ಪಾಪಾಸು ಕಳ್ಳಿ Cactus

ಪಾಪಾಸು ಕಳ್ಳಿ

ಪಾಪಾಸು ಕಳ್ಳಿ ಕ್ಯಾಕ್ಟೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಕೆಲವು ತಳಿಗಳನ್ನು ಅಲಂಕಾರಿಕ ಸಸ್ಯವಾಗಿ, ಮೇವಿಗಾಗಿ ಮತ್ತು ಇನ್ನು ಕೆಲವನ್ನು ಹಣ್ಣಿಗಾಗಿ ಬೆಳಸುತ್ತಾರೆ. ಸಾಮಾನ್ಯವಾಗಿ ಒಣ ವಾಯುಗುಣದಲ್ಲಿ ಬೆಳೆಯುತ್ತದೆ. ಕೆಲವು ವಿಪರೀತ ಒಣ ವಾತಾವರಣದಲ್ಲಿ ಬೆಳೆಯುವುದರಿಂದ ನೀರನ್ನು ಹಿಡಿದಿಟ್ಟುಕೊಳ್ಳಲು ಅನೇಕ ಮಾರ್ಪಾಡುಗಳಿಂದ ಕೂಡಿದೆ. ಹೆಚ್ಚಿನ ಪಾಪಾಸ್‍ಕಳ್ಳಿಯ ಎಲೆಗಳು ಮುಳ್ಳುಗಳಾಗಿ ಮಾರ್ಪಾಡು ಹೊಂದಿದೆ. ಎಲೆಗಳು ಇಲ್ಲದಿರುವುದರಿಂದ ಕಾಂಡವು ದಪ್ಪವಾಗಿದ್ದು ಹರಿತನ್ನು ಹೊಂದಿರುವುದರಿಂದ ಆಹಾರವನ್ನು ತಯಾರಿಸುತ್ತದಲ್ಲದೆ ನೀರನ್ನು ಸಹ ಶೇಖರಿಸುತ್ತದೆ. ಹಲವಾರು ರೀತಿಯ ಗಾತ್ರ ಮತ್ತು ಆಕಾರವನ್ನು ಪಾಪಾಸ್‍ಕಳ್ಳಿಗಳು ಹೊಂದಿವೆ. ಬ್ಲೋಸ್‍ಫೆಲ್ಡಿಯಾಲಿಲಿಪುಟಿಯಾನ ಎಂಬ ಪಾಪಾಸ್‍ಕಳ್ಳಿ ಗಿಡವು 19.2 ಮೀ. 63 ಸೆ.ಮೀ. ಎತ್ತರಕ್ಕೆ ಬೆಳೆದರೆ ಅತ್ಯಂತ ಸಣ್ಣದಾದ ಭ್ಲೋಸ್‍ಫೆಲ್ಡಿಯಾನಲಿಲಿಪುಟಿಯಾನ ಬೆಳೆದಾಗ ಕೇವಲ 1 ಸೆ.ಮೀ. ಅಗಲವಾಗಿದೆ. ಚಿಕ್ಕ ಪಾಪಸುಕಳ್ಳಿಗೆ ಸಾಧಾರಣವಾಗಿ ಗುಮ್ಮಟಾಕಾರದ ಕಾಂಡವಿರುತ್ತದೆ. ಹೆಚ್ಚಿನ ಕಾಲ ಸುಪ್ತಾವಸ್ಥೆಯಲ್ಲಿರುವುದರಿಂದ ಬೆಳೆಯುವ ಕಾಲ ಕಡಿಮೆ ಇರುತ್ತದೆ ಮತ್ತು ಮಳೆಗಾಲದಲ್ಲಿ ಚಟುವಟಿಕೆಯಿಂದ ಕೂಡಿರುತ್ತದೆ. ಪಾಪಾಕಳ್ಳಿಯಲ್ಲಿ ಸುಮಾರು 1500-1800 ತಳಿಗಳಿವೆ. ಒಪನ್ಸಿಯಾ, ಸೆರಿಯಸ್ ಮತ್ತು ಮೆಮ್ಮಲೇರಿಯ ಎಂಬ ಮೂರು ಗುಂಪುಗಳಿವೆ. ಈ ಗುಂಪಿನ ಹೆಚ್ಚಿನ ಸದಸ್ಯರನ್ನು ಸುಲಭವಾಗಿ ಗುರುತಿಸಬಹುದು. ಹೆಚ್ಚಿನವುಗಳಿಗೆ ಮೆದುವಾದ ರಸ ತುಂಬಿದ ಕಾಂಡವು ಆಹಾರ ತಯಾರಿಸುವ ಅಂಗವಾಗಿದೆ. ಮಾರ್ಪಾಡಾದ ಕಾಂಡಗಳಲ್ಲಿ ಕಣ್ಣುಗಳು ಹತ್ತಿರವಾಗಿರುತ್ತದೆ. ಈ ಕಣ್ಣುಗಳಿಂದ ಮುಳ್ಳು, ಕೊಂಬೆ ಅಥವಾ ಹೂ ಬೆಳೆಯುತ್ತದೆ. ಮೆಮ್ಮಲೇರಿಂiÀiಕ್ಕೆ ಗೋಳಾಕಾರದ ದೇಹವಿದ್ದು ಮೇಲೆದ್ದು ಕಾಣುವ ಎಲೆಗಳಿರುತ್ತವೆ. ಪಾಪಸು ಕಳ್ಳಿ ಗಿಡಕ್ಕೆ ಸೂಕ್ಷ್ಮ ಬೇರುಗಳಿದ್ದು ಹೆಚ್ಚು ಅಥವಾ ಕಡಿಮೆ ವಿಸ್ತಾರದಲ್ಲಿ ಬೆಳೆಯುತ್ತದೆ. ಕೆಲವು ಗಿಡಗಳು ತಾಯಿ ಬೇರುಗಳನ್ನು ಹೊಂದಿವೆ. ಹೂಗಳು ಬಿಳಿ, ಹಳದಿ, ಕೆಂಪು ಮತ್ತು ಮೆಜಂಟಾ ಬಣ್ಣಗಳನ್ನು ಹೊಂದಿವೆ.
ಒಪೆನ್ಸಿಯ ಪಾಪಸ್‍ಕಳ್ಳಿಯು ವಿವಿಧ ವಾತಾವರಣದಲ್ಲಿ ಹೊಂದಿಕೊಂಡು ಬೆಳೆಯುತ್ತದೆ. ಉಷ್ಣವಲಯದ ಕಳ್ಳಿ ಗಿಡವು ಸೂರ್ಯ ಪ್ರಕಾಶವಿರುವ ಒಣ ವಾಯುಗುಣವನ್ನು ಬಯಸುತ್ತದೆ. ಕೆಲವು ಮರಳಿನಲ್ಲಿ ಬೆಳೆದರೆ ಹೆಚ್ಚಿನವು ಕ್ಯಾಲ್ಸಿಯಂ ಹೆಚ್ಚಿರುವ ನೀರು ಬಸಿದು ಹೋಗುವ ಯಾವುದೇ ಮಣ್ಣಿನಲ್ಲಿ ಬೆಳೆಯುತ್ತವೆ. ಮಣ್ಣಿನಲ್ಲಿ ಸಾವಯವ ವಸ್ತು ಇದ್ದರೆ ಗಿಡ ಹುಲುಸಾಗಿ ಬೆಳೆದು ಅಂದವಾಗಿ ಕಾಣುತ್ತದೆ. ನೀರಿನ ಅವಶ್ಯಕತೆ ಕಡಿಮೆ ಇರುವುದರಿಂದ ಸ್ವಲ್ಪ ಪ್ರಮಾಣದ ನೀರನ್ನು ಆಗಾಗ ಕೊಡುವುದು ಉತ್ತಮ. ಕತ್ತರಿಸಿದ ಕಾಂಡದ ತುಂಡುಗಳನ್ನು ಸಸ್ಯಾಭಿವೃದ್ಧಿಗೆ ಬಳಸುತ್ತಾರೆ.
ಯುಫೋರ್ಬಿಯದ ಕೆಲವು ಗಿಡಗಳು ವಿವಿಧ ಹವಾಮಾನ ಮತ್ತು ಮಣ್ಣಿಗೆ ಹೊಂದಿಕೊಂಡು ಬೆಳೆಯುತ್ತವೆ. ಕೆಲವೊಂದು ಸೂಕ್ಷ್ಮವಾಗಿದ್ದು ಎಚ್ಚರಿಕೆಯಿಂದ ಬೆಳಸಬೇಕಾಗುತ್ತದೆ. ಕೆಲವು ತೆರೆದ ಪರಿಸರದಲ್ಲಿ ಬೆಳೆದರೆ ಇನ್ನು ಕೆಲವಕ್ಕೆ ಪಾರದರ್ಶಕ ಚಪ್ಪರದ ವ್ಯವಸ್ಥೆ ಬೇಕು. ಸೂರ್ಯನ ಬೆಳಕು ಅಗತ್ಯವಾದರೂ ಬೇಸಿಗೆಯಲ್ಲಿ ಹೆಚ್ಚಿನ ಪ್ರಖರತೆಯಿಂದ ಸುಟ್ಟಂತೆ ಕಲೆಗಳಾಗಬಹುದು. ಚಳಿಗಾಲದಲ್ಲಿ ಉಷ್ಣತೆಯನ್ನು ಒದಗಿಸಬೇಕು ಮತ್ತು ಮಳೆ ಹಾಗು ಹಿಮಪಾತದಿಂದ ರಕ್ಷಿಸಬೇಕು. ಕಡಿಮೆ ಸಾರಜನಕ, ಸಾಧಾರಣ ರಂಜಕ ಹಾಗು ಪೊಟಾಷ್ ಮತ್ತು ಸ್ವಲ್ಪ ಸಾವಯವ ವಸ್ತು ಪಾಪಸ್‍ಕಳ್ಳಿ ಗಿಡಗಳಿಗೆ ಸೂಕ್ತವಾಗಿದೆ.
ಬೇಸಾಯ
ಪ್ರಕೃತಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಪಾಪಾಸ್‍ಕಳ್ಳಿ ಸಹಜವಾಗಿ ಬೆಳೆಯುತ್ತದೆ. ಹಲವಾರು ದೇಶಗಳಲ್ಲಿ ವಿವಿಧ ಹವಾಗುಣದಲ್ಲಿ ಪಾಪಾಸುಕಳ್ಳಿಯನ್ನು ಬೆಳೆಯುತ್ತಾರೆ. ಗಿಡ ಬೆಳೆಯುವ ಸಹಜ ವಾತಾವರಣವನ್ನು ಸೃಷ್ಟಿಸುವುದು ಅಸಾದ್ಯದ ಕೆಲಸ. ಅರೆ ಮರುಭೂಮಿ ಮತ್ತು ಪರೋಪಜೀವಿ ಪಾಪಸ್‍ಕಳ್ಳಿ ಗಿಡಗಳನ್ನು ಬೆಳೆಯಲು ಬೇರೆ ಬೇರೆ ರೀತಿಯ ವಾತಾವರಣದ ಅಗತ್ಯವಿದೆ. ಅರೆಮರುಭೂಮಿ ಗಿಡಗಳನ್ನು ಬಾಹ್ಯವಾಗಿ ಬೆಳೆಸುವ ಬದಲು ಕುಂಡಗಳಲ್ಲಿ, ಹಸಿರು ಮನೆಗಳಲ್ಲಿ ಬೆಳೆಯಬೇಕು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಬೆಳೆಯುವ ಮಾಧ್ಯಮ
ಚೆನ್ನಾಗಿ ಗಾಳಿಯಾಡುವ ಯಾವುದೇ ಮಾಧ್ಯಮದಲ್ಲಿ ಪಾಪಾಸುಕಳ್ಳಿ ಬೆಳೆಯುತ್ತದೆ. ಸಾಧಾರಣವಾಗಿ ಶೇಕಡ 25-75 ಭಾಗ ಸಾವಯವ ವಸ್ತುಗಳು, ಉಳಿದ ಭಾಗವನ್ನು ಚಿಕ್ಕ ಚಿಕ್ಕ ಶಿಲೆಗಳಿಂದ, ಲಾವ ಕಲ್ಲುಗಳಿಂದ ತುಂಬಲು ಶಿಫಾರಸ್ಸು ಮಾಡಲಾಗಿದೆ.

ನೀರಾವರಿ
ಅರೆ ಮರುಭೂಮಿಯ ಪಾಪಾಸ್‍ಕಳ್ಳಿ ಗಿಡಕ್ಕೆ ಎಚ್ಚರಿಕೆಯಿಂದ ನೀರು ಕೊಡಬೇಕು. ಸಾಧಾರಣವಾಗಿ ಗಿಡಗಳ ನೀರಿನ ಅವಶ್ಯಕತೆ ಕಡಿಮೆ. ಬೆಳೆಸಿದ ಸ್ಥಳವನ್ನು ಅವಲಂಬಿಸಿ ನೀರು ಹಾಕಬೇಕು. ಲವಣಾಂಶ ಶೇಖರಗೊಳ್ಳುವುದನ್ನು ತಡೆಯಲು ಆಗಾಗ ಕುಂಡಗಳ ಮಾಧ್ಯಮವನ್ನು ಬದಲಾಯಿಸುತ್ತಿರಬೇಕು. ಮಣ್ಣು ಚೆನ್ನಾಗಿ ಒಣಗಿದ ನಂತರವೇ ಇನ್ನೊಮ್ಮೆ ನೀರು ಕೊಡಬೇಕು.

ಬೆಳಕು ಮತ್ತು ಉಷ್ಣತೆ
ಅರೆ ಮರುಭೂಮಿಯ ಗಿಡಗಳನ್ನು ಹೆಚ್ಚಿನ ಬಿಸಿಲಿನಲ್ಲಿ ಇಡಬಹುದು. ಹಸಿರು ಮನೆಯಲ್ಲಿ ಬೆಳಕು ಮತ್ತು ಉಷ್ಣತೆ ಹೆಚ್ಚಾದರೆ ನೆರಳನ್ನು ಒದಗಗಿಸಬೇಕಾಗುತ್ತದೆ. 32o ಸೆ. ಗಿಂತ ಹೆಚ್ಚಿನ ಉಷ್ಣತೆಯ ಅವಶ್ಯಕತೆಯಿಲ್ಲ. ಚಳಿಗಾಲದಲ್ಲಿ ಕನಿಷ್ಟ 5-10o ಸೆ. ತಾಪಮನ ಬೇಕಾಗುತ್ತದೆ.

ಸಸ್ಯಾಭಿವೃದ್ಧಿ
ಬೀಜ, ಕಡ್ಡಿ ಅಥವಾ ಗ್ರಾಫ್ಟಿಂಗ್ ವಿಧಾನದ ಮೂಲಕ ಸಸ್ಯಾಭಿವೃದ್ಧಿ ಮಾಡಬಹುದು. ಬೀಜಗಳನ್ನು ವರ್ಷದ ಪ್ರಾರಂಭದಲ್ಲಿ ತೇವಾಂಶವಿರುವ ಮಣ್ಣಿನಲ್ಲಿ ಬಿತ್ತನೆ ಮಾಡಬೇಕು ಮೊಳಕೆಯೊಡೆದ ಗಿಡಗಳನ್ನು ನೆರಳಿನಲ್ಲಿಡಬೇಕು. ಹೆಚ್ಚು ತೇವಾಂಶವಿದ್ದರೆ ಬೀಜ ಮತ್ತು ಸಸಿ ಕೊಳೆತುಹೋಗುತ್ತದೆ. ಮೊಳಕೆಯೊಡೆಯಲು ಮಾಧ್ಯಮದ ಉಷ್ಣಾಂಶ 18-30o ಸೆ. ಬೇಕಾಗಿದೆ. ಬೇರುಗಳು ಉತ್ತಮವಾಗಿ ಬೆಳೆಯಲು 22o ಸೆ. ನಷ್ಟು ಉಷ್ಣಾಂಶ ಇರಬೇಕು.
ಬೇರುಗಳನ್ನು ಬಿಡಲು ಶಕ್ತವಾದ ಗಿಡದ ಭಾಗವನ್ನು ಸಸ್ಯಾಭಿವೃದ್ದಿಗೆ ಉಪಯೋಗಿಸಲಾಗುವುದು. ಗಂಟುಗಳಿಂದ ಗಿಡವನ್ನು ಬೇರ್ಪಡಿಸಿ ಸೂಕ್ತಮಾಧ್ಯಮದಲ್ಲಿ ನೆಡಲಾಗುವುದು. ಹೊಸದಾಗಿ ಬೆಳೆದ ಕೊಂಬೆಗಳನ್ನು ಸಹ ಸಸ್ಯಾಭಿವೃದ್ದಿ ಮಾಡಲು ಬಳಸಬಹುದು. 22o ಸೆ. ನಷ್ಟು ಉಷ್ಣಾಂಶ ಬೆಳವಣಿಗೆಗೆ ಪೂರಕ.
ಕೀಟ ಮತ್ತು ರೋಗಗಳು
ಅನೇಕ ರಸ ಹೀರುವ ಕೀಟಗಳು ಪಾಪಸುಕಳ್ಳಿಯನ್ನು ಬಾಧಿಸುತ್ತದೆ. ಹಿಟ್ಟಿನ ತಿಗಣೆ ಕಾಂಡ ಮತ್ತು ಬೇರಿನಲ್ಲಿ ಕಂಡುಬರುತ್ತದೆ. ಪೊರೆ ಕೀಟ, ಕಾಂಡದಲ್ಲಿರುವ ಅತೀ ಚಿಕ್ಕದಾದ ಬಿಳಿ ನೊಣ ಮತ್ತು ಕೆಂಪು ಜೇಡರ ನುಸಿ ಗುಂಪಾಗಿ ಅತೀ ಹೆಚ್ಚಿನ ಸಂಖೈಯಲ್ಲಿದ್ದು ಗಿಡಕ್ಕೆ ಹಾನಿ ಮಾಡುತ್ತದೆ. ಬಸವನ ಹುಳು ಗಿಡವನ್ನು ತಿನ್ನುತ್ತದೆ. ತೇವಾಂಶ ಹೆಚ್ಚಾದರೆ ಶಿಲೀಂದ್ರ, ಬ್ಯಾಕ್ಟೀರಿಯ ಮತ್ತು ನಂಜುರೋಗಗಳು ಗಿಡವನ್ನು ಬಾಧಿಸಬಹುದು.

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments