ಮೇ 18: ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ

ಮೇ 18: ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ

ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ರಾಜಕೀಯ, ಸಾಂಸ್ಕೃತಿಕ ಇತಿಹಾಸಗಳಿರುತ್ತವೆ. ಕಾಲಾನಂತರದಲ್ಲಿ ಈ ಅವುಗಳು ಚರಿತೆಯಲ್ಲಿ ಹುದುಗಿ ಹೋಗಿಬಿಡುತ್ತವೆ. ಅಲ್ಲಿನ ಜನರಲ್ಲಿ ಕೇವಲ ಅದೊಂದು ಕಟ್ಟು ಕಥೆಯಾಗಿ ಚಾಲ್ತಿಯಲ್ಲಿರುತ್ತವೆ. ಆದರೆ ಈ ಇತಿಹಾಸಗಳು ನಾಶವಾಗಿ ಹೋಗದಂತೆ ತಡೆಯುವ ಕೆಲಸ ವಸ್ತು ಸಂಗ್ರಹಾಲಯಗಳು ಮಾಡುತ್ತವೆ. ಯಾವುದೋ ಐತಿಹಾಸಿಕ ಘಟನೆಗೆ ಸಂಬಂಧಿಸಿದ ವಿಚಾರಗಳು ಉತ್ಖನನದ ವೇಳೆ ಲಭಿಸಿದರೆ ಅವುಗಳನ್ನು ಸುರಕ್ಷಿತವಾಗಿ ಕಾಪಾಡಲು ವಸ್ತು ಸಂಗ್ರಹಾಲಯವೊಂದೇ ಮಾರ್ಗ.

ವಿಶ್ವ ವಸ್ತು ಸಂಗ್ರಹಾಲಯ ಕೌನ್ಸಿಲ್ 1977ರಲ್ಲಿ ಮೊದಲ ಬಾರಿಗೆ ಮ್ಯೂಸಿಯಂ ಡೇ ಅಥವಾ ವಸ್ತು ಸಂಗ್ರಹಾಲಯವನ್ನು ಆಚರಿಸಲು ನಿರ್ಧರಿಸುತ್ತದೆ. ಪ್ರತಿವರ್ಷ ಮೇ 18ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ (ಐಎಂಡಿ) ಎಂದು ಆಚರಿಸಲಾಗುತ್ತದೆ. 1977ರಿಂದ ಶುರುವಾದ ಈ ಆಚರಣೆಯ ಪ್ರಮುಖ ಉದ್ದೇಶವೆಂದರೆ ಸಂಸ್ಕೃತಿ ಪರಿಚಯ ಹಾಗೂ ವಿನಿಮಯ, ಜನರು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ಆ ಮೂಲಕ ಸಹಕಾರ ಹಾಗೂ ಶಾಂತಿ ಸ್ಥಾಪನೆ ಮತ್ತು ವಿಶ್ವಾದ್ಯಂತ ಅಹಿಂಸಾತ್ಮಕ ಅಭಿವೃದ್ಧಿ. ಇಂಟರ್‌ನ್ಯಾಷನಲ್‌ ಕೌನ್ಸಿಲ್‌ ಆಫ್‌ ಮ್ಯೂಸಿಯಮ್ಸ್‌ (ಐಸಿಒಎಂ) ನೇತೃತ್ವದಲ್ಲಿ ಐಎಂಡಿ ಆಚರಣೆ ನಡೆಯುತ್ತದೆ. ಇತಿಹಾಸ / ಚರಿತ್ರೆ , ಕಲೆ ಮತ್ತು ಸಾಹಿತ್ಯ, ವಿಜ್ಞಾನ ಹಾಗೂ ತಂತ್ರಜ್ಞಾನ, ಸಾಮಾನ್ಯ/ ಪ್ರಾದೇಶಿಕ, ವರ್ಚುಯೆಲ್‌/ಡಿಜಿಟಲ್‌ ಈ ಐದು ಮಾನದಂಡಗಳನ್ನು ಇಟ್ಟುಕೊಂಡು ಮ್ಯೂಸಿಯಂಗಳನ್ನು ವರ್ಗೀಕರಿಸಲಾಗುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಐತಿಹಾಸಿಕ ಪರಂಪರೆ, ಸಂಸ್ಕೃತಿ, ಆರ್ಥಿಕ, ಸಾಮಾಜಿಕ, ರಾಜಕೀಯ ಬದುಕಿಗೆ ಕನ್ನಡಿ ಹಿಡಿಯುವಂಥದ್ದು ವಸ್ತು ಸಂಗ್ರಹಾಲಯಗಳು. ಪ್ರೇರಣಾದಾಯಿಯಾಗಿರುವ ಪುರಾತನ ವಸ್ತುಗಳು ಹಿಂದಿನ ತಲೆಮಾರುಗಳ ಸ್ಪಷ್ಟ ಚಿತ್ರಣ ನೀಡುತ್ತವೆ. ಇವುಗಳಿಗೆ ಭದ್ರತೆ ಸಿಗಬೇಕೆಂದೇ ವಸ್ತು ಸಂಗ್ರಹಾಲಯವನ್ನು ಕಟ್ಟಲಾಗಿದೆ. ಇಂಥ ವಸ್ತು ಸಂಗ್ರಹಾಲಯಗಳಿಗೆ ಜನರನ್ನು ಕರೆತರುವ, ಇಲ್ಲಿರುವ ವಸ್ತುಗಳನ್ನು ಪರಿಚಯಿಸುವ ಸಲುವಾಗಿ ಪ್ರತಿ ವರ್ಷ ಮೇ 18ರಂದು ವಿಶ್ವ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತಿದೆ.

ಮ್ಯೂಸಿಯಂಗಳ ಇಂಟರ್ನ್ಯಾಷನಲ್ ಕೌನ್ಸಿಲ್ (ICOM) 1977 ರಲ್ಲಿ ಇಂಟರ್ನ್ಯಾಷನಲ್ ಮ್ಯೂಸಿಯಂ ಡೇ ಅನ್ನು ಸ್ಥಾಪಿಸಿತು. ಸಮಾಜದ ಅಭಿವೃದ್ಧಿಯಲ್ಲಿ ವಸ್ತುಸಂಗ್ರಹಾಲಯಗಳ ಪಾತ್ರವನ್ನು ಸಾರ್ವಜನಿಕ ಅರಿವು ಮೂಡಿಸಲು ಇದು ಪ್ರಾರಂಭವಾಯಿತು. 1946 ರಲ್ಲಿ ರಚಿಸಲಾದ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ (ICOM), ವಸ್ತುಸಂಗ್ರಹಾಲಯಗಳು ಮತ್ತು ವಸ್ತುಸಂಗ್ರಹಾಲಯ ವೃತ್ತಿಪರರ ವಿಶ್ವವ್ಯಾಪಿ ಸಂಸ್ಥೆಯಾಗಿದೆ. ICOM ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಮತ್ತು ರಕ್ಷಿಸಲು ಬದ್ಧವಾಗಿದೆ, ಪ್ರಸ್ತುತ ಮತ್ತು ಭವಿಷ್ಯದ, ಸ್ಪಷ್ಟ ಮತ್ತು ಅಮೂರ್ತ. 135 ರಾಷ್ಟ್ರಗಳಲ್ಲಿ 35,000 ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ICOMಜಾಲವು ವಿಶಾಲ ವ್ಯಾಪ್ತಿಯ ಮ್ಯೂಸಿಯಂ ಮತ್ತು ಪರಂಪರೆ ಸಂಬಂಧಿತ ವಿಭಾಗಗಳಿಂದ ಮ್ಯೂಸಿಯಂ ವೃತ್ತಿಪರರನ್ನು ಹೊಂದಿದೆ.

ಯಾಂತ್ರೀಕೃತ ಬದುಕಿನಲ್ಲಿ ಇಂದಿನ ದಿನಗಳೇ ಮರೆತು ಹೋಗುವಾಗ ಇತಿಹಾಸವನ್ನು ಭದ್ರವಾಗಿಡುವುದು ಒಂದು ಜವಾಬ್ದಾರಿಯೇ ಸರಿ. ಕೆಲವೊಂದು ಹುದುಗಿಹೋದ ಚರಿತ್ರೆಗಳೂ ವಸ್ತಗಳನ್ನು ನೋಡುವಾಗ ನೆನಪಿಗೆ ಬರುತ್ತವಾದರೆ ಅದಕ್ಕೆ ವಸ್ತು ಸಂಗ್ರಹಾಲಯಗಳೇ ಮುಖ್ಯ ಕಾರಣ.

ಇವತ್ತಿನ ದಿನ ವಸ್ತು ಸಂಗ್ರಾಹಾಲಯಗಳ ಮಹತ್ವ ಸಾರ್ವಜನಿಕರಿಗೆ ತಿಳಿಸಬೇಕಿದೆ. ಸಾಮಾಜಿಕ ಸುಧಾರಣೆಯ ಭಾಗವಾಗಿ ವಸ್ತು ಸಂಗ್ರಹಾಲಯಗಳನ್ನು ಅವಲೋಕಿಸಬೇಕಾಗಿದೆ. ವಸ್ತು ಸಂಗ್ರಾಹಾಲಯದ ವಸ್ತುಗಳು ನಮ್ಮ ಇತಿಹಾಸವನ್ನು ಹೇಳುತ್ತವೆ. ನಮ್ಮ ಮುಂದಿನ ಪೀಳಿಗೆಗೆ ಇತಿಹಾಸವನ್ನು ಗಟ್ಟಿಯಾಗಿಗಿ ಕಟ್ಟಿಕೊಡಬಲ್ಲ ಶಕ್ತಿಯನ್ನು ಹೊಂದಿವೆ. ಇಂತಹ ಮಹತ್ವ ಬಿಂಬಿಸುವ ದಿನಾಚರಣೆಯನ್ನು 30,000 ವಸ್ತು ಸಂಗ್ರಹಾಲಯಗಳು 120ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಸಮುದಾಯದೊಳಗೆ ವಸ್ತು ಸಂಗ್ರಹಾಲಯಗಳು ಹೇಗೆ ಹಾಸುಹೊಕ್ಕಾಗಬೇಕು ಎಂಬುವುದನ್ನು ಸಾರ್ವಜನಿಕರಿಗೆ ತಿಳಿಸಲು ಈ ದಿನಾಚರಣೆ ಅತ್ಯಂತ ಅವಶ್ಯಕವೆನಿಸುತ್ತದೆ.

ಲೇಖಕರು: ✍. ಅರುಣ್ ಕೂರ್ಗ್

ಅರುಣ್‌ ಕೂರ್ಗ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments