ಚೆಯ್ಯ0ಡಾಣೆ ಸೆ 12: ನರಿಯಂದಡ ಗ್ರಾಮ ಪಂಚಾಯಿತಿಯ 2023-24 ಸಾಲಿನ ಅರಪಟ್ಟು ಗ್ರಾಮದ ವಾರ್ಡ್ 1 ಮತ್ತು 2 ವಾರ್ಡ್ ಸಭೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ವಾರ್ಡ್ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯ ಸಿ.ಇ. ಸುಬೀರ್ ವಹಿಸಿ ಮಾತನಾಡಿ ಎರಡೂವರೆ ವರ್ಷದ ಅವಧಿಯಲ್ಲಿ ನಮ್ಮ ಗ್ರಾಮ ಪಂಚಾಯಿತಿ ಉತ್ತಮ ಕಾಮಗಾರಿಗಳನ್ನು ಕೈಗೊಂಡಿದ್ದು, ಗ್ರಾಮ ಪಂಚಾಯಿತಿಗೆ ಕಟ್ಟಡಕ್ಕೆ ಸರಿಯಾದ ದಾಖಲಾತಿ ಕೂಡ ಇರಲಿಲ್ಲ ಅದನ್ನು ಕೂಡ ಈ ಅವಧಿಯಲ್ಲಿ ಸರಿಪಡಿಸಿ ಉತ್ತಮವಾದ ಪಂಚಾಯಿತಿ ಕಟ್ಟಡವನ್ನು ಕಟ್ಟಿದ್ದೇವೆ.ಕರಡದಲ್ಲಿ ಉತ್ತಮವಾದ ಗ್ರಂಥಾಲಯ ಸ್ಥಾಪಿಸಿದ್ದೇವೆ.ಕಸ ವಿಲೇವಾರಿ ಸಮಸ್ಯೆಗೆ ಜಾಗ ಗೊತ್ತುಪಡಿಸಿ ಅದರ ದಾಖಲಾತಿ ಸರಿಪಡಿಸಿದ್ದೇವೆ.
ಇದಲ್ಲದೆ ನಮ್ಮ ಎರಡು ಗ್ರಾಮದಲ್ಲಿ 1 ಕೋಟಿಯ ಕಾಮಗಾರಿ ಮಾಡಿದ್ದೇವೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸೌಲಭ್ಯಗಳನ್ನು ಪಡೆದು ಕೊಳ್ಳಲು ಹಾಗೂ ಇರುವ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮಸ್ಥ ಪರವಾಗಿ ಮುಕ್ಕಾಟ್ಟಿರಾ ಉತ್ತಯ್ಯ ಮಾತನಾಡಿ ನನ್ನ ಮನೆಯ ಪಕ್ಕದಲ್ಲಿರುವ ರಸ್ತೆಯಲ್ಲಿ ದೈನಂದಿನ ವಾಹನಗಳು ಸಂಚರಿಸುತ್ತಿದ್ದು ವಾಹನ ಸಂಚರಿಸುವ ಸಂದರ್ಭ ಅವಘಡ ಸಂಭವಿಸುವಂತಿದೆ ಇದಕ್ಕೆ ತಡೆಗೋಡೆ ನಿರ್ಮಿಸಲು 15 ವರ್ಷದಿಂದ ಹಲವಾರು ಬಾರಿ ಮನವಿ ಸಲ್ಲಿಸಿದ್ದೇನೆ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಇದುವರೆಗೂ ದೊರೆತಿಲ್ಲ.ನನ್ನ ಮನೆಯ ಕೆಳಗಡೇ ನೀರಿನ ಸೌಲಭ್ಯ ಇದೆ ನನ್ನ ಮನೆಯ ಮೇಲ್ಗಡೆ ಮನೆಗೆ ನೀರಿನ ಪೈಪ್ ಹಾದು ಹೋಗಿದೆ ಅದರೆ ನನಗೆ ನೀರಿನ ಸೌಲಭ್ಯ ನೀಡುತ್ತಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ತಡೆಗೋಡೆ ಇದು ಲೋಕೋಪಯೋಗಿ ಇಲಾಖೆಗೆ ಸಂಬಂಧ ಪಟ್ಟದ್ದು ಇದಕ್ಕೆ ಕೂಡಲೇ ಸಂಬಂಧ ಪಟ್ಟ ಇಲಾಖೆಯೊಂದಿಗೆ ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ನೀರಿನ ವಿಚಾರದಲ್ಲಿ ಕೂಡಲೇ ಮನವಿಗೆ ಸ್ವಂದಿಸುವ ಭರವಸೆ ನೀಡಿದರು.
ಕಡಂಗ ಪಟ್ಟಣದಲ್ಲಿ ಬೀದಿ ನಾಯಿ ಹಾವಳಿ ಮಿತಿಮೀರಿದ್ದು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥ ಝಕರಿಯ ಅಧ್ಯಕ್ಷರ ಗಮನಕ್ಕೆ ತಂದರು ಹಾಗೂ ಕೂಡಲೇ ಬೀದಿ ನಾಯಿ ಹಾವಳಿ ತಡೆಗಟ್ಟಲು ಕ್ರಮಕೈಗೊಳ್ಳಬೇಕೆಂದರು.
ಬೀದಿ ದೀಪ, ನೀರಿನ ಟ್ಯಾಂಕ್ ಸುದ್ದಿಕರಿಸುವ,ಕಾಂಗ್ರೆಟ್ ರಸ್ತೆ,ಕಸ ಸಮಸ್ಯೆ, ಶಾಲೆಯ ಮೈದಾನ ಹಾಗೂ ಮತಿತ್ತರ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಾದ ಕರೀಂ, ಶರೀಫ್, ಶಂಸುದ್ದಿನ್, ಸಮದ್, ಸಲಾಂ ಮತ್ತಿತರು ಗಮನ ಹರಿಸುವಂತೆ ಮನವಿ ಮಾಡಿದರು.
ಗ್ರಾಮಸ್ಥರಿಂದ ವಸತಿ/ವಸತಿ ರಹಿತ ಪಲಾನುಭವಿಗಳಿದ ಹಾಗೂ ವಿವಿಧ ಯೋಜನೆಗಳಿಗೆ ಅರ್ಜಿ ಸ್ವೀಕರಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ವಾಣಿ, ರಾಣಿ ಗಣಪತಿ, ಕವಿತಾ, ಮಮ್ಮದ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತಿತ್ತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರಾರ್ಥನೆಯನ್ನು ಆಶಾ ಕಾರ್ಯಕರ್ತೆ ಜಮುನಾ,ಸ್ವಾಗತ ವನ್ನು ದಿನೇಶ್ ವಂದನೆಯನ್ನು ಆಶಾ ಕುಮಾರಿ ನಿರ್ವಹಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ