ಶಿಕ್ಷಣ ಕಾಶಿಯ ಗರಿಮೆ ಮಂಗಳೂರಿನ ಸ್ವಸ್ತಿಕ ನ್ಯಾಷನಲ್‌ ಬಿಸಿನೆಸ್‌ ಸ್ಕೂಲ್‌

ಮಂಗಳೂರು: ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬುದು ಪ್ರತಿ ತಂದೆ ತಾಯಿಗಳ ಕನಸು ಅದಕ್ಕಾಗಿ ಯಾವುದೇ ತ್ಯಾಗಕ್ಕಾಗಿ ಅವರು ಸಿದ್ಧರಾಗಿರುತ್ತಾರೆ. ಈ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ವಿಶ್ವದರ್ಜೆಯ ಶಿಕ್ಷಣ ಒದಗಿಸುವ ಮೂಲಕ ಪೋಷಕರ ಕನಸು ಸಾಕಾರಗೊಳಿಸುವ ಮಹತ್ತರ ಕಾರ್ಯವನ್ನು ಸ್ವಸ್ತಿಕ ನ್ಯಾಷನಲ್‌ ಬಿಸಿನೆಸ್‌ ಸ್ಕೂಲ್‌ ಮಾಡುತ್ತಿದೆ. 

ಸಂಸ್ಥೆಯ ಹುಟ್ಟು, ಮತ್ತು ಧ್ಯೇಯ: ಸ್ವಸ್ತಿಕ ಚಾರಿಟೆಬಲ್‌ ಟ್ರಸ್ಟ್‌ನ ಅಂಗಸಂಸ್ಥೆಯಾಗಿರುವ ಮಂಗಳೂರಿನ ಸ್ವಸ್ತಿಕ ನ್ಯಾಶನಲ್‌ ಸ್ಕೂಲ್‌  ಶಿಕ್ಷಣ ಕಾಶಿ ಎಂದೇ ಹೆಸರು ಪಡೆದಿರುವ ಮಂಗಳೂರಿನಲ್ಲಿ ಅತ್ಯುನ್ನತ ಧ್ಯೇಯ ಹೊಂದಿದ ಮಹೋನ್ನತ ಸಂಸ್ಥೆಯಾಗಿ ಮುಂದುವರಿಯುತ್ತಿದೆ. ಶಿಕ್ಷಣ ಸಂಸ್ಥೆಯು ಮಂಗಳೂರು ವಿವಿಗೆ ಒಳಪಟ್ಟಿದ್ದು 2020-21 ರಲ್ಲಿ ಸಮಾಜ ಕಾರ್ಯ, ವಾಣಿಜ್ಯ, ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಪದವಿ ಕೋರ್ಸ್‌ಗಳನ್ನು ಆರಂಭಿಸಿದೆ.  ಶಿಕ್ಷಣ ಸಂಸ್ಥೆಯಲ್ಲಿ ಬಿಕಾಂ, ಬಿಬಿಎ ಮತ್ತು ಬಿಎಸ್‌ಡಬ್ಲ್ಯು ಪದವಿ ತರಗತಿ ಅಭ್ಯಾಸಕ್ಕೆ ಅವಕಾಶವಿದೆ. 

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ : ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗೆ ಸಜ್ಜುಗೊಳಿಸವುದೇ  ಸ್ವಸ್ತಿಕ ಶಿಕ್ಷಣ ಸಂಸ್ಥೆ ಸ್ಥಾಪಕರ ಉದ್ದೇಶವಲ್ಲ. ಅದರೊಂದಿಗೆ ವಿದ್ಯಾರ್ಥಿಗಳನ್ನು ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ, ಅವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಪರಿವರ್ತಿಸಿ ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗುವಂತೆ ಮಾಡಿ ಬದುಕು ಹಸನುಗೊಳಿಸುವತ್ತ ಆಡಳಿತ ಮಂಡಳಿ, ಶಿಕ್ಷಕವರ್ಗ ದೃಷ್ಟಿ ಕೇಂದ್ರೀಕರಿಸಿದೆ. 

ವಿದ್ಯಾರ್ಥಿಯೊಬ್ಬ ಪದವಿ ಶಿಕ್ಷಣ ಪಡೆದ ಮಾತ್ರಕ್ಕೆ  ಉದ್ಯೋಗ ಮಾರುಕಟ್ಟೆಯಲ್ಲಿ ನೌಕರಿ ಗಿಟ್ಟಿಸುವುದು ಸುಲಭವಲ್ಲ. ಈ ನಿಟ್ಟಿನಲ್ಲಿ ಕೈಗಾರಿಕಾ  ಕ್ಷೇತ್ರದ ಉದ್ಯೋಗ ಅಗತ್ಯಗಳನ್ನು ಪೂರೈಸಲು ಸೇತುವೆಯಾಗಿ ಸಂಸ್ಥೆ ಮೊದಲ ಆದ್ಯತೆ ನೀಡುತ್ತಿದೆ. ಕಲಿಕೆಯ ಸಮಯದಲ್ಲಿಯೇ ಉದ್ಯೋಗ ಮಾರುಕಟ್ಟೆಯ ಅಗತ್ಯಗಳನ್ನು ಪರಿಗಣಿಸಿ ಅದಕ್ಕೆ ತಕ್ಕಂತೆ ಅವರಿಗೆ ತರಬೇತಿ ನೀಡುವುದನ್ನು ಸಂಸ್ಥೆಯ ಉದ್ದೇಶಗಳಲ್ಲೊಂದು. 

ಕಲಿಕೆಯೊಂದಿಗೆ ಆದಾಯ: ಸಂಸ್ಥೆಯು ಕಲಿಕೆಯೊಂದಿಗೆ ಆದಾಯ  ನಿಯಮ ಅಳವಡಿಸಿಕೊಂಡಿದ್ದು, ಈ ಮೂಲಕ ಶಿಕ್ಷಣದ ಅವಧಿಯಲ್ಲಿ ಉದ್ಯೋಗ ಮಾರುಕಟ್ಟೆಯ ಪ್ರಾಯೋಗಿಕ ಅಂಶಗಳನ್ನು ತಿಳಿಹೇಳಲಾಗುತ್ತದೆ. ಅಲ್ಲದೇ ಅರ್ನ್‌ ವೈಲ್‌ ಯು ಲರ್ನ್‌ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಕಂಡುಕೊಳ್ಳಲು ಸಹಾಯ ನೀಡಲಾಗುತ್ತಿದೆ. ಸ್ವಸ್ತಿಕ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ಕ್ಷೇತ್ರಕ್ಕೆ ಅತಿ ಅಗತ್ಯವಾದ ಇಂಗ್ಲಿಷ್‌ ತರಬೇತಿ, ಕೌಶಲ್ಯ ತರಬೇತಿ ಕೋರ್ಸ್‌ ಹೊಂದಿರುವುದು ಶಿಕ್ಷಣ ಸಂಸ್ಥೆಯ ವೈಶಿಷ್ಟ್ಯತೆ.  2ನೇ  ಮತ್ತು 3ನೇ ವರ್ಷದ ಪದವಿ ತರಗತಿಯಲ್ಲಿ ಅರ್ನ್‌ ವೈಲ್‌ ಯು ಲರ್ನ್‌ ತರಬೇತಿಗೆ ಅವಕಾಶ ಒದಗಿಸಲಾಗಿದೆ. ಸಿಎ, ಸಿಎಸ್‌, ಮ್ಯಾನೇಜ್‌ ಮೆಂಟ್‌, ಮತ್ತು ಐಟಿ ಕೋರ್ಸ್‌ ಅಲ್ಲದೇ ಇನ್‌ ಕ್ಯಾಂಪಸ್‌ ಇನ್‌ಕ್ಯೂಬೇಷನ್‌ ಸೌಲಭ್ಯ ಒದಗಿಸಲಾಗತ್ತಿದೆ. 

ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಶೇ. 100 ಉದ್ಯೋಗ ಅವಕಾಶ ಒದಗಿಸುವ ದೃಷ್ಟಿಯಿಂದ ಉದ್ಯೋಗ ಕ್ಷೇತ್ರ ಮತ್ತು ಕೈಗಾರಿಕಾ ಮತ್ತು ಇತರ ಕ್ಷೇತ್ರದ ಉದ್ಯೋಗ ಅವಕಾಶಗಳನ್ನು ಗಮನದಲ್ಲಿರಿಸಿ ತರಬೇತಿ ನೀಡಲಾಗುತ್ತಿದೆ. ತರಗತಿಯೊಳಗಿನ ಕಲಿಕೆಗಿಂತ ಪ್ರಾಯೋಗಿಕ ಅನುಭವಕ್ಕೆ ಸ್ವಸ್ತಿಕ ಶಿಕ್ಷಣ ಸಂಸ್ಥೆಯಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರದ ಸಾಧಕರೊಂದಿಗೆ ವಿದ್ಯಾರ್ಥಿಗಳು ವಿಚಾರ ವಿನಿಮಯ ನಡೆಸಲು, ಪ್ರಾಯೋಗಿಕ ತರಗತಿಗಳಿಗೆ ಹೆಚ್ಚನ ಆದ್ಯತೆ ನೀಡಲಾಗಿದೆ.   

ಎರಡು ವರ್ಷಗಳಲ್ಲಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದುವ ಮೂಲಕ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ತನ್ನನ್ನು ತಾನು ಆಲ್ ರೌಂಡರ್ ಸಾಧಕ ಎಂದು ಸಾಬೀತುಪಡಿಸಿದೆ. ಅಲ್ಲದೇ ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿಯೇ ಸ್ಟಾರ್ಟ್‌ ಅಪ್‌, ಇತರ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಅತಿ ಕಡಿಮೆ ಸಮಯದಲ್ಲಿ 65,00,000 ರೂ. ಗಳಿಕೆ ಮಾಡಿರುವುದು ಶಿಕ್ಷಣ ಸ್ಥಾಪನೆ ಕೇವಲ ವಿದ್ಯಾರ್ಥಿಗಳು ಕೇವಲ ಪರೀಕ್ಷೆ ಉತ್ತೀರ್ಣರಾಗುವಂತೆ ಮಾಡುವ ಜವಾಬ್ದಾರಿಯಲ್ಲ ಎಂದು ತೋರಿಸಿದೆ. ಬದಲಿಗೆ ಅವರಿಗೆ ಆದಾಯದ ಮೂಲಕ್ಕೆ ಬಲ ನೀಡುವ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.  ಅಲ್ಲದೇ ಶಿಕ್ಷಣ ಅವಧಿಯಲ್ಲಿಯೇ ಆದಾಯ ಗಳಿಕೆ ಅವಕಾಶ ನೀಡಿರುವ ಕೆಲವೇ ಶಿಕ್ಷಣ ಸಂಸ್ಥೆಗಳ ಪಾಲಿಗೆ ಸ್ವಸ್ತಿಕ ಸಂಸ್ಥೆಯೂ ಸೇರಿರುವುದು ಹೆಮ್ಮೆಯ ಸಂಗತಿಯಾಗಿದೆ. 

ಶಿಕ್ಷಣ ಪದ್ಧತಿ: ಮಂಗಳೂರು ವಿಶ್ವವಿದ್ಯಾ ಲಯವು ಸೂಚಿಸಿದ ಎನ್‌ಇಪಿ ಶಿಕ್ಷಣ ಪದ್ಧತಿಯನ್ನು ಸ್ವಸ್ತಿಕ ಅಳವಡಿಸಿಕೊಂಡಿದೆ. 3 ಹೊಸ ಸಂಸ್ಥೆಯ ಪ್ರಾರಂಭ ಮತ್ತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ 250 ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮ ನೀಡಿದ ಕೀರ್ತಿಯನ್ನು ಸಂಸ್ಥೆ ಪಡೆದುಕೊಂಡಿದೆ. ಸ್ವಸ್ತಿಕ ರಾಷ್ಟ್ರೀಯ ಶಾಲೆಯು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನದೊಂದಿಗೆ ಶಿಕ್ಷಣವನ್ನು ನೀಡಿದೆ.

ಮಂಗಳೂರು ನಗರಕ್ಕೆ ಬಿ ಸ್ಕೂಲ್‌ ಗರಿ: ಮಂಗಳೂರು ವಿಶ್ವವಿದ್ಯಾನಿಲಯವು ಈ ಸಂಸ್ಥೆಯನ್ನು ಮಂಗಳೂರು ನಗರದ ಪ್ರಥಮ ಬಿ ಶಾಲೆ ಎಂದು ಗುರುತಿಸಿದೆ. ಶೀಘ್ರದಲ್ಲೇ ಈ ಸಂಸ್ಥೆಯು ಅದರ ಹೆಸರನ್ನು ಸ್ವಸ್ತಿಕ ನ್ಯಾಷನಲ್ ಬಿ-ಸ್ಕೂಲ್ ಎಂದು ಪಡೆಯಲಿದೆ.

ಶಿಕ್ಷಣ ಸಂಸ್ಥೆ ಸ್ಥಾಪಕರು: ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಡಾ. ರಾಘವೇಂದ್ರ ಹೊಳ್ಳ ಅವರು ಸ್ವಸ್ತಿಕ ಚಾರಿಟೆಬಲ್‌ ಟ್ರಸ್ಟ್‌ನ ಚೇರ್‌ಮೆನ್‌ ಆಗಿದ್ದಾರೆ. ಅವರು ಮಂಗಳೂರು ವಿವಿಯಿಂದ ಎಂಎಸ್‌ಡಬ್ಲ್ಯು ಪದವಿ ಪಡೆದಿದ್ದು, ಸಮಾಜಶಾಸ್ತ್ರದಲ್ಲಿ ಎಂಫಿಲ್‌ ಪದವಿ, ಅಣ್ಣಾಮಲೈ ವಿವಿಯಿಂದ ಎಚ್‌ಆರ್‌ಎಂ, ಪಿಜಿಡಿಆರ್‌ಪಿ ಪದವಿ ಪಡೆದಿದ್ದಾರೆ. ಅಲ್ಲದೇ ಮೈಸೂರು ವಿವಿಯಿಂದ ಸೋಶಿಯಲ್‌ ವರ್ಕ್‌ ವಿಷಯದಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. ಅಲ್ಲದೇ ಪ್ರಸ್ತುತ ಐಐಎಂ ಕೋಝಿಕೋಡ್‌ ನಿಂದ ಸೀನಿಯರ್‌ ಮ್ಯಾನೇಜ್‌ಮೆಂಟ್‌ ಪದವಿ ಪಡೆಯುತ್ತಿದ್ದಾರೆ. ಈ ಹಿಂದೆ 5 ವರ್ಷಗಳ ಕಾಲ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಮಂಗಳೂರು ಎಸ್‌ಇಝಡ್‌ನಲ್ಲಿ ಅಡ್ಮಿನ್‌ ಮ್ಯಾನೇಜರ್‌ ಆಗಿ 13 ವರ್ಷ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ 5 ವರ್ಷಗಳ ಕಾಲ ಸ್ವಸ್ತಿಕ ಕನ್ಸಲ್ಟೆನ್ಸಿ ಸರ್ವಿಸ್‌ ನಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಸಾಫ್ಟ್‌ ಸ್ಕಿಲ್‌ ಟ್ರೈನರ್‌ ಆಗಿ ಗುರುತಿಸಿಕೊಂಡಿದ್ದು, ಜೆಸಿಐ ಮಂಗಳೂರು ಸಮರ್ಥ್‌ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.  

ಸ್ಟಾರ್ಟಪ್‌ಗಳು: ಶಿಕ್ಷಣ ಸಂಸ್ಥೆಯೇ ಸ್ಟಾರ್ಟಪ್‌ಗಳನ್ನು ನಡೆಸುವುದು ವಿನೂತನ ಸಾಹಸಮಯ ಕಲ್ಪನೆಯೇ ಸರಿ. ಇಂತಹ ಪರಿಕಲ್ಪನೆಯನ್ನು ಸ್ವಸ್ತಿಕ ಸಂಸ್ಥೆಯಲ್ಲಿ ಸಾಕಾರಗೊಳಿಸಲಾಗಿದೆ. 

ಸಂಸ್ಥೆಯು ಸ್ವಸ್ತಿಕ ಡಿಜಿಟಲ್‌ ಮಾರ್ಕೆಟಿಂಗ್‌, ಸ್ವಸ್ತಿಕ ಇ ಲರ್ನಿಂಗ್‌ ಇನ್‌ಸ್ಟಿಟ್ಯೂಷನ್‌, ಸ್ವಸ್ತಿಕ ಅಕೌಂಟ್ಸ್‌ ಮ್ಯಾನೇಜ್‌ಮೆಂಟ್‌ ಮತ್ತು ಮಾರ್ಕೆಟಿಂಗ್‌ ಸ್ಟಾರ್ಟಪ್‌ಗಳು ಕಾರ್ಯಾಚರಣೆಯಲ್ಲಿ ಇದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಹಾದಿ ಸುಭದ್ರಗೊಳಿಸಲು ನೆರವಾಗಿದೆ. 

ವಿದ್ಯಾರ್ಥಿಗಳ ಸ್ಟಾರ್ಟಪ್‌ ಸಾಹಸ: ವರುಣ್‌ ಪ್ರಭು ಎಕ್ಸ್‌ಯುಬ್ರಾಂಡ್‌ಡಿ ಸ್ಟಾರ್ಟಪ್‌ ಮುಖ್ಯಸ್ಥರಾಗಿದ್ದು, ಸಂಜಯ್‌ ಆಚಾರ್ಯ ಅವರು ಎಸ್‌ಜಿವಿ ಎಂಟರ್‌ಪ್ರೈಸಸ್‌ (ಕ್ವೀನ್ಸ್‌ ಕಾಫಿ) ಯನ್ನು ಮುನ್ನಡೆಸುತ್ತಿದ್ದಾರೆ. 

ಸಂಶೋಧನೆ ಕ್ಷೇತ್ರದಲ್ಲಿ ಸಂಸ್ಥೆಗೆ ಪ್ರಶಸ್ತಿ: ಸಂಸ್ಥೆಗೆ ಪಿಆರ್‌ಸಿಐ ನಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ಸಾಧನೆಗಾಗಿ 2022 ಜುಲೈ 16ರಂದು  ಬೆಸ್ಟ್‌ ಇನ್‌ಸ್ಟಿಟ್ಯೂಷನ್‌ ಪ್ರಶಸ್ತಿ ದೊರೆತಿದ್ದು, ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆದಿರುವುದನ್ನು ಸ್ಮರಿಸಬಹುದು.

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments