Reading Time: < 1 minute
ವಿರಾಜಪೇಟೆ: ಕಳೆದ ಹದಿನೈದು ದಿನಗಳಿಂದ ತಮ್ಮದೇ ರೀತಿಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಹಿಂದು ಸಂಘಟನೆಯ ಕಾರ್ಯಕರ್ತರು ಇಂದು ಮಡಿಕೇರಿ ತಾಲ್ಲೂಕಿನಲ್ಲಿರುವ ಕರಡದ ಮಲೆತಿರಿಕೆ ದೇವಾಲಯದಲ್ಲಿ ಶ್ರಮದಾನ ಮಾಡುವ ಮೂಲಕ ದೇವಾಲಯದ ಆವರವಣವನ್ನು ಸ್ವಚ್ಚಗೊಳಿಸಿ ಕೆ.ಜಿ.ಬೋಪ್ಪಯ್ಯ ಹಾಗೂ ಅಪ್ಪಚ್ಚು ರಂಜನ್ ಅತ್ಯಧಿಕ ಮತದಿಂದ ಗೆಲ್ಲುವಂತೆ ಪ್ರಾರ್ಥನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ವೀರಾಜಪೇಟೆ ಭಾಗದ ಹಿಂದು ಸಂಘಟನೆಯ ಮಾಳೇಟಿರ ಸನ್ನಿ, ತರ್ಮೆ ಮೊಟ್ಟೆ ಪೊನ್ನಪ್ಪ, ಮಂಜೇಶ, ಕಿಶೋರ್ ಪೂಜಾರಿ, ಗಗನ್, ಬಿದ್ದಪ್ಪ, ಕೆ.ಎಂ. ಅಯ್ಯಪ್ಪ(ಮಣಿ) ಇನ್ನಿತ್ತರ ಕಾರ್ಯಕರ್ತರು ಭಾಗವಹಿಸಿದ್ದರು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.