ಮೂರ್ನಾಡು: ಮೂರ್ನಾಡಿನ ವಿವಿಧೆಡೆಯಲ್ಲಿ ತಾ. ೧೯ರಂದು ಗಣೇಶ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಅದ್ದೂರಿ ಗೌರಿ-ಗಣೇಶೋತ್ಸವವನ್ನು ಆಚರಿಸಲಾಗುತ್ತದೆ.
ಮೂರ್ನಾಡಿನಲ್ಲಿ 33ನೇ ವರ್ಷದ ಗೌರಿ-ಗಣೇಶೋತ್ಸದ ಅಂಗವಾಗಿ ಶ್ರೀ ವಿನಾಯಕ ಯುವ ಮಂಡಳಿಯ ವತಿಯಿಂದ ವೆಂಕಟೇಶ್ವರ ಕಾಲೋನಿಯಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ.
30ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಟಿ. ಜಂಕ್ಷನ್‌ನ ಶ್ರೀ ವಿಘ್ನೇಶ್ವರ ಸೇವಾ ಸಮಿತಿಯಿಂದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ.
25ನೇ ಗೌರಿ-ಗಣೇಶೋತ್ಸವದ ಅಂಗವಾಗಿ ಶ್ರೀ ವಿನಾಯಕ ಸೇವಾ ಸಮಿತಿಯ ವತಿಯಿಂದ ಟೌನ್‌ನಲ್ಲಿರುವ ಶ್ರೀರಾಮ ಮಂದಿರದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ.
20ನೇ ವರ್ಷದ ಗೌರಿ-ಗಣೇಶೋತ್ಸವದ ಅಂಗವಾಗಿ ಭದ್ರಕಾಳಿ ಕಾಂಪ್ಲೆಕ್ಸ್ನಲ್ಲಿ ಶ್ರೀ ಗಜಾನನ ಯುವಕ ಸಂಘದ ವತಿಯಿಂದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ಅದೆ ದಿನ ಮೂರ್ನಾಡಿನ ಮುಖ್ಯ ಬೀದಿಗಳಲ್ಲಿ ಅಲಂಕೃತ ಮಂಟಪದಲ್ಲಿ ಮೆರವಣಿಗೆಯ ಮೂಲಕ ಸಾಗಿ ಬಲಮುರಿಯ ಕಾವೇರಿ ಹೊಳೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಗುವುದು.
31ನೇ ವರ್ಷದ ಗೌರಿ-ಗಣೇಶೋತ್ಸದ ಅಂಗವಾಗಿ ಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿಯ ವತಿಯಿಂದ ಗಾಂಧಿನಗರದ ಶ್ರೀರಾಮ ಮಂದಿರದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ.
14ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಕೋಡಂಬೂರು ಗ್ರಾಮದ ಶ್ರೀ ವಿಘ್ನೇಶ್ವರ ಗೆಳೆಯರ ಬಳಗದ ವತಿಯಿಂದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ.
ವಿ. ಜಂಕ್ಷನ್‌ನ ಹನುಮಾನ್ ಟ್ರೇರ‍್ಸ್ನಲ್ಲಿ 4ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶ್ರೀ ಗಜೇಂದ್ರ ಯುವ ಶಕ್ತಿ ಸಂಘದಿಂದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ 7 ದಿನಗಳ ಕಾಲ ವಿವಿಧ ಪೂಜೆ ಹವನಾದಿಗಳ ಮೂಲಕ ಮಹಾಗಣಪತಿಯ ಉತ್ಸವ ಮೂರ್ತಿಗಳನ್ನು ಪೂಜಿಸಿ ತಾ. 25ರಂದು ಅಲಂಕೃತ ಮಂಟಪದಲ್ಲಿ ಅದ್ಧೂರಿ ಶೋಭಯಾತ್ರೆಯೊಂದಿಗೆ ಮೂರ್ನಾಡು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಬಲಮುರಿಯ ಕಾವೇರಿ ಹೊಳೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಗುವುದು.
ಚಿತ್ರ & ವರದಿ: ಟಿ.ಸಿ. ನಾಗರಾಜ್, ಮೂರ್ನಾಡು