ಕಡಂಗದಲ್ಲಿ ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಚೆಯ್ಯ0ಡಾಣೆ, ಸೆ 01: ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೆಯ್ಯ0ಡಾಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷೆ ಫಾತಿಮಾ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಉದ್ಘಾಟಿಸಿ ಮಾತನಾಡಿ ನಾವು ಶಾಲೆಗೆ ಹೋಗುತ್ತಿರುವ ಹಳೆಯ ಸವಿನೆನಪ್ಪನ್ನು ಸ್ಮರಿಸಿದರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಸರಕಾರ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಶಿಕ್ಷಕರು ವಿದ್ಯಾರ್ಥಿಗಳನ್ನು ಮುಂದೆ ತರಲು ಪ್ರಯತ್ನಿಸಬೇಕು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಲೆಂದು ನೀವು ತೋರಿಸಿ ಕೊಡಬೇಕೆಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನರಿಯಂದಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೋರತರುವ ಒಂದು ಕಾರ್ಯಕ್ರಮ ಇದಾಗಿದೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೋರತರಲು ಎಲ್ಲಾ ಶಾಲಾ ಶಿಕ್ಷಕರ ಪಾತ್ರ ಮುಖ್ಯವಾಗಿದೆ.ವಿದ್ಯಾರ್ಥಿಗಳು ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಪರ್ಮೂಲ ವ್ಯಕ್ತಿ ಪ್ರಸಾದ್ ಒಂದು ಉತ್ತಮ ವೇದಿಕೆಯನ್ನ ನಿಮಗಾಗಿ ಇಲ್ಲಿ ತೆರೇದಿದ್ದೇವೆ ಈ ವೇದಿಕೆಯಲ್ಲಿ ನಿಮ್ಮ ಪ್ರತಿಭೆಯನ್ನ ಅನಾವರಣ ಗೊಳಿಸುವ ಕರ್ತವ್ಯ ನಿಮ್ಮದು, ಯಾವುದೇ ಅವಕಾಶ ಸಿಕ್ಕಿದರು ಇದು ನನ್ನ ಕೊನೆಯ ಅವಕಾಶ ಎಂದು ತಿಳಿದು ಕೊಂಡು ನಿಮ್ಮಲಿರುವ ಸಾಮರ್ಥ್ಯವನ್ನ ಒಗ್ಗೂಡಿಸಿ ನಿಮ್ಮ ಪ್ರತಿಭೆಯನ್ನ ಅನಾವರಣ ಗೊಳಿಸಿ ಎಂದರು.

ಚೆಯ್ಯ0ಡಾಣೆ ಕ್ಲಸ್ಟರ್ ಒಳಪಟ್ಟ 15 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದರು. ವಿದ್ಯಾರ್ಥಿಗಳಿಂದ ಭಾಷಣ, ಹಾಡು, ಭಕ್ತಿಗೀತೆ, ಭರತನಾಟ್ಯ, ಗಾದೆ, ಚದ್ಮ ವೇಷ, ಮಣ್ಣಿನ ಕಲಾಕೃತಿ, ಕರಕುಶಲ ಕಲಾಕೃತಿ, ಚಿತ್ರಕಲೆ, ಮಿಮಿಕ್ರಿ, ಚರ್ಚಾಸ್ವರ್ದೆ, ರಂಗೋಲಿ, ರಸಪ್ರಶ್ನೆ, ಕಾವ್ವಾಲಿ, ದಫ್ ಸ್ವರ್ದೆ ಹೀಗೆ ಹಲವಾರು ಕಾರ್ಯಕ್ರಮಗಳು ಜರುಗಿತು. ಇದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಲಾಗಿದ್ದು. ಪ್ರಥಮ, ದ್ವಿತೀಯ ಬಂದ ವಿದ್ಯಾರ್ಥಿಗಳನ್ನು ತಾಲೂಕು ಮಟ್ಟಕ್ಕೆ ಆಯ್ಕೆ ಮಾಡಲಾಯಿತು.

ಈ ಸಂದರ್ಭ ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಕೋಡಿರ ವಿನೋದ್ ನಾಣಯ್ಯ, ಸ್ಥಳ ದಾನಿಗಳಾದ ಕಣಿಯರ ಪ್ರಕಾಶ್, ಸ್ಥಳೀಯ ಆಯುಷ್ ಅರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ- ಶೈಲಜಾ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಕ್ಲಸ್ಟರ್ ಮಟ್ಟದ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಸ್ವಾಗತವನ್ನು ಮುಖ್ಯ ಶಿಕ್ಷಕಿ ಶಾಂತಿ ಕುಮಾರಿ, ವಂದನೆಯನ್ನು ಶಿಕ್ಷಕಿ ವತ್ಸಲ, ನಿರೂಪಣೆಯನ್ನು ಶಿಕ್ಷಕಿ ಕೆ.ಎಂ. ವಿಮಲಾ ಬೆಳ್ಯಪ್ಪ ನಿರ್ವಹಿಸಿದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ