮುಂತಾದವುಗಳಿಂದ ಸಂಘವು ಲಾಭವನ್ನು ಪಡೆದಿದೆ ಎಂದು ತಿಳಿಸಿದರು.

ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಸಹಕಾರ ಕ್ಷೇತ್ರದ ಇನ್ನೊಂದು ಮಗ್ಗುಲುವಾದ ಮಡಿಕ
ೇರಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.)ಯಲ್ಲಿ ಕಾಂಗೀರ ಸತೀಶ್ (ಅಶ್ವಿ)ಯವರು ಈ ಹಿಂದೆ ಅಧ್ಯಕ್ಷರಾಗಿದ್ದ ಅವಧಿಯ ಸಮಯ, ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಗ್ರಾಮೀಣ ರೈತರ ಅನುಕೂಲಕ್ಕಾಗಿ ರೈತ ಸಂತೆಯನ್ನು ಪ್ರಾರಂಭಿಸಿದರು. ಮಡಿಕೇರಿ ಎ.ಪಿ.ಎಂ.ಸಿ.ಯ ನವೀಕರಣ ಹಾಗೂ ಎ.ಪಿ.ಎಂ.ಸಿ. ಆವರಣದ ಹದ್ದುಬಸ್ತಿಗೆ ರಕ್ಷಣಾ ಗೋಡೆಯನ್ನು ನಿರ್ಮಿಸಿ ಕಳೆಗುಂದಿದ್ದ  ಮಡಿಕೇರಿ ಎ.ಪಿ.ಎಂ.ಸಿ.ಗೆ ಕಾಯಕಲ್ಪ ನೀಡಿದರು.

ಪ್ರಸ್ತುತ ಮಡಿಕೇರಿ ಎ.ಪಿ.ಎಂ.ಸಿ.ಯ ಸದಸ್ಯರಾಗಿ ಹಾಗೂ ಮಡಿಕೇರಿ ಹಾಪ್‌ಕಾಮ್ಸ್‌ನ ನಿರ್ದೇಶಕರಾಗಿ ಕಾಂಗೀರ ಸತೀಶ್‌ರವರು ಸೇವೆ ಸಲ್ಲಿಸುತ್ತಿದ್ದಾರೆ.

ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 13 ಸೆಂಟ್ ಜಾಗದಲ್ಲಿ ಆಡಳಿತ ಕಚೇರಿ ಕಟ್ಟಡ, ಸಭಾಂಗಣ, ಗೋದಾಮು, ಕೃಷಿ ಪರಿಕರಗಳ ಮಾರಾಟ ಮಳಿಗೆ ಹಾಗೆ ಅರೇಕಾಡು ಗ್ರಾಮದಲ್ಲಿ ಸಂಘದ ಶಾಖೆಯು ಕಾರ್ಯನಿರ್ವಹಿಸುತ್ತಿದೆ, ಎಂದ ಕಾಂಗೀರ ಸತೀಶ್‌ರವರು ಕಟ್ಟೆಮಾಡುವಿನಲ್ಲಿ ಸಂಘದ ಅಧೀನದಲ್ಲಿ ಗೋದಾಮು ಒಂದು  ಕಾರ್ಯಾಚರಿಸುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಪೂರ್ಣಮಟ್ಟದ ಹಸ್ತಕ್ಷೇಪ ಸಹಕಾರ ಕ್ಷೇತ್ರದಲ್ಲಿ ಇರಬಾರದು ಎಂದು ಅಭಿಪ್ರಾಯಪಟ್ಟ ಕಾಂಗೀರ ಸತೀಶ್‌, ಪಾರದರ್ಶಕ ಆಡಳಿತ ಹಾಗೂ ಪ್ರತಿಯೊಬ್ಬ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರ ಕಾರ್ಯಾಚರಿಸಬೇಕು ಎಂದು ಈ ಸಂದರ್ಭದಲ್ಲಿ ತಮ್ಮ ಸಲಹೆಯನ್ನು ನೀಡಿದರು.

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿರುವ ಯುವಶಕ್ತಿಗೆ ತಮ್ಮ ಸಂದೇಶವನ್ನು ನೀಡಿದರು.

ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಾಂಗೀರ ಸತೀಶ್(ಅಶ್ವಿ) ಯವರು 2000ನೇ ಇಸವಿಯಲ್ಲಿ ಬಿ.ಜೆ.ಪಿ.ಯ ಸದಸ್ಯತ್ವವನ್ನು ಪಡೆದು ಮರಗೋಡು ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ, ಬಿ.ಜೆ.ಪಿ. ಕೊಡಗು ಜಿಲ್ಲಾ ಕಾರ್ಯದರ್ಶಿಯಾಗಿ, ಇದೀಗ ಮಡಿಕೇರಿ ತಾಲೂಕು ಬಿ.ಜೆ.ಪಿ. ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಾಲಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾಗಿ, ಮಡಿಕೇರಿ  ಹಾಪ್‌ಕಾಮ್ಸ್‌ನ ನಿರ್ದೇಶಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಕಟ್ಟೆಮಾಡು ಗ್ರೀನ್ಸ್ ಯುವಕ ಸಂಘದ ಸದಸ್ಯರಾಗಿ ಸೇವೆ ಹಾಗೂ ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಮೂಲತ: ಕೃಷಿಕರಾಗಿರುವ ಕಾಂಗೀರ ಸತೀಶ್(ಅಶ್ವಿ), ತಂದೆ ದಿವಂಗತ ಕಾಂಗೀರ ನಂಜುಂಡ ಹಾಗೂ ತಾಯಿ ದಿವಂಗತ ಪಾರ್ವತಿ ದಂಪತಿಯ ಪುತ್ರರಾಗಿದ್ದಾರೆ.

ಪತ್ನಿ ಸವಿತಾ, ಹೆಣ್ಣು ಮಕ್ಕಳಾದ ದಿಶೀತಾ ಹಾಗೂ ವೃತ್ತಿಕಾ, ಮಗ ದಕ್ಷ್‌ ಕುಟುಂಬದೊಂದಿಗೆ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದಲ್ಲಿ ನೆಲೆಸಿದ್ದಾರೆ. ಕಾಂಗೀರ ಸತೀಶ್ (ಅಶ್ವಿ) ಅವರ ಮುಂದಿನ ಸಹಕಾರ, ರಾಜಕೀಯ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಸದಾ ಹೀಗೆ ಮುಂದುವರೆಯಿಲಿ ಎಂದು “ಸರ್ಚ್‌ ಕೂರ್ಗ್‌ ಮೀಡಿಯಾ” ಆಶಿಸುತ್ತದೆ.

ಸಂದರ್ಶನ ದಿನಾಂಕ: 27-03-2021

 

Search Coorg Media

Coorg’s Largest Online Media Network 

 

ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮರಗೋಡು. Maragodu Primary Agricultural Credit Co-operative Society LTD., (PACCS-Maragodu)

ಸರ್ಚ್‌ ಕೂರ್ಗ್‌ ಮೀಡಿಯಾ”ಸರ್ಚ್‌ ಕೂರ್ಗ್‌ ಮೀಡಿಯಾ” ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ…

Read More

ಮರಗೋಡು ವಿವಿದೊದ್ದೇಶ ಪ್ರಾಥಮಿಕ ಕ್ರಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರ – ಉಪಾಧ್ಯಕ್ಷರ ಆಯ್ಕೆ

ಸರ್ಚ್‌ ಕೂರ್ಗ್‌ ಮೀಡಿಯಾ”ಸರ್ಚ್‌ ಕೂರ್ಗ್‌ ಮೀಡಿಯಾ” ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ…

Read More

kodagu sahakara

Comments are closed.