Reading Time: < 1 minute
ಕೊಡ್ಲಿಪೇಟೆ: ಬಸವ ಜಯಂತಿ ಪ್ರಯುಕ್ತ ಪಟ್ಟಣದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್, ನಂತರ ವೀರಭಧ್ರೆಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ನೂರಾಒಂದು ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಪೂಜೆ ಸಲ್ಲಿಸಿದರು.
ಪಟ್ಟಣದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅಪ್ಪಚ್ಚು ರಂಜನ್ ಕಿರಿಕೊಡ್ಲಿ ಶಾಲೆ ಬಳಿ, ಕೇರಗನಹಳ್ಳಿ ವೆಟನರಿ ಆಸ್ಪತ್ರೆ ಹತ್ತಿರ, ಕಲ್ಲುಕೋರೆ, ದೊಡ್ಡಕೊಡ್ಲಿ, ಬೆಸೂರು, ಕಟ್ಟೆಪುರ, ಚಿಕ್ಕಭಂಡಾರ, ಚಿಕ್ಕಕುಂಧ, ಕೂಡಲೂರು, ದೊಡ್ಡಭಂಡಾರ, ನೀರುಗುಂಧ, ಬ್ಯಾಡಗೋಟ್ಟ ಪೋಸ್ಟ್, ಬೆಂಬಳೂರು, ಊರುಗುತ್ತಿ, ಕ್ಯಾತೆ, ಕವಡಿಕೊಟ್ಟೆ ಮುಂತಾದ ಕಡೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾನಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಸ್. ಜಿ. ಮೇದಪ್ಪ, ಬಿಜೆಪಿ ನಾಯಕರಾದ ಅಭಿಮನ್ಯು ಕುಮಾರ್, ಭರತೇಶ್ ಮುಂತಾದವರು ಸಭೆಗಳಲ್ಲಿ ಮಾತಾನಾಡಿದರು.