ಕರಡ ಕೀಮಲೆ ಕಾಡ್ ನಲ್ಲಿ ಚಿರತೆ ಪ್ರತ್ಯಕ್ಷ

ಚೆಯ್ಯಂಡಾಣೆ,ಆ 31: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಸಮೀಪದ ಕೀಮಲೆ ಕಾಡ್ ನಲ್ಲಿ ಸೋಮವಾರ ಸ್ಥಳೀಯ ನಿವಾಸಿ ಹೇಮಂತ್ ರವರ ಸಿಸಿಟಿವಿ ಯಲ್ಲಿ ಚಿರತೆಯೊಂದು ಸಂಚರಿಸುವ ವಿಡಿಯೋ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಇದೇ ಗ್ರಾಮದ ಚಡಗರ ಕಿಶನ್ ಎಂಬುವರ ಸಾಕು ನಾಯಿಯನ್ನು ಚಿರತೆ ಕೊಂದು ಹಾಕಿದ್ದು ಶಾಲಾ ವಿದ್ಯಾರ್ಥಿಗಳು,ಕಾರ್ಮಿಕರು ಭಯದಲ್ಲಿ ಸಂಚರಿಸುವ ಪರಸ್ಥಿತಿ ನಿರ್ಮಾಣವಾಗಿದೆ ಸಂಬಂಧಪಟ್ಟ ಅರಣ್ಯ ಇಲಾಖೆ ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು ಹಾಗೂ ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ದಾಳಿ ನಡೆಸಿದರು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಾಧ್ಯಮದೊಂದಿಗೆ ಮಾಹಿತಿ ನೀಡಿದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಬೇಪುಡಿಯಂಡ ವಿಲಿನ್ ಈ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಅಪಾರ ನಷ್ಟ ಸಂಭವಿಸಿದೆ. ಇವಾಗ ಚಿರತೆ ಕೂಡ ಪ್ರತ್ಯಕ್ಷ ಗೊಂಡಿದ್ದು ಜನರು ಭಯದಿಂದ ಕಾಲ ಕಳೆಯುವಂತಾಗಿದೆ.ಅರಣ್ಯ ಇಲಾಖೆ ಕೂಡಲೇ ಕಾಡಾನೆ ಹಾವಳಿ ಹಾಗೂ ಚಿರತೆಯನ್ನು ಸೆರೆ ಹಿಡಿದು ಗ್ರಾಮಕ್ಕೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದರು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಪ್ರತಿಭಟನೆ ನಡೆಸಲಾಗುವುದು ಎಂದರು. ಈ ಸಂದರ್ಭ ಐತಿಚಂಡ ಬೀಮಯ್ಯ, ಪಟ್ರಪಂಡ ವಿಶ್ವನಾಥ್, ಗ್ರಾಮಸ್ಥರು ಇದ್ದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ