ತರಕಾರಿ ಪರಿಚಯ Vegetable Introduction

ತರಕಾರಿ ಪರಿಚಯ

ಪರಿಚಯ
ಭಾರತದಲ್ಲಿ ತರಕಾರಿ ಬೆಳೆಯನ್ನು ಸುಮಾರು 7.8 ಮಿಲಿಯ ಹೆಕ್ಟೇರು ಪ್ರದೇಶದಲ್ಲಿ ಬೆಳೆಯುತ್ತಾರೆ. ವಾರ್ಷಿಕ ಉತ್ಪನ್ನ ಸುಮಾರು 125 ಮಿಲಿಯ ಟನ್ನಿಗಿಂತಲೂ ಅಧಿಕವಾಗಿದೆ. ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ತರಕಾರಿ ಬೆಳೆಯುವ ರಾಷ್ಟ್ರ ಚೀನಾ. ಭಾರತವು ಎರಡನೆ ಸ್ಥಾನದಲ್ಲಿದೆ. ದೇಶದ ಶೇಕಡ 4 ರಷ್ಟು ಪ್ರದೇಶದಲ್ಲಿ ತರಕಾರಿ ಬೆಳೆಯಲ್ಪಡುತ್ತದೆ. ಭಾರತ ಬೆಂಡೆಕಾಯಿ ಮತ್ತು ಹೂಕೋಸನ್ನು ವಿಶ್ವದಲ್ಲೇ ಅತೀ ಹೆಚ್ಚು ಬೆಳೆಯುವ ರಾಷ್ಟ್ರ. ತರಕಾರಿ ಉತ್ಪಾದನೆಯ ಬೆಳವಣಿಗೆ ಶೇಕಡ 3.5 ರಷ್ಟಿದೆ. ರಫ್ತಿನ ಬೆಳವಣಿಗೆ ಶೇಕಡ 20, ವಾರ್ಷಿಕ ರಪ್ತು ಪ್ರಮಾಣ ರೂ. 2000 ಕೋಟಿಯಷ್ಟಿದೆ. ಇತ್ತೀಚೆಗೆ ತರಕಾರಿ ಬೇಸಾಯವನ್ನು ವಾಣಿಜ್ಯಕರಣಗೊಳಿಸಲಾಗಿದೆ. ಉತ್ಪಾದನೆ ಮತ್ತು ಉತ್ಪಾದನ ಸಾಮಥ್ರ್ಯದ ನಡುವೆ ಬಹಳಷ್ಟು ಅಂತರವಿದೆ. ಸಣ್ಣ ರೈತರು ಮತ್ತು ಭೂರಹಿತರು ತರಕಾರಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಭೂರಹಿತರು ಭೂಮಿಯನ್ನು ಗುತ್ತಿಗೆ ಪಡೆದು ಕೃಷಿಯಲ್ಲಿ ನಿರತರಾಗಿದ್ದಾರೆ. ಇಡೀ ಕುಟುಂಬದ ಜನರು ತರಕಾರಿ ಬೇಸಾಯದಲ್ಲಿ ತೊಡಗಿಕೊಂಡು ಚಿಕ್ಕ ಭೂಮಿಯಿಂದ ಹೆಚ್ಚಿನ ಆದಾಯವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನ ಪಾತ್ರ ಬಹು ಮುಖ್ಯವಾದುದು. ತರಕಾರಿ ಬೆಳೆಯುವ ಪ್ರದೇಶ ಕಳೆದ ಕೆಲವು ದಶಕಗಳಲ್ಲಿ ಗಣನೀಯವಾಗಿ ಹೆಚ್ಚಿದೆ. 1950 ರಿಂದ 1980 ರವರೆಗೆ ಬೆಳವಣಿಗೆಯ ಸ್ತರ ಕಡಿಮೆ ಮಟ್ಟದಲ್ಲಿತ್ತು. ತೋಟಗಾರಿಕ ವಲಯ ಕಳೆದ ಮೂರು ದಶಕಗಳಲ್ಲಿ ವೇಗವಾಗಿ ಬೆಳೆದಿದ್ದು, ಉತ್ಪಾದನ ವಲಯ, ಕೊಯ್ಲಿನ ನಂತರ ನಿರ್ವಹಣೆ, ಮೌಲ್ಯಾಧಾರಿತ ಬೆಲೆ ಮತ್ತು ರಫ್ತು ವಲಯದಲ್ಲಿ ಅನೇಕ ಮಾರ್ಗಗಳು ತೆರೆದುಕೊಂಡಿವೆ ಹಾಗು ಅನೇಕ ಉದ್ಯಮಗಳು ಈ ಕೆಲಸದಲ್ಲಿ ನಿರತವಾಗಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ತರಕಾರಿಗಳ ಪ್ರಾಮುಖ್ಯತೆ
ತರಕಾರಿಗಳು ಖನಿಜಾಂಶ, ವಿಟಮಿನ್ ಮತ್ತು ನಾರಿನಂಶಗಳ ಅಕರವಾಗಿದೆ. ಮಾನವನಿಗೆ ಬೇಕಾಗುವ ಪೌಷ್ಟಿಕಾಂಶವನ್ನು ಧಾತು, ಏಂಟಿ ಆಕ್ಸಿಡೆಂಟ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಮೂಲಕ ಒದಗಿಸುತ್ತದೆ.

ಘಟಕ ಮೂಲ ಕೊರತೆಯಿಂದ ಮಾನವನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ
ವಿಟಮಿನ್ ‘ಸಿ’ (ಎಸ್ಕಾರ್ಬಿಕ್ ಆರ್ಮ) ಹೂಕೋಸು, ಎಲೆಕೋಸು, ಹಸಿರೆಲೆ ತರಕಾರಿ, ಕಾಳುಮೆಣಸು, ಆಲೂಗೆಡ್ಡೆ ಮತ್ತು ಕಲ್ಲಂಗಡಿ. ಸ್ಕರ್ವಿ, ಗಾಯ ಉಲ್ಬಣ, ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ, ಹೃದಯ ಕಾಯಿಲೆ.
ವಿಟಮಿನ್ ‘ಎ’ (ಕೆರೋಟಿನಾಯಿಡ್ಸ್) ಸ್ಪಿನಾಚ್,ಟರ್ನಿಪ್,ಕ್ಯಾರೆಟ್,ಕುಂಬಳ, ಸಿಹಿಗೆಣಸು,ಟೊಮೆಟೊ, ರಾತ್ರಿ ಕುರುಡುತನ, ದಣಿವು, ಸೊರೊಸಿಸ್, ಹೃದಯದ ಕಾಯಿಲೆ, ಲಕ್ವ, ಕಣ್ಣಿನ ಪೊರೆ.
ವಿಟಮಿನ್ ‘ಕೆ’ ಕುಂಬಳ ಜಾತಿ ತರಕಾರಿ, ಎಲೆ ಕೋಸು, ಹೂಕೋಸು, ಬ್ರಸ್ಸೆಲ್ ಮೊಳಕೆ, ಎಲೆತರಕಾರಿ. ರಕ್ತ ಹೆಪ್ಪುಗಟ್ಟದಿರುವಿಕೆ, ಆಸ್ಟೀಯೋ ಪೊರೊಸಿಸ್
ವಿಟಮಿನ್ ‘ಈ’ (ಟೋಕೋ ಫರೋಲ್ಸ್) ಕಾಳು ಕಡ್ಡಿ, ಒಣ ಹುರುಳಿ, ಲೆಂಟಿಲ್, ಬಟಾಣಿ ಮತ್ತು ಎಲೆ ತರಕಾರಿ ಹೃದಯ ರೋಗ, ಎಲ್,ಡಿ,ಎಲ್, ಆಕ್ಸಿಡೇಷನ್, ರೋಗನಿರೋಧಕ ಶಕ್ತಿ ಕುಗ್ಗುವಿಕೆ, ಸಕ್ಕರೆ ಕಾಯಿಲೆ, ಕ್ಯಾನ್ಸರ್.
ಫೊಲಿಕ್ ಸ್ಪಿನಾಚ್, ಹಸಿರು ಕೊತ್ತಂಬರಿ, ಲಟ್ಟೂಸ್, ಬ್ರೊಕೋಲಿ, ಬಸ್ಸೆಲ್ ಮೊಳಕೆ, ಬೆಂಡೆಕಾಯಿ, ಬೀನ್ಸ್, ಹಸಿರು ಬಟಾಣಿ, ಎಸ್ಪರಾಗಸ್ ಹುಟ್ಟಿನ ತೊಂದರೆ, ಕ್ಯಾನ್ಸರ್, ಹೃದಯ ರೋಗ, ನರದೌರ್ಬಲ್ಯ
ಕ್ಯಾಲ್ಸಿಯಂ ಬೀನ್ಸ್, ಹಸಿರು ತರಕಾರಿ, ಬೆಂಡೆ ಕಾಯಿ, ಟೊಮೇಟೋ, ಬಟಾಣಿ, ಕುಂಬಳ, ಹೂಕೋಸು. ಆಸ್ಟಿಯೋ ಪೊರೋಸಿಸ್, ಸ್ನಾಯು ತೊಂದರೆ, ಹಲ್ಲು ಮತ್ತು ಮೂಳೆಯ ತೊಂದರೆ, ರಕ್ತದ ಒತ್ತಡ.
ಮೆಗ್ನೀಷಿಯಂ ಸ್ಸಿನಾಚ್, ಲೆಂಟಿಲ್, ಬೆಂಡೆ ಕಾಯಿ, ಆಲೂಗೆಡ್ಡೆ, ಕಾಳು ಕಡ್ಡಿ. ಓಸ್ಸಿಯೋ ಪೊರೋಸಿಸ್, ನರ ದೌರ್ಬಲ್ಯ, ಹಲ್ಲು, ರೋಗನಿರೋಧಕ ಶಕ್ತಿ ಕುಗ್ಗವಿಕೆ.
ಪೊಟಾಷಿಯಂ ಆಲೂಗೆಡ್ಡೆ, ಸಿಹಿಗೆಣಸು, ಬೀನ್ಸ್, ಬೇಯಿಸಿದ ಹಸಿರು ತರಕಾರಿ, ಸ್ಕ್ಸಾಸ್, ಕ್ಸಾಂಟಾವಾಪ್. ಅತೀಯಾದ ರಕ್ತದೊತ್ತಡ, ಲಕ್ವ, ರಕ್ತನಾಳ ತೊಂದರೆ.

ತರಕಾರಿಗಳ ವರ್ಗೀಕರಣ
ವಿಶ್ವದಲ್ಲಿ 250 ಕ್ಕಿಂತ ಹೆಚ್ಚು ಸಸಿಗಳ ತಳಿಗಳನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಭಾರತದಲ್ಲಿ 125 ಸಸಿಗಳ ತಳಿಗಳು ತರಕಾರಿಯಾಗಿ ಬಳಕೆಯಲ್ಲಿದೆ. ಬೇಸಾಯ ವಿಧಾನ, ಉಪಯೋಗಿಸುವ ಭಾಗ, ರಚನೆಯಲ್ಲಿ ಸಾಮ್ಯತೆ ಇದೆ. ಬೇಸಾಯ ಕ್ರಮ ಅನುಸರಿಸಿ ತರಕಾರಿಯನ್ನು ಅನೇಕ ವಿಧದಲ್ಲಿ ವರ್ಗೀಕರಿಸಲಾಗಿದೆ.

ವೈಜ್ಞಾನಿಕ ವರ್ಗೀಕರಣ
ವರ್ಗ, ಕುಟುಂಬ, ತಳಿ ಆಧಾರದಲ್ಲಿ ತರಕಾರಿ ಗಿಡಗಳನ್ನು ವರ್ಗೀಕರಿಸಲಾಗಿದೆ.
ಎ) ಏಕದಳ ತರಕಾರಿಗಳು: ಅಡುಗೆ ಮನೆಯಲ್ಲಿ ಪ್ರಾಮುಖ್ಯತೆ ಪಡೆದ ಏಕದಳ ತರಕಾರಿಯ ಕುಟುಂಬಗಳೆಂದರೆ ಎಲ್ಲಿಯೇಸಿ, ಏರೇಸಿ, ಗ್ರಾಮಿನೆ, ಲಿಲಿಯೇಸಿ ಮತ್ತು ಡೈಯೋಸ್ಕೋರ್‍ಬಿಯೇಸಿ. ಎಲ್ಲಿಯೇಸಿಯ ಪ್ರಮುಖ ತಕಾರಿಗಳೆಂದರೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಲೀಕ್ ಸುವರ್ಣಗೆಡ್ಡೆ. ಕೆಸ ಏರೇಸಿ ಕುಟುಂಬಕ್ಕೆ ಸೇರಿದೆ. ಸಿಹಿಗೆಣಸು ಡೈಯೋಸ್ಕೋರ್‍ಬಿಯೇಸಿ ಕುಟುಂಬಕ್ಕೆ ಸೇರಿದೆ.

ಏ) ದ್ವಿದಳ ತರಕಾರಿಗಳು: ಹೆಚ್ಚಿನ ತರಕಾರಿಗಳು ಈ ಗುಂಪಿಗೆ ಸೇರಿದೆ. ಪ್ರಮುಖ ಕುಟುಂಬಗಳೆಂದರೆ ಕುಕರ್‍ಬಿಟೇಸಿ, ಜಿಂಜಿಬರೇಸಿ, ಕ್ರುಸಿಫೆರೆ ಮೊದಲಾದವು. ಎಲೆಕೋಸು, ಹೂಕೋಸು, ನೂಲ್‍ಕೋಲ್, ಟರ್ನಿಫ್, ಮೂಲಂಗಿ, ಕ್ಯಾರೆಟ್, ಕೊತ್ತಂಬರಿ ಕ್ರುಸಿಫೆರೆ ಕುಟುಂಬಕ್ಕೆ ಸೇರಿದೆ. ಸೋರೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಹಾಗಲಕಾಯಿ, ಬೀಟ್‍ರೂಟ್, ಕಲ್ಲಂಗಡಿ, ಬೂದಿಕುಂಬಳ ಕುಕರ್‍ಬಿಟೇಸಿ ಕುಟುಂಬಕ್ಕೆ ಸೇರಿದೆ. ಬಟಾಣಿ, ಬೀನ್ಸ್, ಅಲಸಂಡೆ, ಫೆನುಗ್ರೀಕ್ ಲೆಗ್ಯುಮಿನೇಸಿ ಕುಟುಂಬಕ್ಕೆ ಸೇರಿದ ತರಕಾರಿಗಳು. ಸೋಲನೇಸಿ ಕುಟುಂಬಕ್ಕೆ ಸೇರಿದ ತರಕಾರಿಗಳೆಂದರೆ ಆಲೂಗೆಡ್ಡೆ, ಬದನೆ, ಟೊಮೇಟೋ, ದೊಡ್ಡಮೆಣಸು, ಮೆಣಸಿನಕಾಯಿ ಮುಂತಾದವು. ಅರಸಿನ, ಶುಂಠಿ ಜಿಂಜಿಬರೇಸಿ ಕುಟುಂಬಕ್ಕೆ ಸೇರಿದೆ. ಬೆಂಡೆಕಾಯಿ ಮಾಲ್ಪೇಸಿ ಕುಟುಂಬಕ್ಕೆ ಸೇರಿದೆ. ವೈಜ್ಞಾನಿಕವಾಗಿ ವರ್ಗೀಕರಿಸಲಾದರೂ ಒಂದೇ ಕುಟುಂಬಕ್ಕೆ ಸೇರಿದ ತರಕಾರಿಗಳ ಬೇಸಾಯ ಕ್ರಮದಲ್ಲಿ ವ್ಯತ್ಯಾಸವಿದೆ. ಆದ್ದರಿಂದ ಇನ್ನಿತರ ವರ್ಗೀಕರಣ ಅವಶ್ಯವೆನಿಸಿದೆ.

ಉಪಯೋಗದ ಭಾಗವನ್ನವಲಂಬಿಸಿದ ವರ್ಗೀಕರಣ
ತರಕಾರಿ ಬೆಳೆಯ ವಿವಿಧ ಭಾಗಗಳನ್ನು ಆಹಾರಕ್ಕಾಗಿ ಉಪಯೋಗಿಸಲಾಗುತ್ತದೆ. ಉಪಯೋಗಕ್ಕಾಗಿ ಬಳಸುವ ಭಾಗವನ್ನು ಆಧರಿಸಿ ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.
1. ಬೇರು ತರಕಾರಿಗಳು:- ಕ್ಯಾರೆಟ್, ಮೂಲಂಗಿ, ಬೀಟ್‍ರೂಟ್, ಟರ್ನಿಫ್ ಮದಲಾಧವು
2. ಕಂದ ತರಕಾರಿಗಳು:_ ಆಲೂಗೆಡ್ಡೆ ಸಿಹಿಗೆಣಸು
3. ಬಲ್ಬ್ ತರಕಾರಿಗಳು:- ಈರುಳ್ಳಿ, ಬೆಳ್ಳುಳ್ಳಿ
4. ಎಲೆತರಕಾರಿಗಳು:- ಸ್ಪಿನಾಚ್, ಕೊತ್ತಂಬರಿ, ಫೆನುಗ್ರೀಕ್
5. ಹೂ ತರಕಾರಿಗಳು:- ಹೂಕೋಸು, ಬ್ರಸ್ಸೆಲ್ಸ್ ಸ್ಪ್ರೌಟ್
6. ಹಣ್ಣು ತರಕಾರಿಗಳು:- ಟೊಮೇಟೋ, ಮೆಣಸಿನಕಾಯಿ, ಬದನೆ, ಸೋರೆಕಾಯಿ, ಅಲಸಂಡೆ,
ಕಲ್ಲಂಗಡಿ, ಕರ್ಬೂಜ, ಬೆಂಡೆಕಾಯಿ, ಬಟಾಣಿ ಮೊದಲಾದವು.

ಬೆಳೆಯುವ ಋತುಮಾನ ಆಧರಿಸಿದ ವರ್ಗೀಕರಣ
ಛಳಿಗಾಲ, ಬೇಸಿಗೆಗಾಲ, ಮತ್ತು ಮಳೆಗಾಲ ಎಂಬ ಮೂರು ಮುಖ್ಯ ಋತುಮಾನಗಳಿವೆ. ಬೆಳೆಯುವ ಋತುವನ್ನು ಅವಲಂಬಿಸಿ ತರಕಾರಿ ಬೆಳೆಯನ್ನು ವರ್ಗೀಕರಿಸಲಾಗಿದೆ.
ಚಳಿಗಾಲದ/ರಾಬಿ ಋತುವಿನ ತರಕಾರಿ
ಅಕ್ಟೋಬರ್‍ನಿಂದ ಫೆಬ್ರವರಿಯವರೆಗೆ ಬೆಳೆಯುವ ಮುಖ್ಯ ತರಕಾರಿಗಳೆಂದರೆ ಎಲೆಕೋಸು, ಹೂಕೋಸು, ಸ್ಪಿನಾಚ್, ಫೆನುಗ್ರೀಕ್, ಕೊತ್ತಂಬರಿ, ಟರ್ನಿಫ್, ಬೀಟ್‍ರೂಟ್, ಈರುಳ್ಳಿ, ಬೆಳ್ಳುಳ್ಳಿ.
ಬೇಸಿಗೆ ಕಾಲದ ತರಕಾರಿ
ಫೆಬ್ರವರಿಯಿಂದ ಮೇವರೆಗೆ ಬೇಸಿಗೆಯಲ್ಲಿ ಬೆಳೆಯುವ ಪ್ರಮುಖ ತರಕಾರಿಗಳೆಂದರೆ ಕಲ್ಲಂಗಡಿ, ಕರ್ಬೂಜ, ಸೋರೆಕಾಯಿ, ಸೌತೆಕಾಯಿ, ಬೆಂಡೆಕಾಯಿ, ಕುಂಬಳಕಾಯಿ.
ಮಳೆಗಾಲದ ತರಕಾರಿ/ಖಾರಿಫ್ ತರಕಾರಿ
ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಬೆಳೆಯುವ ಮುಖ್ಯ ತರಕಾರಿಗಳು ಬೆಂಡೆಕಾಯಿ, ಕುಂಬಳ ಜಾತಿಯ ತರಕಾರಿಗಳು, ಹರಿವೆ ಮುಂತಾದವು.

ಜೀವನ ಚಕ್ರ ಆಧಾರದ ವರ್ಗೀಕರಣ
1. ವಾರ್ಷಿಕ ತರಕಾರಿಗಳು: ತಮ್ಮ ಜೀವನ ಚಕ್ರವನ್ನು ಒಂದು ಋತುಮಾನದಲ್ಲಿ (ಬೀಜದಿಂದ ಬೀಜಕ್ಕೆ) ಪೂರೈಸುವ ತರಕಾರಿಗಳು. ಉದಾ:- ಸೋರೆಕಾಯಿ, ಹಾಗಲಕಾಯಿ, ಕುಂಬಳಕಾಯಿ, ಬೆಂಡೆ, ಟೊಮೇಟೋ ಮೊದಲಾದವು.
2. ದ್ವೈವಾರ್ಷಿಕ ತರಕಾರಿಗಳು: ಈ ತರಕಾರಿಗಳ ಜೀವನಚಕ್ರ ಪೂರೈಸಲು ಎರಡು ಋತುಮಾನ ಬೇಕು. ಉದಾ:- ಹೂಕೋಸು, ಎಲೆಕೋಸು, ಈರುಳ್ಳಿ ಮುಂತಾದವು
3. ಬಹುವಾರ್ಷಿಕ ತರಕಾರಿಗಳು: ಈ ತರಕಾರಿ ಗಿಡಗಳು ಒಂದಕ್ಕಿಂತ ಹೆಚ್ಚು ವರ್ಷ ಬದುಕುಳಿಯುತ್ತವೆ ಉದಾ:- ನುಗ್ಗೆಕಾಯಿ, ಎಸ್ಪರಾಗಸ್ ಮೊದಲದವು.

ಬೇಸಾಯಕ್ರಮ, ಉಸಿರಾಟಗತಿ, ಮಣ್ಣಿನ ಆಮ್ಲೀಯ ಮತ್ತು ಕ್ಷಾರೀಯ ಗುಣ ಸಹಿಷ್ಣುತೆಯನ್ನು ಆಧರಿಸಿ ಸಹ ತರಕಾರಿಯನ್ನು ವರ್ಗೀಕರಿಸಬಹುದು.

ಬೇಸಾಯ ವಿಧಾನ
ಕುಟುಂಬದ ಉಪಯೋಗಕ್ಕೆ ಚಿಕ್ಕ ಜಾಗದಲ್ಲಿ ಕೆಲವೇ ತರಕಾರಿಗಳನ್ನು ಬೆಳೆಯುತ್ತಾರೆ. ಮಾರಾಟಕ್ಕೆ ಅಥವಾ ಇತರ ಉದ್ಧೇಶಗಳಿಗೆ ಹಲವು ತರಕಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಬೇಸಾಯ ಕ್ರಮವನ್ನು ಉದ್ಧೇಶದ ಆಧಾರದ ಮೇಲೆ ನಿತ್ಯ ಬಳಕೆಗೆ ತಾಜಾ ತರಕಾರಿ, ಸಂಸ್ಕರಣೆ ಮತ್ತು ಬೀಜೋತ್ಪಾದನೆಗಾಗಿ ಎಂದು ವರ್ಗೀಕರಿಸಲಾಗಿದೆ. ಇವುಗಳನ್ನು ಕೆಳಗಿನಂತೆ ವಿವರಿಸಬಹುದು.

ಕೈತೋಟ: ಕೈತೋಟದಲ್ಲಿ ಕುಟುಂಬದ ಉಪಯೋಗಕ್ಕಾಗಿಯೇ ತರಕಾರಿಗಳನ್ನು ಬೆಳಸಲಾಗುತ್ತದೆ. ಕಾಲು ಎಕರೆಯಲ್ಲಿ ತರಕಾರಿ ಬೆಳೆದರೆ ಆರು ಜನರ ಕುಟುಂಬಕ್ಕೆ ಸಾಕಾಗುತ್ತದೆ. ಕೈತೋಟದಲ್ಲಿ ಬೆಳೆಯುವ ತರಕಾರಿ ಗಿಡಗಳು ಆ ಪ್ರದೇಶದಲ್ಲಿ ಹೆಚ್ಚು ಇಳುವರಿಯನ್ನು ಕೊಡುವಂತಿರಬೇಕು. ಬೀನ್ಸ್, ಎಲೆಕೋಸು, ಕ್ಯಾರೆಟ್, ಈರುಳ್ಳಿ, ಕೊತ್ತಂಬರಿ, ಬಟಾಣಿ, ಕಾಳುಮೆಣಸು, ಮೂಲಂಗಿ, ಸ್ಪಿನಾಚ್, ಟೊಮೇಟೋ ಮುಂತಾದುವು ಕೈ ತೋಟಕ್ಕೆ ಸೂಕ್ತವಾದ ತರಕಾರಿ ಬೆಳೆಗಳು. ಕೈತೋಟವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿ ಹಬ್ಬುವ ತರಕಾರಿಗಳನ್ನು ಬೇಲಿಯಲ್ಲಿ ಬೆಳೆಯಬೇಕು.
ಒಂದು ಬದಿಯಲ್ಲಿ ಹಣ್ಣಿನ ಗಿಡಗಳಾದ ನಿಂಬೆ, ಬಾಳೆ ಮೊದಲಾದವನ್ನು ಬೆಳೆಯಬೇಕು. ವರ್ಷವಿಡೀ ತರಕಾರಿ ಸಿಗುವಂತೆ ಯೋಜನೆ ಸಿದ್ಧಮಾಡಬೇಕು. ಒಂದು ಸಂಸಾರಕ್ಕೆ 100 ಚದರ ಅಡಿಯ ಕೈತೋಟ ಸಾಕು. ಪ್ರದೇಶದ ಹವಾಗುಣ ಅವಲಂಬಿಸಿ ತರಕಾರಿ ಗಿಡಗಳನ್ನು ನೆಡಲು ಆರಿಸಬೇಕು. ಕೈತೋಟದಲ್ಲಿ ನೆಡಲು ಆಯ್ದುಕೊಳ್ಳುವ ತರಕಾರಿಗಳೆಂದರೆ ಟೊಮೇಟೋ, ಬೆಂಡೆಕಾಯಿ, ಮೂಲಂಗಿ, ಎಲೆತರಕಾರಿಗಳು, ಬೀನ್ಸ್ ಮೊದಲಾದವು.
ವಾಣಿಜ್ಯ ತರಕಾರಿ ತೋಟ: ಆಯ್ದ ತರಕಾರಿಗಳನ್ನು ಸ್ಥಳೀಯ ಮಾರುಕಟ್ಟೆಗಾಗಿ ಬೆಳೆಯಲಾಗುತ್ತದೆ. ಉತ್ತಮ ರಸ್ತೆ, ವಾಹನ ಸೌಕರ್ಯ ಮೊದಲಾದವು ಮಾರುಕಟ್ಟೆಯ ವಿಸ್ತಾರವನ್ನು ಹೆಚ್ಚಿಸಿದೆ. ಇತ್ತೀಚೆಗೆ ಬೆಳೆಗಾರ ತನ್ನ ಉತ್ಪನ್ನವನ್ನು ಸ್ಥಳೀಯ ಮಾರುಕಟ್ಟೆಗಾಗಿ ಸೀಮಿತವಾಗಿಟ್ಟಿಲ್ಲ, ಬೇಡಿಕೆಯಿರುವ ಕೆಲವೇ ತರಕಾರಿ ಬೆಳೆಯುವಲ್ಲಿ ನೈಪುಣ್ಯತೆ ಪಡೆಯುತ್ತಿದ್ದಾನೆ. 20ನೇ ಶತಮಾನದಲ್ಲಿ ಮಾರಾಟ ಉದ್ಧೇಶದ ತರಕಾರಿ ತೋಟ ಟ್ರಕ್ ತರಕಾರಿ ತೋಟಕ್ಕೆ ಮಾರ್ಪಾಡುಗೊಂಡಿದೆ.

ಟ್ರಕ್ ತರಕಾರಿ ತೋಟ: ಕೆಲವು ನಿಶ್ಚಿತ ತರಕಾರಿಗಳನ್ನು ದೂರದ ಮಾರುಕಟ್ಟೆಗೆಂದು ವ್ಯಾಪಕವಾಗಿ ಬೆಳೆಂiÀiಲಾಗುತ್ತದೆ. ಸಾಮಾನ್ಯ ಋತುಮಾನದಲ್ಲಿ ತೆರೆದ ಪರಿಸರದಲ್ಲಿ ಬೆಳೆಯುವ ತರಕಾರಿಗಳನ್ನು ಬಲವಂತವಾಗಿ ಕೃತಕ ವಾತಾವರಣದಲ್ಲಿ ಬೆಳೆಸಲಾಗುತ್ತದೆ. ಹಸಿರು ಮನೆ, ತಂಪಿನ ಮನೆ ಮತ್ತು ಬೆಚ್ಚಗಿನ ಪಾತಿಗಳಿರುವ ಕಟ್ಟಡಗಳಲ್ಲಿ ಗಿಡದ ಬೆಳವಣಿಗೆಗೆ ಬೇಕಾದ ಬೆಳಕು ಮತ್ತು ತಾಪಮಾನದ ಅನುಕೂಲಕರ ವಾತಾವರಣ ನಿರ್ಮಿಸಲಾಗುತ್ತದೆ. ಮಣ್ಣನ್ನು ಉಪಯೋಗಿಸದೆ ಬೇಸಾಯ ಮಾಡುವುದನ್ನು ಹೈಡ್ರೋಪೋನಿಕ್ಸ್ ಎಂದು ಕರೆಯುತ್ತಾರೆ. ಇದರಲ್ಲಿ ಗಿಡಗಳಿಗೆ ಯಾಂತ್ರಿಕವಾಗಿ ನೀರು ಮತ್ತು ಪೋಷಕಾಂಶಗಳನ್ನು ಒದಗಿಸುತ್ತಾರೆ ಹಾಗು ಕಾರ್ಮಿಕರ ಬಳಕೆ ಕಡಿಮೆ. ಇತರ ಬೆಳೆಗಾರರೊಡನೆ ಸ್ಪರ್ಧಿಸಿ ಯಶಸ್ವಿಯಾಗಬೇಕಾದರೆ ಪೂರೈಕೆ ಕಡಿಮೆ ಇದ್ದಾಗ ಉತ್ಪಾದಿಸಿ, ಗುಣಮಟ್ಟ ಕಾಪಾಡಬೇಕು. ಇದರಿಂದ ಉತ್ತಮ ಬೆಲೆಯೂ ದೊರೆಯುತ್ತದೆ.

ಸಂಸ್ಕರಣೆಗಾಗಿ ಉತ್ಪಾದನೆ
ತರಕಾರಿಗಳನ್ನು ಡಬ್ಬಿಗಳಲ್ಲಿ ಘನೀಭವಿಸಿ, ಒಣಗಿಸಿ ಮತ್ತು ಉಪ್ಪಿನಕಾಯಿಯಂತೆ ಸಂಸ್ಕರಿಸಿ ಶೇಖರಿಸಿಡಬಹುದು. ಕಡಿಮೆ ಗುಣಮಟ್ಟದ ತರಕಾರಿಗಳನ್ನು ಸಂಸ್ಕರಿಸಲು ಬಳಸುವುದರಿಂದ ಉತ್ಪಾದನಾ ವೆಚ್ಚ ಮಾರಾಟಕ್ಕಾಗಿ ಬೆಳೆದ ತರಕಾರಿಗಳ ಉತ್ಫಾದನಾ ವೆಚ್ಚಕ್ಕಿಂತ ಕಡಿಮೆ. ಆದ್ದರಿಂದ ಇಲ್ಲಿ ಸ್ಥಳದ ಬೆಲೆ, ಕಾರ್ಮಿಕ ಮತ್ತು ವ್ಯವಹಾರದ ವೆಚ್ಚ ಕಡಿಮೆ ಇರುತ್ತದೆ. ಸಾಧಾರಣವಾಗಿ ಎಲ್ಲಾ ತರಕಾರಿಗಳನ್ನು ಸಂಸ್ಕರಿಸಬಹುದಾದರೂ ವಿವಿಧ ತಳಿಗಳ ಸಂಸ್ಕರಣೆ ಬೇರೆ ಬೇರೆಯಾಗಿದೆ. ಚಿಕ್ಕ ಮತ್ತು ಒಂದೇ ಗಾತ್ರದ ಗುಣಮಟ್ಟದ ತರಕಾರಿಗಳನ್ನು ಸಂಸ್ಕರಣೆಗೆ ಹೆಚ್ಚಾಗಿ ಬಳಸಲಗುತ್ತದೆ. ವಿವಿಧ ತರಕಾರಿಗಳು ಎಲ್ಲಾ ಕಾಲದಲ್ಲಿ ದೊರೆಯುವಂತೆ ಮಾಡುವುದರಿಂದ ಉದ್ಯಮ ವರ್ಷವಿಡೀ ಕೆಲಸದಲ್ಲಿ ನಿರತವಾಗಿರುತ್ತದೆ. ಸಂಸ್ಕರಿಸಿದ ತರಕಾರಿಗಳು ರುಚಿ, ಸುವಾಸನೆ ಮತ್ತು ನೋಟದಲ್ಲಿ ಜನ ಸ್ವೀಕರಿಸುವಂತಿರಬೇಕು ಮತ್ತು ಪೋಷಕಾಂಶ ಹಾಳಾಗದೆ ಧೀರ್ಘಕಾಲ ಬಾಳಿಕೆ ಬರುವಂತಿರಬೇಕು.

ಬೀಜೋತ್ಪಾದನೆ
ಬೀಜೋತ್ಪಾದನೆಯಲ್ಲಿ ಜನರಿಗೆ ವಿಶೇಷ ಕೌಶಲ್ಯ ಮತ್ತು ತಾಂತ್ರಿಕತೆಯ ಅರಿವಿರಬೇಕು. ಬೆಳೆದ ತರಕಾರಿಗಳನ್ನು ಬಳಸದೆ ಅದನ್ನು ಜಮೀನಿನಲ್ಲಿ ಬೆಳೆಯಲು ಬಿಡಬೇಕು. ಬೀಜೋತ್ಪಾದನೆಗಾಗಿರುವ ತರಕಾರಿಯನ್ನು ಪ್ರತ್ಯೇಕ ಸ್ಥಳದಲ್ಲಿ ಬೆಳೆಸುವುದರಿಂದ ತಳಿಯ ಶುದ್ಧತೆಯನ್ನು ಕಾಪಾಡಬಹುದು. ಹೂ, ಬೀಜ ಅಭಿವೃದ್ದಿ, ಕೊಯ್ಲಿನ ಸಮಯದಲ್ಲಿ ಮತ್ತು ಬೀಜ ಬಿಡಿಸುವಾಗ ವಿಶೇಷ ತಾಂತ್ರಿಕತೆಯನ್ನು ಅಳವಡಿಸಲಾಗುತ್ತದೆ.
ಹಸಿರು ಮನೆಯಲ್ಲಿ ತರಕಾರಿ ಉತ್ಪಾದನೆ
ಒಂದು ಋುತುಮಾನಕ್ಕೆ ಹೊಂದಿಕೊಂಡ ತರಕಾರಿಗಳನ್ನು ಹಸಿರು ಮನೆಯಲ್ಲಿ ಎಲ್ಲಾ ಕಾಲದಲ್ಲಿ ಬೆಳೆಸುವುದನ್ನು ರಕ್ಷಿತ ಬೇಸಾಯ ಎಂದು ಕರೆಯುತ್ತರೆ. ಇದು ವೆಚ್ಚದಾಯಕ ಹಾಗು ತೀವ್ರ ನಿಗಾದ ಅಗತ್ಯವಿದೆ. ಮಹಾನಗರಗಳ ಸುತ್ತಲೂ ಇಂತಹ ಬೇಸಾಯ ಇಂದು ಜನಪ್ರಿಯವಾಗುತ್ತಿದೆ. ಬೆಲೆಬಾಳುವ ತರಕಾರಿಗಳನ್ನು ಹಸಿರು ಮನೆಯಲ್ಲಿ ಬೆಳೆಯಲಾಗುತ್ತದೆ. ಮೈದಾನ ಪ್ರದೇಶಕ್ಕಿಂತ ಬೇರೆಯದಾದ ಹವಾಗುಣ ಗುಡ್ಡ ಪ್ರದೇಶದಲ್ಲಿರುವುದರಿಂದ ನಿರ್ಧಿಷ್ಟ ಋತುಮಾನದ ತರಕಾರಿಗಳನ್ನು ಇತರ ಕಾಲಗಳಲ್ಲಿಯೂ ಇಲ್ಲಿ ಬೆಳೆಯುತ್ತಾರೆ.

ತೇಲಾಡುವ ತರಕಾರಿ ತೋಟ
ಕೆರೆ, ಕೊಳಗಳಲ್ಲಿ ತರಕಾರಿ ಬೆಳೆಯುವುದನ್ನು ತೇಲಾಡುವ ತರಕಾರಿ ತೋಟವೆಂದು ಕರೆಯುತ್ತಾರೆ. ವಿಶೇಷ ರೀತಿಯ ಹುಲ್ಲಿನಿಂದ ಚಾಪೆ ತಯಾರಿಸಿ ಮಣ್ಣು ಮತ್ತು ಸಾವಯವ ಗೊಬ್ಬರದ ಮಿಶ್ರಣವನ್ನು ಹರಡಲಾಗುತ್ತದೆ. ಇದನ್ನು ನೀರಿನ ಮೇಲೆ ತೇಲಿಬಿಟ್ಟು ತರಕಾರಿ ಬೆಳೆಯಲಾಗುತ್ತದೆ. ಜಮ್ಮುಕಾಶ್ಮಿರದ ದಾಲ್ ಸರೋವರದಲ್ಲಿ ಈ ವಿಧಾನವನ್ನು ಅನುಸರಿಸಿ ಸಣ್ಣ ಪ್ರಮಾಣದಲ್ಲಿ ತರಕಾರಿ ಬೇಸಾಯ ಮಾಡುತ್ತಾರೆ.

ಪ್ರದರ್ಶನಕ್ಕಾಗಿ ತರಕಾರಿ ಬೇಸಾಯ
ಸಾಧಾರಣವಾಗಿ ಈ ರೀತಿಯ ಬೇಸಾಯವನ್ನು ಪ್ರಗತಿಪರ ರೈತರು ಪ್ರದರ್ಶನಕ್ಕಾಗಿ ಮಾಡುತ್ತಾರೆ. ದೊಡ್ಡ ಗಾತ್ರದ, ವಿಶೇಷ ಆಕಾರದ ತರಕಾರಿ ಬೆಳೆಯಲು ಒತ್ತು ಕೊಡಲಾಗುತ್ತದೆ.

ಉತ್ಪಾದನಾ ಅಂಶ ಮತ್ತು ತಾಂತ್ರಿಕತೆ
ವಾಣಿಜ್ಯ ಉದ್ಧೇಶಕ್ಕೆ ತರಕಾರಿ ಬೆಳೆಯುವಾಗ ಎಲ್ಲಾ ಉತ್ಪಾದನಾ ಕ್ರಮಗಳಾದ ಕೀಟ, ರೋಗ ಮತ್ತು ಕಳೆ ನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಬೇಡಿಕೆಯನ್ನು ಅನುಸರಿಸಿ ವಿವಿಧ ಪ್ರಕಾರದ ತರಕಾರಿಗಳನ್ನು ಬೆಳೆಯಲಾಗುತ್ತದೆ. ತಳಿ, ಗಾತ್ರ, ಎಳಸುತನ, ಸುವಾಸನೆ, ತಾಜಾತನ ಮುಂತಾದವು ಸಹ ಬೇಡಿಕೆಯಲ್ಲಿ ಪ್ರಭಾವ ಬೀರುತ್ತದೆ. ಲಭ್ಯವಿರುವ ತಾಂತ್ರಿಕತೆಯನ್ನು ಉಪಯೋಗಿಸಿ ಆಯಾ ಋತುಮಾನದಲ್ಲಿ ಬೆಳೆಯುವ ತರಕಾರಿಯನ್ನು ಬೇಡಿಕೆಗೆ ಅನುಗುಣವಾಗಿ ನಿರಂತರವಾಗಿ ಪೂರೈಸಬೇಕಾಗುತ್ತದೆ. ಹಲವು ತರಕಾರಿಗಳನ್ನು ವರ್ಷಪೂರ್ತಿ ಬೆಳೆಯಬಹುದಾದರೂ ವಿವಿಧ ಪ್ರಕಾರದ ತರಕಾರಿಯ ಎಕರೆವಾರು ಇಳುವರಿ ಋತುಮಾನಕ್ಕೆ ಮತ್ತು ಬೆಳೆಯುವ ಪ್ರದೇಶಕ್ಕೆ ಅನುಗುಣವಾಗಿರುತ್ತದೆ.

ಹವಾಗುಣ
ಒಂದು ಪ್ರದೇಶದಲ್ಲಿರುವ ಉಷ್ಣಾಂಶ, ತೇವಾಂಶ, ದಿನದಲ್ಲಿ ದೊರಕುವ ಸೂರ್ಯನ ಬೆಳಕು ಮತ್ತು ಬೀಸುವ ಗಾಳಿಯನ್ನು ಹವಾಗುಣವೆಂದು ಕರೆಯುತ್ತಾರೆ. ಹವಾಗುಣ ಸಸಿಗಳ ಬೆಳವಣಿಗೆಯ ಎಲ್ಲಾ ಹಂತದಲ್ಲಿ ಬಲವಾದ ಪರಿಣಾಮ ಬೀರುತ್ತದೆ

ಉಷ್ಣಾಂಶ
ಗಿಡದ ಬೆಳವಣಿಗೆಗೆ ಅಗತ್ಯವಾದ ದಿನದ ಕನಿಷ್ಟ, ಗರಿಷ್ಟ ಮತ್ತು ಅನುಕೂಲಕರ ಉಷ್ಣಾಂಶ ವಿವಿಧ ತರಕಾರಿ ಮತ್ತು ಅದರ ತಳಿಯನ್ನು ಅವಲಂಬಿಸಿದೆ. ತರಕಾರಿಯನ್ನು ಚಳಿಗಾಲದ ಮತ್ತು ಬೇಸಿಗೆಯ ಬೆಳೆಗಳೆಂದು ವಿಂಗಡಿಸಲಾಗಿದೆ. ಸಮಶೀತೋಷ್ಣ ವಲಯದ ತರಕಾರಿಗಳು ಉಷ್ಣಾಂಶ 21o ಸೆ. ಗಿಂತ ಕಡಿಮೆ ಇದ್ದಾಗ ಉತ್ತಮವಾಗಿ ಬೆಳೆಯುತ್ತವೆ. ಬೀಟ್‍ರೂಟ್, ಬ್ರೊಕೋಲಿ, ಬ್ರಸೆಲ್‍ಸ್ಪ್ರೌಟ್ಸ್, ಎಲೆಕೋಸು, ಕ್ಯಾರೆಟ್, ಹೂಕೋಸು, ಸೆಲೆರಿ, ಬೆಳ್ಳುಳ್ಳಿ, ಲೀಕ್, ಲಟ್ಟೂಸ್, ಈರುಳ್ಳಿ, ಪಾಸ್ರ್ಲೆ, ಬಟಾಣಿ, ಆಲೂಗೆಡ್ಡೆ, ಮೂಲಂಗಿ, ಸ್ಪಿನಾಚ್ ಮತ್ತು ಟರ್ನಿಫ್ ಈ ಗುಂಪಿಗೆ ಸೇರಿವೆ. ಬೀನ್ಸ್, ಕುಂಬಳ, ಬದನೆ, ಬೆಂಡೆ, ಕರ್ಬೂಜ, ಕಾಳುಮೆಣಸು, ಸ್ಕ್ವಾಸ್, ಸಿಹಿ ಜೋಳ, ಸಿಹಿಗೆಣಸು, ಟೊಮೇಟೋ, ಕಲ್ಲಂಗಡಿಗೆ 21o ಸೆ ಗಿಂತ ಜಾಸ್ತಿಯಿರಬೇಕು ಮತ್ತು ಚಳಿಯನ್ನು ಸಹಿಸುವುದಿಲ್ಲ. ನಮ್ಮ ದೇಶವು ವೈವಿಧ್ಯಮಯ ವಾಯುಗುಣ ಹೊಂದಿದೆ. ಸಮಶೀತೋಷ್ಣದ ತರಕಾರಿಗಳನ್ನು ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಕಾಂಡ, ಉತ್ತರ ಪೂರ್ವರಾಜ್ಯಗಳಲ್ಲಿ ಬೆಳೆಯಬಹುದು. ಉಳಿದ ರಾಜ್ಯಗಳಲ್ಲಿ ಬೆಚ್ಚನೆ ಹವಾಗುಣ ಬಯಸುವ ತರಕಾರಿಗಳನ್ನು ಬೆಳೆಯಬೇಕು.

ತೇವಾಂಶ
ಸ್ಥಳೀಯ ಮಳೆಯ ಪ್ರಮಾಣ ಮತ್ತು ಅದರ ವಾರ್ಷಿಕ ಹಂಚಿಕೆ ಕೆಲವೊಂದು ತರಕಾರಿಗಳ ಬೆಳವಣಿಗೆಯ ಸಮಯದಲ್ಲಿ ಪ್ರಭಾವ ಬೀರುತ್ತದೆ. ಮಳೆಯ ಪ್ರಮಾಣ ಕಡಿಮೆಯಾದರೆ ನೀರು ಹಾಯಿಸಬೇಕು. ಅನುಕೂಲಕರ ಬೆಳವಣಿಗೆಗೆ ಮಣ್ಣು, ನೀರು, ಪೋಷಕಾಂಶ ಮತ್ತು ಸಧೃಡ ಬೇರಿನ ಅವಶ್ಯಕತೆಯಿದೆ. ಒಣ ಮಣ್ಣಿನಲ್ಲಿ ಬೇರಿನ ಬೆಳವಣಿಗೆ ಕುಂಠಿತವಾಗುತ್ತದೆ. ಹೆಚ್ಚು ತೇವಾಂಶವಿರುವ ಮಣ್ಣಿನಲ್ಲಿ ಬೇರು ಸಾಕಷ್ಟು ವಿಸ್ತಾರಗೊಳ್ಳವುದಿಲ್ಲ ಮತ್ತು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಸಮುದ್ರ ತೀರ ಪ್ರದೇಶದಲ್ಲಿ ಹೆಚ್ಚಿನ ಆದ್ರ್ರತೆಯಿದ್ದು ಅದಕ್ಕೆ ಹೊಂದಿಕೊಂಡ ತರಕಾರಿಗಳಾದ ಆರ್ಟಿಚೋಕು ಮತ್ತು ಲೈಮ ಬೀನ್ ಉತ್ಪಾಧಿಸಲಾಗುತ್ತದೆ. ಹೆಚ್ಚಿನ ಆದ್ರ್ರತೆಯಿಂದ ಕೆಲವೊಂದು ರೋಗಗಳು ಬಾಧಿಸುವ ಸಾದ್ಯತೆ ಇದೆ

ಸೂರ್ಯನ ಬೆಳಕು
ಸೂರ್ಯನ ಬೆಳಕು ಗಿಡಗಳಿಗೆ ಶಕ್ತಿಯ ಮೂಲವಾಗಿದೆ. ಪ್ರಖರತೆ, ಗುಣ, ಮತ್ತು ಅವಧಿಯನ್ನು ಅವಲಂಬಿಸಿ ಗಿಡಗಳು ಬೆಳಕಿಗೆ ಸ್ಪಂದಿಸುತ್ತವೆ. ಋತುವಿನಲ್ಲಾಗುವ ಬದಲಾವಣೆಯಿಂದ ಕೆಲವೊಂದು ತರಕಾರಿಗಳ ಬೆಳವಣಿಗೆ ಮತ್ತು ಹೂ ಬಿಡುವುದರ ಮೇಲೆ ಪರಿಣಾಮ ಬೀರುತ್ತದೆ. ಈರುಳ್ಳಿ ಮತ್ತು ಬೆಳ್ಳಳ್ಳಿಗೆ ಅತ್ಯಂತ ಕಡಿಮೆ ಅವಧಿಯ ಬೆಳಕು ಸಾಕು.

ಜಮೀನು
ಸ್ಥಳದ ಆಯ್ಕೆ ಮಣ್ಣು ಮತ್ತು ವಾಯುಗುಣವನ್ನೂ ಅವಲಂಬಿಸಿದೆ. ಹೆಚ್ಚಿದ ಕೌಶಲ್ಯ ಮತ್ತು ಯಾಂತ್ರೀಕರಣವಾಗುತ್ತಿರುವ ಕಾಲದಲ್ಲಿ ಬೇಸಾಯಕ್ಕೆ ಜಾಸ್ತಿ ಜಮೀನು ಬೇಕಾಗಿದೆ. ಸಾಕಷ್ಟು ನೀರು ಮತ್ತು ಉತ್ತಮ ಸಾಗಾಟದ ವ್ಯವಸ್ಥೆ ಸಹ ಅಗತ್ಯ. ಮಣ್ಣು ಗಿಡಗಳಗೆ ಖನಿಜಯುಕ್ತ ಪೋಷಕಾಂಶ ಮತ್ತು ನೀರನ್ನು ಒದಗಿಸುತ್ತದೆಯಲ್ಲದೆ, ಸ್ಥಿರವಾಗಿ ಬೇರೂರುವಂತೆ ಮಾಡುತ್ತದೆ. ಮರಳು ಮಣ್ಣು ಮತ್ತು ಮರಳು ಮಿಶ್ರಿತ ಜೇಡಿ ಮಣ್ಣನ್ನು ಸಾಮಾನ್ಯವಾಗಿ ತರಕಾರಿ ಬೇಸಾಯಕ್ಕೆ ಆಯ್ದುಕೊಳ್ಳುತ್ತಾರೆ.

ಜಮೀನು ತಯಾರಿ ಮತ್ತು ನಿರ್ವಹಣೆ
ಜಮೀನು ತಯಾರಿಗೆ ಹಲವಾರು ಮಜಲುಗಳಿವೆ. ನೀರು ಬಸಿದು ಹೋಗುವ ವ್ಯವಸ್ಥೆ ಉತ್ತಮವಾಗಿರಬೇಕು. ಮಣ್ಣಿನ ತೇವಾಂಶ ಹೆಚ್ಚಾದರೆ ಬೇರಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮಣ್ಣು ಸವಕಳಿಯಾಗದಂತೆ ತಡೆದು ಕಡಿಮೆ ಶ್ರಮದಲ್ಲಿ ಬೆಳೆ ಉತ್ಪಾದಿಸುವಂತಿರಬೇಕು. ಸಾವಯವ ವಸ್ತುಗಳ ನಿರ್ವಹಣೆ, ಬೆಳೆ ಆವರ್ತನ ಮೊದಲಾದವುಗಳತ್ತ ಗಮನಹರಿಸಬೇಕು. ಮಣ್ಣಿನಲ್ಲಿರುವ ಸಾವಯವ ವಸ್ತು ಮಣ್ಣಿನ ಗುಣವನ್ನು ನಿರ್ಧರಿಸುತ್ತದೆ ಮತ್ತು ಗಿಡಗಳಿಗೆ ಪೋಷಕಾಂಶ ಒದಗಿಸುತ್ತದೆ.

ನೀರಾವರಿ
ತರಕಾರಿ ಬೇಸಾಯಕ್ಕೆ ನೀರು ಅವಶ್ಯ. ನೀರಿನ ಅವಶ್ಯಕತೆ ಮಣ್ಣಿನ ರಚನೆ, ಸಾಂದ್ರತೆ, ನೀರು ಹಿಡಿದಿಡುವ ಸಾಮಥ್ರ್ಯ, ಫಲವತ್ತತೆ, ಗಾಳಿ, ನೀರು ಬಸಿದು ಹೋಗುವ ಗುಣ, ಉಷ್ಣಾಂಶ, ತರಕಾರಿಯ ಪ್ರಾಕಾರ, ಬೇರಿನ ಆಳ, ಬೆಳವಣಿಗೆಯ ಹಂತ, ಬರಸಹಿಷ್ಣುತೆ ಮೇಲೆ ನಿರ್ಧರಿತವಾಗಿದೆ.

ಗೊಬ್ಬರದ ಬಳಕೆ
ಗಿಡಗಳಿಗೆ ಪೋಷಕಾಂಶ ಒದಗಿಸುವ ಮಣ್ಣಿನ ಸಾಮಥ್ರ್ಯವನ್ನು ಮಣ್ಣಿನ ಫಲವತ್ತತೆ ಎಂದು ಕರೆಯುತ್ತಾರೆ ಮತ್ತು ಹೆಚ್ಚಿನ ಪೋಷಕಾಂಶ ಒದಗಿಸಲು ರಸಗೊಬ್ಬರವನ್ನು ಬಳಸುತ್ತಾರೆ. ಗಿಡಗಳಿಗೆ ಬೇಕಾದ ಹೆಚ್ಚಿನ ಸಾರಜನಕ, ರಂಜಕ ಮತ್ತು ಪೊಟಾಸಿಯಂ ಪೋಷಕಾಂಶವನ್ನು ರಾಸಾಯನಿಕ ಗೊಬ್ಬರಗಳ ಮೂಲಕ ಪೂರೈಸುತ್ತಾರೆ. ಮಣ್ಣು ಮತ್ತು ಗಿಡ ಪರೀಕ್ಷಣೆಯಿಂದ ಪೋಷಕಾಂಶದ ಅವಶ್ಯಕತೆಯನ್ನು ನಿರ್ಧರಿಸಲಾಗುವುದು ಮತ್ತು ಗೊಬ್ಬರದ ಪ್ರಮಾಣ ಮಣ್ಣಿನ ಫಲವತ್ತತೆ, ಬೇಸಾಯ ಕ್ರಮ, ತರಕಾರಿಯ ವಿಧ, ನಿರೀಕ್ಷಿತ ಆಧಾಯದ ಮೇಲೆ ಅವಲಂಬಿಸಿದೆ. ನಾಟಿಗಿಂತ ಮೊದಲು ಮತ್ತು ನಾಟಿ ಮಾಡುವಾಗ ಡ್ರಿಲ್ ಮುಖಾಂತರ ಮಣ್ಣಿಗೆ ಸೇರಿಸುವುದು, ನಾಟಿಗಿಂತ ಮೊದಲು ಅಥವಾ ನಂತರ ಮತ್ತು ಬೆಳವಣಿಗೆಯ ಸಮಯದಲ್ಲಿ ಸಾಲುಗಳಲ್ಲಿ ಬಳಸುವುದು ಮುಂತಾದ ಅನೇಕ ರೀತಿಯಲ್ಲಿ ಗೊಬ್ಬರವನ್ನು ಬೇಸಾಯದಲ್ಲಿ ಬಳಸುತ್ತಾರೆ.

ಕಳೆ ನಿರ್ವಹಣೆ
ಕಳೆಯಿಂದ ಇಳುವರಿ ಕಡಿಮೆಯಾಗುತ್ತದೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗುತ್ತz.É ಬೆಳೆಹಾನಿ ಮಾಡುವ ಅನೇಕ ರೋಗ ಮತ್ತು ಕೀಟಗಳಿಗೆ ಆಶ್ರಯ ಒದಗಿಸುತ್ತದೆ. ಕಾರ್ಮಿಕರಿಂದ, ಯಂತ್ರ, ಕಳೆನಾಶಕ ಮತ್ತು ಯಂತ್ರ ಹಾಗು ಕಳೆನಾಶಕÀಗಳ ಸಮಗ್ರ ಬಳಕೆಯಿಂದ ಕಳೆ ನಿರ್ಮೂಲನೆ ಮಾಡಲಾಗುತ್ತದೆ. ಕಳೆ ನಿರ್ಮೂಲನೆಗೆ ಕಳೆನಾಶಕವನ್ನು ನಾಟಿ ಪೂರ್ವ ಅಥವಾ ನಾಟಿ ನಂತರ ಜಮೀನಿನಲ್ಲಿ ಸಿಂಪಡಿಸಲಾಗುತ್ತದೆ. ಕಳೆನಾಶಕ ಬಳಸುವ ಸಮಯ ಅದರ ರಚನೆ ಮತ್ತು ತರಕಾರಿಯ ತಳಿಯನ್ನು ಅವಲಂಬಿಸಿದೆ.
ರೋಗ ಮತ್ತು ಕೀಟನಿಯಂತ್ರಣ
ಉತ್ತಮ ಇಳುವರಿ ಪಡೆಯಲು ರೋಗ ಮತ್ತು ಕೀಟ ಹತೋಟಿಗೆ ಕಠಿಣ ಕ್ರಮಗಳನ್ನು ಅನುಸರಿಸಬೇಕು. ಕೀಟ ಮತ್ತು ರೋಗಗಳಿಂದ ಬೆಳೆ ಇಳುವರಿ ಕಡಿಮೆಯಗುತ್ತದಲ್ಲದೆ, ಎಳೆಯ ಸಸಿಗಳನ್ನು ಬಾಧಿಸಿದರೆ ಸಂಪೂರ್ಣ ಬೆಳೆ ನಾಶವಾಗುತ್ತದೆ. ರೋಗ ಮತ್ತು ಕೀಟದ ಹಾನಿಯಿಂದ ತರಕಾರಿ ಗುಣಮಟ್ಟ ಸಹ ಕಡಿಮೆಯಾಗುತ್ತದೆ. ಬ್ಯಾಕ್ಟೀರಿಯ, ಶಿಲೀಂದ್ರ ಮತ್ತು ವೈರಾಣುಗಳು ರೋಗವನ್ನು ಪ್ರಚೋದಿಸುತ್ತವೆ. ರೋಗ ಪ್ರತಿಬಂಧಕ ಕ್ರಮ ಮತ್ತು ರೋಗ ನಿರೋಧಕ ತಳಿಗಳ ಬಳಕೆಯಿಂದ ಅಧಿಕ ಫಸಲನ್ನು ನಿರೀಕ್ಷಿಸಬಹುದು. ಬೆಳೆಯನ್ನು ಹಾನಿಕಾರಕ ಕೀಟಗಳಿಂದ ರಕ್ಷಿಸಲು ಕೀಟನಾಶಕವನ್ನು ಬಳಸಬೇಕು.

ಹಿಮ ಪಾತದಿಂದ ರಕ್ಷಣೆ
ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳನ್ನು ಹಿಮದಿಂದ ರಕ್ಷಿಸಬೇಕಾಗುತ್ತದೆ. ಹಿಮ ಬೀಳುವ ಹಿಂದಿನ ದಿನ ಗಿಡಗಳಿಗೆ ನೀರು ಒದಗಿಸುವುದರಿಂದ ಹಾನಿ ಕಡಿಮೆಯಾಗುವುದು. ನಿರಂತರ ತುಂತುರು ನೀರಾವರಿ ಸಹ ಹಿಮದಿಂದಾಗುವ ಹಾನಿಯನ್ನು ತಪ್ಪಿಸುತ್ತದೆ.

ಬೆಳವಣಿಗೆ ನಿಯಂತ್ರಕಗಳು
ಬೆಳವಣಿಗೆ ನಿಯಂತ್ರಕಗಳು ರಾಸಾಯನಿಕ ವಸ್ತುಗಳಾಗಿದ್ದು ಬೆಳೆಯ ಬೆಳವಣಿಗೆ ಮತ್ತು ಅಭಿವೃದ್ದಿಯ ಮೇಲೆ ಪರಿಣಾಮ ಬೀರುತ್ತದೆ. ಫಸಲು ಪರಿಪಕ್ಷವಾಗುವ ಸಮಯವನ್ನು ಹೆಚ್ಚು ಕಡಿಮೆ ಮಾಡಲು ಇವು ಅವಶ್ಯವಾಗಿದೆ. ಈರುಳ್ಳಿಯಲ್ಲಿ ಚಿಗುರೊಡೆಯುವುದು, ಬೀಜದ ಸುಪ್ತಾವಸ್ಥೆಯನ್ನು ಮುರಿಯಲು, ಸಮಾನವಾಗಿ ಚಿಗುರೊಡೆಯಲು, ಮಿಡಿಕಚ್ಚಲು ಮತ್ತು ಕಾಯಿ ಪರಿಪಕ್ಷವಾಗಲು ಈ ರಾಸಾಯನಿಕಗಳನ್ನು ಬಳಸುತ್ತಾರೆ.

ಕೊಯ್ಲು
ಹಣ್ಣು, ಕಾಯಿ ಮತ್ತು ಸೇವನೆಗೆ ಯೋಗ್ಯವಾದ ಭಾಗವನ್ನು ಕಟಾವು ಮಾಡುವುದನ್ನು ಕೊಯ್ಲು ಎಂದು ಕರೆಯುತ್ತಾರೆ. ನಾಟಿಯ ದಿನಾಂಕ, ತಳಿ ಮತ್ತು ವಾತಾವರಣದ ಪರಸ್ಥಿತಿ ಕಟಾವಿನ ಸಮಯವನ್ನು ನಿರ್ಧರಿಸುತ್ತದೆ. ವಿವಿಧ ತಳಿಗಳ ಕಾಯಿ ಪಕ್ಷವಾಗುವ ಸಮಯ ಬೇರೆ ಬೇರೆಯಾಗಿರುತ್ತದೆ ಮತ್ತು ಬೇರೆ ಬೇರೆ ಕಾಲದಲ್ಲಿ ನಾಟಿ ಮಾಡುವುದರಿಂದ ನಿರಂತರ ಇಳುವರಿ ದೊರೆಯುತ್ತದೆ. ಹೆಚ್ಚಿನ ಬೆಳೆಗಳಲ್ಲಿ ಕೊಯ್ಲು ಕೈಯಿಂದ ಮಾಡಲಾಗುತ್ತದೆ. ಆಲುಗೆಡ್ಡೆ ಕೀಳಲು ಸನಿಕೆಯನ್ನು ಉಪಯೋಗಿಸುತ್ತಾರೆ.

ನಿರ್ವಹಣೆ
ಹಸಿರು ತರಕಾರಿಗಳು ಹೆಚ್ಚು ನೀರನ್ನು ಒಳಗೊಂಡಿದೆ. ಆದ್ದರಿಂದ ಸಂಗ್ರಹಣೆಯಲ್ಲಿ ಬೇಗನೆ ಆಕಾರ, ಬಣ್ಣ ಮತ್ತು ನೋಟವನ್ನು ಕಳೆದು ಕೊಳ್ಳುತ್ತದೆ. ನೀರಿನಂಶ ಕಡಿಮೆಯಾಗುವುದು, ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುವುದು, ಸಕ್ಕರೆಯನ್ನು ಪಿಷ್ಟವಾಗಿ, ಬಣ್ಣ ಮತ್ತು ರುಚಿ ಬದಲಾವಣೆ, ಗಟ್ಟಿಯಾಗುವುದು, ವಿಟಮಿನ್ ಸೇರ್ಪಡೆ ಅಥವಾ ಕಳೆದುಕೊಳ್ಳುವುದು, ಮೊಳಕೆಯೊಡೆಯುವುದು, ಬೇರು ಮೂಡುವುದು, ಮೆತ್ತಗಾಗುವುದು ಮತ್ತು ಕೊಳೆಯುವುದು ಇವು ಶೇಖರಣೆಯಲ್ಲಿ ಕಂಡುಬರುವ ಇನ್ನಿತರ ಬದಲಾವಣೆಗಳು. ಕೆಲವೊಂದು ಸಂದರ್ಭದಲ್ಲಿ ಬೆಲೆಯನ್ನು ಹಿಡಿತದಲ್ಲಿಡಲು ತರಕಾರಿಗಳನ್ನು ಸಂಗ್ರಹಣೆ ಮಾಡಬೇಕಾಗುತ್ತದೆ. ಉಷ್ಣತೆ ಮತ್ತು ತೇವಾಂಶ ನಿಯಂತ್ರಣದಿಂದ ತರಕಾರಿಯನ್ನು ತಾಜಾತನದಲ್ಲಿಡಬಹುದು. ತರಕಾರಿಯನ್ನು ಸಾಮಾನ್ಯವಾಗಿ ಶೇಖರಣಾ ಕೋಣೆ ಮತ್ತು ಶೀತಲ ಗೃಹಗಳಲ್ಲಿ ಸಂಗ್ರಹಿಸಿ ಇಡಲಾಗುವುದು.

ಮಾರುಕಟ್ಟೆ ಮತ್ತು ಮಾರಾಟ
ಶುಚಿಗೊಳಿಸುವುದು, ಸವರುವುದು, ಮತ್ತು ಪ್ಯಾಕ್ ಮಾಡುವುದು ಇವು ಮಾರುಕಟ್ಟೆ ಪೂರ್ವ ಕ್ರಮಗಳು. ಬೀಟ್‍ರೂಟ್, ಕ್ಯಾರೆಟ್, ಸೆಲೆರಿ, ಲೆಟ್ಟೂಸ್, ಮೂಲಂಗಿ, ಸ್ಪಿನಾಚ್‍ಗಳಿಗೆ ಮಣ್ಣು ಅಂಟಿಕೊಂಡಿರುತ್ತದೆ. ಇವುಗಳ ಎಲೆ ಕತ್ತರಿಸಿ ನೀರಿನಿಂದ ತೊಳೆದು ಶುಚಿಗೊಳಿಸಬೇಕು. ಬಣ್ಣ ಕಳೆದು ಕೊಂಡ ಎಲೆಗಳನ್ನು ಕಿತ್ತು ಹಾಕಬೇಕು. ತಂಪಾಗಿಸುವುದರಿಂದ ಹಾನಿ ಉಂಟುಮಾಡುವ ಸೂಕ್ಷಾಣು ಜೀವಿಗಳ ಬೆಳವಣಿಗೆಯ ವೇಗವನ್ನು ತಡೆಗಟ್ಟಿ ತರಕಾರಿಯನ್ನು ದೀರ್ಘಕಾಲದವರೆಗೆ ಕಾಪಾಡಬಹುದು ಮತ್ತು ನೀರಿನಂಶ ಕಡಿಮೆಯಾಗುವುದನ್ನು ತಡೆಯಬಹುದು. ಸಮಾನ ಗಾತ್ರ, ಆಕಾರ, ಬಣ್ಣ, ಮಾಗುವಿಕೆ ಮಾರಾಟಕ್ಕೆ ಅತೀ ಅಗತ್ಯವಾದ್ದರಿಂದ ವರ್ಗೀಕರಣ ಅತೀ ಅವಶ್ಯ. ಪ್ಯಾಕಿಂಗ್ ಸಹ ಉತ್ತಮ ಬೆಲೆ ಪಡೆಯುದರಲ್ಲಿ ಸಹಕಾರಿಯಾಗುತ್ತದೆ. ಪಾರದರ್ಶಕ ಪ್ಲಾಸ್ಟಿಕ್ ಹಾಳೆ, ಟ್ರೇ, ಬುಟ್ಟಿ, ಚೀಲಗಳಲ್ಲಿ ತರಕಾರಿಗಳನ್ನು ಪ್ಯಾಕ್ ಮಾಡಬಹುದು. ರೈತರು ತಮ್ಮ ಉತ್ಪನ್ನಗಳನ್ನು ಚಿಲ್ಲರೆಯಾಗಿ ಅಥವಾ ಸಗಟಾಗಿ ಮಾರಾಟ ಮಾಡುತ್ತಾರೆ. ಹೆಚ್ಚಿನ ಬೆಳೆಗಾರರು ವಿವಿಧ ಖರೀದಿದಾರರಿಗೆ ಚಿಲ್ಲರೆಯಾಗಿಯೂ ಅಥವಾ ಸಗಟಾಗಿ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟಮಾಡುತ್ತಾರೆ. ಮಾರುಕಟ್ಟೆಯಿಂದ ದೂರದಲ್ಲಿರುವ ಬೆಳೆಗಾರರು ತಮ್ಮ ಉತ್ಪನ್ನವನ್ನು ಸಗಟು ವ್ಯಾಪಾರಿಗಳಿಗೆ ಮಾರಾಟಮಾಡುತ್ತಾರೆ. ಕೆಲವೊಂದು ಬೆಳೆಗಾರರು ಸಂಸ್ಕರಣೆ ಉದ್ಯಮದೊಂದಿಗೆ ಸಂಭಂದವಿರಿಸಿಕೊಳ್ಳುತ್ತಾರೆ. ಹರಾಜಿನ ಮುಖಾಂತರ ಮತ್ತು ಸಹಕಾರ ಸಂಸ್ಥೆಗಳ ಮೂಲಕ ಸಹ ಮಾರಾಟ ಮಾಡುತ್ತಾರೆ.

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments