ವಿವಿಧ ಸಾಮಾಜಿಕ ಕಾರ್ಯಕ್ರಮದ ಮೂಲಕ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಹುಟ್ಟುಹಬ್ಬ ಆಚರಣೆ

Reading Time: 4 minutes

ನಾಪೋಕ್ಲು : ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕೆಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹೊದ್ದುರು ಗ್ರಾ.ಪಂ ಅಧ್ಯಕ್ಷ ಎಚ್.ಎ.ಹಂಸ ಕೊಟ್ಟಮುಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಂಸ ಹಿತೈಷಿಗಳ ಬಳಗದ ವತಿಯಿಂದ ನಾಪೋಕ್ಲು ಬಳಿಯ ಚೆರಿಯಪರಂಬು ಶಾದಿ ಮಹಲ್ ನಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ,ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ, ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸಜ್ಜನ ವ್ಯಕ್ತಿಯಾಗಿರುವ ಹಂಸ ರವರು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ. ಮುಂದೆ ಅವರು ಉನ್ನತ ಸ್ಥಾನಕ್ಕೇರಲು ಭಗವಂತನು ಆಯುರ್ ಆರೋಗ್ಯ ನೀಡಲಿ ಎಂದು ಶುಭಕೋರಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಹಂಸ ರವರು ಕಳೆದ 25 ವರ್ಷಗಳಿಂದ ನನ್ನ ಉತ್ತಮ ಸಹಪಾಠಿಯಾಗಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದದಂದು ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ, ಮುಂದೆ ಜಿಲ್ಲೆಗೆ ಉತ್ತಮ ನಾಯಕನಾಗಿ ಹೊರಹೊಮ್ಮಲಿ ಎಂದು ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ರಾಜ್ಯ ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷ ಹ್ಯಾರಿಸ್ ಮಾತನಾಡಿ ಹಂಸ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಹಿತೈಷಿಗಳ ಬಳಗದಿಂದ ಆಯೋಜಿಸಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಆಧುನಿಕ ಯುಗದಲ್ಲಿ ವಿಜ್ಞಾನ ಎಲ್ಲದಕ್ಕೂ ಬದಲಿ ವ್ಯವಸ್ಥೆಯನ್ನು ಕಂಡುಹಿಡಿದಿದೆ. ಆದರೆ ರಕ್ತಕ್ಕೆ ರಕ್ತವೇ ಸರಿಸಾಟಿ ಇದಕ್ಕೆ ಬದಲಿ ಯಾವುದು ಇಲ್ಲಾ,ಇಂತಹ ಕಾರ್ಯಕ್ರಮದಿಂದ ಇತರರಿಗೆ ಪ್ರೇರಣೆಯಾಗಲಿ ಎಂದು ಶುಭಕೋರಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ಕರುಂಬಯ್ಯ ಮಾತನಾಡಿ ಜಿಲ್ಲೆಯ ರಕ್ತನಿಧಿ ಕೇಂದ್ರಕ್ಕೆ ಹೆಚ್ಚಿನ ರಕ್ತಗಳ ಅವಶ್ಯಕತೆ ಇದೆ,ಇಂತಹ ಕಾರ್ಯಕ್ರಮಗಳ ಮೂಲಕ ರಕ್ತವನ್ನು ಸಂಗ್ರಹಿಸಿ ರೋಗಿಗಳಿಗೆ ನೀಡಲಾಗುತ್ತಿದೆ. ಮುಂದೆ ವಿವಿಧ ಸಂಘ-ಸಂಸ್ಥೆಗಳು ಇದೇ ರೀತಿ ಕಾರ್ಯಕ್ರಮ ಆಯೋಜಿಸಿ ರೋಗಿಗಳ ನೆರವಿಗೆ ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಯಾಕೂಬ್,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲತೀಫ್ ಸುಂಟಿಕೊಪ್ಪ,ಹೊದ್ದೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಹಮೀದ್ ಕಬಡಕ್ಕೇರಿ,ಮೊಣ್ಣಪ್ಪ ಸೇರಿದಂತೆ ವಿವಿಧ ನಾಯಕರು ಹಂಸ ಅವರ ಹುಟ್ಟುಹಬ್ಬಕ್ಕೆ ಶುಭಕೋರಿ ಮಾತನಾಡಿದರು.

ಹುಟ್ಟುಹಬ್ಬ ಕಾರ್ಯಕ್ರದ ಮೊದಲಿಗೆ ಚೆರಿಯಪರಂಬು ಪ್ರಾಥಮಿಕ ಶಾಲೆಗೆ ತೆರಳಿದ ಹಂಸ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ಹಾಗೂ ಲೇಖನ ಪರಿಕರಗಳನ್ನು ವಿತರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನಾಪೋಕ್ಲುವಿನ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು. ಜಿಲ್ಲೆ,ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳನ್ನು ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಅವರನ್ನು ಮಡಿಕೇರಿ ಶಾಸಕ ಡಾಕ್ಟರ್ ಮಂತರ್ ಗೌಡ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

ರಕ್ತದಾನ ಶಿಬಿರದಲ್ಲಿ ಸುಮಾರು 50ಕ್ಕು ಅಧಿಕ ದಾನಿಗಳಿಂದ ರಕ್ತವನ್ನು ಸಂಗ್ರಹಿಸಿ ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

ಈ ಸಂದರ್ಭ ಕೊಟ್ಟಮುಡಿ ಮರ್ಕಜ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ,ಜೆಡಿಎಸ್ ಮುಖಂಡ ಮನ್ಸೂರ್ ಆಲಿ, ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಉಸ್ಮಾನ್,ಹಂಸ ಮುಸ್ಲಿಯಾರ್, ನಾಪೋಕ್ಲು ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜೀವನ್, ಕಾಂಗ್ರೆಸಿನ ಮುಖಂಡರಾದ ಶಾಫಿ ಎಡಪಾಲ, ವಿಶ್ವನಾಥ್,ಜುಬೈರ್,ಮೈಸಿ ಕತ್ತಣೀರ,ನಿಯಾಸ್ ಸುಂಟಿಕೊಪ್ಪ,ಕೊಡಗು ಸುನ್ನೀ ವೆಲ್ಫೇರ್ ಜಿಸಿಸಿ ಅಧ್ಯಕ್ಷ ಅಬೂಬಕ್ಕರ್ ಹಾಜಿ,ಕಲೀಲ್ ಕ್ರಿಯೆಟಿವ್,ನಾಪೋಕ್ಲು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿರಾಜ್,ಅಹಮದ್ ಸಿ. ಎಚ್,ಅರಫಾತ್, ನಾಪೋಕ್ಲು ಗ್ರಾಂ.ಪಂ. ಸದಸ್ಯ ಖುರೇಶಿ,ಮಾಜಿ ಉಪಾಧ್ಯಕ್ಷ ಟಿ.ಎ.ಮಹಮ್ಮದ್, ಮಾಜಿ ಸದಸ್ಯರಾದ ರಶೀದ್,ಅಜೀಜ್,ಹಂಸ ಹಿತೈಷಿ ಬಳಗದ ಪದಾಧಿಕಾರಿಗಳು, ಆಟೋ ಚಾಲಕರು,ಕಾಂಗ್ರೆಸ್ ಕಾರ್ಯಕರ್ತರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.

✍️….ವರದಿ: ಝಕರಿಯ ನಾಪೋಕ್ಲು

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments