ಬಾಳೆ Banana

ಬಾಳೆ

ಬಾಳೆ ಕೊಡಗು ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆ. ಇದೊಂದು ರುಚಿಕರವಾದ, ಕಡಿಮೆ ಬೆಲೆಯಲ್ಲಿ ಅಧಿಕ ಪೌಷ್ಠಿಕಾಂಶವನ್ನು ಕೊಡುವ ಜನಪ್ರಿಯ ಹಣ್ಣು. ಬಾಳೆ ಹಣ್ಣು ಶೇಕಡಾ 20 ರಷ್ಟು ಶರ್ಕರ ಪಿಷ್ಠವನ್ನು ಹೊಂದಿದ್ದು ಶಕ್ತಿಯ ಆಗರವಾಗಿದೆ. ಅಲ್ಲದೆ ಜೀವಸತ್ವಗಳು ಹಾಗೂ ಖನಿಜಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಕೊಡಗು ಜಿಲ್ಲೆಯಾದ್ಯಂತ ವಿವಿಧ ಬಾಳೆ ತಳಿಗಳನ್ನು ಏಕ ಬೆಳೆಯಾಗಿ ಗದ್ದೆಗಳಲ್ಲಿ ಹಾಗೂ ಮಿಶ್ರ ಬೆಳೆಯಾಗಿ ತೋಟದಲ್ಲಿ ಬೆಳೆಯುತ್ತಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮಣ್ಣು
ಬಾಳೆಯನ್ನು ಎಲ್ಲಾ ಮಣ್ಣಿನಲ್ಲಿಯೂ ಬೆಳೆಯಬಹುದಾದರೂ, ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪು ಗೋಡು ಮಣ್ಣು ಮತ್ತು ಆಳವಾದ ಕಪ್ಪು ಮಣ್ಣು ಅತ್ಯಂತ ಯೋಗ್ಯವಾದುದು.

ಹವಾಗುಣ
ಬಾಳೆ ಮುಖ್ಯವಾಗಿ ಉಷ್ಣವಲಯದ ಬೆಳೆಯಾಗಿದ್ದು ತೇವಾಂಶ ಭರಿತ ಹೆಚ್ಚಿನ ಉಷ್ಣಾಂಶವಿರುವ ವಾತಾವರಣವನ್ನು ಬಯಸುತ್ತದೆ. ಈ ಬೆಳೆಯನ್ನು ಸಮುದ್ರ ಮಟ್ಟದಿಂದ ಹಿಡಿದು 1200 ಮೀಟರ್ ಎತ್ತರದ ಪ್ರದೇಶಗಳಲ್ಲಿ 14 ರಿಂದ 400 ಉಷ್ಣಾಂಶವಿರುವ ನೀರಾವರಿ ಅನುಕೂಲ ಹೊಂದಿದ ಎಲ್ಲಾ ಕಡೆಯಲ್ಲಿಯೂ ಬೆಳೆಯಬಹುದು.

ತಳಿಗಳು
• ರೊಬಸ್ಟಾ: ಇದು ಮಧ್ಯಮ ಎತ್ತರದ ತಳಿಯಾಗಿದ್ದು, ಕ್ಯಾವೆಂಡಿಸ್ ಗುಂಪಿಗೆ ಸೇರಿದೆ. ಇದು ದೊಡ್ಡ ಗಾತ್ರದ ಹೆಚ್ಚು ಹಣ್ಣುಗಳುಳ್ಳ ಗೊನೆಗಳನ್ನು ಕೊಡುತ್ತದೆ. ಆದ್ದರಿಂದ ರಫ್ತು ಮಾಡಲು ಸೂಕ್ತವಾಗಿದೆ. ಪನಾಮಾ ಸೊರಗು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ.
• ಗ್ರಾಂಡ್ ನೈನ್ (ಜಿ-9): ಇದು ಮಧ್ಯಮ ಎತ್ತರದ ತಳಿಯಾಗಿದ್ದು ಹಣ್ಣುಗಳ ಗಾತ್ರ ರೊಬಸ್ಟಾಗಿಂತ ದೊಡ್ಡದಾಗಿರುತ್ತದೆ ಹಾಗೂ ರಫ್ತು ಮಾಡಲು ಸೂಕ್ತವಾಗಿದೆ. ಇದು ಕೂಡ ಪನಾಮಾ ಸೊರಗು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ.
• ನೇಂದ್ರ ಬಾಳೆ: ಇದು ಅಡಿಗೆಗೆ ಹಾಗೂ ತಿನ್ನುವುದಕ್ಕೆ ಯೋಗ್ಯವಾದ ತಳಿ. ಇದರಲ್ಲಿ ಹಣ್ಣುಗಳು 30 ಸೆಂ. ಮೀ. ಗೂ ಹೆಚ್ಚು ಉದ್ದವಾಗಿದ್ದು ತಿರುಳು ರುಚಿಯಾಗಿರುತ್ತದೆ.
• ಎಲಕ್ಕಿ ಬಾಳೆ: ಇದು ಮಧುರವಾದ ರುಚಿ, ಸಿಹಿ ಮತ್ತು ಉತ್ತಮ ಶೇಖರಣೆ ಗುಣವನ್ನು ಹೊಂದಿರುವ ತಳಿ. ಇದರ ಗಿಡ ಎತ್ತರವಾಗಿದ್ದು 13 ರಿಂದ 14 ತಿಂಗಳಲ್ಲಿ ಕಟಾವಿಗೆ ಬರುವುದು.
• ರಸಬಾಳೆ: ಇದು ಅತ್ಯಂತ ಸ್ವಾಧಿಷ್ಟ ತಳಿಗಳಲ್ಲೊಂದಾಗಿದೆ. ಗಿಡ ಬಹಳ ಎತ್ತರ ಬೆಳೆಯುವುದು. ಮಧ್ಯಮ ಗಾತ್ರದ ಗಟ್ಟಿ ತಿರುಳಿನ ಆಕರ್ಷಕ ಹಳದಿವರ್ಣದ ತೆಳು ಸಿಪ್ಪೆಯ ರುಚಿಕರವಾದ ಹಣ್ಣನ್ನು ಕೊಡುತ್ತದೆ.
ಇತರ ತಳಿಗಳಾದ ಪುಟ್ಟ ಬಾಳೆ, ಕರಿ ಬಾಳೆ, ಚಂದ್ರ ಬಾಳೆ, ಬೂದು ಬಾಳೆಗಳನ್ನೂ ಸಹ ಕೊಡಗು ಜಿಲ್ಲೆಯಾದ್ಯಂತ ಬೆಳೆಯುತ್ತಾರೆ.

ಬೇಸಾಯ ಸಾಮಾಗ್ರಿಗಳು (ಪ್ರತೀ ಎಕರೆಗೆ)

ತಳಿಗಳು ಅಂತರ ಗಿಡಗಳ ಸಂಖ್ಯೆ
ಕ್ಯಾವೆಂಡಿಸ್ (ಪಚ್ಚಬಾಳೆ) 1.8 ಮೀ x 1.8 ಮೀ. 1500
ರೊಬಸ್ಟಾ 2.2ಮೀ x 1.8ಮೀ. 1125
1.5 ಮೀ x 1.5 ಮೀ. 2222
ಇತರ ತಳಿಗಳು 2.0ಮೀ x 2.0ಮೀ. 1112

ಸಾವಯವ ಗೊಬ್ಬರ: ಪ್ರತಿಯೊಂದು ಗಿಡಕ್ಕೆ ಸುಮಾರು 20 ಕೆ.ಜಿ.
ರಾಸಾಯನಿಕ ಗೊಬ್ಬರಗಳು (ಪ್ರತೀ ಗಿಡಕ್ಕೆ ಗ್ರಾಂ.ಗಳಲ್ಲಿ)
ಗೆಡ್ಡೆಗಳಿಂದ ಬೆಳೆಯುವ ಬಾಳೆಗೆ
ನಾಟಿ ಮಾಡಿದ ಸಾರಜನಕ ರಂಜಕ ಪೆÇಟ್ಯಾಷ್
2ನೇ ತಿಂಗಳು 60 36 75
4ನೇ ತಿಂಗಳು 60 36 75
6ನೇ ತಿಂಗಳು 60 36 75
ಒಟ್ಟು 180 108 225

ಅಂಗಾಂಶ ಬಾಳೆಗೆ
ನಾಟಿ ಮಾಡಿದ ಸಾರಜನಕ ರಂಜಕ ಪೆÇಟ್ಯಾಷ್
35ನೇ ದಿನ 20 20 25
70ನೇ ದಿನ 45 20 55
105ನೇ ದಿನ 45 20 55
140ನೇ ದಿನ 45 20 55
175ನೇ ದಿನ 45 20 55
ಹೂ ಬಿಡುವ ಸಮಯ – – 55
ಒಟ್ಟು 200 100 300

ಬಾಳೆ ಗಿಡದ ಬೆಳವಣಿಗೆ ಮತ್ತು ಇಳುವರಿಯನ್ನು ಹೆಚ್ಚಿಸಲು ಬಾಳೆ ಸ್ಪೆಷಲ್‍ನ ಸಿಂಪಡಣೆ
ಬಾಳೆ ಗಿಡದ ಬೆಳವಣಿಗೆ ಮತ್ತು ಇಳುವರಿಯನ್ನು ಹೆಚ್ಚಿಸಲು ಸೂಕ್ಷ್ಮ ಪೆÇೀಷಕಾಂಶಗಳ ಮಿಶ್ರಣ ಬಾಳೆ ಸ್ಪೆಷಲನ್ನು ಸಿಂಪಡಣೆ ಮಾಡುವುದರಿಂದ ಹೆಚ್ಚಿನ ಗುಣಮಟ್ಟದ ಫಸಲು ಹಾಗೂ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯ.

ಬಾಳೆ ಸ್ಪೆಷಲನ್ನು ಉಪಯೋಗಿಸುವ ವಿಧಾನ
ಬಾಳೆ ಸ್ಪೆಷಲ್‍ನ್ನು ಒಟ್ಟು 5 ಬಾರಿ ವಿವಿಧ ಹಂತಗಳಲ್ಲಿ ಸಿಂಪಡಣೆ ಮಾಡಬೇಕಾಗುತ್ತದೆ.
• 125 ಗ್ರಾಂ ಬಾಳೆ ಸ್ಪೆಷಲ್ ಪೆÇೀಷಕಾಂಶದ ಮಿಶ್ರಣವನ್ನು 25 ಲೀಟರ್ ನೀರಿನಲ್ಲಿ ಕರಗಿಸಿ ಅದಕ್ಕೆ ಒಂದು ನಿಂಬೆಹಣ್ಣಿನ ರಸ ಹಾಗೂ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಒಂದು ರೂಪಾಯಿ ಮೌಲ್ಯದ ಒಂದು ಶಾಂಪು ಸ್ಯಾಚೆಯ ಸಾಬೂನನ್ನು ನೀರಿಗೆ ಸೇರಿಸಿ ಚೆನಾಗಿ ಮಿಶ್ರಣ ಮಾಡುವುದು.
• ಈ ರೀತಿ ತಯಾರಿಸಿದ ದ್ರಾವಣವನ್ನು ಬಾಳೆ ಸಸ್ಯದ ಎಲೆಗಳ ಮೇಲೆ ಒಟ್ಟು ಐದು ಹಂತಗಳಲ್ಲಿ ಸಿಂಪಡಣೆ ಮಾಡಬೇಕಾಗುತ್ತದೆ.
• ಮೊದಲ ಸಿಂಪಡಣೆಯನ್ನು ನಾಟಿ ಮಾಡಿದ 5 ತಿಂಗಳ ನಂತರ ಹಾಗೂ ಉಳಿದ ಸಿಂಪಡಣೆಗಳನ್ನು ನಾಟಿ ಮಾಡಿದ 6, 7 ಹಾಗೂ 8 ತಿಂಗಳ ನಂತರ ಕೊಡುವುದು.
• ಕಡೆಯದಾಗಿ ಹೂವು ಹಾಗೂ ಗೊನೆಗಳ ಮೇಲೆ ಇನ್ನೊಮ್ಮೆ ಸಿಂಪಡಿಸುವುದು.

ಹಣ್ಣುಗಳ ಗಾತ್ರ ಮತ್ತು ತೂಕವನ್ನು ಹೆಚ್ಚಿಸುವ ತಂತ್ರಜ್ಞಾನ
ಉತ್ತಮ ಗುಣಮಟ್ಟದ ಆಕರ್ಷಕ ಹಾಗೂ ಹಣ್ಣಿನ ಗಾತ್ರವನ್ನು ಅಧಿಕಗೊಳಿಸಲು ಬಾಳೆಯ ಮಿಡಿಗಳು ಕಚ್ಚಿದ ನಂತರ ಹೂ ಮೊಗ್ಗನ್ನು ಕಡಿದು ಹಾಕುವುದು ಹಾಗೂ ಕಡಿದ ದೇಟಿನ ತುದಿಯಿಂದ ಪೆÇೀಷಕಾಂಶಗಳನ್ನು ಒದಗಿಸುವ ಸುಲಭವಾದ ತಂತ್ರಜ್ಞಾನವನ್ನು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ.
• ಬಾಳೆ ಗೊನೆ ಬಿಟ್ಟನಂತರ ಎಲ್ಲಾ ಕಾಯಿಗಳು ಕಚ್ಚಿ, 8 ರಿಂದ 10 ಹೂ-ಪಕಳೆಗಳು ಉದುರಿದ ನಂತರ ಸುಮಾರು 6 ಇಂಚು ಉದ್ದದ ದಿಂಡನ್ನು ಹೂಮೊಗ್ಗಿನ ಮೇಲ್ಭಾಗದಲ್ಲಿ ಸೊಟ್ಟದಾಗಿ ಹರಿತವಾದ ಚಾಕುವಿನಿಂದ ಕತ್ತರಿಸಬೇಕು.
• ನಂತರ ಪ್ಲಾಸ್ಟಿಕ್ ಚೀಲದಲ್ಲಿ ಹಸುವಿನ ಸಗಣಿಯಲ್ಲಿ ಶಿ¥sóÁರಸ್ಸು ಮಾಡಿದ ಪ್ರಮಾಣದಲ್ಲಿ ರಾಸಾಯನಿಕ ಪೆÇೀಷಕಾಂಶಗಳನ್ನು ಕರಗಿಸಿ ದಿಂಡಿನ ತುದಿಯನ್ನು ಮಿಶ್ರಣದಲ್ಲಿ ಮುಳುಗಿಸಿ ಗಟ್ಟಿಯಾದ ದಾರದಿಂದ ಕಟ್ಟಬೇಕು.
• ರೋಬಸ್ಟಾ ಜಾತಿಯ ಬಾಳೆಗೆ ಅರ್ಧ ಕಿ.ಗ್ರಾಂ ತಾಜಾ ಹಸುವಿನ ಸಗಣಿಯನ್ನು 7.5 ಗ್ರಾಂ ಯೂರಿಯಾ ಹಾಗೂ 7.5 ಗ್ರಾಂ ಸಲ್ಫೇಟ್ ಆಫ್ ಪೆÇಟ್ಯಾಶ್‍ಗಳನ್ನು ಸುಮಾರು 100 ಮಿ.ಲೀ. ನೀರು ಸೇರಿಸಿ ಚನ್ನಾಗಿ ಕದಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕಟ್ಟಬೇಕು.
• ಏಲಕ್ಕಿ ಬಾಳೆಯಲ್ಲಿ ಮೇಲೆ ತಿಳಿಸಿದಂತೆ ಪ್ರತಿ ಗೊನೆಗೆ 2.5 ಗ್ರಾಂ ಯೂರಿಯಾ ಹಾಗೂ 2.5 ಗ್ರಾಂ ಸಲ್ಫೇಟ್ ಆಫ್ ಪೆÇಟ್ಯಾಶ್‍ಗಳನ್ನು ಉಪಯೋಗಿಸಬೇಕು.
• ಗ್ರಾಂಡ್ ನೈನ್ ತಳಿಯ ಬಾಳೆ ಗೊನೆಗೆ ತಲಾ 10 ಗ್ರಾಂ ಯೂರಿಯಾ ಹಾಗೂ 10 ಗ್ರಾಂ ಸಲ್ಫೇಟ್ ಆಫ್ ಪೆÇಟ್ಯಾಶ್‍ಗಳನ್ನು ಉಪಯೋಗಿಸಬೇಕು.

ನಾಟಿಗೆ ಬಳಸುವ ಕಂದುಗಳ ಆಯ್ಕೆ
ಬಾಳೆ ಪ್ರಾರಂಭ ಮಾಡಲು ಸೂಕ್ತವಾದ ಕಂದುಗಳನ್ನು ಅಥವಾ ಅಂಗಾಂಶ ಸಸಿಗಳನ್ನು ಉಪಯೋಗಿಸಬೇಕು. ಕಂದುಗಳನ್ನು ಮೂತಿ ಹುಳದ ಬಾಧೆ, ಕಟ್ಟೆ ರೋಗ ಮತ್ತು ಪನಾಮ ಸೊರಗು ರೋಗ ಬಾಧೆ ರಹಿತ ತೋಟಗಳಿಂದ ಆಯ್ಕೆ ಮಾಡಬೇಕು. ಬಾಳೆ ಕಂದುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದು ಕತ್ತಿ ಕಂದು, ಈ ಕಂದುಗಳಲ್ಲಿ ಎಲೆಗಳು ಕತ್ತಿ ಆಕಾರದಲ್ಲಿ ಉದ್ದಕ್ಕಿರುತ್ತವೆ. ಎರಡನೆಯದು ನೀರು ಕಂದು ಇದರಲ್ಲಿ ಪ್ರಾರಂಭದಲ್ಲೇ ಎಲೆಗಳು ಅಗಲವಾಗಿರುತ್ತವೆ. ಹೊಸದಾಗಿ ಬಾಳೆ ತೋಟ ಪ್ರಾರಂಭ ಮಾಡಲು ಕತ್ತಿ ಕಂದುಗಳನ್ನು ಬಳಸಬೇಕು. ಇವು ಉತ್ತಮ ದರ್ಜೆಯ ಗೊನೆಗಳನ್ನು ಬಿಡುತ್ತವೆ. ನೀರು ಕಂದುಗಳನ್ನು ಬಳಸಿದರೆ ಇವುಗಳಿಂದ ಬೆಳೆ ಸ್ವಲ್ಪ ತಡವಾಗಿ ಬರುವುದಲ್ಲದೆ, ಉತ್ತಮ ದರ್ಜೆಯ ಗೊನೆಗಳು ಬರುವುದಿಲ್ಲ.

ಕಂದುಗಳ ಉಪಚಾರ: ಆಯ್ಕೆಯಾದ ಕಂದುಗಳನ್ನು ಹದವಾಗಿ ಕೆತ್ತಿ, ಹಳೆ ಬೇರುಗಳನ್ನು ತೆಗೆದು, ನಂತರ ಸಗಣಿ ಮತ್ತು ಮಣ್ಣು ಮಿಶ್ರಣದಲ್ಲಿ ಅದ್ದಿ, 40 ಗ್ರಾಂ ಶೇಕಡಾ 3 ರ ಕಾರ್ಬೋಪ್ಯೂರಾನ್ ಹರಳುಗಳನ್ನು ಪ್ರತೀ ಗೆಡ್ಡೆಯ ಮೇಲೆ ಹಾಕಿ ನೆಡಲು ಸಿದ್ಧಗೊಳಿಸಬೇಕು.

ನಾಟಿ ಮಾಡುವುದು
ಬಾಳೆಯನ್ನು ನಾಟಿ ಮಾಡಬೇಕೆಂದಿರುವ ಪ್ರದೇಶವನ್ನು 2 ರಿಂದ 3 ಬಾರಿ ಚೆನ್ನಾಗಿ ಉಳುಮೆ ಮಾಡಿ ಹದಮಾಡಿ ಕೊಳ್ಳಬೇಕು. ನಾಟಿ ಮಾಡ ಬೇಕೆಂದಿರುವ ಪ್ರದೇಶದ ಮಣ್ಣು ಪರೀಕ್ಷೆಯನ್ನು ಮಾಡಿಸಿ, ಪರೀಕ್ಷೆಯ ಆಧಾರದ ಮೇಲೆ ಶಿಫಾರಸ್ಸು ಪ್ರಮಾಣದ ಸುಣ್ಣವನ್ನು ಮಣ್ಣಿಗೆ ಸೇರಿಸಬೇಕು. ನಂತರ ತಳಿಗಳಿಗನುಗುಣವಾಗಿ ಶಿಫಾರಸ್ಸು ಮಾಡಿದ ಅಂತರದಲ್ಲಿ 1.5 ಘಿ 1.5 ಘಿ 1.5 ಅಡಿ ಅಳತೆಯ ಇರುವ ಗುಣಿಗಳನ್ನು ತೆಗೆದು, ಈ ಗುಣಿಗಳಿಗೆ ಸುಮಾರು 20 ಕೆ.ಜಿ.ಯಷ್ಟು ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರವನ್ನು ಮೇಲ್ಮಣ್ಣಿನೊಂದಿಗೆ ಮಿಶ್ರಣಮಾಡಿ ತುಂಬಿಸಬೇಕು. ನಂತರ ಗುಣಿಗಳ ಮಧ್ಯದಲ್ಲಿ ಆಯ್ದ ಕಂದುಗಳನ್ನು ಅರ್ಧ ಅಡಿ ಆಳದಲ್ಲಿ ಮೂತಿ ಕಾಣುವಂತೆ ನೆಡಬೇಕು. ನಾಟಿ ಮಾಡಿದ ಕೊಡಲೇ ನೀರುಣಿಸಬೇಕು.

ನಾಟಿ ನಂತರದ ಬೇಸಾಯ
• ನೀರು ನಿರ್ವಹಣೆ: ಮಣ್ಣಿನ ಗುಣ, ಹವಾಮಾನ ಮತ್ತು ತಳಿಗಳಿಗೆ ಅನುಗುಣವಾಗಿ ಪ್ರತಿ 5-6 ದಿನಗಳಿಗೊಮ್ಮೆ ನೀರನ್ನು ಹಾಯಿಸಬೇಕು. ಹನಿ ನೀರಾವರಿಯಲ್ಲಿ 12 ರಿಂದ 20 ಲೀಟರ್ ನೀರನ್ನು ಪ್ರತೀ ದಿನ ಪ್ರತೀ ಗಿಡಕ್ಕೆ ಕೊಟ್ಟಾಗ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
• ಕಂದುಗಳನ್ನು ಕ್ರಮಪಡಿಸುವುದು: ನಾಟಿ ಮಾಡಿದ 2 ತಿಂಗಳ ನಂತರ ತಾಯಿ ಗಿಡದಿಂದ ಮರಿ ಕಂದುಗಳು ಬರಲು ಪ್ರಾರಂಭಿಸುತ್ತವೆ. ಈ ಮರಿ ಕಂದುಗಳನ್ನು ತಾಯಿ ಗಿಡಕ್ಕೆ ಅಪಾಯವಾಗದಂತೆ ಕತ್ತರಿಸಿ ತೆಗೆಯಬೇಕು. ಬಾಳೆ ಹೂವು ಬಂದ ನಂತರ ಒಂದು ಕತ್ತಿ ಕಂದು ಬೆಳೆಯಲು ಬಿಡಬೇಕು.
• ಆಧಾರ ಕೊಡುವುದು: ಬಿರುಗಾಳಿಯಿಂದ ಹಾನಿ ತಪ್ಪಿಸಲು ಬಾಳೆಗೊನೆಗಳ ಗಾತ್ರ ಮತ್ತು ತೂಕಕ್ಕನುಗುಣವಾಗಿ, ಪ್ರತಿ ಗಿಡಕ್ಕೂ ಕೋಲನ್ನು ಕಟ್ಟಿ ಆಸರೆ ಕೊಡಬೇಕು. ಕೊನೆಯ ಕಾಯಿಗಳು ಕಚ್ಚಿದ ನಂತರ ಗೊನೆಯ ತುದಿಯಲ್ಲಿರುವ ಗಂಡು ಹೂ ಭಾಗವನ್ನು ಕತ್ತರಿಸಿ ಹಾಕಬೇಕು.
• ಅಂತರ ಬೆಳೆ: ಬಾಳೆ ನೆಟ್ಟ ಮೊದಲ 3 ರಿಂದ 4 ತಿಂಗಳೊಳಗೆ ಬರಬಹುದಾದ ಸ್ಥಳೀಯ ಅಲ್ಪಾವಧಿ ಬೆಳೆಗಳಾದ ತರಕಾರಿ ಮತ್ತು ದ್ವಿದಳ ಧಾನ್ಯ ಬೆಳೆಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆಯಬಹುದು.
• ಕಳೆ ನಿಯಂತ್ರಣ: ವರ್ಷದಲ್ಲಿ ಎರಡು ಮೂರು ಸಾರಿ ಅಗೆದು ಕಳೆಗಳನ್ನು ತೆಗೆದು ತೋಟಗಳನ್ನು ಸ್ವಚ್ಛವಾಗಿಡಬೇಕು.

ಪ್ರಮುಖ ಕೀಟಗಳು
1. ಗೆಡ್ಡೆ ಕೊರೆಯುವ ಮೂತಿ ಹುಳು
ಹುಳುಗಳು ಬಾಳೆಯ ಕಾಂಡದ ಬುಡದಲ್ಲಿ ಮತ್ತು ಕೆಳಗಡೆ ಗೆಡ್ಡೆಯ ಭಾಗವನ್ನು ಕೊರೆದು ತಿಂದು ಸುರಂಗಗಳನ್ನು ಮಾಡುತ್ತವೆ. ಇದರಿಂದ ಎಳೆಯ ಗಿಡಗಳಲ್ಲಿ ಬೆಳವಣಿಗೆ ಕುಂಠಿತಗೊಂಡು ಸುಳಿ ಎಲೆಗಳು ಒಣಗುತ್ತವೆ. ಕ್ರಮೇಣ ಇಂತಹ ಗಿಡಗಳು ಸಾಯುತ್ತವೆ. ಕೆಲವೊಮ್ಮೆ ಹೆಚ್ಚು ಗಾಳಿ ಬಂದಾಗ ಬಾಧೆಗೊಂಡ ಕಂದುಗಳು ಉರುಳಿ ಬೀಳುತ್ತವೆ. ಬೆಳೆಯು ಕಾಯಿ ಕಚ್ಚುವ ಹಂತದಲ್ಲ್ಲಿದ್ದರೆ ಕಾಯಿಗಳು ಬಲಿಯುವುದಿಲ್ಲ. ಹಾನಿಗೊಂಡ ಗಿಡಗಳ ಗೆಡ್ಡೆಯನ್ನು ನೋಡಿದರೆ ಸುರಂಗಗಳು, ಹುಳುಗಳ ಹಿಕ್ಕೆ ಮತ್ತು ಕೊಳೆತು ಕಪ್ಪಾದ ಅಂಗಾಂಶ ಕಾಣಿಸುತ್ತದೆ.

ಹತೋಟಿ ಕ್ರಮಗಳು
• ಕೀಟರಹಿತ ಉತ್ತಮ ಗುಣಮಟ್ಟದ ಗೆಡ್ಡೆಗಳನ್ನು ಆಯ್ಕೆಮಾಡಿ ನಾಟಿಗೆ ಬಳಸಬೇಕು.
• ಮುಂಜಾಗರೂಕತೆಯಾಗಿ ನಾಟಿಗೆ ಬಳಸುವ ಕಂದುಗಳ ಮೇಲ್ಭಾಗವನ್ನು ಕೆತ್ತಬೇಕು ನಂತರ ಅವುಗಳನ್ನು ಮಣ್ಣು ಮತ್ತು ಸಗಣಿ ಮಿಶ್ರಣದಲ್ಲಿ ಅದ್ದಿ, ಪ್ರತೀ ಗೆಡ್ಡೆಗಳ ಮೇಲ್ಭಾಗದಲ್ಲಿ 40 ಗ್ರಾಂ ಶೇ. 3ರ ಕಾರ್ಬೋಫ್ಯುರಾನ್ ಹರಳುಗಳನ್ನು ಉದುರಿಸಬೇಕು. ಆಮೇಲೆ ಗೆಡ್ಡೆಗಳನ್ನು ನೆರಳಿನಲ್ಲಿ ಒಣಗಿಸಿ ನಾಟಿ ಮಾಡಬೇಕು.
• ಒಂದು ವೇಳೆ ನಾಟಿ ಮಾಡಿದ ನಂತರ ಬೆಳೆಯು ಹುಳುವಿನ ಬಾಧೆಗೊಳಗಾದರೆ ಗಿಡಗಳನ್ನು ಗೆಡ್ಡೆ ಸಮೇತ ಕಿತ್ತು ನಾಶಪಡಿಸಬೇಕು.
• ಗೆಡ್ಡೆ ನಾಟಿ ಮಾಡಿದ 6 ಅಥವಾ 7ನೇ ತಿಂಗಳುಗಳಲ್ಲಿ 3.0 ಮಿ.ಲೀ. ಕ್ಲೋರೋಫೈರಿಫಾಸ್ ಅಥವಾ ಮೊನೋಕ್ರೋಟೊಫಾಸ್ 3.0 ಮಿ./ಲೀ ಎಂಬ ಕೀಟನಾಶಕವನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಕಾಂಡಕ್ಕೆ ಭೂಮಿಯಿಂದ ಒಂದು ಅಡಿ ಎತ್ತರದಲ್ಲಿ ಚುಚ್ಚುಮದ್ದಿನ ಮೂಲಕ ಕೊಡಬೇಕು.

1. ಸಸ್ಯ ತಂತು ಹುಳು
ತಂತುಹುಳುಗಳು ಬಾಳೆ ಗಿಡದ ಬೇರಿನ ಒಳಹೊಕ್ಕು ಸುರಂಗ ಮಾಡುತ್ತವೆ, ಇದರಿಂದ ಆ ಭಾಗದಲ್ಲಿ ಸೀಳಿದಂತೆ ಮಚ್ಚೆಗಳು ಕಂಡು ಬರುತ್ತವೆ. ಬಾಧೆ ತಗುಲಿದ ದೊಡ್ಡ ಬೇರುಗಳಲ್ಲಿ ಬೊಕ್ಕೆ ಅಥವಾ ಗಂಟುಗಳಾಗಿರುತ್ತವೆ. ಈ ತಂತು ಹುಳುಗಳು ಬೇರಿನ ಕೋಶಗಳಲ್ಲಿ ರಸವನ್ನು ಹೀರುವುದರಿಂದ ಕೋಶಗಳು ಸಾಯುತ್ತವೆ. ಗೊನೆ ಬಿಡುವ ಸಮಯದಲ್ಲಿ ಹಾನಿ ಅಧಿಕಗೊಂಡರೆ, ಗಿಡವು ಬುಡ ಸಮೇತ ಉರುಳಿ ಉತ್ಪಾದನೆಯಲ್ಲಿ ತುಂಬಾ ನಷ್ಟ ಉಂಟಾಗುತ್ತದೆ. ತಂತು ಹುಳುಗಳ ಸಂಖ್ಯೆ ಮತ್ತು ಬಾಧೆ ಕೂಳೆ ಬೆಳೆಗಳಲ್ಲಿ ಹೆಚ್ಚಾಗಿರುತ್ತದೆ. ಇವುಗಳು ಬಾಳೆಯ ಕಂದು, ಬೇರು ಮತ್ತು ಮಣ್ಣಿನ ಮೂಲಕ ಹರಡುತ್ತವೆ ಅಲ್ಲದೆ, ಬಾಳೆಯಲ್ಲಿ ಬರುವ ಸೊರುಗು ರೋಗವನ್ನು ಹರಡಲು ಸಹಾಯ ಮಾಡುತ್ತವೆ.

ಹತೋಟಿ ಕ್ರಮಗಳು
• ಮುಂಜಾಗ್ರತಾ ಕ್ರಮವಾಗಿ ತಂತು ಹುಳುರಹಿತ ಕಂದುಗಳನ್ನು ನಾಟಿಗೆ ಉಪಯೋಗಿಸಬೇಕು.
• ನಾಟಿ ಮಾಡುವ ಮೊದಲು ಬಾಧೆಗೊಂಡ ಬೇರುಗಳನ್ನು ಕೆತ್ತಿ ಸ್ವಚ್ಛಗೊಳಿಸಿ ನಂತರ ಗೆಡ್ಡೆಗಳನ್ನು ಮಣ್ಣು ಮತ್ತು ಸಗಣಿ ಮಿಶ್ರಣದಲ್ಲಿ ಅದ್ದಿ, ಪ್ರತೀ ಗೆಡ್ಡೆಯ ಮೇಲೆ 40 ಗ್ರಾಂ. ಕಾರ್ಬೊಫ್ಯುರಾನ್ 3 ಜಿ. ಹರಳುಗಳನ್ನು ಉದುರಿಸಿ ನಂತರ ನೆರಳಿನಲ್ಲಿ ಒಣಗಿಸಿ ನಾಟಿ ಮಾಡಬೇಕು.
• ಬೆಳೆಯು ಬೆಳವಣಿಗೆಯ ಹಂತದಲ್ಲಿ ಜಂತುಹುಳುವಿನ ಬಾಧೆಗೊಳಪಟ್ಟರೆ, ಪ್ರತೀ ಗಿಡಕ್ಕೆ 10 ಗ್ರಾಂ. ಶೇಕಡಾ 3ರ ಕಾರ್ಬೊಫ್ಯುರಾನ್ ಹರಳುಗಳನ್ನು ಗಿಡದ ಸುತ್ತಲೂ ಹಾಕಿ ಮಣ್ಣಿನಿಂದ ಮಚ್ಚಬೇಕು.

ಪ್ರಮುಖ ರೋಗಗಳು
1. ಪನಾಮ ಸೊರಗು ರೋಗ
ಈ ಶಿಲೀಂಧ್ರ ರೋಗವು ಮಣ್ಣುಜನ್ಯವಾಗಿದ್ದು ಬಾಳೆ ಬೆಳೆಗೆ ಬರುವ ಅಪಾಯಕಾರಿ ರೋಗವಾಗಿದೆ. ಶಿಲೀಂಧ್ರವು ಬೇರುಗಳ ಮುಖಾಂತರ ಒಳಕ್ಕೆ ಹೋಗಿ ಗೆಡ್ಡೆಯ ಕಾಂಡದೊಳಗೆ ವೃದ್ಧಿಗೊಂಡು ಆಹಾರ, ನೀರು ಸರಬರಾಜಿನಲ್ಲಿ ಅಡಚಣೆ ಉಂಟುಮಾಡುವುದರಿಂದ ಗಿಡ ಸೊರಗಿ ಸಾಯುತ್ತದೆ.
ಆರಂಭದಲ್ಲಿ ಕೆಳಭಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕ್ರಮೇಣ ಎಲೆ, ಎಲೆತೊಟ್ಟು ಬಾಡಿ ಗಿಡ ಸೊರಗುತ್ತದೆ. ನಂತರ ಎಲ್ಲಾ ಎಲೆಗಳು ಹಳದಿಯಾಗುತ್ತಾ ಕಾಂಡದ ಸುತ್ತಲೂ ಬಾಗಿ ಜೋತು ಬೀಳುತ್ತವೆ. ಇಂತಹ ಗಿಡಗಳಲ್ಲಿ ರೋಗ ತೀವ್ರ ಹಂತ ತಲುಪಿದಾಗ ಬುಡ ಸೀಳಿ ಉದ್ದನೆಯ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ, ರೋಗದಿಂದ ನರಳುತ್ತಿರುವ ಗಿಡಗಳ ದಿಂಡು ಮತ್ತು ಗೆಡ್ಡೆಗಳನ್ನು ಅಡ್ಡವಾಗಿ ಕತ್ತರಿಸಿದಾಗ ಕಂದು ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗಿದ ಒಳಗಿನ ಅಂಗಾಂಶಗಳು ಕಂಡುಬಂದು ಸತ್ತು ಹೋದಂತಿರುತ್ತದೆ.

ಹತೋಟಿ ಕ್ರಮಗಳು
• ನೀರು ನಿಲ್ಲದ ಹಾಗೆ ಬಸಿಕಾಲುವೆಗಳನ್ನು ನಿರ್ಮಿಸಬೇಕು.
• ರೋಗ ರಹಿತ ಕಂದುಗಳನ್ನು ಆರಿಸಿ ತಂದು ನಾಟಿ ಮಾಡಬೇಕು.
• ನಾಟಿಗೆ ಮುಂಚೆ ಕಂದುಗಳನ್ನು 10 ಗ್ರಾಂ. ಕಾರ್ಬೆಂಡೆಜಿಮನ್ನು 10 ಲೀ. ನೀರಿನಲ್ಲಿ ಕರಗಿಸಿದ ದ್ರಾವಣದಲ್ಲಿ ಅರ್ಧ ಗಂಟೆಗಳ ಕಾಲ ಅದ್ದಿ ನಂತರ ನಾಟಿ ಮಾಡಬೇಕು.
• ರೋಗವನ್ನು ಹತೋಟಿ ಮಾಡಲು 1 ಗ್ರಾಂ ಕಾರ್ಬೆಂಡೆಜಿಮ್‍ನ್ನು ಪ್ರತೀ ಲೀಟರ್ ನೀರಿನಲ್ಲಿ ಕರಗಿಸಿ ಗಿಡದ ಬುಡಕ್ಕೆ 5, 7 ಮತ್ತು 9 ನೇ ತಿಂಗಳಿನಲ್ಲಿ ಪ್ರತೀ ಗಿಡಕ್ಕೆ 2 ರಿಂದ 3 ಲೀಟರ್‍ನಷ್ಟು ಕೊಟ್ಟು ನೆನಸಬೇಕು ಅಥವಾ 30 ಗ್ರಾಂ ಕಾರ್ಬೆಂಡೆಜಿಮ್‍ನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಇದರಿಂದ 10 ಮಿ.ಲೀ. ಔಷಧಿಯನ್ನು ಕಾಂಡ ಮತ್ತು ಗೆಡ್ಡೆ ಸೇರುವ ಭಾಗದಲ್ಲಿ 2 ಅಂಗುಲ ಉದ್ದದ ರಂಧ್ರ ಮಾಡಿ ಪಿಚಕಾರಿಯಿಂದ ಔಷಧಿಯನ್ನು ಸುರಿಯುವುದು.

2. ಸಿಗಟೋಕ ಎಲೆಚುಕ್ಕೆ ರೋಗ
ಈ ರೋಗವು ಹೆಚ್ಚಾಗಿ ಮಳೆಗಾಲದಲ್ಲಿ ಹಾಗೂ ಭೂಮಿಯಲ್ಲಿ ನೀರು ಸಮರ್ಪಕವಾಗಿ ಇಂಗದೆ ಇರುವ ಪ್ರದೇಶಗಳಲ್ಲಿ ಕಂಡುಬರುತ್ತದೆ.
ಪ್ರಾರಂಭದಲ್ಲಿ ಎಲೆಗಳ ಮೇಲೆ ಕಂದು ಚುಕ್ಕೆಗಳು ಕಾಣಬರುತ್ತದೆ. ನಂತರ ಈ ಚುಕ್ಕೆಗಳು ಕಣ್ಣು ಗುಡ್ಡೆ ಆಕಾರದಲ್ಲಿ ಅಧಿಕ ಸಂಖ್ಯೆಯಲ್ಲಿ ಇಡೀ ಎಲೆಯನ್ನು ಆವರಿಸಿಕೊಳ್ಳುತ್ತವೆ. ಚುಕ್ಕಿಗಳ ಅಂಚಿನಿಂದ ಹೊರಟ ತೆಳು ಹಳದಿ ಗೆರೆಗಳು ಎಲೆಗಳ ಎರಡೂ ಕಡೆಗಳಲ್ಲಿ ಕಾಣಬರುತ್ತವೆ. ಇದರಿಂದ ಎಲೆಗಳು ಬಾಡಿ ಒಣಗುತ್ತವೆ. ರೋಗ ತೀವ್ರವಾದಾಗ ತೊಟ್ಟು ಒಣಗಿ ಬಾಡುತ್ತದೆ. ಇದರಿಂದ ಬೆಳವಣಿಗೆ ಕುಂಠಿತಗೊಂಡು ಗೊನೆಯ ತೂಕವು ಗಣನೀಯವಾಗಿ ಕಡಿಮೆಯಾಗುತ್ತವೆ.

ಹತೋಟಿ ಕ್ರಮಗಳು
• ರೋಗ ಪೀಡಿತ ಎಲೆಗಳನ್ನು ನಾಶಪಡಿಸಬೇಕು.
• ರೋಗಬಾಧೆ ಕಂಡು ಬಂದಲ್ಲಿ ಟ್ರೈಡೆಮಾ¥sóರ್ï 3.0 ಮಿ.ಲೀ ಅಥವಾ ಪೆÇ್ರಪಿಕೊನೋಜೊಲ್ 1.0 ಮಿ.ಲೀ ಎಂಬ ಶಿಲೀಂದ್ರನಾಶPವನ್ನು ಪ್ರತಿ ಲೀ. ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.

3. ಎಲೆಗುಚ್ಚ ನಂಜು ರೋಗ (ಬಂಚಿಟಾಪ್)
ಇದು ಬಾಳೆ ಬೆಳೆಯನ್ನು ಬಾಧಿಸುವ ಅಪಾಯಕಾರಿ ನಂಜುರೋಗ. ಈ ರೋಗವು ರೋಗ ಪೀಡಿತ ಪ್ರದೇಶದಿಂದ ಕಂದುಗಳನ್ನು ತಂದು ನಾಟಿ ಮಾಡುವುದರಿಂದ ಹೆಚ್ಚಾಗುತ್ತದೆ. ರೋಗಕ್ಕೆ ಕಾರಣವಾದ ನಂಜಾಣು ಸಸ್ಯಹೇನುಗಳ ಮುಖಾಂತರ ಹರಡುತ್ತದೆ.
ಈ ರೋಗದ ಲಕ್ಷಣಗಳೆಂದರೆ ರೋಗ ಪೀಡಿತ ಬಾಳೆಗಿಡ ಕುಬ್ಜವಾಗಿರುತ್ತದೆ. ಎಲೆಗಳ ಮಧ್ಯಭಾಗದ ನರಗಳಲ್ಲಿ ಅಚ್ಚ ಹಸಿರಿನ ಗೆರೆಗಳು ಕಾಣಿಸಿಕೊಳ್ಳೂತ್ತವೆ. ಕೆಲವೊಮ್ಮೆ ಸುಳಿ ಎಲೆ ಬಿಚ್ಚಿಕೊಳ್ಳದೆ ಸುರುಳಿಯಂತೆ ಸುತ್ತಿಕೊಂಡಿರುತ್ತದೆ. ಈ ರೋಗ ತೀವ್ರವಾದಾಗ ಗಿಡ ಸಾಯದೆ, ಫಲ ಬಿಡದೆ ಹಾಗೆ ಉಳಿದುಕೊಳ್ಳುತ್ತದೆ.

ಹತೋಟಿ ಕ್ರಮಗಳು
• ರೋಗ ಮುಕ್ತ ತೋಟಗಳಿಂದ ಕಂದುಗಳನ್ನು ಆಯ್ಕೆ ಮಾಡಿ ನಾಟಿಗೆ ಬಳಸಬೇಕು.
• ರೋಗದ ಲಕ್ಷಣಗಳು ಕಂಡ ಕೂಡಲೆ ಅಂತಹ ಕಂದುಗಳನ್ನು ಬುಡ ಸಮೇತ ಕಿತ್ತು ನಾಶಪಡಿಸಬೇಕು.
• ರೋಗವನ್ನು ಹರಡುವ ಸಸ್ಯ ಹೇನುಗಳು ಹರಡದಂತೆ ಮುಂಜಾಗ್ರತೆ ಕ್ರಮವಾಗಿ 2 ಮಿ.ಲೀ. ಡೈಮೀಥೋಯೇಟ್ ಅಥವಾ 1.5 ಗ್ರಾಂ. ಅಸಿಫೇಟನ್ನು ಪ್ರತಿ ಲೀ. ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ
ಬಾಳೆ ಗೊನೆಗಳು ನಾಟಿ ಮಾಡಿದ 12 ರಿಂದ 14 ತಿಂಗಳುಗಳಲ್ಲಿ ಕೊಯ್ಲಿಗೆ ಬರುತ್ತವೆ. ಕೊಯ್ಲು ಮಾಡುವ ಒಂದು ವಾರದ ಮುಂಚಿತವಾಗಿಯೇ ನೀರು ಕೊಡುವುದು ನಿಲ್ಲಿಸಬೇಕು. ಗೊನೆ ಹೊರಬಂದ 90 ರಿಂದ 120 ದಿವಸಗಳಲ್ಲಿ ಬಾಳೆ ಗೊನೆಗಳು ಕೊಯ್ಲಿಗೆ ಸಿದ್ಧವಾಗುತ್ತವೆ.
ಇಳುವರಿಯು ಬೆಳೆಯುವ ತಳಿ ಮತ್ತು ನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಪ್ರತಿ ಎಕರೆಗೆ ರೋಬಸ್ಟಾ 15 ರಿಂದ 16 ಟನ್ ಹಾಗೂ ಇತರೆ ತಳಿಗಳಿಂದ 8 ರಿಂದ 12 ಟನ್ ಇಳುವರಿಯನ್ನು ನಿರೀಕ್ಷಿಸಬಹುದು.

ಕೊಯ್ಲಿನ ನಂತರ ತಾಯಿ ಗಿಡಗಳನ್ನು ಕತ್ತರಿಸುವುದು
ಮಾಗಿದ ಗೊನೆ ಕಟಾವು ಮಾಡಿದ ನಂತರ ಒಂದು ಮರಿ ಕಂದುನ್ನು ಬೆಳೆಯಲು ಬಿಡಬೇಕು. ಹಣ್ಣಿನ ಗೊನೆಯನ್ನು ಕಟಾವು ಮಾಡಿದ ನಂತರ ತಾಯಿ ಗಿಡವನ್ನು ಒಂದೇ ಬಾರಿ ಕತ್ತರಿಸಿ ಹಾಕದೆ ಹಂತ ಹಂತವಾಗಿ 15 ರಿಂದ 20 ದಿನಗಳ ಅಂತರದಲ್ಲಿ ಕತ್ತರಿಸಿ ಹಾಕಬೇಕು. ಇದರಿಂದ ಪೆÇೀಷಕಾಂಶಗಳು ಬೆಳೆಯುತ್ತಿರುವ ಮರಿ ಗಿಡಗಳಿಗೆ ಲಭ್ಯವಾಗುತ್ತವೆ.

ಬಾಳೆಯಲ್ಲಿ ಕೂಳೆ ಬೆಳೆ ನಿರ್ವಹಣೆ
ಮಣ್ಣು, ಹವಾಗುಣ, ತಳಿ ಮತ್ತು ಅಂತರಗಳಿಗನುಸಾರವಾಗಿ ಬಾಳೆಯಲ್ಲಿ 2 ರಿಂದ 3 ಕೂಳೆ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಬಹುದಾಗಿದೆ. ಮುಖ್ಯ ಬಾಳೆ ಗಿಡವು ಹೂ ಗೊನೆ ಬಿಡುವವರೆಗೆ ಅಕ್ಕ ಪಕ್ಕದಲ್ಲಿ ಬೆಳೆದಿರುವ ಮರಿಕಂದುಗಳನ್ನು ತೆಗೆದು ಹಾಕಬೇಕು. ಮುಖ್ಯ ಬೆಳೆಯು ಹೊಂಬಾಳೆ ಹೊರಸೂಸಿದ ನಂತರ ತಾಯಿಗಿಡದ ಪಕ್ಕದಲ್ಲಿ ಕತ್ತಿಯಾಕಾರದ ಎರಡು ಕಂದುಗಳನ್ನು ವಿರುದ್ದ ದಿಕ್ಕಿನಲ್ಲಿ ಉಳಿಸಿಕೊಳ್ಳಬೇಕು. ಉಳಿದ ಕಂದುಗಳನ್ನು ಆಗಾಗ್ಗೆ ಕತ್ತರಿಸಿ ತೆಗೆಯಬೇಕು.
ಕೂಳೆ ಬೆಳೆಗೆ, 100 ಗ್ರಾಂ. ಸಾರಜನಕ, 108 ಗ್ರಾಂ. ರಂಜಕ ಮತ್ತು 200 ಗ್ರಾಂ. ಪೆÇಟ್ಯಾಷನ್ನು ಪ್ರತಿ ಗಿಡಕ್ಕೆ ಪ್ರತಿ ಬೆಳೆಗೆ ಮೂರು ಕಂತುಗಳಲ್ಲಿ ಅಂದರೆ 30, 75 ಮತ್ತು 120 ದಿನಗಳಲ್ಲಿ ಮುಖ್ಯ ಬೆಳೆ ಕಟಾವಿನ ನಂತರ ಕೊಡಬೇಕು.

 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
1 Comment
Oldest
Newest Most Voted
Inline Feedbacks
View all comments
Mahadevaswamy M
Mahadevaswamy M
9 months ago

..hai