ಕಾಂಡಂಡ ಜಯ ಕರುಂಬಯ್ಯ, ಸಹಕಾರಿಗಳು: ನಾಪೋಕ್ಲು. Napoklu

ಕಾಂಡಂಡ ಜಯ ಕರುಂಬಯ್ಯ, ಸಹಕಾರಿಗಳು: ನಾಪೋಕ್ಲು. Napoklu

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಡಂಡ ಜಯ ಕರುಂಬಯ್ಯನವರು  ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವೆಸ್ಟ್‌ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುವ ಮೂಲಕ ಕಾಂಡಂಡ ಜಯ ಕರುಂಬಯ್ಯನವರು ಸರಿ ಸುಮಾರು 15 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಸಮಾಜಮುಖಿ ಕಾರ್ಯವನ್ನು ಮೆಚ್ಚಿ ಪ್ರಶಂಸಿದ  ಗ್ರಾಮದ ಜನತೆಯ ಒತ್ತಾಸೆಯ ಮೇರೆಗೆ ಕಳೆದ 8 ವರ್ಷಗಳಿಂದ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಹಾಗೂ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

“ಸರ್ಚ್‌ ಕೂರ್ಗ್‌ ಮೀಡಿಯಾ” ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕಾಂಡಂಡ ಜಯ ಕರುಂಬಯ್ಯನವರು ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಿದ್ದು, ಸಂಘದಿಂದ  ಏಕರೆಗೆ 60,000/- ದಂತೆ  3 ಲಕ್ಷಗಳವರಗೆ ಶೇಕಡ 0% ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲಾಗುವುದು.  ಗೋದಾಮು ನಿರ್ಮಾಣಕ್ಕೆ ಏಕರೆಗೆ ಶೇಕಡ 3% ಬಡ್ಡಿ ದರದಲ್ಲಿ 60,000/-ದವರಗೆ  ಸಾಲ, ಕಾಂಕ್ರಿಟ್‌ ಕಾಫಿ ಕಣ ನಿರ್ಮಾಣಕ್ಕೆ ಏಕರೆಗೆ ಶೇಕಡ 3% ಬಡ್ಡಿ ದರದಲ್ಲಿ 60,000/-ದವರಗೆ ಗರಿಷ್ಠ 3 ಲಕ್ಷದವರಗೆ ಸಾಲ, ಹನಿ ನೀರಾವರಿಗೆ ಸಾಲ, ಹೊಸ ಕೆರೆ ನಿರ್ಮಾಣಕ್ಕೆ ಶೇಕಡ 6% ಬಡ್ಡಿ ದರದಲ್ಲಿ 60,000/- ವರಗೆ ಸಾಲ, ಕೆರೆ ಹೂಳೆತ್ತಲು ಶೇಕಡ 6% ಬಡ್ಡಿ ದರದಲ್ಲಿ 30,000/- ವರಗೆ ಸಾಲ, ಕೆಸಿಸಿ ಸಾಲ ಪಡೆದಿರುವವರು 25,000/- ಜಾಮೀನು ಸಾಲ ಪಡೆಯಬಹುದು ಹಾಗೆ ಕೆಸಿಸಿ ಸಾಲ ಪಡೆಯದವರು 15,000/- ಜಾಮೀನು ಸಾಲ ಪಡೆಯಬಹುದು. ಪಿಗ್ಮಿ ಆಧಾರಿತ ಸಾಲ, ಗೃಹ ಬಳಕೆ ಉಪಕರಣಗಳಾದ ಯು.ಪಿ.ಎಸ್ ಹಾಗೂ ಸೋಲಾರ್ ಖರೀದಿಗೆ ಸಾಲ, ಆಭರಣ ಸಾಲ, ಶೇಕಡ 9% ಬಡ್ಡಿದರದಲ್ಲಿ ವಾಹನ ಸಾಲ, ಸ್ವಸಹಾಯ ಸಂಘಗಳಿಗೆ ಹಾಗೂ ಜಂಟಿ ಭಾದ್ಯತ ಗುಂಪುಗಳಿಗೆ ಶೇಕಡ 13% ಬಡ್ಡಿದರದಲ್ಲಿ ಸಾಲ, ಸಂಘದ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಆಧುನಿಕ ಅಕ್ಕಿ ಗಿರಣಿ, ಗೊಬ್ಬರ ಮಳಿಗೆಯ ಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ, ಪೈಂಟ್ಸ್‌ ಮಾರಾಟ, ಕಾಫಿ ಕೊಯ್ಯಲು ಹಾಗೂ ಕಾಫಿ ಒಣಗಿಸಲು ಟಾರ್ಪಾಲ್‌ಗಳ ಮಾರಾಟ, ಕ್ರಿಮಿನಾಶಕಗಳ ಮಾರಾಟ, ಮದ್ದು ಗುಂಡುಗಳ ಮಾರಾಟ, ಮೋದಿಕೇರ್‌ ಮಾರಾಟ ಮಳಿಗೆ ಜೆರಾಕ್ಸ್‌, ಇ-ಸ್ಟ್ಯಾಂಪಿಂಗ್ ವ್ಯವಸ್ಥೆ‌, ಮುಂತಾದವುಗಳಿಂದ ಸಹಕಾರ ಸಂಘಕ್ಕೆ ಆದಾಯ ಬಂದಿದೆ. ಹಾಗೆ ಸದಸ್ಯರು ಸಂಘದಿಂದ ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡಿರುವುದರಿಂದ ಸಂಘವು ಲಾಭವನ್ನು ಗಳಿಸಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ತಿಳಿಸಿದರು. ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸದಸ್ಯರಿಗೆ ಡಿವೆಡೆಂಟ್‌ ಶೇಕಡ 13%  ನೀಡಲಾಗುತ್ತಿದೆ. ಎಂದು ಈ ಸಂದರ್ಭದಲ್ಲಿ ಜಯ ಕರುಂಬಯ್ಯನವರು ತಿಳಿಸಿದರು.

ಈ ಹಿಂದೆ ನಾಪೋಕ್ಲು ಭಾಗದ ಜನತೆ ಭತ್ತ ಮಿಲ್‌ ಮಾಡಲು ಮಡಿಕೇರಿ ಅಥವಾ ಮೂರ್ನಾಡಿಗೆ ತೆರಳುತ್ತಿದ್ದರು ಇದರಿಂದ ಜನತೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದದನ್ನು ಮನಗಂಡ ನಮ್ಮ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಆಧುನಿಕ ಅಕ್ಕಿ ಗಿರಣಿಯೊಂದನ್ನು ಬೇತು ಗ್ರಾಮದಲ್ಲಿ ಸ್ಥಾಪಿಸಲಾಯಿತು ಎಂದ ಜಯ ಕರುಂಬಯ್ಯನವರು, ಇದರಿಂದ ನಾಪೋಕ್ಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ ಹಾಗೆ ರೈತರಿಗೆ ಸಂಘದ ವತಿಯಿಂದ ರಿಯಾತಿ ದರದಲ್ಲಿ ಟ್ರಾಕ್ಟರ್ ನ್ನು ಬಾಡಿಗೆ ನೀಡಲಾಗುತ್ತಿದೆ, ಎಂದು ತಿಳಿಸಿದರು. 

ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 9ಸೆಂಟ್‌ ಜಾಗದಲ್ಲಿ ಸುಸಜ್ಜಿತ ಆಡಳಿತ ಕಛೇರಿ, ಸಭಾಂಗಣ, ಕೃಷಿ ಪರಿಕರಗಳ ಮಾರಾಟ ಮಳಿಗೆ, ಗೋದಾಮು ಹಾಗೂ ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಪ್ರಗತಿಯತ್ತ ಕೊಂಡೊಯ್ಯೊಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ ಜಯ ಕರುಂಬಯ್ಯನವರು, ನಾಪೋಕ್ಲು ಪಟ್ಟಣದ ಬೇತು ರಸ್ತೆಯಲ್ಲಿರುವ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಾಗದಲ್ಲಿ ಸುಸಜ್ಜಿತ ಹಾರ್ಡ್‌ವೇರ್‌ ಮಾರಾಟ ಮಳಿಗೆ,  ಸಿಮೆಂಟ್ ಮತ್ತು ಉಕ್ಕಿನ ದಾಸ್ತಾನು ಮಾರಾಟ ಮಳಿಗೆಯನ್ನು, ಅದೇ ರೀತಿ ಅದರ ಪಕ್ಕದಲ್ಲಿ ಸುಸಜ್ಜಿತ ಅತಿಥಿಗೃಹ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ ಎಂದು ತಿಳಿಸಿದರು. 

ಉತ್ತಮ ಆಡಳಿತ ನಿರ್ವಹಣೆಗೆ ಕೊಡಗು ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕಿನಿಂದ ಪ್ರಶಸ್ತಿಯನ್ನು ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪಡೆದಿದೆ ಹಾಗೆ ನೋಟು ಎಣಿಸುವ ಯಂತ್ರ ಹಾಗೂ ಕಂಪೂಟರ್‌ ಒಂದನ್ನು ಉಡುಗೊರೆಯಾಗಿ ಪಡೆದಿದೆ. ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಜಯ ಕರುಂಬಯ್ಯನವರು ಈ ಸಂದರ್ಭದಲ್ಲಿ ತಿಳಿಸಿದರು.

ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರು. ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಬಹುಮತದ ಬದಲು ಸರ್ವಾನುಮತ ಸಹಕಾರ ಕ್ಷೇತ್ರದಲ್ಲಿ ಇರಬೇಕು  ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಜಯ ಕರುಂಬಯ್ಯನವರು ವ್ಯಕ್ತಪಡಿಸಿದ್ದರು. 

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ರಾಜಕೀಯ ರಹಿತವಾಗಿ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ಜಯ ಕರುಂಬಯ್ಯನವರು  ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ಸಹಕಾರ ಕ್ಷೇತ್ರದಲ್ಲಿ ವೆಸ್ಟ್‌ ಕೊಳಕೇರಿ ವಿವಿದ್ದೋದ್ದೆಶ ಸಹಕಾರ ಧವಸ ಭಂಡಾರ ಇದರ ಸದಸ್ಯರಾಗಿ, ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಸದಸ್ಯರಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಬಿ.ಜೆ.ಪಿಯ ಹಿರಿಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ  ಕ್ಷೇತ್ರದಲ್ಲಿ  1996 ರಿಂದ 2003ರವರಗೆ ವೆಸ್ಟ್‌ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಆಡಳಿತ ಮಂಡಳಿಯ  ಕಾರ್ಯದರ್ಶಿಯಾಗಿ ಸೇವೆ. 2016 ರಿಂದ ಪ್ರಸ್ತುತ ಖಜಾಂಚಿಯಾಗಿ ಹಾಗೂ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1998 ರಿಂದ 2021ರವರಗೆ ನಾಲ್‌ನಾಡ್‌ ಪ್ಲಾಂಟರ್ಸ್‌ ರಿಕ್ರಿಯೇಷನ್‌ ಅಸೋಸಿಯೇಷನ್(ರಿ) ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್‌ನಾಡ್‌ ಪ್ಲಾಂಟರ್ಸ್‌ ರಿಕ್ರಿಯೇಷನ್‌ ಅಸೋಸಿಯೇಷನ್(ರಿ) ಅಧ್ಯಕ್ಷರಾಗಿದ್ದ ಸಂದರ್ಭ  ನಾಪೋಕ್ಲು ಪಟ್ಟಣದಲ್ಲಿ 84 ಸೆಂಟ್‌ ಜಾಗವನ್ನು ಖರೀದಿಸಿ ಸಂಘದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾಂಡಂಡ ಕುಟುಂಬ ಸಮಿತಿಯ ಗೌರವ ಕಾರ್ಯದರ್ಶಿಯಾಗಿ ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ವೆಸ್ಟ್‌ ಕೊಳಕೇರಿ ಭಗವತಿ ದೇವಾಲಯದ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಮೂಲತಃ ಕೃಷಿಕರಾಗಿರುವ ಕಾಂಡಂಡ ಜಯ ಕರುಂಬಯ್ಯನವರು ಈಗಿನ ಟಾಟಾ ಕಾಫಿ ಲಿಮಿಟೆಡ್‌ ಈ ಹಿಂದಿನ ಕನ್ಸಾಲಿಡೇಟೆಡ್‌ ಕಾಫಿ ಲಿಮಿಟೆಡ್‌ನ ಸೂಪರ್‌ವೈಸರ್ ಆಗಿ ಸೇವೆ ಸಲಿಸಿದ್ದಾರೆ. ಹಾಗೆ ಉತ್ತಮ ಹಾಕಿ ಆಟಗಾರರಾಗಿದ್ದಾರೆ. ಇವರ ತಂದೆ ದಿವಂಗತ‌ ಕಾಂಡಂಡ ಕರುಂಬಯ್ಯ ಚಂಗಪ್ಪ, ತಾಯಿ ಗೌರಮ್ಮ, ಪತ್ನಿ ಸುನೀತಾ ಗೃಹಿಣಿ ಹಾಗೂ ಪ್ರವಾಸೋದ್ಯಮಿಯಾಗಿದ್ದಾರೆ. ಹಿರಿಯ ಮಗಳು ಐಶ್ವರ್ಯ ಎಂ.ಬಿ.ಎ. ಪದವೀಧರರಾಗಿದ್ದು, ಇದೀಗ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಎರಡನೇ ಮಗಳು ಶಿರೀನ್‌ ಮುತ್ತಮ್ಮ ಬಿ.ಕಾಂ. ಪದವೀಧರಾಗಿದ್ದು ಅವರು ಕೂಡ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಕಿರಿಯ ಮಗ ಶುಭಂ ದೇವ್‌ ಮುತ್ತಣ್ಣ  ವ್ಯಾಸಂಗ ನಿರತರಾಗಿದ್ದಾರೆ.

ಕಾಂಡಂಡ ಜಯ ಕರುಂಬಯ್ಯನವರು ಪ್ರಸ್ತುತ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವೆಸ್ಟ್‌ ಕೊಳಕೇರಿ  ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಕೌಟುಂಬಿಕ ಜೀವನವು,  ಸಹಕಾರ, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 03-04-2023

Search Coorg Media

Coorg’s Largest Media Network

“ಸರ್ಚ್‌ ಕೂರ್ಗ್‌ ಮೀಡಿಯಾ”

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments