ಮೂರ್ನಾಡು: ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಹಾಗೂ ರೋಟರ್ಯಾಕ್ಟ್ ಕ್ಲಬ್ ಪದವಿ ಕಾಲೇಜು ಮೂರ್ನಾಡು ಸಹಯೋಗದಲ್ಲಿ ಮೂರ್ನಾಡು ಬಳಿಯ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿಯಿಂದ ಮೂರ್ನಾಡು ಬಾಚೆಟ್ಟಿರ ಲಾಲುಮುದ್ದಯ್ಯ ಕ್ರೀಡಾಂಗಣದ ವರೆಗೆ ಮತದಾನ ಮಹತ್ವ ಸಾರುವ ಜಾಗೃತಿ ಜಾಥವು ಶನಿವಾರ ನಡೆಯಿತು.
ಸ್ಪರ್ಧೆಗೆ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ. ಆಕಾಶ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಡಿಕೇರಿ ರೋಟರಿ ಸಂಸ್ಥೆಯ ಮುಖ್ಯಸ್ಥರಾದ ಅನಿಲ್ ಎಚ್.ಟಿ, ಮಡಿಕೇರಿ ವುಡ್ಸ್‍ನ ಅಧ್ಯಕ್ಷ ಸಂಪತ್ ಕುಮಾರ್, ಕಾರ್ಯದರ್ಶಿ ವಸಂತ್ ಕುಮಾರ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಧನಂಜಯ್, ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ.ಮಾದಪ್ಪ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಸ್ವೀಪ್ ಸಮಿತಿಯ ನವೀನ್, ಸಮಿತಿಯ ಪದಾಧಿಕಾರಿಗಳು, ರೋಟರಿ ವುಡ್ಸ್‍ನ ಸದಸ್ಯರಾದ ಹರೀಶ್, ನವೀನ್, ಬೋಪಣ್ಣ, ರೋಟರ್ಯಾಕ್ಟ್ ಕ್ಲಬ್‍ನ ಅಧ್ಯಕ್ಷೆ ಶ್ರೀರಕ್ಷಾ, ಕಾರ್ಯದರ್ಶಿ ಸಂಜಯ್, ಸದಸ್ಯರು ಇದ್ದರು. ಮತದಾನ ಜಾಗೃತಿ ಮೂಡಿಸಲು ವಿರಾಜಪೇಟೆ, ನಾಪೆÇೀಕ್ಲು, ಮಡಿಕೇರಿ ಮತ್ತು ಮೂರ್ನಾಡುವಿನ ಸುಮಾರು 100 ಸ್ಪರ್ಧಿಗಳು ಪಾಲ್ಗೊಂಡಿದ್ದರು.
ವಿಜೇತರು: ಪುರುಷರ ವಿಭಾಗದಲ್ಲಿ ನಿತಿನ್ ಪ್ರಥಮ, ಮಿಲನ್ ದ್ವಿತೀಯ, ತಿಶನ್ ಎ.ಎಂ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ತ್ರಿಶಾ ಪ್ರಥಮ, ಲೀನಾ ದ್ವಿತೀಯ, ವೀಕ್ಷಿತಾ ದೇಚಮ್ಮ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು. “ನಾನು ಮತ ಹಾಕುತ್ತೇನೆ” ಎಂಬ ಸಂದೇಶಕ್ಕೆ ಎಲ್ಲರೂ ತಮ್ಮ ಹಸ್ತಾಕ್ಷರ ಬರೆದು ಜಾಗೃತಿ ಮೂಡಿಸಿದರು.