ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದ 18ರ ಹರೆಯದ 'ಪೃಥ್ವಿ ಶಾ' ದ್ರಾವಿಡ್ ಶಿಷ್ಯ ಭವಿಷ್ಯದ ಸಚಿನ್

ಡಜನ್’ಗಟ್ಟಲೆ ದಾಖಲೆಗಳನ್ನು ಮುರಿದ 18ರ ಹರೆಯದ ‘ಪೃಥ್ವಿ ಶಾ’ ದ್ರಾವಿಡ್ ಶಿಷ್ಯ ಭವಿಷ್ಯದ ಸಚಿನ್

ಅಂತರರಾಷ್ಟ್ರೀಯ ಮಟ್ಟದ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಪದಾರ್ಪಣೆ ಮಾಡಿರುವ ಪೃಥ್ವಿ ಶಾ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಪೃಥ್ವಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಕೇವಲ 3 ಗಂಟೆಗಳಲ್ಲಿ ಡಜನ್’ಗಟ್ಟಲೆ ದಾಖಲೆಗಳನ್ನು ಮುರಿದಿದ್ದಾರೆ. ಇವುಗಳಲ್ಲಿ ಸಚಿನ್ ತಂಡೂಲ್ಕರ್ ರಂತಹ ದಿಗ್ಗಜರ ದಾಖಲೆಗಳೂ ಸೇರಿವೆ.
ದ್ರಾವಿಡ್ ಶಿಷ್ಯ ಭವಿಷ್ಯದ ಸಚಿನ್ ತೆಂಡೂಲ್ಕರ್ ಎಂದೇ ಕರೆಯಲ್ಪಡುತ್ತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ರಾಜ್‌ಕೋಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ತಮ್ಮ ಚೊಚ್ಚಲ ಪಂದ್ಯದಲ್ಲಿ ಮುಂಬೈ ಬ್ಯಾಟ್ಸ್ಮನ್ 154 ಎಸೆತಗಳಲ್ಲಿ 134 ರನ್ ಗಳಿಸಿದರು. ಅವರು ಈಗಾಗಲೇ ಟೆಸ್ಟ್ ಶತಕವನ್ನು ದಾಖಲಿಸಿದ 15 ನೇ ಭಾರತೀಯರಾಗಿ ಹೊರಹೊಮ್ಮಿದ್ದಾರೆ.

‘ ಪೃಥ್ವಿ ಶಾ’ ಪ್ರಮುಖ ದಾಖಲೆಗಳು:
ಟೆಸ್ಟ್ ವೃತ್ತಿ ಜೀವನವನ್ನು ಆರಂಭಿಸಿದ ‘ಪೃಥ್ವಿ ಶಾ’ ಒಂದೂವರೆ ಗಂಟೆಯೊಳಗೆ ಅರ್ಧಶತಕವನ್ನು ಪೂರ್ಣಗೊಳಿಸಿದರು. ವೆಸ್ಟ್‌ಇಂಡೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಪೃಥ್ವಿ 56 ಎಸೆತಗಳಲ್ಲಿ ಅರ್ಧಶತಕ ತಲುಪಿದ್ದರು. ಎರಡು ಗಂಟೆಗಳ ಆಟದ ಬಳಿಕ ಊಟದ ವಿರಾಮಕ್ಕಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಆ ಸಮಯದಲ್ಲಿ ಪೃಥ್ವಿ 75 ರನ್ ಗಳಿಸಿದ್ದರು. 40 ನಿಮಿಷಗಳ ವಿರಾಮದ ನಂತರ ಆಟವು ಪ್ರಾರಂಭವಾಯಿತು, ಆದರೆ ಮತ್ತೆ ಅದೇ ಲಯದಲ್ಲಿ ಕಾಣಿಸಿಕೊಂಡ ಪೃಥ್ವಿ ಮುಂದಿನ 45 ನಿಮಿಷಗಳಲ್ಲಿ ಶತಕ ಪೂರೈಸಿದರು. ಪೃಥ್ವಿ 99 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಡೆಬ್ಯು ಪಂದ್ಯದಲ್ಲೇ ಶತಕ ಬಾರಿಸಿದ 15ನೇ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪ್ರಥಮ ಟೆಸ್ಟ್ ಪಂದ್ಯಗಳಲ್ಲಿ ಕಿರಿಯ ವಯಸ್ಸಿನಲ್ಲಿ ಶತಕ
ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ‘ಪೃಥ್ವಿ ಶಾ’. 18 ವರ್ಷ 329 ದಿನಗಳ ಪೃಥ್ವಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಆಟಗಾರರಲ್ಲಿ ನಾಲ್ಕನೇಯವರಾಗಿದ್ದಾರೆ.

ಬಾಂಗ್ಲಾದೇಶದ ಮೊಹಮ್ಮದ್ ಅಶ್ರಫುಲ್ (17 ವರ್ಷ ಮತ್ತು 61 ದಿನಗಳು),
ಜಿಂಬಾಬ್ವೆಯಿಂದ ಎಚ್. ಮಸಕಾಡ್ಜಾ (17 ವರ್ಷ 352 ದಿನಗಳು) ಮತ್ತು
ಪಾಕಿಸ್ತಾನದ ಸಲೀಂ ಮಲಿಕ್ (18 ವರ್ಷ 323 ದಿನಗಳು) ಚಿಕ್ಕ ವಯಸ್ಸಿನಲ್ಲಿ ಶತಕ ಗಳಿಸಿರುವ ಇತರ ಆಟಗಾರರು.
ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಟೆಸ್ಟ್ ಕ್ರಿಕೆಟ್ ಚೊಚ್ಚಲ ಪಂದ್ಯಗಳಲ್ಲಿ ಶತಕ:
ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಟೆಸ್ಟ್ ಕ್ರಿಕೆಟ್ ಚೊಚ್ಚಲ ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲ ಕ್ರಿಕೆಟಿಗ ಪೃಥ್ವಿ ಶಾ. ಮೊದಲ ರಣಜಿ ಪಂದ್ಯದಲ್ಲಿ 120 ರನ್ಗಳನ್ನು ಮತ್ತು ಮೊದಲ ದುಲೀಪ್ ಟ್ರೋಫಿಯಲ್ಲಿ 154 ರನ್ ಗಳಿಸಿದರು. ಅದೇ ಸಮಯದಲ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ರಣಜಿ ಮತ್ತು ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಸಚಿನ್ ಶತಕ ಬಾರಿಸಿದರು, ಆದರೆ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ ಅವರು ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ.

ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮೂರನೇ ಅತಿ ವೇಗದ ಶತಕ:
ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅತೀ ವೇಗದ ಶತಕ ಸಿಡಿಸಿದ ಮೂರನೆಯ ವೇಗದ ಕ್ರಿಕೆಟಿಗ ಪೃಥ್ವಿ ಶಾ. ಇವರು 99 ಎಸೆತಗಳಲ್ಲಿ ಶತಕ ಸಿಡಿಸಿದರು. ಡೆಬ್ಯೂ ಟೆಸ್ಟ್ ಪಂದ್ಯದಲ್ಲಿ ವೇಗದ ಶತಕ ಗಳಿಸುವ ವಿಶ್ವ ದಾಖಲೆ ಶಿಖರ್ ಧವನ್ ಅವರದ್ದು. ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ 85 ಎಸೆತಗಳಲ್ಲಿ ಶತಕ ಗಳಿಸಿದರು. ಎರಡನೇ ಅತ್ಯಂತ ವೇಗದ ಶತಕವೆಂದರೆ ವೆಸ್ಟ್ ಇಂಡಿಯನ್ ಡ್ವೇನ್ ಸ್ಮಿತ್. ಅವರು ದಕ್ಷಿಣ ಆಫ್ರಿಕಾ ವಿರುದ್ಧ 93 ಎಸೆತಗಳಲ್ಲಿ ಶತಕ ಬಾರಿಸಿದರು.

ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ ಏಳನೇ ಆಟಗಾರ:

ಕಿರಿಯ ವಯಸ್ಸಿನ ಶತಕ ಸಿಡಿಸಿದವರಲ್ಲಿ ಪೃಥ್ವಿ ಏಳನೇ ಸ್ಥಾನದಲ್ಲಿದ್ದಾರೆ. ವಿಶ್ವ ದಾಖಲೆಯಲ್ಲಿ ಮೊಹಮ್ಮದ್ ಅಶರಫುಲ್ (17 ವರ್ಷ 61 ದಿನಗಳ) ಎಂದು ಹೆಸರು ಮೊದಲಿದೆ. ಮುಷಕ್ತಾ ಮೊಹಮ್ಮದ್ (17 ವರ್ಷ, 78 ದಿನಗಳು), ಸಚಿನ್ ತೆಂಡುಲ್ಕರ್ (17 ವರ್ಷ 107 ದಿನಗಳು), ಮಸಾಕಾಡ್ಜಾ (17 ವರ್ಷ 352 ದಿನಗಳು), ಸಲೀಂ ಮಲಿಕ್ (18 ವರ್ಷ 323 ದಿನಗಳು) ಮತ್ತು ಇಮ್ರಾನ್ ನಝೀರ್ (18 ವರ್ಷ 154 ದಿನಗಳು) ಇವರ ನಂತರದ ಸ್ಥಾನದಲ್ಲಿ ಪೃಥ್ವಿ ಸ್ಥಾನ ಪಡೆದಿದ್ದಾರೆ.

ಎಲ್ಲವೂ ಶತಕದೊಂದಿಗೆ ಆರಂಭ
ಪಾದಾರ್ಪಣ ಪಂದ್ಯಗಳಲ್ಲೆಲ್ಲ ಶತಕ ಬಾರಿಸುವು ದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ 18ರ ಹರೆಯದ ಪೃಥ್ವಿ ಶಾ, ಟೆಸ್ಟ್‌ ಕ್ರಿಕೆಟ್‌ನಲ್ಲೂ ಇದನ್ನು ಪುನರಾವರ್ತಿಸಿ ವಿಜೃಂಭಿಸಿದರು. ಇದಕ್ಕೂ ಮುನ್ನ ರಣಜಿ ಹಾಗೂ ದುಲೀಪ್‌ ಟ್ರೋಫಿ ಕೂಟದ ಚೊಚ್ಚಲ ಪಂದ್ಯದಲ್ಲೇ ಸೆಂಚುರಿ ಬಾರಿಸಿ ಸುದ್ದಿಯಾಗಿದ್ದರು. ದುಲೀಪ್‌ ಟ್ರೋಫಿ ಇತಿಹಾಸದ “ಕಿರಿಯ ಶತಕವೀರ’ನೆಂಬ ಹೆಗ್ಗಳಿಕೆ ಇವರದ್ದಾಗಿದೆ. 50 ಟೆಸ್ಟ್‌ ಪಂದ್ಯಗಳ ಅನುಭವಿಯಂತೆ ಬ್ಯಾಟಿಂಗ್‌ ನಡೆಸಿದ “ಮುಂಬೈಕರ್‌’, ಆರಂಭದಿಂದಲೇ ಆಕ್ರಮಣಕಾರಿ ಮೂಡ್‌ನ‌ಲ್ಲಿದ್ದರು. ಲಂಚ್‌ ವೇಳೆಗಾಗಲೇ 75ರ ಗಡಿ ಮುಟ್ಟಿದ್ದರು. 99 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಇನ್ನೇನು ಟೀಗೆ ತೆರಳಬೇಕೆನ್ನುವಾಗ ಬಿಶೂಗೆ ರಿಟರ್ನ್ ಕ್ಯಾಚ್‌ ನೀಡುವ ಮೂಲಕ ತಮ್ಮ ಸೊಗಸಾದ ಆಟಕ್ಕೆ ತೆರೆ ಎಳೆದರು.

೧೮ರ ಹರೆಯದ ಪೃಥ್ವಿ ಶಾ ಸಾಧನೆಯ ಕೆಲವು ತುಣುಕುಗಳು.

ಪೃಥ್ವಿ ನಾಯಕತ್ವದಲ್ಲಿ ರಿಜ್ವಿ ಸ್ಪ್ರಿಂಗ್ ಫೀಲ್ಡ್ ಹೈಸ್ಕೂಲ್ ಗೆ ಹ್ಯಾರಿಸ್ ಶಿಲ್ಡ್ ಗೆಲುವು

೨೦೧೩ ೧೪ ರ ಹರೆಯದಲ್ಲೇ ೩೩೦/ಎಸೆತದಲ್ಲಿ ೫೪೬ ರಮ್ ಚಚ್ಚಿದ ಪೃಥ್ವಿ ( ೮೫ ಬೌಂಡರಿ ಹಾಗೂ ೫ ಸಿಕ್ಸ್ ರ್ ಗಳು) ಹ್ಯಾರಿಸ್ ಶೀಲ್ಡ್ ‘ಎ’ ಡಿವಿಷ ನಲ್ಲಿ ರಿಜ್ವಿ ತಂಡಕ್ಕೆ ಎರಡನೇ ಟ್ರೋಫಿ

೨೦೧೬ ಶ್ರೀಲಂಕಾದಲ್ಲಿ ನಡೆದ ಯೂತ್ ಏಷ್ಯಾ ಕಪ್ ಗಾಗಿ ಭಾರತದ ಅಂಡರ್ ೧೯ ತಂಡಕ್ಕೆ ಸೇರ್ಪಡೆ. ಪ್ರಥಮ ದರ್ಜೆ ಪಾದಾರ್ಪಣೆ. ತಮಿಳುನಾಡು ವಿರುದ್ಧ ರಣಜಿಗೆ ಡೆಬ್ಯೂ.ಮ್ಯಾಚ್ ವಿನ್ನಿಂಗ್ ಶತಕ ಬಾರಿಸಿದ ಪೃಥ್ವಿ

೨೦೧೭ ೧೭ ರ ಹರೆಯದಲ್ಲಿ ಮುಂಬಯಿ ಪರ ‘ಎ’ ದರ್ಜೆ ಕ್ರಿಕೆಟ್‌ಗೆ ( ವಿಜಯ್ ಹಜಾರೆ ಟ್ರೋಫಿ) ಪಾದಾರ್ಪಣೆ.ಡುಲೀಪ್ ಟ್ರೋಫಿ ಯಲ್ಲಿ ಶತಕ‌ ಬಾರಿಸಿದ ಅತೀ ಕಿರಿಯ ಬ್ಯಾಟ್ಸ್ ಮೆನ್ ( ಸಚಿನ್ ದಾಖಲೆ ಮುರಿದ ಪೃಥ್ವಿ

೨೦೧೮ ನ್ಯೂಜಿಲೆಂಡ್ ನಲ್ಲಿ ನಡೆದ ಅಂಡರ್- ೧೯ ವಿಶ್ವಕಪ್ ನಲ್ಲಿ ಪೃಥ್ವಿ ಮುಂದಾಳತ್ವದಲ್ಲಿ ಭಾರತಕ್ಕೆ ಕಿರೀಟ

*ಐಪಿಎಲ್ ನಲ್ಲಿ ೧.೨ ಕೋಟಿ
ರೂಗಳಿಗೆ ಪೃಥ್ವಿ ಶಾರನ್ನು ಬಾಚಿದ ಡೆಲ್ಲಿ ಡೇರ್ ಡೆವಿಲ್ಸ್,
ಸಂಜು ಸ್ಯಾಮ್ ಸನ್ ಜೊತೆ ಐಪಿಎಲ್ ನಲ್ಲಿ ಫಿಫ್ಟಿ ಬಾರಿಸಿದ ಅತೀ ಕಿರಿಯ ಬ್ಯಾಟ್ಸ್ ಮೆನ್ ಎಂಬ ಜಂಟಿ ದಾಖಲೆ.(೧೮ ವರ್ಷ ೧೬೯ ದಿನ)*

ಭಾರತ ಎ ತಂಡದಲ್ಲೂ ಪೃಥ್ವಿ ಮಿಂಚು‌ ಲೆಸಸ್ಟರ್ ಶೈರ್ ವಿರುದ್ದ‌ ಭಾರತ ಎ ತಂಡದ ಪರ ಮೊದಲ‌ ಶತಕ ( ೧೩೨) ಸಾಧನೆ.

ಚೊಚ್ಚಲ ಬುಲಾವ್: ಇಂಗ್ಲೆಂಡ್ ವಿರುದ್ದ ಭಾರತ ಟೆಸ್ಟ್ ತಂಡಕ್ಕೆ ಪ್ರಥಮ‌ ಬಾರಿ ಆಯ್ಕೆ.ಆದರೆ ಆಡುವ ಅವಕಾಶ ಸಿಗಲಿಲ್ಲ.
ಪಾದಾರ್ಪಣೆ ಶತಕ‌ದ ದಾಖಲೆ:
ರಾಜ್ ಕೋಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಪಾದಾರ್ಪಣೆ ಪಂದ್ಯದಲ್ಲೇ ಶತಕ‌ ಸಾಧನೆ (೧೩೪ ರನ್) .ನಾಯಕ ವಿರಾಟ್ ಕೊಹ್ಲಿಯಿಂದ ಚೊಚ್ಚಲ ಟೆಸ್ಟ್ ಕ್ಯಾಪ್.ಭಾರತ ಪರ ಡೆಬ್ಯೂ ಮಾಡಿದ ಅತೀ ಕಿರಿಯ ಎರಡನೇ ಓಪನರ್.

೧೮ ರ ಹರೆಯದ ಪೃಥ್ವಿ
ಭಾರತದ ಟೆಸ್ಟ್ ಕ್ಯಾಪ್ ಧರಿಸಿದ ೨೯೩ ನೇ ಆಟಗಾರ ೧೮ ವರ್ಷ ೩೨೯ ನೇ ದಿನದಲ್ಲಿ ಡೆಬ್ಯೂ ಪಂದ್ಯ.

ಪೃಥ್ವಿ ದಾಖಲೆ

ಪೃಥ್ವಿ ಡೆಬ್ಯೂ ಪಂದ್ಯದಲ್ಲೇ ಫಿಫ್ಟಿ ಭಾರಿಸಿದ ಭಾರತದ ಅತೀ ಕಿರಿಯ ಬ್ಯಾಟ್ಸ್ ಮೆನ್ ,ಡೆಬ್ಯೂ ಪಂದ್ಯದಲ್ಲೇ ಶತಕ‌ ಬಾರಿಸಿದ ೧೫ ನೇ ಭಾರತಿಯ ಬ್ಯಾಟ್ಸ್ ಮೆನ್.

ಸಚಿನ್ ಬೆನ್ನಟ್ಟಿದ ಪೃಥ್ವಿ
ಸಚಿನ್ ತೆಂಡೂಲ್ಕರ್ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಎರಡನೇ ಅತೀ ಕಿರಿಯ ಬ್ಯಾಟ್ಸ್ ಮೆನ್ . ೫೫ ಎಸೆತಗಳಲ್ಲಿ ಅರ್ಧ ಶತಕ, ೯೯ ಎಸೆತಗಳಲ್ಲಿ ಶತಕ.

ಪೃಥ್ವಿ ಪಾದಾರ್ಪಣೆ ಪಂದ್ಯಗಳಲ್ಲಿ ಸಾಧನೆ

ರಣಜಿ ಟ್ರೋಫಿ: ೧೨೦ ರನ್ ತಮಿಳುನಾಡು ವಿರುದ್ದ,
ರಾಜ್ ಕೋಟ್: ದುಲೀಪ್ ಟ್ರೋಫಿ ೧೫೪ ರನ್, ಇಂಡಿಯಾ ಬ್ಲೂ ವಿರುದ್ದ ಲಕ್ನೋ, ೧೦೦,
ವೆಸ್ಟ್ ಇಂಡೀಸ್ ವಿರುದ್ಧ ರಾಜ್ ಕೋಟ್.

ದ್ರಾವಿಡ್ ಶಿಷ್ಯ ಭವಿಷ್ಯದ ಸಚಿನ್
ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ಮುಂಬೈನ ಪೃಥ್ವಿ ಶಾ ಅವರನ್ನು ಭವಿಷ್ಯದ ಸಚಿನ್ ಎಂದೇ
ಪರಿಗಣಿಸಲಾಗಿದೆ.

About Author

Ismail Kandakkare

Follow On

ಇಸ್ಮಾಯಿಲ್‌ ಕಂಡಕೆರೆ

0 0 votes
Article Rating
Subscribe
Notify of
guest
0 Comments
Inline Feedbacks
View all comments