ಗಗನದಲ್ಲಿ ಹಾರುತ್ತಾ, ಕುಣಿಯುತ್ತಾ, ಸಂಗೀತಕ್ಕೆ ತಕ್ಕಂತೆ ತೇಲಾಡಿದ ಮಿನಿ ವಿಮಾನಗಳು

Reading Time: 5 minutes

ಗಗನದಲ್ಲಿ ಹಾರುತ್ತಾ, ಕುಣಿಯುತ್ತಾ, ಸಂಗೀತಕ್ಕೆ ತಕ್ಕಂತೆ ತೇಲಾಡಿದ ಮಿನಿ ವಿಮಾನಗಳು
ಕಾರ್ಮಾಡು ಬಾನಂಗಣದಲ್ಲಿ ಹಾರಾಡಿ ಮತದಾನದ ಮಹತ್ವ ಸಾರಿದ ಮಿನಿ ವಿಮಾನಗಳು

ಮಡಿಕೇರಿ:  ಬಾಳೆಲೆ ಬಳಿಯ ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ಮತದಾನದ ಮಹತ್ವವನ್ನು ಸಾರಿದ ಮಿನಿ ವಿಮಾನಗಳು ವಿಭಿನ್ನ ರೀತಿಯಲ್ಲಿ ಬಾನಂಗಣದಲ್ಲಿ ಮತದಾನದ ಮಹತ್ವ ಸಾರುವ ಮೂಲಕ ಕಿಕ್ಕಿರಿದು ಸೇರಿದ್ದ ಗ್ರಾಮಸ್ಥರ ಮನ ಸೆಳೆದವು.
ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಆಶ್ರಯದಲ್ಲಿ ಬಾಳೆಲೆ ಕಾರ್ಮಾಡು ಗ್ರಾಮ ನಿವಾಸಿ ಕೊಳ್ಳಿಮಾಡ ರಾಜಿ ಗಣಪತಿ ಅವರ ಸಂಗ್ರಹದಲ್ಲಿರುವ ಮಿನಿ ವಿಮಾನಗಳ ಪ್ರದರ್ಶನ ಮತ್ತು ಹಾರಾಟ ಅತ್ಯಾಕರ್ಷಕವಾಗಿ ಜರುಗಿತು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮತ್ತು ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಿನಿ ವಿಮಾನ ಹಾರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಮತದಾನ ಮಹತ್ವ ಸಾರುವ ಸಂದೇಶ ಅಭಿಯಾನಕ್ಕೆ ಚಾಲನೆ ನೀಡಿದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಮಾಡು ಗ್ರಾಮದ ಖಾಸಗಿ ಏರ್‍ಸ್ಟ್ರಿಪ್‍ನಲ್ಲಿ ಮಿನಿ ವಿಮಾನಗಳು ಸದ್ದುಮಾಡುತ್ತಾ ಬಾನಂಗಣದಲ್ಲಿ ಹಾರಾಟ ನಡೆಸಿದವು. ಮಿನಿ ಸೆಸ್ನಾ, ಎಕ್ಸ್‍ಎಫ್ 80, ಎಕ್ಸ್ 380 ಶ್ರೇಣಿಯ ಮಿನಿ ವಿಮಾನಗಳು, ಮಿನಿ ಹೆಲಿಕಾಪ್ಟರ್ ಗಳು, ತ್ರಿಡಿ ವಿಮಾನಗಳು ಕೂಡ ಹಾರಾಟದ ಮೂಲಕ ಗಮನ ಸೆಳೆದವು.
ಕೊಳ್ಳಿಮಾಡ ರಾಜಿ ಗಣಪತಿ ಸಂಗ್ರಹದಲ್ಲಿರುವ 32 ಮಿನಿ ವಿಮಾನಗಳ ಪ್ರದರ್ಶನ ಕೂಡ ಗ್ರಾಮಸ್ಥರು, ಸಾರ್ವಜನಿಕರ ಮನ ಸೆಳೆಯಿತು. ಬೆಂಗಳೂರಿನ ಯುವ ಪೈಲಟ್ ಆದಿತ್ಯ ಪವಾರ್ ತನ್ನ ಕೈಚಳಕದಲ್ಲಿ ಮಿನಿ ವಿಮಾನವನ್ನು ಸಂಗೀತದ ನಾದಕ್ಕೆ ತಕ್ಕಂತೆ ಬಾನಿನಲ್ಲಿ ತೇಲಿಸುತ್ತಾ, ನೃತ್ಯಶೈಲಿಯಲ್ಲಿ ತೇಲಿಸುತ್ತಾ ಪ್ರದರ್ಶನ ನೀಡಿದ್ದು, ಪ್ರೇಕ್ಷಕರ ಅಪಾರ ಶ್ಲಾಘನೆಗೆ ಕಾರಣವಾಯಿತು. ಬೆಂಗಳೂರಿನ ಪೈಲಟ್ ಎಮಿಲ್ ಅವರಿಂದಲೂ ವಿಶಿಷ್ಟ ರೀತಿಯಲ್ಲಿ ಮಿನಿವಿಮಾನಗಳ ಹಾರಾಟ ನಡೆಯಿತು. ಮಾಪಂಗಡ ಮುತ್ತಣ್ಣ, ಕೋಡಿಮಣಿಯಂಡ ಸುನಿಲ್ ಸುಬ್ಬಯ್ಯ ಅವರು ಮಿನಿ ವಿಮಾನಗಳ ಹಾರಾಟಕ್ಕೆ ಸಹಕಾರ ನೀಡಿದ್ದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಾತನಾಡಿ, ಮತದಾನದ ಮಹತ್ವದ ಸಂಬಂಧಿತ ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ವಿನೂತನ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಅಂತೆಯೇ ಮಿನಿ ವಿಮಾನಗಳ ಹಾರಾಟ ಪ್ರದರ್ಶನದ ಮೂಲಕವೂ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಡಗಿನಲ್ಲಿ ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಸ್ಪೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್ ಮಾತನಾಡಿ, ಸ್ಪೀಪ್ ಸಮಿತಿ ಮೇ, 10 ರಂದು ನಡೆಯುವ ಚುನಾವಣೆಗೆ ಈ ಬಾರಿ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಾ ಮತದಾನದ ಮಹತ್ವ ಸಾರುತ್ತಿದೆ. ಮತದಾನ ಮಾಡಿ ಎಂದು ಮತದಾರರನ್ನು ಉತ್ತೇಜಿಸುತ್ತಿದೆ. ಕಾರ್ಮಾಡು ಗ್ರಾಮದಲ್ಲಿ ಕೊಳ್ಳಿಮಾಡ ರಾಜಿ ಗಣಪತಿ ಅವರ ತಂಡದಿಂದ ಆಯೋಜಿತ ಮಿನಿ ವಿಮಾನಗಳ ಪ್ರದರ್ಶನ ವಿಶಿಷ್ಟವಾಗಿ ಗಮನ ಸೆಳೆದಿದೆ. ನಿರೀಕ್ಷೆಗೂ ಮೀರಿ ಕಾರ್ಯಕ್ರಮಕ್ಕೆ ಜನ ಸೇರಿ ಯಶಸ್ವಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬಾನಾ ಎಂ.ಶೇಖ್, ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್, ಜಿ.ಪಂ.ಯೋಜನಾ ನಿರ್ದೇಶಕರಾದ ಜಗದೀಶ್, ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನಂಜಯ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಗೋಣಿಕೊಪ್ಪಲು ರೋಟರಿ ಸಂಸ್ಥೆ ಅಧ್ಯಕ್ಷೆ ಸುಭಾಷಿಣಿ ಜೆ.ಕೆ., ಮೂರ್ನಾಡು ಜಾನಪದ ಪರಿಷತ್ ಗೌರವಾಧ್ಯಕ್ಷ ಕಿಗ್ಗಾಲು ಗಿರೀಶ್, ರೋಟರಿ ವುಡ್ಸ್ ನಿರ್ದೇಶಕ ಕಿಗ್ಗಾಲು ಹರೀಶ್, ಕುಶಾಲನಗರ ಜಾನಪದ ಪರಿಷತ್ ನಿರ್ದೇಶಕಿ ಫ್ಯಾನ್ಸಿ ಮುತ್ತಣ್ಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಬಾಲರಾಜ್ ರಂಗರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಎನ್.ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಜಗದೀಶ್ ನಾಯಕ್, ವಿರಾಜಪೇಟೆ ತಾ.ಪಂ.ಇಒ ಅಪ್ಪಣ್ಣ, ಜಿ.ಪಂ.ಯೋಜನಾ ಶಾಖೆಯ ಹಾಗೂ ಸ್ವೀಪ್ ವಿಭಾಗದ ವ್ಯವಸ್ಥಾಪಕರಾದ ನವೀನ್, ಮಾಜಿ ಸೈನಿಕರಾದ ಬೊಟ್ಟಂಗಡ ಸುಬ್ಬಯ್ಯ, ಕಾರ್ಮಾಡು ಗ್ರಾ.ಪಂ.ಪಿಡಿಒ ಸಂತೋಷ್, ನರೇಗಾ ಅಧಿಕಾರಿ ನರೇಂದ್ರ ಸೇರಿದಂತೆ ಇತರರು ಇದ್ದರು. ಪವನ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.
ಫೆÇೀಟೋ ಕ್ಲಿಕ್ಕಿಸಿ ಗಮನ ಸೆಳೆದ ಜಿಲ್ಲಾಧಿಕಾರಿ.: ಮಿನಿ ವಿಮಾನಗಳ ಸಂಗ್ರಹದೊಂದಿಗೆ ಫೆÇೀಟೋ ತೆಗೆಸಿಕೊಳ್ಳಲು ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗಿತ್ತು. ಈ ಸಂದರ್ಭ ಜಿಲ್ಲಾಧಿಕಾರಿ ಮತ್ತು ಜಿ.ಪಂ.ಸಿಇಒ ಜತೆಯೂ ಫೆÇೀಟೋ ತೆಗೆಸಿಕೊಳ್ಳಲು ಗ್ರಾಮಸ್ಥರು ಮುಗಿಬಿದ್ದರು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಿನಿ ವಿಮಾನಗಳ ಫೆÇೀಟೋವನ್ನು ತಮ್ಮ ಕ್ಯಾಮರದಲ್ಲಿ ತೆಗೆಯುವುದರ ಜೊತೆಗೆ ಸಾರ್ವಜನಿಕರ ಫೆÇೀಟೋಗಳನ್ನೂ ಕೂಡ ಮಿನಿ ವಿಮಾನಗಳ ಜತೆ ತೆಗೆಯುವುದರೊಂದಿಗೆ ಜನರ ಮೆಚ್ಚುಗೆ ಗಳಿಸಿದರು. ನೀವು ನಿಲ್ಲಿ.. ನಾನು ಫೆÇೀಟೋ ತೆಗೆಯುತ್ತೇನೆ ಎಂದು ಜನರನ್ನು ಹುರಿದುಂಬಿಸುತ್ತಾ ಜಿಲ್ಲಾಧಿಕಾರಿಯವರು ತಮ್ಮದೇ ಕ್ಯಾಮರಾದಲ್ಲಿ ಫೆÇೀಟೋ ತೆಗೆಯುತ್ತಾ ಗಮನ ಸೆಳೆದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments