Reading Time: 2 minutes
ಕೊಡಗು ಜಿಲ್ಲೆಯಲ್ಲಿ ತುಳುನಾಡಿನ ಕಾರ್ನಿಕದ ದೈವಸ್ಥಾನಗಳು ಸರಿಸುಮಾರು 60 ಕ್ಕು ಹೆಚ್ಚು ಇದ್ದು ವರ್ಷಂಪ್ರತಿ ನೇಮ,ಕೋಲ ನಡೆಯುತ್ತಿದ್ದು, ಜಿಲ್ಲೆಯಲ್ಲಿರುವ ದೈವಸ್ಥಾನದ ಅಭಿವೃದ್ಧಿಗಾಗಿ ಹಾಗೂ ದೈವಆರಾಧಕರ ಮತ್ತು ದೈವನರ್ತಕರ ಕ್ಷೇಮಾಭಿವೃದ್ಧಿಗಾಗಿ ಮತ್ತು ದೈವದ ಬಗ್ಗೆ ಅಪಮಾನ, ಅಪಹಾಸ್ಯ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ .
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಸಂಘವನ್ನು ನೊಂದವಾಣೆ ಮಾಡಿಕೊಳ್ಳಲಾಗಿದ್ದು, ಈ ವಿಚಾರವಾಗಿ ದಿನಾಂಕ 26/08/2023 ನೇ ಶನಿವಾರ ಬೆಳಗ್ಗೆ 10:00 ಗಂಟೆಗೆ ಮಡಿಕೇರಿಯ ಬಾಲಭವನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸದಾಶಿವ ರೈ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಗೆ ಜಿಲ್ಲೆಯ ದೈವ ಆರಾಧಕರು ಮತ್ತು ದೈವ ನರ್ತಕರು ಪಾಲ್ಗೊಳ್ಳುವಂತೆ ದೈವಾಆರಾಧಕರು ಮತ್ತು ದೈವನರ್ತಕರ ಸಂಘದ ಸ್ಥಾಪಕ ಪಿ.ಎಂ. ರವಿ ತಿಳಿಸಿದ್ದಾರೆ.
ಮಾಹಿತಿಗಾಗಿ : 9972073295, 9480290688