ಕಾವೇರಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Reading Time: 2 minutes

ಗೋಣಿಕೊಪ್ಪಲು: ಕಾವೇರಿ ಕಾಲೇಜಿನ ಎನ್.ಸಿ.ಸಿ.ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು,
ಈ ಸಂದರ್ಭದಲ್ಲಿ ಮಾತನಾಡಿದ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಬಿ.ಕಾವೇರಪ್ಪ ಮಾನವ ಮತ್ತು ಪರಿಸರವು ಸಂಪೂರ್ಣವಾಗಿ ಪರಸ್ಪರ ಅವಲಂಬಿತವಾಗಿದೆ, ಉದಾಹರಣೆಗೆ ನಮ್ಮ ವಾತಾವರಣದಲ್ಲಿ ಸ್ವಲ್ಪ ಬದಲಾವಣೆಯಾದರೆ ಅದರ ಪರಿಣಾಮವು ನಮ್ಮ ದೇಹದಲ್ಲಿ ತಕ್ಷಣವೇ ಗೋಚರಿಸುತ್ತದೆ,ಚಾಳಿ ಜಾಸ್ತಿಯಾಗಿದ್ದರೆ ನಾವು ತಣ್ಣಗಾಗುತ್ತೇವೆ,ಶಾಖವು ಅಧಿಕವಾಗಿದ್ದರೆ ಅದನ್ನು ಸಹಿಸಲು ಸಾಧ್ಯವಿಲ್ಲ,ಪರಿಸರವು ಮಾನವ ಜೀವನಕ್ಕೆ ಉಸಿರಾಟದಷ್ಷೆ ಮುಖ್ಯವಾಗಿದೆ, ಪ್ರತಿವರ್ಷವು ಶುದ್ಧಗಾಳಿ ಸಿಗದ ಕಾರಣ ವಾಯುಮಾಲಿನ್ಯದಿಂದ ಜನರು ಸಾಯುತ್ತಿದ್ದಾರೆ, ಮತ್ತು ಈ ಅಂಕಿ ಅಂಶವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ,ಅಂತೆಯೇ ಪ್ರಪಂಚಾದ್ಯಂತ ನಗರಗಳು ಮತ್ತು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ವನ್ನು ಸುಧಾರಿಸಲು ಹೊಸ ಶಕ್ತಿ ಮತ್ತು ಹಸಿರು ತಂತ್ರಜ್ಞಾನಗಳನ್ನು ಅನ್ವೇಷಿಸಲು ಸರ್ಕಾರಗಳು, ಕೈಗಾರಿಕೆಗಳು ಮತ್ತು ವ್ಯಕ್ತಿಗಳನ್ನು ಒತ್ತಾಯಿಸಲು ಪ್ರತಿವರ್ಷ ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ 19 ಕರ್ನಾಟಕ ಬೆಟಾಲಿಯನ್ ಮಡಿಕೇರಿ ಘಟಕದ ಬೋಧಕ ಸಿಬ್ಬಂದಿಗಳಾದ ಹವಾಲ್ದಾರ್ ಶುಭಂ, ಹವಾಲ್ದಾರ್ ದೀಪಕ್,ಎನ್.ಸಿ.ಸಿ.ಅಧಿಕಾರಿಗಳಾದ ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಲೇಪಾಕ್ಷಿ,ಡಾ.ನಯನಾ ತಿಮ್ಮಯ್ಯ ಹಾಜರಿದ್ದರು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments