ಚೆಯ್ಯಂಡಾಣೆ, ಆ 19: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ನರಿಯಂದಡ ಕೇಂದ್ರ ಪ್ರೌಢಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೈಯ್ಯ0ಡ ಪೆಮ್ಮಯ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ವರದಿಯನ್ನು ಶಾಲೆಯ ಶಿಕ್ಷಕಿ ಮಮತಾ ಮಂಡಿಸಿದರು. ಶೈಕ್ಷಣಿಕ ವರದಿಯನ್ನು ಮುಖ್ಯ ಶಿಕ್ಷಕಿ ಭವ್ಯ ಮಂಡಿಸಿದರು. ನಂತರ ನಡೆದ ಇತರ ಚರ್ಚೆಯಲ್ಲಿ ಸದಸ್ಯರಾದ ಚೇನಂಡ ಜೆಪ್ಪು ದೇವಯ್ಯ ಮಾತನಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ನಮ್ಮ ಬೆಂಬಲವಿದೆ ಇದಕ್ಕೆ ವಿರುದ್ಧವಾಗಿ ನಡೆದರೆ ಅದಕ್ಕೆ ತಕ್ಕ ಉತ್ತರ ಸದಸ್ಯರು ನೀಡಲಿದ್ದಾರೆ.
ಶಾಲೆಗೆ ಶೇ 100 ಫಲಿತಾಂಶ ಲಭಿಸಿದೆ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಸದಸ್ಯರಾದ ಬೊವೈರಿಯಂಡ ದಿಲೀಪ್, ಚೇನಂಡ ಸಂಪತ್, ಭೀಮಯ್ಯ, ಬೋಪ್ಪಯ್ಯ, ಮೋಹನ್ ಕುಮಾರ್, ಕುಮ್ಮಂಡ ಕಾಯಪ್ಪ, ಮತಿತ್ತರರು ವಿವಿಧ ರೀತಿಯ ಕಾರ್ಯವೈಖರಿ ಬಗ್ಗೆ ಮಾಹಿತಿ ಕೇಳಿದರು.
ಅದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ರಾಜೇಶ್ ಅಚ್ಚಯ್ಯ ಪ್ರತಿಕ್ರಿಯಿಸಿದರು.
ಮುಖ್ಯ ಶಿಕ್ಷಕ ಮನೋಹರ್ ನಾಯ್ಕ್ ವಿರುದ್ದದ ವಿದ್ಯಾರ್ಥಿ ಗಳಿಗೆ ಲೈಂಗಿಕ ಕಿರುಕುಳ ಹಾಗೂ ಪೋಸ್ಕೊ ಪ್ರಕರಣದ ಬಗ್ಗೆ ಹಲವಾರು ಚರ್ಚೆ ನಡೆಯಿತು.ನೊಂದ ವಿದ್ಯಾರ್ಥಿಯ ತಾಯಿ ತಮ್ಮ ಅಳಲನ್ನು ಮಹಾಸಭೆಯಲ್ಲಿ ಪ್ರಸ್ತಾಪಿಸಿದರು.
10ನೇ ತರಗತಿ ಉತ್ತೀರ್ಣಳಾಗಿ ನನ್ನ ಮಗಳು ಕಾಲೇಜು ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.ವಿದ್ಯಾಭ್ಯಾಸ ಮೊಟಕುಗೊಳ್ಳುತ್ತಿದೆ.ಇಂತಹ ಶೋಚನೀಯ ಪರಿಸ್ಥಿತಿ ಬೇರೆ ವಿದ್ಯಾರ್ಥಿಗಳಿಗೆ ಆಗದಿರಲಿ ಎಂದರು.
ಮಹಾಸಭೆ ಖಂಡನಾ ನಿರ್ಣಯ:
ಯಾವುದೇ ಕಾರಣಕ್ಕೂಆರೋಪಿ ಶಿಕ್ಷಕನನ್ನು ನರಿಯಂದಡ ಕೇಂದ್ರ ಪ್ರೌಢ ಶಾಲೆಗೆ ಮರು ನೇಮಕ ಮಾಡಕೂಡದು, ಬೇರೆ ಯಾವುದೇ ಶಾಲೆಯಲ್ಲಿ ನೇಮಿಸಿ ನಮ್ಮ ಅಭ್ಯಂತರವಿಲ್ಲ. ಶಾಲಾ ಆಡಳಿತ ಮಂಡಳಿಯ ವಿರುದ್ಧ ವಿನಾ ಕಾರಣ ಸುಳ್ಳು ಮೊಕ್ಕದ್ದಮೆ ಹೂಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ತ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ, ಪಟ್ಟಚೆರುವಳಂಡ ಪ್ರತಾಪ್, ಶರಣು ಸುಬ್ರಮಣಿ, ರಾಯ್ ಸೊಮ್ಮಣ್ಣ, ಬಟ್ಟಿಯಂಡ ಅಶೋಕ್ ಉಪಸ್ಥಿತರಿದ್ದರು.
ಮಹಾಸಭೆ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ