ಚೆಯ್ಯಂಡಾಣೆ, ಆ 17. ನರಿಯಂದಡ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಕಟ್ಟಡಕ್ಕೆ ಸಹಕರಿಸಿದ ದಾನಿಗಳಿಗೆ ಹಾಗೂ ಕಟ್ಟಡ ಕಟ್ಟಲು ತೆರೆಮೆರೆಯಲ್ಲಿ ಕಾರ್ಯನಿರ್ವಹಿಸಿದ ಗುತ್ತಿಗೆದಾರರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದರು.
ದಾನಿಗಳ ಪರಿಚಯವನ್ನು ಗ್ರಾ.ಪಂ. ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ ಮಾಡಿ ಗ್ರಾ.ಪಂ. ಆರ್ಥಿಕ ಕೊರತೆ ಬಂದಾಗ ಬೆನ್ನೆಲುಬಾಗಿ ಸಹಕರಿಸಿದ ದಾನಿಗಳನ್ನು ನೆನೆಯುವ ಕಾರ್ಯಕ್ರಮ ಇದಾಗಿದ್ದು ಇದಕ್ಕೆ ತೆರೆಮೆರೆಯಲ್ಲಿ ಹಲವಾರು ದಾನಿಗಳು ಹಾಗೂ ಗುತ್ತಿಗೆ ದಾರರು ಸಹಕರಿಸಿದ್ದಾರೆ ಎಲ್ಲರಿಗೂ ಧನ್ಯವಾದ ಎಂದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ ಆಡಳಿತ ಮಂಡಳಿ ಆಯ್ಕೆಯಾದ ಎರಡೂವರೆ ವರ್ಷದಲ್ಲೇ ಒಂದು ಉತ್ತಮ ಸುಸರ್ಜಿತವಾದ ಕಟ್ಟಡ ನಿರ್ಮಾಣ ಮಾಡಿದ್ದಾರೆ.ಇದಕ್ಕೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಸಹಕರಿಸಿದ್ದಾರೆ.ನಮ್ಮ ಗ್ರಾಮ ಪಂಚಾಯಿತಿ ಕೊಡಗಿನಲ್ಲಿ ಮೊದಲನೇ ಸ್ಥಾನದಲ್ಲಿದೆ ಇನ್ನು ರಾಜ್ಯದಲ್ಲಿ ಹಾಗೂ ರಾಷ್ಟದಲ್ಲಿ ಕೂಡ ಒಂದು ಉತ್ತಮ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ಪೀಠೋಪಕರಣ ನೀಡಿ ಸನ್ಮಾನ ಸ್ವೀಕರಿಸಿದ ದಾನಿಗಳು
ಪೀಠೋಪಕರಣಕ್ಕೆ ಸಹಕರಿಸಿದ ದಾನಿಗಳು ಹಾಗೂ ಗ್ರಾ.ಪಂ.ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳು
ಕಡಂಗ ವಿ.ಪ್ರಾ.ಕೃ.ಗ್ರಾ ಸಹಕಾರ ಸಂಘದ ಪರವಾಗಿ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ, ಚೆಯ್ಯ0ಡಾಣೆ ವಿ. ಪ್ರಾ. ಕೃ ಗ್ರಾ ಸಹಕಾರ ಸಂಘದ ಪರವಾಗಿ ಉಪಾಧ್ಯಕ್ಷ ಬಾಚಮಂಡ ಸುಬ್ರಮಣಿ, ನಡಿಕೇರಿಯಂಡ ಅರ್ಜುನ್ ಕಾವೇರಪ್ಪ, ಅಬ್ದುರ್ರಹ್ಮಾನ್ ಪಾರ್ಕೊ, ಬೊಳ್ಳಚಟ್ಟೀರ.ಎಂ.ಸುರೇಶ, ಪೊನ್ನ ಚಂಡ ಎಸ್ ಮಾದಪ್ಪ, ಬೊವೈರಿಯಂಡ ರಾಜ ಸುಬ್ಬಯ್ಯ, ಬಟ್ಟಿಯಂಡ ಸಾಬಾ ಬೆಳ್ಯಪ್ಪ , ಇಸ್ಮಾಯಿಲ್ ಕೆ.ಯು., ಕರವಟ್ಟಿರ ಜಯ ಈರಪ್ಪ, ಕೋಡಿರ ಕುಶಕುಮಾರ್.
ಸನ್ಮಾನ ಸ್ವೀಕರಿಸಿದ ಕಟ್ಟಡ ಕಾಮಗಾರಿ ನಿರ್ವಹಿಸಲು ಸಹಕರಿಸಿದ ಗುತ್ತಿಗೆದಾರರು
ಕಟ್ಟಡ ಕಾಮಗಾರಿಗೆ ಸಹಕರಿಸಿದ ಗುತ್ತಿಗೆದಾರರು ಹಾಗೂ ಗ್ರಾ.ಪಂ.ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಹಾಗೂ ಸಿಬ್ಬಂದಿಗಳು
ಕಾರ್ತಿಕ್ ಟಿ.ಕೆ, ಸುರೇಶ್ ಬಿ.ಆರ್, ಶಿವಕುಮಾರ್ ಟಿ.ಎಂ ,ರವಿ ಟಿ.ಎಂ, ರಾಜೇಶ್ ಟಿ.ಟಿ.
ಈ ಸಂದರ್ಭದಲ್ಲಿ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಅಧ್ಯಕ್ಷ ರಾಗಿದ್ದ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ,ಗ್ರಾಮ ಪಂಚಾಯಿತಿ ಸದಸ್ಯರು,ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ