ಚೌತಿಯ ಪ್ರಯುಕ್ತ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಸಾಮೂಹಿಕ ಗಣಪತಿ ಹೋಮ ಏರ್ಪಡಿಸಲಾಗಿದ್ದು ಊರಿನವರು ಮಾತ್ರವಲ್ಲದೆ ಸಾರ್ವಜನಿಕರು ಯಾರು ಬೇಕಾದರೂ ಬಂದು ಪೂಜೆ ಮಾಡಿಸಬಹುದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ತಕ್ಕ ಮುಖ್ಯಸ್ಥರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ವರ್ಷಂಪ್ರತಿ ನಡೆಯುವಂತೆ ಈ ಬಾರಿಯೂ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಇದೇ ಸೆಪ್ಟೆಂಬರ್ 19ರಂದು ಚೌತಿ ಪೂಜೆ ನಡೆಯಲಿದ್ದು ಊರಿನವರು ಮಾತ್ರವಲ್ಲದೆ ಸಾರ್ವಜನಿಕರು ಯಾರು ಬೇಕಾದರೂ ಸಾಮೂಹಿಕ ಗಣಪತಿ ಹೋಮದಲ್ಲಿ ಪಾಲ್ಗೊಂಡು ಪೂಜೆ ಮಾಡಿಸಬಹುದಾಗಿದೆ. ಅಂದು ಬೆಳಿಗ್ಗೆ 7-30 ಗಂಟೆಗೆ ಗಣಪತಿ ಹೋಮ ಆರಂಭವಾಗಲಿದ್ದು ಪ್ರಸಾದ ವಿನಿಯೋಗದ ಬಳಿಕ ಬೆಳಗಿನ ಉಪಹಾರ ಇರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಪೂಜೆ ಮಾಡಿಸುವವರು ಒಂದು ದಿನ ಮುಂಚಿತವಾಗಿ ಪೂಜಾ ಸಾಮಗ್ರಿಗಳನ್ನು ನೀಡುವ ಮೂಲಕ ಪೂಜೆಯ ಬಗ್ಗೆ ಮಾಹಿತಿ ನೀಡಬೇಕಿದೆ. ಹೆಚ್ಚಿನ ಮಾಹಿತಿಗೆ: 9845308910 ಅಥವಾ 9483815430 ಸಂಪರ್ಕಿಸಬಹುದಾಗಿದೆ.