ಹೂವಿನ ಪರಿಚಯ Flower Introduction

ಹೂವಿನ ಪರಿಚಯ

ಹೂವಿನ ಬೇಸಾಯ ಮತ್ತು ಅಲಂಕಾರಿಕ ಹೂತೋಟ, ತೋಟಗಾರಿಕೆಯ ಒಂದು ಭಾಗವಾಗಿದೆ. ಅಲಂಕಾರಕ್ಕಾಗಿ ಹೂವಿನ ಗಿಡಗಳನ್ನು ಬೆಳೆಸುವುದು, ಹೂತೋಟ, ಮನೆ, ಉದ್ಯಾನವನವನ್ನು ಸುಂದರವಾಗಿಸುವುದರ ಬಗ್ಗೆ ಅಧ್ಯಯನ ನಡೆಸುವುದನ್ನು ಒಳಗೊಂಡಿದೆ. ಹೂವಿನ ಮತ್ತು ಅಲಂಕಾರಿಕ ಸಸಿಗಳನ್ನು ಕೇವಲ ಅಂದಗೊಳಿಸಲು ಮಾತ್ರವಲ್ಲದೆ ದೇಶಿಯ ಮಾರಾಟ ಮಾಡಲು ಮತ್ತು ರಫ್ತಿಗಾಗಿ ಬೆಳೆಯಲ್ಪಡುತ್ತದೆ. ಕೆಲವೊಂದು ಹೂಗಳನ್ನು ಪರಿಮಳ, ಸುಗಂಧದ ಎಣ್ಣೆ ಮತ್ತು ಪನ್ನೀರಿಗಾಗಿ ಬಳಸುತ್ತಿದ್ದಾರೆ.
ಭಾರತದಲ್ಲಿ ವೇದಗಳ ಕಾಲದಲ್ಲೂ ಹೂವಿನ ಬೇಸಾಯ ಪ್ರಚಲಿತದಲ್ಲಿತ್ತು. ನಾಗರೀಕತೆಯ ಪ್ರಾರಂಭದಿಂದಲೂ ಹೂವಿನ ಬೇಸಾಯ ಮತ್ತು ಅಲಂಕಾರಿಕ ಸಸಿಗಳ ಪೋಷಣೆ ಮಾನವನೊಂದಿಗೆ ಸಂಬಂಧ ಹೊಂದಿದ್ದು, ಹೂ ಮತ್ತು ಅವುಗಳ ಉಪಯೋಗದ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅನೇಕ ಹೂವಿನ ಗಿಡಗಳು ದೇವಿ ಮತ್ತು ದೇವರಿಗೆ ಸಂಬಂಧಿಸಿದಾಗಿದೆ. ಮುಘಲರು ಕೇಂದ್ರ ಏಷಿಯಾ ಉದ್ಯಾನ ಶೈಲಿಯನ್ನು ಭಾರತದಲ್ಲಿ ಪ್ರಥಮ ಬಾರಿಗೆ ಪರಿಚಯಿಸಿದರು. ಈ ಅವಧಿಯಲ್ಲಿ ಶಾಲಿನಾಸ್, ನಿಯೊಹೆನ್‍ಬಾಗ್, ಪಿಂಜಿ ಉದ್ಯಾನವನವನ್ನು ಯೋಜಿಸಲಾಯಿತು. ದೇಶದಲ್ಲಿ ಹೊಸ ಹೊಸ ಹೂವಿನ ತಳಿಗಳನ್ನು ಆಂಗ್ಲರ ಅವಧಿಯಲ್ಲಿ ಪರಿಚಯಿಸಲಾಯಿತು. ಅನೇಕ ಉದ್ಧೇಶಗಳಿಗಾಗಿ ಹೂಗಳನ್ನು ಮನೆಯ ಹಿತ್ತಲಿನಲ್ಲಿ, ನಿಗದಿತ ಸ್ಥಳದಲ್ಲಿ ಬೆಳೆಸಲಾಗುತ್ತಿತ್ತು. ಹೂಗಳ ಬೇಡಿಕೆ ಹೆಚ್ಚುತ್ತಿದೆ. ಕಳೆದ 10 ವರ್ಷಗಳಲ್ಲಿ ಹೂ ಬೆಳೆಯುವ ಪ್ರದೇಶ ಮತ್ತು ಉತ್ಪಾದನೆಯಲ್ಲಿ ಅತೀಯಾದ ಏರಿಕೆಯಾಗಿದೆ. 1993-94ರಲ್ಲಿ 53,000 ಹೆಕ್ಟೇರ್ ಪ್ರದೇಶದಲ್ಲಿದ್ದ ಹೂವಿನ ಬೇಸಾಯ 2007-08ರಲ್ಲಿ 161 ಸಾವಿರ ಹೆಕ್ಟೇರು ಪ್ರದೇಶಕ್ಕೇರಿತು. ಇದೇ ಸಮಯದಲ್ಲಿ 233 ಸಾವಿರ ಟನ್ನಿನಷ್ಟಿದ್ದ ಬಿಡಿ ಹೂವಿನ ಉತ್ಪಾದನೆ 870 ಸಾವಿರ ಟನ್ನಿಗೇರಿತು. ಕತ್ತರಿಸಿದ ಹೂಗಳ ಉತ್ಪಾದನೆ 555 ಲಕ್ಷದಿಂದ 4342 ಲಕ್ಷಕ್ಕೇರಿತು. ತಮಿಳು ನಾಡು, ಕರ್ನಾಟಕ, ಆಂಧ್ರಪ್ರದೇಶ, ಪಂಜಾಬ್, ಹರಿಯಾಣ, ಪ್ರಮುಖ ಬಿಡಿ ಹೂ ಉತ್ಪಾದಿಸುವ ಮತ್ತು ಪಶ್ಚಿಮ ಬಂಗಾಳ, ಮಹಾರಾಷ್ಟ್ರ,, ಕರ್ನಾಟಕ ಗುಜರಾತ್, ಪ್ರಮುಖ ಕತ್ತರಿಸಿದ ಹೂಗಳನ್ನು ಉತ್ಪಾದಿಸುವ ರಾಜ್ಯಗಳು.
ಹೂವಿನ ಬೇಸಾಯ ಉದ್ಯಮಕ್ಕೆ ಭಾರತದಲ್ಲಿ ಉತ್ತಮ ಭವಿಷ್ಯವಿದೆ. ವಿವಿಧ ವಾಯುಗುಣದ ಪ್ರದೇಶಗಳು ಭಾರತದಲ್ಲಿರುವುದರಿಂದ ಉಷ್ಣವಲಯ, ಅರೆಉಷ್ಣವಲಯ ಮತ್ತು ಸಮಶೀತೋಷ್ಣ ವಲಯದ ಹೆಚ್ಚಿನ ಎಲ್ಲಾ ಹೂಗಳ ಗಿಡಗಳನ್ನು ಬೆಳೆಯಬಹುದು. ಧಾರ್ಮಿಕ ಬಳಕೆಗಾಗಿ ಸಾಂಪ್ರಾದಾಯಕ ಹೂಗಳಿಗೆ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೆಚ್ಚಾಗಿ ಹೆಣ್ಣು ಮಕ್ಕಳು ಸಾಂಪ್ರಾದಾಯಕ ಹೂಗಳ ಬೇಸಾಯ, ಕೊಯ್ಲು ಮತ್ತು ಮಾರಾಟದಲ್ಲಿ ತೊಡಗಿದ್ದಾರೆ. ಹೆಚ್ಚಾಗಿ ಯಾವುದೇ ಆಧುನಿಕ ತಂತ್ರಜ್ಞಾನದ ಅರಿವಿಲ್ಲದೆ ಇಂತಹ ಹೂಗಳನ್ನು ತೆರೆದ ಪರಿಸರದಲ್ಲಿ ಬೆಳೆಸುತ್ತಾರೆ. ಆದುದರಿಂದ ಗುಣಮಟ್ಟ ಮತ್ತು ಇಳುವರಿ ಹವಾಗುಣ ಅವಲಂಬಿತವಾಗಿದ್ದು ವೈವಿದ್ಯಮಯವಾಗಿದೆ. ಇತ್ತೀಚೆಗೆ ದೊಡ್ಡ ವಾಣಿಜ್ಯ ಕಂಪೆನಿಗಳು ಹೂವಿನ ಬೇಸಾಯದಲ್ಲಿ ಹಣ ತೊಡಗಿಸುತ್ತಿವೆ. ಗುಣಮಟ್ಟದ ಹೂಗಳನ್ನು ದೇಶಿಯ ಮಾರುಕಟ್ಟೆ ಮತ್ತು ರಫ್ತಿಗಾಗಿ ಉತ್ಪಾದಿಸುವುದೇ ಇವುಗಳ ಉದ್ಧೇಶ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರಾಮುಖ್ಯತೆ
1. ಅಲಂಕಾರಕ್ಕಾಗಿ
ನಗರ, ಪಟ್ಟಣಗಳನ್ನು ಉತ್ತಮ ವಾತಾವರಣ ಸೃಷ್ಟಿಸಲು ಅಲಂಕರಿಸಬೇಕಾಗುತ್ತದೆ. ಇದು ಜನರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಮರ, ಪೊದರು, ಬೇಲಿ ಇತ್ಯಾದಿ ಅಲಂಕಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

2. ಮನೋರಂಜನೆ
ಉದ್ಯಾನವನದ ಕೊಳ, ಹೂ ತೋಟವನ್ನು ಮನೋರಂಜನೆಗಾಗಿ ಬಳಸುತ್ತಾರೆ. ಉದ್ಯಾನವನ ಮತ್ತು ಹೂತೋಟಗಳಿಂದ ಮರ, ಹುಲ್ಲುಹಾಸು ಮತ್ತು ಇತರ ಗಿಡಗಳನ್ನು ಕಾಪಾಡಬಹುದು.

3. ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ
ಭಾರತದಲ್ಲಿ ಅನೇಕ ಮರಗಿಡಗಳನ್ನು ದೇವರಿಗೆ ಹೋಲಿಸಿದ್ದಾರೆ. ಅನೇಕ ರೀತಿಯ ಹೂಗಳನ್ನು ದೇವಸ್ಥಾನಗಳಲ್ಲಿ ಅಲಂಕಾರಕ್ಕಾಗಿ ಮತ್ತು ಪೂಜೆಗಾಗಿ ಬಳಸುತ್ತಾರೆ.

4. ಆರ್ಥಿಕ ಪ್ರಾಮುಖ್ಯತೆ
ನಮ್ಮ ದೈನಂದಿನ ಬದುಕಿನಲ್ಲಿ ಹೂ ಮತ್ತು ಅಲಂಕಾರಿಕ ಸಸಿಗಳನ್ನು ಬಳಸುತ್ತೇವೆ. ಮತ್ತು ಹೂವಿನ ಬೇಸಾಯ ಉದ್ಯಮವಾಗಿ ಮಾರ್ಪಟ್ಟಿದೆ. ಹೂಗಳನ್ನು ಹೂಮಾಲೆ, ಹೂಗುಚ್ಛ, ಮನೆ, ಮಂಟಪ, ವೇದಿಕೆಯನ್ನು ಅಲಂಕರಿಸಲು ಬಳಸುತ್ತಾರೆ. ಕತ್ತರಿಸಿದ ಹೂಗಳಿಗೆ ದೇಶ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಗುಲಾಬಿ, ಗ್ಲೇಡಿಯೋಲಸ್, ಎಂಥುರಿಯಂ, ಜರ್ಬೆರ, ಮುಂತಾದವು ಪ್ರಮುಖ ಕತ್ತರಿಸಿದ ಹೂಗಳಾಗಿ ಬಳಸಲ್ಪಡುತ್ತವೆ. ಗುಲಾಬಿ ಮತ್ತು ಮಲ್ಲಿಗೆಯ ಹೂವಿನಿಂದ ಅತ್ತರು ಮತ್ತು ಎಣ್ಣೆಯನ್ನು ತೆಗೆಯುತ್ತಾರೆ. ಹೂಗಳಿಗೆ ಔಷಧಿ ಪ್ರಾಮುಖ್ಯತೆ ಇದ್ದ ಕಾರಣ ಸಾಂಪ್ರಾದಾಯಕ ಮತ್ತು ಆಯುರ್ವೇದ ಔಷಧಿ ತಯಾರಿಸಲು ಬಳಸುತ್ತಾರೆ. ಪ್ರದರ್ಶನಕ್ಕಾಗಿಯೂ ಸಹ ಹೂ ಬೆಳೆಯುತ್ತಾರೆ. ಹಲವಾರು ನಗರಗಳಲ್ಲಿ ಪ್ರತೀ ವರ್ಷ ಹೂವಿನ ಪ್ರದರ್ಶನವನ್ನು ನಡೆಸಲಾಗುತ್ತದೆ. ಅನೇಕ ಬೆಳೆಗಾರರು ಮತ್ತು ನರ್ಸರಿಯವರು ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ನಮ್ಮ ದೇಶದಲ್ಲಿ ಅಲಂಕಾರಿಕ ಹೂ ತೋಟಕ್ಕೆ ಇರುವ ಬೇಡಿಕೆ ಹೆಚ್ಚುತ್ತಿದೆ. ನಿಧಾನವಾಗಿ ಹೂವಿನ ಬೇಸಾಯ ಉದ್ಯಮವಾಗಿ ಮಾರ್ಪಟ್ಟು ಮಹಾನಗರದ ಒತ್ತಿನಲ್ಲಿರುವ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಪುರಸಭೆ ಮತ್ತು ನಗರಸಭೆ ಉದ್ಯಾನವನ ನಿರ್ಮಾಣಕ್ಕೆ ಮತ್ತು ಸಾಲುಮರ ನೆಡಲು ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಿವೆ. ಮೈಸೂರಿನ ಬೃಂದಾವನ, ಬೆಂಗಳೂರಿನ ಲಾಲ್‍ಬಾಗ್, ದೆಹಲಿಯ ಮುಘಲ್ ಉದ್ಯಾನವನ, ಆಗ್ರಾದ ತಾಜ್, ಜಯ್‍ಪುರದ ರಾಮನಿವಾಸ ಪಾರ್ಕ್, ದೆಹಲಿಯ ಬುದ್ಧ ಜಯಂತಿ ಪಾರ್ಕ್, ಶ್ರೀನಗರದ ಶಾಲಿಮಾರ್ ಬಾಗ್, ನಿಶಾತ್ ಬಾಗ್ ಮುಂತಾದವು ಹೆಸರುವಾಸಿ ಉದ್ಯಾನವನಗಳು. ಭಾರತದಲ್ಲಿ ಹಲವಾರು ಸಂಘಸಂಸ್ಥೆಗಳು ಉದ್ಯಾನವನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ಹೂ ಅಭಿವೃದ್ಧಿಗಾಗಿ ಪುಷ್ಪ ಬೇಸಾಯ ನಿರ್ದೇಶನಾಲಯವನ್ನು ಸ್ಥಾಪಿಸಿದೆ ಮತ್ತು ಹೂವಿನ ಹಲವಾರು ವಿಷಯದಲ್ಲಿ ಸಂಶೋಧನೆ ನಡೆಸಲು ಂIಅಖP ಇದೆ. ಆರ್ಕಿಡ್‍ನಲ್ಲಿ ಸಂಶೋಧನೆ ನಡೆಸಲು ರಾಷ್ಟ್ರೀಯ ಆರ್ಕಿಡ್ ಸಂಶೋಧನಾ ಸಂಸ್ಥೆ ಇದೆ. ರಾಷ್ಟ್ರೀಯ ತೋಟಗಾರಿಕ ಮಂಡಳಿ, ಭಾರತದ ಅಲಂಕಾರಿಕ ತೋಟಗಾರಿಕ ಸಹಕಾರ ಸಂಘ, ಇಂಡಿಯಾ ರೋಸ್ ಪೌಂಡೇಶನ್, ಭಾರತದ ಗುಲಾಬಿ ಸಹಕಾರ ಸಂಘ, ಭಾರತದ ತೋಟಗಾರಿಕ ಸಹಕಾರ ಸಂಘ ಮುಂತಾದುವುಗಳು ಪುಷ್ಪ ಅಭಿವೃದ್ಧಿಯಲ್ಲಿ ಕಾರ್ಯನಿರತವಾಗಿದೆ.

 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments