ಚೆಯ್ಯಂಡಾಣೆ, ಆ 28: ಚೆಯ್ಯಂಡಾಣೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕಡಂಗ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಯ್ಯಂಡಾಣೆ ವಲಯ ಕಾಂಗ್ರೆಸ್ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ವಹಿಸಿದರು. ಸಭೆಯಲ್ಲಿ ಕೊಡಗು ಡಿಸಿಸಿ ಸದಸ್ಯರಾದ ನಂಬಿಯಪಂಡ ಮಣಿ ಅಯ್ಯಮ್ಮ ಮಾತನಾಡಿ ಪಕ್ಷಕ್ಕೆ ಎಲ್ಲರ ಸಹಕಾರ ಮುಖ್ಯ ಹಿರಿಯ ಕಾರ್ಯಕರ್ತರನ್ನು ಗೌರವಿಸಿ ಕಿರಿಯರನ್ನು ಮನಗಂಡರೆ ಮಾತ್ರ ಪಕ್ಷ ಸಂಘಟಿಸಲು ಸಾಧ್ಯ ಪಕ್ಷದಲ್ಲಿ ಯಾವುದೇ ಬಿನ್ನಾಭಿಪ್ರಾಯ ಇದ್ದರೆ ಅದನ್ನು ತ್ವರಿತವಾಗಿ ಪರಿಹರಿಸಬೇಕು ಆದರೆ ಮಾತ್ರ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ವಂದನೆ ದೊರೆಯಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಸಭೆಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕಾರ್ಯ ವೈಖರಿ ಬಗ್ಗೆ ತೀವ್ರ ಚರ್ಚೆ ನಡೆಯಿತು.
ವಿಧಾನಸಭಾ ಚುನಾವಣೆಗೂ ಮೊದಲು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಲಯ ಮಟ್ಟದಲ್ಲಿ ಯಾವುದೇ ಸಭೆ ನಡೆಸಲಿಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಲು ವಿಫಲರಾಗಿದ್ದಾರೆ ಎಂದು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಕೂಡಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸ ಬೇಕೆಂದು ಜಿಲ್ಲಾಧ್ಯಾಕ್ಷರಿಗೆ ಒತ್ತಾಯಿಸಲು ಮನವಿ ಸಲ್ಲಿಸಲು ಸಾರ್ವನುಮತದಿಂದ ಅಂಗಿಕರಿಸಲಾಯಿತು.
ಚೆಯ್ಯ0ಡಾಣೆ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮದ ಬೂತ್ ಮಟ್ಟದ ಅಧ್ಯಕ್ಷರ ಶಿಫಾರಸಿ ನೊಂದಿಗೆ ವ್ಯಾಪ್ತಿಯ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಮಾಡಿ ವಲಯ ಅಧ್ಯಕ್ಷರ ಮುಖಾಂತರ ಸಂಬಂಧ ಪಟ್ಟ ಜಿಲ್ಲಾ ಸಮಿತಿ,ಶಾಸಕರಿಗೆ ಹಾಗೂ ಇಲಾಖೆಗಳ ಮುಖಾಂತರ ಪ್ರಸ್ತಾವನೆ ಸಲ್ಲಿಸುವಂತೆ ತೀರ್ಮಾನಿಸಲಾಯಿತು. ವಿರಾಜಪೇಟೆ ಕ್ಷೇತ್ರದ ಶಾಸಕರು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ .ಎಸ್.ಪೊನ್ನಣ್ಣ ನವರನ್ನು ಚೆಯ್ಯ0ಡಾಣೆ ವಲಯ ಕಾಂಗ್ರೆಸ್ ವತಿಯಿಂದ ಕಡಂಗದಲ್ಲಿ ಅದ್ದೂರಿಯಾಗಿ ಸನ್ಮಾನ ಮಾಡುವಂತೆ ತೀರ್ಮಾನಿಸಲಾಯಿತು.
ಈ ಸಂದರ್ಭ ಡಿಸಿಸಿ ಸದಸ್ಯರಾದ ಶಾಫಿ, ಜಿಲ್ಲಾ ಅಲ್ಪಸಂಖ್ಯಾತ ಮಡಿಕೇರಿ ತಾಲೂಕು ಘಟಕದ ಉಪಾಧ್ಯಕ್ಷ ಎಂ.ಯು.ಮಹಮ್ಮದ್, ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸುಬೈರ್, ಮಚ್ಚ0ಡ ರಂಜು ಚಂಗಪ್ಪ, ಪ್ರಕಾಶ್ ಕಾರ್ಯಪ್ಪ, ಕೋಡಿರ ಡಾಲಿ ಉತ್ತಪ್ಪ,ವಿನು ಮಾದಪ್ಪ,ವಿಠಲ ಉತ್ತಪ್ಪ, ವೈ.ಎಂ. ಮೊಹಮ್ಮದ್, ಗ್ರಾಮ ಪಂಚಾಯಿತಿ ಸದಸ್ಯರು, ಕೊಕೇರಿ, ನರಿಯಂದಡ, ಎಡಪಾಲ, ಚೇಲಾವರ, ಅರಪಟ್ಟು, ಕರಡ, ಪೊದವಾಡ ಬೂತ್ ಅಧ್ಯಕ್ಷರು, ಕಾರ್ಯಕರ್ತರು ಮತಿತ್ತರರು ಇದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ