ಮೂಲಭೂತ ಸೌಕರ್ಯಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ
ಚೆಯ್ಯ0ಡಾಣೆ ಸೆ 19. ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತಕ್ಕೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಜಲಪಾತದ ಹಾಗೂ ಗ್ರಾಮದ ವಿವಿಧ ಸಮಸ್ಯೆಗಳ ಬಗ್ಗೆ ಖುದ್ದು ಪರಿಶೀಲಿಸಿದರು.
ಚೇಲಾವರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರಾದ ಪಟ್ಟಚೆರುವಳಂಡ ಕಿರಣ್ ಮಾತನಾಡಿ ದಿನನಿತ್ಯ ಪ್ರವಾಸಿಗರು ಹೆಚ್ಚಾಗಿ ಆಗಮಿಸಿಸುತಿದ್ದು ಅವರಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಪಾರ್ಕಿಂಗ್, ರಸ್ತೆ ಆಗಲೀಕರ ಮತಿತ್ತರ ವ್ಯವಸ್ಥೆಯನ್ನು ಮೊದಲು ಮಾಡಿ ನಂತರ ಗೇಟ್ ನಿರ್ಮಿಸಿ ಎಂದು ಶಾಸಕರಿಗೆ ಮನವಿ ಮಾಡಿದರು.
ಇನ್ನೊರ್ವ ಗ್ರಾಮಸ್ಥ ನಂದಕುಮಾರ್ ಮಾತನಾಡಿ ಚೇಲಾವರಕ್ಕೆ ಪ್ರವಾಸಿಗರು ಅಧಿಕವಾಗಿ ಆಗಮಿಸುತ್ತಾರೆ ಕುಡಿದು ಮೋಜು ಮಸ್ತಿಯಲ್ಲಿ ಗ್ರಾಮಸ್ಥರ ಮೇಲೆ ದರ್ಪ ತೊರುತ್ತಾರೆ ಕಂಡಕಂಡಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ಹಾಕುತ್ತಾರೆ ಇದಕ್ಕೆ ಕೂಡಲೇ ಗೇಟ್ ನಿರ್ಮಿಸಿ ತಪಾಸಣೆ ನಡೆಸಿ ಪ್ರವಾಸಿಗರಿಗೆ ಆಗಮಿಸಲು ಅನುಮತಿ ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ನರಿಯಂದಡ ಪ್ರೌಢ ಶಾಲೆಯ ಸಮೀಪದ ಚೇಲಾವರ ಪತ್ತೇಟಿ ರಸ್ತೆ, ಕೀಮಲೆಕಾಡು, ಹಾಗೂ ಚೇಲಾವರ ಜಲಪಾತಕ್ಕೆ ಸಂಪರ್ಕಿಸುವ ರಸ್ತೆ ದಶಕಗಳಿಂದ ಹದಗೆಟ್ಟಿದ್ದು ಸಂಚರಿಸಲು ತೊಡಕಾಗುತ್ತಿದ್ದು ಹಾಗೂ ಸಂಪರ್ಕ ಕಲ್ಪಿಸುವ ಪೊನ್ನೊಲ ಶಾಲೆಯ ಪಕ್ಕದಲ್ಲಿರುವ ಸೇತುವೆ ಕಿರಿದಾಗಿದ್ದು ವಾಹನ ಸಂಚರಿಸಲು ಸಾಧ್ಯವಿಲ್ಲ ಕೂಡಲೇ, ದೇವಸ್ಥಾನಕ್ಕೆ ತೇರಳಬೇಕಾದರೆ ಚೆಯ್ಯ0ಡಾಣೆಗೆ ಬಂದು ಸುತ್ತುವರಿದು ತೆರಳುವ ಅವಸ್ಥೆ ಉಂಟಾಗಿದೆ ಈ ರಸ್ತೆಯಲ್ಲೆ ಸಂಪರ್ಕಿಸುವಂತೆ ರಸ್ತೆಯನ್ನು ಹಾಗೂ ಸೇತುವೆಯನ್ನು ದುರಸ್ಥಿ ಪಡಿಸಿ ಗ್ರಾಮಸ್ಥರ ತೊಂದರೆ ನಿಗಿಸುವಂತೆ ಗ್ರಾಮಸ್ಥರಾದ ಲಾಲು,ಲೋಕೇಶ್, ಜಗದೀಶ್, ಮೀನಾ ಮತಿತ್ತರರು ಶಾಸಕರಿಗೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಮಾತನಾಡಿ ಚೇಲಾವರಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಕಾರಣ ಗ್ರಾಮ ಪಂಚಾಯಿತಿ ಮುಂದಾಲತ್ವ ವಹಿಸಿ ಗೇಟ್ ನಿರ್ಮಿಸಿದೆವು 3 ತಿಂಗಳಲ್ಲೇ ಗ್ರಾಮ ಪಂಚಾಯಿತಿಗೆ ಒಂದು ಲಕ್ಷ ದಷ್ಟು ಹಣ ಬರಿ ವಾಹನಗಳಿಂದ ವಸೂಲಾಗಿದ್ದು ನಂತರ ಗ್ರಾಮಸ್ಥರು ಗೇಟ್ ಗೆ ವಿರೋಧ ವ್ಯಕ್ತ ಪಡಿಸಿ ಗೇಟ್ ತೆರವು ಗೊಳಿಸಿದರು ಇದೀಗ ಪ್ರವಾಸಿಗರು ಮಧ್ಯ,ಮಾದಕ ವಸ್ತುಗಳನ್ನು ತಂದು ಅಲ್ಲಲ್ಲಿ ಕಸ ಪ್ಲಾಸ್ಟಿಕ್ ಗಳನ್ನು ಹಾಕಿ ಆಸೂಚಿತ್ವ ಮಾಡುತ್ತಿದ್ದಾರೆ ಕೂಡಲೇ ಗೇಟ್ ನಿರ್ಮಿಸಿದರೆ ಗ್ರಾಮ ಪಂಚಾಯಿತಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ವಾಗಲಿದೆ ಎಂದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ ಗೇಟ್ ಸಮಸ್ಯೆ ಚಿಕ್ಕ ಸಮಸ್ಯೆ ಬಾಕಿ ಇರುದು ದೊಡ್ಡ ಸಮಸ್ಯೆ ಗೇಟ್ ನಿರ್ಮಿಸಿದರೆ ಗ್ರಾ. ಪಂ.ಗೆ ಆರ್ಥಿಕ ಆದಾಯ ಇದೆ ಗ್ರಾಮವು ಅಭಿವೃದ್ಧಿ ಆಗಲಿದೆ ಅದನ್ನು ಗ್ರಾಮಸ್ಥರ ಮೂಲಕ ಚರ್ಚಿಸಿ ತೀರ್ಮಾನಿಸುವ ಅಂದರು.
ಪ್ರವಾಸೋದ್ಯಮ ಇರುವಲ್ಲಿ ಸ್ಥಳೀಯರಿಗೆ ಹಾಗೂ ಹೊರೆಗಿನಿಂದ ಬರುವ ಪ್ರವಾಸರಿಗೆ ಸಂಘರ್ಷ ಇದ್ದೆ ಇರುತ್ತದೆ.
ಇಂದಿನ ಯುಗದಲ್ಲಿ ಪ್ರವಾಸೋದ್ಯಮ ಇಲ್ಲದಿದ್ದರೆ ಬದುಕಲು ಕಷ್ಟ ಸಮಸ್ಯೆಗಳನ್ನು ಬಗೆ ಹರಿಸಿ ಮುಂದೆ ಹೋಗುವುದು ಒಳ್ಳೆಯದು ಎಂಬುದು ನನ್ನ ಸಲಹೆ, ಮತ್ತೊಂದು ಕಾಡಾನೆ ಸಮಸ್ಯೆ ಇದು ಇಲ್ಲಿಗೆ ಮಾತ್ರ ಸೀಮಿತವಲ್ಲ ಇದು ಜಿಲ್ಲೆ ಹಾಗೂ ರಾಜ್ಯದ ಸಮಸ್ಯೆ ಇದು ನಿನ್ನೆ ಮೊನ್ನೆದು ಅಲ್ಲ10/15 ವರ್ಷದು ಇದಕ್ಕೆ ಕಾರಣ ಏನೇ ಅಭಿವೃದ್ಧಿ ಕಾಣದೆ 20 ವರುಷ ಕಳೆದು ಹೋಯಿತು. ಲೆಕ್ಕ ಪ್ರಕಾರ 265 ಆನೆ ಇರಬೇಕಾದದ್ದು ಕಾಡಿನಲ್ಲಿ ಆದರೆ ಅದು ತೋಟಗಳಲ್ಲಿ ಇದೆ. ಅರಣ್ಯ ಇಲಾಖೆ ಸಚಿವರು ಹಾಗೂ ಉನ್ನತಾಧಿಕಾರವನ್ನು ಜಿಲ್ಲೆಗೆ ಕರೆಸಿ ಕಾಡಿನೊಳಗೆ ಅವರನ್ನು ಕರೆದುಕೊಂಡು ಹೋಗಿ ಜನರ ಸಮಸ್ಯೆ ಅಧಿಕಾರಿಗಳಿಗೆ ತಿಳಿಸುವಂತ ಕೆಲಸ ಖುದ್ದು ನಾನು ಮಾಡಿದ್ದೇನೆ. ಮತ್ತೊಂದು ರಸ್ತೆ ಅಭಿವೃದ್ಧಿ, ರಸ್ತೆ ಆಗಲೀಕರಣಕ್ಕೆ ಸ್ಥಳಾವಕಾಶ ಕೊಟ್ಟರೆ ಖಂಡಿತ ರಸ್ತೆ ಅಭಿವೃದ್ಧಿಯಾಗಲಿದೆ. ನನ್ನಿಂದ ಮಾತ್ರ ಇದು ಸಾಧ್ಯವಿಲ್ಲ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು ಉಳಿದ ಸೇತುವೆ ಮತ್ತು ಇತರ ಕಾಮಗಾರಿಗಳ ಚರ್ಚಿಸಿ ಕ್ರಮ ಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಆದರೆ ದಾನವಾಗಿ ಕೊಟ್ಟ ಅಂಗನವಾಡಿ ಜಾಗಕ್ಕೆ ಬೇಲಿ ಹಾಕಿದ್ದು ನೋಡಿದೆ ಇದು ಕೂಡ ಸರಿಯಲ್ಲ ಇದರಿಂದ ಅಭಿವೃದ್ಧಿ ಆಗಲ್ಲ ಎಂದರು ನನಗೆ ಸಂಘರ್ಷ ಇಷ್ಟ ಇಲ್ಲ ಶಾಲೆ ಉಳಿಯಬೇಕಾದರೆ ಅಂಗನವಾಡಿ ಮುಖ್ಯ ಪ್ರೀತಿ ವಿಶ್ವಾಸವನ್ನು ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ನಂತರ ಚೇಲಾವರ ಜಲಪಾತ,ಹಾಗೂ ಸಂಪರ್ಕ ಕಲ್ಪಿಸುವ ಕಿರಿದಾದ ಸೇತುವೆ ಯನ್ನು ವೀಕ್ಷಿಸಿ ಮಾಧ್ಯಮ ದೊಂದಿಗೆ ಮಾತನಾಡಿ ಇಂದು ಗ್ರಾಮಸ್ಥರ ಒತ್ತಾಯದ ಮೇರೆಗೆ ಚೇಲಾವರ ಫಾಲ್ಸ್ ಗೆ ಭೇಟಿಯನ್ನು ಕೊಟ್ಟಿದ್ದೇವೆ. ಇಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇಲ್ಲಿನ ಪರಿಸರಕ್ಕೆ ಯಾವುದೇ ರೀತಿ ಹಾನಿಯಾಗದ ಹಾಗೆ ಇಲ್ಲಿ ಬರುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಸಂಘರ್ಷ ಆಗದ ರೀತಿಯಲ್ಲಿ ಇಲ್ಲಿನ ಸಮಸ್ಯೆಯನ್ನು ಬಗೆರಿಸಬೇಕೆಂಬ ಆಲೋಚನೆ ನನ್ನದು ಮುಂದಿನ ದಿನಗಳಲ್ಲಿ ಇದಕ್ಕೆ ಬೇಕಾದ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ ಪ್ರವಾಸಿಗರಿಂದ ಇಲ್ಲಿನ ಪಂಚಾಯಿತಿಗೆ ಆರ್ಥಿಕವಾಗಿ ಅನುಕೂಲ ವಾಗುತ್ತೆ ಹಾಗೂ ಸ್ಥಳೀಯರಿಗೆ ದಿನನಿತ್ಯ ಜೀವನಕ್ಕೆ ತೊಂದರೆ ಆಗದ ರೀತಿಯಲ್ಲಿ ಪ್ರವಾಸಿಗರು ಬಂದಾಗ ಅವರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ,ಶೌಚಾಲಯ ಕೊರತೆ ಇದೆ ಹಲವಾರು ವರ್ಷಗಳಿಂದ ನಿರ್ಲಕ್ಷಕ್ಕೆ ಒಳಗಾದ ಪ್ರದೇಶ ಇದು ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಜೋಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. ಇದೇ ಸಂದರ್ಭ ಚೇಲಾವರ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ,ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ವಿನೋದ್ ನಾಣಯ್ಯ,ಗ್ರಾಮಸ್ಥರಾದ ಸೀತಾರಾಂ, ಮಾಚ್ಚಮ್ಮ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು,ಮತಿತ್ತರರು ಉಪಸ್ಥಿತರಿದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ