ಎರೆಹುಳು ಗೊಬ್ಬರ ಉತ್ಪಾದನೆ ಮತ್ತು ಅದರ ಮಹತ್ವ Production and importance of earthworm fertilizer

ಎರೆಹುಳು ಗೊಬ್ಬರ ಉತ್ಪಾದನೆ ಮತ್ತು ಅದರ ಮಹತ್

ಎರೆಹುಳುವನ್ನು ರೈತನ ಮಿತ್ರ, ರೈತ ಬಂಧು, ಭೂನಾಗ ಮಳೆಹುಳು, ಪ್ರಕೃತಿಯ ನೇಗಿಲು ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಎರೆಹುಳು ರೈತನ ಹಾಗೆ ನಿರಂತರ ಭೂಮಿಯಲ್ಲಿ ಕೆಲಸ ಮಾಡುತ್ತಲೇ ಇರುತ್ತದೆ. ಅದು ಕೆಳಭಾಗದ ಮಣ್ಣನ್ನು ಮೇಲಕ್ಕೆ ತಂದು ಭೂಮಿಯನ್ನು ನಿರಂತರವಾಗಿ ಉಳುತ್ತಾ, ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಹಕರಿಸುತ್ತದೆ. ಮಣ್ಣಿನಲ್ಲಿ ತೇವಾಂಶ, ನೆರಳು ಮತ್ತು ಸಾವಯವ ಅಂಶ ಈ ಜೀವಿಗೆ ಬಹಳ ಇಷ್ಟವಾದ್ದರಿಂದ ತೇವಾಂಶ ನೆರಳು ಮತ್ತು ಸಾವಯವ ಅಂಶ ಒದಗಿಸಬೇಕು. ಇದು ಸಾವಯವ ವಸ್ತುಗಳನ್ನು ತನ್ನ ಜಠರದಲ್ಲಿ ವಿಭಜಿಸಿ, ವಿವಿಧ ಪೆÇೀಷಕಾಂಶಗಳನ್ನು ಒಳಗೊಂಡ ಹಿಕ್ಕೆಗಳನ್ನು ಹಾಕುತ್ತದೆ. ಈ ಹಿಕ್ಕೆಯೇ ಎರೆಗೊಬ್ಬರ. ಎರೆಹುಳುಗಳನ್ನು ಕೃಷಿಯಲ್ಲಿ ಸಿಗುವ ತ್ಯಾಜ್ಯ ವಸ್ತುಗಳನ್ನು ಉತ್ಕೃಷ್ಟವಾದ ಗೊಬ್ಬರವನ್ನಾಗಿ ಪರಿವರ್ತಿಸಲು ಬಳಸಬಹುದು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಎರೆಗೊಬ್ಬರದ ಉಪಯೋಗ ಮತ್ತು ಮಹತ್ವ
• ಎರೆಹುಳು ಗೊಬ್ಬರ ಮಣ್ಣಿಗೆ ಸಾವಯವ ಅಂಶ ಒದಗಿಸಿ ಮಣ್ಣಿನ ರಚನೆ, ನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಮತ್ತು ಮಣ್ಣಿನ ಗಾಳಿಯಾಡುವಿಕೆಯನ್ನು ಉತ್ತಮಗೊಳಿಸುತ್ತದೆ.
• ಎರೆಗೊಬ್ಬರ ಉಪಯುಕ್ತ ಸೂಕ್ಷ್ಮ ಜೀವಿಗಳಾದ ಸಾರಜನಕ ಸ್ಥಿಥೀಕರಿಸುವ, ರಂಜಕ ಕರಗಿಸುವ ಹಾಗೂ ರೋಗ ನಿರೋಧಕ ಉತ್ಪಾದಿಸುವ ಜೀವಾಣುಗಳಿಗೆ ಉತ್ತಮ ವಾತಾವರಣ ಕಲ್ಪಿಸಿ ಅವುಗಳ ವೃದ್ಧಿಗೆ ಸಹಕಾರಿಯಾಗುತ್ತದೆ.
• ಎರೆಹುಳು ಗೊಬ್ಬರ ಬೆಳೆಗಳಿಗೆ ಬೇಕಾದ ಮುಖ್ಯ, ಲಘು ಪೆÇೀಷಕಾಂಶಗಳು ಮತ್ತು ಬೆಳೆವರ್ಧಕಗಳನ್ನು ಸಮತೋಲನ ಪ್ರಮಾಣದಲ್ಲಿ ಒದಗಿಸುತ್ತದೆ.
• ಎರೆಹುಳು ಗೊಬ್ಬರ ಸಸ್ಯ ಬೆಳವಣಿಗೆಗೆ ಬೇಕಾದ ಹಾರ್ಮೋನ್/ಬೆಳೆವರ್ಧಕಗಳನ್ನು ಒದಗಿಸುವುದರಿಂದ ಸಸ್ಯಗಳಲ್ಲಿ ಕೀಟ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಸಮಸ್ಯಾತ್ಮಕ ಮಣ್ಣುಗಳಲ್ಲಿ ಎರೆಹುಳು ಗೊಬ್ಬರ ಬಳಸುವುದರಿಂದ ಲವಣಾಂಶ, ಕ್ಷಾರೀಯತೆ ಮತ್ತು ಆಮ್ಲೀಯತೆ ಪ್ರಮಾಣ ಕಡಿಮೆಯಾಗಿ ಬೆಳೆಗಳಿಗೆ ಬೇಕಾಗುವ ಸಸ್ಯ ಪೆÇೀಷಾಕಾಂಶಗಳ ಲಭ್ಯತೆ ಹೆಚ್ಚುತ್ತದೆ.
• ಎರೆಹುಳು ಗೊಬ್ಬರದ ಬಳಕೆಯಿಂದ ರಾಸಾಯನಿಕ ರಹಿತ ಉತ್ಪನ್ನಗಳನ್ನು ಪಡೆಯುವುದರ ಜೊತೆಗೆ ಸ್ವಲ್ಪಮಟ್ಟಿಗೆ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು.
• ಎರೆಹುಳು ಗೊಬ್ಬರ ತಯಾರಿಕೆಯಿಂದ ಜಮೀನಿನ ಸಾವಯವ ತ್ಯಾಜ್ಯವಸ್ತುಗಳ ಸಮರ್ಥ ಬಳಕೆ ಮತ್ತು ಮನೆಯಂಗಳದಲ್ಲಿ ಸ್ವಚ್ಛತೆಯನ್ನು ಕಾಪಾಡಿ ಪರಿಸರ ಮಾಲಿನ್ಯ ತಡೆಗಟ್ಟಬಹುದು.
• ಗ್ರಾಮೀಣ ಯುವಕ ಯುವತಿಯರಿಗೆ ಕೃಷಿಪರ ಸ್ವಯಂ ಉದ್ಯೋಗ ಕೈಗೊಳ್ಳುವ ಅವಕಾಶ.

ಎರೆ ಗೊಬ್ಬರದ ಪೆÇೀಷಕಾಂಶಗಳು
ಸಾವಯವ ಗೊಬ್ಬರಗಳಲ್ಲಿ ಹೆಚ್ಚು ಉತ್ಕೃಷ್ಟವಾದ ಹಾಗೂ ಹೆಚ್ಚು ಪೆÇೀಷಕಾಂಶಗಳನ್ನು ಒದಗಿಸುವ ಗೊಬ್ಬರ ಎರೆಹುಳು ಗೊಬ್ಬರ. ಪ್ರತೀ ಕ್ವಿಂಟಾಲ್ ಎರೆಗೊಬ್ಬರ ಸುಮಾರು 800 ಗ್ರಾಂ. ಸಾರಜನಕ, 1100 ಗ್ರಾಂ. ರಂಜಕ ಮತ್ತು 500 ಗ್ರಾಂ. ಪೆÇಟ್ಯಾಷ್ ಹೊಂದಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಲಘು ಪೆÇೀಷಕಾಂಶಗಳಾದ ಕ್ಯಾಲ್ಸಿಯಂ, ಬೋರಾನ್, ಸತು, ಮಾಲಿಬ್ಡಿನಂ, ಬೆಳೆವರ್ಧಕಗಳು ಮತ್ತು ಸೂಕ್ಷ್ಮಾಣುಜೀವಿಗಳನ್ನು ಹೊಂದಿರುತ್ತದೆ.

ಎರೆಹುಳುಗಳ ಆಯ್ಕೆ
ನಮ್ಮ ರಾಜ್ಯದಲ್ಲಿ ಸುಮಾರು 150-200 ಜಾತಿಗೆ ಸೇರಿರುವ ಎರೆಹುಳುಗಳು ಕಾಣಲು ಸಿಗುತ್ತವೆ. ಆದರೆ ಎರೆಹುಳು ಸಾಕಾಣಿಕೆ ಮತ್ತು ಎರೆಗೊಬ್ಬರ ತಯಾರಿಕೆಯ ದೃಷ್ಠಿಯಿಂದ ಮೂರು ಜಾತಿಯ ಹುಳುಗಳು ಬಹಳ ಪ್ರಾಮುಖ್ಯವಾದುದು ಎಂದು ಗುರುತಿಸಲಾಗಿದೆ. ಅವುಗಳೆಂದರೆ

1. ಯೂಡ್ರಿಲಸ್ ಯೂಜೀನಿಯಾ (ಆಫ್ರಿಕದ ನಿಶಾಚರಿ)
ಈ ಜಾತಿಯ ಎರೆಹುಳುಗಳು 200 ಸೆ. ರಿಂದ 280 ಸೆ. ಉಷ್ಣತೆಯಲ್ಲಿ ಬಹುಬೇಗ ಅಧಿಕ ಸಂಖ್ಯೆಯಲ್ಲಿ ವೃದ್ಧಿಯಾಗುವ ಸಾಮಥ್ರ್ಯವನ್ನು ಹೊಂದಿವೆ. ಹುಳುಗಳು 8 ರಿಂದ 10 ವಾರಗಳಲ್ಲಿ ದೊಡ್ಡದಾಗಿ ಬೆಳೆಯುವುದರಿಂದ ಅವುಗಳನ್ನು ಆಗಾಗ್ಗೆ ಬೇರ್ಪಡಿಸುತ್ತಿರಬೇಕು. ಇವು ಬೇರೆ ಜಾತಿಯ ಹುಳುಗಳೊಂದಿಗೆ ಬೆರೆತಾಗ ಬಹುಬೇಗನೆ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಆದರೆ ಗದ್ದೆಗಳಲ್ಲಿ ಇವುಗಳು ಅಷ್ಟಾಗಿ ಬೆಳೆಯಲಾರವು.

2. ಐಸೀನಿಯಾ ಪೆÇಟಿದಾ(ಟೈಗರ್ ಹುಳು/ಯುರೋಪಿಯನ್ ಹುಳು)
ತ್ಯಾಜ್ಯವಸ್ತುಗಳನ್ನು ಎರೆಗೊಬ್ಬರವನ್ನಾಗಿ ಮಾಡುವಲ್ಲಿ ಈ ಜಾತಿಯ ಎರೆಹುಳು ಪ್ರಮುಖ ಪಾತ್ರ ವಹಿಸಿದೆ. ಎರೆಗೊಬ್ಬರ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಬಹುದಾದ ಎರೆಹುಳು ಇದಾಗಿದೆ. ಈ ಎರೆಹುಳವು 4-6 ವಾರಗಳಲ್ಲೇ ಬೆಳೆದು ಪ್ರೌಢಾವಸ್ಥೆಗೆ ಸೇರುತ್ತದೆ. ಈ ಹುಳುಗಳ ವೃದ್ದಿಗೆ 250 ಸೆ. ತಾಪಮಾನವು ಸೂಕ್ತವಾಗಿರುತ್ತದೆ. ಇವುಗಳು ಪ್ರೌಢಾವಸ್ಥೆಗೆ ಸೇರಲು ಹೆಚ್ಚಿನ ಸಾರಜನಕಯುಕ್ತ ಆಹಾರ, ಸೂಕ್ತ ಆದ್ರ್ರತೆ, ಹುಳುಗಳ ಸಂಖ್ಯೆ ಮತ್ತು ಉಷ್ಣಾಂಶ ಬಹುಮುಖ್ಯ.

3. ಪೆರಿಯೋನಿಕ್ಸ್ ಎಕ್ಸಕವೇಟಸ್ (ಗಾಳದ ಹುಳು)
ಅತಿ ಬೇಗನೆ ವೃದ್ಧಿಯಾಗುವ ಮತ್ತು ಸಾಕಬಲ್ಲ ಎರೆಹುಳು ಇದಾಗಿದೆ. ಆದರೆ ಕಡಿಮೆ ತಾಪಮಾನದಲ್ಲಿ ಬಹುಬೇಗನೆ ನಾಶವಾಗುತ್ತದೆ. ಪ್ರಾಣಿ ಮೂಲದ ತ್ಯಾಜ್ಯವಸ್ತುಗಳ ಎರೆಗೊಬ್ಬರ ಮಾಡುವಲ್ಲಿ ಇದರ ಪಾತ್ರ ಹೆಚ್ಚು. ಉಷ್ಣವಲಯದಲ್ಲಿ ಗೊಬ್ಬರ ತಯಾರಿಸಲು ಸೂಕ್ತವಾದ ಎರೆಹುಳು ಮತ್ತು ವರ್ಮಿಟನ್ ಪೆÇ್ರಟೀನ್ ಪಡೆಯಲು ಉತ್ತಮವಾದ ಹುಳು.
ಎರೆಹುಳು ಜೀವನ ಶೈಲಿ
ಎರೆಹುಳುಗಳು ದ್ವಿಲಿಂಗಿಗಳು. ಗಂಡು ಮತ್ತು ಹೆಣ್ಣು ಜನನೇಂದ್ರಿಯಗಳು ಒಂದೇ ಹುಳುವಿನಲ್ಲಿದ್ದರೂ, ಗಂಡು ಹೆಣ್ಣು ಹುಳುಗಳ ಮಿಲನದಿಂದ ಮಾತ್ರ ಸಂತಾನೋತ್ಪತ್ತಿಯಾಗುತ್ತದೆ. ಎರೆಹುಳುಗಳ ದೇಹದ ಮುಂಭಾಗದಲ್ಲಿರುವ ಉಂಗುರಗಳ ಪಟ್ಟಿಯು ಮೊಟ್ಟೆಯಿಡುವ ಸಮಯ ಸಮೀಪಿಸಿದಂತೆ ದಪ್ಪವಾಗಿ ಸ್ಪಷ್ಟವಾಗಿ ಕಾಣುತ್ತದೆ. ಎರೆಹುಳುಗಳು ಮೊಟ್ಟೆಯ ಕೋಶವನ್ನು ತೇವದ ಮಣ್ಣಿನಲ್ಲಿಡುತ್ತದೆ ಮತ್ತು ಮೊಟ್ಟೆಯ ಕೋಶವು ಕೊತ್ತಂಬರಿ ಬೀಜದ ಆಕಾರದಲ್ಲಿದ್ದು ಎರಡು ತುದಿಗಳಲ್ಲಿ ಮುಳ್ಳಿನಂತೆ ರಚನೆಗಳಿರುತ್ತವೆ. ಈ ಮೊಟ್ಟೆಯ ಕೋಶಗಳ ಮೊದಲು ನಸುಬಿಳಿ ಬಣ್ಣವಿದ್ದು ಮರಿಗಗಳು ಹೊರಬರುವ ಸಮಯದಲ್ಲಿ ಕಂದುಬಣ್ಣವಿರುತ್ತವೆ. ಒಂದು ಮೊಟ್ಟೆಯ ಕೋಶದಲ್ಲಿ ಸುಮಾರು 2-20 ಮೊಟ್ಟೆಗಳಿರುತ್ತವೆ. ಒಂದು ಜೋಡಿ ಎರೆಹುಳುಗಳು 3-6 ತಿಂಗಳ ಅವಧಿಯಲ್ಲಿ ಸುಮಾರು 100 ಮೊಟ್ಟೆಯ ಕೋಶಗಳನ್ನು ಹಾಕುತ್ತವೆ. ಒಂದು ಮೊಟ್ಟೆಯ ಕೋಶದಿಂದ ಸರಾಸರಿ 3-7 ಮರಿಗಳು ಹೊರಬರುತ್ತವೆ. ಎರೆಹುಳುಗಳು ಸುಮಾರು 2-3 ವರ್ಷ ಬದುಕುತ್ತವೆ.

ಎರೆಹುಳು ಗೊಬ್ಬರ ತಯಾರಿಕೆಗೆ ಬೇಕಾಗುವ ಸಾವಯವ ತ್ಯಾಜ್ಯವಸ್ತುಗಳು
ಎರೆಹುಳು ಗೊಬ್ಬರ ತಯಾರಿಕೆಗೆ ಸಸ್ಯ ಮತ್ತು ಪ್ರಾಣಿಜನ್ಯ ತ್ಯಾಜ್ಯವಸ್ತುಗಳಾದ ಅಡಿಗೆ ಮನೆ ತ್ಯಾಜ್ಯ ವಸ್ತು, ತೆಂಗಿನ ನಾರು, ತೆಂಗಿನ ಗರಿ, ಅಡಿಕೆ ಸಿಪ್ಪೆ, ಅಡಿಕೆ ಸೋಗೆ, ಕಬ್ಬಿನ ಸಿಪ್ಪೆ, ಹಸಿರೆಲೆ, ತರಗೆಲೆ, ಹಿಂದಿನ ಬೆಳೆಯ ಕೂಳೆ/ಅವಶೇಷ, ನಗರ/ಪಟ್ಟಣದ ಕಸ, ಆಹಾರ ಕೈಗಾರಿಕೆಯ ತ್ಯಾಜ್ಯ ವಸ್ತು ಮುಂತಾದುವುಗಳನ್ನು ಸಂಗ್ರಹಿಸಿ ನೀರು ಮತ್ತು ಸಗಣಿಯೊಂದಿಗೆ ಮಿಶ್ರಣ ಮಾಡಿ ಸುಮಾರು ಮೂರು ವಾರಗಳವರೆಗೆ ಕೊಳೆಯಲು ಬಿಡಬೇಕು. ಈ ಸಮಯದಲ್ಲಿ 2-3 ಸಾರಿ ಮಿಶ್ರಣವನ್ನು ತಿರುವಿ ಹಾಕಿ ಅದರಲ್ಲಿರುವ ಪ್ಲಾಸ್ಟಿಕ್ ಮತ್ತು ಗಾಜಿನ ಚೂರುಗಳನ್ನು ಬೇರ್ಪಡಿಸಬೇಕು. ನಂತರ ತೊಟ್ಟಿಗೆ ತುಂಬಿ ಎರೆಹುಳುಗಳನ್ನು ಬಿಡಬೇಕು. ಅಮೋನಿಯ ಎರೆಹುಳುವಿಗೆ ಅಪಾಯಕಾರಿ (ಉದಾ: ಕೋಳಿ ಹಿಕ್ಕೆ). ಆದ್ದರಿಂದ ಸಾವಯವ ವಸ್ತುಗಳನ್ನು ಮೊದಲೇ ಕೊಳೆಯಿಸಿ ಉಪಯೋಗಿಸಬೇಕು. ಉಪ್ಪಿನಾಂಶ ಹೆಚ್ಚಿನ ಪ್ರಮಾಣದಲ್ಲಿದ್ದರೂ ಕೂಡಾ ಅಪಾಯಕಾರಿ. ಆದ್ದರಿಂದ ಇತರ ಸಾವಯವ ವಸ್ತುಗಳ ಜೊತೆ ಮಿಶ್ರಣ ಮಾಡಿ ಬಳಸಬೇಕು.

ಎರೆಗೊಬ್ಬರ ತಯಾರಿಸುವ ತೊಟ್ಟಿಯ ನಿರ್ಮಾಣ
ತೊಟ್ಟಿಯನ್ನು ಭೂಮಿಯ ಒಳಗೂ ಇಲ್ಲವೇ ಮೇಲೂ ಇಟ್ಟಿಗೆಯ ಸಹಾಯದಿಂದ ತಯಾರಿಸಬಹುದು. ಭೂವಿಯ ಮೇಲೆ ತೊಟ್ಟಿಯಲ್ಲಿ ಎರೆಗೊಬ್ಬರ ತಯಾರಿಸುವುದು ಉತ್ತಮ. ಸುಮಾರು 8-10 ಅಡಿ ಉದ್ದ 3 ಅಡಿ ಅಗಲ ಮತ್ತು 11/2 ಅಡಿ ಎತ್ತರ ಇರುವ ಹಾಗೆ ಸಿಮೆಂಟಿನ ತೊಟ್ಟಿಗಳನ್ನು ನಿರ್ಮಿಸಿಕೊಳ್ಳುವುದು ಸೂಕ್ತ. ತೊಟ್ಟಿಯ ಎತ್ತರ ಹೆಚ್ಚಾದಲ್ಲಿ ಹೆಚ್ಚಿನ ಶಾಖ ಉತ್ಪತ್ತಿಯಾಗಿ ಎರೆಹುಳುವಿನ ಚಟುವಟಿಕೆ ಬಹಳ ಕುಂದುತ್ತದೆ. ತೊಟ್ಟಿಯನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸಲು ತೊಟ್ಟಿಗಳನ್ನು ನೆರಳಿರುವ ಸುರಕ್ಷಿತ ಪ್ರದೇಶಗಳಲ್ಲಿ ನಿರ್ಮಿಸಬೇಕು ಅಥವಾ ಚಪ್ಪರ ಹಾಕುವುದರ ಮೂಲಕ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಒದಗಿಸಬೇಕು.

ತೊಟ್ಟಿಯನ್ನು ಕಚ್ಛಾವಸ್ತುಗಳಿಂದ ತುಂಬುವುದು
ತೊಟ್ಟಿಯ ತಳಭಾಗಕ್ಕೆ ಹೆಚ್ಚು ನಾರಿನಾಂಶವಿರುವ ತೆಂಗಿನ ಸಿಪ್ಪೆ ಅಥವಾ ಕೃಷಿ ತ್ಯಾಜ್ಯವಸ್ತು, ಸಗಣಿ, ತರಗೆಲೆ, ಹಸಿರೆಲೆ ಗೊಬ್ಬರ, ಮಣ್ಣು ಹೀಗೆ ಒಂದರ ಮೇಲೆ ಒಂದರಂತೆ ಪದರ ಪದರವಾಗಿ ತೊಟ್ಟಿಯಲ್ಲಿ ತುಂಬಿಸಬೇಕು. ಕಚ್ಛಾವಸ್ತುಗಳನ್ನು ತುಂಬಿದ ಮೇಲೆ 15-20 ದಿವಸಗಳವರೆಗೆ ಈ ಮಡಿಗೆ 1-2 ಬಕೆಟ್ ನೀರನ್ನು ಪ್ರತೀ ದಿನ ಹಾಕಬೇಕು. 15 ದಿನಗಳ ನಂತರ ಸುಮಾರು 1000 ಎರೆಹುಳುಗಳನ್ನು ಮಡಿಯಲ್ಲಿ ಬಿಡಬೇಕು. ನಂತರ ಕೊನೆಯ ಪದರವಾಗಿ 3-4 ಇಂಚು ದಪ್ಪದಾಗಿ ಸಗಣಿ ಗೊಬ್ಬರವನ್ನು ಹರಡಿ ಹೊದಿಕೆಯಾಗಿ ಬೀಳುವಂತೆ ಭತ್ತದ ಹುಲ್ಲಿನಿಂದ ಮುಚ್ಚಬೇಕಾಗುತ್ತದೆ. ತೊಟ್ಟಿಯನ್ನು ಯಾವಾಗಲೂ ನೆರಳು ಮತ್ತು ಶೇ. 40-50 ತೇವಾಂಶವಿರುವಂತೆ ಕಾಪಾಡಿಕೊಳ್ಳಬೇಕು. ತೊಟ್ಟಿಯ ಮೇಲೆ ಇರುವ ಪದರ ಯಾವಾಗಲೂ ಒದ್ದೆ ಇರುವಂತೆ ಮಾಡಿದರೆ ತೊಟ್ಟಿಯಲ್ಲಿ ನಿಗದಿತ ತೇವಾಂಶ ಉಳಿಯುವುದು. ಈ ರೀತಿ ತೇವಾಂಶವನ್ನು ಕಾಯ್ದುಕೊಳ್ಳುವುದರಿಂದ ಎರೆಹುಳುಗಳು ಬೇಗನೆ ಅಭಿವೃದ್ಧಿ ಹೊಂದುತ್ತವೆ.

ಎರೆಗೊಬ್ಬರ ಉತ್ಪಾದನೆ ಮತ್ತು ಹುಳುಗಳ ಬೇರ್ಪಡಿಸುವಿಕೆ
ಎರೆಹುಳುಗಳು ತಮ್ಮ ದೇಹದ ತೂಕಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸುತ್ತವೆ. ಆದರೆ ಸೇವಿಸಿದ ಆಹಾರದಲ್ಲಿ ಶೇ. 12-15 ರಷ್ಟು ಜೀರ್ಣಿಸಿಕೊಂಡು ಉಳಿದ ಭಾಗವನ್ನು ಹಿಕ್ಕೆಯ ರೂಪದಲ್ಲಿ ಹೊರಹಾಕುತ್ತವೆ. ಈ ಎರೆಹುಳುಗಳು ತೊಟ್ಟಿಯಲ್ಲಿ ತ್ಯಾಜ್ಯವಸ್ತುಗಳನ್ನು ಮೇಲಿಂದ ತಿಂದುಕೊಂಡು ಕೆಳಮುಖವಾಗಿ ಚಲಿಸುತ್ತವೆ. ಹಿಕ್ಕೆಯು ಮೇಲ್ಭಾಗದಲ್ಲಿ ಶೇಖರಣೆಗೊಳ್ಳುತ್ತದೆ. ಎರೆಹುಳುಗಳನ್ನು ಬಿಟ್ಟ 35-40 ದಿನಗಳಲ್ಲಿ ಮೇಲಿನ ಪದರದಲ್ಲಿ ಗೊಬ್ಬರ ಶೇಖರಣೆಯಾಗುವುದು ಕಂಡು ಬರುತ್ತದೆ. ಆಗ 3-4 ದಿನಗಳ ಕಾಲ ತೊಟ್ಟಿಗೆ ನೀರು ಹಾಕುವುದನ್ನು ನಿಲ್ಲಿಸಬೇಕು. ಹೀಗೆ ಮಾಡುವುದರಿಂದ ಎರೆಹುಳುಗಳು ಒಣಪದರದಿಂದ ಹಸಿ ಇರುವ ಪದರದ ಕಡೆಗೆ ಚಲಿಸುತ್ತದೆ. ನಂತರ ಹಿಕ್ಕೆಯ ರೂಪದಲ್ಲಿರುವ ಗೊಬ್ಬರವನ್ನು ಒಂದೆಡೆ ರಾಶಿ ಮಾಡಿ ಉಳಿದಿರುವ ಕಸಕಡ್ಡಿ ಮತ್ತು ಎರೆಹುಳುಗಳನ್ನು ಮತ್ತೆ ಪಕ್ಕದ ತೊಟ್ಟಿಯಲ್ಲಿ ಬಿಡಬೇಕು. ರಾಶಿ ಮಾಡಿದ ಎರೆಗೊಬ್ಬರವನ್ನು 4-5 ಮಿ.ಮೀ. ಇರುವ ಜರಡಿಯಿಂದ ಜರಡಿ ಮಾಡಿದರೆ ಇದರಲ್ಲಿ ತಿನ್ನದೆ ಉಳಿದಿರುವ ಕಸಕಡ್ಡಿ, ಸಣ್ಣ ಸಣ್ಣ ಎರೆಹುಳುಗಳ ಮರಿಗಳು ಮತ್ತು ಮೊಟ್ಟೆಯ ಕೋಶಗಳು ಜರಡಿಯಲ್ಲಿ ಉಳಿಯುತ್ತವೆ. ಇದನ್ನು ಪಕ್ಕದ ತೊಟ್ಟಿಗೆ ಹಾಕಬೇಕು. ಕೆಳಭಾಗದಲ್ಲಿ ಹರಳಿನ ರೂಪದಲ್ಲಿರುವ ಎರೆಗೊಬ್ಬರ ಸಂಗ್ರಹವಾಗುತ್ತವೆ. ಇದನ್ನು ನೆರಳಿನಲ್ಲಿ ಒಣಗಿಸಿ ನಂತರ ಶೇಖರಿಸಬೇಕು.

ಗಮನಿಸಬೇಕಾದ ಮುಂಜಾಗ್ರತ ಕ್ರಮಗಳು
• ಎರೆಹುಳುಗಳನ್ನು ಸಾಕುವ ತೊಟ್ಟಿಯಲ್ಲಿ ಉಷ್ಣಾಂಶವು 20-300 ಸೆ. ಮತ್ತು ತೇವಾಂಶ ಶೇ. 40-50 ವರೆಗೆ ಇರಬೇಕು. ಇದು ಏರುಪೇರಾದಲ್ಲಿ ಅದರಲ್ಲಿನ ರಸಸಾರ ಕಡಿಮೆಯಾಗಿ ಹುಳುಗಳ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.
• ತೊಟ್ಟಿಯಲ್ಲಿ ಹೆಗ್ಗಣ, ಇಲಿ, ಹಕ್ಕಿ, ನಾಯಿ, ಬೆಕ್ಕು, ಹಾವು, ಇರುವೆ, ಚೇಳು ಮತ್ತು ಗೆದ್ದಲು ಎರೆಹುಳುಗಳಿಗೆ ಶತ್ರುಗಳು.
• ಇರುವೆ ಹತೋಟಿಗೆ ತೊಟ್ಟಿಯ ಸುತ್ತು ಸಣ್ಣಕಾಲುವೆ ಮಾಡಿ ನೀರು ನಿಲ್ಲಿಸುವುದು ಸೂಕ್ತ.
• ಗೆದ್ದಲು ಹತೋಟಿಗೆ ತೊಟ್ಟಿಯಲ್ಲಿ ಶೇ. 40-50 ರಷ್ಟು ತೇವಾಂಶ ಕಾಪಾಡಿದರೆ ಇದರ ತೊಂದರೆ ಇರುವುದಿಲ್ಲ.
ಉಳಿದೆಲ್ಲಾ ಶತ್ರುಗಳ ಹತೋಟಿಗೆ ತೊಟ್ಟಿಯ ಮೇಲ್ಭಾಗದಲ್ಲಿ ತಂತಿಯ ಜರಡಿಯನ್ನು (ವೈರ್‍ಮೆಸ್) ಮುಚ್ಚುವುದರಿಂದ ಇವುಗಳನ್ನು ಹತೋಟಿಮಾಡಬಹುದು. ತೊಟ್ಟಿಯಿಂದ ಹೊರ ತೆಗೆದ ಎರೆಗೊಬ್ಬರವನ್ನು 10-15 ದಿನಗಳ ಕಾಲ ನೆರಳಿನಲ್ಲಿ ಒಣಗಿಸಿ ನಂತರ ಕೃಷಿಗೆ ಉಪಯೋಗಿಸಬಹುದು ಅಥವಾ ಚೀಲದಲ್ಲಿ ತುಂಬಿಸಿ ಮಾರಾಟ ಮಾಡಬಹುದು.

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments