ಹೊಸೂರು ಸತೀಶ್ ಜೋಯಪ್ಪ, ಸಹಕಾರಿಗಳು: ಭಾಗಮಂಡಲ – Bhagamandala

ಹೊಸೂರು ಸತೀಶ್ ಜೋಯಪ್ಪ, ಸಹಕಾರಿಗಳು: ಭಾಗಮಂಡಲ – Bhagamandala

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.


ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲದವರಾದ ಹೆಚ್.ಜೆ. ಸತೀಶ್ ಕುಮಾರ್ (ಹೊಸೂರು ಸತೀಶ್ ಜೋಯಪ್ಪ) ಅವರು ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ತಂದೆ ಹೊಸೂರು ದಿವಂಗತ ಜೋಯಪ್ಪನವರು ಭಾಗಮಂಡಲ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಇವರ ಅವಧಿಯಲ್ಲಿ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿ ಸಹಕಾರ ಕ್ಷೇತ್ರದಲ್ಲಿ ಹಲವಾರು ಸೇವೆಗಳನ್ನು ಸಲ್ಲಿಸಿದ್ದಾರೆ. ತಂದೆಯಿಂದ ಪ್ರೇರಿತರಾಗಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕಳೆದ ಇಪ್ಪತ್ತು ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಹೊಸೂರು ಸತೀಶ್ ಜೋಯಪ್ಪ ಸೇವೆ ಸಲ್ಲಿಸುತ್ತಿದ್ದಾರೆ.

ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದ ಹೊಸೂರು ಸತೀಶ್ ಜೋಯಪ್ಪನವರು 2008ರಿಂದ ಅಧ್ಯಕ್ಷರಾಗಿ ಇಲ್ಲಿಯವರೆಗೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಹಾಗೆ ಕೊಡಗು ಪ್ರಗತಿಪರ ಜೇನು ಕೃಷಿ ಸಹಕಾರ ಸಂಘದಲ್ಲಿ 2010ರಿಂದ ಅಧ್ಯಕ್ಷರಾಗಿ ಇಲ್ಲಿಯವರೆಗೆ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.

“ರಾಷ್ಟ್ರೀಯ ವಾಣಿಜ್ಯ ಬ್ಯಾಂಕಿನಲ್ಲಿ ನೀಡುತ್ತಿರುವ ಎಲ್ಲ ರೀತಿಯ ಸಾಲವನ್ನು ನಮ್ಮ ಭಾಗಮಂಡಲ ಪ್ರಾಥಮಿಕ ಸಹಕಾರ ಸಂಘದಲ್ಲಿ ನೀಡಲಾಗುತ್ತಿದ್ದು, 2019-20 ರ ಸಾಲಿನಲ್ಲಿ ನಮ್ಮ ಸಹಕಾರ ಸಂಘವು 19 ಲಕ್ಷ ಲಾಭ ದಲ್ಲಿದೆ” ಎಂದು ಹೊಸೂರು ಸತೀಶ್ ಜೋಯಪ್ಪ ಅವರು ತಿಳಿಸಿದ್ದಾರೆ. “ನಮ್ಮ ಸಹಕಾರ ಸಂಘದ ಕಾರ್ಯಚಟುವಟಿಕೆಗಳನ್ನು ಡಿಜಿಟಲೀಕರಣ ಗೊಳಿಸಿ ಗ್ರಾಹಕರಿಗೆ ಉತ್ತಮ ರೀತಿಯ ಸೇವೆ ನೀಡುವಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದೆ” ಎಂದು ಹೊಸೂರು ಸತೀಶ್ ಜೋಯಪ್ಪನವರು ತಿಳಿಸಿದರು . ಹಾಗೆ ಮುಂದಿನ ದಿನಗಳಲ್ಲಿ ಬ್ಯಾಂಕಿನಲ್ಲಿ ಸ್ಟ್ಯಾಂಪ್ ಪೇಪರ್ ನ ವಿತರಣೆಯನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಯುವಪೀಳಿಗೆಯು  ತಮ್ಮ ಸ್ವ ನಿರೀಕ್ಷೆಗಳನ್ನು ಬಿಟ್ಟು ಸಾಮಾಜಿಕ ಕಳಕಳಿಯಿಂದ ಸಹಕಾರ ಕ್ಷೇತ್ರದಲ್ಲಿ ಪಾಲ್ಗೊಂಡು ಸಹಕಾರ ಕ್ಷೇತ್ರ ಪ್ರಬಲವಾಗಿ ದೃಢವಾಗಿ ನೆಲೆನಿಲ್ಲಲು ಸಹಕರಿಸಬೇಕು ಎಂದು ಹೊಸೂರು ಸತೀಶ್ ಜೋಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನಾನು ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿರುವ ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರುಗಳ ಸಹಕಾರದಿಂದ ಈ ಸಂಘಗಳು ಪ್ರಗತಿಯ ಪಥದತ್ತ ಸಾಗುತ್ತಿದೆ ಎಂದು ಶ್ರೀ ಹೊಸೂರು ಸತೀಶ್ ಜೋಯಪ್ಪನವರು ಹರ್ಷವನ್ನು ವ್ಯಕ್ತಪಡಿಸಿದರು.

ಪ್ರಸ್ತುತ ಕೊಡಗು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ, ಕೊಡಗು ಕೈಗಾರಿಕಾ ಮಾರಾಟ ಮತ್ತು ಸರಬರಾಜು ಸಹಕಾರ ಸಂಘದ ನಿರ್ದೇಶಕರಾಗಿ ಹಾಗೂ ಮಾಜಿ ಅಧ್ಯಕ್ಷರಾಗಿ, ಕೊಡಗು ಸಹಕಾರ ಯೂನಿಯನ್ ನಲ್ಲಿ ಐದು ವರ್ಷಗಳ ಕಾಲ ನಿರ್ದೇಶಕರಾಗಿ, ಜೆಡಿಎಸ್ ರಾಜ್ಯ ಸಮಿತಿ ಸದಸ್ಯರಾಗಿ, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾಗಿ, ಭಾಗಮಂಡಲ ಉತ್ಪಾದಕ ಕಂಪನಿ ನಿರ್ದೇಶಕರಾಗಿ, ಚೇರಂಗಾಲ ಗ್ರೀನ್ ಬ್ಯಾಂಕ್ ಅಧ್ಯಕ್ಷರಾಗಿ, ಚೇರಂಗಾಲ ಭಗವತಿ ದೇವಾಲಯದ ಅಧ್ಯಕ್ಷರಾಗಿ ಹಾಗೂ ತಮ್ಮ ತಂದೆಯವರು ಕಳೆದ ಅರವತ್ತು ವರ್ಷಗಳಿಂದ ಕೊಡಗಿನ ಹೆಸರಾಂತ ಬಸ್ ಸೇವೆಯಾದ ವಿಜಯಲಕ್ಷ್ಮಿ ಮೋಟಾರ್ಸ್‌ನ  ಪಾಲುದಾರರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ.

ತಂದೆ ದಿವಂಗತ ಹೊಸೂರು ಜೋಯಪ್ಪನವರು ಹಿರಿಯ ಸಹಕಾರಿಗಳು ವಿಜಯಲಕ್ಷ್ಮಿ ಮೋಟಾರ್ಸ್ ಬಸ್ ಸೇವೆಯ ಸ್ಥಾಪಕರು. ತಾಯಿ ಭಾಗಮಂಡಲ ಗ್ರಾಮಪಂಚಾಯಿತಿಯ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸೂರು ಸತೀಶ್ ಜೋಯಪ್ಪನವರು ಪ್ರಸ್ತುತ ಪತ್ನಿ-ಮಕ್ಕಳೊಂದಿಗೆ ಭಾಗಮಂಡಲದಲ್ಲಿ ನಲೆಸಿದ್ದಾರೆ. ಇವರ ಈ ಸಮಾಜಮುಖಿಸೇವೆಯು ಇದೇ ರೀತಿಯಲ್ಲಿ ನಡೆಯಲಿ ಎಂದು “ಸರ್ಚ್‌ ಕೂರ್ಗ್‌ ಮೀಡಿಯಾ” ಆಶಿಸುತ್ತದೆ.



ಸಂದರ್ಶನದ ದಿನಾಂಕ: 08-12 -2020


Search Coorg Media

Coorg’s Largest Online Media Network 


ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.