ಶ್ರೀಮಂಗಲ: ಕಳೆದ 35 ವರ್ಷದಿಂದ ಜೆಡಿಎಸ್ ಪಕ್ಷದ ಕೊಡಗು ಜಿಲ್ಲಾ ನಾಯಕರಾಗಿದ್ದ ವಕೀಲ ಎಂ.ಟಿ.ಕಾರ್ಯಪ್ಪನವರು ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಿದ್ದಾರೆ.
ಶ್ರೀಮಂಗಲದ ತಮ್ಮ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ಎಲ್.ಎ. ಅಭ್ಯರ್ಥಿ ಕೆ.ಜಿ.ಬೋಪಯ್ಯನವರು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಮುಖOಡರಾದ ಚೋಡುಮಾಡ ಶ್ಯಾಮ್, ಎ.ಸಿ.ಜಯ, ಮಾಚಿಮಾಡ ರವೀಂದ್ರ ಮಚ್ಚಾಮಾಡ ಸುಮOತ್, ಶ್ಯಾಮ್ ಮುರಳಿ, ವಿನು, ಬಾಚಂಗಡ ದಾದ, ಅಜ್ಜಿಕುಟೀರ ಪ್ರವೀಣ್, ಮಲ್ಲOಡ ಮಧು ಮುಂತಾದವರು ಇದ್ದರು.