Reading Time: < 1 minute
ಕೊಡವ ರೈಡರ್ಸ್ ಕ್ಲಬ್, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಹಾಗೂ ಬೆಂಗಳೂರಿನ ಇಂಚರ ಇನ್ಫೋಟೆಕ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹುದಿಕೇರಿ ಭದ್ರಕಾಳಿ ದೇವಸ್ಥಾನದ ಕಾಪುಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿವಿಧ ಬಗೆಯ ಕಾಡು ಹಣ್ಣುಗಳು ಸೇರಿದಂತೆ ಹತ್ತಾರು ಜಾತಿಯ ಕಾಡು ಮರದ ಗಿಡಗಳನ್ನು ನೆಡಲಾಯಿತು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಈ ಸಂದರ್ಭದಲ್ಲಿ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಹಾಗೂ ತಂಡ ಸೇರಿದಂತೆ, ಬೆಂಗಳೂರಿನ ಇಂಚರ ಇನ್ಫೋಟೆಕ್ ಸಂಸ್ಥೆಯ ಕೇಟೊಳೀರ ವಿನ್ಸಿ ದೇವಯ್ಯ ತಂಡ ಹಾಗೂ ಅರಣ್ಯ ಮಹಾವಿದ್ಯಾಲಯದ ಕೊಣೇರೀರ ನಾಣಯ್ಯ ಸೇರಿದಂತೆ ಪ್ರಮುಖರಾದ ಕೇಟೊಳೀರ ಶಮ್ಮಿ, ತೀತಿರ ಅಭಿಷೇಕ್ ಮುತ್ತಣ್ಣ, ಚಕ್ಕೇರ ಅನುಪಮಾ ತಮ್ಮಯ್ಯ, ಕುಪ್ಪಣಮಾಡ ದಿಲೀಪ್, ಅಜ್ಜಿಕುಟ್ಟೀರ ದೇವಯ್ಯ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಚಮ್ಮಟಿರ ಪ್ರವೀಣ್ ಉತ್ತಪ್ಪ