ಆಭರಣ

Reading Time: 7 minutes

ಆಭರಣ

ಈ ಜಗತ್ತಿನಲ್ಲಿ ಆಭರಣಗಳದ್ದೇ ಒಂದು ಸಂಸ್ಕೃತಿ ಇದೆ. ಅದು ಇಂದು ನಿನ್ನೆಯದಲ್ಲ. ಮನುಕುಲದೊಂದಿಗೆ ಬೆಳೆದು ಬಂದಿರುವಂಹದ್ದು. ಮಾನವ ಸಂಸ್ಕೃತಿಯ ಜೊತೆಜೊತೆಯಲ್ಲಿ  ಗುರುತಿಸಿಕೊಂಡಿರುವ ಆಭರಣಗಳನ್ನು ಹೊರತುಪಡಿಸಿ ಈ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಜ್ಞಾನವಂತ ಆದಿಮಾನವನಿಂದ ಹಿಡಿದು ಆಧುನಿಕ ಜಗತ್ತಿನ ಮಾನವನವರೆಗೆ ಎಲ್ಲರೂ ಆಭರಣದ ಮೋಹಕ್ಕೆ ಸಿಲುಕಿದವರೇ.

               ಭಾರತೀಯ ಸಂಸ್ಕೃತಿಯಲ್ಲಿ ಆಭರಣಗಳಿಗೆ ಮಹತ್ವದ ಸ್ಥಾನವಿದೆ. ಮೂಲತಃ ಭಾರತೀಯರು ಆಭರಣ ಪ್ರೇಮಿಗಳು. ಆಭರಣಗಳ ಬಗೆಗಿನ ನಮ್ಮ ಮೋಹ ಹಿಂದೆಯೂ ಕಡಿಮೆ ಇರಲಿಲ್ಲ. ಈಗಲೂ ಕಡಿಮೆ ಆಗಿಲ್ಲ. ಮುಂದೆಯೂ ಆಗದು. ಆಭರಣಗಳ ಖರೀದಿಯಲ್ಲಿ ಈಗಲೂ ನಾವೇ ಮುಂಚೂಣಿಯಲ್ಲಿರುವುದು ಇದಕ್ಕೆ ಸಾಕ್ಷಿ.ಆಭರಣಗಳು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. 8000 ವರ್ಷಗಳ ಹಿಂದೆಯೇ ಭಾರತ ಉಪಖಂಡದಲ್ಲಿ ಆಭರಣಗಳು ಚಾಲ್ತಿಯಲ್ಲಿದ್ದವು. ಭಾರತದಲ್ಲಿ ಬೆಲೆಬಾಳುವ ಲೋಹ ಮತ್ತು ಬೆಲೆಬಾಳುವ ರತ್ನಗಳ ಲಭ್ಯತೆ ಹೇರಳವಾಗಿತ್ತು. ಇವುಗಳ ಕಾರಣಕ್ಕೇ ಭಾರತ ಆ ಕಾಲದಲ್ಲೇ ಆರ್ಥಿಕವಾಗಿ ಸಬಲವಾಗಿತ್ತು. ಸಿಂಧೂ ನಾಗರಿಕತೆ ಮಂದಿ ಕಂಠಹಾರ, ಮಣಿಹಾರ, ಕಿವಿಯೋಲೆ, ಲೋಹಗಳ ಕೈಬಳೆಗಳನ್ನು ತಯಾರಿಸುತ್ತಿದ್ದರು.  ಜಗತ್ತಿನಲ್ಲೇ ಮೊದಲ ಬಾರಿಗೆ (ಕ್ರಿ.ಪೂ 296) ವಜ್ರದ ಗಣಿಗಾರಿಕೆ ಆರಂಭವಾಗಿದ್ದು ಭಾರತದಲ್ಲೇ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಭಾರತೀಯ ಮಹಿಳೆಯರು ಆಭರಣಗಳನ್ನು ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು:‌

ಪ್ರತಿ ಧರ್ಮದಲ್ಲೂ ಆಭರಣಕ್ಕೆ ಹೆಚ್ಚು ಬೇಡಿಕೆ ಇದೆ. ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ. ಈ ಎಲ್ಲದರ ನಡುವೆ ಆಭರಣವನ್ನು ಧರಿಸಲು ವೈಜ್ಞಾನಿಕ ಕಾರಣ (Scientific Reason) ಕೂಡಾ ಇದೆ. ಆಭರಣ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ಅದನ್ನು ಧರಿಸಲು ವೈಜ್ಞಾನಿಕ ಕಾರಣವಿದೆ. ದೇಹದ ಮೇಲ್ಭಾಗದಲ್ಲಿ ಬಂಗಾರ ಧರಿಸಿದರೆ, ದೇಹದ ಕೆಳಭಾಗದಲ್ಲಿ ಬೆಳ್ಳಿ ಆಭರಣವನ್ನು ಧರಿಸುತ್ತಾರೆ. ಇದರ ಬಗ್ಗೆ ನಂಬಿಕೆ ಏನೇ ಇದ್ದರೂ ವೈಜ್ಞಾನಿಕ ಕಾರಣವಂತೂ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಎಲ್ಲರ ಬಳಿ ಆಭರಣದ ಚಿಕ್ಕ ತುಂಡಾದರು ಇರುತ್ತದೆ.

ಬಂಗಾರ:

ಉರಿಯೂತವನ್ನು ಕಡಿಮೆಗೊಳಿ ಸುವ ಹಾಗೂ ಯೌವನವನ್ನು ಕಾಪಾಡುವ ಗುಣ ಬಂಗಾರಕ್ಕಿದೆ. ಮೊಡವೆಗಳಿಂದ ಉಂಟಾಗುವ ಉರಿಯೂತ ಮತ್ತು

ಚರ್ಮ ಕೆಂಪಾಗುವುದನ್ನು ತಡೆಯುತ್ತದೆ.

ಬೆಳ್ಳಿ:

ಬೆಳ್ಳಿಯನ್ನು ಧರಿಸುವುದರಿಂದ ಒಬ್ಬ ಸೈನಿಕನನ್ನು ನಮ್ಮೊಂದಿಗೆ ಇಟ್ಟುಕೊಂಡಂತಾಗುತ್ತದೆ. ಬೆನ್ನಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಹಾಗೂ ಮೊಣಕಾಲು ನೋವನ್ನು ಗುಣಪಡಿಸುವ ಶಕ್ತಿ ಈ ಬೆಳ್ಳಿ ಲೋಹಕ್ಕಿದೆ. ಮೂಗೆ ಗಳನ್ನು ಗಟ್ಟಿ ಗೊಳಿಸುವಲ್ಲಿ ಬೆಳ್ಳಿ ಪ್ರಮುಖ ಪಾತ್ರವಹಿಸುತ್ತದೆ.

ಮಂಗಳಸೂತ್ರ:
ತಾಳಿ ಅಥವಾ ಮಂಗಳಸೂತ್ರ ಎನ್ನುವುದು ಪವಿತ್ರತೆಯ ಸಂಕೇತ. ತಾಳಿಯನ್ನು ಧರಿಸಿ ಗಂಡನೊಂದಿಗೆ ಹೆಣ್ಣು ಕೌಟುಂಬಿಕ ಜೀವನಕ್ಕೆ ಕಾಲಿಡುತ್ತಾಳೆ. ಗಂಡ ಜೀವಂತ ಇರುವವರೆಗೂ ತಾಳಿ ಧರಿಸುತ್ತಾಳೆ. ತಾಳಿ ತೆಗೆದರೆ ಅದು ಅಪಶಕುನ ಅಂತ ಹೇಳಲಾಗುತ್ತದೆ. ಎಲ್ಲಾ ಧರ್ಮದವರು ತಾಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ತಾಳಿ ಜೊತೆಯಲ್ಲಿದ್ದರೆ ಗಂಡ ಜೊತೆಗೆ ಇದ್ದಾರೆ ಎನ್ನುವ ಭಾವನೆ ಕೂಡ ಇದೆ. ತಾಳಿಗೆ ಅರಿಶಿಣ, ಕುಂಕುಮ ಹಚ್ಚಿ ಕಣ್ಣಿಗೆ ಮುಟ್ಟಿಸಿಕೊಂಡಾಗ ಗಂಡನ ಆಯಸ್ಸು ಜಾಸ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದರ ನಡುವೆ ತಾಳಿಯನ್ನು ಧರಿಸಲು ವೈಜ್ಞಾನಿಕ ಕಾರಣವಿದೆ. ಮಂಗಳಸೂತ್ರ ಬಳಸುವುದರಿಂದ ದೇಹದ ರಕ್ತ ಸಂಚಾರ ಸರಿಯಾಗುತ್ತದೆ.

ಓಲೆಗಳು: ಆಭರಣ ಅಂದಾಗ ಮೊದಲು ನೆನಪಾಗುವುದು ಕಿವಿ ಓಲೆಗಳು. ಇದನ್ನು ಮಹಿಳೆಯರು ಹೆಚ್ಚಾಗಿ ಧರಿಸುತ್ತಾರೆ. ಕೆಲ ಪುರುಷರು ಒಂದು ಹರಳಿರುವ ಟಿಕ್ಕಿ ರೀತಿ ಬಳಸುತ್ತಾರೆ. ಕಿವಿ ಓಲೆಗಳು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ನಾನಾ ವಿನ್ಯಾಸದ ಓಲೆಗಳನ್ನು ಖರೀದಿಸಿ, ಬಳಸುತ್ತಾರೆ. ಆದರೆ ಕಿವಿ ಓಲೆಗಳನ್ನು ಹಾಕಿಕೊಳ್ಳುವವರಿಗೆ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳು ಗೊತ್ತಿಲ್ಲ. ಕಿವಿಯಲ್ಲಿರುವ ನರ ಗರ್ಭಕೋಶಕ್ಕೆ ಸಂಪರ್ಕವಿದೆ. ಕಿವಿ ಓಲೆಗಳನ್ನು ಧರಿಸಿದಾಗ ಸಂತಾನ ಭಾಗ್ಯ ಹೆಣ್ಣಿಗೆ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಕೈ ಬೆರಳಿಗೆ ಉಂಗುರ: ಹೆಣ್ಣು ಮತ್ತು ಗಂಡು ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಂಡಾಗ ಇಬ್ಬರ ನಡುವಿನ ಸಂಬಂಧ ಬಲವಾಗುತ್ತ ಹೋಗುತ್ತದೆ ಎಂಬ ನಂಬಿಕೆ ಎಲ್ಲಾ ಧರ್ಮದಲ್ಲೂ ಇದೆ. ಕೆಲವರು ಮುದುವೆ ದಿನ ಉಂಗುರಗಳನ್ನು ಬದಲಾಯಿಸಿಕೊಂಡರೆ, ಇನ್ನು ಕೆಲವರು ನಿಶ್ಚಿತಾರ್ಥದ ದಿನದಂದು ವಿನಿಮಯ ಮಾಡಿಕೊಳ್ಳುತ್ತಾರೆ. ಮದುವೆ ವೇಳೆ ಮಾತ್ರ ಉಂಗುರ ಧರಿಸಬೇಕು ಅಂತ ಏನಿಲ್ಲ. ಉಂಗುರದ ಬಗ್ಗೆ ಕ್ರೇಜ್ ಇರುವವರು ಐದು ಬೆರಳಿಗೂ ಹಾಕುತ್ತಾರೆ. ಇನ್ನು ಕೆಲವರು ಸಿಂಪಲ್ ಆಗಿ ಒಂದು ಬೆರಳಿಗೆ ಧರಿಸುತ್ತಾರೆ. ಇದೇನೇ ಇರಲಿ. ಬಂಗಾರದ ಉಂಗುರ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ನಾಲ್ಕನೆ ಬೆರಳಿನ ನರವೊಂದು ಹೃದಯಕ್ಕೆ ಸಂಪರ್ಕವಿರುವ ಕಾರಣ ಆ ಬೆರಳಿಗೆ ಉಂಗುರ ಧರಿಸಲಾಗುತ್ತದೆ. ಇದೇ ಕಾರಣಕ್ಕೆ ನಾಲ್ಕನೆ ಬೆರಳನ್ನು ಉಂಗುರದ ಬೆರಳು ಅಂತ ಕರೆಯಲಾಗುತ್ತದೆ. ಮಧ್ಯದ ಬೆರಳಿನ ನರ ಮೆದುಳಿನ ನಡುವೆ ಹಾದುಹೋಗಿದೆ. ಉಂಗುರವನ್ನು ಮಧ್ಯದ ಬೆರಳಿಗೆ ಧರಿಸಿದಾಗ ತೀರ್ಮಾನಗಳನ್ನು ತಕ್ಷಣದ ತೆಗೆದುಕೊಳ್ಳಲು ಮೆದುಳಿಗೆ ಕಷ್ಟವಾಗುತ್ತದೆ. ಹೀಗಾಗಿ ವೈಜ್ಞಾನಿಕ ಕಾರಣ ತಿಳಿದವರು ಮಧ್ಯದ ಬೆರಳಿಗೆ ಉಂಗುರವನ್ನು ಹಾಕಲ್ಲ

ಮೂಗುತಿ: ಹೆಣ್ಣು ಮಕ್ಕಳು 10 ವರ್ಷಕ್ಕೆ ಕಾಲಿಡುತ್ತಿದ್ದಂತೆ ಮೂಗುತಿ ಹಾಕಿಸುತ್ತಾರೆ. ಆದರೆ ಇವಾಗ ಮೂಗುತಿ ಧರಿಸುವವರ ಸಂಖ್ಯೆ ಕಡಿಮೆ. ಕೆಲವರಿಗೆ ಇಷ್ಟವಿದ್ದು ಮೂಗುತಿ ಹಾಕಿಕೊಂಡರೆ, ಇನ್ನು ಕೆಲವರು ಮನೆಯವರ ಒತ್ತಾಯಕ್ಕೆ ಹಾಕಿಕೊಳ್ಳುತ್ತಾರೆ. ಮೂಗಿನ ತುದಿಗೆ ಕೋಪ ಇದೆ, ಮೂಗುತಿ ಹಾಕಿಸಬೇಕು ಅಂತ ಹಿರಿಯರು ಹೇಳುತ್ತಾರೆ. ಮೂಗುತಿ ಚುಚ್ಚಿಸಿದರೆ ಕೋಪ ಕಡಿಮೆಯಾಗುತ್ತದೆ ಎಂಬ ನಂಬಿಕೆ ಹಿರಿಯರಿಗಿದೆ. ಮೂಗಿಗೆ ಒಂದು ಚಿಕ್ಕ ತೂತು ಮಾಡಿದರೆ ಋತುಚಕ್ರದ ಸಮಯದಲ್ಲಿ ಹೆಣ್ಣಿಗೆ ಹೊಟ್ಟೆ ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮೂಗಿನ ನರ ನೇರವಾಗಿ ಗರ್ಭಕೋಶಕ್ಕೆ ಸಂಪರ್ಕವಿದೆ. ಇದರಿಂದ ಸಂತಾನ ಭಾಗ್ಯ ಸಿಗುತ್ತದೆ ಎಂದು ನಂಬಲಾಗಿದೆ.

 

ಬಳೆಗಳು: ಬಳೆಗಳು ಕೈಗಳ ಶೃಂಗಾರವನ್ನು ಹೆಚ್ಚಿಸುತ್ತದೆ. ಬಳೆ ಎನ್ನುವುದು ಮುತ್ತೈದೆಯ ಸಂಕೇತ. ಇದು ಕೂಡಾ ಕೇವಲ ಸೌಂದರ್ಯವನ್ನು ಹೆಚ್ಚಿಸಲ್ಲ. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಕೆಲ ಪ್ರಯೋಜನಗಳಿವೆ. ಬಳೆಗಳನ್ನು ಕೈಗಳಿಗೆ ಹಾಕಿಕೊಂಡರೆ ಕೈಗಳು ಬಲವಾಗುತ್ತದೆ. ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ದೇಹದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ. ಕೆಲವರು ಬಳೆಗಳನ್ನು ತುಂಬಾ ಬಿಗಿಯಾಗಿ, ಇನ್ನು ಕೆಲವರು ಸಡಿಲವಾಗಿ ಹಾಕಿಕೊಳ್ಳುತ್ತಾರೆ. ಆದರೆ ಹೀಗೆ ಧರಿಸುವುದು ಒಳ್ಳೆಯದಲ್ಲ. ರಕ್ತನಾಳ ಮತ್ತು ನರಗಳಿಗೆ ಮೃದು ಸ್ಪರ್ಶ ನೀಡುವಂತೆ ಬಳೆಗಳನ್ನ ಹಾಕಿಕೊಳ್ಳಬೇಕು.

ಕಾಲುಂಗುರ: ಮದುವೆಯಾದ ಸ್ತ್ರೀಯರು ಕಾಲಿಗೆ ಉಂಗುರವನ್ನು ತೊಡಿಸುತ್ತಾರೆ. ಕಾಲಿನ ಉಂಗುರ ಬೆಳ್ಳಿ ಆಭರಣವಾಗಿರುತ್ತದೆ. ರಾಜ ಮನೆತನದ ಸ್ತ್ರೀಯರು ಮಾತ್ರ ಬಂಗಾರದ ಉಂಗುರವನ್ನು ಧರಿಸುತ್ತಿದ್ದರು. ಇನ್ನು ಆಸಕ್ತಿ ಇರುವವರು ಬಂಗಾರದ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ. ಕಾಲಿನ ಬೆರಳಿನ ನರ ಹೃದಯದ ಮೂಲಕ ಗರ್ಭಕೋಶವನ್ನು ತಲುಪುತ್ತದೆ. ಇದು ಸಂತಾನ ಭಾಗ್ಯ ಪಡೆಯಲು ಸಹಕರಿಸುತ್ತದೆ ಎಂದು ಹೇಳಲಾಗುತ್ತದೆ.

ಬೈತಲೆ ಬೊಟ್ಟು: ಬೈತಲೆ ಬೊಟ್ಟನ್ನು ಪ್ರತಿದಿನ ಬಳಸುವುದಿಲ್ಲ. ಮದುವೆಯಂತಹ ಸಮಾರಂಭಗಳಲ್ಲಿ ಹಾಕಿಕೊಳ್ಳುತ್ತಾರೆ. ಬಿಟ್ಟರೆ ನೃತ್ಯ ಮಾಡುವಾಗ ಇದನ್ನು ಧರಿಸುತ್ತಾರೆ. ರಾಜರ ಆಳ್ವಿಕೆಯ ಕಾಲದಲ್ಲಿ ರಾಜ ಮನೆತನದ ಮಹಿಳೆಯರು ಬೈತಲೆ ಬೊಟ್ಟನ್ನು ಪ್ರತಿದಿನ ಬಳಸುತ್ತಿದ್ದರು. ಬೈತಲೆ ಬೊಟ್ಟು ಧರಿಸಲು ವೈಜ್ಞಾನಿಕ ಕಾರಣವೆಂದರೆ ಶರೀರದ ಬಿಸಿಯನ್ನು ನಿಯಂತ್ರಿಸುತ್ತದೆ.

ಕಾಲ್ಗೆಜ್ಜೆ: ಕಾಲಿಗೆ ಹಾಕುವ ಗೆಜ್ಜೆ ಅಲಂಕಾರದ ಸಾಧನಗಳಲ್ಲಿ ಒಂದು. ಚಿಕ್ಕ ಮಗವಿನಿಂದ ಹಿಡಿದು ದೊಡ್ಡವಳಾಗುವ ತನಕ ಇಷ್ಟಪಡುವ ಅಲಂಕಾರದ ಸಾಧನವೆಂದರೆ ಅದು ಕಾಲ್ಗೆಜ್ಜೆ. ಕಾಲಿನ ಅಂದ ಹೆಚ್ಚಿಸುವ ಕಾಲ್ಗೆಜ್ಜೆ ಧರಿಸುವ ಹಿಂದೆ ವೈಜ್ಞಾನಿಕ ಕಾರಣವಿದೆ. ಕಾಲಿನ ಗಂಟು ಬಲವಾಗಿಸುವ ಜೊತೆಗೆ ನೋವುಗಳಿಂದ ಪಾರಾಗಿಸುತ್ತದೆ.

ಮುಳಿಯ ಜ್ಯುವೆಲ್ಸ್‌ನ ವಿನೂತನ ಹೆಜ್ಜೆ: ಗ್ರಾಹಕರಿಗೆ ಮನೆಯಿಂದಲೇ ಲೈವ್ ಆಭರಣ ಖರೀದಿ ವ್ಯವಸ್ಥೆ

Reading Time: 5 minutes   

Read More

Muliya Jewels (Shyama Jewels Madikeri Pvt.Ltd), Mahadevpet Rd, Mahadevpet, Madikeri, Karnataka 571201

Reading Time: < 1 minute   

Read More

ARAVIND JEWELLERS Madikeri in coorg

Reading Time: 6 minutes   

Read More

Mataji Gold Palace coorg traditional jewellery showroom

Reading Time: 5 minutes   

Read More

Coorg Traditional Jewellery

Reading Time: < 1 minuteCoorg Traditional Jewellery Women’s: 1.…

Read More

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.