ಪಟ್ರಪಂಡ ಮೋಹನ್ ಮುದ್ದಪ್ಪ, ಸಹಕಾರಿಗಳು: ನಾಪೊಕ್ಲು. Napoklu
ಪಟ್ರಪಂಡ ಮೋಹನ್ ಮುದ್ದಪ್ಪನವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಚ್ ಕೂರ್ಗ್ ಮೀಡಿಯಾವು “ ಕೊಡಗು ಸಹಕಾರ ದರ್ಶನ” ಎಂಬ ಕೊಡಗಿನ ಸಹಕಾರ ಕ್ಷೇತ್ರದ ಸಮಗ್ರ ಪರಿಚಯದ ಡಿಜಿಟಲ್ ದಾಖಲಾತಿಯ ಕುರಿತು ಹಿರಿಯ ಸಹಕಾರಿಗಳಾದ ಪಟ್ರಪಂಡ ಮೋಹನ್ ಮುದ್ದಪ್ಪನವರನ್ನು ಸಂದರ್ಶಿಸಿ ಮಾಹಿತಿಯನ್ನು ಕಲೆ ಹಾಕಿತ್ತು. ಆ ಸಂದರ್ಭ ನಮ್ಮೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ಪಟ್ರಪಂಡ ಮೋಹನ್ ಮುದ್ದಪ್ಪನವರ ಮಾತುಗಳನ್ನು ಅವರದೇ ದಾಟಿಯಲ್ಲಿ ಕೇಳೋಣ
“ನಾನು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಮುಖ್ಯ ಪ್ರೇರಣೆಯೆಂದರೆ ಅದು ಈ ಮೊದಲು ಕೊಳಕೇರಿ ಧವಸ ಬಂಢಾರದಲ್ಲಿ 15 ವರ್ಷಗಳಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು. ಅಲ್ಲಿ ನನ್ನ ಕಾರ್ಯಪ್ರವೃತ್ತಿಯನ್ನು ನೋಡಿದ ನಾಪೋಕ್ಲು ನಾಡು ಸಹಕಾರ ಸಂಘದ ಸದಸ್ಯರು ಅವನತಿಯ ಹಂತದಲ್ಲಿದ್ದ ಸಹಕಾರ ಸಂಘವನ್ನು ಅಭಿವೃದ್ಧಿ ಪಥದಲ್ಲಿ ನೀವು ಮುನ್ನಡೆಸಬೇಕೆಂದು ಅಪೇಕ್ಷೆ ಪಟ್ಟರು. ಹಾಗಾಗಿ ಸದಸ್ಯರ ಒತ್ತಾಸೆಯ ಜೊತೆ ನಾನು ಚುಣಾವಣೆಯಲ್ಲಿ ಸ್ಫರ್ಧಿಸಿ ಅಧ್ಯಕ್ಷನಾಗಿ ಆಯ್ಕೆಯಾದೆ.
ಪ್ರಸ್ತುತ ಕಳೆದ 15 ವರ್ಷಗಳಿಂದ ನಾಪೋಕ್ಲು ನಾಡು ಸಹಕಾರ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತದ್ದೇನೆ ಜೊತೆಗೆ ಕಳೆದ 20 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ಬೀಳುವ ಹಂತದಲ್ಲಿದ ಸಂಘದ ವಾಣಿಜ್ಯ ಕಟ್ಟಡವನ್ನು ಕೆಡವಿ ಸುಮಾರು 50 ಲಕ್ಷ ವೆಚ್ಚದಲ್ಲಿ ನೂತನ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ನನ್ನ ಈ ಪ್ರಯತ್ನಕ್ಕೆ ಆಡಳಿತ ಮಂಡಳಿ, ಸದಸ್ಯರು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಸಹಕಾರ ಹೆಚ್ಚಿನದಾಗಿದೆ.
ಪ್ರಸ್ತುತ ನಾಪೋಕ್ಲು ನಾಡು ಸಹಕಾರ ಸಂಘವು ಲಾಭದಲ್ಲಿದ್ದು, ಇದಕ್ಕೆ ಮುಖ್ಯ ಕಾರಣ ನೂತನವಾಗಿ ನಿರ್ಮಿಸಿದ ವಾಣಿಜ್ಯ ಕಟ್ಟಡ ಮಳಿಗೆಗಳನ್ನು ಬಾಡಿಗೆಗೆ ನೀಡಿದ್ದು ಹಾಗೂ ಸಂಘದ ಸ್ವಂತ ವಾಣಿಜ್ಯ ಮಳಿಗೆಯಲ್ಲಿ ಗ್ರಾಹಕರಿಗೆ ಅವಶ್ಯಕತೆಯಿರುವ ವಸ್ತುಗಳಾದ ಬಟ್ಟೆ, ಸ್ಟೀಲ್, ಕೊಡೆ, ಅಲ್ಯೂಮೀನಿಯಂ, ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಮತ್ತು ಸರ್ಕಾರದ ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿರುವುದಾಗಿದೆ.
ನನ್ನ ಮುಂದಿನ ಕ್ರಿಯಾಯೋಜನೆಯೆಂದರೆ ಒಂದು ಸುಸಜ್ಜಿತವಾದ ಗೋದಾಮು ನಿರ್ಮಾಣ, ಹಾಗೂ ಕೃಷಿ ಪರಿಕರಗಳ ಮಾರಾಟ ಮಳಿಗೆ, ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಬ್ಬಿಣ, ಸೀಮೆಂಟ್ ಮುಂತಾದವುಗಳ ಮಾರಾಟ ಮಳಿಗೆ. ಜೊತೆಗೆ ಸಾರ್ವಜನಿಕರಿಗಾಗಿ ಸುಸಜ್ಜಿತ ಸಭಾಂಗಣ ಇದಕ್ಕಾಗಿ 10 ಸೆಂಟ್ ಜಾಗವನ್ನು ಕಾಯ್ದಿರಿಸಲಾಗಿದೆ.
ಮುಂದಿನ ಸಂಘದ ಚುನಾವಣೆಯಲ್ಲಿ ಸ್ವರ್ಧಿಸುವ ಇಚ್ಛೆಯಿದ್ದು, ಅದಕ್ಕೆ ಸದಸ್ಯರ ಒತ್ತಾಸೆಯು ಇದೆ, ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುದು, ತದನಂತರ ಯುವಕರಿಗೆ ಅವಕಾಶವನ್ನು ಕೊಡಲು ತೀರ್ಮಾನಿಸಿದ್ದೇನೆ.
ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತ, ನಿಸ್ವಾರ್ಥ ಸೇವೆ ಇದ್ದರೆ ಸಹಕಾರ ಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಾ ಅಭಿವೃದ್ಧಿಯತ್ತ ಸಾಗಲು ನನ್ನ ಸಲಹೆಯಾಗಿದೆ.
ಸಹಕಾರ ಕ್ಷೇತ್ರದಲ್ಲಿ ಭಾವೀ ಯುವಶಕ್ತಿಯ ಭಾಗವಹಿಸುವಿಕೆ ಇದ್ದು, ಅದು ಹಾಗೇ ಮುಂದುವರೆಯಬೇಕು, ಹೆಚ್ಚು ಹೆಚ್ಚು ಯುವಕರು ಸಹಕಾರ ಸಂಘದ ಸದಸ್ಯರಾಗಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ.
ರಾಜಕೀಯವಾಗಿ ನಾನು ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದೇನೆ. ಸಾಮಾಜಿಕ ಕ್ಷೇತ್ರದಲ್ಲಿ ಲಯನ್ಸ್ ಕ್ಲಬ್ ನಾಪೋಕ್ಲುವಿನ ಸದಸ್ಯನಾಗಿದ್ದೇನೆ. ಜೊತೆಗೆ ಮೂಟೇರಿಯ ಪೊನ್ನಾಡ್ ರೈತ ಉತ್ಪಾದಕ ಸಂಘದ(ಎಫ್.ಪಿ.ಸಿ.ಎಲ್) ಅಧ್ಯಕ್ಷನಾಗಿದ್ದೇನೆ. ಧಾರ್ಮಿಕ ಕ್ಷೇತ್ರದಲ್ಲಿ ಕೊಳಕೇರಿ ಮೂಟೇರಿ ಭಗವತಿ ಉಮಾ ಮಹೇಶ್ವರಿ ಆಡಳಿತ ಮಂಡಳಿಯ ಸದಸ್ಯನಾಗಿದ್ದೇನೆ.
ನನ್ನ ಕುಟುಂಬದ ಬಗ್ಗೆ ತಿಳಿಸುವುದಾದರೆ ನಾನು ಮೂಲತ: ಕೃಷಿ ಕುಟುಂಬಕ್ಕೆ ಸೇರಿದವನು. ತಂದೆ: ದಿ. ಪಟ್ರಪಂಡ ಅಪ್ಪಯ್ಯ, ತಾಯಿ: ಮಾಚಮ್ಮ, ಪತ್ನಿ: ಕಾವೇರಮ್ಮ(ಗೃಹಿಣಿ), ಪುತ್ರ: ಅಯ್ಯಪ್ಪ (ಕೃಷಿಕ, ಉದ್ಯಮಿ) 2ನೇ ಪುತ್ರ ಕಾರ್ಯಪ್ಪ (ಕೃಷಿಕ). ಪ್ರಸ್ತುತ ನಾನು ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯ ಕೋಳಕೇರಿಯ ಮೂಟೇರಿ ಗ್ರಾಮದ ನಿವಾಸಿಯಾಗಿದ್ದೇನೆ.”
ಶ್ರೀಯುತ ಪಟ್ರಪಂಡ ಮೋಹನ್ ಮುದ್ದಪ್ಪನವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 06 – 03 – 2023
Search Coorg Media
Coorg’s Largest Media Network
“ಸರ್ಚ್ ಕೂರ್ಗ್ ಮೀಡಿಯಾ”
ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.
Author Profile
- Coorg's Largest Network
-
"ಸರ್ಚ್ ಕೂರ್ಗ್ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.
www.searchcoorg.com ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
Latest News
ಪೊನ್ನಂಪೇಟೆNovember 30, 2023ಕೊಡಗಿನ ಮಂದ್ ಮಾನಿಗಳನ್ನು ಉಳಿಸಿ ಬೆಳೆಸಲು ಸಂಸದೆ ತೇಜಸ್ವಿನಿ ಗೌಡ ಕರೆ
ಮಡಿಕೇರಿNovember 30, 2023ಮಡಿಕೇರಿ ನಗರದ ವಿವಿಧ ವಾರ್ಡ್ಗಳಿಗೆ ಶಾಸಕ ಡಾ. ಮಂತರ್ ಗೌಡ ಭೇಟಿ
ಕೆದಮುಳ್ಳೂರುNovember 28, 202345 ವರ್ಷದ ಬಳಿಕ ಮುಲ್ಲೈರೀರ ಕುಟುಂಬದ ಮಂದ್ನಲ್ಲಿ ನಡೆದ ಪುತ್ತರಿ ಕೋಲಾಟ
ಪೊನ್ನಂಪೇಟೆNovember 25, 2023ಡಿ-3ರಂದು ಇತಿಹಾಸ ಪ್ರಸಿದ್ಧದ ಮೂರು ನಾಡಿನ “ಕೈಮುಡಿಕೆ” ಪುತ್ತರಿ ಕೋಲ್ ಮಂದ್