ಚೆಯ್ಯಂಡಾಣೆ: ಎಸ್ ಎಸ್ ಕಲಾ ಸಂಗಮದ ವತಿಯಿಂದ ಮಿಸ್,ಮಿಸೆಸ್ ಅಂಡ್ ಕಿಡ್ಸ್ ಸೀಸನ್ ಫೋರ್ ಕಾರ್ಯಕ್ರಮ ಮೈಸೂರಿನ ಗುರು ರೆಸಿಡೆನ್ಸಿ ಹೋಟೆಲ್ ನಲ್ಲಿ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ 60 ಕ್ಕೂ ಹೆಚ್ಚು ಸ್ವರ್ದಿಗಳು ಭಾಗವಹಿಸಿದರು. ಇದರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಯ್ಯ0ಡಾಣೆಯ ಕೊಕೇರಿ ಗ್ರಾಮದ ನಿವೃತ ದೈಹಿಕ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಹಾಗೂ ಸಿಂತಿಯ ಉತ್ತಪ್ಪ ಪುತ್ರಿ ಬಿದ್ದಂಡ ಸುರಕ್ಷಿತ ಮಿಸ್ ಮೈಸೂರ್ ವಿನ್ನರ್ ಆಗಿ ಹೊರಹೋಮ್ಮಿದ್ದಾರೆ.
ಮಿಸ್ ಮೈಸೂರ್ ಫ್ಯಾಶನ್ ಕಾರ್ಯಕ್ರಮದಲ್ಲಿ 20 ಸ್ವರ್ದಿಗಳಲ್ಲಿ ವಿನ್ನರ್ ಆಗಿ ಸುರಕ್ಷಿತ ಆಯ್ಕೆಯಾಗಿದ್ದಾರೆ. ಇದ್ದಲ್ಲದೆ ಎರಡೇ ರೌಂಡ್ ನಲ್ಲಿ ಟ್ರೇಡಿಷನಲ್ ಮತ್ತು ವೆಸ್ಟೆರ್ನ್ ನಲ್ಲಿ ಕೊಡವ ಸ್ಯಾರಿ ಉಟ್ಟು ಕೂರ್ಗ್ ಕೊಡವತಿ ಆಗಿ ಭಾಗವಹಿಸಿದರು. ಇವರು ಮೈಸೂರ್ ಮಹಾರಾಜ ಕಾಲೇಜುನಲ್ಲಿ ಅಂತಿಮ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದಾರೆ. ತೀರ್ಪುಗಾರರಾಗಿ ಸತ್ಯವತಿ ಬಸವರಾಜ್,ಭುವನ ಸುಂದರಿ 2022 ವಿನ್ನರ್ ಜ್ಯೋತಿ ಬಿಹಲ್,ಖ್ಯಾತ ಡಿಸೈನರ್ ವರ್ಷ, ಮಿಸಸ್ ಇಂಡಿಯಾ ವಿನ್ನರ್ ಸುಪ್ರಜಾ,ಪೂರ್ಣಿಮಾ,ಗಂಡಸಿ ಸದಾನಂದ ಸ್ವಾಮಿ ಸಂಪಾದಕರು ಹಾಗೂ ಚಲನ ಚಿತ್ರ ನಟರು, ನಿರ್ಮಾಪಕರು ಮತಿತ್ತರರು ಇದ್ದರು.ಕಾರ್ಯಕ್ರಮವನ್ನು ಶಿವಕುಮಾರ್ ಬಿ.ಕೆ,ಶೋಭಾ ಪಿ. ಎನ್, ಶಿಲ್ಪ ಗಣೇಶ್ ಸೇರಿ ಆಯೋಜಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ