ಶುಂಠಿ Ginger

ಶುಂಠಿ

ಶುಂಠಿ (ಜಿಂಜಿಬರ್ ಆಪಿಸಿನೇಲ್) (ಕುಟುಂಬ: ಜಿಂಜಿಬರೆಸಿ)ಯು ಬಹುವಾರ್ಷಿಕ ಮೂಲಿಕೆ, ಇದರ ಬೇರು ಕಾಂಡಗಳನ್ನು ಸಂಬಾರವಾಗಿ ಮತ್ತು ಔµಧೀಯ ಗುಣಗಳಿಗಾಗಿ ಉಪಯೋಗಿಸುತ್ತಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಹವಾಗುಣ ಮತ್ತು ಮಣ್ಣು: ಶುಂಠಿಯು ಬೆಚ್ಚನೆ ಮತ್ತು ಆಧ್ರ್ರ ಹವಾಗುಣವನ್ನು ಬಯಸುತ್ತದೆ. ಇದನ್ನು ಸಮುದ್ರ ಮಟ್ಟದಿಂದ 1500 ಮೀಟರ್ ಎತ್ತರದ ಪ್ರದೇಶಗಳವರೆಗೂ ಬೇಸಾಯ ಮಾಡಬಹುದು. ಈ ಬೆಳೆಯನ್ನು ಮಳೆಯಾಧಾರಿತ ಮತ್ತು ನೀರಾವರಿ ಪ್ರದೇಶಗಳಲ್ಲಿ ಬೆಳೆಯಬಹುದು.

ಸುಧಾರಿತ ಶುಂಠಿ ತಳಿಗಳು

ತಳಿ ಹಸಿ ಸರಾಸರಿ ಟನ್ ಬೆಳೆಕಾಲ ದಿನ ಒಣ ಇಳುವರಿ (%) ನಾರು
(%) ಒಲಿಯೋರೆಸಿನ್ (%) ಎಣ್ಣೆ
(%)
ಐ.ಐ.ಎಸ್ ಆರ್ ವರದ 22.6 200 20.7 4.5 6.7 1.8
ಸುಪ್ರಭಾ 16.6 229 20.5 4.4 8.9 1.9
ಸುರುಚಿ 11.6 218 23.5 3.8 10.0 2.0
ಸುರವಿ 17.5 225 23.5 4.0 10.2 2.1
ಹಿಮಗಿರಿ 13.5 230 20.6 6.4 4.3 1.6
ಐ.ಐ,ಎಸ್.ಆರ್ ಮಹಿಮ 23.2 200 23.0 3.26 4.48 1.72
ಐ.ಐ.ಎಸ್.ಆರ್ ರಜೀತ 22.4 200 19.0 4.0 6.3 2.36

ಬಿತ್ತನೆ ಸಮಯ: ಭಾರತದ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಮಳೆ ಪ್ರಾರಂಭವಾದ ಮೇ ತಿಂಗಳ ಒಂದನೇ ವಾರ ಬಿತ್ತನೆಗೆ ಉತ್ತಮ ಕಾಲ. ನೀರಾವರಿ ಪ್ರದೇಶಗಳಲ್ಲಿ ಫೆಬ್ರವರಿ ಎರಡನೇ ವಾರ ಮತ್ತು ಮಾರ್ಚ್ ತಿಂಗಳ ಒಂದನೇ ವಾರ ಉತ್ತಮ.
ಭೂಮಿ ಸಿದ್ಧತೆ: ಬೇಸಿಗೆಯಲ್ಲಿ ಬೀಳುವ ಪ್ರಾರಂಭಿಕ ಮಳೆಗೆ ಭೂಮಿಯನ್ನು ಸಿದ್ದಪಡಿಸುವುದನ್ನು ಪ್ರಾರಂಭಿಸಿ ಸರಿ ಸುಮಾರು 4 ರಿಂದ 5 ಬಾರಿ ಭೂಮಿಯನ್ನು ಉಳುಮೆ ಮಾಡಿ ಹದಕ್ಕೆ ತರುವುದು. ಭೂಮಿ ಸಿದ್ದಪಡಿಸಿದ ನಂತರ, 1 ಮೀಟರ್ ಅಗಲ, 15 ಸೆಂ.ಮೀ ಎತ್ತರ ಮತ್ತು ಅನುಕೂಲಕ್ಕೆ ತಕ್ಕಂತೆ ಉದ್ದದ ಮಡಿಗಳನ್ನು 50 ಸೆಂ.ಮೀ ಅಂತರ ಬಿಟ್ಟು ಮಾಡಬೇಕು.
ನೆಡುವ ಕ್ರಮ: ಶುಂಠಿಯ ಸಸ್ಯ ಅಭಿವೃದ್ಧಿಯನ್ನು ಕತ್ತರಿಸಿ ತೆಗೆದ ಬೇರು ಕಾಂಡಗಳ ಭಾಗದಿಂದ ಮಾಡುತ್ತಾರೆ. ಎಚ್ಚರಿಕೆಯಿಂದ, ಸುರಕ್ಷಿತವಾಗಿ ಶೇಖರಿಸಿರುವ ಬೇರು ಕಾಂಡಗಳನ್ನು ಸಣ್ಣ ತುಂಡುಗಳಾಗಿ 2.5-5.0 ಸೆಂ.ಮೀ ಉದ್ದ, 20-25 ಗ್ರಾಂ ತೂಕ, ಕನಿಷ್ಟ ಒಂದು ಅಥವಾ ಎರಡು ಗೆಣ್ಣು ಮೊಗ್ಗು ಕತ್ತರಿಸಿ ಉಪಯೋಗಿಸಬೇಕು. ಅಯ್ಕೆ ಮಾಡಿದ ಬೇರು ಕಾಂಡಗಳನ್ನು 30 ನಿಮಿಷಗಳ ಕಾಲ ಶೇಕಡಾ 0.3ರ ಮ್ಯಾಂಕೊಜೆಬ್ ದ್ರಾವಣದಲ್ಲಿ (3 ಗ್ರಾಂ/ಲೀಟರ್ ನೀರು) ಅದ್ದಿ ತೆಗೆದು ನೆರಳಿನಲ್ಲಿ 3-4 ಗಂಟೆ ಆರಿಸಿ, 20-25 ಸೆಂ.ಮೀ ಅಂತರದ ಸಾಲುಗಳಲ್ಲಿ, 20-25 ಸೆಂ.ಮೀ ಅಂತರದಲ್ಲಿ ಬಿತ್ತನೆ ಮಾಡಬೇಕು.

ಗೊಬ್ಬರ ನಿರ್ವಹಣೆ: ಬಿತ್ತನೆ ಸಮಯದಲ್ಲಿ 25-30 ಟನ್ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಹೆಕ್ಟೇರ್ ಮಡಿಗಳಿಗೆ ಎರಚಿ ಅಥವಾ ಬಿತ್ತನೆ ಮಾಡುವಾಗ ಗುಂಡಿಗಳಿಗೆ ಹಾಕುವುದು. ಎರಡು ಟನ್ ಬೇವಿನ ಹಿಂಡಿಯನ್ನು ಶುಂಠಿ ಬಿತ್ತನೆ ಮಾಡುವಾಗ ಹಾಕಿದರೆ ಮೆದು ಕೊಳೆರೋಗ ಮತ್ತು ಬೇರುಗಂಟು ಹುಳು ಕಡಿಮೆಯಾಗಿ ಇಳುವರಿ ಉತ್ತಮವಾಗಿರುತ್ತದೆ.
ಶುಂಠಿ ಬೆಳೆಗೆ ಶಿಫಾರಸ್ಸು ಮಾಡಿರುವ ಪೋಷಾಕಾಂಶಗಳ ಪ್ರಮಾಣ ಪ್ರತಿ ಹೆಕ್ಟೆರಿಗೆ 75 ಕಿ.ಗ್ರಾಂ ಸಾರಜನಕ, 75 ಕಿ.ಗ್ರಾಂ ರಂಜಕ ಮತ್ತು 75 ಕಿ.ಗ್ರಾಂ ಪೊಟ್ಯಾಸ್. ಈ ಗೊಬ್ಬರವನ್ನು 3 ಬಾರಿ ಕೊಡಬೇಕು. ಪ್ರತಿ ಬಾರಿ ಗೊಬ್ಬರ ಕೊಟ್ಟ ಮಡಿಗೆ ಮಣ್ಣು ಏರಿಸಬೇಕು. ಸತುವಿನ ಅಂಶ ಕಡಿಮೆ ಇರುವ ಮಣ್ಣಿಗೆ 6 ಕಿ.ಗ್ರಾಂ ಸತುವನ್ನು ಪ್ರತಿ ಹೆಕ್ಟೆರಿಗೆ (30ಕಿ.ಗ್ರಾಂ ಸತುವಿನ ಸಲ್ಪೇಟ್ ಪ್ರತಿ ಹೆಕ್ಟೇರಿಗೆ) ಕೊಟ್ಟರೆ ಇಳುವರಿ ಜಾಸ್ತಿಯಾಗುತ್ತದೆ.
ಶುಂಠಿಗೆ ಕೊಡಬೇಕಾದ ರಾಸಾಯನಿಕ ಗೊಬ್ಬರ ಪ್ರತಿ ಹೆಕ್ಟೇರಿಗೆ
ಪೊಷಕಾಂಶ ವಸ್ತುಗಳು ಬಳಕೆಯ ಪ್ರಮಾಣ (ಕಿ.ಗ್ರಾಂ/ಹೆಕ್ಟೇರಿಗೆ)
ಬಿತ್ತನೆ ಸಮಯ 40ದಿನಗಳ ನಂತರ 90 ದಿನಗಳ ನಂತರ
ಸಾರಜನಕ – 37.5 37.5
ರಂಜಕ 50
ಪೊಟ್ಯಾಷಿಯಂ 25 – 25
ಸಾವಯವ ಗೊಬ್ಬರ 25 ಟನ್ – –
ಬೇವಿನ ಹಿಂಡಿ 2 ಟನ್ – –

ಹೊದಿಕೆ: ಶುಂಠಿ ಬೆಳೆಯ ಮಡಿಗಳಿಗೆ ಮಳೆಯಿಂದ ಮಣ್ಣಿನ ಕೊಚ್ಚಣೆಯನ್ನು ತಡೆಯಲು ಹಸಿರೆಲೆಗಳಿಂದ ಅಥವಾ ಸಾವಯವ ತಾಜ್ಯ ವಸ್ತುಗಳಿಂದ ಹೊದಿಕೆ ಕೊಡುವುದು ಅವಶ್ಯಕ.

ಬೆಳೆ ಪರಿವರ್ತನೆ ಮತ್ತು ಮಿಶ್ರ ಬೆಳೆ ಬೇಸಾಯ: ಶುಂಠಿ ಬೆಳೆದ ನಂತರ ಬೇರೆ ಬೆಳೆ ಬೆಳೆಯುವುದು ಸಾಮಾನ್ಯ ಪದ್ಧತಿ. ಶುಂಠಿಯ ನಂತರ ಮರಗೆಣಸು, ರಾಗಿ, ಭತ್ತ, ಜೋಳ ಮತ್ತು ತರಕಾರಿ ಬೆಳೆಯುತ್ತಾರೆ. ಕರ್ನಾಟಕದಲ್ಲಿ ಶುಂಠಿಯ ಜೊತೆ ರಾಗಿ, ತೊಗರಿ ಮತ್ತು ಅರಳನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಶುಂಠಿಯನ್ನು ಮಿಶ್ರ ಬೆಳೆಯಾಗಿ ತೆಂಗು, ಅಡಿಕೆ, ಕಾಫಿ ಮತ್ತು ಕಿತ್ತಳೆಯಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ಬೆಳೆಯುತ್ತಾರೆ. ಆದರೆ ಶುಂಠಿಯ ನಂತರ ಟೊಮೆಟೋ, ಆಲುಗಡ್ಡೆ, ಮೆಣಸು, ಬದನೆ ಇತ್ಯಾದಿ ಬೆಳೆಯನ್ನು ಬೆಳೆಯಬಾರದು ಏಕೆಂದರೆ ರೆಲಸ್ಟೋನಿಯ ಸೊಲನೇಸಿಯರಾಮ್ ಬ್ಯಾಕ್ಟೀರಿಯಾ ಬದುಕಿಕೊಳ್ಳುತ್ತದೆ.

ಸಸ್ಯ ಸಂರಕ್ಷಣೆ
ರೋಗಗಳು: ಮೆದು (ಬೇರುಕಾಂಡ) ಕೊಳೆರೋಗ: ಮೆದು ಕೊಳೆರೋಗವು ತೀವ್ರ ಸ್ವರೂಪದಲ್ಲಿ ಶುಂಠಿಯ ಬೇರು ಕಾಂಡಕ್ಕೆ ಹಾನಿ ಮಾಡುವ ರೋಗ. ಈ ರೋಗವು ಮಣ್ಣಿನಿಂದ ಅಥವಾ ರೋಗ ತಗುಲಿದ ಬೀಜದ ಗೆಡ್ಡೆಯಿಂದ ಬರುತ್ತದೆ. ಈ ರೋಗವು ಪೈಥಿಯಂ ಅಫನಿಡೆರ್ಮಾಟಮ್, ಪೈಥಿಯಂ ವಕ್ಸಾನ್, ಮತ್ತು ಪೈಥಿಯಂ ಮಿರಿಟೋಲಮ್ ಶೀಲೀಂಧ್ರ ರೋಗಾಣುಗಳಿಂದ ಬರುತ್ತದೆ. ರೋಗದ ಬಾಧೆಗೊಳಗಾದ ಸಸ್ಯಗಳ ಹೊಸ ಎಲೆಗಳು ತೆಳು ಹಸಿರು ಬಣ್ಣಕ್ಕೆ ತಿರುಗಿ ಎಲೆಗಳ ತುದಿಗಳಿಂದ ಪ್ರಾರಂಭವಾಗಿ ಅಂಚುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಂತರ ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ ಜೋಲು ಬಿದ್ದು ಬುಡಭಾಗದಲ್ಲಿ ನಿಯಣತ್ರಣ ಕಳಚಿ ಬಿದ್ದು ಬಿಡುತ್ತದೆ. ಸೊರಗಿ ಒಣಗುತ್ತವೆ. ಬೇರು ಕಾಂಡಗಳನ್ನು ಕಿತ್ತಮೇಲೆ ಶೇ 0.3ರ ಮ್ಯಾಂಕೊಜೆಬ್ (3 ಗ್ರಾಂ ಪ್ರತಿ ಲೀಟರ್‍ಗೆ) 30 ನಿಮಿಷಗಳ ಕಾಲ ಅದ್ದಿ ತೆಗೆದು ಗಾಳಿಯಾಡುವ ಕೊಠಡಿಯಲ್ಲಿ 15-30 ದಿನ ಶೇಖರಣೆ ಮಾಡುವುದು. ಇದೇ ದ್ರಾವಣದಲ್ಲಿ ಬಿತ್ತನೆ ಮಾಡುವಾಗ ಕೂಡ ಸಹ 30 ನಿಮಿಷ ಮುಳುಗಿಸಿ ತೆಗೆಯುವುದು. ಶುಂಠಿ ಬೆಳೆಯಲು ನೀರು ಚೆನ್ನಾಗಿ ಬಸಿದು ಹೋಗುವ ಸ್ಥಳವನ್ನು ಆಯ್ಕೆ ಮಾಡುವುದರಿಂದ ಈ ರೋಗವನ್ನು ಸ್ವಲ್ಪ ಹತೋಟಿ ಮಾಡಬಹುದು. ನೀರು ನಿಲ್ಲುವ ಪ್ರದೇಶದಲ್ಲಿ ಈ ರೋಗ ಜಾಸ್ತಿ ಬರುತ್ತದೆ. ಈ ರೋಗವು ಬೀಜದಿಂದ ಸಹ ಬರುವುದರಿಂದ ರೋಗ ಮುಕ್ತ ತೋಟದಿಂದ ಬೀಜದ ಆಯ್ಕೆ ಅತಿ ಮುಖ್ಯ. ಪ್ರತಿ ಮಡಿಗೆ 1 ಕಿ.ಗ್ರಾಂ ಬೇವಿನ ಹಿಂಡಿ ಮತ್ತು ಟೈಕೋಡರ್ಮ್ ಹಾರಜಿಯಾನಮ್ ಹಾಕುವುದರಿಂದ ಈ ರೋಗವನ್ನು ಕಡಿಮೆ ಮಾಡಬಹುದು. ರೋಗ ತೋಟದಲ್ಲಿ ಕಂಡು ಬಂದರೆ ರೋಗ ತಗುಲಿದ ಗೆಡ್ಡೆಗಳನ್ನು ಕಿತ್ತು ತೆಗೆದು, ಆ ಸ್ಥಳವನ್ನು ಶೇ 0.3ರ ಮ್ಯಾಂಕೊಜೆಬ್ ದ್ರಾವಣದಿಂದ ನೆನೆಸುವುದರಿಂದ ರೋಗ ಹರಡುವುದನ್ನು ತಡೆಯಬಹುದು.
ಬ್ಯಾಕ್ಟೀರಿಯಾ ಸೊರಗು ರೋಗ: ಈ ರೋಗವು ಸುಡೊಮೋನಾಸ್ ಸೊಲನೇಸಿಯಾರಮ್ (ಬೈಯವಾರ್-3) ಎಂಬ ನಂಜಾಣು (ಬ್ಯಾಕ್ಟೀರಿಯಾ) ರೋಗಾಣುವಿನಿಂದ ಬರುತ್ತದೆ. ಈ ರೋಗಾಣುಗಳು ಮಣ್ಣು ಮತ್ತು ಬಿತ್ತನೆ ಬೀಜದಿಂದ ಬರುತ್ತವೆ. ರೋಗ ತಗುಲಿದ ಗಿಡದ ಯಾವುದೇ ಭಾಗವನ್ನು ಕತ್ತರಿಸಿ ನೀರು ತುಂಬಿದ ಗಾಜಿನ ಬೀಕರ್‍ನಲ್ಲಿರಿಸಿದರೆ ಕತ್ತರಿಸಿದ ಭಾಗದಿಂದ ಬಿಳಿ ಬಣ್ಣದ ಒಸರುವಿಕೆ ಗೋಚರಿಸುತ್ತದೆ. ಮೆದು ಕೊಳೆರೋಗದ ನಿಯಂತ್ರಣಕ್ಕೆ ಸೂಕ್ತವಾದ ಬೇಸಾಯಕ್ರಮಗಳು ಈ ರೋಗದ ನಿಯಂತ್ರಣಕ್ಕೂ ಅನ್ವಯವಾಗುತ್ತದೆ. ಬೀಜ ಶುಂಠಿಯನ್ನು ರೋಗ ಮುಕ್ತ ತೋಟದಿಂದ ತರುವುದೇ ಸೂಕ್ತ. ಈ ರೋಗ ನಿಯಂತ್ರಣಕ್ಕೆ ಏಕೈಕ ಪ್ರಮುಖ ಹೆಜ್ಜೆ. ಬೀಜ ಶುಂಠಿಯನ್ನು 200 ಪಿಪಿಎಂ ಸಾಂದ್ರತೆಯ ಸ್ಟ್ರೆಪ್ಲೊಸೈಕ್ಲಿನ್ ದ್ರಾವಣದಲ್ಲಿ 30 ನಿಮಿಷಗಳ ಕಾಲ ಉಪಚರಿಸಿ, ನೆರಳಿನಲ್ಲಿ ಒಣಗಿಸಿ ನಂತರ ನಾಟಿ ಮಾಡುವುದು. ರೋಗ ಕಂಡುಬಂದ ತಕ್ಷಣ ಎಲ್ಲಾ ಮಡಿಗಳನ್ನು ಶೇ 1ರ ಬೋರ್ಡೋ ಮಿಶ್ರಣ ಅಥವಾ ಶೇ 0.2ರ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಲ್ಲಿ ನೆನೆಸುವುದು.

ಕಾಂಡಕೊರಕ: ಶುಂಠಿ ಬೆಳೆಯನ್ನು ಬಾಧಿಸುವ ಕೀಟಗಳಲ್ಲಿ ಕಾಂಡಕೊರಕ (ಕೊನೊಗೆಥಿಸ್ ಪುಂಕ್ಟಿ ಫೆರಾಸಿಸ್) ಪ್ರಧಾನವಾಗಿದೆ. ಜುಲೈ-ಅಕ್ಟೋಬರ್ ತಿಂಗಳಲ್ಲಿ 21ದಿನಗಳ ಅಂತರದಲ್ಲಿ ಶೇ 0.1ರ ಮೆಲಾಥಿಯಾನ್ ಸಿಂಪಡಿಸುವುದರಿಂದ ಕಾಂಡಕೊರಕವನ್ನು ಹತೋಟಿ ಮಾಡಬಹುದು.

ಬೇರು ಕಾಂಡ ಶಲ್ಕ ಕೀಟ: ಬೇರು ಕಾಂಡ ಶಲ್ಕ ಕೀಟ (ಅಸ್ಪೆಯಿಡಿಯೆಲ್ಲಾ ಹಾರ್ಟಿ)ವು ಜಮೀನಿನಲ್ಲಿ ಬೇರುಕಾಂಡಗಳನ್ನು ದಾಳಿಮಾಡಿ ನಂತರ ಸಂಗ್ರಹಿಸಿದ ಬೀಜ ಶುಂಠಿಯನ್ನು ಅಕ್ರಮಿಸುತ್ತವೆ. ಈ ಕೀಟವು ಸಸ್ಯದ ರಸವನ್ನು ಹೀರುವುದರಿಂದ ಇದರ ಪೀಡನೆಯು ಪರಿಣಾಮವಾಗಿ ಮೊಗ್ಗುಗಳು ಸುರಟಿಕೊಂಡು ಬೇರು ಕಾಂಡಗಳ ಚಿಗುರುವಿಕೆಯ ಮೇಲೆ ಪರಿಣಾಮ ಬೀರುತ್ತವೆ. ಬಿತ್ತನೆಗೆ ಬಳಕೆ ಮಾಡುವ ಬೇರುಕಾಂಡವನ್ನು ಶೇಖರಣೆಗೂ ಮತ್ತು ನಾಟಿಗೂ ಮೊದಲು ಎರಡು ಬಾರಿ ಶೇ 0.075ರ ಕ್ವಿನಾಲ್‍ಪಾಸ್ ದ್ರಾವಣದಲ್ಲಿ 20-30 ನಿಮಿಷ ಅದ್ದಿ ತೆಗೆಯುವುದರಿಂದ ಹತೋಟಿ ಮಾಡಬಹುದು. ಈ ಕೀಟ ಭಾಧೆಗೆ ಒಳಗಾಗಿರುವ ಬೀಜ ಬಿತ್ತನೆ ಕಾಂಡಗಳನ್ನು ಶೇಖರಣೆ ಮೊದಲು ತೆಗೆಯುವುದು ಸೂಕ್ತ.

ಕೊಯ್ಲು ಮತ್ತು ಸಂಸ್ಕರಣೆ: ಶುಂಠಿಯ ಬೀಜ ಭಿತ್ತಿದ ಸುಮಾರು 8 ತಿಂಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಮತ್ತು ತುದಿಯಿಂದ ಒಣಗಲು ಪ್ರಾರಂಭಿಸಿದಾಗ ಬೆಳೆಯನ್ನು ಕೊಯ್ಲು ಮಾಡಬಹುದು. ಸಸ್ಯದ ಗೆಡ್ಡೆಗಳನ್ನು ಗುದ್ದಲಿ, ಸನಿಕೆ ಅಥವಾ ಇತರ ಆಯುಧ ಬಳಕೆ ಮಾಡಿ ಭೂಮಿಯಿಂದ ಹೊರತೆಗೆದು ಒಂದು ಕಡೆ ಸಂಗ್ರಹಿಸುವುದು. ಬೇರು ಗಡ್ಡೆಗಳಿಗೆ ಅಂಟಿರುವ ಮಣ್ಣು ಮತ್ತು ಇತರ ವಸ್ತುಗಳನ್ನು ಬೇರ್ಪಡಿಸುವುದು.

 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments