ಭತ್ತ Paddy

ಭತ್ತ

ಭತ್ತವು ಕೊಡಗು ಜಿಲ್ಲೆಯ ಮುಖ್ಯ ಆಹಾರ ಬೆಳೆಯಾಗಿದ್ದು,ಒಟ್ಟು ಮೂರು ತಾಲ್ಲೂಕುಗಳಾದ ಮಡಿಕೇರಿ, ವಿರಾಜಪೇಟೆ ಮತ್ತು
ಸೋಮವಾರಪೇಟೆಗಳಲ್ಲಿ ಸುಮಾರು 36,000 ಹೆಕ್ಟೇರು ಪ್ರದೇಶದಲ್ಲಿ ಮುಂಗಾರಿನಲ್ಲಿ ಬೀಳುವ ಮಳೆಯಾಶ್ರಯದಲ್ಲಿ ಬೆಳೆಯನ್ನು ತಗ್ಗು (ಬಯಲು)
ಮಧ್ಯಮ (ಮಜಲು ಪ್ರದೇಶ) ಹಾಗೂ ಆಳವಾದ ಕಣಿವೆ ಪ್ರದೇಶದ ಗದ್ದೆಗಳಲ್ಲಿ ಬೆಳೆಂiÀiಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ
ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಭತ್ತದ ಪ್ರದೇಶವು ಕಡಿಮೆಯಾಗುತ್ತಿದ್ದು, ಭತ್ತದ ಇಳುವರಿಯಲ್ಲಿ ಕೂಡ ಇಳಿಮುಖವಾಗಿರುವುದು
ಕಂಡು ಬಂದಿದೆ. ಆದ್ದರಿಂದ ಭತ್ತವನ್ನು ಸಮಗ್ರ ಬೇಸಾಯ ಪದ್ಧತಿಯಡಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದರೊಂದಿಗೆ ವೈಜ್ಞಾನಿಕ ಕ್ರಮಗಳನ್ನು
ಅನುಸರಿಸಿದರೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಭತ್ತದ ತಳಿಗಳ ಗುಣಲಕ್ಷಣಗಳು
· ತುಂಗಾ (ಐಇಟಿ- 13901) : ಇದು ಮುಂಗಾರಿನಲ್ಲಿ ಮಧ್ಯಮ (ಮಜಲು) ಪ್ರದೇಶಗಳಿಗೆ ನಾಟಿ ಮಾಡಲು ಸೂಕ್ತವಾದ ತಳಿಯಾಗಿರುತ್ತದೆ.
ಇದು 155 ರಿಂದ 160 ದಿವಸಗಳಲ್ಲಿ ಕಟಾವಿಗೆ ಬರುವ ತಳಿಯಾಗಿದ್ದು, ಸುಮಾರು 3 ರಿಂದ 3.25 ಅಡಿಯಷ್ಟು ಎತ್ತರವಾಗಿ ಬೆಳೆಯುತ್ತದೆ. ಬೆಂಕಿ
ರೋಗಕ್ಕೆ ಸಹಿಷ್ಣುತೆ ಹೊಂದಿರುವ ಈ ತಳಿಯು ಉದ್ದ ಹಾಗೂ ಸಣ್ಣಗಾತ್ರದ ಬಿಳಿ ಅಕ್ಕಿಯನ್ನು ಹೊಂದಿರುತ್ತದೆ. ಈ ತಳಿಯಿಂದ ಪ್ರತಿ ಎಕರೆಗೆ
ಸುಮಾರು 20 ರಿಂದ 25 ಕ್ವಿಂಟಾಲ್ ಇಳುವರಿಯನ್ನು ಪಡೆಯಬಹುದಾಗಿದೆ.
· ಶರಾವತಿ : ಈ ತಳಿಯು ತಗ್ಗು ಪ್ರದೇಶಗಳಿಗೆ ನಾಟಿ ಮಾಡಲು ಸೂಕ್ತವಾದ ತಳಿಯಾಗಿದ್ದು ಬೆಂಕಿ ರೋಗಕ್ಕೆ ನಿರೋಧಕತೆಯನ್ನು
ಹೊಂದಿರುತ್ತದೆ. ಇದು 170 ರಿಂದ 175 ದಿವಸಗಳಲ್ಲಿ ಕಟಾವಿಗೆ ಬರುವ ತಳಿಯಾಗಿದ್ದು, ಸುಮಾರು 4 ರಿಂದ 4.5 ಅಡಿಯಷ್ಟು ಎತ್ತರವಾಗಿ
ಬೆಳೆಯುತ್ತದೆ.ಭತ್ತವು ದಪ್ಪವಾಗಿದ್ದು ಕೆಂಪು ಬಣ್ಣದ ಅಕ್ಕಿಯನ್ನು ಹೊಂದಿರುವ ಈ ತಳಿಯಿಂದ ಎಕರೆಗೆ 20 ರಿಂದ 22 ಕ್ವಿಂಟಾಲ್ ಇಳುವರಿಯನ್ನು
ಪಡೆಯಬಹುದಾಗಿದೆ.
· ಇಂಟಾನ್: ಇದು ಮುಂಗಾರಿನಲ್ಲಿ ತಗ್ಗು ಪ್ರದೇಶಗಳಿಗೆ ನಾಟಿ ಮಾಡಲು ಸೂಕ್ತವಾದ ತಳಿ. ಇದು 160 ರಿಂದ 165 ದಿವಸಗಳಲ್ಲಿ ಕಟಾವಿಗೆ
ಬರುವ ತಳಿಯಾಗಿದ್ದು, ಸುಮಾರು 3 ರಿಂದ 3.25 ಅಡಿಯಷ್ಟು ಎತ್ತರವಾಗಿ ಬೆಳೆಯುತ್ತದೆ. ಅಕ್ಕಿಯು ಮಧ್ಯಮ ಸಣ್ಣ, ಬಿಳಿಬಣ್ಣದಿಂದ
ಕೂಡಿರುತ್ತದೆ. ಬೆಂಕಿ ರೋಗಕ್ಕೆ ತುತ್ತಾಗುವ ಈ ತಳಿಯಿಂದ ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿಯನ್ನು ಪಡೆಯಬಹುದಾಗಿದೆ.
· ಹೇಮಾವತಿ : ಈ ತಳಿಯು ಹೆಚ್ಚಾಗಿ ನೀರು ನಿಲ್ಲುವ ಪ್ರದೇಶಗಳಿಗೆ ನಾಟಿ ಮಾಡಲು ಸೂಕ್ತವಾದ ತಳಿಯಾಗಿದ್ದು ಬೆಂಕಿ ರೋಗಕ್ಕೆ
ಸಹಿಷ್ಣುತೆಯನ್ನು ಹೊಂದಿರುತ್ತದೆ. ಇದು 160 ರಿಂದ 170 ದಿವಸಗಳಲ್ಲಿ ಕಟಾವಿಗೆ ಬರುವ ತಳಿಯಾಗಿದ್ದು, ಸುಮಾರು 3.5 ರಿಂದ 4 ಅಡಿಯಷ್ಟು
ಎತ್ತರವಾಗಿ ಬೆಳೆಯುತ್ತದೆ. ಬಿಳಿ ಬಣ್ಣದ ಅಕ್ಕಿಯನ್ನು ಹೊಂದಿರುವ ಈ ತಳಿಯು ತಾತ್ಕಾಲಿಕ ಮುಳುಗಡೆಯನ್ನು ತಡೆಯುತ್ತದೆ. ಈ ತಳಿಯಿಂದ
ಎಕರೆಗೆ 20 ರಿಂದ 22 ಕ್ವಿಂಟಾಲ್ ಇಳುವರಿಯನ್ನು ಪಡೆಯಬಹುದು. ತೆನೆಯ ಬುಡದಲ್ಲಿ ಮೂರು ನಾಲ್ಕು ಹಸಿರು ಕಾಳುಗಳಿರುವಾಗಲೇ
ಕೊಯ್ಲು ಮಾಡುವುದು ಸೂಕ್ತ. ಇಲ್ಲವಾದರೆ ಕಾಳುಗಳು ಉದುರುತ್ತವೆ.
· ಸಿ.ಟಿ.ಹೆಚ್.1- (ಕೆಂಪು ಮುಕ್ತಿ ): ಈ ತಳಿಯನ್ನು ತಡವಾದ ಮುಂಗಾರಿನಲ್ಲಿ ಮಕ್ಕಿ, ಮಜಲು ಹಾಗೂ ಬಯಲು ಪ್ರದೇಶಕ್ಕೆ ಶಿಫಾರಸ್ಸು
ಮಾಡಲಾಗಿದೆ. ಈ ತಳಿಯು ಬೆಂಕಿರೋಗವನ್ನು ಸ್ವಲ್ಪ ಮಟ್ಟಿಗೆ ತಡೆದುಕೊಂಡು ಬೆಳೆಯುವ ಶಕ್ತಿಯನ್ನು ಹೊಂದಿರುತ್ತದೆ. ಈ ತಳಿಯು
ನೀರಾವರಿ ಪ್ರದೇಶದಲ್ಲಿ ಬೇಸಿಗೆಯಲ್ಲೂ ಯಶಸ್ವಿಯಾಗಿ ಬೆಳೆಯಬಹುದಾಗಿದೆ. ದಪ್ಪ ಹಾಗೂ ಕೆಂಪು ಅಕ್ಕಿಯನ್ನು ಹೊಂದಿದ್ದು 120 ರಿಂದ 135
ದಿನಗಳಲ್ಲಿ ಕಟಾವಿಗೆ ಬರಲಿದ್ದು,ಎಕರೆಗೆ 12 ರಿಂದ 14 ಕ್ವಿಂಟಾಲ್ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ.
· ಸಿ.ಟಿ.ಹೆಚ್.3- (ಬಿಳಿಮುಕ್ತಿ ): ಈ ತಳಿಯನ್ನು ತಡವಾದ ಮುಂಗಾರಿನಲ್ಲಿ ಮಕ್ಕಿ, ಮಜಲು ಹಾಗೂ ಬಯಲು ಪ್ರದೇಶಕ್ಕೆ ಶಿಫಾರಸ್ಸು
ಮಾಡಲಾಗಿದೆ. ಈ ತಳಿಯು ಬೆಂಕಿ ರೋಗವನ್ನು ಸ್ವಲ್ಪ ಮಟ್ಟಿಗೆ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ. ಈ ತಳಿಯನ್ನು ನೀರಾವರಿ
ಪ್ರದೇಶದಲ್ಲಿ ಬೇಸಿಗೆಯಲ್ಲೂ ಯಶಸ್ವಿಯಾಗಿ ಬೆಳೆಯಬಹುದಾಗಿದೆ. ದಪ್ಪ ಹಾಗೂ ಬಿಳಿ ಅಕ್ಕಿಯನ್ನು ಹೊಂದಿದ್ದು 120 ರಿಂದ 135 ದಿನಗಳಲ್ಲಿ
ಕಟಾವಿಗೆ ಬರಲಿದ್ದು,ಎಕರೆಗೆ 12 ರಿಂದ 14 ಕ್ವಿಂಟಾಲ್ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ.
ಬೇಸಾಯ ಸಾಮಗ್ರಿಗಳು (ಪ್ರತೀ ಎಕರೆಗೆ)
ಬೇಸಾಯ ಸಾಮಾಗ್ರಿಗಳು ನಾಟಿ ಬೆಳೆಗೆ
ಬಿತ್ತನೆ ಬೀಜ 25 ರಿಂದ 30 ಕಿ.ಗ್ರಾಂ
ಕಾಂಪೆÇೀಸ್ಟ್ ಅಥವಾ ಹಸಿರೆಲೆ ಗೊಬ್ಬರ 6 ಟನ್
ಸಾರಜನಕ 30 ಕಿ.ಗ್ರಾಂ
ರಂಜಕ 30 ಕಿ. ಗ್ರಾಂ
ಪೆÇಟ್ಯಾμï 36 ಕಿ. ಗ್ರಾಂ
ಸತುವಿನ ಸಲ್ಫೇಟ್ 8 ಕಿ. ಗ್ರಾಂ
ಬೀಜದ ಆಯ್ಕೆ ಮತ್ತು ಬೀಜೋಪಚಾರ ಮಾಡುವ ವಿಧಾನ
· ಪ್ರತಿ ಎಕರೆಗೆ ಶಿ¥sóÁರಸ್ಸು ಮಾಡಿದ 25 ರಿಂದ 30 ಕಿ.ಗ್ರಾಂ ಭತ್ತದ ಬೀಜವನ್ನು ತೆಗೆದುಕೂಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4
ಲೀ. ನೀರಿಗೆ 1 ಕಿ.ಗ್ರಾಂ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು.
· ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2 ರಿಂದ 3 ಬಾರಿ ತಣ್ಣೀರಿನಲ್ಲಿ ತೊಳೆದು ಸುಮಾರು 8 ರಿಂದ 24 ಗಂಟೆಗಳ ಕಾಲ ಬಿತ್ತನೆ
ಬೀಜವನ್ನು ನೀರಿನಲ್ಲಿ ನೆನಸಬೇಕು.
· ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25 ರಿಂದ 30 ಕಿ.ಗ್ರಾಂ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ
ಕಾರ್ಬೆಂಡೆಜಿಮ್ (ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 4 ಗ್ರಾಂ) ಎಂಬ ಶಿಲೀಂದ್ರನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ
ಒಣಗಿಸಬೇಕು.
· ಈ ರೀತಿ ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಒಂದು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮೊಳಕೆಯೊಡೆಯಲು ಇಟ್ಟು ನಂತರ
ಸಸಿಮಡಿಗೆ ಉಪಯೋಗಿಸಬೇಕು.
ಸಸಿಮಡಿ ತಯಾರಿಕೆ
ಕೆಸರು ಮಡಿ
· ಸಸಿ ಮಡಿ ಪ್ರದೇಶವನ್ನು ಚೆನ್ನಾಗಿ ಕೆಸರು ಮಾಡಿ ನಂತರ ಸಮಮಾಡಿಕೊಳ್ಳಬೇಕು.
· ನೀರು ಹಾಯಿಸಲು ಏರ್ಪಾಡು ಮಾಡಿ ಹಾಗೂ ಹೆಚ್ಚಾದ ನೀರನ್ನು ಹೊರ ತೆಗೆಯಲು ಕಾಲುವೆ ಮಾಡಿ.
· ಪ್ರತಿ 100 ಚದರ ಮೀಟರ್ ಪ್ರದೇಶಕ್ಕೆ 1 ಕಿ.ಗ್ರಾಂ ಸಾರಜನಕ, 0.4 ಕಿ.ಗ್ರಾಂ ರಂಜಕ ಮತ್ತು 0.5 ಕಿ.ಗ್ರಾಂ ಪೆÇಟ್ಯಾμï ಒದಗಿಸುವ
ರಾಸಾಯನಿಕ ಗೊಬ್ಬರಗಳನ್ನು 250 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದೊಡನೆ ಕೊಟ್ಟು ಮಣ್ಣಿನಲ್ಲಿ ಬೆರೆಸಿ ಮಿಶ್ರಣ ಮಾಡಬೇಕು. ಜೊತೆಯಲ್ಲಿ
ಪ್ರತೀ 100 ಚ.ಮೀ. ಪ್ರದೇಶಕ್ಕೆ 300 ಗ್ರಾಂ ಸತುವಿನ ಸಲ್ಫೇಟ್‍ನ್ನು ಕೂಡ ಮಿಶ್ರಣ ಮಾಡಬೇಕು.
· ಮೊಳಕೆಯೊಡೆದ ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಪ್ರತೀ ಚದರ ಮೀಟರ್‍ಗೆ 50 ರಿಂದ 70 ಗ್ರಾಂ ನಂತೆ ಬೀಜಗಳನ್ನು
ಬಿತ್ತಬೇಕು. ಇದಕ್ಕಿಂತ ಹೆಚ್ಚಾಗಿ ಬಿತ್ತನೆ ಮಾಡಿದರೆ, ಸಸಿಗಳು ತುಂಬಾ ದುರ್ಬಲವಾಗುತ್ತವೆ.
· ಸಸಿ ಮಡಿಯನ್ನು ಮೊದಲ ಕೆಲವು ದಿನಗಳವರೆಗೆ ಒಣಗದಂತೆ ಎಚ್ಚರವಹಿಸಿ. ಈ ಸಮಯದಲ್ಲಿ ಸಸಿವ್ಮಡಿಗೆ ಹೆಚ್ಚಿನ ಪ್ರಮಾಣದ ನೀರನ್ನು
ಒದಗಿಸಬೇಡಿ.
· ಸಸಿಗಳು ಒಂದು ಅಂಗುಲ ಎತ್ತರ ಬೆಳೆದಾಗ ತೆಳುವಾಗಿ ನೀರನ್ನು ಕೊಡುತ್ತಿರಬೇಕು. ಸಸಿಗಳನ್ನು ನಾಟಿ ಮಾಡವ 6 ದಿನಗಳಿಗೆ ಮುಂಚೆ
ಪ್ರತೀ 100 ಚದರ ಮೀ.ಗೆ 0.3 ರಿಂದ 0.6 ಕಿ.ಗ್ರಾಂ. ಸಾರಜನಕವನ್ನೊದಗಿಸುವ ರಾಸಾಯನಿಕ ಗೊಬ್ಬರಗಳನ್ನು ಮೇಲು ಗೊಬ್ಬರವಾಗಿ
ಕೊಡಬೇಕು. ಬಿತ್ತನೆಯಾದ 20 ರಿಂದ 25 ದಿವಸಗಳಲ್ಲಿ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.
ನಾಟಿ ಪ್ರದೇಶದ ಸಿದ್ದತೆ
· ನಾಟಿ ಮಾಡುವ ಮೂರು ವಾರಗಳ ಮೊದಲೇ ಎಕರೆಗೆ 4 ಟನ್ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೆÇೀಸ್ಟನ್ನು ಮಣ್ಣಿನಲ್ಲಿ ಬೆರೆಸಬೇಕು.
· ಹಸಿರು ಎಲೆ ಗೊಬ್ಬರವನ್ನು ಒದಗಿಸುವುದಾದಲ್ಲಿ ಎಕರೆಗೆ 4 ಟನ್ ಹಸಿರು ಸೊಪ್ಪನ್ನು ಮೂರುವಾರ ಮೊದಲೇ ಮಣ್ಣಿಗೆ ಸೇರಿಸಬೇಕು.
· ಗದ್ದೆಯನ್ನು ಚೆನ್ನಾಗಿ ಹದ ಬರಿಸಲು ಒಂದು ಉಳುಮೆಯ ನಂತರ ಕೆಸರು ಮಾಡುವ ಸಾಧನವಾದ ಸುಧಾರಿತ ಪಡ್ಲರನ್ನು ಒಂದು ಬಾರಿ
ಬಳಸಿದರೆ ಸಾಕು. ಸುಧಾರಿತ ಪಡ್ಲರನ್ನು ಬಳಸುವುದರಿಂದ ಅನೇಕ ಬಾರಿ ನೇಗಿಲಿನಿಂದ ಉಳುವುದನ್ನು ತಪ್ಪಿಸಬಹುದು.
· ಪವರ್ ಟಿಲ್ಲರ್ ಅಥವಾ ಟ್ರಾಕ್ಟರ್‍ನಿಂದ ಒಮ್ಮೆ ಒಣ ಉಳುಮೆ ಮಾಡಿದ ನಂತರ ಮತ್ತೊಮ್ಮೆ ನೀರು ತುಂಬಿಸಿ ಕೇಜ್ ವ್ಹೀಲ್‍ನೊಂದಿಗೆ
ಬಳಸಿದರೆ ಅಲ್ಪ ಸಮಯದಲ್ಲಿ ಹಾಗೂ ಅಲ್ಪ ವೆಚ್ಚದಲ್ಲಿ ಚೆನ್ನಾಗಿ ಕೆಸರು ಮಾಡಲು ಸಾಧ್ಯವಾಗುತ್ತದೆ.
· ಮೊದಲ ಬಾರಿ ಉಳುಮೆಯನ್ನು ಮಾಡಿ ನಂತರ ಕೂಳೆಗಳು ಹಾಗೂ ಕಳೆಗಿಡಗಳು ಮಣ್ಣಿನಲ್ಲಿ ಚೆನ್ನಾಗಿ ಕೊಳೆಯುವಂತೆ ಎರಡು
ರಿಂದ ಮೂರು ವಾರ ಸಮಯವಕಾಶ ಕೊಡುವುದು ಉತ್ತಮ.
· ಕೆಸರು ಉಳುಮೆಗೋಸ್ಕರ ಒಮ್ಮೆ ಗದ್ದೆಯಲ್ಲಿ ನೀರು ತುಂಬಿಸಿದ ನಂತರ, ಗದ್ದೆಯನ್ನು ಒಣಗಲು ಬಿಡಬಾರದು. ಈ ಹಂತದಲ್ಲಿ ಗದ್ದೆಯು
ಪದೇ ಪದೇ ಒಣಗುವುದರಿಂದ, ಸಾರಜನಕದ ನಷ್ಟವಾಗುವುದಲ್ಲದೆ, ಕೆಸರು ಗಟ್ಟಿಯಾಗಿ ಮುಂದೆ ಬೆಳೆಯ ವಿವಿಧ ಹಂತಗಳಲ್ಲಿ
ಗದ್ದೆಯಿಂದ ನೀರು ಸುಲಭವಾಗಿ ನಷ್ಟಹೊಂದುವುದು.
· ಮಣ್ಣಿನಲ್ಲಿರುವ ಪೆÇೀಷಕಾಂಶಗಳು ಹಾಗೂ ಬಳಸಿದ ರಸಗೊಬ್ಬರಗಳು ತೊಳೆದುಕೊಂಡು ಹೋಗದಂತೆ ಇರಲು ಹಾಗೂ ಕೆಂಪು ನೀರಿನ
ಕಬ್ಬಿಣದ ತೀಕ್ಷ್ಣತೆಯು ಕಡಿಮೆಯಾಗಲು, ಗದ್ದೆಯಿಂದ ಗದ್ದೆಗೆ ನೀರು ಹಾಯಿಸುವ ಪದ್ಧತಿಯನ್ನು ಅನುಸರಿಸದೇ ಪ್ರತ್ಯೇಕ ಕಾಲುವೆಗಳ
ಮೂಲಕ ಪ್ರತೀ ಗದ್ದೆಗೂ ನೇರವಾಗಿ ನೀರುಣಿಸುವ ಪದ್ಧತಿಯ ಅನುಸರಣೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ನಾಟಿ
· ಚೆನ್ನಾಗಿ, ಸಮನಾಗಿ ಮಟ್ಟ ಮಾಡಿದ ಕೆಸರು ಗದ್ದೆಯಲ್ಲಿ ನಾಟಿಯ ಸಮಯದಲ್ಲಿ ನೀರನ್ನು ಬಸಿದು, ತೆಳುವಾಗಿ ನೀರನ್ನುಳಿಸಿಕೊಳ್ಳಬೇಕು.
ನೀರಿನ ಆಳ ಹೆಚ್ಚಾಗಿದ್ದರೆ, ನಾಟಿ ಮಾಡಿದ ಸಸಿಗಳು ಕೆಸರಿಗೆ ಸರಿಯಾಗಿ ಕಚ್ಚಿಕೊಳ್ಳದೇ, ನೀರಲ್ಲಿ ತೇಲುವ ಸಂಭವ ಹೆಚ್ಚಾಗಿರುತ್ತದೆ.
· ನಾಟಿಗೆ, 22 ರಿಂದ 28 ದಿನಗಳ ವಯಸ್ಸಿನ, ಸಧೃಡವಾಗಿ ಬೆಳೆದ ಸಸಿಗಳನ್ನು ಬಳಸಬೇಕು. ಅನಿವಾರ್ಯಾ ಸನ್ನಿವೇಶಗಳಲ್ಲಿ 28 ರಿಂದ 30
ದಿನಗಳ ಸಸಿಗಳನ್ನು ಬಳಸಬಹುದು. ನೆರೆ ಬರುವ ಸಂಭವವಿರುವ ಬಯಲು ಗದ್ದೆಗಳಲ್ಲಿ, ನೆರೆಯ ಹಾನಿಯನ್ನು ಕಡಿಮೆ ಮಾಡಲು,
ಎತ್ತರ ಬೆಳೆದ 30 ರಿಂದ 35 ದಿನಗಳ ಸಸಿಗಳನ್ನು ನಾಟಿ ಮಾಡಲು ಉಪಯೋಗಿಸಬಹುದು.
· ಪ್ರತೀ ಚ. ಮೀ. ಪ್ರದೇಶಕ್ಕೆ ಸುಮಾರು 50 ಗುಣಿಗಳು ಬರುವಂತೆ, ಸುಮಾರಾಗಿ 8 ಅಂಗುಲ ಸಾಲಿನಿಂದ ಸಾಲಿಗೆ ಹಾಗೂ 4 ಅಂಗುಲ
ಗುಣಿಯಿಂದ ಗುಣಿಗೆ ಅಂತರವನ್ನು ಕೊಟ್ಟು 3 ರಿಂದ 5 ಸಸಿಯನ್ನು ನಾಟಿ ಮಾಡುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು.
ಅಲ್ಪಾವಧಿ ತಳಿಗಳಾದಲ್ಲಿ ಪ್ರತೀ ಚ.ಮೀ. ಪ್ರದೇಶಕ್ಕೆ ಸುಮಾರು 67 ಗುಣಿಗಳು ಬರುವಂತೆ ನಾಟಿ ಮಾಡುವುದು ಉತ್ತಮ.
· ಸಸಿಗಳನ್ನು 5 ಸೆಂ. ಮೀ. ಗಿಂತ ಆಳ ಹೋಗದಂತೆ ನಾಟಿಯನ್ನು ಮಾಡಬೇಕು. 5 ಸೆಂ.ಮೀ.ಗಿಂತ ಆಳದಲ್ಲಿ ನಾಟಿ ಮಾಡುವುದರಿಂದ,
ಸಸಿಯ ಬೆಳವಣಿಗೆ ನಿಧಾನವಾಗಿ, ತೆಂಡೆ (ಹಿಳ್ಳೆ)ಗಳು ಹೊರ ಬರುವುದು ತಡವಾಗಿ, ತೆಂಡೆಗಳು ದುರ್ಬಲವಾಗುತ್ತವೆ.
ಸತುವಿನ ಸಲ್ಫೇಟ್ ಬಳಕೆ
ಪ್ರತಿ ಮೂರು ಬೆಳೆಗೆ ಒಂದು ಸಾರಿಯಂತೆ ಎಕರೆಗೆ 8 ಕಿ.ಗ್ರಾಂ ಸತುವಿನ ಸಲ್ಫೇಟನ್ನು ನಾಟಿಗೆ ಮುನ್ನ, ಇತರೆ ರಸಗೊಬ್ಬರಗಳ ಜೊತೆ
ಬೆರೆಸದಂತೆ, ಪ್ರತ್ಯೇಕವಾಗಿ ಮರಳಿನ ಜೊತೆಯಲ್ಲಿ ಮಿಶ್ರಣ ಮಾಡಿ ಮಣ್ಣಿಗೆ ಸೇರಿಸಬೇಕು. ಇದರಿಂದ ಭತ್ತದ ಕಾಳಿನ ಗಾತ್ರ ಹೆಚ್ಚುವುದಲ್ಲದೆ ಶೇ. 10
ರಿಂದ 15 ರಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ.
ಪೆÇೀಷಕಾಂಶಗಳ ನಿರ್ವಹಣೆ
ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳಾದ ಸಾರಜನಕ, ರಂಜಕ ಮತ್ತು ಪೆÇಟ್ಯಾಷನ್ನು ಸರಿಯಾಗಿ ಒದಗಿಸಬೇಕು. ಶಿಫಾರಸ್ಸಿನ 1/3
ಭಾಗ ಸಾರಜನಕ, ಪೂರ್ತಿ ರಂಜಕ ಮತ್ತು ಅರ್ಧ ಭಾಗ ಪೆÇಟ್ಯಾಷನ್ನು ನಾಟಿ ಸಮಯದಲ್ಲಿ ಭೂಮಿಗೆ ಸೇರಿಸಬೇಕು. ನಾಟಿ ಮಾಡಿದ 30 ದಿನಗಳ
ನಂತರ 1/3 ಭಾಗ ಸಾರಜನಕ ಒದಗಿಸುವ ರಾಸಾಯನಿಕ ಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಡಬೇಕು. 25 ದಿವಸಗಳ ನಂತರ ಮತ್ತೊಮ್ಮೆ 1/3
ಭಾಗ ಸಾರಜನಕವನ್ನು ಹಾಗೂ ಅರ್ಧ ಭಾಗ ಪೆÇಟ್ಯಾμïನ್ನು ಮೇಲು ಗೊಬ್ಬರವಾಗಿ ಕೊದಬೇಕು. ಸಾರಜನಕವು ಸಾಕಷ್ಟು ತರದಲ್ಲಿ
ನಷ್ಟವಾಗುವುದರಿಂದ ಬೇರೆ ಬೇರೆ ಕಂತುಗಳಲ್ಲಿ ಮೇಲು ಗೊಬ್ಬರವಾಗಿ ಕೊಡಬೇಕಾಗುತ್ತದೆ. ಕೊಡಗಿನ ಪ್ರದೇಶದ ಮಣ್ಣು ಹುಳಿಯಾಗಿರುವುದರಿಂದ
ಸೂಪರ್ ಫಾಸ್ಫೇಟ್‍ನ್ನು ಉಪಯೋಗಿಸಿದರೆ ಅದರಲ್ಲಿಯ ರಂಜಕವು ಕಬ್ಬಿಣ ಮತ್ತು ಅಲ್ಯುಮಿನಿಯಂ ಜೊತೆಗೆ ಸೇರಿ ಸ್ಥಿರೀಕರಣಗೊಂಡು ಬೆಳೆಗೆ
ದೊರೆಯುವುದಿಲ್ಲ. ಆದ ಕಾರಣ ರಂಜಕವನ್ನು ಶಿಲಾರಂಜಕದ ರೂಪದಲ್ಲಿ ಬಳಸುವುದು ಸೂಕ್ತ.
ನೀರಾವರಿ ಮತ್ತು ಅಂತರ ಬೇಸಾಯ
ಭತ್ತದ ಬೆಳೆಯನ್ನು ನೀರು ನಿಲ್ಲಿಸಿ ಬೆಳೆಯುವುದರಿಂದ ನೀರಿನ ಮಟ್ಟವನ್ನು ಕಾಪಾಡುವುದು ಬಹಳ ಅತ್ಯವಶ್ಯಕ. ನಾಟಿ ಮಾಡಿದ ಮೊದಲ
10 ದಿನ ಗದ್ದೆಯಲ್ಲಿ ನೀರಿನ ಮಟ್ಟ 2.5 ಸೆಂ. ಮೀ. ಎತ್ತರ ಇರಬೇಕು. ನಂತರ ನೀರಿನ ಮಟ್ಟವನ್ನು 5 ಸೆಂ. ಮೀ.ಗೆ ಹೆಚ್ಚಿಸಿ ಕೊಯ್ಲಿಗೆ ಬರುವ 10
ದಿನಗಳ ಮುಂಚೆ ನೀರನ್ನು ಬಸಿದು ತೆಗೆಯಬೇಕು.
ಕಳೆಗಳ ನಿರ್ವಹಣೆ ಮತ್ತು ಕಳೆನಾಶಕಗಳ ಬಳಕೆ
ನಾಟಿ ಭತ್ತಕ್ಕೆ: ಪೆÇ್ರಪಾನಿಲ್ 35 ಇ.ಸಿ.ಯನ್ನು ಕಳೆಗಳು ಒಂದರಿಂದ ಎರಡು ಎಲೆಗಳ ಹಂತದಲ್ಲಿ ಇದ್ದಾಗ 3 ಲೀಟರ್‍ನ್ನು ಪ್ರತೀ ಎಕರೆಗೆ
ಉಪಯೋಗಿಸಬೇಕು ಅಥವಾ ನಾಟಿಯಾದ 5 ರಿಂದ 8 ದಿನಗಳಲ್ಲಿ 12 ಕಿ. ಗ್ರಾಂ. ಬ್ಯೂಟಾಕ್ಲೋರ್ ಹರಳನ್ನು ಅಥವಾ 100 ಗ್ರಾಂ
ಪೈರಜೋಸಲ್ಫುರಾನ್ ಈಥೈಲ್‍ನ್ನು ಮರಳಿನೊಡನೆ ಮಿಶ್ರಣ ಮಾಡಿ ಪ್ರತಿ ಎಕರೆ ಪ್ರದೇಶಕ್ಕೆ ಎರಚಬೇಕು.
ಸಸ್ಯಸಂರಕ್ಷಣೆ
ಕೀಟಗಳು
1. ಕಾಂಡಕೊರೆಯುವ ಹುಳು
ಮರಿಹುಳು ಸಸ್ಯದ ಕಾಂಡವನ್ನು ಕೊರೆದು ತಿನ್ನುವುದರಿಂದ ಸುಳಿ ಒಣಗುತ್ತದೆ. ಇದರಿಂದ ಒಣಗಿದ ಸುಳಿಯನ್ನು ಕೈಯಿಂದ ಮೇಲೆ
ಎಳೆದರೆ, ಕೊಳೆತ ಅಡಿಭಾಗದೊಂದಿಗೆ ಸುಳಿಯು ಹೊರಬರುತ್ತದೆ. ಇದರ ಹಾವಳಿಯು ತೆನೆ ಹೊರಬರುವ ಹಂತದಲ್ಲಿ ಕಂಡು ಬಂದರೆ ಕಾಳುಗಳು
ಬಲಿಯದೆ, ಬಿಳಿಯ ಜೊಳ್ಳು ತೆನೆಗಳಾಗಿ ಮಾರ್ಪಡುತ್ತವೆ.
ಹತೋಟಿ ವಿಧಾನಗಳು
ಈ ಕೀಟವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.
· ಬೇಸಿಗೆಯಲ್ಲಿ ಆಳವಾದ ಉಳುಮೆಯನ್ನು ಮಾಡಬೇಕು.
· ಬೆಳೆಯನ್ನು ಕೊಯ್ಲು ಮಾಡುವಾಗ ಭೂಮಿಗೆ ಹತ್ತಿರವಾಗಿ ಕೊಯ್ಲು ಮಾಡಬೇಕು ಮತ್ತು ಕೂಳೆಗಳನ್ನು ನಾಶ ಪಡಿಸಬೇಕು. ಇದರಿಂದ
ಕೋಶಾವಸ್ಥೆಯಲ್ಲಿರುವ ಕೀಟಗಳನ್ನು ನಾಶ ಮಾಡಿದಂತಾಗುತ್ತದೆ.
· ಆದಷ್ಟು ಬೇಗ ನಾಟಿಯನ್ನು ಮಾಡಬೇಕು ಇದರಿಂದ ಬೆಳೆಯು ಕೀಟದಿಂದ ಪಾರಾಗುತ್ತದೆ.
· ನಾಟಿ ಮಾಡುವ ಮುನ್ನ ಸಸಿಯ ತುದಿ ಭಾಗವನ್ನು ಕತ್ತರಿಸಿ ನಾಟಿ ಮಾಡಬೇಕು. ಇದರಿಂದ ಕೀಟ ಮೊಟ್ಟೆ ಇಡುವುದನ್ನು ತಡೆಯಬಹುದು.
· ಶಿಫಾರಸ್ಸು ಮಾಡಿದಷ್ಟು ರಸ ಗೊಬ್ಬರಗಳನ್ನು ಮಾತ್ರ ಕೊಡಬೇಕು. ಅದರಲ್ಲೂ ಯೂರಿಯಾವನ್ನು ಹೆಚ್ಚಿಗೆ ಕೊಡಬಾರದು.
ಕೀಟನಾಶಕಗಳಿಂದ ಹತೋಟಿ
· ಸಸಿಗಳನ್ನು ನಾಟಿ ಮಾಡುವುದಕ್ಕಿಂತ ಮೊದಲು ಕ್ಲೋರೋಪೈರಿಫಾಸ್ 20 ಇ.ಸಿ. (2 ಮಿ.ಲೀ. ಪ್ರತೀ ಲೀಟರ್ ನೀರಿಗೆ) ಎಂಬ
ಕೀಟನಾಶಕದ ದ್ರಾವಣದಲ್ಲಿ ಅದ್ದಿ ತೆಗೆದು ನಾಟಿ ಮಾಡಿದಲ್ಲಿ ಪ್ರಾರಂಭಿಕ ಹಂತದಲ್ಲಿ ಬರುವ ಕೀಟಗಳನ್ನು ಹತೋಟಿ ಮಾಡಬಹುದು.
· ಈ ಕೀಟದ ಬಾಧೆಯು ಮುಖ್ಯ ಗದ್ದೆಯಲ್ಲಿ ಕಂಡು ಬಂದಲ್ಲಿ ಮೋನೋಕ್ರೋಟೊಪಾಸ್ 1.3 ಮಿ.ಲೀ. ಅಥವಾ ಕ್ಲೋರೋಪೈರಿಫಾಸ್ 2
ಮಿ. ಲೀ. ಅಥವಾ ಕ್ವಿನಾಲ್‍ಫಾಸ್ 2 ಮಿ.ಲೀ. ಪ್ರತಿ ಲೀಟರ್‍ನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು.
2. ಎಲೆ ಸುರುಳಿ ಹುಳು
ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರುಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಪೈರು
ಬೆಳ್ಳಗೆ ಬಿಳಿಚಿ ಕೊಂಡಂತೆ ಕಾಣಿಸುತ್ತದೆ. ಬಾಧೆಯು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ.
ಹತೋಟಿ P್ರವ Àುಗಳು
· ಗದ್ದೆಯ ಬದುವಿನಲ್ಲಿರುವ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಬೇಕು.
· ಶಿಫಾರಸ್ಸು ಮಾಡಿರುವಷ್ಟು ಮಾತ್ರ ಸಾರಜನಕದ ಗೊಬ್ಬರವನ್ನು ಕೊಡಬೇಕು.
· ಕೀಟವಿರುವ ಸೂಚನೆಯನ್ನು ನೋಡಿಕೊಂಡು 2.0 ಮಿ.ಲೀ. ಕ್ಲೋರ್‍ಪೈರಿಫಾಸ್ 20 ಇ.ಸಿ ಅಥವಾ 2 ಮಿ.ಲೀ. ಕ್ವಿನಾಲ್‍ಫಾಸ್ 25 ಇಸಿ
ಇವುಗಳಲ್ಲಿ ಯಾವುದಾದರೂ ಒಂದನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
3. ಕೊಳವೆ ಹುಳು
ಮರಿಹುಳುಗಳು ಭತ್ತದ ಎಲೆಯ ತುದಿಯನ್ನು ಕತ್ತರಿಸಿ ತನ್ನ ಸುತ್ತ ಕೊಳವೆಯನ್ನು ನಿರ್ಮಿಸಿಕೊಂಡು ಎಲೆಯ ಹಸಿರನ್ನು ಕೆರೆದು
ತಿನ್ನುತ್ತದೆ. ಇದರಿಂದ ಎಲೆಯ ಮೇಲೆ ಏಣಿಯಾಕಾರದ ಬಿಳಿಯ ಮಚ್ಚೆಗಳು ಕಾಣಿಸುತ್ತವೆ. ಕೆಲವೊಮ್ಮೆ ಎಲೆಯ ಹಸಿರನ್ನು ಮನಬಂದಂತೆ ಕೆರೆದು
ತಿಂದು ಬಿಳಿಯ ಪದರನ್ನು ಮಾತ್ರ ಹಾಗೇಯೆ ಬಿಟ್ಟಿರುತ್ತದೆ. ಈ ಕೀಟದ ಬಾಧೆಗೊಳಗಾದ ಬೆಳೆಯು ಬೆಳ್ಳಗೆ ಕಾಣುವುದರಿಂದ ಈ ಪೀಡೆಗೆ ಕೊಕ್ಕರೆ
ರೋಗ ಎಂದು ಕೆಲವರು ಕರೆಯುತ್ತಾರೆ. ಬಾಧೆಗೊಳಗಾದ ಗದ್ದೆಯಲ್ಲಿ ನೀರಿನ ಮೇಲೆ ಹುಳುಗಳಿರುವ ಕೊಳವೆಗಳು ತೇಲುತ್ತಿರುತ್ತವೆ. ಇದರ ತೀವ್ರತೆ
ಹೆಚ್ಚಾಗಿದ್ದಲ್ಲಿ ಭತ್ತದ ಬೆಳವಣಿಗೆಯು ಕುಂಠಿತವಾಗಿ ಗಿಡ್ಡದಾಗುತ್ತದೆ.
ಹತೋಟಿ P್ರವ Àುಗಳು
· ಹU್ಗವ Àನ್ನು ತೆಂಡೆಗಳಿU É ತಾಕಿಸಿ ಎಳೆಯುವುದರಿಂದ ತೆಂಡೆUಳ À ಕೆಳಭಾUದ Àಲ್ಲಿ ಜೋತು ಬಿದ್ದಿgುÀ ವ ಕೊಳವೆ ಹುಳುUಳ Àನ್ನು ಕೆಳU É
ಬೀಳಿಸಬಹುದು. ನಂತರ ಗದ್ದೆಯಿಂದ ನೀರು ಹೊರ ಹಾಕುವುದರಿಂದ ಕೊಳವೆಗಳು ಹೊರ ಹೋಗುತ್ತವೆ.
ಕೀಟನಾಶಕಗಳಿಂದ ಹತೋಟಿ
· 1 ಮಿ.ಲೀ. ಪೆÇಸಲೋನ್ 35 ಇ.ಸಿ.ಅಥವಾ 1 ಮಿ.ಲೀ. ಡಯಾಜಿನಾನ್ 60 ಇ.ಸಿ. ಅಥವಾ 2 ಮಿ.ಲಿ. ಪೆಂಥೊಯೇಟ್ 50 ಇ.ಸಿ.
ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
4. ಗಂಧೀ ತೆನೆ ತಿಗಣೆ (ಬಂಬೂಚಿ)
ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಕೀಟದ ಹಾವಳಿಯು ವ್ಯಾಪಕವಾಗಿ ಕಂಡುಬರುತ್ತಿದ್ದು, ಪ್ರೌಢ ಮತ್ತು ಅಪ್ಸರೆ
ಕೀಟಗಳು ಹಾಲು ತುಂಬಿದ ಕಾಳುಗಳಿಂದ ರಸವನ್ನು ಹೀರುತ್ತವೆ. ಇದರಿಂದ ಕಾಳುಗಳು ಜೊಳ್ಳಾಗಿ ಕಂದುಬಣ್ಣಕ್ಕೆ ತಿರುಗುತ್ತವೆ. ಹಾನಿಗೊಳಗಾದ
ಭತ್ತದ ಹುಲ್ಲು ಸಹ ದುರ್ವಾಸನೆಯಿಂದ ಕೂಡಿರುತ್ತದೆ.
ಹತೋಟಿ P್ರವ Àುಗಳು
· ಗದ್ದೆಯ ಬದು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕಳೆಗಳನ್ನು ತೆಗೆದು ಸ್ವಚ್ಛತೆಯನ್ನು ಕಾಪಾಡಬೇಕು.
· ಶೇ. 5 ರ 8 ಕಿ.ಗ್ರಾಂ ಮೆಲಾಥಿಯನ್ ಪುಡಿಯನ್ನು ಪ್ರತೀ ಎಕರೆ ಪ್ರದೇಶಕ್ಕೆ ಧೂಳೀಕರಿಸಬೇಕು ಅಥವಾ ಒಂದು ಲೀಟರ್ ನೀರಿನಲ್ಲಿ 2.0
ಮಿ.ಲೀ. ಮೆಲಾಥಿಯನ್ 50 ಇ.ಸಿ. ಬೆರಸಿ ಸಿಂಪಡಿಸಬೇಕು.
· ಸಿಂಪರಣೆಯನ್ನು ಬದುಗಳಿಂದ ವೃತ್ತಾಕಾರದಲ್ಲಿ ಪ್ರಾರಂಭಿಸಿ ಗದ್ದೆಯ ಮಧ್ಯಭಾಗಕ್ಕೆ ಕೊನೆಗೊಳಿಸುವುದರಿಂದ ಪರಿಣಾಮಕಾರಿಯಾಗಿ ಈ
ಕೀಟವನ್ನು ನಿಯಂತ್ರಿಸಬಹುದು.
5. ಭತ್ತದ ಕಣೆ ನೊಣ
ತಡವಾಗಿ ನಾಟಿ ಮಾಡಿದ ಬೆಳೆಯಲ್ಲಿ ಮತ್ತು ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಈ ಕೀಟದ ಬಾಧೆಯು ಕಂಡುಬರುತ್ತದೆ. ಮರಿಹುಳು
ಸಸಿಗಳ ಕಾಂಡದಲ್ಲಿ ಸೇರಿಕೊಂಡು ಬುಡವನ್ನು ಕೆರೆಯುವುದರಿಂದ ಮರಿಹುಳುಗಳ ಜೊಲ್ಲಿನಲ್ಲಿರುವ ವಿಷಕಾರಿ ದ್ರವ್ಯದಿಂದ ಸುಳಿಯು
ಕೊಳವೆಯಂತೆ ಬದಲಾವಣೆಯನ್ನು ಹೊಂದುತ್ತದೆ. ಈ ಕೊಳವೆಯು (ಕಣೆ) ಮೊದಲು ಹಸಿರು ಬಣ್ಣದ್ದಾಗಿದ್ದು ನಂತರ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.
ಕಣೆಯ ತುದಿ ವಕ್ರವಾಗಿದ್ದು ಸಣ್ಣ ದಾರದಂತೆ ಕಾಣುತ್ತದೆ. ಬಾಧೆಗೊಳಗಾದ ಸಸ್ಯವು ಅಧಿಕ ಸಂಖ್ಯೆಯಲ್ಲಿ ತೆಂಡೆಗಳನ್ನು ಬಿಟ್ಟು ಪೆÇದೆಯಂತೆ
ಕಾಣುತ್ತದೆ. ಕಣೆಯ ಬಾಧೆಗೊಳಗಾದ ಸಸಿಗಳಿಂದ ತೆನೆ ಬರುವುದಿಲ್ಲ. ಆದ್ದರಿಂದ ಇದರ ಚಿಹ್ನೆಯನ್ನು ಆನೆಕೊಂಬು ಎಂದು ಕೂಡ ಕರೆಯುತ್ತಾರೆ.
ಹತೋಟಿ P್ರವ Àುಗಳು
· ಶಿಫಾರಸ್ಸು ಮಾಡಿದಷ್ಟು ರಾಸಾಯನಿಕ ಗೊಬ್ಬರಗಳನ್ನು ಮಾತ್ರ ಕೊಡಬೇಕು.
· ಸಮಯಕ್ಕೆ ಸರಿಯಾಗಿ ನಾಟಿಯನ್ನು ಮಾಡಬೇಕು (ಜುಲೈ ತಿಂಗಳ ಏರಡನೆ ವಾರದ ಒಳಗೆ).
ಕೀಟನಾಶಕಗಳಿಂದ ಹತೋಟಿ
v ಸಸಿ ಮಡಿಯ ಪೈರುಗಳನ್ನು ನಾಟಿ ಮಾಡುವ 8 ತಾಸುಗಳ ಮೊದಲು ಪ್ರತೀ ಲೀಟರ್ ನೀರಿಗೆ 2.0 ಮಿ.ಲೀ. ಕ್ಲೋರೋಪೈರಿಫಾಸ್ 20 ಇ.ಸಿ.
ಎಂಬ ಕೀಟನಾಶಕದ ದ್ರಾವಣದಲ್ಲಿ ನೆನಸಿದ ನಂತರ ನಾಟಿ ಮಾಡಬೇಕು.
v ಗದ್ದೆಯಿಂದ ನೀರನ್ನು ಹೊರಹಾಕಿ ಪ್ರತೀ ಎಕರೆಗೆ 4 ಕಿ.ಗ್ರಾಂ ಕಾರ್ಬೋಪ್ಯೂರಾನ್ ಅಥವಾ 8 ಕಿ.ಗ್ರಾಂ ಶೇ. 10 ರ ಫೆÇೀರೆಟ್ ಹರಳುಗಳನ್ನು
ಮಣ್ಣಿನಲ್ಲಿ ಹಾಕಬೇಕು.
ರೋಗಗಳು
1. ಬೆಂಕಿ ರೋಗ
ಮ್ಯಾಗ್ನೋಪೆÇೀರ್ತಿ ಗ್ರೀಸಿಯಾ ಎಂಬ ಶೀಲೀಂದ್ರದಿಂದ ಬರುವ ಈ ರೋಗವು ಹೆಚ್ಚು ಆದ್ರ್ರತೆ, ಕಡಿಮೆ ರಾತ್ರಿ ಉμÁ್ಣಂಶ ಮತ್ತು
ಸಾರಜನಕ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದಾಗ ತೀವ್ರವಾಗಿ ಕಂಡುಬರುತ್ತದೆ. ರೋಗದ ಮೂಲ ಸೋಂಕು, ರೋಗ ತಗುಲಿದ
ಎಲೆ, ಕಡ್ಡಿ, ಕೂಳೆ ಮತ್ತು ಕಳೆಗಳಿಂದ ಉಚಿಟಾಗಿ, ನಂತರ ಗಾಳಿಯಿಂದ ಪ್ರಸಾರವಾಗುತ್ತದೆ.
ಪ್ರಾರಂಭದಲ್ಲಿ ಎಲೆಗಳ ಮೇಲೆ ಸುಮಾರು ಒಂದರಿಂದ ಮೂರು ಮಿ.ಮೀ. ಉದ್ದದ ಕಂದು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ. ನಂತರ
ಇಂತಹ ಚುಕ್ಕೆಗಳ ಗಾತ್ರ ಹೆಚ್ಚಾಗಿ ಗರಿಗಳ ಮೇಲೆ ಕದಿರಿನಾಕಾರದ ಮೊನಚಾದ ತುದಿಗಳುಳ್ಳ ಚುಕ್ಕೆಗಳಾಗಿ ಕಾಣಿಸಿಕೊಳ್ಳುತ್ತವೆ. ಇಂತಹ ಚುಕ್ಕೆಗಳ
ಮಧ್ಯಭಾಗವು ಬೂದಿ ಬಣ್ಣದಿಂದ ಕೂಡಿದ್ದು ಸುತ್ತಲು ಕಂದು ಬಣ್ಣದ್ದಾಗಿರುತ್ತದೆ. ಇಂತಹ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ಎಲೆಯು ಸುಟ್ಟು
ಹೋದಂತೆ ಕಂಡುಬರುತ್ತದೆ. ಈ ಲಕ್ಷಣಗಳು ಗರಿಯ ಮೇಲೆ ಸಸಿ ಮಡಿಯಲ್ಲಿ ಮತ್ತು ನಾಟಿ ಮಾಡಿದ ಪೈರಿನ ಮೇಲೂ ಕಾಣಿಸಿಕೊಳ್ಳುತ್ತವೆ. ತೆನೆ
ಹೊರ ಬಂದ ಮೇಲೆ ತೆನೆಯ ಬುಡದಲ್ಲಿ, ಗರಿಗಳ ಮೇಲೆ ಕಾಣಿಸಿಕೊಂಡು ಆ ಭಾಗವು ಕೊಳೆಯುತ್ತದೆ. ಇದರಿಂದ ತೆನೆಯು ಮುರಿದು
ಜೋತಾಡುವುದನ್ನು ಕಾಣಬಹುದು. ಬೆಳೆಯು ತೆನೆ ಬಿಟ್ಟ ನಂತರ ಈ ರೋಗ ಕಾಣಿಸಿಕೊಂಡಲ್ಲಿ ಕಾಳುಗಳು ಜೊಳ್ಳಾಗುತ್ತವೆ.ಇದನ್ನು ನಾವು ಕುತ್ತಿಗೆ
ಬೆಂಕಿರೋಗವೆಂದು ಕರೆಯುತ್ತೆವೆ.
ಹತೋಟಿ P್ರವ Àುಗಳು
· ಸಾರಜನಕವನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಣ್ಣು ಪರೀಕ್ಷೆ ಆಧಾರದ ಮೇಲೆ ಕೊಡಬೇಕು.
· ಎಕರೆಗೆ ಬೇಕಾದ 25 ರಿಂದ 30 ಕಿ.ಗ್ರಾಂ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ (ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 4 ಗ್ರಾಂ)
ಎಂಬ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಸಸಿ ಮಡಿಗೆ ಉಪಯೋಗಿಸಬೇಕು.
· ರೋಗದ ಬಾಧೆ ಶೇ. 5 ಕ್ಕಿಂತ ಜಾಸ್ತಿ ಇದ್ದಲ್ಲಿ ಶಿಲೀಂಧ್ರನಾಶಕಗಳಾದ ಎಡಿಫಿನ್‍ಫಾಸ್ 1 ಮಿ.ಲೀ. ಅಥವಾ ಕಾರ್ಬೆಂಡೆಜಿಮ್ 1 ಗ್ರಾಂ. ಅಥವಾ
ಟ್ರೈಸೈಕ್ಲಜೋಲ್ 0.6 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. ಇದನ್ನು ಸಸಿ ಮಡಿಯಲ್ಲಿ ರೋಗ ಕಂಡುಬಂದಾಗ,
ನಾಟಿ ಮಾಡಿದ ಗದ್ದೆಯಲ್ಲಿ ತೆಂಡೆ ಹೊಡೆಯುವ ಸಮಯದಲ್ಲಿ, ತೆನೆ ಹೊರ ಬರುವ ಸಮಯದಲ್ಲಿ ಮತ್ತು ತೆನೆ ಹೊರ ಬಂದ ಹತ್ತು
ದಿನಗಳ ನಂತರ ಸಿಂಪರಣೆ ಮಾಡಬೇಕು.
2. ಕಂದು ಎಲೆ ಚುಕ್ಕೆ ರೋಗ
ಡ್ರೆಕ್ಸ್ಲೆರಾ ಒರೈಝೆ ಎಂಬ ಶಿಲೀಂಧ್ರದಿಂದುಂಟಾಗುವ ಈ ರೋಗದ ಮೂಲ ಸೋಂಕು ಬೀಜಗಳಿಂದ ಹರಡುತ್ತದೆ. ಅಲ್ಲದೆ ಆಸರೆ ಸಸ್ಯಗಳಾದ
ಹಲವು ಕಳೆಗಳಿಂದಲೂ, ಗಾಳಿಯ ಮೂಲಕವೂ ಪ್ರಸಾರಗೊಳ್ಳುತ್ತದೆ. ಪ್ರಾರಂಭದಲ್ಲಿ ಎಲೆಗಳ ಮೇಲೆ ಕಂದು ಬಣ್ಣದ ಸಣ್ಣ ಚುಕ್ಕೆಗಳಾಗಿ
ಕಾಣಿಸಿಕೊಂಡು ನಂತರ ಅಂಡಾಕಾರವಾಗಿ ಅಥವಾ ಗುಂಡಾಕಾರವಾಗಿರುತ್ತದೆ. ಇಂತಹ ಚುಕ್ಕೆಗಳು ಎಲೆಗಳ ಮೇಲೆ ಹೆಚ್ಚಾದಂತೆ ಒಂದಕ್ಕೊಂದು
ವಿಲೀನಗೊಂಡು ಎಲೆ ಒಣಗಿ ಹೋಗಲು ಕಾರಣವಾಗುತ್ತವೆ. ರೋಗದ ತೀವ್ರತೆ ಹೆಚ್ಚಾದಂತೆ ಚುಕ್ಕೆಗಳು ಕಾಂಡಗಳ ಮೇಲೂ, ತೆನೆ ಬಂದ ನಂತರ
ಕಾಳುಗಳ ಮೇಲೂ ಕಂದು ಅಥವಾ ಕಪ್ಪು ಬಣ್ಣದ ಮಚ್ಚೆಗಳನ್ನು ಕಾಣಬಹುದು. ಇದರಿಂದ ಇಳುವರಿಯು ಗಣನೀಯ ಪ್ರಮಾಣದಲ್ಲಿ
ಕಡಿಮೆಯಾಗುತ್ತದೆ.
ಹತೋಟಿ P್ರವ Àುಗಳು
· ಬಿತ್ತನೆ ಬೀಜಗಳನ್ನು gೂÉ ೀU À ಮುಕ್ತ ಬೆಳೆಯಿಂದ ಸಂU್ರಹಿÀ ಸಿ ಬಿತ್ತನೆ ಮಾಡಬೇಕು.
· ಎಕರೆಗೆ ಬೇಕಾದ 25 ರಿಂದ 30 ಕಿ.ಗ್ರಾಂ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ (ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 4 ಗ್ರಾಂ)
ಎಂಬ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಸಸಿ ಮಡಿಗೆ ಉಪಯೋಗಿಸಬೇಕು.
· ತೆನೆ ಹೊರಬರುವ ಹಂತದಲ್ಲಿ 18 ಲೀ. ನೀರಿಗೆ 40 ಗ್ರಾಂ ಮ್ಯೊಂಕೋಜೆಬ್ ಅಥವಾ 18 ಮಿ.ಲೀ. ಎಡಿಫಿನ್‍ಫಾಸ್‍ನ್ನು ಬೆರೆಸಿ
ಸಿಂಪಡಿಸಬೇಕು.
3.ಎಲೆ ಕವಚ ಒಣಗುವ ರೋಗ
ರೈಜೋಕ್ಟೊನಿಯಾ ಸೋಲಾನಿ ಎಂಬ ಶಿಲೀಂಧ್ರದಿಂದ ಬರುವ ಈ ರೋಗವು ಸಾರಜನಕದ ಅತಿಯಾದ ಬಳಕೆಯಿಂದ ಮತ್ತು ನೆರಳು
ಹೆಚ್ಚಾದಾಗ ಈ ರೋಗ ಕಾಣಿಸಿಕೊಳ್ಳುವ ಸಂಭವ ಹೆಚ್ಚು. ನೀರಿನ ಮಟ್ಟದಲ್ಲಿರುವ ಗರಿಗಳು ಮತ್ತು ಅದರ ಒರೆಗಳ ಮೇಲೆ ಇದರ ಲಕ್ಷಣಗಳು
ಕಾಣಿಸಿಕೊಳ್ಳುತ್ತವೆ. ಗರಿಗಳ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಅಥವಾ ಹಸಿರು ಮಿಶ್ರಿತ ಬೂದಿ ಬಣ್ಣದ ಉದ್ದವಾದ ಮಚ್ಚೆಗಳು
ಕಾಣಿಸಿಕೊಳ್ಳುತ್ತವೆ. ಇವುಗಳು ಒಂದಕ್ಕೊಂದು ಕೂಡಿಕೊಂಡು ಎಲೆಯ ಹೆಚ್ಚಿನ ಭಾಗವನ್ನು ಆಕ್ರಮಿಸುತ್ತವೆ. ರೋಗದ ಬಾಧೆ ತೀವ್ರವಾದಾಗ
ಸಂಪೂರ್ಣ ಎಲೆ ಒಣಗಿ ಹೋಗುತ್ತದೆ.
ಹತೋಟಿ P್ರವ Àುಗಳು
· ಸಾರಜನಕದ ಗೊಬ್ಬರವನ್ನು ಶಿಫಾರಸ್ಸು ಪ್ರಮಾಣದಲ್ಲಿ ಬಳಸುವುದು.
· ರೋಗ ಕಂಡು ಬಂದ ಕೂಡಲೇ ಗದ್ದೆಯಲ್ಲಿರುವ ನೀರನ್ನು ಬಸಿದು ಪ್ರತೀ ಲೀಟರ್ ನೀರಿಗೆ 1 ಗ್ರಾಂ. ಕಾರ್ಬೆಂಡೆಜಿಮ್ ಬೆರೆಸಿ
ಸಿಂಪಡಿಸಬೇಕು.
6. ತೆನೆ ಕವಚ ಕೊಳೆರೋಗ
ಸಾರೋಕ್ಲಾಡಿಯಂ ಒರೈಜೆ ಎಂಬ ಎಂಬ ಶಿಲೀಂಧ್ರದಿಂದ ಬರುವ ಈ ರೋಗವು ಗೋಳಾಕಾರದ ಇಲ್ಲವೇ ನಿರ್ದಿಷ್ಟ ಆಕಾರದ ಕಂದು
ಅಥವಾ ಬೂದಿ ಬಣ್ಣದ ಮಚ್ಚೆಗಳು ತೆನೆಯ ಒರೆಯ ಮೇಲೆ ಕಂಡು ಬರುತ್ತವೆ. ಇವುಗಳು ಒಂದಕ್ಕೊಂದು ಕೂಡಿಕೊಂಡು ಒರೆಯು ಕೊಳೆತು ತೆನೆ
ಹೊರಬರಲು ತಡೆಯಾಗುತ್ತದೆ. ಇಂತಹ ತೆನೆಗಳು ಹೊರಬಂದರೂ ಕಾಳುಗಳು ಕಪ್ಪಾಗಿ ಜೊಳ್ಳಾಗಿರುತ್ತವೆ.
ಹತೋಟಿ P್ರವ Àುಗಳು
· ಬಿತ್ತನೆಗೆ ರೋಗ ರಹಿತ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
· ರೋಗದ ಹತೋಟಿಗೆ 18 ಗ್ರಾಂ. ಕಾರ್ಬೆಂಡೆಜಿಮ್‍ನ್ನು 18 ಲೀ. ನೀರಿನಲ್ಲಿ ಬೆರಸಿ ತೆನೆ ಹೊರಬರುವ ಸಮಯದಲ್ಲಿ ಒಂದು ಸಾರಿ ಮತ್ತು
ಹತ್ತು ದಿನಗಳ ನಂತರ ಪುನಃ ಸಿಂಪಡಿಸಬೇಕು.
7. ಹುಸಿ ಕಾಡಿಗೆ ರೋಗ
ಯೂಸ್ಟಿಲಾಜಿನಾಯಡಿಯಂ ವೈರೆನ್ಸ್ ಎಂಬ ಶಿಲೀಂಧ್ರದಿಂದ ಬರುವ ಈ ರೋಗವು ತೆನೆಯಲ್ಲಿ ಕಾಳುಗಳು ಉತ್ಪತ್ತಿಯಾಗುವ ಬದಲು
ಹಳದಿ ಮಿಶ್ರಿತ ಹಸಿರು ಅಥವಾ ಕಪ್ಪು ಮಿಶ್ರಿತ ಹಸಿರು ಬಣ್ಣದ ವೆಲ್ವೆಟ್ ಮಾದರಿಯ ಮಣಿಗಳ ಹಾಗೇ ಪರಿವರ್ತನೆಗೊಳ್ಳುತ್ತವೆ. ಇಂತಹ ಮಣಿಗಳು
ಮೊದಲು ಸಣ್ಣದಾಗಿದ್ದು ಕ್ರಮೇಣ ದೊಡ್ಡದಾಗಿ ಬೆಳೆದು ಮಣಿಯ ಮೇಲ್ಭಾಗದಲ್ಲಿರುವ ತೆಳುವಾದ ಪಾರದರ್ಶಕ ಕವಚವು ಒಡೆಯುತ್ತದೆ.
ಪ್ರಾರಂಭದಲ್ಲಿ ಹಳದಿ ಬಣ್ಣವಿದ್ದ ಮಣಿ ಅನಂತರ ಹಸಿರಾಗಿ ಕೊನೆಗೆ ಕಪ್ಪಾಗುತ್ತವೆ.
ಹತೋಟಿ ಕ್ರಮಗಳು
· gೂÉ ೀU À ಮುಕ್ತ ತಾಕಿನಿಂದ ಬಿತ್ತನೆ ಬೀಜವನ್ನು ಸಂU್ರಹಿÀ ಸಿ ಬಿತ್ತನೆಗೆ ಬಳಸಬೇಕು.
· ಎಕರೆಗೆ ಬೇಕಾದ 25 ರಿಂದ 30 ಕಿ.ಗ್ರಾಂ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ (ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 4 ಗ್ರಾಂ)
ಎಂಬ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಸಸಿ ಮಡಿಗೆ ಉಪಯೋಗಿಸಬೇಕು.
· ಆಶ್ರಯದಾತ ಕಳೆಗಳನ್ನು ನಿರ್ಮೂಲನೆ ಮಾಡಬೇಕು.
· ಹೆಕ್ಸಾಕೋನೋಜೋಲ್ 1 ಮಿ.ಲೀ ಅಥವಾ 1 ಗ್ರಾಂ. ಕಾರ್ಬೆಂಡೆಜಿಮ್ ಪ್ರತೀ ಲೀಟರ್ ನೀರಿಗೆ ಬೆರೆಸಿ ಹೂವಾಡುವ ಹಂತಕ್ಕೆ ಮುನ್ನ,
ಹೂವಾಡುವ ಮತ್ತು ಕಾಳು ಕಟ್ಟುವ ದಿನಗಳಲ್ಲಿ ಹೀಗೆ ಮೂರು ಬಾರಿ ಸಿಂಪಡಿಸಬೇಕು.
8. ದುಂಡಾಣು ಎಲೆ ಒಣಗುವ ರೋಗ
ಝಂತೋಮೊನಾಸ್ ಒರೈಜೆ ಎಂಬ ದುಂಡಾಣುವಿನಿಂದ ಬರುವ ಈ ರೋಗದ ಮುಖ್ಯ ಲಕ್ಷಣಗಳೆಂದರೆ ಮುಖ್ಯವಾಗಿ ಎಲೆಗಳ ತುದಿ
ಮತ್ತು ಎಲೆಗಳ ಅಂಚಿನಲ್ಲಿ ಸುಮಾರು 5 ರಿಂದ 10 ಮಿ. ಮೀ. ಉದ್ದವುಳ್ಳ ಹಸಿರು ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ರೋಗವು
ಹೆಚ್ಚಾದಂತೆಲ್ಲ ಈ ಚುಕ್ಕೆಗಳು ಗುಂಪಾಗಿ ಸೇರಿ ಮಾಸಲು ಹಳದಿ ಬಣ್ಣಕ್ಕೆ ತಿರುಗಿ ದೊಡ್ಡದಾಗುತ್ತವೆ. ನಂತರ ಚುಕ್ಕೆಗಳು ಕಪ್ಪು ಬಣ್ಣಕ್ಕೆ ತಿರುಗಿ ತೆನೆಯ
ಅಂಚಿನ ಗರಿಗಳು ಒಣಗಿದಂತಾಗಿ ತುದಿ ಹೆಡೆಯಂತೆ ಬಾಗಿರುತ್ತವೆ.
ಹತೋಟಿ P್ರವ Àುಗಳು
· ಬಿತ್ತನೆಯ ಬೀಜಗಳನ್ನು 8.75 ಗ್ರಾಂ. ಸ್ಟ್ರೆಪೆÇ್ಟೀಸೈಕ್ಲಿನ್ ಸಲ್ಫೇಟ್ ಅಥವಾ ಅಗ್ರಿಮೈಸಿನ್ – 100 ನ್ನು 36 ಲೀಟರ್ ನೀರಿನಲ್ಲಿ ಕರಗಿಸಿ 25
ಕಿ.ಗ್ರಾಂ ಬಿತ್ತನೆ ಬೀಜಗಳನ್ನು 24 ಗಂಟೆಗಳ ಕಾಲ ನೆನಸಿ, ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು.
· ಮುಖ್ಯ ಗದ್ದೆಯಲ್ಲಿ ಈ ರೋಗ ಕಂಡುಬಂದಲ್ಲಿ 0.5 ಗ್ರಾಂ ಸ್ಟ್ರೆಪೆÇ್ಟೀಸೈಕ್ಲಿನ್‍ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕೊಯ್ಲು ಮತ್ತು ಇಳುವರಿ
ಶೇ. 90 ರಷ್ಟು ಕಾಳು ಮಾಗಿದೊಡನೆ ತೆನೆಯ ಕೆಳಭಾಗದ 3 ರಿಂದ 4 ಕಾಳುಗಳು ಇನ್ನು ಹಸಿರಾಗಿರುವಾಗ ಕೊಯ್ಲನ್ನು ಮಾಡಬೇಕು.
ನಂತರ ಕಾಳುಗಳಲ್ಲಿ ಶೇ. 15 ತೇವಾಂಶವಿರುವ ಹಾಗೆ ಭತ್ತವನ್ನು ಬಿಸಿಲಿನಲ್ಲಿ 3 ರಿಂದ 4 ಘಂಟೆಗಳ ಕಾಲ ಒಣಗಿ ಚೀಲಕ್ಕೆ ತುಂಬಬೇಕು. 4 ರಿಂದ 5
ಘಂಟೆಗಳಿಗಿಂತ ಹೆಚ್ಚು ಕಾಲ ಬಿಸಿಲಿನಲ್ಲಿ ಒಣಗಿಸಿದರೆ ಅಕ್ಕಿ ನುಚ್ಚಾಗುತ್ತದೆ. ಇದರಿಂದ ತಳಿಗನುಗುಣವಾಗಿ ಎಕರೆಗೆ 20 ರಿಂದ 25 ಕ್ವಿಂಟಾಲ್ ಭತ್ತದ
ಇಳುವರಿಯನ್ನು ಪಡೆಯಬಹುದಾಗಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments